ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-11-2022


ವಡಗೇರ ಪೊಲೀಸ್ ಠಾಣೆ:-
ಗುನ್ನೆ ನಂ: 128/2022 ಕಲಂ: ಮನುಷ್ಯ ಕಾಣೆಯಾದ ಬಗ್ಗೆ: ಇಂದು ದಿನಾಂಕ:16/11/2022 ರಂದು 6-30 ಪಿಎಮ್ ಕ್ಕೆ ಶ್ರೀಮತಿ ಲಲಿತಾಬಾಯಿ ಗಂಡ ಪಾಪಣ್ಣ ಚವ್ಹಾಣ, ವ:28, ಜಾ:ಲಮ್ಮಾಣಿ, ಉ:ಹೊಲಮನೆ ಕೆಲಸ ಸಾ:ಬೀರನಕಲ್ ತಾಂಡಾ ತಾ:ವಡಗೇರಾ ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ತವರು ಮನೆ ಬೀರನಕಲ್ ತಾಂಡಾ ಇರುತ್ತದೆ. ನನ್ನ ತಂದೆ-ತಾಯಿ ನನಗೆ ಸುಮಾರು 13 ವರ್ಷಗಳ ಹಿಂದೆ ನಮ್ಮ ತಾಂಡಾದ ಪಾಪಣ್ಣ ತಂದೆ ಯಂಕಪ್ಪ ಚವ್ಹಾಣ ಸಾ:ಬೀರನಕಲ್ ತಾಂಡಾ ಈತನೊಂದಿಗೆ ಲಗ್ನ ಮಾಡಿಕೊಟ್ಟಿರುತ್ತಾರೆ. ನಮಗೆ 1) ಪ್ರಿಯಾಂಕಾ ವ:09 ವರ್ಷ, 2) ಪ್ರೇಮಕುಮಾರ ವ:07 ವರ್ಷ 3) ಪ್ರೀತಿ ವ:04 ವರ್ಷ ಮತ್ತು 4) ಪವನ ವ:02 ವರ್ಷ ಹೀಗೆ ಒಟ್ಟು ನಾಲ್ಕು ಜನ ಮಕ್ಕಳಿರುತ್ತಾರೆ. ನನ್ನ ಗಂಡನು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ದಿನಾಂಕ:10/11/2022 ರಂದು ಬೆಳಗ್ಗೆ 7-45 ಗಂಟೆ ಸುಮಾರಿಗೆ ನನ್ನ ಗಂಡನಾದ ಪಾಪಣ್ಣ ತಂದೆ ಯಂಕಪ್ಪ ಚವ್ಹಾಣ, ವ:32 ವರ್ಷ ಸಾ:ಬೀರನಕಲ್ ತಾಂಡಾ ಈತನು ಕೆಲಸದ ಪ್ರಯುಕ್ತ ವಡಗೇರಾಕ್ಕೆ ಹೋಗಿ ಬರುತ್ತೇನೆ ಎಂದು ನನಗೆ ಮನೆಯಲ್ಲಿ ಹೇಳಿ ವಡಗೇರಾಕ್ಕೆ ಹೊದನು. ನಾನು ಮಕ್ಕಳೊಂದಿಗೆ ಮನೆಯಲ್ಲಿದ್ದೆನು. ಸಾಯಂಕಾಲ ಆದರೂ ನನ್ನ ಗಂಡ ವಡಗೇರಾಕ್ಕೆ ಹೋದವನು ಮರಳಿ ಮನೆಗೆ ಬರಲಿಲ್ಲ. ನಾನು ಅವನ ಮೊಬೈಲಿಗೆ ಸಂಪಕರ್ಿಸಿದರೆ ಸ್ವಿಚ್ ಆಫ ಆಗಿತ್ತು. ಆಗ ನಾನು ನಮ್ಮ ತಾಂಡಾದ ಯಂಕಪ್ಪ ತಂದೆ ಸಕ್ರೆಪ್ಪ ರಾಠೋಡ, ಶಾಂತಪ್ಪ ತಂದೆ ಡಾಕಪ್ಪ ರಾಠೋಡ, ಚನ್ನಪ್ಪ ತಂದೆ ಸಕ್ರೆಪ್ಪ ರಾಠೋಡ, ಮೇಘಪ್ಪ ತಂದೆ ರಾಮಪ್ಪ ರಾಠೋಡ ಮತ್ತು ಇತರರಿಗೆ ನನ್ನ ಗಂಡನು ಬೆಳಗ್ಗೆ ವಡಗೇರಾಕ್ಕೆ ಹೋದವನು ಇಲ್ಲಿವರೆಗೆ ಮರಳಿ ಬಂದಿರುವುದಿಲ್ಲ ಎಂದು ಹೇಳಿದೆನು. ಆಗ ಅವರು ಎಲ್ಲರೂ ಸೇರಿ ಹುಡುಕಾಡೋಣ ಎಂದು ನಾನು ಮತ್ತು ಸದರಿ ಯಂಕಪ್ಪ ಮತ್ತು ಇತರರು ಸೇರಿ ನನ್ನ ಗಂಡನಿಗೆ ವಡಗೇರಾ, ಯಾದಗಿರಿ, ಉಳ್ಳೆಸುಗೂರು, ಚಟ್ನಳ್ಳಿ ತಾಂಡಾ, ನಾಲ್ವಡಗಿ ತಾಂಡಾ ಮುಂತಾದ ಕಡೆ ಹೋಗಿ ನನ್ನ ಗಂಡನಿಗೆ ಹುಡುಕಾಡಿದರು ನನ್ನ ಗಂಡನು ಸಿಕ್ಕಿರುವುದಿಲ್ಲ. ನನ್ನ ಗಂಡನ ಚಹರೆಪಟ್ಟಿಯು ಈ ಕೆಳಗಿನಂತಿರುತ್ತದೆ. ಎತ್ತರ 5 ಫಿಟ 6 ಇಂಚು, ಸಾಧಾರಣ ಮೈಕಟ್ಟು, ಸಾದಾಗೆಂಪು ಬಣ್ಣ ಮುಖದ ಮೇಲೆ ಸಣ್ಣ ದಾಡಿ ಇರುತ್ತದೆ. ಎಡಗೈ ತೋಳಿನ ಮೇಲೆ ಮಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಮೈಮೇಲೆ ಅರಸಿನ ಬಣ್ಣದ ಶರ್ಟ ಒಳಗಡೆ ಕಪ್ಪು ಚುಕ್ಕೆವುಳ್ಳದ್ದು ಮತ್ತು ನೀಲಿ ಬಣ್ಣದ ಪ್ಯಾಂಟ ಧರಿಸಿರುತ್ತಾನೆ. ಕನ್ನಡ, ಹಿಂದಿ ಮತ್ತು ಲಂಬಾಣಿ ಭಾಷೆ ಮಾತಾಡುತ್ತಾನೆ. ನನ್ನ ಗಂಡನು ನಾನು ಎಲ್ಲಾ ಕಡೆ ಹುಡುಕಾಡಿ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ವಡಗೇರಾಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ನನ್ನ ಗಂಡನು ಮರಳಿ ಬರದೆ ಕಾಣೆಯಾಗಿದ್ದು, ಸದರಿ ನನ್ನ ಗಂಡನಿಗೆ ಪತ್ತೆ ಮಾಡಿಕೊಡಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ನಿಜವಿರುತ್ತದೆ ಎಂದು ಕೊಟ್ಟ ಲಿಖಿತ ದೂರು ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 128/2022 ಕಲಂ: ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ:: 56/2022 ಕಲಂ: 498(ಎ), 323,504,506,ಸಂ/34 ಐ.ಪಿ.ಸಿ ಮತ್ತು ಕಲಂ: 3,4 ಡಿ.ಪಿ.ಎಕ್ಟ್: 16.11.2022 ರಂದು ಸಂಜೆ 5.00 ಗಂಟೆ ಸುಮಾರಿಗೆ ಪಿರ್ಯಾಧಿ ಶ್ರೀ ಮತಿ ಅನ್ನಪೂರ್ಣ ಗಂಡ ತಮ್ಮಣ್ಣ ಪಡಶೆಟ್ಟಿ ವಯಾ-39 ವರ್ಷ ಜಾತಿ-ಲಿಂಗಾಯತ್, ಉ-ಗೃಹಿಣಿ ಮತ್ತು ಖಾಸಗಿ ಶಾಲೆಯಲ್ಲಿ ಶಿಕ್ಷಕಿ ವಾಸ-ಬಸವೇಶ್ವರ ನಗರ ಯಾದಗಿರಿಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಫ್ ಮಾಡಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಂಶವೇನೆಂದರೆ ನನಗೆ ದಿನಾಂಕ: 03.02.2017 ರಂದು ಯಾದಗಿರಿಯ ರಾಯಚೂರಿ ಮೊಹಲ್ಲಾದ ನಿವಾಸಿಯಾದ ಅಯ್ಯಣ್ಣ ಪಡಶೆಟ್ಟಿ ರವರ ಮಗನಾದ ತಮ್ಮಣ್ಣ ಇವರೊಂದಿಗೆ ಗುರು ಹಿರಿಯರ ಸಮ್ಮುಖದಲ್ಲಿ ಯಾದಗಿರಿಯ ವೀರ ಶೈವ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು ಇರುತ್ತದೆ. ಮದುವೆ ನಿಶ್ಚಯ ಕಾಲಕ್ಕೆ ವರನಿಗೆ ಅಂದರೆ ನನ್ನ ಗಂಡನಿಗೆ ಮದುವೆಯಲ್ಲಿ 8 ತೊಲೆ ಬಂಗಾರ ಕೊಡಬೇಕು ಅಂತ ಮಾತುಕತೆ ಆಗಿತ್ತು. ಮಾತುಕತೆಯಲ್ಲಿ ನನ್ನ ಅಣ್ಣನಾದ ಚನ್ನಬಸವ ತಂದೆ ಅಮರೇಶ್ವರ ಸೋದರ ಮಾವನಾದ ವೀರನಗೌಡ ತಂದೆ ಚನ್ನಪ್ಪಗೌಡ ಸಾ-ರಾಯಚೂರು, ಸೋದರ ಮಾವನ ಮಗನಾದ ಸೂಗುರೇಶ್ವರ ತಂದೆ ವೀರನಗೌಡ ಹಾಗೂ ನಮ್ಮ ಚಿಕ್ಕಮ್ಮಳ ಮಗನಾದ ರಾಜಾ ಸಮರಸೇನ ಮೋದಿ ತಂದೆ ಕಾಶಿನಾಥ ಮೋದಿ ಸಾ-ಕಲಬುರಗಿ ರವರ ಸಮಕ್ಷಮದಲ್ಲಿ ಮದುವೆಯಲ್ಲಿ ಕೊಟ್ಟಿರುತ್ತಾರೆ. ಬಾಕಿ ಇರುವ 1 ತೊಲೆ ಬಂಗಾರ ನಂತರ ಕೊಡುವುದಾಗಿ ಹೇಳಿದ್ದು ಇರುತ್ತದೆ.
ಮದುವೆಯಾದ ಮೇಲೆ ನಾನು ನನ್ನ ಗಂಡನ ಮನೆಗೆ ಹೋಗಿ ಸಂಸಾರ ಮಾಡಿಕೊಂಡು 6 ತಿಂಗಳು ಮಾತ್ರ ನನ್ನ ಗಂಡ ಮತ್ತ ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದರು. ನಂತರದ ದಿನಗಳಲ್ಲಿ ಮದುವೆಯಲ್ಲಿ ಕೊಡಬೇಕಾದ 1 ತೊಲೆ ಬಂಗಾರ ತವರುವಂತೆ ನನಗೆ ಪೀಡುಸುತ್ತಿದ್ದರು. ನನ್ನಗಂಡ ತಮ್ಮಣ್ಣ ಈತನು ವಿನಾಃಕಾರಣ ನನಗೆ ಹೊಡೆಬಡೆ ಮಾಡಿ , ರಂಡಿ ಸೂಳಿ, ನೀನು ನನಗೆ ತಕ್ಕಳಾದ ಹೆಂಡತಿ ಇಲ್ಲ ನಿನ್ನ ತವರು ಮನೆಯಿಂದ ಇನ್ನೂ 1 ತೊಲೆ ಬಂಗಾರ ತೆಗೆದುಕೊಂಡು ಅಲ್ಲಿವರಗೆ ನಮ್ಮ ಮನೆಯಲ್ಲಿ ಇರಬ್ಯಾಡ ಅಂತ ಹೊಡೆಬಡೆ ಮಾಡುತ್ತಿದ್ದನು. ನನ್ನ ಗಂಡ ಮತ್ತು ಗಂಡನ ಮನೆಯವರು ನನಗೆ ಕೊಡುತ್ತಿದ್ದ ಕಿರುಕುಳವನ್ನು ನಾನು ಸಹಿಸಿಕೊಂಡು ಹಾಗೇ ಅವರೊಂದಿಗೆ ಜೀವನ ಮಾಡುತ್ತಿದ್ದೇನು. ನಂತರ ಬರು ಬರುತ್ತಾ ಒಂದು ತೊಲೆ ಬಂಗಾರ ಮತ್ತು 1 ಲಕ್ಷ ರೂ ಕೊಡುವಂತೆ ಕಿರುಕುಳ ಕೊಡಲು ಹತ್ತಿದ್ದರು. ನನ್ನ ಅತ್ತೆಯಾದ ಶಕುಂತಲಾ ಈಕೆಯು ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲ ಸೂಳೆ ಅಂತ ಬೈಯುತ್ತಿದ್ದರು. ಮತ್ತು ನಾನು ಮನೆಯಲ್ಲಿ ಎಲ್ಲಿಯಾದರೂ ಕುಂತರೂ, ನಿಂತರೂ ಯಾವುದಕ್ಕೂ ನನಗೆ ಸೇರುತ್ತಿರಲಿಲ್ಲ. ನನಗೆ ಕೀಳು ದೃಷ್ಟಿಯಿಂದ ನೋಡುತ್ತಿದ್ದರು. ಮನೆಯಲ್ಲಿ ಎಲ್ಲಾ ಕೆಲಸವನ್ನು ನಾನೇ ಮಾಡಿಕೊಂಡು ಹೋಗುತ್ತಿದ್ದೇನು ಅಷ್ಟಾದರೂ ನನಗೆ ಹೊಟ್ಟೆ ಸರಿಯಾಗಿ ಊಟಕ್ಕೆ ಹಾಕುತ್ತಿರಲಿಲ್ಲ. ನಾನು ಬೇಸತ್ತು ಬಸವೇಶ್ವರ ನಗರದಲ್ಲಿರುವ ನನ್ನ ಅಕ್ಕಳಾದ ವಿಜಯಲಕ್ಷ್ಮಿ ತಂದೆ ಅಮರೇಶ್ವರ ರವರ ಮನೆಯಲ್ಲಿದ್ದೇನು. ನಂತರ ನನ್ನ ಗಂಡ ತಮ್ಮಣ್ಣ ಇವರು ನನಗೆ ಕರೆದುಕೊಂಡು ಹೋಗಿದ್ದರು. ಪುನಃ ಅದೇ ರೀತಿ ನನಗೆ 1 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತ ಹೇಳಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡಲು ಹತ್ತಿದ್ದರು, ನನ್ನ ತ್ರಾಸ್ ನೋಡದೇ ನನ್ನ ಅಕ್ಕ ವಿಜಯಲಕ್ಷ್ಮಿ ಇವರು ನನ್ನ ಗಂಡ ತಮ್ಮಣ್ಣ ರವರಿಗೆ 1 ಲಕ್ಷ ರೂ ಹಣವನ್ನು ಕೊಟ್ಟಿರುತ್ತಾಳೆ. ಸ್ವಲ್ಪ ದಿನ ಚೆನ್ನಾಗಿದ್ದು, ನಂತರ ಅದೇ ರೀತಿ ಕಿರುಕುಳ ಕೊಡಲು ಹತ್ತಿದ್ದರು. ನಂತರ ನಾನು ಗರ್ಭೀಣಿಯಾಗಿದ್ದು, ಮೊದಲನೆಯ ಹೆರಿಗೆಗೆ ಹೋಗಿದ್ದಾಗ ವೈದ್ಯರು ಪರೀಕ್ಷಿಸಿ ಅವಳಿ ಮಕ್ಕಳಿದ್ದಾರೆ ಅಂತ ತಿಳಿಸಿರುತ್ತಾರೆ. ಆಗ ನನಗೆ ಅವಳಿ ಮಕ್ಕಳು ಒಂದು ಹೆಣ್ಣು ಮಗು ಒಂದು ಗಂಡು ಮಗು ಜನಿಸಿದ್ದು, ಸ್ವಲ್ಪ ದಿನದ ಮೇಲೆ ಹೆಣ್ಣು ಮಗು ತೀರಿ ಹೋಗಿರುತ್ತದೆ. ನಂತರ ಗಂಡನ ಮನೆಗೆ ಹೋದಾಗ ನನ್ನ ಅತ್ತೆ ಶಕುಂತಲಾ ನನಗೆ ಸರಿಯಾಗಿ ಊಟಕ್ಕೆ ಕೊಡುತ್ತಿರಲಿಲ್ಲಾ. ನಾನು ಬಾಣಂತಿ ಇದ್ದರು ಮನೆಯಲ್ಲಿ ಎಲ್ಲಾ ಕೆಲಸ ಮಾಡುವಂತೆ ನನ್ನ ಅತ್ತೆ ನನಗೆ ಕಿರುಕುಳ ನೀಡುತ್ತಿದ್ದಳು. ಮಗುವಿಗೂ ಸಹ ಸರಿಯಾಗಿ (Care) ಮಾಡುತ್ತಿರಲಿಲ್ಲಾ. ನನಗೆ ಉಳಿದ 1 ತೊಲೆ ಬಂಗಾರ ತರುವ ವರಗೆ ನಮ್ಮ ಮನೆಗೆ ಬರಬ್ಯಾಡ ಹಾಗೇ ಬಂದರೇ ನಿನಗೆ ಜೀವ ಸಮೇತ ಬಿಡಲ್ಲಾ ಅಂತ ಜೀವ ಬೆದರಿಕೆ ಹಾಕಿ ನನ್ನ ಗಂಡ ತಮ್ಮಣ್ಣ, ನನ್ನ ಅತ್ತೆ ಶಕುಂತಲಾ, ಮತ್ತು ಮೈದುನ ಆನಂದ ತಂದೆ ಅಯ್ಯಣ್ಣ ಇವರು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿ ನನಗೆ ಮನೆಯಿಂದ ಹೊರಗಡೆ ಹಾಕಿದ್ದರಿಂದ ನಾನು ನನ್ನ ಮಗನೊಂದಿಗೆ ಬಸವೇಶ್ವರ ನಗರದಲ್ಲಿರುವ ನನ್ನ ಅಕ್ಕಳಾದ ವಿಜಯಲಕ್ಷ್ಮಿ ರವರ ಮನೆಯಲ್ಲಿ ಬಂದು ಇದ್ದೇನು. 4 ವರ್ಷಗಳಿಂದ ನನ್ನ ಅಕ್ಕಳ ಮನೆಯಲ್ಲಿ ನನ್ನ ಮಗನೊಂದಿಗೆ ಇರುತ್ತಿದ್ದರು, ಸಹ ನನ್ನ ಗಂಡ ನಮಗೆ ಉಪಜೀವನಕ್ಕೆ ಏನು ಕೊಡದೇ ಕಡೆಗಾಣಿಸುತ್ತಾ ಬಂದಿದ್ದು, ಇಲ್ಲಿಯವರಗೆ ನನಗೆ ಕರೆದುಕೊಂಡು ಹೋಗಲು ಬಂದಿರುವುದಿಲ್ಲ. ದಿನಾಂಕ: 12.10.2022 ರಂದು ಸಂಜೆ 5.00 ಗಂಟೆ ಸುಮಾರಿಗೆ ನನ್ನ ಗಂಡ ತಮ್ಮಣ್ಣ ತಂದೆ ಅಯ್ಯಣ್ಣ ಇವರು ಬಸವೇಶ್ವರ ನಗರದಲ್ಲಿರುವ ನನ್ನ ಅಕ್ಕಳ ಮನೆಗೆ ಬಂದು ನನ್ನ ಮಗನಿಗೆ ಕೊಡು ನಾನು ಕರೆದುಕೊಂಡು ಹೋಗುತ್ತೇನೆ ಅಂತ ನನ್ನ ಜೊತೆ ಜಗಳ ಮಾಡಿ ನನಗೆ ಅವ್ಯಾಚವಾಗಿ ಬೈದು ಹೊಡಬಡೆ ಮಾಡುತ್ತಿದ್ದಾಗ ನನ್ನ ಅಕ್ಕಂದಿರಾದ 1. ವಿಜಯಲಕ್ಷ್ಮಿ ತಂದೆ ಅಮರೇಶ್ವರ ಮತ್ತು 2. ಭಾಗ್ಯವತಿ ಗಂಡ ಅಶೋಕ ರವರು ಬಂದು ಬಿಡಿಸಿರುತ್ತಾರೆ. ಆದರೂ ನಾನು ಸಹಿಸಿಕೊಂಡರು ನನ್ನ ಗಂಡ ನನ್ನನ್ನು ಕರೆದುಕೊಂಡು ಹೋಗಿರುವುದಿಲ್ಲ. ಈ ಬಗ್ಗೆ ನಾನು ನನ್ನ ಗಂಡ ಮತ್ತು ಗಂಡನ ಮನೆಯವರ ವಿರುದ್ದ ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದಾಗ ಪೊಲೀಸರು ನನಗೆ ಮತ್ತು ನನ್ನ ಗಂಡನಿಗೆ ಕೌನ್ಸಲಿಂಗ್ ,ಸಲುವಾಗಿ ಶಿಶು ಅಬೀವೃದ್ದಿ ಅಧಿಕಾರಿಗಳು ಯಾದಗಿರಿ ರವರ ಹತ್ತಿರ ಕಳುಹಿಸಿಕೊಟ್ಟಿದ್ದು, ಶಿಶು ಅಬೀವೃದ್ದಿ ಅಧಿಕಾರಿಗಳು 2 ಸಲ ನನಗೆ ಮತ್ತು ನನ್ನ ಗಂಡ ತಮ್ಮಣ್ಣನಿಗೆ ಕೌನ್ಸಲಿಂಗ್ ಮಾಡಿರುತ್ತಾರೆ. ಆದರೆ ನಾನು ನನ್ನ ಗಂಡನ ಮನೆಗೆ ಹೋದರೆ ನನಗೆ ಮತ್ತು ನನ್ನ ಮಗನಿಗೆ ಪ್ರಾಣ ಭಯ ಇದ್ದುದ್ದರಿಂದ ನಾನು ನನ್ನ ಗಂಡನ ಮನೆಗೆ ಹೋಗಿಲ್ಲ ಮುಂದೆಯೂ ಸಹ ಹೋಗುವುದಿಲ್ಲ. ಕಾರಣ ಮದುವೆಯಲ್ಲಿ 8 ತೊಲೆ ಬಂಗಾರ ಕೊಡಬೇಕು ಅಂತ ಮಾತಿನಂತೆ 7 ತೊಲೆ ಬಂಗಾರ ಕೊಟ್ಟಿದ್ದು, 1 ತೊಲೆ ಬಂಗಾರದ ಸಲುವಾಗಿ ನನ್ನ ಗಂಡ ತಮ್ಮಣ್ಣ ತಂದೆ ಅಯ್ಯಣ್ಣ ಪಡಶೆಟ್ಟಿ, ಅತ್ತೆಯಾದ ಶಕುಂತಲಾ ಗಂಡ ಅಯ್ಯಣ್ಣ ಪಡಶೆಟ್ಟಿ ಹಾಗೂ ಮೈದುನನಾದ ಆನಂದ ತಂದೆ ಅಯ್ಯಣ್ಣ ಪಡಶೆಟ್ಟಿ ರವರು ನನಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಅವ್ಯಾಚ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ ನನಗೆ ಮನೆಯಿಂದ ಹೊರಗಡೆ ಹಾಕಿರುವ ನನ್ನ ಗಂಡ ಮತ್ತು ಗಂಡನ ಮನೆಯವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಂಡು ನನಗೆ ನ್ಯಾಯಾ ಒದಗಿಸಿ ಕೊಡಲು ವಿನಂತಿ ಅಂತ ಕೊಟ್ಟ ದೂರಿನ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ: 56/2022 ಕಲಂ: 498(ಎ), 323,504,506,ಸಂ/34 ಐ.ಪಿ.ಸಿ ಮತ್ತು ಕಲಂ: 3,4 ಡಿ.ಪಿ.ಎಕ್ಟ್ ನೇದ್ದರ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 165/2022 ಕಲಂ 336, 338 ಐಪಿಸಿ: ದಿನಾಂಕ 14.11.2022 ರಂದು ಸಮಯ ಸಂಜೆ 5:30 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಹತ್ತಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆತನ ತಮ್ಮನಾದ ಆರೋಪಿತನು ತಮ್ಮ ಟ್ರ್ಯಾಕ್ಟರ ಇಂಜಿನ್ ನಂಬರ ಕೆಎ-33-ಟಿಎ-1219 ನೇದ್ದನ್ನು ತೆಗೆದುಕೊಂಡು ಫಿರ್ಯಾದಿಯು ಕೆಲಸ ಮಾಡುತ್ತಿದ್ದಲ್ಲಿಗೆ ಹೋಗಿ ಇಳೀಜಾರಿನಲ್ಲಿ ಚಾಲು ಇಟ್ಟು ನಿರ್ಲಕ್ಷ ವಹಿಸಿ ಕೆಳಗೆ ಇಳಿಯುತ್ತಿದ್ದಾಗ ಟ್ರ್ಯಾಕ್ಟರ ಮುಂದೆ ಹೋಗಿ ಫಿರ್ಯಾದಿಯ ಮೇಲೆ ಹೋಗಿದ್ದು ಅದರಿಂದ ಫಿರ್ಯಾದಿಗೆ ಪಕ್ಕೆಲುಬುಗಳು ಮುರಿದಂತಾಗಿ ಭಾರಿ ಸ್ವರೂಪದ ಗಾಯವಾಗಿದ್ದ ಬಗ್ಗೆ ಫೀರ್ಯಾದಿತು ತಡವಾಗಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ ಠಾಣೆ ಗುನ್ನೆ ನಂಬರ 165/2022 ಕಲಂ:336, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 120/2022 ಕಲಂ. 15(ಎ), 32(3) ಕೆ.ಇ ಆಕ್ಟ್: ಇಂದು ದಿನಾಂಕ.16/11/2022 ರಂದು 1-15 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆಯರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ; 16/11/2022 ರಂದು 11-15 ಎಎಮ್ ಸುಮಾರಿಗೆ ನಾನು ಠಾಣೆಯಲ್ಲಿ ಇದ್ದಾಗ ಯಾದಗಿರಿ ನಗರದ ಟಿಬಿ ರೋಡ್ ಮದನಪೂರಗಲ್ಲಿ ಏರಿಯಾದ ಗಯಾಬಸಾಬ ದಗರ್ಾದ ಹತ್ತಿರ ಒಬ್ಬ ವ್ಯಕ್ತಿಯು ತನ್ನ ಅಂಗಡಿಯ ಮುಂದುಗಡೆ ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೋಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ, ಕೂಡಲೇ ಇಬ್ಬರು ಪಂಚರನ್ನು ಠಾಣೆಗೆ ಬರಮಾಡಿಕೊಂಡು, ನಾನು ಹಾಗೂ ಠಾಣೆಯ ಜೀಪ ಚಾಲಕ ರವೀಂದ್ರ ಪಿ.ಸಿ. 168, ಮಡಿವಾಳಪ್ಪ ಪಿ.ಸಿ-105 ಹಾಗೂ ಇಬ್ಬರು ಪಂಚರು ಕೂಡಿ ಠಾಣೆಯಿಂದ 11-45 ಎ.ಎಮ್ ಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೊರಟು ಹಳೆ ಬಸನಿಲ್ದಾಣ ಮುಖಾಂತರ ಮಡ್ಡ ಲಾಡ್ಜ್ ಹತ್ತಿರ ತಲುಪಿ ಜೀಪ ನಿಲ್ಲಿಸಿ, ಅಲ್ಲಿಂದ ಮುಂದೆ ನಡೆದುಕೊಂಡು ಹೋಗಿ ಗಯಾಬಸಾಬ ದಗರ್ಾದ ಮರೆಯಲ್ಲಿ ನಿಂತು ನೋಡಲಾಗಿ ಒಂದು ಕಿರಾಣಿ ಅಂಗಡಿಯ ಮುಂದುಗಡೆ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದು ನೋಡಿ ಖಚಿತಪಡಿಸಿಕೊಂಡು 12-00 ಪಿಎಮ್ ಕ್ಕೆ ದಾಳಿ ಮಾಡಿ ಹಿಡಿದು ವಿಚಾರಿಸಲು ವಿಚಾರಿಸಲು ಅವನು ತನ್ನ ಹೆಸರು ಅಶೋಕಕುಮಾರ ಚಿದ್ರಿ ತಂದೆ ನಾಗಶೆಟ್ಟಿ ಚಿದ್ರಿ ವ;33 ಜಾ; ಲಿಂಗಾಯತ ಉ; ಕೂಲಿಕೆಲಸ ಸಾ; ಟಿಬಿ ರೋಡ್ ಮದನಪೂರಗಲ್ಲಿ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸ್ಥಳದಲ್ಲಿದ್ದ ಓರಿಜಿನಲ್ ಚಾಯ್ಸ್ ವಿಸ್ಕಿಯ 90 ಎಮ್.ಎಲ್.ನ ಒಟ್ಟು 18 ಪೌಚಗಳು ಇದ್ದು, ಒಂದಕ್ಕೆ 35.13/- ರೂ|| ಗಳು, ( 1,620 ಎಮ್.ಎಲ್ ಮಧ್ಯ) ಇದ್ದು ಅ.ಕಿ. 632.34/- ರೂ. ನೇದ್ದು ಸಿಕ್ಕಿದ್ದು, ಸದರಿಯವುಗಳಲ್ಲಿಯ ಎರಡು ಮಧ್ಯದ ಪೌಚನ್ನು ರಾಸಾಯನಿಕ ಪರೀಕ್ಷೆ ಕುರಿತು ಪ್ರತ್ಯೇಕವಾಗಿ ಪಂಚರ ಸಮಕ್ಷಮ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಅದರ ಮೇಲೆ ಙಖಿ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿಪಡಿಸಿಕೊಳ್ಳಲಾಯಿತು. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ; 16/11/2022 ರಂದು 12-00 ಪಿಎಮ್ ದಿಂದ 1-00 ಪಿಎಮ್ ದವರೆಗೆ ಸ್ಥಳದಲ್ಲಿದ್ದು, ಲ್ಯಾಪಟಾಪದಲ್ಲಿ ಟೈಪ ಮಾಡಿ ಮುಗಿಸಿದ್ದು ಇರುತ್ತದೆ. ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ 1-15 ಪಿಎಂಕ್ಕೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ಜ್ಞಾಪನಾ ಪತ್ರವನ್ನು ಒಪ್ಪಿಸುತ್ತಿದ್ದು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಅಂತಾ ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 120/2022 ಕಲಂ.15(ಎ), 32(3) ಕೆ.ಇ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 164/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 16/11/2022 ರಂದು 8.15 ಪಿಎಂ ಕ್ಕೆ ಶ್ರೀ ಹಣಮಂತ ಪಿ.ಎಸ್.ಐ(ಕಾಸು) ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಹಣಮಂತ ಪಿ.ಎಸ್.ಐ(ಕಾಸು) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ನಾನು ಇಂದು ದಿನಾಂಕ 16/10/2022 ರಂದು 6.00 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಕಿರದಳ್ಳಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು, ನಮ್ಮ ಠಾಣೆಯ ಶಿವರಾಜ ಹೆಚ್.ಸಿ 85, ಪ್ರಭುಗೌಡ ಪಿಸಿ 361 ಮತ್ತು ಸೈಯದ ಪಿಸಿ 106 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 6.10 ಪಿಎಂ ಕ್ಕೆ ಹೊರಟು ಕಿರದಳ್ಳಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ 6.25 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 6.30 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ಗಂಗಾಧರ ವಿಶ್ವಕರ್ಮ ವ|| 48 ಜಾ|| ವಿಶ್ವಕರ್ಮ ಉ|| ಕೂಲಿ ಸಾ|| ಕಿರದಳ್ಳಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 1040/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 6.30 ಪಿಎಂ ದಿಂದ 7.30 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 164/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 166/2022 ಕಲಂ: 307,504,506 ಸಂ. 34 ಐಪಿಸಿ: ಈ ಪ್ರಕರಣದಲ್ಲಿ ಫಿಯರ್ಾದಿಗೆ ಈಗ್ಗೆ ಸುಮಾರು 13 ವರ್ಷಗಳ ಹಿಂದೆ ದಿಗ್ಗಿ ಸೈದಾಪೂರ ಗ್ರಾಮದ ಶಿವಪುತ್ರ ಬಡಿಗೇರ ಇತನಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ ಒಂದೆರಡು ವರ್ಷದವರೆಗೆ ಗಂಡ ಹೆಂಡತಿ ಇಬ್ಬರೂ ಅನ್ಯೋನ್ಯವಾಗಿದ್ದರು, ಆದರೆ ಈಗ್ಗೆ ಸುಮಾರು 10 ವರ್ಷಗಳಿಂದ ಆಕೆಯ ಗಂಡ ಆಕೆಯ ಶೀಲದ ಮೇಲೆ ಸಂಶಯಪಟ್ಟು ವಿನಾಕಾರಣ ಅವಳಿಗೆ ಹಿಂಸೆ ನೀಡುತ್ತಾ ಬಂದಿದ್ದ. ನಮ್ಮ ಅಕ್ಕಗೆ ಯಾಕೇ ಕಿರಕುಳ ಕೊಡುತ್ತಿದ್ದಿ, ಯಾಕೇ ವಿನಾಕಾರಣ ಅವಳ ಮೇಲೆ ಸಂಶಯಪಟ್ಟು ಮಾನಸಿಕ ನೆಮ್ಮದಿ ಹಾಳು ಮಾಡುತ್ತಿದ್ದಿ ಅಂತಾ ಫಿಯರ್ಾದಿಯ ತಮ್ಮನಾದ ಆನಂದಕುಮಾರ ಇತನು ತನ್ನ ಮಾವನಿಗೆ ಕೇಳಿದ್ದಕ್ಕೆ, ಈ ವಿಷಯದಲ್ಲಿ ಅವರ ಮದ್ಯ ತಂಟೆ ತಕರಾರು ಆಗಿದ್ದು, ಇದೇ ವೈಮನಸ್ಸಿನಿಂದ ಆನಂದಕುಮಾರನಿಗೆ ಕೊಲೆ ಮಾಡುವ ಉದ್ದೇಶದಿಂದ ದಿನಾಂಕಃ 14/11/2022 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಶಿವಪುತ್ರ ಬಡಿಗೇರ ಹಾಗೂ ಸಂಗಡ ಇನ್ನೂ 03 ಜನರು ಕೂಡಿ ಗಾಜರಕೋಟ ಗ್ರಾಮಕ್ಕೆ ಬಂದು, ತಮ್ಮ ಮನೆಯ ಮುಂದೆ ಕಟ್ಟೆಯ ಮೇಲೆ ಮಂಚ ಹಾಕಿಕೊಂಡು ಮಲಗಿದ್ದ ಆನಂದಕುಮಾರನಿಗೆ ಬಡಿಗೆಗಳಿಂದ ತಲೆಗೆ ಹೊಡೆದು ಭಾರಿ ರಕ್ತ ಮತ್ತು ಗುಪ್ತಗಾಯ ಪಡಿಸಿ ಮರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಲು ಪ್ರಯತ್ನಸಿದಲ್ಲೆ ಫಿಯರ್ಾದಿಗೂ ಕೂಡ ಜೀವದ ಬೆದರಿಕೆ ಹಾಕಿರುವ ಬಗ್ಗೆ ದೂರು.

 

ಇತ್ತೀಚಿನ ನವೀಕರಣ​ : 19-11-2022 10:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080