ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-07-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 107/202 ಕಲಂ. 302 ಐಪಿಸಿ: ದಿನಾಂಕ: 16-07-2022 ರಂದು ಬೆಳಗಿನ ಜಾವ 04-00 ಗಂಟೆಗೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ನಾನು ಶರಣಪ್ಪ ತಂದೆ ಜಲಾಲಸಾಬ ಬಟಿಗೇರಿ ಗ್ರಾಮ ಮಗ್ದಂಪೂರ ಇದ್ದು ನನ್ನ ಅಕ್ಕನ ಮಗನಾದ ತಾಯಪ್ಪ ತಂದೆ ಶೇಖಪ್ಪ ಇವನಿಗೆ ಚಿಕ್ಕವನಿದ್ದಾಗ ತಾಯಿ ತಂದೆ ಇಬ್ಬರು ಮರಣ ಹೊಂದಿದ್ದು ತಾಯಪ್ಪನಿಗೆ ನಾನು ಆಶ್ರಯ ಕೊಟ್ಟು ನನ್ನ ಕುಶಾಲಕುಮಾರ ದಾಬದಲ್ಲಿ ಇಬ್ಬರು ಕೂಡಿ ಧಾಬವನ್ನು ನಡೆಸಿಕೊಂಡು ಹೋಗುತಿದ್ದೇವೆ ಬಂದ ಆದಾಯದಲ್ಲಿ ಇಬ್ಬರು ಜೀವನ ನಡೆಸಿಕೊಂಡು ಹೋಗುತಿದ್ದೆವೆ, ಸುಮಾರು 2 ವರ್ಷಗಳಿಂದ ಧಾಬವನ್ನು ನಡೆಸಿಕೊಂಡು ಬಂದಿದ್ದೆವೆ, ನಮ್ಮ ಮಧ್ಯ ಯಾವುದೇ ತರಹದ ಜಗಳ ಗಲಾಟೆ ಯಾವುದೇ ರೀತಿಯ ಭಿನ್ನಾಬೀಪ್ರಾಯ ಇರುವದಿಲ್ಲ.ಇಂದು ದಿನಾಂಕ: 15-07-2022 ರಂದು ಶುಕ್ರವಾರ ರಾತ್ರಿ 08-28 ಗಂಟೆ ಸಮಯದಲ್ಲಿ ವರ್ಕನಳ್ಳಿ ಗ್ರಾಮದ ಇಬ್ಬರು ವ್ಯಕ್ತಿಗಳು ದಾಬದಲ್ಲಿ ಬಂದು ಕುಳಿತು ಊಟ ಏನಿದೆ ಅಂತಾ ಕೇಳಿದರು ನಾನು ತಾಯಪ್ಪನಿಗೆ ಹೇಳಿದೆ ನಾನು ಮನೆಗೆ ಹೋಗಿ ನನ್ನ ಪ್ಯಾಂಟ್ ಶರ್ಟ ಬಿಟ್ಟು ಬರುತ್ತೇನೆ ನೈಟ್ ಟೀ ಶರ್ಟ ಹಾಕಿಕೊಂಡು ಬರುತ್ತೇನೆ, ಅಂತಾ ಹೇಳಿ ಹೋಗಿದ್ದೆ 20 ನಿಮಿಷದಲ್ಲಿ ಅದೆ ಗ್ರಾಮದ ರವಿ ವಾಲ್ಮೀಕಿ ಸಮಾಜದ ಯುವಕ ನನಗೆ ಪೊನ್ ಮಾಡಿ ತಿಳಿಸುತ್ತಾನೆ ನಿಮ್ಮ ತಾಯಪ್ಪನಿಗೆ ಏನೋ ಆಗಿದೆ ಬೇಗ ಬಾ ಅಂತಾ ಹೇಳುತ್ತಾನೆ, ನಾನು ಹೋಗಿ ನೋಡಿದಾಗ ಅಲ್ಲಿಂದ ತಾಯಪ್ಪನಿಗೆ ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ ನಾನು ಧಾಬದ ಒಳಗೆ ಹೋಗಿ ನೋಡಿದಾಗ ವರ್ಕನಳ್ಳಿ ಗ್ರಾಮದ ಊಟಕ್ಕೆ ಬಂದ ಇಬ್ಬರೂ ಅಂದರೆ ವರ್ಕನಳ್ಳಿ ಗ್ರಾಮದ ಮಲ್ಲು ಮತ್ತು ರವಿ ಎಸ್.ಸಿ ಮಾದಿಗ ಸಮಾಜದ ಯುವಕರು ನಾನು ಮನೆಗೆ ಹೋಗುವ ಮುಂಚೆ ಇವರಿಬ್ಬರು ಇದ್ದರು ನಾನು ಮನೆಯಲ್ಲಿ ಇದ್ದಾಗ ರವಿ ವಾಲ್ಮೀಕಿ ಸಮಾಯದ ಯುವಕ ಕರೆ ಮಾಡಿ ಹೇಳಿದ್ದಾರೆ ನಾನು ಕೇಳಿ ಶಾಖಾಗಿ ಬಿಟ್ಟೆ ನಾನು ಗಾಬರಿಗೋಂದು ಓಡಿ ಓಡಿ ಬಂದು ನೋಡುವಷ್ಟರೋಳಗೆ ನಮ್ಮ ತಾಯಪ್ಪನಿಗೆ ಆಸ್ಪತ್ರೆಗೆ ಹೋಯುತಿದ್ದರು ನಾನು ಧಾಬದ ಒಳಗೆ ನೋಡಿದಾಗ ರವಿ ಮತ್ತು ಮಲ್ಲು ಎಸ್.ಸಿ ಸಮಾಜದ ಯುವಕರು ಇದ್ದಿರುವದಿಲ್ಲ ಅಂದರೆ ನಮ್ಮ ತಾಯಪ್ಪನಿಗೆ ಇಬ್ಬರು ಕೂಡಿ ನಮ್ಮ ಅಳಿಯನಿಗೆ ಬಲ ಕೀವಿಯಲ್ಲಿ ಹೊಡೆದುಬ್ರೇನ್ ಪೆಟ್ಟು ಬಿಳುವ ಆಗೆ ಹೊಡೆದು ಸಾವಿಗೆ (ಕೋಲೆಗೈದಿದ್ದು) ಸಂಶಯವಿರುತ್ತದೆ, ಅಲ್ಲಿಂದ ಪರಾರಿಯಾಗಿ ಓಡಿ ಹೋಗಿರುತ್ತಾರೆ ಪೋನ್ ಸ್ವೀಚ್ ಆಫ್ ಮಾಡಿರುತ್ತಾರೆ ಸಾವಿಗೆ (ಕೋಲೆಗೈದ) ಸಂಶಯವಿರುವ ಆರೋಪಿಗಳಾದ ರವಿ ಮತ್ತು ಮಲ್ಲು ಎಸ್.ಸಿ ಸಮಾಜದ ಯುವಕರಿಗೆ ಕಾನೂನಿನ ಕ್ರಮ ಜರುಗಿಸಿ ಮತ್ತು ಈ ಕೂಡಲೆ ಆರೋಪಿಗಳಿಗೆ ಎಫ್. ಐ .ಆರ್ ದಾಖಲಿಸಿ ಎಫ್.ಐ.ಆರ್ ಕಾಪಿ ನಮಗೆ ಕೊಟ್ಟು ನ್ಯಾಯ ಒದಗಿಸಿಕೊಡಬೇಕು ಗೌರ್ವಾನಿತ ಪಲೀಸ್ ಇಲಾಖೆ ಅಧಿಕಾರಿಗಳ ಹತ್ತಿರ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ. ಅಂತಾ ಪಿಯರ್ಾಧಿ.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 108/2022 ಕಲಂ.295, 505(2) ಐ.ಪಿ.ಸಿ: ಇಂದು ದಿನಾಂಕ 16/07/2022 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಪೀಯರ್ಾದಿದಾರರು ಠಾಣೆಗೆ ಖುದ್ದಾಗಿ ಬಂದು ದೂರು ನೀಡಿದ ಸಾರಂಶವೆನಂದರೆ, ನಾನು ನಿಂಗಣ್ಣ ತಂದೆ ಮಲ್ಲಪ್ಪ ಬಿರನಾಳ, ವಯ:43 ವರ್ಷ ಜಾತಿ: ಎಸ್.ಸಿ(ಹೊಲೆಯ), ಉ: ಆಟೋ ಚಾಲಕ ಮತ್ತು ಸಮಾಜ ಸೇವಕ, ಸಾ: ಅಂಬೇಡ್ಕರ ನಗರ, ಯಾದಗಿರಿ ಮೋಬೈಲ ನಂ 9972453900 ತಮಲ್ಲಿ ದೂರು ಸಲ್ಲಿಸುವುದೆನೆಂದರೆ, ದಿ:16-07-2022 ರಂದು ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದ ಕಬ್ಬಲಿಗ ಸಮಾಜಕ್ಕೆ ಸೇರಿದ ವ್ಯಕ್ತಿಯಾದ ಮಲ್ಲು @ ಮಲ್ಲಪ್ಪ @ ಮಲ್ಲಿಕಾಜರ್ುನ ಇತನು ಸಾಮಾಜಿಕ ಜಾಲತಾಣವಾದ ತನ್ನ ಇನಸ್ಟಗ್ರಾಮ್/ವಾಟ್ಸಪ್ ತನ್ನ ಮೋಬೈಲ ನಂಬರ 6362559066 ಮುಖಾಂತರ ವಿಶ್ವರತ್ನ ಡಾ// ಬಾಬಾ ಸಾಹೇಬ ಅಂಬೇಡ್ಕರ ರವರಿಗೆ ಅವಮಾನ ಆಗೋ ರೀತಿಯಲ್ಲಿ ಒಂದು ಹೆಣ್ಣಿನ ವಿಡಿಯೋ ತುಣಕಿಗೆ ಡಾ// ಬಾಬಾ ಸಾಹೇಬ ಅಂಬೇಡ್ಕರ ರವರ ಮುಖವನ್ನು ವಿಡಿಯೋ ಎಡಿಟ್ ಮಾಡಿ ಇದಕ್ಕೆ ಅವರ ಗೌರವಕ್ಕೆ ಚ್ಯುತಿ ಆಗುವ ರೀತಿಯ ಹಾಡನ್ನು ಸೆಟ್ ಮಾಡಿ ಸ್ಟೇಟಸ್ ಇಟ್ಟಿರುತ್ತಾನೆ. ಮತ್ತು ಸದರಿ ಹೆಂಗಸಿನ ಪೋಟೊಕ್ಕೆ ಡಾ// ಬಾಬಾ ಸಾಹೇಬ ಅಂಬೇಡ್ಕರ ರವರ ಮುಖವನ್ನು ಎಡಿಟ್ ಮಾಡಿ, ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ತನ್ನ ಇನಸ್ಟಗ್ರಾಮ್/ವಾಟ್ಸಪ್ ಸ್ಟೇಟಸ್ ಇಟ್ಟಿರುತ್ತಾನೆ. ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟಂತಹ ಸಂವಿಧಾನ ಶಿಲ್ಪಿ ಡಾ// ಬಿ.ಆರ್.ಅಂಬೇಡ್ಕರ ರವರಿಗೆ ಅವಮಾನ ಮಾಡಿರುತ್ತಾನೆ. ಇತ್ತಿಚಿನ ದಿನಗಳಲ್ಲಿ ರಾಷ್ಟ್ರ ನಾಯಕರಿಗೆ ಅವಮಾನ ಮಾಡುವ ಇಂತಹ ಘಟನೆಗಳು ಹೆಚ್ಚಾಗುತ್ತಲೆ ಇವೆ. ಡಾ// ಬಿ.ಆರ್.ಅಂಬೇಡ್ಕರ ರವರಿಗೆ ಅವಮಾನ ಮಾಡಿರುತಾನೆೆ. ಭಾರತ ದೇಶಕ್ಕೆ ಸಂವಿಧಾನ ಜಾರಿಯಾಗಿ 7 ದಶಕಗಳು ಕಳೆದರೂ ಭಾರತ ದೇಶದಲ್ಲಿ ಜಾತಿ ವ್ಯವಸ್ಥೆ ತಾಂಡವಾಡುತ್ತಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂದೇಶವನ್ನು ಸಾರಿ ಎಲ್ಲಾ ಸಮೂದಾಯದವರಿಗೆ ಸಾಮಾಜಿಕ ನ್ಯಾಯವನ್ನು ಕೊಟ್ಟಂತಹ ಡಾ// ಬಿ.ಆರ್.ಅಂಬೇಡ್ಕರರವರಿಗೆ ಈ ರೀತಿ ಅವಮಾನ ಮಾಡಿದ್ದರಿಂದ ನಾಗರಿಕ ಸಮಾಜ ತಲೆ ತಗ್ಗಿಸ ಬೇಕಾಗಿದೆ ಆದ್ದರಿಂದ ಮಲ್ಲು @ ಮಲ್ಲಪ್ಪ @ ಮಲ್ಲಿಕಾಜರ್ುನ ಬಂದಳ್ಳಿ ಇವನ ಮೇಲೆ ಮತ್ತು ಇತರರ ಮೇಲೆ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿರುವ ಆರೋಪದಡಿಯಲ್ಲಿ ಸಂಬಂದಪಟ್ಟ ಕಾಯ್ದೆಗಳ ಅನ್ವಯ ದೂರು ದಾಖಲಿಸಿಕೊಂಡು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡೆಸಬೇಕೆಂದು ತಮಗೆ ದೂರು ಸಲ್ಲಿಸುತ್ತಿದ್ದೇನೆ. ಸದರಿ ಹೇಳಿಕೆ ಸಾರಂಶದ ಮೇಲಿಂದ ಠಾಣೆಯ ಗುನ್ನ ನಂ 108/2022 ಕಲಂ 295, 505(2) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 83/2022 ಕಲಂ. 420 ಐಪಿಸಿ:ಪಿರ್ಯಾದಿ ಸಾರಾಂಶವೆನೆಂದರೆ, ನಾನು 2017 ನೇ ಸಾಲಿನಲ್ಲಿ ನಮಗೆ ಪರಿಚಯವಿರುವ ಶ್ರೀಮತಿ ಸಿದ್ದಮ್ಮ ತಂದೆ ಸಿದ್ದಪ್ಪ ಶೆಟ್ಟಿ ಸಾ; ಎಲ್ಹೇರಿ ತಾ; ಗುರುಮಿಠಕಲ್ ಇವರು ತಮ್ಮ ಮನೆತನದ ಅಡಚಣೆಯ ನಿಮಿತ್ಯ ಎಲ್ಹೇರಿ ಸೀಮಾಂತರದಲ್ಲಿರುವ ಹೊಲ ಸವರ್ೆ ನಂ.893 ಒಟ್ಟು ವಿಸ್ತೀರ್ಣ 7 ಎಕರೆ 22 ಗುಂಟೆ ಜಮೀನನ್ನು ಅಡ ಇಟ್ಟು ಹಣ ಕೇಳಿದ್ದು ಆಗ ನಾನು ನನ್ನ ಹತ್ತಿರ ಅಷ್ಟೊಂದು ಹಣ ಇಲ್ಲದ್ದರಿಂದ ನಮ್ಮ ಸಬಂಧಿಗಳಾದ ಅಯ್ಯನಗೌಡ ತಂದೆ ಮಲ್ಲಣ್ಣಗೌಡ ಮಾಲಿ ಪಾಟೀಲ, ಮಲ್ಲರೆಡ್ಡಿ ತಂದೆ ಬಸ್ಸಣಗೌಡ ಇವರ ಕಡೆಯಿಂದ ತಲಾ 15,00,000/- ರೂ. ಗಳಂತೆ ಮಾತನಾಡಿದ್ದು ಮುಂದೆ ಸದರಿ ಹೊಲವನ್ನು ನಮಗೆ ಖರೀದಿ ನೊಂದಣಿ ಮಾಡಿಸಿಕೊಡಬೇಕೆಂದು ಹೇಳಿ ದಿನಾಂಕ; 31/01/2017 ರಂದು ಅಯ್ಯನಗೌಡ ಇತನು ರೂ.14,50,000/- ಕೊಟ್ಟು ಕಬ್ಜೆ ರಹಿತ ಒಪ್ಪಿಗೆ ಪತ್ರವನ್ನು ಮಾಡಿಸಿಕೊಂಡಿದ್ದು ಅದರ ನಂ.6550/2016-17 ಇರುತ್ತದೆ. ಅದರಂತೆ ಅಂದೇ ಮಲ್ಲಣಗೌಡನು ರೂ.14,50,000/- ಕೊಟ್ಟು ಕಬ್ಜೆ ರಹಿತ ಒಪ್ಪಿಗೆ ಪತ್ರವನ್ನು ಮಾಡಿಸಿಕೊಂಡಿದ್ದು ಅದರ ನಂ.6552/2016-17 ಇರುತ್ತದೆ. ಅದರಂತೆ ನಾನು ಅದೇ ದಿವಸ 6,00,000/-ರೂ ಗಳನ್ನು ಕೊಟ್ಟು ಕಬ್ಜೆ ರಹಿತ ಒಪ್ಪಿಗೆ ಪತ್ರವನ್ನು ಮಾಡಿಸಿಕೊಂಡಿದ್ದು ಅದರ ನಂ.6553/2016-17 ಇರುತ್ತದೆ. ಸದರಿ ಕಬ್ಜೆ ರಹಿತ ಒಪ್ಪಿಗೆ ಪತ್ರವನ್ನು ಮಾಡಿಸಿಕೊಂಡ ನಂತರ ಸದರಿ ಹೊಲದ ಮಾಲೀಕಳಾದ ಸಿದ್ದಮ್ಮ ಈಕೆಯು ನಾವು ಕೊಟ್ಟ ಹಣವನ್ನು ಒಂದು ವರ್ಷದಲ್ಲಿ ಹಿಂದುರಿಗಿಸುತ್ತೇನೆ ಅಂತಾ ಹೇಳಿದ್ದು ಆದರೆ ಹಣವನ್ನು ಹಿಂದಿರುಗಿಸದೆ ತಲೆಮರೆಸಿಕೊಂಡು ನಮಗೆ ತಿಳಿಯದಂತೆ ನಮ್ಮ ಮೂರು ಜನರಿಗೆ ಕಬ್ಜೆ ರಹಿತ ಒಪ್ಪಿಗೆ ಪತ್ರ ಬರೆದು ಕೊಟ್ಟು ನಮಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ ಈ ಮೇಲಿನ ಜಮೀನನ್ನು ಸಿದ್ದಣ್ಣ ತಂದೆ ಭೀಮಶೆಟ್ಟಿ ಸಾ; ಚಿತ್ತಾಪೂರ ರೋಡ್ ಬಸವೇಶ್ವರ ನಗರ ಯಾದಗಿರಿ ಇವರಿಗೆ ದಸ್ತಾವೇಜು ಸಂ.6106/2021-22 ದಿನಾಂಕ; 14/12/2021 ರಂದು ಜಮೀನನ್ನು ಖರಿದಿ ನೊಂದಣಿ ಮಾಡಿಸಿಕೊಟ್ಟಿದ್ದು ಇರುತ್ತದೆ.ಸದರಿ ಜಮೀನಿನ ನೊಂದಾಯಿತ ಕಬ್ಜೆ ರಹಿತ ಖರೀದಿಕರಾರು ಪತ್ರ ಇದ್ದರು ಸಹಾ 1) ಶ್ರೀಮತಿ ಸಿದ್ದಮ್ಮ ತಂದೆ ಸಿದ್ದಪ್ಪ (ಗಂಡ ಮಹಾದೇವಪ್ಪ ಕಂದಕೂರ) 2) ಬಿ. ಸಿದ್ದಣ್ಣ ತಂದೆ ಭೀಮಶೆಟ್ಟಿ ಮತ್ತು ಸಮ್ಮತಿ ಸಾಕ್ಷಿದಾರರಾದ 3) ಪ್ರವೀಣಕುಮಾರ ತಂದೆ ಮಹಾದೇವಪ್ಪ ಕಂದಕೂರ ಸಾ; ಬಂಡಿಗೇರಾ ಯಾದಗಿರಿ ಸಾಕ್ಷಿದಾರನಾದ 4) ನರಸಿಂಗಪ್ಪ ತಂದೆ ಸಾಬಣ್ಣ ಗಂಗವ್ವನೊರ ಸಾ; ಗಣಪೂರ 5) ಸೂಗಪ್ಪ ತಂದೆ ಶರಣಪ್ಪ ಸಾ; ಗಣಪೂರ 6) ವಿಷ್ಣುಕಾಂತ ತಂದೆ ಸಿದ್ರಾಮಪ್ಪಗೌಡ ಪೊಲೀಸ ಪಾಟೀಲ ಸಾ; ಗಣಪೂರ 7) ಭೀಮಶಪ್ಪ ತಂದೆ ಚಂದ್ರಪ್ಪ ಸಾ; ಗಣಪೂರ ಮತ್ತು ಸದರಿ ದಾಖಲಾತಿಗಳನ್ನು ತಯ್ಯಾರಿಸುವಲ್ಲಿ ಸಹಕರಿಸಿದ 8) ಕಲ್ಲಪ್ಪ. ಬಿ ಅಂಗಡಿ ವಕೀಲರು ಸಾ; ಪಟೇಲವಾಡಿ ಯಾದಗಿರಿ ಇವರುಗಳು ಕೂಡಿಕೊಂಡು ನಮಗೆ ಮೋಸ ಮಾಡಿದ್ದು ಇವರೆಲ್ಲರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.83/2022 ಕಲಂ.420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 93/2022 ಕಲಂ: 504, 341, 323, 506 ಸಂ 34 ಐಪಿಸಿ: ಇಂದು ದಿನಾಂಕ:16/07/2022 ರಂದು 6-45 ಪಿಎಮ್ ಕ್ಕೆ ಶ್ರೀ ಸೈಯದ ಶಹಾ ಜಲಾಲ ಹುಸೇನಿ ಸಜ್ಜಾದ ನಷೀನ @ ಖಮರಪಾಷ ಸಾಹೇಬ ತಂದೆ ಸೈಯದ ಶಹಾ ಮೆಹಮೂದ ಹುಸೇನಿ ವ:54, ಜಾತಿ: ಮುಸ್ಲಿಂ, ಉ: ಒಕ್ಕಲುತನ (ಪೂಜಾರಿ) ಸಾ:ಗುಲಸರಂ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮೂರ ಹಜರತ ಸೈಯದ ಶಹಾ ಜಲಾಲೋದ್ದಿನ ಹುಸೇನಿ ಶೇರ್ ಸವಾರ ದಗರ್ಾದ ಆಸ್ತಿ ಮತ್ತು ಜಮೀನುಗಳು ಇರುತ್ತವೆ. ಹೀಗಿದ್ದು ಸೈಯದ ಖುಸ್ರೋ ವಲಿವುಲ್ಲ ಹುಸೇನಿ ತಂದೆ ಸೈಯದ ಅಹ್ಮೆದ ಹುಸೇನಿ ಮತ್ತು ಈತನ ಅಣ್ಣನಾದ ಸೈಯದ ಚಂದಾ ಹುಸೇನಿ ತಂದೆ ಸೈಯದ ಅಹ್ಮೆದ ಹುಸೇನಿ ಇಬ್ಬರೂ ಶ್ಯಾಮಿಲಾಗಿ ದಗರ್ಾದ ಆಸ್ತಿಗಳಾದ ಜಮೀನು ಸವರ್ೆ ನಂಬರ. 31/1 ವಿಸ್ತೀರ್ಣ 11 ಎಕರೆ 24 ಗುಂಟೆ ಮತ್ತು ಸವರ್ೆ ನಂಬರ: 31/2 ವಿಸ್ತರ್ಿಣ 02 ಎಕರೆ ಜಮೀನನ್ನು ತಮಗೆ ಬೇಕಿದ್ದವರ ಹೆಸರಿನಲ್ಲಿ ವಗರ್ಾವಣೆ ಮಾಡಿಕೊಂಡು ಸದರಿ ದಗರ್ಾದ ಆಸ್ತಿಗಳನ್ನು ಮಾರಾಟ ಮಾಡಲು ಸಂಚು ನಡೆಸಿರುತ್ತಾರೆ. ನಾನು ಈ ವಿಷಯವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಯಾದಗರಿ ರವರಿಗೆ ತಡೆ ಕೋರಿ ಅಜರ್ಿಯನ್ನು ಸಲ್ಲಿಸಿ, ಸದರಿ ಕಾನೂನು ಬಾಹಿರ ಕಾನೂನು ಕ್ರಮ ತಡೆಯುವಂತೆ ಮಾನ್ಯರಲ್ಲಿ ಕೋರಿರುತ್ತೇನೆ. ಆಗಿನಿಂದ ಅವರು ನನ್ನ ಮೇಲೆ ದ್ವೇಷ ಸಾಧಿಸುತ್ತಾ ಬರುತ್ತಿದ್ದಾರೆ. ಹೀಗಿದ್ದು ದಿನಾಂಕ:23/05/2022 ರಂದು 2-15 ಪಿಎಮ್ ಸುಮಾರಿಗೆ ನಾನು ನಮ್ಮೂರ ಹಜರತ ಸೈಯದ ಶಹಾ ಜಲಾಲೋದ್ದಿನ ಹುಸೇನಿ ಶೇರ್ ಸವಾರ ದಗರ್ಾದ ದರ್ಶನ ಮುಗಿಸಿಕೊಂಡು ವಾಪಾಸು ಮನೆಗೆ ಹೋಗುತ್ತ್ತಿರುವಾಗ ದಗರ್ಾದ ಎದರುಗಡೆ ಇರುವ ನೀರಿನ ಟಾಕಿ ಹತ್ತಿರ 1) ಸೈಯದ ಖೂಸ್ರೋ ವಲ್ಲಿವುಲ್ಲಾ ಹುಸೇನಿ ತಂದೆ ಸೈಯದ ಅಹ್ಮೆದ ಹುಸೇನಿ ಮತ್ತು ಆತನ ಅಣ್ಣನಾದ ಸೈಯದ ಚಂದಾ ಹುಸೇನಿ ತಂದೆ ಸೈಯದ ಅಹ್ಮೆದ ಹುಸೇನಿ ಇಬ್ಬರೂ ಸಾ: ಗುಲಸರಂ ಇವರು ಕೂಡಿ ಬಂದವರೇ ಏಕಾಏಕಿ ನನ್ನ ಮೇಲೆ ಎಗರಿ ಏ ಸಾಲಾ ಜಲಾಲ ಇದರಿಹಿ ಮಿಲಾಹೈರೆ ಇಸೆ ಖಲತಂ ಕರೆ ತೋ ದಗರ್ಾ ಕಿ ಜಮೀನ ಹಮಾರಿ ಹೋಜಾಹಿಗಿ, ಹಮೆ ಕೋಯಿ ಪೂಚನೆವಾಲಾ ನಹಿ ರಹೆಗಾ ಅಂತಾ ಖುಸ್ರೋ ಜೋರಾಗಿ ಚೀರುತ್ತಾ ಬಂದು ನನಗೆ ತಡೆದು ನಿಲ್ಲಿಸಿ, ಕೈಯಿಂದ ಕಪಾಳಕ್ಕೆ ಹೊಡೆದು ಬೆನ್ನಿಗೆ ಒದ್ದನು. ಆಗ ಆತನ ಅಣ್ಣ ಸೈಯದ ಚಂದಾ ಹುಸೇನಿ ಈತನು ಬಂದು ನನ್ನ ಹೊಟ್ಟೆಗೆ, ಬೆನ್ನಿಗೆ ಬಲವಾಗಿ ಒದ್ದನು. ಖುಸ್ರೋ ನನ್ನ ಕುತ್ತಿಗೆ ಹಿಡಿದು ಕೆಳಗೆ ತಳ್ಳಿದನು. ನಾನು ಮೂಛರ್ೆ ಹೋಗಿ ಕೆಳಗೆ ಬಿದ್ದಾಗ ಇದನ್ನು ನೋಡಿದ ಅಲ್ಲಿಯೇ ಇದ್ದ ನಮ್ಮೂರ ಅಂಬರೀಶ ತಂದೆ ಶರಣಪ್ಪ ಮಾಸ್ಟರ ಮತ್ತು ಅಲ್ಲಾಭಕ್ಷ ತಂದೆ ಅಬ್ದುಲ್ ಖಾದರ ಇಬ್ಬರೂ ಬಂದು ನನಗೆ ಹೊಡೆಯುವುದು ಬಿಡಿಸಿರುತ್ತಾರೆ. ಕಾರಣ ನಮ್ಮೂರ ದಗರ್ಾದ ಆಸ್ತಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವುದನ್ನು ತಡೆಯವಗೋಸ್ಕರ ನಾನು ಮಾನ್ಯ ಜಿಲ್ಲಾಧಿಕಾರಿಗಳಿಗೆ ದೂರು ಅಜರ್ಿ ನೀಡಿದಕ್ಕೆ ನನಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಈ ಬಗ್ಗೆ ನಾನು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನಗೆ ಕೇವಲ ಕೈಯಿಂದ ಹೊಡೆದಿದ್ದು, ಅಂತಹ ಪೆಟ್ಟುಗಳಾಗದ ಕಾರಣ ಮತ್ತು ಅವುಗಳೆಲ್ಲ ಮಾಯ್ದಿರುವುದರಿಂದ ನಾನು ಈಗ ಆಸ್ಪತ್ರೆಗೆ ತೋರಿಸಿಕೊಳ್ಳುವುದಿಲ್ಲ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 93/2022 ಕಲಂ:504, 341, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 117/2022 ಕಲಂ: 87 ಕೆಪಿ ಯಾಕ್ಟ: ಇಂದು ದಿನಾಂಕ 16.07.2022 ರಂದು 6.15 ಪಿ.ಎಮ್ ಕ್ಕೆ ಶ್ರೀ ವಿಶ್ವನಾಥರೆಡ್ಡಿ ಪಿ.ಎಸ್.ಐ ಸಾಹೇಬರು ಕೆಂಭವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಜಪ್ತಿ ಪಂಚನಾಮೆ, ಮುದ್ದೆಮಾಲು, 6 ಜನ ವ್ಯಕ್ತಿಗಳ ಸಮೇತ ಒಂದು ವರದಿ ನೀಡಿ ಮುಂದಿನ ಕ್ರಮ ಜರುಗಿಸಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 16.07.2022 ರಂದು 4.00 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಕಿರದಳ್ಳಿ ತಾಂಡಾದ ಸೇವಾಲಾಲ್ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು, ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎನ್ನುವ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಠಾಣೆಯ ಆನಂದ ಪಿಸಿ 43, ಈರಪ್ಪ ಪಿಸಿ 386, ಬಸವರಾಜ ಪಿಸಿ 363, ಸಿದ್ರಾಮ ಪಿಸಿ 210, ಕಾಶಿನಾಥ ಪಿಸಿ 293, ಮಾಳಪ್ಪ ಪಿಸಿ 29 ಮತ್ತು ವಿಜಯಾನಂದ ಪಿಸಿ 103 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಮತ್ತು ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 4.10 ಪಿಎಂ ಕ್ಕೆ ಹೊರಟು 4.35 ಪಿಎಂ ಕ್ಕೆ ಕಿರದಳ್ಳಿ ತಾಂಡಾದ ಸೇವಾಲಾಲ್ ಗುಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 4.40 ಪಿಎಂ ಕ್ಕೆ ನಾನು ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 06 ಜನರು ಸಿಕ್ಕಿದ್ದು ಸಿಕ್ಕವರ ಹೆಸರು ವಿಳಾಸ ವಿಚಾರಿಸಲಾಗಿ 1) ಸಿದ್ದು ತಂದೆ ದೇವಿಂದ್ರಪ್ಪ ರಾಠೋಡ ವ|| 29 ಜಾ|| ಲಂಬಾಣಿ ಉ|| ಕೂಲಿ ಸಾ|| ಕಿರದಳ್ಳಿ ತಾಂಡಾ ತಾ|| ಸುರಪೂರ 2)ಪಾಪು ತಂದೆ ಪಾಂಡು ರಾಠೋಡ ವ|| 39 ಜಾ|| ಲಂಬಾಣಿ ಉ|| ಕೂಲಿ ಸಾ|| ಕಿರದಳ್ಳಿ ತಾಂಡಾ 3)ಸಾಯಬಣ್ಣ ತಂದೆ ಹೊನ್ನಪ್ಪ ಟಣಕೆದಾರ ವ|| 38 ಜಾ|| ಬೇಡರ ಉ|| ಕೂಲಿ ಸಾ|| ಹೆಗ್ಗಣದೊಡ್ಡಿ ತಾ|| ಸುರಪೂರ 4)ಶರಣಪ್ಪ ತಂದೆ ರಾಮಲಿಂಗಪ್ಪ ರಾಠೋಡ ವ|| 50 ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಕಿರದಳ್ಳಿ ತಾಂಡಾ 5)ಸೋಮಶೇಖರ ತಂದೆ ಬುದ್ದಿವಂತ ರಾಠೋಡ ವ|| 35 ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಕಿರದಳ್ಳಿ ತಾಂಡಾ 6)ಮಹ್ಮದ ಯೂನುಸ್ ತಂದೆ ಮಹ್ಮದ ಇಲಿಯಾಸ್ ಸುರಪೂರ ವ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಯಾಳಗಿ ತಾ|| ಸುರಪೂರ ಅಂತ ಗೊತ್ತಾಗಿದ್ದು ಎಲ್ಲರ ಮಧ್ಯದ ಕಣದಲ್ಲಿ 25100/- ರೂ ಹಣ ಸಿಕ್ಕಿದ್ದು ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಅವುಗಳನ್ನು ಜಪ್ತಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 4.40 ಪಿಎಂ ದಿಂದ 5.40 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿತರು ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಮರಳಿ ಠಾಣೆಗೆ 6.15 ಪಿಎಮ್ ಕ್ಕೆ ಬಂದು ಈ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 117/2022 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

 

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 115/2022 ಕಲಂಃ 323,324,504,506 ಐಪಿಸಿ: ಇಂದು ದಿನಾಂಕ: 16/07/2022 ರಂದು 8.30 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ಚನ್ನಬಸಮ್ಮ ಗಂಡ ಮಲ್ಲಪ್ಪ ಹುಲಕಲ್ ವ|| 65 ವರ್ಷ ಜಾ|| ಮಾದಿಗ ಉ|| ಮನೆಗೆಲಸ ಸಾ|| ಹುಲಕಲ್ ಗುಡ್ಡ, ಸುರಪುರ ತಾ|| ಸುರಪೂರ ಇದ್ದು, ತಮ್ಮಲ್ಲಿ ಕೊಡುವ ದೂರು ಅಜರ್ಿ ಏನೆಂದರೆ, ನನಗೆ ಒಟ್ಟು 4 ಗಂಡುಮಕ್ಕಳು, 3 ಜನ ಹೆಣ್ಣುಮಕ್ಕಳು ಇರುತ್ತಾರೆ. ಅವರಲ್ಲಿ ಶಾಂತಪ್ಪ ಈತನು ಕೊನೆಯವನಾಗಿರುತ್ತಾನೆ. ಶಾಂತಪ್ಪ ವಯಸ್ಸು: 22 ವರ್ಷ ಈತನು ಯಾವುದೇ ಕೆಲಸ ಮಾಡದೇ ಸುಮ್ಮನೆ ತಿರುಗುತ್ತಾನೆ. ಈತನಿಗೆ ನಾನು ಮತ್ತು ಅವನ ಅಣ್ಣಂದಿರಾದ ನಾಗರಾಜ, ಭೀಮರಾಯ ಎಲ್ಲರು ಕೂಡಿ ಏನಾದರು ಕೆಲಸ ಮಾಡು ಸುಮ್ಮನೆ ತಿರುಗಾಡಬೇಡ ಅಂತ ಬುದ್ದಿವಾದ ಹೇಳಿದರೂ ಯಾರ ಮಾತು ಕೇಳದೇ ಹಾಗೆ ತಿರುಗಾಡುತ್ತಿದ್ದನು. ಅಲ್ಲದೆ ಆತನು ನನ್ನ ಖಚರ್ಿಗೆ ಹಣ ಕೊಡಬೇಕು ಅಂತ ಕೇಳಿದಾಗ, ನಾನು ಎಲ್ಲಿಂದ ಕೊಡೋದು ನನ್ನ ಹತ್ತಿರ ಹಣ ಇರುವದಿಲ್ಲ ಅಂತ ಅಂದಾಗ ನನ್ನೊಂದಿಗೆ ಕಿರಿಕಿರಿ ಮಾಡುತ್ತಾ ಚಿತ್ರಹಿಂಸೆ ಕೊಡುತ್ತಾ ಬಂದಿದ್ದನು. ಆದರೂ ನಾನು ಮುಂದೆ ಸರಿಹೋಗಬಹುದು ಅಂತ ಸುಮ್ಮನಿದ್ದೆನು. ಹೀಗಿದ್ದು ದಿನಾಂಕ: 30/06/2022 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ನಾನು, ನನ್ನ ಮಕ್ಕಳಾದ ಭೀಮರಾಯ, ನಾಗರಾಜ ಹಾಗೂ ನಾಗರಾಜನ ಹೆಂಡತಿ ದೇವಮ್ಮ ಎಲ್ಲರು ಮನೆಯಲ್ಲಿದ್ದಾಗ, ಕಿರಿಯ ಮಗನಾದ ಶಾಂತಪ್ಪ ಈತನು ಮನೆಗೆ ಬಂದು, ಲೇ ಚನ್ನಬಸಿ ನನಗೆ ಖಚರ್ಿಗೆ 500 ರೂ ಹಣ ಕೊಡು ಅಂತ ಕೇಳಿದನು ಆಗ ನಾನು ಹಣ ಎಲ್ಲಿಂದ ತರಲಿ ನನ್ನ ಹತ್ತಿರ ಹಣ ಇರುವದಿಲ್ಲ ಅಂತ ಅಂದಾಗ ಶಾಂತಪ್ಪ ಈತನು ಅಲ್ಲೇ ಮನೆಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲ್ಭಾಗದಲ್ಲಿ ಹೊಡೆದು ರಕ್ತಗಾಯ ಮಾಡಿದನು. ಆಗ ಅಲ್ಲಿಯೇ ಇದ್ದ ನನ್ನ ಮಕ್ಕಳಾದ ಭೀಮರಾಯ, ನಾಗರಾಜ, ಸೊಸೆ ದೇವಮ್ಮ ಮೂವರು ಕೂಡಿ ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ನನಗೆ ಹೊಡೆಯುವದನ್ನು ಬಿಟ್ಟು ಇವತ್ತು ನನ್ನ ಕೈಯಲ್ಲಿ ಉಳಿದುಕೊಂಡಿ ಸೂಳಿ, ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದನು. ನಂತರ ನನಗೆ ಉಪಚಾರ ಕುರಿತು ನಾಗರಾಜ ಈತನು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಸುರಪೂರ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿದನು. ಮನೆಯಲ್ಲಿ ನನ್ನ ಮಕ್ಕಳಾದ ನಾಗರಾಜ, ಭೀಮರಾಯ ಇವರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರಣ ನನಗೆ ಅವಾಚ್ಯವಾಗಿ ಬೈದು ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿ, ಜೀವದ ಬೇದರಿಕೆ ಹಾಕಿದ ಶಾಂತಪ್ಪ ತಂದೆ ಮಲ್ಲಪ್ಪ ಹುಲಕಲ್ ಈತನ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿ ಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 22-07-2022 12:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080