ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-11-2021

ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 135/2021 ಕಲಂ: 379, ಐಪಿಸಿ : ಇಂದು ದಿನಾಂಕ 16/11/2021 ರಂದು 5-30 ಪಿಎಮ್ ಕ್ಕೆ ಫಿಯರ್ಾದಿಯಾದ ಶ್ರೀ ಲಿಂಗರಾಜು ತಂದೆ ಕುಪ್ಪರಾಯ ವ:38, ಉ:ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾದಗರಿ ಜೆಲ್ಲೆ ಇವರು ಠಾಣಗೆ ಹಾಜರಾಗಿ ನೀಡಿದ ಸಾರಾಂಸವೇನೆಂದರೆ ಇಂದು ದಿನಾಂಕ:16/11/2021 ರಂದು ಮಧ್ಯಾಹ್ನ ಅಂದಾಜು 3-30 ಗಂಟೆ ನಾನು ಡಾ. ಪುಷ್ಪಾವತಿ ಹಿರಿಯ ಭೂ ವಿಜ್ಞಾನಿಗಳು ಹಾಗೂ ಕಿರಣ.ಡಿ.ಆರ್. ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾದಗಿರಿ ಜಿಲ್ಲೆ ಇವರೊಂದಿಗೆ ಹಾಗೂ ನಮ್ಮ ಕಛೇಯ ವಾಹನ ಚಾಲಕನಾದ ಶ್ರೀ ಬಾಬು ಅಲಿ ಬಹದ್ದೂರ ರವರೊಂದಿಗೆ ನಮ್ಮ ಕಛೇರಿ ಜೀಪ ನಂಬರ ಕೆಎ :34 ಜಿ 1490 ರಲ್ಲಿ ಯಾದಗಿರಿ ರಿಂದ ಹೊರಟು ವಡಗೇರಾಕ್ಕೆ ಹೋಗುವ ಮಾರ್ಗದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿರುವಾಗ ವಡಗೇರಾ ತಾಲ್ಲೂಕಿನ ಹಾಲಗೇರಾ ಕ್ರಾಸ ಹತ್ತಿರ ಅಂದಾಜು 4 ಗಂಟೆಗೆ ಪಿ.ಎಮ್ ಗೆ ವಡಗೇರಾ ಕಡೆಯಿಂದ ಒಂದು ಟಿಪ್ಪರ ವಾಹನಾ ಸಂಖ್ಯೆ :ಕೆಎ: 33 ಬಿ 2278 ಮರಳು ತುಂಬಿಕೊಂಡು ಬರುವುದನ್ನು ತಡೆದು ನಿಲ್ಲಿಸಲಾಯಿತ್ತು. ಸದರಿ ಟಿಪ್ಪರ ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಬುಗ್ಗಪ್ಪ ತಂದೆ ಸಣ್ಣ ಬುಗ್ಗಪ್ಪ ಎಂದು ತಿಳಿಸಿದ್ದು ಸದರಿ ವಾಹನ ಮಾಲಿಕರಾದ ರಘುಪತಿ ಸಾ: ಗೌಡಗೇರಾ ಎಂದು ತಿಳಿಸಿರುತ್ತಾನೆ. ಸದರಿ ವಾಹನ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಖಿನಿಜ ರವಾನಿಗೆ ಪರವಾನಿಗೆ ಹಾಜರುಪಡಿಸುವಂತೆ ತಿಳಿಸಿದಾಗ ತನ್ನ ಬಳಿ ಯಾವುದೇ ಖನಿಜ ರವಾನೆ ಪರವಾನಿಗೆ ಇರುವುದಿಲ್ಲ. ಎಂದು ತಿಳಿಸಿರುತ್ತಾನೆ. ಇದು ಅಲ್ಲದೆ ಮರಳು ತುಂಬಿದ ಬಗ್ಗೆ ವಿಚಾರಿಸಲಾಗಿದ್ದು ಸದರಿ ಮರಳನ್ನು ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದ ಕೃಷ್ಣನದಿಯಿಂದ ತುಂಬಿರುವುದಾಗ ತಿಳಿಸಿರುತ್ತಾನೆ. ಇದು ಅಲ್ಲದೆ ಸದರಿ ಟಿಪ್ಪರ ವಾಹನದಲ್ಲಿ ಅಂದಾಜು 20 ಮೆಟ್ರಿಕ ಟನ್ ಮರಳುನ್ನು ತುಂಬಿರುವುದು ಕಂಡು ಬಂದಿರುತ್ತದೆ. ಕಾರಣ ಸದರಿ ಮರಳು ತುಂಬಿದ ವಾಹನ ಚಾಲಕನೊಂದಿಗೆ ತಮ್ಮ ಠಾಣೆಗೆ 4-30 ಪಿಎಮ್ ಕ್ಕೆ ಬಂದು ಹಾಜರುಪಡಿಸಿರುತ್ತೇನೆ. ಕಾರಣ ಸರಕಾರ ಸ್ವತ್ತಾದ ನೈಸಗರ್ಿಕ ಮರಳನ್ನು ಕೃಷ್ಣ ನದಿಯಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುವುದು ಕಂಡು ಬಂದಿರುತ್ತದೆ. ಇದ್ದರಿಂದ ಸರಕಾರಕ್ಕೆ ರೂ-/ 1600 ರೂ ಗಳು ರಾಜಧನ ನಷ್ಟ ಉಂಟು ಮಾಡಿರುತ್ತಾರೆ ಹಾಗೂ ಇದರ ಮಾರುಕಟ್ಟೆ ಮೌಲ್ಯವು ಅಂದಾಜು 40.000 ರೂಪಾಯಿ ಮೌಲ್ಯವಾಗಿರುತ್ತದೆ. ಕಾರಣ ಸದರಿ ವಾಹನ ಮಾಲಿಕರಾದ ರಘುಪತಿ ಸಾ: ಗೌಡಗೇರಾ ಹಾಗೂ ವಾಹನ ಚಾಲಕ ಬುಗ್ಗಪ್ಪ ತಂದೆ ಸಣ್ಣ ಬುಗ್ಗಪ್ಪ ಸಾ:ಗುರುಸುಣಗಿ ಗ್ರಾಮ ಇವನು ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಕಳ್ಳತನ ಮಾಡಿ ನೈಸಗರ್ಿಕ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುವ ಕಾರಣ ದೂರು ದಾಖಲಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ :135/2021 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.

 


ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ. 136/2021 ಕಲಂ:279, 338 ಐಪಿಸಿ ಸಂ 187 ಐಎಮ್ವಿ ಎಕ್ಟ : ದಿನಾಂಕ:15/11/2021 ರಂದು ರಾಯಚೂರು ಶ್ರೀ ಧನ್ವಂತರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು 4 ಪಿಎಮ್ ಕ್ಕೆ ಹೆಚ್.ಸಿ 179 ರವರಿಗೆ ವಿಚಾರಣೆ ಕುರಿತು ಕಳುಹಿಸಿದ್ದು, ಸದರಿಯವರು ಧನ್ವಂತರಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಲಕ್ಷ್ಮೀಬಾಯಿ ಗಂಡ ಚಾಮರಾಜಪ್ಪಗೌಡ ಮಾಲಿಪಾಟೀಲ್ ಸಾ:ಕುಮನೂರು ಇವರ ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಸದರಿಯವರಿಗೆ ವಿಚಾರಿಸಿ, ಹೇಳಿಕೆ ಪಡೆದುಕೊಂಡು ಬಂದು ಇಂದು ದಿನಾಂಕ:16/11/2021 ರಂದು 5-45 ಪಿಎಮ್ ಕ್ಕೆ ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ಚಿತ್ತಾಪೂರ ತಾಲೂಕಿನ ಬಂಕಲಗಿ ಗ್ರಾಮದಲ್ಲಿ ನಮ್ಮ ಸಂಬಂಧಿಕರಿಗೆ ಅರಾಮ ಇಲ್ಲದ್ದರಿಂದ ಮೊನ್ನೆ ದಿನಾಂಕ:14/11/2021 ರಂದು ನಾನು ಬಂಕಲಗಿ ಗ್ರಾಮಕ್ಕೆ ಹೋಗಿ ಮಾತಾಡಿಸಿಕೊಂಡು ಸಾಯಂಕಾಲ ಯಾದಗಿರಿಗೆ ಮರಳಿ ಬಂದೆನು. ಯಾದಗಿರಿ ಹಳೆ ಬಸ್ ನಿಲ್ದಾಣ ಹತ್ತಿರ ನಮ್ಮೂರಿಗೆ ಹೋಗುವ ಅಟೋ ಮತ್ತು ಬಸ್ಸಿನ ದಾರಿ ಕಾಯುತ್ತಾ ನಿಂತುಕೊಂಡಿದ್ದೇನು. ಆಗ ಸಾಯಂಕಾಲ 6-30 ಗಂಟೆ ಸುಮಾರಿಗೆ ನಮ್ಮೂರಿಗೆ ಒಂದು ಟಂ ಟಂ ಅಟೋ ನಂ. ಕೆಎ 33 ಎ 4810 ನೇದ್ದು ಇಬ್ಬರೂ-ಮೂರು ಜನ ಪ್ರಯಾಣಿಕರನ್ನು ತುಂಬಿಕೊಂಡು ನಿಂತಿದ್ದನು. ನಾನು ಹೋಗಿ ಸದರಿ ಟಂ ಟಂ ಅಟೋದಲ್ಲಿ ಮಧ್ಯದ ಸೀಟಿಗೆ ಬಲ ಸೈಡಿಗೆ ಕುಳಿತುಕೊಂಡೆನು. ಅಟೋ ಡ್ರೈವರನು ಅಟೋ ಚಲಾಯಿಸಿಕೊಂಡು ಹೊರಟನು. ಯಾದಗಿರಿ-ವಡಗೇರಾ ಮೇನ ರೋಡ ಸಂತೋಷ ನಿರ್ಮಲಕರ ಇವರ ದಾಭಾದ ಹತ್ತಿರ ಹೋಗುತ್ತಿದ್ದಾಗ 7 ಪಿಎಮ್ ಸುಮಾರಿಗೆ ಎದುರುಗಡೆಯಿಂದ ಒಂದು ಟ್ರ್ಯಾಕ್ಟರನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾನು ಕುಳಿತ ಕಡೆಗೆ ಟಂ ಟಂ ಗೆ ಬಲ ಸೈಡಿನಿಂದ ಕಟ್ ಹೊಡೆದು ನನ್ನ ಬಲಗೈಗೆ ಟ್ರ್ಯಾಕ್ಟರ ಗುದ್ದಿಕೊಂಡು ಹೋಗಿದ್ದರಿಂದ ನನ್ನ ಬಲಗೈ ಮೊಳಕೈಯಿಂದ ಅಂಗೈ ವರೆಗೆ ಭಾರಿ ಹರಿದ ರಕ್ತಗಾಯವಾಯಿತು. ಟ್ರ್ಯಾಕ್ಟರ ಚಾಲಕನು ಸ್ವಲ್ಪ ಮುಂದೆ ಹೋಗಿ ತನ್ನ ಟ್ರ್ಯಾಕ್ಟರ ನಿಲ್ಲಿಸಿದನು. ಆಗ ಟಂ ಟಂ ಚಾಲಕ ನಿಂಗಪ್ಪ ತಂದೆ ಬಸವರಾಜ ಸಾ:ಅಜರ್ುಣಗಿ ಮತ್ತು ಟಂ ಟಂ ನಲ್ಲಿದ್ದವರು ಬಂದು ನನಗೆ ನೋಡಿ ಅಟೋದಿಂದ ಕೆಳಗೆ ಇಳಿಸಿದರು. ಅವರು ಟ್ರ್ಯಾಕ್ಟರ ನಂಬರ್ ನೋಡಿ ನನಗೆ ಹೇಳಿದ್ದು, ಟ್ರ್ಯಾಕ್ಟರ ನಂ. ಎಪಿ 39 ಡಿಜೆ 8345 ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರದಿಂದ ಕೆಳಗೆ ಇಳಿದು ಬಂದು ನಮಗೆ ನೋಡಿ, ಟ್ರ್ಯಾಕ್ಟರ ಅಲ್ಲಿಯೇ ಬಿಟ್ಟು ಓಡಿ ಹೋದನು. ಸದರಿ ಟ್ರ್ಯಾಕ್ಟರ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ನಂತರ ನನಗೆ ಉಪಚಾರ ಕುರಿತು ಯಾದಗಿರಿಯ ಖಾಸಗಿ ಆಸ್ಪತ್ರೆಗೆ ತಂದು ಅಲ್ಲಿ ಪ್ರಥಮ ಉಪಚಾರ ಮಾಡಿಸಿ, ಅಲ್ಲಿಂದ ರಾಯಚೂರಿನ ಶ್ರೀ ಧನ್ವಂತರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಇಲ್ಲಿಯ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿರುತ್ತಾರೆ. ಕಾರಣ ಟ್ರ್ಯಾಕ್ಟರ ನಂ. ಎಪಿ 39 ಡಿಜೆ 8345 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಟಂ ಟಂ ಗೆ ಬಲ ಸೈಡಿನಿಂದ ಡಿಕ್ಕಿಪಡಿಸಿ, ತಿಕ್ಕಿಕೊಂಡು ಹೋಗಿದ್ದರಿಂದ ನನ್ನ ಬಲಗೈ ಭಾರಿ ರಕ್ತಗಾಯವಾಗಿರುತ್ತದೆ. ಅಪಘಾತದಲ್ಲಿ ಟಂ ಟಂ ಬಲ ಸೈಡಿಗೆ ಸ್ವಲ್ಪ ಡ್ಯಾಮೇಜ್ ಆಗಿರುತ್ತದೆ. ಈ ಬಗ್ಗೆ ಸದರಿ ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 136/2021 ಕಲಂ:279, 338 ಐಪಿಸಿ ಸಂ 187 ಐಎಮ್ವಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ: 83/2021 78 (3) ಕೆ.ಪಿ ಯಾಕ್ಟ : ದಿನಾಂಕ:16/11/2021 ರಂದು ಬೆಳಿಗ್ಗೆ 11.15 ಗಂಟೆಯ ಸುಮಾರಿಗೆ ಆರೋಪಿತನು ಹುಣಸಗಿ ಬಸವೇಶ್ವರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-83, ಪಿಸಿ-216, 248 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತನಿಂದ 1410=00 ರೂ ನಗದು ಹಣ, ಎರಡು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂ 240/2021. ಕಲಂ. 279. 338. ಐ.ಪಿ.ಸಿ. : ಇಂದು ದಿನಾಂಕ: 08/05/2021 ರಂದು 18-00 ಗಂಟೆಗೆ ಪಿಯರ್ಾದಿ ಶ್ರೀಮತಿ, ಮುತ್ತುಲಕ್ಷ್ಮೀ ಗಂಡ ಅಮೀನ್ರೆಡ್ಡಿ ಸಾಲಿ ವ|| 23 ಜಾ|| ಕುರುಬರ ಉ|| ಮನೆಕೆಲಸ ಸಾ|| ವಿಭೂತಿಹಳ್ಳಿ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ನನ್ನ ಗಂಡ ಅಮೀನರೆಡ್ಡಿ ತಂದೆ ಭೀಮರಾಯ ಸಾಲಿ ವ|| 32 ವರ್ಷ, ಈತನು ಶಹಾಪೂರದಲ್ಲಿ ಒಂದು ಗ್ಯಾರೆಜ ಇಟ್ಟು ಕೊಂಡು ಉಪಜೀವಿಸುತ್ತಿದ್ದು ದಿನಾಲು ಶಹಾಪೂರದ ಗ್ಯಾರೆಜ್ಗೆ ಬೆಳಿಗ್ಗೆ ಹೋಗಿ ಗ್ಯಾರೆಜ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬರುವುದು ಮಾಡುತ್ತಿದ್ದನು. ಹಿಗಿದ್ದು ದಿನಾಂಕ 14/11/2021 ರಂದು ಬೆಳಿಗ್ಗೆ 10-00 ಗಂಟೆಗೆ ನನ್ನ ಗಂಡ ಅಮೀನರೆಡ್ಡಿ ಈತನು ನಮ್ಮ ಮೋಟರ್ ಸೈಕಲ್ ನಂ ಕೆಎ-33 ಇಎ-9095 ನೇದ್ದರ ಮೇಲೆ ಶಹಾಪೂರದ ಗ್ಯಾರೆಜ್ಗೆ ಹೋಗಿದ್ದನು. ನಂತರ ರಾತ್ರಿ 7-10 ಗಂಟೆಯ ಸುಮಾರಿಗೆ ನಮ್ಮೂರ ಸಾಬಣ್ಣ ತಂದೆ ದೇವಿಂದ್ರಪ್ಪ ಟಣಖೆದಾರ ಈತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ. ನಾನು ವಗ್ಗರಾಯಣ್ಣ ಮುತ್ಯಾನ ಗುಡಿಯ ಹತ್ತಿರ ಇದ್ದಾಗ. ಅಮೀನರೆಡ್ಡಿ ಈತನು ತನ್ನ ಮೋಟರ್ ಸೈಕಲ್ ಕೆಎ-33 ಇಎ-9095 ನೇದ್ದನ್ನು ಶಹಾಪೂರ-ಸುರಪೂರ ಮುಖ್ಯ ರಸ್ತೆಯ ಮೇಲೆ ವಗ್ಗರಾಯಣ್ಣ ಮುತ್ಯಾನ ಗುಡಿಯ ಮುಂದೆ 7-00 ಗಂಟೆಯ ಸುಮಾರಿಗೆ ನಿಧಾನವಾಗಿ ತನ್ನ ಎಡಗಡೆ ಸೈಡಿಗೆ ತನ್ನ ಮೋಟರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿರುವಾಗ ಅದೆ ಸಮಯಕ್ಕೆ ಸುರಪೂರ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಮೀನ ರೆಡ್ಡಿಯ ಮೊಟರ್ ಸೈಕಲ್ಗೆ ಡಿಕ್ಕಿ ಪಡಿಸಿ ಅಫಘಾತ ಮಾಡಿದ್ದರಿಂದ. ನಾನು ಅಮೀನರೆಡ್ಡಿ ಹತ್ತಿರ ಹೋಗಿ ನೋಡಲಾಗಿ ಸದರಿ ಅಪಘಾತದಲ್ಲಿ ಅಮೀನರೆಡ್ಡಿಗೆ ಭಾರಿ ಗಾಯವಾಗಿದ್ದು ಇರುತ್ತದೆ. ಅಂತ ತಿಳಿಸಿದ್ದರಿಂದ ನಾನು ಮತ್ತು ನನ್ನ ಚಿಕ್ಕಪ್ಪನಾದ ಶರಣಬಸಪ್ಪ ತಂದೆ ಹಣಮಂತ್ರಾಯ ಶರಣಾವರ ಇಬ್ಬರು ಕೂಡಿ ಅಪಘಾತವಾದ ಸ್ಥಳಕ್ಕೆ ಬಂದು ನನ್ನ ಗಂಡ ಅಮೀನರೆಡ್ಡಿಗೆ ನೋಡಿ ವಿಚಾರಿಸಲಾಗಿ ಬಲಗಾಲ ತೋಡಿಗೆ ಭಾರಿ ಗುಪ್ತಗಾಯ, ಗೆಜ್ಜೆಯ ಗುಪ್ತಾಂಗಕ್ಕೆ ಭಾರಿ ರಕ್ತಗಾಯ, ಎಡಗೈ ಹಸ್ತದ ಮೇಲಿನ ಕಿಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ಸದರಿ ಅಪಘಾದ ಸುದ್ದಿಕೇಳಿ ನನ್ನ ಅಣ್ಣ ಮಾಳಪ್ಪ ತಂದೆ ಮಲ್ಲಪ್ಪ ಶಣಾವರ ಈತನು ಅಪಘಾತದ ಸ್ಥಳಕ್ಕೆ ಬಂದಿದ್ದನು. ಸದರಿ ಅಪಘಾತಮಾಡಿದ ಕಾರ ಚಾಲಕನು ಅಲ್ಲೆ ಕಾರಿನ ಪಕ್ಕದಲ್ಲಿ ನಿಂತಿದ್ದು ಆತನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಪ್ರಕಾಶ ತಂದೆ ಕಾಳಿದಾಸ ಪಿಂಪಳೆ ಸಾ|| ನೀರಗುಡಿ ತಾ|| ಆಳಂದ ಅಂತ ತಿಳಿಸಿದನು. ಪ್ರಕಾಶನಿಗೆ ಬಲಗೈ ಕಿರಿ ಬೆರಳಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಅಪಘಾತ ಮಾಡಿದ ಕಾರ ನಂ ನೋಡಲಾಗಿ ಕೆಎ-16 ಎಂ-8338, ನೇದ್ದು ಮತ್ತು ನಮ್ಮ ಮೋಟರ್ ಸೈಕಲ್ ನಂ ಕೆಎ-33 ಇಎ-9095 ನೇದ್ದವುಗಳು ಜಖಂಗೊಂಡಿರುತ್ತದೆ. ನನ್ನ ಗಂಡ ಅಮೀನರೆಡ್ಡಿಗೆ ಉಪಚಾರ ಕುರಿತು ನಾನು ಮತ್ತು ನನ್ನ ಅಣ್ಣ ಮಾಳಪ್ಪ ಮತ್ತು ನನ್ನ ಚಿಕ್ಕಪ್ಪ ಶರಣಬಸಪ್ಪ ಎಲ್ಲರು ಕೂಡಿ ಅಲ್ಲೆ ಹೋರಟಿದ್ದ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಶಹಾಪುರ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದು. ನನ್ನ ಗಂಡ ಅಮೀನರೆಡ್ಡಿಗೆ ಉಪಚಾರ ಮಾಡಿದ ವೈದ್ಯಾಧೀಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಮತ್ತು ನನ್ನ ಚಿಕ್ಕಪ್ಪ ಶರಣಬಸಪ್ಪ ಇಬ್ಬರು ಕೂಡಿ ಅಂಬುಲೇನ್ಸದಲ್ಲಿ ಕರೆದುಕೊಂಡು ಹೋಗಿ ಕಲಬುರಗಿಯ ಯುನಟೇಡ್ ಆಸ್ಪತ್ರೆಯಲ್ಲಿ ಸೆರಿಕೆಮಾಡಿದ್ದರಿಂದ ಉಪಚಾರ ಪಡಿಯುತ್ತಿದ್ದು ಇರುತ್ತದೆ. ನನ್ನ ಗಂಡನಿಗೆ ಹೆಚ್ಚಿನ ಉಪಚಾರ ಮಾಡಿಸುವುದು ಅವಶ್ಯಕವಾಗಿದ್ದರಿಂದ ಉಪಚಾರಮಾಡಿಸಿ ಮತ್ತು ನಮ್ಮ ಹಿರಿಯರೊಂದಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ. ಪ್ರಕಾಶನಿಗೆ ಸಣ್ಣ ಪುಟ್ಟ ಗುಪ್ತಗಾಯ ವಾಗಿದ್ದರಿಂದ ಉಪಚಾರ ಮಾಡಿಸಿಕೊಂಡಿರುವುದಿಲ್ಲಾ. ಅಂತ ದೂರು ಸಲ್ಲಿಸಿದ್ದು. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 240/2021 ಕಲಂ: 279, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ :59/2021 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 16/11/2021 ರಂದು ಸಮಯ 9-30 ಪಿ.ಎಂ.ಕ್ಕೆ ಯಾದಗಿರಿ ಜಿಜಿಎಚ್ನಿಂದ ರಸ್ತೆ ಅಪಘಾತದ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಆಸ್ಪತ್ರೆಗೆ ತೆರಳಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ವಿಚಾರಣೆ ನಂತರ, ಗಾಯಾಳುವಿನ ಸಂಬಂಧಿ ಪಿಯರ್ಾದಿ ಶ್ರೀ ದೇಸಪ್ಪ ತಂದೆ ಹುಲಿಗೆಪ್ಪ ವಯ;40 ವರ್ಷ, ಜಾ;ಪ.ಜಾತಿ(ಮಾದಿಗ), ಉ;ಒಕ್ಕುಲುತನ, ಸಾ;ಶಾವಂತಗೋಳ, ತಾ;ದೇವದುರ್ಗ, ಜಿ;ರಾಯಚೂರು ರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 9-45 ಪಿ.ಎಂ.ದಿಂದ 10-45 ಪಿ.ಎಂ.ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಯಾದಗಿರಿಯ ಡಾನ್ ಬೋಸ್ಕೋ ಶಾಲೆಗೆ ಸೇರಿದ ಜಮೀನಿನಲ್ಲಿ ಸುಮಾರು 10 ವರ್ಷಗಳಿಂದ ಒಕ್ಕುಲುತನ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಇಲ್ಲಿಯೇ ಉಪ ಜೀವಿಸುತ್ತೇನೆ. ನಮ್ಮೊಂದಿಗೆ ನನ್ನ ಅಳಿಯನಾದ ದಯಾನಂದ ತಂದೆ ಥಾಮಸ್ ವಯ;35 ವರ್ಷ, ಸಾ;ಮಾಡಲಗುಂಡ, ತಾ;ದೇವದುರ್ಗ ಈತನು ಕೂಡ ಡಾನ್ ಬೋಸ್ಕೋ ಶಾಲೆಯ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡು ಬಂದಿರುತ್ತಾನೆ. ಹೀಗಿದ್ದು ಇಂದು ದಿನಾಂಕ 16/11/2021 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾನು ಡಾನ್ ಬೋಸ್ಕೋ ಶಾಲೆಯ ಆವರಣದಲ್ಲಿದ್ದಾಗ ನನ್ನ ಅಳಿಯನಾದ ದಯಾನಂದ ಈತನು ತನ್ನ ಮೊಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-4755 ನೇದ್ದನ್ನು ತೆಗದುಕೊಂಡು ಬಂದು ನನಗೆ ತಿಳಿಸಿದ್ದೇನೆಂದರೆ ನಾನು ಯಾದಗಿರಿ ನಗರದಲ್ಲಿ ಹೋಗಿ ತಿನ್ನಲು ಭಜಿ ತರುತ್ತೇನೆ ನಾನು ಬಂದ ನಂತರ ಊಟ ಮಾಡೋಣವೆಂದು ಹೇಳಿ ಹೋಗಿರುತ್ತಾನೆ. ಸ್ವಲ್ಪ ಸಮಯದ ನಂತರ ನನಗೆ ನಮ್ಮ ಡಾನ್ ಬೋಸ್ಕೋ ಶಾಲೆಯಲ್ಲಿಯೇ ಕೆಲಸ ಮಾಡಿಕೊಂಡಿರುವ ಶ್ರೀ ಶರಭಯ್ಯ ತಂದೆ ಸಾಬಯ್ಯ ಕಲಾಲ್ ಸಾ;ಹಳಿಗೇರಾ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ಮಲ್ಲಪ್ಪ ತಂದೆ ಮರಗಪ್ಪ ಮಾನೇಗಾರ ಸಾ;ಆಶನಾಳ ಇಬ್ಬರು ಕೂಡಿಕೊಂಡು ನಮ್ಮ ಮೋಟಾರು ಸೈಕಲ್ ಮೇಲೆ ಯಾದಗಿರಿ ನಗರದ ಕಡೆಯಿಂದ ಡಾನ್ ಬೋಸ್ಕೋ ಶಾಲೆ ಕಡೆಗೆ ಬರುವಾಗ ಮಾರ್ಗ ಮದ್ಯೆ ಯಾದಗಿರಿ ಆರ್.ಟಿ.ಓ ಕಾಯರ್ಾಲಯದ ಹತ್ತಿರ ಒಂದು ಬೂದಿ ಲಾರಿ ಟ್ಯಾಂಕರ್ ಮತ್ತು ಮೊಟಾರು ಸೈಕಲ್ ಅಪಘಾತವಾಗಿದ್ದು ಹತ್ತಿರ ಹೋಗಿ ನೋಡಲಾಗಿ ಅಪಘಾತದಲ್ಲಿ ನಿಮ್ಮ ಅಳಿಯನಾದ ದಯಾನಂದ ಈತನಿಗೆ ಭಾರೀ ರಕ್ತಗಾಯಗಳಾಗಿದ್ದು, ಆತನಿಗೆ ಅಪಘಾತದ ಬಗ್ಗೆ ವಿಚಾರಿಸಲಾಗಿ ತಾನು ಯಾದಗಿರಿಯ ಸುಭಾಷ್ ವೃತ್ತದಲ್ಲಿ ಭಜಿ ತೆಗೆದುಕೊಂಡು ಮರಳಿ ಡಾನ್ ಬೋಸ್ಕೋ ಶಾಲೆ ಕಡೆಗೆ ನನ್ನ ಮೊಟಾರು ಸೈಕಲ್ ಮೇಲೆ ಹೊರಟಿದ್ದಾಗ ನನ್ನ ಹಿಂದೆ ಬರುತ್ತಿದ್ದ ಬೂದಿ ಟ್ಯಾಂಕರ್ ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ನನ್ನ ಮೊಟಾರು ಸೈಕಲ್ ನೆದ್ದಕ್ಕೆ ಓವರ್ ಟೇಕ್ ಮಾಡುವಾಗ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನನ್ನ ಮೋಟಾರು ಸೈಕಲ್ ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದಾಗ ನಾನು ಮೋಟಾರು ಸೈಕಲ್ ಸಮೇತ ಸಿಡಿದು ರಸ್ತೆಗೆ ಬಿದ್ದಾಗ ಲಾರಿಯು ಯಾವುದೊ ಟಯರು ನನ್ನ ಎಡಗಾಲಿನ ಮೇಲೆ ಹಾಯ್ದು ಹೋಗಿದ್ದರಿಂದ ಎಡಗಾಲಿನ ಮೊಣಕಾಲಿನಿಂದ ಪಾದದ ವರೆಗೆ ಭಾರೀ ರಕ್ತಗಾಯವಾಗಿ ನುಜ್ಜು-ಗುಜ್ಜಾಗಿರುತ್ತದೆ ಹಾಗೂ ಬಲಗಾಲಿನ ಪಾದದ ಬೆರಳುಗಳಿಗೆ ಭಾರೀ ರಕ್ತಗಾಯ ಮತ್ತು ಗದ್ದಕ್ಕೆ, ಕೈಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತವೆ. ಇದೇ ಸಮಯದಲ್ಲಿ ನೀವು ಬಂದಿರುತ್ತೀರಿ ಅಂತಾ ತಿಳಿಸಿದನು, ಆಗ ಅಪಘಾತ ಪಡಿಸಿದ ಬೂದಿ ಲಾರಿ ಟ್ಯಾಂಕರ್ ಘಟನಾ ಸ್ಥಳದಲ್ಲಿಯೇ ಇದ್ದು ಅದರ ನಂಬರ ನೋಡಲಾಗಿ ನಂಬರ ಕೆಎ-36, ಬಿ-4338 ನೇದ್ದು ಇರುತ್ತದೆ ಅದರ ಚಾಲಕನು ನಮ್ಮನ್ನು ನೋಡುತ್ತಾ ಘಟನಾ ಸ್ಥಳದಲ್ಲಿ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಆತನನ್ನು ನಾವು ಲೈಟಿನ ಬೆಳಕಿನಲ್ಲಿ ನೋಡಿರುತ್ತೇವೆ ಆತನಿಗೆ ಮತ್ತೆ ನೋಡಿದರೆ ಗುತರ್ಿಸುತ್ತೇವೆ. ಈ ಘಟನೆಯು ಇಂದು ದಿನಾಂಕ 16/11/2021 ರಂದು ರಾತ್ರಿ 9 ಪಿ.ಎಂ.ದ ಸುಮಾರಿಗೆ ಜರುಗಿರುತ್ತದೆ. ಸ್ಥಳಕ್ಕೆ 108 ಅಂಬುಲೆನ್ಸ್ ಬಂದಿದ್ದು ನಾವುಗಳು ನಿಮ್ಮ ಅಳಿಯ ದಯಾನಂದ ಈತನಿಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದು ನೀವು ಕೂಡಲೇ ಅಲ್ಲಿಗೆ ಬರಬೇಕು ಅಂತಾ ತಿಳಿಸಿರುತ್ತಾರೆ. ನಾನು ಒಂದು ಖಾಸಗಿ ವಾಹನದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಅಳಿಯ ದಯಾನಂದ ಈತನು ಚಿಕಿತ್ಸೆ ಪಡೆಯುತ್ತಿದ್ದು, ನನಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ನನ್ನ ಅಳಿಯ ದಯಾನಂದ ಅಪಘಾತದಲ್ಲಿ ಆದ ಭಾರೀ ರಕ್ತಗಾಯದ ಭಾದೆಯಿಂದ ತೀವ್ರ ಅಸ್ವಸ್ಥನಾಗಿರುತ್ತಾನೆ. ಹೀಗಿದ್ದು ಇಂದು ದಿನಾಂಕ 16/11/2021 ರಂದು ರಾತ್ರಿ 9 ಪಿ.ಎಂ.ದ ಗಂಟೆ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಆರ್.ಟಿ.ಓ ಕಾಯರ್ಾಲಯದ ಹತ್ತಿರ ಮುಖ್ಯ ರಸ್ತೆಯ ಮೇಲೆ ಗಾಯಾಳು ನನ್ನ ಅಳಿಯನು ತನ್ನ ಮೊಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-4338 ನೇದ್ದನ್ನು ನಡೆಸಿಕೊಂಡು ಡಾನ್ ಬೋಸ್ಕೋ ಶಾಲೆ ಕಡೆಗೆ ಬರುತ್ತಿದ್ದಾಗ ಆತನ ಹಿಂದೆ ಬರುತ್ತಿದ್ದ ಬೂದಿ ಲಾರಿ ಟ್ಯಾಂಕರ್ ನಂ.ಕೆಎ-36, ಬಿ-4338 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೊಟಾರು ಸೈಕಲ್ ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಘಟನೆ ಜರುಗಿದ್ದು, ಘಟನೆಯ ನಂತರ ಲಾರಿ ಚಾಲಕನು ಓಡಿ ಹೋಗಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 11 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 59/2021 ಕಲಂ 279, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 166/2021 ಕಲಂ 323, 354(ಬಿ), 504, 506 ಐಪಿಸಿ : ಇಂದು ದಿನಾಂಕ 16.11.2021 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಶ್ರೀಮತಿ ಹುಸೇನಬೀ ಗಂಡ ಸದ್ದಾಂ ಕತ್ತಣೋರ, ಇವರು ಸೈದಾಪುರ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 15.11.2021 ರಂದು ಸಾಯಂಕಾಲ ನಾನು ನನ್ನ ಮನೆಯ ಮುಂದೆ ಕುಂತಿದ್ದೆ. ಸಾಯಂಕಾಲ 7.30 ಗಂಟೆ ಸುಮಾರಿಗೆ ನನ್ನ ಎರಡನೇ ಮೈದುನನಾದ ಮಹಿಮೂದ @ ಲಾಲಭೀ ಈತನು ಒಮ್ಮಿಂದೊಮ್ಮೇಲೆ ಜೋರಾಗಿ ಚೀರಿದ ಶಬ್ದ ನನ್ನಕಿವಿಗೆ ಬಿತ್ತು. ನಾನು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನಿಂತು ಆಕಡೆ ಈಕಡೆ ನೋಡಿದೆ. ನಮ್ಮೂರಿನ ಮೈಹಿಬೂಬಸಾಬ ತಂದೆ ನಭೀಸಾಬ ಕತ್ತಣೋರ ಇವರ ಅಂಗಡಿ ಮುಂದೆ ಲೈಟಿನ ಬೆಳಕಿನಲ್ಲಿ ನನ್ನ ಮೈದುನನೊಟ್ಟಿಗೆ ನಮ್ಮೂರಿನ ಬೀರಲಿಂಗಪ್ಪ ತಂದೆ ನರಸಪ್ಪ ಎದ್ದೇರಿ ಈತನು ಜಗಳ ತೆಗೆದು ಹೊಡೆಯುತ್ತಿದ್ದುದ್ದು ನನ್ನಕಣ್ಣಿಗೆ ಬಿತ್ತು. ಅದನ್ನು ನೋಡಿದ ನಾನು ಓಡುತ್ತ ಹೋಗಿ ನನ್ನ ಮೈದುನ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಬೀರಲಿಂಗಪ್ಪ ಈತನು ಏ ರಂಡಿ ನಿನ್ನ ಮೈದುನರ ಮತ್ತು ನಿಮ್ಮ ಜಾತಿಯ ಕೆಲ ಸುಳ್ಳೇ ಮಕ್ಕಳದು ಸೊಕ್ಕು ಬಹಳಾಗಿದೆ ಸರಿ ಈ ಮಗನಿಗೆ ಇವತ್ತ ಮುಗಿಸೇ ಬಿಡುತ್ತೇನೆ ಅಂತಾ ಅಂದವನೇ ನನಗೆ ಜೋರಾಗಿ ನೂಕಿಸಿಕೊಟ್ಟ. ನಾನು ರೋಡಿನ ಮೇಲೆ ಕೆಳಗೆ ಬಿದ್ದರೂ ಸಹ ಪುನ: ಎದ್ದು ಬೀರಲಿಂಗಪ್ಪನ ಕಾಲಿಡಿದುಕೊಂಡು ನನ್ನ ಮೈದುನನಿಗೆ ಬಿಡಂತಾ ಅಂಗಲಾಚುವಾಗ ನನ್ನಸೀರೆ ಹಿಡಿದು ಬೀರಲಿಂಗಪ್ಪ ಎಳೆದಾಡಿ ಸೀರೆ ಹರಿದ್ದುದಲ್ಲದೆ ನನ್ನ ಕುಪ್ಪಸಕ್ಕೆ ಕೈಹಾಕಿ ನನ್ನನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುತ್ತಿದ್ದ. ಅದೇವೇಳೆ ನನ್ನ ಇನ್ನೊಬ್ಬ ಮೈದುನನಾದ ದಾವುದ್ ಈತನು ಬಂದು ಬೀರಲಿಂಗಪ್ಪನಿಗೆ ಜೋರಾಗಿ ದೂರ ದೊಬ್ಬಿ ನನ್ನನ್ನು ಪಕ್ಕಕ್ಕೆ ಸರೆಸಿದ. ಜಗಳವನ್ನು ನೋಡಿದ ನಮ್ಮೂರಿನ ಮಹಿಬೂಬ್ಭೀ ಗಂಡ ದಾವುದ್ ಗಿರಿಣಿ ಮತ್ತು ಉಮೇಶ ತಂದೆ ತಿರುಪತಿ ಧೋತ್ರೆ ಇವರು ಬಂದು ನನ್ನ ಮೈದುನರಿಗೆ ದೊಬ್ಬಿಕೊಂಡು ನಮ್ಮ ಮನೆ ಕಡೆಗೆ ಕರೆದುಕೊಂಡು ಹೋದರು. ನಾನು ಮನೆಗೋದ ನಂತರ ನನ್ನ ಎರಡನೇ ಮೈದುನನಾದ ಈತನಿಗೆ ಯಾಕೆ ಬೀರಲಿಂಗಪ್ಪ ನಿನಗೆ ಹೊಡೆಯುತ್ತಿದ್ದ ಅಂತಾ ನಾನು ಕೇಳಿದ್ದಕ್ಕೆ ನನ್ನ ಮೈದುನ ಹೇಳಿದ್ದೇನೆಂದರೆ, ಗ್ರಾಮ ಪಂಚಾಯತಿ ರವರಿಗೆ ಹೇಳಿ ಟಿಪ್ಪು ಸುಲ್ತಾನ ಜಯಂತಿ ಕಾಲಕ್ಕೆ ಕಟ್ಟಿದ ಝಂಡಗಳನ್ನು ನಾನು ತೆಗೆಸಿದರೂ ಸಹ ನಿಮಗೇನು ಮಾಡಲು ಆಗಲಿಲ್ಲ ಸುಳ್ಳೇ ಮಕ್ಕಳೇ ಅಂತಾ ಬೀರಲಿಂಗಪ್ಪ ನನಗೆ ಬೈದಿದ್ದರಿಂದ ನಾನು ಸೀದಾ ಮಾತನಾಡು ಅಂತಾ ಬೀರಲಿಂಗಪ್ಪನಿಗೆ ಹೇಳಿದ ತಕ್ಷಣ ನನ್ನೊಟ್ಟಿಗೆ ಜಗಳಕ್ಕೆ ನಿಂತ ಅಂತಾ ತಿಳಿಸಿದ. ಬೀರಲಿಂಗಪ್ಪ ತಂದೆ ನರಸಪ್ಪ ಎದ್ದೇರಿ ಜಾತಿ ಕುರುಬರು ಕಿಲ್ಲನಕೇರಾ ಗ್ರಾಮ ಈತನು ಉದ್ದೇಶಪೂರ್ವಕ ನನ್ನ ಮೈದುನ ಲಾಲಭೀ ಈತನೊಟ್ಟಿಗೆ ಜಗಳ ತೆಗೆದು ಕೈಯಿಂದ ಹೊಡೆದಿದ್ದಲ್ಲದೆ ಜಗಳ ಬಿಡಿಸಲು ಹೋದ ನನಗೆ ಸಾರ್ವಜನಿಕ ರಸ್ತೆಯ ಮೇಲೆ ನನ್ನ ಮಾನಭಂಗ ಮಾಡಬೇಕೆಂಬ ಉದ್ದೇಶದಿಂದ ನನ್ನ ಮೈಮೇಲಿನ ಉಡುಪುಗಳನ್ನು ಹಿಡಿದು ಎಳೆದಾಡಿ ಕಳುಚಲು ಪ್ರಯತ್ನಿಸಿ ನನ್ನಸೀರೆ ಹರಿದು ನನ್ನ ಕಪಾಳಕ್ಕೆ ಹೊಡೆದಿರುತ್ತಾನೆ. ಕಾರಣ ಸದರಿಯವನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ. ನಿನ್ನೆರಾತ್ರಿ ಠಾಣೆಗೆ ಬಂದು ದೂರು ಕೊಡಲು ವಾಹನದ ವ್ಯವಸ್ಥೆ ಇಲ್ಲದ ಕಾರಣ ಬರಲು ಸಾಧ್ಯವಾಗಿಲ್ಲ. ನಿನ್ನೆರಾತ್ರಿ ನನ್ನ ಕಪಾಳ ನೋವಾಗಿದ್ದರಿಂದ ಮನೆಯಲ್ಲಿದ್ದ ಝಂಡುಬಾಮ್ ಹಚ್ಚಿಕೊಂಡು ನೋವು ಕಡಿಮೆ ಮಾಡಿಕೊಂಡಿದ್ದೇನೆ.

ಇತ್ತೀಚಿನ ನವೀಕರಣ​ : 17-11-2021 12:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080