ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-10-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 152/2022 ಕಲಂ. ಮಹಿಳೆ ಕಾಣೆ: ದಿನಾಂಕ: 16-10-2022 ರಂದು ಮಧ್ಯಾಹ್ನ 12-45 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನಿಡಿದ ಸಾರಂಶವೆನೆಂದರೆ ನನ್ನ ಮಗಳು ದೇವಿಕಾ ಈಕೆಯು ದಿನಾಂಕ: 09-10-2022 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮನೆಯಿಂದ ಯಾದಗಿರಿಯ ದೇವಿ ಗುಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ನಂತರ ಮನೆಗೆ ಬಂದಿರುವದಿಲ್ಲ ಸುತ್ತ ಮುತ್ತ ಮನೆಯವರಿಗೆ ಮತ್ತು ಬೀಗರು ನೆಂಟರ ಊರುಗಳಿಗೆ ಪೊನ್ ಮಾಡಿ ವಿಚಾರಿಸಲಾಗಿ ಎಲ್ಲಿ ಇರುವದಿಲ್ಲ ನಂತರ ಯಾದಗಿರಿ ಎಲ್ಲಾ ಕಡೆ ಹುಡುಕಾಡಿದರು ನನ್ನ ಮಗಳು ಎಲ್ಲಿ ಸಿಕ್ಕಿರುವದಿಲ್ಲ ನನ್ನ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಬೇಕು ಅಂತಾ ಪಿಯರ್ಾಧಿ. ಸಾರಂಶ.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 116/2022 ಕಲಂ 279, 337, 338 ಐಪಿಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ್: ಇಂದು ದಿನಾಂಕ:16.10.2022 ರಂದು ಬೆಳಿಗ್ಗೆ 11.30 ಗಂಟೆಗೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ವೆಂಕಟರಾವ್ ತಂದೆ ಭೀಮಸೇನರಾವ ವಯ|| 25ವರ್ಷ, ಜಾ|| ಬ್ರಾಕ್ಮಣ ಉ|| ಒಕ್ಕಲುತನ ಸಾ|| ಗಾಜರಕೋಟ ಗ್ರಾಮ ತಾ|| ಗುರುಮಠಕಲ ಜಿ|| ಯಾದಗಿರಿ ಈತನ ಫಿಯರ್ಾದಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿನಾಂಕ ಇಂದು ದಿನಾಂಕ 16.10.2022 ರಂದು ಬೆಳಿಗ್ಗೆ ನಾನು ವಯಕ್ತಿಕ ಕೆಲಸದ ಮೇಲೆ ಎನ್ ಹೆಚ್-150 ಮೇನ್ ರೋಡ್ ಮಾರ್ಗವಾಗಿ ರಾಯಚೂರಿಗೆ ನನ್ನ ಪಲ್ಸರ್ ಮೋಟಾರ್ ಸೈಕಲ್ ನಂಬರ-ಕೆಎ-03-ಹೆಚ್ ವೈ-7847 ನೇದ್ದರ ಮೇಲೆ ಹೊರಟಿದ್ದಾಗ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸೈದಾಪೂರ ಕರಿಬೆಟ್ಟ ಕ್ರಾಸ್ ಹತ್ತಿರ ನಾರಾಯಣಪೇಟ ರೋಡ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಆಟೋ ವಾಹನ ಚಲಾಯಿಸಿಕೊಂಡು ಬಂದು ಆಟೋಚಾಲಕ ನನ್ನ ಮೋಟಾರ್ ಸೈಕಲ್ಗೆ ಡಿಕ್ಕಿಪಡಿಸಿದ್ದರಿಂದ ಅಪಘಾತವಾಗಿ ನನ್ನ ಬಲಗಾಲಿನ ತೊಡೆಮೂಳೆ ಮುರಿದು ಭಾರೀ ರಕ್ತಗಾಯವಾಗಿದ್ದು ಆಟೋದಲ್ಲಿದ್ದ ಸಾಬಮ್ಮ ಗಂಡ ಮಲ್ಲಪ್ಪ ವ|| 35 ವರ್ಷ ಜಾ|| ಕುರುಬರು ಸಾ|| ಮಲ್ಹಾರ ಗ್ರಾಮ ಇವಳಿಗೆ ಎದೆಗೆ ಒಳಪೆಟ್ಟಾಗಿರುತ್ತದೆ. ಅಟೋದಲ್ಲಿದ್ದ ಇನ್ನೂ 2 ಜನರಿಗೆ ಯಾವುದೆ ಗಾಯ ಆಗಿರಲಿಲ. ನನಗೆ ಡಿಕ್ಕಿಪಡಿಸಿದ ಆಟೋ ನಂಬರ ನೋಡಲಾಗಿ ಕೆಎ-33-ಎ-4279 ಅಂತಾ ಇದ್ದು ಅದರ ಚಾಲಕ ಅಪಘಾತಪಡಿಸಿ ಓಡಿಹೋಗಿದ್ದು ಸದರಿಯವನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ಅಲ್ಲಿದ್ದ ಯಾರೋ 108 ಆಂಬುಲೆನ್ಸಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದ್ದು ಸದರಿ ಅಂಬುಲೆನ್ಸನಲ್ಲಿ ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ಬಂದು ಸೇರಿಕೆಯಾಗಿರುತ್ತೇನೆ. ಕಾರಣ ಎನ್ ಹೆಚ್-150 ರೋಡಿನ ಮೇಲೆ ಸೈದಾಪೂರ ಬಳಿಯ ಕರಿಬೆಟ್ಟಕ್ರಾಸ್ದಿಂದ ರಾಯಚೂರು ಕಡೆಗೆ ಹೊರಟಿದ್ದ ನನ್ನ ಮೋಟಾರ್ ಸೈಕಲ್ಗೆ ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿ ಅಪಘಾತಪಡಿಸಿದ ಆಟೋಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ

ಇತ್ತೀಚಿನ ನವೀಕರಣ​ : 17-10-2022 11:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080