ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17-07-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
 ಗುನ್ನೆ ನಂ: 103/2021 ಕಲಂ 379 ಐಪಿಸಿ : ದಿನಾಂಕ 16/07/2021 ರಂದು ಮಧ್ಯಾಹ್ನ 1-15 ಪಿ.ಎಂ.ಕ್ಕೆ ಯರಗೋಳ ಗ್ರಾಮದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತನಾದ ಟ್ರ್ಯಾಕ್ಟರ ಚಾಲಕ ಇತನು ತನ್ನ ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟಿಎ-3471 ಮತ್ತು ಟ್ರ್ಯಾಲಿಗೆ ನಂಬರ ಇರುವದಿಲ್ಲ ನೆದ್ದರಲ್ಲಿ ಮರಳು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಮತ್ತು ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 107/2021 ಕಲಂ 143 147 148 341 323 324 504 506 ಸಂಗಡ 149 ಐಪಿಸಿ : ಇಂದು ದಿನಾಂಕ 16.07.2021 ರಂದು ಬೆಳಿಗ್ಗೆ 11.00 ರಿಂದ 11.45 ವರೆಗೆ ಸಮೂದಾಯ ಆರೋಗ್ಯ ಕೇಂದ್ರ ಗುರುಮಠಕಲ್ದಲ್ಲಿ ಪಡೆದ ಎಮ್ಎಲ್ ಸಿ ಹೇಳಿಕೆಯ ಸಾರಾಂಶವೆನೆಂದರೆ ಪಿರ್ಯಾಧಿಯು ಯಲ್ಹೇರಿ ಸೀಮಾಂತರ ಹೊಲದಲ್ಲಿ ಆರೋಪಿತರ ಹೊಲದಿಂದ ನೀರು ಬಿಟ್ಟಿದ್ದು ಇದ್ದನ್ನು ಕೇಳಿದಕ್ಕೆ ಬಾಯಿ ಮಾತಿನ ಜಗಳವಾಗಿದ್ದು. ತನ್ನ ಸಮಸ್ಯೆಯನ್ನು ತಮ್ಮ ಗ್ರಾಮದ ಜನರ ಸಮಕ್ಷಮದಲ್ಲಿ ಹೋಗುತ್ತಿದ್ದಾಗ ಯಲ್ಲಹೇರಿ ಗ್ರಾಮದ ಶೆಟ್ಟರ್ ಕಟ್ಟಿಯ ಹತ್ತಿರ ದಿನಾಂಕ:16.07.2021 ರಂದು ಬೆಳಿಗ್ಗೆ 9.15 ಸುಮಾರಿಗೆ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾಧಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಗಳಿಂದ ಹೊಡೆ-ಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 107/2021 ಕಲಂ:143 147 148 341 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ.108/2021 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ : ದಿನಾಂಕ: 16.07.2021 ರಂದು ಮಧ್ಯಾನ 12:45 ಗಂಟೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಠಾಣೆಯಲ್ಲಿದ್ದಾಗ ಆರೋಪಿತನು ಚಂಡ್ರಕಿ ಸಿಮಾಂತರದ ಗಜಲಮ್ಮ ದೇವಿ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಅಕ್ರಮವಾಗಿ ಹೆಂಡವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೊರಟು ಸಮಯ ಮಧ್ಯಾಹ್ನ 1:25 ಗಂಟೆಗೆ ಚಂಡ್ರಕಿ ಸಿಮಾಂತರ ಗಜಲಮಮ ದೇವಿ ಗುಡಿಯ ಸ್ವಲ್ಪ ದೂರ ತಲುಪಿ ಮರೆಯಾಗಿ ನೋಡಲಾಗಿ ಅಲ್ಲಿ ಆರೋಪಿತನು ತನ್ನ ವಶದಲ್ಲಿದ್ದ ಮಸಾಲಿ ಚೀಲದಲ್ಲಿಯ ಪ್ಲಾಸ್ಟೀಕ್ ಪಾಕೆಟ್ಗಳಲ್ಲಿ ಕಟ್ಟಿದ ಹೆಂಡವನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಯ ಮಧ್ಯಾಹ್ನ 1:30 ಗಂಟೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿದಾಗ ಅಲ್ಲಿಗೆ ಕುಡಿಯಲು ಮತ್ತು ಕೊಳ್ಳಲು ಬಂದಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಸಿಕ್ಕಿಬಿದ್ದುರುತ್ತಾನೆ. ನಂತರ ಆತನ ವಶದಲಿದ್ದ ಬಿಳೀ ಬಣ್ಣದ ಮಸಾಲಿ ಚೀದಲ್ಲಿದ್ದ ಬಿಳಿ ಬಣ್ಣದ ಪಾಕೇಟ್ಗಳಲ್ಲಿ ಕಟ್ಟಿದ 30 ಲೀಟರ ಹೆಂಡವನ್ನು ಮತ್ತು ಆರೋಪಿತನ ವಶದಲ್ಲಿದ್ದ ಹೆಂಡ ಮಾರಾಟದಿಂದ ಬಂದ 150/- ರೂ ನಗದು ಹಣವನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ನಂತರ ಸಮಯ ಮಧ್ಯಾಹ್ನ 3:00 ಗಂಟೆಗೆ ಮರಳಿ ಠಾಣೆಗೆ ಬಂದು ಆರೋಪಿ, ಮುದ್ದೆ ಮಾಲು ಮತ್ತು ಮೂಲ ಜಪ್ತಿಪಂಚನಾಮನೆಯನ್ನು ಹಾಜರುಪಡಿಸಿ ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದ ಅದರ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.


ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 121/2021 ಕಲಂ 279, 338 ಐ.ಪಿ.ಸಿ. : ಇಂದು ದಿನಾಂಕ:16-07-2021 ರಂದು 8-15 ಪಿ.ಎಂ.ಕ್ಕೆ ಠಾಣೆಯ ಎಸ.ಹೆಚ್.ಡಿ. ಕರ್ತವ್ಯದಲ್ಲ್ಲಿದ್ದಾಗ ಠಾಣೆಯ ಶ್ರೀ ಭಗವಾನ ಎ.ಎಸ್.ಐ. ಇವರು ಎಂ.ಎಲ್.ಸಿ. ಕುರಿತು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುದಾರನಾದ ಶ್ರೀ ನಾಗರೆಡ್ಡಿ ಇತನ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ಗಾಯಾಳುದಾರನ ಹೇಳಿಕೆ ತಂದು ಹಾಜರಪಡಿಸಿದ್ದು, ಸಾರಾಂಶವೆನೆಂದರೆ ದಿನಾಂಕ:12-07-2021 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ದಿನನಿತ್ಯದಂತೆ ನಮ್ಮ ಎಸ್ ಡಿ ಗೋನಾಲ ಗ್ರಾಮದಿಂದ ನಮ್ಮ ಹೊಲಕ್ಕೆ ಹೋಗುವ ಕುರಿತು ಗೋನಾಲ-ಬಾಚಿಮಟ್ಟಿ ರಸ್ತೆಯ ಮುಖಾಂತರ ಶ್ರೀ ರಾಮಲಿಂಗ ಗುಡಿಯ ಹತ್ತಿರ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅದೇ ಸಮಯಕ್ಕೆ ಎದರಿನಿಂದ ಅಂದರೆ ಬಾಚಿಮಟ್ಟಿ ಕಡೆಯಿಂದ ಮೊಟಾರ ಸೈಕಲ್ ಸವರನಾದ ರುದ್ರಣ್ಣ ತಂದೆ ಬಸಣ್ಣ ಸಲಗುಂದಿ ವಯಾ:55 ವರ್ಷ ಜಾತಿ:ಲಿಂಗಾಯತರೆಡ್ಡಿ ಸಾ:ಎಸ್ ಡಿ ಗೋನಾಲ ಈತನು ತನ್ನ ಮೊಟಾರ ಸೈಕಲ್ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಸದರಿ ಮೊಟಾರ ಸೈಕಲ್ ಹೆಂಡಲನ್ನು ನನ್ನ ಹೊಟ್ಟೆಗೆ ಬಡಿಸಿದಾಗ ನಾನು ರಸೆಯಲ್ಲಿ ಬಿದ್ದಾಗ ನನ್ನ ಹೊಟ್ಟೆಗೆ ಗುಪ್ತಪೆಟ್ಟಾಗಿ, ಎಡಗೈಗೆ ಎಡಗಾಲಿಗೆ ರಕ್ತಗಾಯವಾಗಿ ಬಾಯಿಗೆ ಭಾರಿ ರಕ್ತಗಾಯವಾಗಿ ಬಾಯಿಯಲ್ಲಿನ ಕೆಳಗಿನ 4 ಹಲ್ಲುಗಳಿಗೆ ಪೆಟ್ಟಾಗಿರುತ್ತವೆ. ನಾನು ಕೆಳಗೆ ಬಿದ್ದು ಚಿರಾಡುತ್ತಿರುವಾಗ ಅಲ್ಲೆ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ ತಂದೆ ಬಸಣಗೌಡ ಪೊಲೀಸ್ ಪಾಟೀಲ ಸಾ: ಎಸ್ ಡಿ ಗೋನಾಲ ಹಾಗೂ ಶಾಂತಗೌಡ ತಂದೆ ಹೊನ್ನಪ್ಪ ಮಾಡಬಾಳ ಇವರು ಘಟನೆಯನ್ನು ಕಂಡು ಓಡಿ ಬಂದು ನನ್ನನ್ನು ಎಬ್ಬಿಸಿದರು. ಮೊಟಾರ ಸೈಕಲ್ ಸವಾರನಾದ ರುದ್ರಣ್ಣ ಈತನಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ. ಅವನ ಮೊಟಾರ ಸೈಕಲ್ ನಂಬರ ಕೆಎ-33 ಇಎ-1722 ಇರುತ್ತದೆ. ನಂತರ ಗಾಯಗೊಂಡ ನನ್ನನ್ನು ಚಂದ್ರಶೇಖರ ಮತ್ತು ಶಾಂತಗೌಡ ಇಬ್ಬರು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪೂರಕ್ಕೆ ತಂದು ಸೇರಿಕೆ ಮಾಡಿ ಉಪಚಾರ ಮಾಡಿಸಿ, ವೈಧ್ಯಾಧಿಕಾರಿಗಳ ಸಲಹೇ ಮೇರಗೆ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸುದ್ದಿ ತಿಳಿದು ಆಸ್ಪತ್ರೆಗೆ ಬಂದ ನನ್ನ ಹೆಂಡತಿ ದೇವಮ್ಮ ಹಾಗೂ ಚಂದ್ರಶೇಖರ ಮತ್ತು ಶಾಂತಗೌಡ ಇವರು ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ಮೊಟಾರ ಸೈಕಲ್ ಚಾಲಕನಾದ ರುದ್ರಣ್ಣ ಸಲಗುಂದಿ ಈತನು ತನ್ನ ಮೊಟಾರ ಸೈಕಲ್ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ್ದರಿಂದ ಸಂಬವಿಸಿದ್ದು ಇರುತ್ತದೆ. ನಮ್ಮ ಮನೆಯಲ್ಲಿ ನನ್ನ ಹೆಂಡತಿ ಬಿಟ್ಟು ಯಾರೂ ಇಲ್ಲದ ಕಾರಣ ನನಗೆ ಗಾಯಗೊಂಡ ಗಾಭರಿಯಲ್ಲಿ ಏನು ತೋಚದೆ ಇರುವದರಿಂದ ಪಿಯರ್ಾದಿ ಕೊಡಲು ತಡವಾಗಿದ್ದು ಇರುತ್ತದೆ. ನನಗೆ ಅಪಘಾತ ಮಾಡಿದ ರುದ್ರಣ್ಣ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 98/2021 ಕಲಂ: 323,326,504,506 ಐಪಿಸಿ : ಇಂದು ದಿನಾಂಕ 16.07.2021 ರಂದು 9.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಲ್ಲಿಕಾಜರ್ುನ ತಂದೆ ಪರಮೇಶಿ ಅರಿಕೇರಿ ವಯಾ|| 30 ಜಾ|| ಬೇಡರ ಉ|| ಕೂಲಿಕೆಲಸ ಸಾ|| ಕಾಮನಟಗಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಮ್ಮ ತಂದೆ ತಾಯಿಗೆ ನಾವು ಒಟ್ಟು ನಾಲ್ಕು ಜನ ಮಕ್ಕಳಿದ್ದು ಅವರಲ್ಲಿ ಮೂರು ಜನ ಗಂಡು ಮಕ್ಕಳು ಹಾಗು ಮಂಜುಳಾ ಅನ್ನುವ ಒಬ್ಬಳೆ ಹೆಣ್ಣು ಮಗಳಿರುತ್ತಾಳೆ. ಮಂಜುಳಾ ಇವಳಿಗೆ ಸುಮಾರು ಐದು ವರ್ಷಗಳ ಹಿಂದೆ ಮಾಲಗತ್ತಿ ಗ್ರಾಮದ ಸಿದ್ದಪ್ಪ ತಂದೆ ಭೀಮಣ್ಣ ನಂದಿ ಇವನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಸದ್ಯ ನಮ್ಮ ತಂಗಿಗೆ ಭಾಗಣ್ಣ ಅನ್ನುವ 9 ತಿಂಗಳ ಗಂಡು ಮಗನಿರುತ್ತಾನೆ. ನಮ್ಮ ಮಾವನಾದ ಸಿದ್ದಪ್ಪ ತಂದೆ ಭೀಮಣ್ಣ ನಂದಿ ಈತನು ಆಗಾಗ ನಮ್ಮ ತಂಗಿಯೊಂದಿಗೆ ತಕರಾರು ಮಡುತ್ತಾ ಬಂದಿರುತ್ತಾನೆ. ನಾನು ಸುಮಾರು ಸಲ ಮಾಲಗತ್ತಿ ಗ್ರಾಮಕ್ಕೆ ಹೋಗಿ ತಿಳಿಸಿ ಹೇಳಿ ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ 16.07.2021 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಾನು ನಮ್ಮೂರ ನಮ್ಮ ಮನೆಯಲ್ಲಿದ್ದಾಗ ಮಾಲಗತ್ತಿ ಗ್ರಾಮದಿಂದ ನಮ್ಮ ಮಾವನವರಾದ ಯಂಕೋಬಾ ತಂದೆ ಭೀಮಣ್ಣ ನಂದಿ ಇವರು ನನಗೆ ಪೋನ ಮಾಡಿ ನಮ್ಮ ತಂಗಿಯಾದ ಮಂಜುಳಾ ಗಂಡ ಸಿದ್ದಪ್ಪ ನಂದಿ ವ|| 24 ಇವಳಿಗೆ ಅವಳ ಗಂಡ ಸಿದ್ದಪ್ಪ ಈತನು ಮನೆಯಲ್ಲಿ ಜಗಳಾ ತೆಗೆದು ಅವಾಚ್ಯವಾಗಿ ಬೈದು ಕೊಡಲಿಯಿಂದ ಬಲಗಾಲ ಮೊಳಕಾಲು ಕೆಳಗೆ ಕಡಿದು ಭಾರೀ ರಕ್ತಗಾಯ ಪಡಿಸಿರುತ್ತಾನೆ ಸದರಿಯವಳನ್ನು ಉಪಚಾರ ಕುರಿತು ಕೆಂಭಾವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದೇವೆ ನೀನು ಬರಬೇಕು ಅಂತ ತಿಳಿಸಿದಾಗ ನಾನು ಕೂಡಲೇ ಕೆಂಭಾವಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲು ಅಲ್ಲಿ ನಮ್ಮ ತಂಗಿ ಮಂಜುಳಾ ಇದ್ದು ನೋಡಲು ಬಲಗಾಲ ಮೊಳಕಾಲ ಕೆಳಗೆ ಕೊಡಲಿಯಿಂದ ಕಡಿದ ಭಾರೀ ರಕ್ತಗಾಯವಾಗಿದ್ದು ನಂತರ ನಮ್ಮ ತಂಗಿಗೆ ಘಟನೆಯ ಬಗ್ಗೆ ವಿಚಾರಿಸಲಾಗಿ ಅವಳು ತಿಳಿಸಿದ್ದೇನಂದರೆ ಇಂದು ದಿನಾಂಕ 16.07.2021 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ತಾನು ಒಬ್ಬಳೇ ಮನೆಯಲ್ಲಿದ್ದಾಗ ತನ್ನ ಗಂಡ ಸಿದ್ದಪ್ಪ ಈತನು ವಿನಾಕಾರಣವಾಗಿ ತನ್ನೊಂದಿಗೆ ಜಗಳಾ ತೆಗೆದು ಸೂಳಿ ನೀನು ನಮ್ಮ ಮನೆಯಲ್ಲಿ ಇರುವದು ಬ್ಯಾಡ ಅಂತ ಅವಾಚ್ಯವಾಗಿ ಬೈಯ್ದು ಕಾಲಿನಿಂದ ಒದ್ದು ನೆಲಕ್ಕೆ ಕೆಡವಿ ಮನೆಯಲ್ಲಿದ್ದ ಕೊಡಲಿಯಿಂದ ತನ್ನ ಬಲಗಾಲ ಮೊಳಕಾಲ ಕೆಳಗೆ ಬಲವಾಗಿ ಕಡಿದು ಭಾರೀ ರಕ್ತಗಾಯ ಪಡಿಸಿ ನಿಮ್ಮ ಅಣ್ಣಂದಿರಿಗೆ ಹೇಳಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕುತ್ತಿದ್ದಾಗ ನಾನು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಮಾವ ಯಂಕೋಬಾ ತಂದೆ ಭೀಮಣ್ಣ ನಂದಿ ಹಾಗು ಆನಂದ ತಂದೆ ಬಸವರಾಜ ಸುರಪೂರ ಇವರು ಬಂದು ಬಿಡಿಸಿಕೊಂಡು ನನಗೆ ಕೆಂಭಾವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ ಅಂತ ತಿಳಿಸಿದಾಗ ಕೂಡಲೇ ನಮ್ಮ ತಂಗಿಗೆ ಒಂದು ಖಾಸಗಿ ವಾಹನದಲ್ಲಿ ಹೆಚ್ಚಿನ ಉಪಚಾರ ಕುರಿತು ತಾಳಿಕೋಟಿಯ ಸಿದ್ದಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಬಂದಿದ್ದು ಇರುತ್ತದೆ. ಕಾರಣ ವಿನಾಕಾರಣವಾಗಿ ನನ್ನ ತಂಗಿ ಮಂಜುಳಾ ಇವಳೊಂದಿಗೆ ಜಗಳಾ ತೆಗೆದು ಅವಾಚ್ಯವಾಗಿ ಬೈಯ್ದು ಕೊಡಲಿಯಿಂದ ಬಲಗಾಲ ಮೊಳಕಾಲ ಕೆಳಗೆ ಹೊಡೆದು ಭಾರೀ ರಕ್ತಗಾಯ ಪಡಿಸಿದ ಅವಳ ಗಂಡ ಸಿದ್ದಪ್ಪ ತಂದೆ ಭೀಮಣ್ಣ ನಂದಿ ಸಾ|| ಮಾಲಗತ್ತಿ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಫಿಯಾದಿ ಅಜರ್ಿ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 98/2021 ಕಲಂ 323,326,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 17-07-2021 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080