ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-12-2021

ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ: 77/2021 ಕಲಂ: 10,11 ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 : ಇಂದು ದಿನಾಂಕ 16.12.2021 ರಂದು 1:00 ಪಿ.ಎಮ್ ಗಂಟೆಗೆ ಪಿರ್ಯಾದಿ ಶ್ರೀ ಲಾಲಸಾಬ ತಂದೆ ಇಮಾಮಸಾಬ ಪೀರಾಪೂರ ವಯಸ್ಸು:32 ವರ್ಷ ಪೊ:9972219600 ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಶಿಶು ಅಭಿವೃದ್ದಿ ಕಛೇರಿ ಸುರಪೂರ ತಾಲೂಕ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ದಿನಾಂಕ:07-12-2021 ರಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಗಳ ಕಚೇರಿ ಯಾದಗಿರ ರವರಿಂದ ನಮ್ಮ ಕಾಯರ್ಾಲಯಕ್ಕೆ ಒಂದು ಪತ್ರ ಬಂದಿದ್ದು ಅದರ ಸಾರಾಂಶವೆನೆಂದರೇ ಸುರಪುರ ತಾಲೂಕಿನ ಯಾಳಗಿ ತಾಂಡಾದ ಸದರಿ ಮಗುವಾದ ........ ತಂ/ ರವಿಕುಮಾರ ವ:17 ಜಾತಿ: ಲಂಬಾಣಿ ಬಾಲ್ಯ ವಿವಾಹಕ್ಕೆ ಒಳಗಾಗಿರುತ್ತಾಳೆ ಎಂದು ಮಕ್ಕಳ ಸಹಾಯವಾಣಿ-1098 ಗೆ ಕರೆಮಾಡಿ ತಿಳಿಸಿರುತ್ತಾರೆ. ನಂತರ ಮಾಹಿತಿಯನ್ನು ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿಗಳಾದ ರಾಜೇಂದ್ರಕುಮಾರ ಯಾದವ, ಕಾನೂನು ಅಧಿಕಾರಿಗಳು, ದಶರಥ ನಾಯಕ ಮಕ್ಕಳ ರಕ್ಷಣಾಧಿಕಾರಿಗಳು, ಮಕ್ಕಳ ಸಹಾಯವಾಣಿ-1098 ಸಿಬ್ಬಂದಿಯಾದ ಶ್ರೀಮತಿ ಶೃತಿ ಪತ್ತಾರ, ಇವರು ದಿನಾಂಕ:25-08-2021 ರಂದು ಸದರಿ ಮಗುವನ್ನು ರಕ್ಷಿಸಿ ಸರಕಾರಿ ಬಾಲಕಿಯರ ಬಾಲಮಂದಿರಕ್ಕೆ ತಂದು ಬಿಟ್ಟಿದ್ದು ಇರುತ್ತದೆ. ನಂತರ ಮಗುವನ್ನು ಪೋಷಕರ ವಶಕ್ಕೆ ಬಿಡಲಾಗಿದೆ. ನಂತರ ಸದರಿ ಮಗುವು ತಮ್ಮ ಆಪ್ತ ಸಮಾಲೋಚನೆಯಲ್ಲಿ ಬಾಲ್ಯ ವಿವಾಹ ಆಗಿರುವುದಾಗಿ ತಿಳಿಸಿರುತ್ತಾಳೆ. ಸದರಿ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಒಪ್ಪಿಸಲಾಗಿದ್ದು ಇರುತ್ತದೆ. ನಂತರ ದೂರುದಾರರು ದಿನಾಂಕ:03-12-2021ರಂದು ಮತ್ತೊಮ್ಮೆ ಮಕ್ಕಳ ಸಹಾಯವಾಣಿಗೆ ಕರೆಮಾಡಿ ಸದರಿ ಮಗುವಿನ ವಿವಾಹವಾದ ಫೋಟೋಗಳನ್ನು ಲಗತ್ತಿಸಿ ದೂರನ್ನು ಸಲ್ಲಿಸಿರುತ್ತಾರೆ. ಸದರಿ ಫೊಟೋಗಳ ಆಧಾರದ ಮೇಲೆ ಸದರಿ ಮಗುವಿಗೆ ದಿನಾಂಕ:26-04-2021 ರಂದು 12:00 ಪಿಎಮ್ ಸುಮಾರಿಗೆ ಹುಣಸಗಿ ತಾಲೂಕಿನ ಅನಿಲ್ ತಂ/ಬಾಬು ಚವ್ಹಾಣ ಸಾ: ಬೊಮ್ಮಗುಡ್ಡ ತಾಂಡಾ (ಬೈಲಕುಂಟಿ) ಈತನೊಂದಿಗೆ ವರನ ಮನೆಯ ಮುಂದೆ ಬಾಲ್ಯ ವಿವಾಹವನ್ನು ನೆರವೇರಿಸಿರುತ್ತಾರೆ. ಸದರಿ ಬಾಲಕಿಯ ವಯಸ್ಸು ಶಾಲಾ ದಾಖಲಾತಿ ಪ್ರಕಾರ 13-06-2004 ಇರುತ್ತದೆ. ಸದರಿ ದಾಖಲಾತಿ ಪ್ರಕಾರ ಬಾಲಕಿಗೆ 17 ವರ್ಷ 6ತಿಂಗಳು ಆಗಿದ್ದು ಇರುತ್ತದೆ. ಆದ್ದರಿಂದ ಸದರಿ ವಿವಾಹವು ಬಾಲ್ಯ ವಿವಾಹವಾಗಿದ್ದು ಕಾರಣ ಬಾಲ್ಯ ವಿವಾಹ ನೇರವೇರಿಸಿದ ತಪ್ಪಿತಸ್ಥರಾದ ಬಾಲಕಿಯ ಪೋಷಕರ ಮೇಲೆ ಬಾಲ್ಯ ವಿವಾಹ ನಿಷೇದ ಕಾಯ್ದೆ-2006 ರಲಿ ಪ್ರಕರಣ ದಾಖಲಿಸಬೇಕು ಅಂತಾ ಸಾರಾಂಶವಿದ್ದು ಕಾರಣ ........ ತಂ/ ರವಿಕುಮಾರ ಇವರ ಬಾಲ್ಯ ವಿವಾಹವನ್ನು ನೇರವೇರಿಸಿದ ಅವರ ಪೋಷಕರಾದ 1)ರವಿಕುಮಾರ ತಂ/ನೀಲಪ್ಪ ರಾಠೋಡ ಸಾ:ಯಾಳಗಿ ತಾಂಡಾ (ತಂದೆ) 2)ರೇಣುಕಾ ಗಂ/ರವಿಕುಮಾರ ರಾಠೋಡ ಸಾ:ಯಾಳಗಿ ತಾಂಡಾ (ತಾಯಿ) ಮತ್ತು ಬಾಲಕಿಯ ಗಂಡನಾದ 3)ಅನೀಲ ತಂ/ ಬಾಬು ಚವ್ಹಾಣ, ಸಾ: ಬೊಮ್ಮಗುಡ್ಡ ತಾಂಡಾ 4)ಬಾಬು ತಂ/ವಾಲಪ್ಪ ಚವ್ಹಾಣ, ಸಾ: ಬೊಮ್ಮಗುಡ್ಡ ತಾಂಡಾ (ವರನ ತಂದೆ) 5) ಗೌರಿಬಾಯಿ ಗಂ/ಬಾಬು ಚವ್ಹಾಣ ಸಾ: ಬೊಮ್ಮಗುಡ್ಡ ತಾಂಡಾ (ವರನ ತಾಯಿ) ಇವರ ವಿರುದ್ದ ಬಾಲ್ಯ ವಿವಾಹ ನಿಷೇದ ಕಾಯ್ದೆ-2006 ರಡಿ ಪ್ರಕರಣ ದಾಖಲಿಸಲು ಈ ಮೂಲಕ ಕೋರಲಾಗಿದೆ. ನನಗೆ ಕೆಂಭಾವಿ ಪುರಸಭೆ ಚುನಾವಣಾ ಕರ್ತವ್ಯ ನೀಮಿತ್ತ ಸೇಕ್ಟರ್ ಅಧಿಕಾರಿ ಎಂದು ದಿನಾಂಕ:08-12-2021 ರಂದು ನೇಮಕ ಮಾಡಿದ್ದರಿಂದ ಸದರಿ ದೂರನ್ನು ಸಲ್ಲಿಸಲು ವಿಳಂಬವಾಗಿರುತ್ತದೆ. ಅಂತ ಸಲ್ಲಿಸಿದ ಪಿರ್ಯಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:77/2021 ಕಲಂ:10,11 ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 17-12-2021 10:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080