ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-09-2022
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 159/2022 ಕಲಂ 379 ಐಪಿಸಿ: ಇಂದು ದಿನಾಂಕ:16/09/2022 ರಂದು ರಾತ್ರಿ 08-05 ಪಿ,ಎಂ ಕ್ಕೆ ಪಿಯರ್ಾದಿ ಶ್ರೀ ಸಂತೋಷ ತಂದೆ ಶರಣಪ್ಪ ಇಮ್ಮನ ವಯಸ್ಸು: 45 ಉ: ಉಪನ್ಯಾಸಕರು ಜಾ: ಪ. ಜಾತಿ ಸಾ: ಲಕ್ಷ್ಮಿ ನಗರ ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ ನಾನು ಸಂತೋಷ ತಂದೆ ಶರಣಪ್ಪ ಇಮ್ಮನ ವಯಸ್ಸು: 45 ಉ: ಉಪನ್ಯಾಸಕರು ಜಾ: ಪ. ಜಾತಿ ಸಾ: ಲಕ್ಷ್ಮಿ ನಗರ ಶಹಾಪೂರ ಇದ್ದು, ತಮ್ಮಲ್ಲಿ ದೂರು ನೀಡುವುದೇನೆಂದರೆ, ನಾನು ಸರಕಾರಿ ಪದವಿ ಪೂರ್ವ ಕಾಲೇಜು ಚಾಮನಾಳದಲ್ಲಿ ಉಪನ್ಯಾಸಕ ಅಂತ ಕರ್ತವ್ಯ ನಿರ್ವಹಿಸುತ್ತ ಲಕ್ಷ್ಮೀನಗರದ ಶಹಾಪೂರದಲ್ಲಿ ವಾಸವಾಗಿರುತ್ತೆನೆ. ನನ್ನದೊಂದು ಸ್ಪ್ಲೆಂಡರ ಮೋಟರ ಸೈಕಲ ನಂೆಎ-33 ಇ-8760 ಚೆಸ್ಸಿ ನಂ:03920ಸಿ42000 ಇಂಜಿನ ನಂ:039180ಎನ್41926 ಅಂತ ಇರುತ್ತದೆ. ಸದರಿ ನನ್ನ ಮೋಟಾರ ಸೈಕಲ ನಾನೆ ಓಡಿಸಿಕೊಂಡಿರುತ್ತೆನೆ. ಹೀಗಿರುವಾಗ ದಿನಾಂಕ 27/08/2022 ರಂದು, ಸಾಯಂಕಾಲ 06.40 ಪಿ.ಎಂ ಕ್ಕೆ ನಾನು ಲಕ್ಷ್ಮಿ ನಗರದ ನಮ್ಮ ಮನೆಯಲ್ಲಿದ್ದಾಗ ನಮ್ಮ ಸಂಬಂದಿಕನಾದ ತೋಟಪ್ಪ ತಂದೆ ಸೈಬಣ್ಣ ಜುನ್ನಾ ವಯ: 35 ವರ್ಷ ಉ: ಒಕ್ಕಲತನ ಜಾ: ಪ.ಜಾತಿ ಸಾ: ಮದ್ದರಕಿ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ. ನನ್ನ ಮಗಳಿಗೆ ಮೈ ಹುಷಾರಿಲ್ಲ ನಾನು ಮದ್ದರಕಿಯಿಂದ ಮಗಳಾದ ಶಿಥಲ ವಯ: 03 ವರ್ಷ ಇವಳಿಗೆ ಕರೆದುಕೊಂಡು ಶಹಾಪೂರಕ್ಕೆ ಬಂದಿದ್ದೆನೆ. ಮೈಸೂರ ಮೆಡಿಕಲ್ ಹತ್ತಿರ ನಾನು ನಿಂತಿದ್ದೆನೆ. ನೀನು ಬಾ ಅಂತ ಹೇಳಿದಾಗ ತಕ್ಷಣ ನಾನು ನನ್ನ ಸ್ಪ್ಲೆಂಡರ ಮೋಟಾರ ಸೈಕಲ ನಂ: ಕೆಎ-33 ಇ-8760 ನೇದ್ದರ ಮೇಲೆ ಲಕ್ಷ್ಮಿ ನಗರದ ನಮ್ಮ ಮನೆಯಿಂದ ಶಹಾಪೂರದ ಮುಖ್ಯ ರಸ್ತೆಯಲ್ಲಿರುವ ಮೈಸೂರ ಮೆಡಿಕಲ್ ಮುಂದೆ 06-50 ಪಿ.ಎಂ ಕ್ಕೆ ಬಂದು ನನ್ನ ಮೋಟಾರ ಸೈಕಲ ಮೆಡಿಕಲ್ ಮುಂದೆ ನಿಲ್ಲಿಸಿ ನಮ್ಮ ಸಂಬಂದಿಕನಾದ ತೋಟಪ್ಪನೊಂದಿಗೆ ಮೈಸೂರ ಮೆಡಿಕಲ್ ಕ್ಕೆ ಹೋಗಿ ಅಲ್ಲಿ ಶೀಥಲಳಿಗೆ ಔಷದಿಗಳನ್ನು ಖರಿದಿಸಿಕೊಂಡು 07-10 ಪಿ.ಎಂ ಕ್ಕೆ ಮೆಡಿಕಲ್ ದಿಂದ ಕೆಳಗಿಳಿದು ರೋಡಿಗೆ ಮೋಟಾರ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ. ನನ್ನ ಮೋಟಾರ ಸೈಕಲ್ ಇರಲಿಲ್ಲ. ನಾನು ಓಮ್ಮೇಲೆ ಗಾಬರಿಯಾಗಿ ಮೆಡಿಕಲ್ ಮುಂದುಗಡೆ ಹಾಗೂ ಸುತ್ತ ಮುತ್ತ ನಾನು ಮತ್ತು ನಮ್ಮ ಸಂಬಂದಿ ತೋಟಪ್ಪ್ಪ ಇಬ್ಬರೂ ಕೂಡಿ ಹುಡುಕಾಡಲಾಗಿ ನನ್ನ ಮೋಟಾರ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ನಾನು ಮೈಸೂರ ಮೆಡಿಕಲ್ ಮುಂದೆ ನಿಲ್ಲಿಸಿ ಮೆಡಿಕಲ್ ಕ್ಕೆ ಹೋಗಿ ಬರುವಷ್ಟರಲ್ಲಿ ನನ್ನ ಮೋಟಾರ ಸೈಕಲ ನಂ ೆಎ-33 ಇ- 8760 ನೇದ್ದನ್ನು 06-50 ಪಿ.ಎಂ ದಿಂದ 07-10 ಪಿ.ಎಂ ಅವದಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದರು. ಸದರಿ ಮೋಟಾರ ಸೈಕಲ ಅಂದಾಜು ಕಿಮ್ಮತ 15,000-00 ರೂಪಾಯಿ ಆಗಬಹುದು. ದಿನಾಂಕ 27/08/2022 ರಂದು ಸಾಯಂಕಾಲ 06-50 ಪಿಎಂ ದಿಂದ 07-10 ಪಿಎಂ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಶಹಾಪೂರ ನಗರದ ಮುಖ್ಯ ರಸ್ತೆಯಲ್ಲಿರುವ ಮೈಸೂರ ಮೆಡಿಕಲ್ ಮುಂದೆ ನಿಲ್ಲಿಸಿದ ನನ್ನ ಸ್ಪ್ಲೆಂಡರ ಮೋಟಾರ ಸೈಕಲ್ ನಂೆಎ-33 ಇ-8760 ಚೆಸ್ಸಿ ನಂ:03920ಸಿ42000 ಇಂಜಿನ ನಂ:039180ಎನ್41926 ಅ,ಕಿ: 15,000-00 ನೇದ್ದು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನಾನು ನಗರದ ಸುತ್ತಮೂತ್ತ ಹುಡುಕಾಡಿ ಮನೆಯಲ್ಲಿ ಹಿರಿಯರೊಂದಿಗೆ ವಿಚಾರಿಸಿ ಇಂದು ಠಾಣೆಗೆ ತಡವಾಗಿ ಬಂದು ದೂರು ಸಲ್ಲಿಸಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಂಡು, ಕಳ್ಳತನವಾದ ನನ್ನ ಮೋಟರ್ ಸೈಕಲ್ ಮತ್ತು ಕಳ್ಳತನಮಾಡಿದ ಕಳ್ಳರನ್ನು ಪತ್ತೆ ಮಾಡಲು ವಿನಂತಿ ಅಂತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 159/2022 ಕಲಂ: 379 ಐಪಿಸಿ ರಿಚಿತಚಿ ಪ್ರಕರಣ ದಾಖಲಿಸಿಕೊಂಡು ತನಿಖೇ ಕೈ ಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 158/2022 ಕಲಂ: 78 (3) ಕೆಪಿ ಆಕ್ಟ್: ಇಂದು ದಿನಾಂಕ: 16/09/2022 ರಂದು 3.00 ಗಂಟೆ ಸುಮಾರಿಗೆ ದೊರನಳ್ಳಿ ಗ್ರಾಮದ ತಾಯಮ್ಮ ಗುಡಿ ಹತ್ತಿರ ಇಬ್ಬರೂ ಸಾರ್ವಜನಿಕರಿಗೆ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿ ಸಿದ್ದಾರೂಡ ಎ.ಎಸ್.ಐ ಮತ್ತು ಸಿಬ್ಬಂದಿಯವರಾದ ಶ್ರೀ ಶಂಕರಲಿಂಗ ಹೆಚ್.ಸಿ131, ಸಿದ್ದಪ್ಪ ಪಿಸಿ-89, ಧರ್ಮರಾಜ ಪಿ.ಸಿ-45 ಹಾಗೂ ಭೀಮನಗೌಡ ಪಿಸಿ-402, ರವರ ಸಂಗಡ ಕರೆದುಕೊಂಡು, ಹಾಗೂ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ಸಿದ್ದಪ್ಪ ಪಿ.ಸಿ-89 ರವರಿಗೆ ತಿಳಿಸಿದ್ದು, ಇಬ್ಬರೂ ಪಂಚರನ್ನು ಬರಮಾಡಿಕೊಂಡು, ಮಾಹಿತಿ ಬಂದ ಸ್ಥಳಕ್ಕೆ ಬೇಟಿ ನೀಡಿ ಇಬ್ಬರೂ ಆರೋಪಿತರನ್ನು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅವರಿಂದ 5200=00 ನಗದು ಹಣ ಹಾಗೂ 2 ಬಾಲ್ ಪೆನ್ ಹಾಗೂ 2 ಮಟಕ ನಂಬರ ಬರೆದು ಚೀಟಿಗಳು ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಲ್ಲಿ ವರದಿ ಸಲ್ಲಿಸಿದ್ದು ಸದರಿ ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 158/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 142/2022 ಕಲಂ: 323, 324, 447, 504, 506 ಸಂಗಡ 34 ಐಪಿಸಿ (ನ್ಯಾಯಾಲಯದ ಉಲ್ಲೇಖಿತ ಗುನ್ನೆ): ಇಂದು ದಿನಾಂಕ 16/09/2022 ರಂದು 5.30 ಪಿಎಂ ಕ್ಕೆ ಠಾಣೆಯ ಕೋರ್ಟ ಕರ್ತವ್ಯದ ಸಿಬ್ಬಂದಿಯಾದ ಅಮರೇಶ ಪಿಸಿ 176 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಫಿಯರ್ಾದಿ ಸಂಖ್ಯೆ 01/2022 ನೇದ್ದು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಖಾಸಗಿ ಫಿಯರ್ಾದಿಯ ಸಾರಾಂಶವೇನೆಂದರೆ, ಫಿಯರ್ಾದಿದಾರರಾದ ರಮೇಶ ತಂದೆ ಹುಲಗಪ್ಪ ವ|| 30ವರ್ಷ ಉ|| ಅಟೋ ಚಾಲಕ ಸಾ|| ಹೆಗ್ಗಣದೊಡ್ಡಿ ತಾ|| ಸುರಪೂರ ಇವರ ದೂರು ಏನೆಂದರೆ, ರಮೇಶನ ಮದುವೆಯು ಆರೋಪಿತಳಾದ ಲಕ್ಷ್ಮೀ ಗಂಡ ರಮೇಶ ವ|| 25ವರ್ಷ ಉ|| ಮನೆಗೆಲಸ ಸಾ|| ಹೆಗ್ಗಣದೊಡ್ಡಿ ಇವಳೊಂದಿಗೆ 9 ವರ್ಷಗಳ ಹಿಂದೆ ಮಡಿವಾಳಪ್ಪ ದೇವಸ್ಥಾನ ಯಲಗೋಡ ತಾ|| ಸಿಂದಗಿಯಲ್ಲಿ ಜರುಗಿದ್ದು ಇರುತ್ತದೆ. ಮದುವೆಯಾದ ನಂತರ ಆರೋಪಿ ಲಕ್ಷ್ಮೀ ಇವಳು ತನ್ನ ಗಂಡನ ಮನೆಯಾದ ಹೆಗ್ಗಣದೊಡ್ಡಿ ಗ್ರಾಮಕ್ಕೆ ಬಂದು ಸುಮಾರು 3-4 ವರ್ಷಗಳ ವರೆಗೆ ಚೆನ್ನಾಗಿ ಬಾಳ್ವೆ ಮಾಡಿದ್ದು ಇರುತ್ತದೆ. ನಂತರ ಲಕ್ಷ್ಮೀ ಇವಳು ತನ್ನ ತಂದೆ ತಾಯಿಯ ಮಾತು ಕೇಳಿಕೊಂಡು ವಿನಾಕಾರಣ ಫಿಯರ್ಾದಿದಾರನ ಜೊತೆಗೆ ಜಗಳ ಪ್ರಾರಂಭಿಸಿದಳು. ಹಾಗೂ ಲಕ್ಷ್ಮೀ ಇವಳು ಮನೆಯಲ್ಲಿ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಳ್ಳುವುದು ಅಲ್ಲದೇ ಮನೆಯಲ್ಲಿಯ ಪಂಕಕ್ಕೆ ಸೀರೆ ಬಿಗಿದುಕೊಳ್ಳಲು ಪ್ರಯತ್ನಿಸುತ್ತಿದ್ದುದರಿಂದ ಫಿಯರ್ಾದಿದಾರ ಮತ್ತು ಊರಿನ ಹಿರಿಯರು ಸೇರಿ ಸುಮಾರು ಸಲ ಲಕ್ಷ್ಮೀ ಇವಳಿಗೆ ಬುದ್ದಿವಾದ ಹೇಳಿದರೂ ಸಹಿತ ಲಕ್ಷ್ಮೀ ಇವಳು ಫಿಯರ್ಾದಿದಾರನ ಜೊತೆ ಮಾನಸಿಕವಾಗಿ ಕಿರುಕುಳ ನೀಡಿದ್ದರೂ ಸಹಿತ ಫಿಯರ್ಾದಿದಾರನು ಕಿರುಕುಳವನ್ನು ಸಹಿಸಿಕೊಂಡು ಬರಹತ್ತಿದ್ದು ಅಲ್ಲದೇ ಫಿಯರ್ಾದಿದಾರನ ಜೊತೆ ಜಗಳ ತೆಗೆದು ಒಂದು ವರ್ಷದ ಹಿಂದೆ ಮನೆಬಿಟ್ಟು ತನ್ನ ತವರುಮನೆಗೆ ಹೋಗಿರುತ್ತಾಳೆ. ಹೀಗಿರಲೂ ದಿನಾಂಕ 28/10/2021 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ಫಿಯರ್ಾದಿದಾರನು ಮನೆಯ ಹತ್ತಿರ ಇದ್ದಾಗ ಲಕ್ಷ್ಮೀ ಇವಳ ಜೊತೆ ಆರೋಪಿತರಾದ ಬಸವರಾಜ ತಂದೆ ಮಡಿವಾಳಪ್ಪ ನಾಟೇಕರ ವ|| 50ವರ್ಷ ಉ|| ಒಕ್ಕಲುತನ ಸಾ|| ಯಲಗೋಡ ಮತ್ತು ಲಕ್ಷ್ಮಣ ತಂದೆ ಬಸವರಾಜ ನಾಟೇಕರ ವ|| 20 ಉ|| ಒಕ್ಕಲುತನ ಸಾ|| ಯಲಗೋಡ ತಾ|| ಸಿಂದಗಿ ಇವರು ಫಿಯರ್ಾದಿದಾರನ ಊರಾದ ಹೆಗ್ಗಣದೊಡ್ಡಿ ಗ್ರಾಮಕ್ಕೆ ಕರೆದುಕೊಂಡು ಬಂದು ಬಲವಂತವಾಗಿ ಮನೆಯ ಬೀಗ ಒಡೆದು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡುತ್ತಿದ್ದಾಗ ಫಿಯರ್ಾದಿದಾರನು ಏಕೆ ಬಲವಂತವಾಗಿ ಮನೆಯ ಬೀಗ ಮುರಿಯುತ್ತಿದ್ದೀರಿ ಅಂತ ಕೇಳಿದ್ದಕ್ಕೆ ಆರೋಪಿ ಬಸವರಾಜ ಈತನು ಎಲೇ ಸೂಳೆಮಗನೇ ನಿನ್ನ ಹೆಂಡತಿಯನ್ನು ಬಿಟ್ಟು ಹೋಗಲಿಕ್ಕೆ ಬಂದಿದ್ದೀವಿ ನೀನು ನಿನ್ನ ಹೆಂಡತಿ ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರು ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಆರೋಪಿ ಲಕ್ಷ್ಮಣ ಈತನು ಅಲ್ಲಿಯೇ ಇದ್ದ ಕಟ್ಟಿಗೆಯಿಂದ ಫಿಯರ್ಾದಿದಾರನ ಟೊಂಕಕ್ಕೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ಆರೋಪಿ ಸುಮಂಗಲಾ ಗಂಡ ಬಸವರಾಜ ನಾಟೇಕರ್ ವ|| 45 ಉ|| ಮನೆಗೆಲಸ ಸಾ|| ಯಲಗೋಡ ಇವಳು ಫಿಯರ್ಾದಿದಾರನಿಗೆ ನನ್ನ ಮಗಳನ್ನು ನೀನು ಸರಿಯಾಗಿ ನೋಡಿಕೊಳ್ಳು ಒಂದು ವೇಳೆ ಸರಿಯಾಗಿ ನೋಡಿಕೊಳ್ಳದಿಒದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಕುಟುಂಬದವರು ಕಷ್ಟ ಎದುರಿಸಬೇಕಾಗುತ್ತದೆ ಅಂತಾ ಬೈದು ಕೈಯಿಂದ ಫಿಯರ್ಾದಿದಾರನಿಗೆ ಹೊಡೆದಿದ್ದು ಅಲ್ಲದೇ ನಿನ್ನ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾಳೆ. ಆಗ ಫಿಯರ್ಾದಿದಾರನು ಚೀರಾಡುತ್ತಿದ್ದಾಗ ಸರಸ್ವತಿ ಗಂಡ ಮಲ್ಲಿಕಾಜರ್ುನ ಸಾ|| ಹೆಗ್ಗಣದೊಡ್ಡಿ ಮತ್ತು ಅಂಬ್ರಮ್ಮ ಗಂಡ ಮಲ್ಲಣ್ಣ ಸಾ|| ಹೆಗ್ಗಣದೊಡ್ಡಿ ಇವರು ಬಂದು ಜಗಳ ಬಿಡಿಸಿರುತ್ತಾರೆ. ಅಲ್ಲದೇ ನೀನು ನಮ್ಮ ವಿರುದ್ದ ಏನಾದರೂ ಕೇಸು ವಗೈರೆ ಮಾಡಿದರೆ ನಿನ್ನ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಆರೋಪಿ ಲಕ್ಷ್ಮೀ ಇವಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಆರೋಪಿ ಲಕ್ಷ್ಮೀ ಇವಳು ಯಾವ ವೇಳೆಯಲ್ಲಿ ಫಿಯರ್ಾದಿದಾರನ ಜೊತೆ ಜಗಳ ತೆಗೆದು ಅಹಿತಕರ ಘಟನೆ ಜರುಗಿಸುವ ತವಕದಲ್ಲಿರುತ್ತಾಳೆ. ಆದ್ದರಿಂದ ಫಿಯರ್ಾದಿದಾರನ ಕುಟುಂಬಕ್ಕೆ ತೊಂದರೆ ಆಗುವ ಆತಂಕ ಇದ್ದು ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಖಾಸಗಿ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 142/2022 ಕಲಂ 323, 324, 447, 504, 506 ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 141/2022 ಕಲಂ: 341, 504, 506 ಐಪಿಸಿ (ನ್ಯಾಯಾಲಯದ ಉಲ್ಲೇಖಿತ ಗುನ್ನೆ) : ಇಂದು ದಿನಾಂಕ 16/09/2022 ರಂದು 8.15 ಎಎಂ ಕ್ಕೆ ಠಾಣೆಯ ಕೋರ್ಟ ಕರ್ತವ್ಯದ ಸಿಬ್ಬಂದಿಯಾದ ಅಮರೇಶ ಪಿಸಿ 176 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಫಿಯರ್ಾದಿ ಸಂಖ್ಯೆ 34/2019 ನೇದ್ದು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಖಾಸಗಿ ಫಿಯರ್ಾದಿಯ ಸಾರಾಂಶವೇನೆಂದರೆ, ಫಿಯರ್ಾದಿದಾರರಾದ ವಿವೇಕ ಹೋಳಿ ತಂದೆ ಬಾಬಣ್ಣ ವ|| 31ವರ್ಷ ಉ|| ಮ್ಯಾನೇಜರ ಕೋರಮಂಡಲ್ ಇಂಟರನ್ಯಾಷನಲ್ ಲಿಮಿಟೆಡ್ ಕಂಪನಿ ಸಿಕಂದರಾಬಾದ ಶಾಖೆ ದಂಡಸೋಲಾಪೂರ ತಾ|| ಸುರಪೂರ ಇವರು ತನ್ನ ಕಂಪನಿಯ ವ್ಯಾಪಾರ ಮಾಡಲು ದಂಡಸೋಲಾಪೂರ ಶಾಪ ನಂ 226 ನೇದ್ದನ್ನು 05/08/2014 ರಂದು 10 ವರ್ಷದ ಕರಾರಿನ ಮೇರೆಗೆ ಲೀಜಗೆ ಪಡೆದಿದ್ದು ಅಂಗಡಿಯ ಮಾಲೀಕ ಮತ್ತು ಆರೋಪಿತನಾದ ಗಂಗು ತಂದೆ ದಾವರಪ್ಪ ವ|| 48 ಉ|| ವ್ಯಾಪಾರ ಮ.ನಂ 115/19 ಮಡ್ಡಿ ತಾಂಡಾ ಚಾಮನಾಳ ತಾ|| ಶಹಾಪೂರ ಈತನು ಕರಾರಿನ ಮೇಲೆ ಬರೆದುಕೊಟ್ಟ ಲೀಜನ್ನು ಪಡೆಯುತ್ತಾ ಅಂಗಡಿಯನ್ನು ಫಿಯರ್ಾದಿಗೆ ನೀಡಿದ್ದು ಅದರಂತೆ ಫಿಯರ್ಾದಿದಾರರು ಲೀಜ ಪಡೆದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ವ್ಯಾಪಾರದಲ್ಲಿ ನಷ್ಟ ಉಂಟಾಗಿ ದಿನಾಂಕ 02/01/2018 ರಂದು ಅಂಗಡಿಯನ್ನು ಬಿಡುವುಗಾಗಿ ಆರೋಪಿತನಿಗೆ ಫಿಯರ್ಾದಿದಾರನು ಹೇಳಿದ್ದು ಆದರೆ ಆರೋಪಿತನು ಫಿಯರ್ಾದಿಗೆ ತೊಂದರೆ ಕೊಡುವ ಉದ್ದೇಶದಿಂದ ಜೋರಾವರಿಯಿಂದ ಅಂಗಡಿಗೆ ಬೀಗ ಹಾಕಿ ಫಿಯರ್ಾದಿಗೆ ಇನ್ನಷ್ಟು ನಷ್ಟವಾಗುವಂತೆ ಮಾಡಲು ಕಾರಣವಾಗಿದ್ದು ಇರುತ್ತದೆ ಮತ್ತು ದಿನಾಂಕ 13/08/2018 ರಂದು 11.30 ಎಎಂ ಸುಮಾರಿಗೆ ಫಿಯರ್ಾದಿದಾರರು ಸಾಕ್ಷಿದಾರರಾದ ಸಿದ್ದಲಿಂಗಯ್ಯ ತಂದೆ ಶಿವಯ್ಯ ಮತ್ತು ಅನಿಲಕುಮಾರ ನಾಯಕ ತಂದೆ ವಿಠ್ಠಲರಾವ ಇವರೊಂದಿಗೆ ತಮ್ಮ ಅಂಗಡಿಗೆ ಸಾಮಾನು ತರಲು ಹೋದಾಗ ಆರೋಪಿತನು ಫಿಯರ್ಾದಿಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಆರೋಪಿತನ ಮೇಲೆ ಕ್ರಮ ಜರುಗಿಸಬೇಕು ಅಂತಾ ಇರುವ ಖಾಸಗಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 141/2022 ಕಲಂ 341, 504, 506 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 143/2022 ಕಲಂ 143, 147, 148, 323, 324, 354, 457, 380, 504, 506 ಸಂ 149 ಐಪಿಸಿ (ನ್ಯಾಯಾಲಯದ ಉಲ್ಲೇಖಿತ ಗುನ್ನೆ): ;- ಇಂದು ದಿನಾಂಕ 16/09/2022 ರಂದು 6.45 ಪಿಎಂ ಕ್ಕೆ ಠಾಣೆಯ ಕೋರ್ಟ ಕರ್ತವ್ಯದ ಸಿಬ್ಬಂದಿಯಾದ ಅಮರೇಶ ಪಿಸಿ 176 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಫಿಯರ್ಾದಿ ಸಂಖ್ಯೆ 02/2022 ನೇದ್ದು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಖಾಸಗಿ ಫಿಯರ್ಾದಿಯ ಸಾರಾಂಶವೇನೆಂದರೆ, ಫಿಯರ್ಾದಿದಾರರಾದ ಈರಣ್ಣ ತಂದೆ ಬಲವಂತ್ರಾಯ ಹೊಸಮನಿ ವ|| 48ವರ್ಷ ಉ|| ಒಕ್ಕಲುತನ ಸಾ|| ರಾಂಪೂರ ತಾ|| ಹುಣಸಗಿ ಇವರ ದೂರು ಏನೆಂದರೆ, ಫಿಯರ್ಾದಿದಾರರು ಮತ್ತು ಆರೋಪಿತರು ಸಂಬಂಧಿಕರಾಗಿದ್ದು ಒಬ್ಬರಿಗೊಬ್ಬರು ಮನಸ್ಥಾಪವಾಗಿದ್ದು ಇರುತ್ತದೆ. ಫಿಯರ್ಾದಿದಾರನು ಮುದನೂರ- ಕೂಡಲಗಿ ರಸ್ತೆಯ ತನ್ನ ಮನೆಯಲ್ಲಿ ಅಂಗಡಿ ಇಟ್ಟಿರುತ್ತಾರೆ. ಹೀಗಿದ್ದು ದಿನಾಂಕ 24/12/2021 ರಂದು 4.00 ಪಿಎಂ ಸುಮರಿಗೆ ಫಿಯರ್ಾದಿದಾರನು ತನ್ನ ಅಂಗಡಿ ಬಿಟ್ಟು ಕಟ್ಟಿಗೆ ಕಡಿಯಲೆಂದು ಮನೆಯ ಹತ್ತಿರವಿದ್ದಾಗ ಆರೋಪಿ ಗುರುರಾಜ ತಂದೆ ನಿಂಗಪ್ಪ ಹೊಸಮನಿ ವ|| 10ವರ್ಷ ಸಾ|| ರಾಂಪೂರ ಈತನು ಫಿಯರ್ಾದಿದಾರನ ಅಂಗಡಿಗೆ ಬಂದು ಅಂಗಡಿಯ ಗಲ್ಲೆದಲ್ಲಿನ 2000/- ರೂ ಹಣ ಮತ್ತು 2 ಚಾಕಲೇಟ ಡಬ್ಬಿಗಳನ್ನು ಕಳವು ಮಾಡಿಕೊಂಡು ಹೊರಟಾನ ಫಿಯರ್ಾದಿಯು ಕೂಗಿದ್ದು ಆರೋಪಿ ಗುರುರಾಜನು ಓಡಲು ಪ್ರಾರಂಭಿಸಿದಾಗ ಕೈ ಹಿಡಿದು ನಿಲ್ಲಿಸಲು ಪ್ರಯತ್ನಿಸಿದರೂ ಓಡಿ ಹೋಗಿರುತ್ತಾನೆ. ನಂತರ ತನ್ನ ಮಗ ಕಳವು ಮಾಡಿದ ವಿಷಯ ಆರೋಪಿ ನಿಂಗಪ್ಪ ತಂದೆ ಮಲ್ಲ ಹೊಸಮನಿ ಈತನಿಗೆ ತಿಳಿದ ನಂತರ ವಿಷಯವನ್ನು ಉಳಿದ ಆರೋಪಿತರಿಗೆ ತಿಳಿಸಿದ್ದು ಆಗ ಎಲ್ಲಾ ಆರೋಪಿತರು ಅಂದರೆ 1) ಮಲ್ಲಪ್ಪ ತಂದೆ ಬಲವಂತ್ರಾಯ ಹೊಸಮನಿ, 2) ನಿಂಗಪ್ಪ ತಂದೆ ಮಲ್ಲಪ್ಪ ಹೊಸಮನಿ, 3) ನೀಲಮ್ಮ ಗಂಡ ಮಲ್ಲಪ್ಪ ಹೊಸಮನಿ, 4) ರಮೇಶ ತಂದೆ ಮಲ್ಲಪ್ಪ ಹೊಸಮನಿ, 5) ಬಲವಂತಪ್ಪ ತಂದೆ ಮಲ್ಲಪ್ಪ ಹೊಸಮನಿ, 6) ನಿಂಗಪ್ಪ ತಂದೆ ಸೋಮಣ್ಣ ಬೂದಿಹಾಳ, 7) ಮಲ್ಕಪ್ಪ ತಂದೆ ನಿಂಗಪ್ಪ ಬೂದಿಹಾಳ, 8) ಬಸಪ್ಪ ತಂದೆ ನಿಂಗಪ್ಪ ಬೂದಿಹಾಳ, 9) ಬಲವಂತ್ರಾಯ ತಂದೆ ನಿಂಗಪ್ಪ ಬೂದಿಹಾಳ ಮತ್ತು 10) ಗುರುರಾಜ ತಂದೆ ನಿಂಗಪ್ಪ ಹೊಸಮನಿ ಸಾ|| ಎಲ್ಲರೂ ರಾಂಪೂರ ತಾ|| ಹುಣಸಗಿ ಇವರು ಫಿಯರ್ಾದಿಯೊಂದಿಗೆ ಜಗಳ ಮಾಡಿ ಬಿದಿರು ಬಡಿಗೆಯಿಂದ ಹೊಡೆದಿದ್ದು ಜಗಳ ಬಿಡಿಸಲು ಬಂದ ಫಿಯರ್ಾದಿಯ ಹೆಂಡತಿಯಾದ ನಿಂಗಮ್ಮ ಗಂಡ ಈರಣ್ಣ ಹೊಸಮನಿ ಇವಳಿಗೆ ಆರೋಪಿ ಮಲ್ಲಪ್ಪ, ನೀಲಮ್ಮ ಮತ್ತು ನಿಂಗಪ್ಪ ಇವರು ನಿಂಗಮ್ಮಳ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಅಲ್ಲದೇ ನೆಲಕ್ಕೆ ಕೆಡವಿ ಕೈಕಾಲುಗಳಿಂದ ಹೊಡೆದು ಒಳಪೆಟ್ಟು ಗಾಯ ಮಾಡಿದ್ದು ಆರೋಪಿ ನೀಲಮ್ಮಳು ನಿಂಗಮ್ಮಳ ಕೊರಳಲ್ಲಿಯ 9 ಮಾಸಿಯ ಬೋರಮಳವನ್ನು ಹರಿದುಕೊಂಡು ಹೋಗಿರುತ್ತಾಳೆ. ಉಳಿದ ಆರೋಪಿತರೆಲ್ಲರೂ ಕೈಯಿಂದ, ಬಡಿಗೆಯಿಂದ ಫಿಯರ್ಾದಿಗೆ ಹೊಡೆದು ಗಾಯ ಮಾಡಿದ್ದು ಹೊಡೆಯುವಾಗ ಶಾಂತಮ್ಮ ಗಂಡ ಗುರಣ್ಣಗೌಡ ಹೊಸಮನಿ ಮತ್ತು ಮಲ್ಲಣ್ಣ ತಂದೆ ಭೀಮಣ್ಣ ಬಡಿಗೇರ ಇವರು ಜಗಳ ಬಿಡಿಸಿಕೊಂಡಿದ್ದು ಆಗ ಅವರು ಇದೊಂದು ಸಲ ಬಿಟ್ಟೀವಿ ಇನ್ನೊಮ್ಮೆ ಸಿಕ್ಕರೆ ಬಿಡುವುದಿಲ್ಲ ಅಂತಾ ಜೀವದ ಭಯ ಹಾಕಿದ್ದು ಫಿಯರ್ಾದಿಗೆ ಗಾಯಗಳಾಗಿದ್ದರಿಂದ ಸರಕಾರಿ ಆಸ್ಪತ್ರೆ ಕೆಂಭಾವಿಯಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದು ಇರುತ್ತದೆ. ಆದ್ದರಿಂದ ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಖಾಸಗಿ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 143/2022 ಕಲಂ 143, 147, 148, 323, 324, 354, 457, 380, 504, 506 ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.