ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-10-2021

ಮಹಿಳಾ ಪೊಲೀಸ್ ಠಾಣೆ
ಗುನ್ನೆ ನಂ: 63/2021 ಕಲಂ 9, 10 ಮತ್ತು 11 ಚೈಲ್ಡ್ ಮ್ಯಾರೇಜ್ ರಿಸ್ಟ್ರೇಂಟ್ ಎಕ್ಟ : ಇಂದು ದಿನಾಂಕ 16-10-2021 ರಂದು 11-15 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ರಾಧಾ ಮಣ್ಣೂರ ವಯಾ:39 ಶಿಸು ಅಭೀವೃದ್ದಿ ಯೋಜನಾ ಅಧಿಕಾರಿಗಳು ಶಿಸು ಅಭಿವೃದ್ದಿ ಯೋಜನಾ ಕಚೇರಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಅಜರ್ಿ ಅಲ್ಲಿಸಿದ್ದು ಅದರ ಸಾರಾಂಶವೆನಂದರೆ ಕುಮಾರಿ .......... ತಂದೆ ಕಾಶಪ್ಪಾ ಸಾ: ಆರ್ ಹೊಸಳ್ಳಿ ಇವಳ ಬಾಲ್ಯ ವಿವಾಹವು ಬಳಿಚಕ್ರ ಗ್ರಾಮದ ವರನಾದ ಶ್ರೀ ಸಾಬಣ್ಣಾ ತಂದೆ ನಾಗಪ್ಪಾ ಕೋಟೆ (ಜಾತಿ ಕುರುಬ) ಇವರ ಜೋತೆಯಲ್ಲಿ ಸುಮಾರು ಒಂದೂವರೆ ತಿಂಗಳ ಹಿಂದೆ ಬಾಲ್ಯ ವಿವಾಹ ಮಾಡಿರುತ್ತಾರೆಂದು ದಿನಾಂಕ 19-07-2020 ರಂದು ಸಮಯ ರಾತ್ರಿ 9-32 ಕ್ಕೆ ಮಕ್ಕಳ ಸಹಾಯವಾಣಿ 1098 ಯಾದಗಿರಿಗೆ ಕರೆಯ ಮಾಹಿತಿಯಂತೆ ದಾಖಲಾಗಿರುತ್ತದೆ. ನಂತರ ಕರೆದಾರರಿಗೆ ಕರೆ ಮಾಡಿ ಮಾಹಿತಿಯನ್ನು ಖಚಿತಪಡಿಸಿಕೊಂಡು ನಂತರ ಸದರಿ ದೂರಿನನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಾದಗಿರಿ ಕಚೇರಿಯ ಮಕ್ಕಳ ರಕ್ಷಣಾಧಿಕಾರಿ ಗೊವೀಂದ ರಾಠೋಡ ಮತ್ತು ಮಕ್ಕಳ ಸಹಾಯವಾಣಿಯ ತಂಡದ ಸದಸ್ಯರಾದ ಶರಣಪ್ಪಾ ಕಲಾಲ್ ಹಾಗೂ ಬಳಿಚಕ್ರ ಗ್ರಾಮದ ಅಂಗನವಾಡಿ ಕಾರ್ಯಕತರ್ೆಯಾದ ಶ್ರೀಮತಿ ಸರೋಜ ರವರು ಸೇರಿ ದಿನಾಂಕ 21-07-2020 ರಂದು ವರನ ಸ್ವಗ್ರಾಮವಾದ ಬಳಿಚಕ್ರ ಗ್ರಾಮಕ್ಕೇ ಬೇಟಿ ನೀಡಿ ಪರಿಶೀಲಿಸಿ ಸದರಿ ಬಾಲಕಿಯನ್ನು ರಕ್ಷಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿ ಯಾದಗಿರಿ ರವರಿಗೆ ಪತ್ರ ನೀಡುವುದರ ಮೂಲಕ ಒಪ್ಪಿಸಲಾಗಿದೆ. ದಿನಾಂಕ 04-10-2020 ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿಯ ಯಾದಗಿರಿ ಇವರ ದೀರ್ಘ ವಿಚಾರಣೆಯಿಂದ ಕುಮಾರಿ ಬಸಲಿಂಗಮ್ಮಾ ತಂದೆ ಕಾಶಪ್ಪಾ ಸಾ: ಆರ್ ಹೊಸಳ್ಳಿ ತಾ;ಜಿ: ಯಾದಗಿರಿ ಈ ಬಾಲಕೀಯ ಬಾಲ್ಯ ವಿವಾಹವು ಸಾಬಣ್ಣಾ ತಂದೆ ನಾಗಪ್ಪಾ ಕೋಟೆ ಸಾ: ಬಳಿಚಕ್ರ ಇತನ ಜೋತೆ ದಿನಾಂಕ 13-05-2020 ರಂದು ಬಾಲಕೀಗೆ ಬಾಲ್ಯ ವಿವಾವಾಗಿರುತ್ತದೆ. ಹಾಗೂ ಮಕ್ಕಳ ಕಲ್ಯಾಣ ಸಮೀತಿಯ ಮುಂದೆ ಬಾಲಕಿಯನ್ನು ಹಾಜರುಪಡಿಸಿದ ಸಂಧರ್ಭದಲ್ಲಿ ಬಾಲಕೀಯ ಕೊರಳಲ್ಲಿ ಮಾಂಗಲ್ಯ ಸರ ಮತ್ತು ಕಾಲುಂಗುರು ಇರುವುದು ಕಂಡು ಬಂದಿರುವುದರಿಂದ ಹಾಗೂ ಸ್ವತ ಬಾಲಕಿಯೇ ತನಗೆ ಮದುವೆಯಾಗಿದೆ ಎಂದು ಅಪ್ತ ಸಮಾಲೋಚನೆಯಲ್ಲಿ ಹೇಳಿರುವುದರಿಂದ ಬಾಲಕೀಯ ಪೋಷಕರ ಹಾಗೂ ವರನ ಪೋಷಕರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿ ಅಧ್ಯಕ್ಷ್ಯರಾದ ಶ್ರೀ ಡಾ|| ಹಣಮಂತ್ರಾಯ ಸಿ ಕರಡಿ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿಯ ಸದಸ್ಯರುಗಳಾದ ಮಾಳಪ್ಪಾ ವಂಟೂರು, ಪ್ರೋ. ಹೆಚ್ ಗೀತಾ, ಶ್ರೀ ಬಸವರಾಜ ಪಾಟೀಲ್ ಇವರುಗಳು ವಿಚಾರಣೆ ಮಾಡಿ ಬಾಲಕೀಯ ಬಾಲ್ಯ ವಿವಾಹವಾಗಿದೆ ಎಂದು ಆದೇಶ ಹೊರಡಿಸಿದ್ದಾರೆ. ಸದರಿ ಪ್ರಕರಣವು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಬಾಕಿ ಇರುವುದರಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿಯ ಆದೇಶದಂತೆ ಎಫ್.ಐ.ಆರ್ ದಾಖಲಿಸಲು ಸೂಚಿಸಿರುವುದರಿಂದ ಸದರಿ ಪ್ರಕರಣವು ಬಾಲ್ಯ ವಿವಾಹ ನಿಷೇಧ ಮತ್ತು ನಿಯಂತ್ರಣ ಕಾಯ್ದೆ-2006 ಅಡಿಯಲ್ಲಿ ವರನಾದ 1) ಸಾಬಣ್ಣಾ ತಂದೆ ನಾಗಪ್ಪಾ ಕೋಟೆ ಸಾ: ಬಳಿಚಕ್ರ, ವರನ ತಾಯಿಯಾದ 2) ಭಾಗಮ್ಮಾ ಗಂಡ ನಾಗಪ್ಪಾ ಕೋಟೇ ವರನ ತಂದೆ 3) ನಾಗಪ್ಪಾ ಕೋಟೆ ಸಾ; ಬಳಿಚಕ್ರ, ಹಾಗೂ ಬಾಲಕಿಯ ತಾಯಿಯಾದ 4) ಚನ್ನಬಸಮ್ಮಾ ಕುರುಬರ ಇವರ ಮೇಲೆ ಪ್ರಕರಣ ದಾಖಲಿಸಬೇಕು ಅಂತಾ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 63/2021 ಕಲಂ 9, 10 ಮತ್ತು 11 ಚೈಲ್ಡ್ ಮ್ಯಾರೇಜ್ ರಿಸ್ಟ್ರೇಂಟ್ ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 160/2021 ಕಲಂ 323, 324, 504 ಐಪಿಸಿ. : ನಿನ್ನೆ ದಿನಾಂಕ 15.10.2021 ರಂದು ಸಂಜೆ ಅಂಬಾ ಭವಾನಿ ಮೆರಣಿಗೆಯಲ್ಲಿ ಆರೋಪಿತ ಮತ್ತು ಫೀರ್ಯಾದಿದಾರರರು ಕುಣೀಯುತ್ತಿದ್ದಾಗ ಪರಸ್ಪರರು ಕಾಲು ತುಳಿಸಿದ್ದರಿಂದ ರಾತ್ರಿ 8:00 ಗಂಟೆಯಿಂದ ರಾತ್ರಿ 8:30 ಗಂಟೆಯ ನಡುವೆ ಫೀರ್ಯಾದಿಯು ಹಾಗೂ ಆತನ ಗೆಳೆಯ ನು ಆಕಸ್ಮಿಕವಾಗಿ ಆರೋಪಿತನ ಕಾಲು ತುಳಿದಿದ್ದರಿಂದ ಆರೋಪಿತನು ಫಿರ್ಯಾಧಿಗೆ ಮತ್ತು ಆತನ ಗೆಳೆಯನಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ರಕ್ತಗಾಯ ಮಾಡಿದ ಬಗ್ಗೆ ಫಿರ್ಯಾಧಿಯು ತಮ್ಮ ಓಣೀಯಲ್ಲಿ ವಿಚಾರ ಮಾಡಿದ ನಂತರ ತಡವಾಗಿ ಇಂದು ದಿನಾಂಕ 16.10.2021 ರಂದು ಬೆಳಿಗ್ಗೆ 7:30 ಗಂಟೆಗೆ ಖುದ್ದಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 160/2021 ಕಲಂ: 323, 324, 504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 150/2021 ಕಲಂ: 504, 505(2), 506 ಐ.ಪಿ.ಸಿ : ಇಂದು ದಿನಾಂಕ 16/10/2021 ರಂದು 3.30 ಪಿಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಕಾಳಪ್ಪ ತಂದೆ ಮಾಳಪ್ಪ ಕವಾತಿ ವ|| 51ವರ್ಷ ಜಾ|| ಕುರುಬರ ಉ|| ಒಕ್ಕಲುತನ ಹಾಗೂ ಕನರ್ಾಟಕ ಪ್ರದೇಶ ಕುರುಬ ಸಂಘ ತಾಲೂಕಾ ಅಧ್ಯಕ್ಷರು ಸುರಪೂರ ಸಾ|| ಜಾಲಿಬೆಂಚಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಒಂದು ಅಜರ್ಿಯನ್ನು ತಂದೆ ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ದಿನಾಂಕ 11/10/2021 ರಂದು ಅಗತೀರ್ಥ ಗ್ರಾಮದಲ್ಲಿ ಕುರುಬ ಜನಾಂಗದ ಚಿದಾನಂದ ಪೂಜಾರಿ ಇವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಕ್ಕಾಗಿ ಚಿದಾನಂದ ರವರು ಅಗತೀರ್ಥ ಗ್ರಾಮದ ಸಾಹೇಬಗೌಡ @ ಬಾಬುಗೌಡ ಪಾಟೀಲ್ ಹಾಗೂ ಇತರರ ವಿರುದ್ದ ದಾಖಲಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡುತ್ತಾ ಬಂದು ಕೇಸು ವಾಪಸ್ ಪಡೆಯದೇ ಇದ್ದುದರಿಂದ ದ್ವೇಷ ಸಾಧಿಸುವ ಉದ್ದೇಶದಿಂದ ದಿನಾಂಕ 13/10/2021 ರಂದು ರಾತ್ರಿ 8.45 ಗಂಟೆಗೆ ಅಗತೀರ್ಥ ಗ್ರಾಮದ ಸಾಹೇಬಗೌಡ @ ಬಾಬುಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ ಈತನು ತನ್ನ ಮೊಬೈಲ್ ನಂಬರ 9900104751 ನೇದ್ದರಿಂದ ಅಗತೀರ್ಥ ಗ್ರಾಮದ ಮಲ್ಲನಗೌಡ ಪಾಟೀಲ್ ಇವರ ಮೊಬೈಲ್ ನಂ 9731790940 ನೇದ್ದಕ್ಕೆ ಫೋನ್ ಕರೆ ಮಾಡಿ ಏನಲೇ ಮಗನೇ ನೀನು ಕುರುಬರ ಜೊತೆಗೆ ಸೇರಿಕೊಂಡು ನನ್ನ ಮೇಲೆ ಕೇಸು ಮಾಡಿ ಏನು ಸೆಂಟಾ ಕಿತ್ತುಕೋತೀದಿ, ಕುರುಬರು ಏನು ಸೆಂಟಾ ಕಿತ್ತುಕೋತಾರ, ಕುರುಬ ಸಮಾಜದ ಸ್ವಾಮೀಜಿಗಳು ಏನು ಸೆಂಟಾ ಕಿತ್ತುಕೋತಾರ ನೋಡತೀನಿ. ನಿಮ್ಮೌನ ಇಂತಹ ಕೇಸುಗಳು ನನಗೇನು ಹೊಸದಲ್ಲ, ನನಗೇನು ಮಾಡಲು ಸಾಧ್ಯವಿಲ್ಲ. ನಿನಗೆ, ಕುರುಬ ಸೂಳೆ ಮಕ್ಕಳಿಗೆ, ಕುರುಬ ಸಮಾಜದ ಗುರುಗಳಿಗೆ ನೋಡಕೋತೀನಿ ಅಂತಾ ಅವಹೇಳನವಾಗುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕುರುಬ ಸಮಾಜದ ಜನರಿಗೆ ಮತ್ತು ಕುರುಬ ಸಮಾಜದ ಗುರುಗಳಿಗೆ ದ್ವೇಷ ಉಂಟಾಗುವಂತಹ ಶಬ್ದಗಳಿಂದ ಬೈಯ್ದು ಜೀವದ ಭಯ ಹಾಕಿರುತ್ತಾನೆ. ಅಲ್ಲದೇ ನಮ್ಮ ಕುರುಬ ಸಮಾಜಕ್ಕೆ ಅವಮಾನ ಮಾಡಿರುತ್ತಾನೆ. ಸಾಹೇಬಗೌಡ @ ಬಾಬುಗೌಡನು ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ಕುರುಬ ಸಮಾಜಕ್ಕೆ ಮತ್ತು ಕುರುಬ ಸಮಾಜದ ಗುರುಗಳಿಗೆ ಅಪಮಾನ ಮಾಡಿ ಸಮಾಜದಲ್ಲಿ ಅಶಾಂತಿ ಮೂಡಿಸಿದ್ದು ಕಾರಣ ಕುರುಬ ಸಮಾಜದ ಜನರ ಮೇಲೆ ಹಾಗೂ ಗುರುಗಳ ಮೇಲೆ ದ್ವೇಷ ಸಾಧಿಸುತ್ತಿರುವ ಸಾಹೇಬಗೌಡ @ ಬಾಬುಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ ಸಾ|| ಅಗತೀರ್ಥ ಈತನ ವಿರುದ್ದ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ನಮ್ಮ ಕುರುಬ ಸಮಾಜದ ಸಂಘಟನೆಯ ಪರವಾಗಿ ಸಮಾಜದ ತಾಲೂಕಾ ಅಧ್ಯಕ್ಷನಾದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ 150/2021 ಕಲಂ 504, 505(2), 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 233/2021 ಕಲಂ 323, 341, 504, 506 ಸಂಗಡ 34 .ಐ.ಪಿ.ಸಿ. : ಇಂದು ದಿನಾಂಕ: 16-10-2021 ರಂದು 5:30 ಪಿ.ಎಮ್.ಕ್ಕೆ ಅಜರ್ಿದಾರ ಶ್ರೀ ಸಿದ್ದಪ್ಪ ತಂದೆ ನಿಂಗಪ್ಪ ತೆಲಗೂರ ವಯ: 36 ವರ್ಷ ಜಾ: ಕುರುಬ ಉ: ಒಕ್ಕಲುತನ ಸಾ: ಚಟ್ನಳ್ಳಿ ತಾ: ಶಹಾಪುರ ರವರು ಠಾಣೆಗೆ ಬಂದು ಅಜರ್ಿ ನೀಡಿದ್ದು ಏನಂದರೆ ನಿನ್ನೆ ದಿನಾಂಕ: 15-10-2021 ರಂದು ಮುಂಜಾನೆ ನನ್ನ ಮನೆಯಿಂದ ಊರಹೊರಗಡೆ ನನ್ನ ಟಾಟಾ ಎ.ಎಸ್.ಇ ವಾಹನ ಚಾಲನೆ ಮಾಡಿಕೊಂಡು ರಸ್ತೆಯ ಮೇಲೆ ಹೊರಟಿದ್ದೆನು. 7:30 ಎ.ಎಮ್. ಸುಮಾರಿಗೆ ದಾರಿಯಲ್ಲಿ ನಮ್ಮೂರ ಸಾಬಣ್ಣ ತಂದೆ ಲಚಮಣ್ಣ ತೆಲಗೂರ ಈತನು ಎತ್ತುಗಳನ್ನು ಮೈತೊಳೆಯುತ್ತಿದ್ದನು. ಆಗ ನಾನು ಹಾರನ ಮಾಡಿದೆನು ಆಗ ಸಾಬಣ್ಣನು ಏ ಸೂಳಿ ಮಗನೆ ಇಲ್ಲಿ ಹಾರನ ಮಾಡಬೇಡಾ ಎಂದು ಅವಾಚ್ಯವಾಗಿ ಬೈದನು. ನಾನು ಏಕೆ ಬೈಯುತ್ತಿ ಎಂದು ಹೇಳುತ್ತಾ ಮುಂದೆ ಹೋಗುತ್ತಿದ್ದಾಗ ಸಾಬಣ್ಣ ತಂದೆ ಲಚಮಣ್ಣ ಮತ್ತು ಅವರ ಅಣ್ಣಂದಿರಾದ ನಿಂಗಪ್ಪ ತಂದೆ ಲಚಮಣ್ಣ ತೆಲಗೂರ ಮತ್ತು ಮಾಳಪ್ಪ ತಂದೆ ಲಚಮಣ್ಣ ತೆಲಗೂರ ಮೂರು ಜನರು ಕೂಡಿ ನನ್ನ ವಾಹನಕ್ಕೆ ಅಡ್ಡ ಬಂದು ಅಡ್ಡಗಟ್ಟಿ ನಿಂತು ಏ ಸೂಳಿ ಮಗನೇ ನೀನು ದಿನಾ ಇದೆ ದಾರಿಯಲ್ಲಿ ತಿರುಗಬೇಕು ಹುಶ್ಯಾರಾಗಿರು ಎಂದು ನನಗೆ ಕೈ ಹಿಡಿದು ಎಳೆದು ಕೆಳಗಿಳಿಸಿ ಮಗನೆ ನಿನ್ನ ಮೊದಲ ಹೆಂಡತಿಯಂತೆ ಎರಡನೇ ಹೆಂಡತಿ ಓಡುವಂತೆ ಮಾಡುತ್ತೇವೆ ನಮ್ಮನ್ನು ಎದುರು ಹಾಕಿಕೊಂಡರೆ ಎಂದು ಅವರಲ್ಲಿಯ ಸಿದ್ದಪ್ಪ ತಂದೆ ನಿಂಗಪ್ಪ ಕೈಯಿಂದ ಹೊಡೆದನು. ಮಾಳಪ್ಪನು ಕಾಲಿನಿಂದ ಒದ್ದನು. ಮಾಳಪ್ಪನು ಹೊಡಿರಿ ಈ ಸೂಳಿ ಮಗನಿಗೆ ಎಂದು ಬೈದು ನನಗೆ ಕಪಾಳಕ್ಕೆ ಹೊಡೆದನು ಆಗ ಅಲ್ಲೇ ಇದ್ದ ನಮ್ಮೂರ ಭೈರಪ್ಪ ತಂದೆ ಮಲ್ಲಪ್ಪ ತೆಲಗೂರ ಮತ್ತು ಹಣಮಂತ ತಂದೆ ನಿಂಗಯ್ಯ ಕನರ್ಾಳ ಇಬ್ಬರು ಎಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಆಗ ಸಿದ್ದಪ್ಪನು ಮಗನೆ ಇವತ್ತು ಉಳಿದಿದ್ದೀಯಾ ಮುಂದೆ ನೋಡಿಕೊಳ್ಳುತ್ತೇವೆಂದು ಬೆದರಿಕೆ ಹಾಕಿರುತ್ತಾರೆ. ನಾನು ನನ್ನ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ: 16-10-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ನನಗೆ ಅಡ್ಡಗಟ್ಟಿ ನಿಂತು ಜಗಳತೆಗದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.233/2021 ಕಲಂ. 323, 341, 504, 506 ಸಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 160/2021 ಕಲಂ:341, 323, 504, 506 ಸಂ. 34 ಐಪಿಸಿ : ಇಂದು ದಿನಾಂಕ:16/10/201 ರಂದು 7:00 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಶ್ರೀ ಸೋಪಿಸಾಬ ತಂದೆ ಹುಸೇನಸಾಬ ಖಸಾಯಿ ವ|| 45 ವರ್ಷ ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ದೇವರಗೋನಾಲ ಹಾ||ವ|| ಖುರೇಷಿ ಮೊಹಲ್ಲಾ ಸುರಪುರ ಈತನು ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನಾನು ಸುಮಾರು 10 ವರ್ಷಗಳಿಂದ ಸುರಪುರ ಬಸ್ ನಿಲ್ದಾಣ ಹತ್ತಿರ ಕೆಂಭಾವಿ ರೋಡಿನ ಪುಟ್ ಪಾತ್ ಮೇಲೆ ಚಿಕನ್ ವ್ಯಾಪಾರ ಮಾಡಿಕೊಂಡು ಇರುತ್ತೇನೆ. ಹಿಗಿದ್ದು ದಿನಾಂಕ:15/10/2021 ರಂದು 12:00 ಗಂಟೆ ಸುಮಾರಿಗೆ ನಾನು ಆರಿಪುರ ಮಜೀದಿ ಸುರಪುರದಲ್ಲಿ ಕೊಳಿಗಳಿಗೆ ನೀರು ತರಲು ಹೊದಾಗ ಅಲ್ಲಿ ಸೈಯ್ಯದ ಬಾಬಾ ತಂದೆ ಯುಸುಫ್ ಸೈಯ್ಯದ ಇತನು ಮಜೀದಿಯಲ್ಲಿ ನೀರು ತಗೆದುಕೊಂಡು ಹೊಗಬೇಡ ನನಗೆ ಹೇಳದ ಕೆಳದೆ ನೀರು ತಗೆದುಕೊಂಡು ಹೊಗುವಂತೆ ಇಲ್ಲ. ನಾನು ಹೇಳಿದ ಹಾಗೆ ಎಲ್ಲರು ಕೇಳಬೇಕು ಅಂತಾ ಅಂದಾಗ ನಾನು ಸುಮ್ಮನೆ ಕಾಲಿ ಕೊಡ ತಗೆದುಕೊಂಡು ನನ್ನ ಅಂಗಡಿಯ ಮುಂದೆ ಬರುತ್ತಿದ್ದಾಗ 1) ಸಲಿಂ ತಂದೆ ಜಾಫರ್ ಸೈಯ್ಯದ ಸಾ|| ಬಿಚಗತ್ತಕೇರಿ ಸುರಪುರ, 2) ಸೈಯ್ಯದ ಬಾಬಾ ತಂದೆ ಯುಸುಫ್ ಸೈಯ್ಯದ, 3) ಸೈಯ್ಯದ ಬತ್ತು ತಂದೆ ಯುಸುಫ್ ಸೈಯ್ಯದ, 4) ಸೈಯ್ಯದ ಜೀಪ್ಪು ತಂದೆ ಯುಸುಫ್ ಸೈಯ್ಯದ ಸಾ|| ಎಲ್ಲರು ಆರೀಪುರ ಮಜೀದಿ ಹತ್ತಿರ ಸುರಪುರ ಇವರು ಎಲ್ಲರು ನನಗೆ ತಡೆದು ನಿಲ್ಲಿಸಿ ಏನೇಲೆ ಸೋಪ್ಯಾ ನೀನು ನಮ್ಮ ಪರವಾನಿಗೆ ಇಲ್ಲದೆ ಮಜೀದಿ ಒಳಗೆ ಹೊಗಿ ನೀರು ತರುತ್ತಿ ಸೂಳೇ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಸಲಿಂ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ನೆಲಕ್ಕೆ ಕೆಡವಿದಾಗ ಸೈಯ್ಯದ ಬಾಬಾ, ಸೈಯ್ಯದ ಬತ್ತು, ಸೈಯ್ಯದ ಜೀಪ್ಪು ಇಲ್ಲರು ಕೂಡಿ ಕೈಯಿಂದ ಹೊಟ್ಟೆಗೆ, ಬೆನ್ನಿಗೆ, ಕಾಲಿಗೆ, ಹೊಡೆದರು. ನಾನು ಸತ್ತೇನೆಪ್ಪು ಅಂತಾ ಚೀರಾಡುತ್ತಿದ್ದಾಗ ಅಲ್ಲೆ ಇದ್ದ ನನ್ನ ತಮ್ಮ ಮಹ್ಮದ ಮುಸ್ತಫ್, ನಮ್ಮೂರಿನವರಾದ ಕುಮಾರ ತಂದೆ ತಿಪ್ಪಣ್ಣ ಕಟ್ಟಿಮನಿ, ಭೀಮರಾಯ ತಂದೆ ಹಣಮಂತ ಕೆರಕೊಡಿ ಇವರುಗಳು ಬಂದು ಜಗಳನ್ನು ಬಿಡಿಸಿಕೊಂಡರು. ಆಗ ಅವರೆಲ್ಲರು ಹೊಡೆಯುವದನ್ನು ಬಿಟ್ಟು ಇವತ್ತು ನಿನಗೆ ಬಿಟ್ಟಿವಿ ಸೂಳೆ ಮಗನೆ ಇಲ್ಲದಿದ್ದರೆ ನಿನ್ನ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊರಟು ಹೊದರು. ನನಗೆ ಅಷ್ಟೇನು ಗಾಯವಾಗಿರದ ಕಾರಣ ನಾನು ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲ. ನನ್ನ ತಂದೆಯವರ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ತಡೆದು ನಿಲ್ಲಸಿ ಹೊಡೆ ಬಡಿ ಜೀವದ ಬೆದರಿಕೆ ಹಾಕಿ ಹೋಗಿರುವ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 160/2021 ಕಲಂ: 341, 323, 504, 506 ಸಂ. 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 17-10-2021 03:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080