ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-08-2022

 

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 127/2022 ಕಲಂ: 279, 304 (ಎ) ಐಪಿಸಿ: ಇಂದು ದಿ: 16/08/2022 ರಂದು 10:45ಎ.ಎಮ್ ಕ್ಕೆ ಪಾರ್ವತಿ ಗಂಡ ಮಲ್ಲಪ್ಪ ಕರಡಿ ವ|| 26 ವರ್ಷ ಜಾ|| ಮಾದಿಗ ಉ|| ಹೊಲಮನೆ ಕೆಲಸ ಸಾ|| ಸತ್ಯಂಪೇಠ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ಹೊಲಮನೆ ಮತ್ತು ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತೇನೆ. ನನ್ನ ಗಂಡನಾದ ಮಲ್ಲಪ್ಪ ತಂದೆ ನಿಂಗಪ್ಪ ಕರಡಿ ಈತನು ಗೌಂಡಿ ಕೆಲಸ ಮಾಡಿಕೊಂಡಿರುತ್ತಾನೆ. ನಮ್ಮ ಮನೆಗಳು ಸತ್ಯಂಪೇಠ ಕೆರೆ ಹತ್ತಿರ ಇರುತ್ತವೆ. ನನ್ನ ಗಂಡ ಹಾಗೂ ನಮ್ಮೂರಿನ ಇತರರು ಗೌಂಡಿ ಕೆಲಸಕ್ಕೆಂದು ಸುರಪೂರ ಪಟ್ಟಣ ಹತ್ತಿರ ಇದ್ದುದ್ದರಿಂದ ಕಾಲ್ನಡಿಗೆಯಲ್ಲೇ ಹೋಗಿ ಬರುವುದು ಮಾಡುತ್ತಾರೆ. ನನ್ನ ಗಂಡನು ಕೆಲಸಕ್ಕೆ ಬೆಳಗ್ಗೆ ಸುರಪೂರಕ್ಕೆ ನಡೆದುಕೊಂಡು ಹೋಗಿ ಕೆಲಸ ಮುಗಿಸಿಕೊಂಡು ಸಾಯಂಕಾಲ 7 ಗಂಟೆ ಸುಮಾರಿಗೆ ಬರುತ್ತಿದ್ದನು. ಹೀಗಿದ್ದು ಇಂದು ದಿನಾಂಕ: 16/08/2022 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ನನ್ನ ಗಂಡ ಮಲ್ಲಪ್ಪ ಈತನು ಪ್ರತಿ ನಿತ್ಯದಂತೆ ಗೌಂಡಿ ಕೆಲಸಕ್ಕೆಂದು ಸುರಪೂರಕ್ಕೆ ಹೋಗುವ ಕುರಿತು ಮನೆಯಿಂದ ಹೊರಟಾಗ ನಾನು ನನ್ನ ಗಂಡ ಮಲ್ಲಪ್ಪನಿಗೆ ನಾಷ್ಟ ಮಾಡುವಂತೆ ಹೇಳಿದಾಗ ಆತನು ನನಗೆ ತಡವಾಗಿದೆ. ನಾನು ಅಲ್ಲೆ ದಾರಿ ಮದ್ಯದಲ್ಲಿ ಗಂಜ್ ಹತ್ತಿರ ನಾಷ್ಟ್ ಮಾಡುತ್ತೇನೆ ಅಂತಾ ಹೇಳಿ ನಮ್ಮೂರಿನ ಹಣಮಂತ ತಂದೆ ಹಣಮಂತ ಕೋಟಿ, ಶರಣಪ್ಪ ತಂದೆ ಚಂದಪ್ಪ ಹೊಸಮನಿ, ಕೃಷ್ಣಾ ತಂದೆ ಬಸಪ್ಪ ರುಕ್ಮಾಪೂರ ರವರೆಲ್ಲರೂ ಕೂಡಿಕೊಂಡು ಗೌಂಡಿ ಕೆಲಸಕ್ಕೆಂದು ಹೋದರು. ನಂತರ ನಾನು, ನಮ್ಮ ಅತ್ತೆ ಅಯ್ಯಮ್ಮ, ನನ್ನ ಮೈದುನರಾದ ಮೌನೇಶ್, ಬಸಲಿಂಗ ಎಲ್ಲರೂ ಮನೆಯಲ್ಲಿದ್ದಾಗ ನಮ್ಮೂರಿನ ಶರಣಪ್ಪ ತಂದೆ ಚಂದಪ್ಪ ಹೊಸಮನಿ ಈತನು ಪೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ದಿನಾಂಕ: 16/08/2022 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ನಮ್ಮೂರಿನಿಂದ ಗೌಂಡಿ ಕೆಲಸಕ್ಕೆಂದು ನಾನು, ನಿನ್ನ ಗಂಡ ಮಲ್ಲಪ್ಪ ಹಾಗೂ ಕೃಷ್ಣಾ, ಹಣಮಂತ ಎಲ್ಲರೂ ಕೂಡಿಕೊಂಡು ನಡೆದುಕೊಂಡು ಸುರಪೂರಕ್ಕೆ ಹೋಗುವಾಗ ಗಂಜ್ ಹತ್ತಿರ ಇರುವ ಹೊಟೇಲದಲ್ಲಿ ಎಲ್ಲರೂ ನಾಷ್ಟ ಮಾಡಿ 9 ಎ.ಎಮ್ ಸುಮಾರಿಗೆ ಸುರಪೂರ ಕಡೆಗೆ ಎ.ಪಿ.ಎಮ್.ಸಿ. ಗೇಟ್ ಮುಂದುಗಡೆ ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೊರಟಾಗ ಸುರಪೂರ ಕಡೆಯಿಂದ ಹತ್ತಿಗೂಡೂರು ಕಡೆಗೆ ಒಂದು ಲಾರಿ ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದವನೇ, ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರೋಡಿನ ಸೈಡಿನಲ್ಲಿ ಹೊರಟಿದ್ದ ನಿನ್ನ ಗಂಡ ಮಲ್ಲಪ್ಪನಿಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ತೆಲೆಗೆ ಬಾರೀ ರಕ್ತಗಾಯ, ಟೊಂಕಕ್ಕೆ, ಬಾಲಗಾಲ ಪಾದದ ಹತ್ತಿರ, ಬಲಗಾಲ ಮೊಳಕಾಲ ಕೆಳಗೆ ರಕ್ತಗಾಯಗಳಾಗಿದ್ದು, ಲಾರಿ ನಂ. ಕೆಎ-01.ಎಕೆ-3863 ಇದ್ದು, ಅದರ ಚಾಲಕನ ಹೆಸರು ವಿಚಾರಿಸಲು ನಂದನಗೌಡ ತಂದೆ ನಿಂಗಣ್ಣ ಹಾಲಬಾವಿ ಸಾ|| ದೇವಾಪೂರ ತಾ|| ಸುರಪುರ ಅಂತಾ ತಿಳಿಸಿದನು.ನಂತರ ಗಾಯಹೊಂದಿದ ನಿನ್ನ ಗಂಡನಿಗೆ ಒಂದು ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪೂರಕ್ಕೆ ಹೋಗಿ ಸೇರಿಕೆ ಮಾಡಬೇಕೆಂದು ಹೋಗುತ್ತಿರುವಾಗ ದಾರಿ ಮದ್ಯದಲ್ಲಿ 9-30 ಎ.ಎಮ್. ಸುಮಾರಿಗೆ ಮೃತಪಟ್ಟಿರುತ್ತಾನೆ. ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರಿಂದ ನಾನು ಮತ್ತು ನಮ್ಮ ಮನೆಯವರು ಕೂಡಿಕೊಂಡು ಆಸ್ಪತ್ರೆಗೆ 10 ಎ.ಎಮ್. ಸುಮಾರಿಗೆ ಬಂದು ನೋಡಲಾಗಿ ನನ್ನ ಗಂಡನಿಗೆ ಅಪಘಾತದಲ್ಲಿ ಈ ಮೇಲಿನಂತೆ ಗಾಯಗಳಾಗಿ ಮೃತಪಟ್ಟಿದ್ದನು. ಕಾರಣ ಲಾರಿ ನಂ. ಕೆಎ-01. ಎಕೆ-3863 ನೇದ್ದರ ಚಾಲಕ ನಂದನಗೌಡ ದೇವಾಪೂರ ಈತನು ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗಿ ರೋಡಿನ ಸೈಡಿನಲ್ಲಿ ಹೊರಟ ನನ್ನ ಗಂಡನಿಗೆ 9 ಎ.ಎಮ್. ಸುಮಾರಿಗೆ ಎ.ಪಿ.ಎಮ್.ಸಿ. ಗೇಟ್ ಹತ್ತಿರ ಅಪಘಾತಪಡಿಸಿದ್ದರಿಂದ ನನ್ನ ಗಂಡನಿಗೆ ಬಾರೀ ಮತ್ತು ಸಣ್ಣಪುಟ್ಟ ರಕ್ತಗಾಯಗಳಾಗಿ ಮೃತಪಟ್ಟಿದ್ದು ಇರುತ್ತದೆ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 127/2022 ಕಲಂ: 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 124/2022, ಕಲಂ, 143,147,148, 323, 324, 504.506. ಸಂ. 149, ಐ ಪಿ ಸಿ : ಇಂದು ದಿನಾಂಕ: 16-08-2022 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 16-08-2022 ರಂದು ಬೆಳಿಗ್ಗೆ 10-30 ಗಂಟೆಗೆ ಪಿಯರ್ಾಧಿದಾರಳು ಆರೋಪಿತರಿಗೆ ನಮ್ಮ ಮನೆಗೆ ಹಚ್ಚಿ ಟಿನ್ ಹಾಕಬೇಡರಿ ಅಂತಾ ಹೇಳಿದ್ದಕ್ಕೆ ಆರೋಪಿರೆಲ್ಲರು ಸೇರಿಕೊಂಡು ಬಂದು ಲೆ ಸುಳೆ ಮಗಳೆ ನಾವು ನಿನ್ನ ಮನಗೆ ಹಚ್ಚಿ ಟೀನ್ ಹಾಕುತ್ತೇವೆ ನೋಡು ಎನ ಮಾಡುತಿ ಮಾಡು ಸುಳೆ ಮಗಳೆ ಅಂತಾ ಬೈದು ಕೈಯಿಂದ ಮತ್ತು ಕಟ್ಟಿಗೆಯಿಮದ ಹೊಡೆ ಬಡೆ ಮಾಡಿ ಕೂದಲು ಹಿಡಿದು ಎಳದಾಡಿ ಇನ್ನೊಂದು ಸಲ ಈ ಮನೆಯ ಜಾಗದ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 131/2022 ಕಲಂ: 341, 504, 506 ಐಪಿಸಿ:ಫೀರ್ಯಾದಿದಾರಳ ಮತ್ತು ಆಕೆಯ ಗಂಡನ ಪರಿಚಯಸ್ಥನಾದ ಆರೋಪಿತನು ಕರೋನಾದ 2ನೇ ಲಾಕ್ ಡೌನ್ ಸಮಯದಲ್ಲಿ ಫಿರ್ಯಾದಿಯು ಪುಟಪಾಕ ಗ್ರಾಮಕ್ಕೆ ಬಂದಾಗ ಫಿರ್ಯಾದಿಯಿಂದ ದಿನಾಂಕ 10.01.2021 ರಂದು ತನಗೆ ಹಣದ ಅವಶ್ಯಕತೆ ಇದೆ ಅಂತಾ ಹೇಳಿ 11 ಲಕ್ಷ ರೂಪಾಯಿಗಳನ್ನು ಕೈ ಗಡವಾಗಿ ಪಡೆದುಕೊಂಡು ನಂತರ ಆ ಹಣವನ್ನು ಕೇಳಿದಾಗಲೇಲ್ಲಾ ಮುಂದೆ ಕೊಡುವುದಾಗಿ ಹೆಳುತ್ತಾ ಬಂದಿದ್ದು ಆ ವಿಚಾರವನ್ನು ಫಿರ್ಯಾದಿದಾರಳು ತನ್ನ ಗಂಡನಿಗೆ ತಿಳಿಸಿದಾಗ ಆತ ಆರೋಪಿತನಿಂದ ಹಣ ಪಡೆದುಕೊಂಡೇ ಬರುವಂತೆ ಹೇಳಿ ಗದ್ದರಿಸಿದ್ದರಿಂದ ಫಿರ್ಯಾದಿದಾರಳು ಪುನಃ ದಿನಾಂಕ 14.08.2022 ರಂದು ಮಧ್ಯಾಹ್ನ 12;00 ಗಂಟೆಯ ಸುಮಾರಿಗೆ ಪುಟಪಾಕ ಗ್ರಾಮದ ಮನೆಯಲ್ಲಿದ್ದಾಗ ಆಕೆಯ ಮನೆಗೆ ಬಂದ ಆರೋಪಿತನಿಗೆ ತನಗೆ ಕೊಡಬೇಕಾದ ಹಣವನ್ನು ಕೊಡುವಂತೆ ಕೇಳಿದ್ದಕ್ಕೆ ಆರೋಪಿತನು ಜೋರು ದ್ವನಿಯಲ್ಲಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಿದಕ್ಕೆ ಆಕೆ ತನ್ನ ಮನೆಯಿಂದ ತಮ್ಮೂರಿನ ಬಸ್ ನಿಲ್ದಾಣದ ಕಡೆಗೆ ಹೋಗಲು ಮುಂದೆ ನಡೆದಾಗ ಆರೋಪಿತನು ಪುನಃ ಆಕೆಗೆ ಅಕ್ರವಾಗಿ ತಡೆದು ನಿಲ್ಲಿಸಿ ಈ ವಿಚಾರವನ್ನು ಯಾರಿಗಾಗದರೂ ಹೇಳಿದರೆ ಜೀವಂತೆ ಬಿಡೋದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದಕ್ಕೆ ಫಿರ್ಯಾದಿಯು ಪುನಃ ತನ್ನ ಮನೆಯಲ್ಲಿಗೆ ಇದ್ದು ನಂತರ ವಿಚಾರ ಮಾಡಿ ಇಂದು ದಿನಾಂಕ 16.08.2022 ರಂದು ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 131/2022 ಕಲಂ: 341, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 142/2022 ಕಲಂ 420 ಐ.ಪಿ.ಸಿ ಮತ್ತು ಕಲಂ 78 (3) ಕೆ.ಪಿ ಆಕ್ಟ್ .: ಇಂದು ದಿನಾಂಕ 16/08/2022 ರಂದು, ಸಾಯಂಕಾಲ 19-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ರಾಹುಲ್ ಪವಾಡೆ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿದರ ಸಾರಾಂಶವೆನೆಂದರೆ, ಇಂದು ದಿನಾಂಕ 16/08/2022 ರಂದು, ಸಾಯಂಕಾಲ 16-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರದ ಪೊಲೀಸ್ ಠಾಣಾ ವ್ಯಾಪಿ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಸರಕಾರಿ ಜೀಪ್ ನಂ ಕೆಎ-33-ಜಿ-0316 ರಲ್ಲಿ ಸಿಬ್ಬಂದಿಯವರಾದ ಶ್ರೀ ವಿಠೋಬಾ ಎ.ಎಸ್.ಐ ಸಂಜೀವಕುಮಾರ ಹೆಚ್.ಸಿ 173, ರಾಮಚಂದ್ರ ಪಿ.ಸಿ 266, ಬಸವರಾಜ ಪಿ.ಸಿ 346, ಭೀಮನಗೌಡ ಪಿ.ಸಿ 402, ಸಿದ್ರಾಮಯ್ಯ ಪಿ.ಸಿ 258 ಹಾಗೂ ಜೀಪ್ ಚಾಲಕ ರುದ್ರಗೌಡ ಎ.ಪಿ.ಸಿ 34 ಮತ್ತು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ ಹಣಮಂತ ತಂದೆ ಅಬ್ದುಲ್ ಸಾ ಈಳಗೇರ, ವಯಸ್ಸು 32 ವರ್ಷ, ಜಾತಿ ಈಳಗೇರ, ಉಃ ಮಟಕಾ ನಂಬರ ಬರೆದುಕೊಳ್ಳುವುದು ಸಾಃ ಇಬ್ರಾಹಿಂಪೂರ ಈತನಿಗೆ ಹಿಡಿದು ಅವನ ಹತ್ತಿರವಿದ್ದ ನಗದು ಹಣ 1580-00 ರೂಪಾಯಿ. 2) ಒಂದು ಬಾಲ್ ಪೆನ್. ಅಂ.ಕಿ 00-00 3) ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಅಂ.ಕಿ 00-00. ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡಿದ್ದು ಸದರಿ ಹಣವು ಬುಕ್ಕಿ ಸಾಬಯ್ಯ ತಂದೆ ಮಂಚಪ್ಪ ದನಕಾಯರ ಸಾಃ ಇಬ್ರಾಹಿಂಪೂರ ಈತನಿಗೆ ಜಮಾ ಮಾಡಿ ಕೊಡುತ್ತೇನೆ ಆತನು 100 ರೂಪಾಯಿಗೆ 15 ರೂಪಾಯಿ ಕಮೀಷನ್ ಕೊಡುತ್ತಾನೆ ಅಂತಾ ತಿಳಿಸಿದ್ದು ಸದರಿ ಆರೋಪಿತರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿರ್ಯಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 142/2022 ಕಲಂ 420 ಐ.ಪಿ.ಸಿ ಮತ್ತು ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 17-08-2022 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080