ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-08-2021

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ : 40/2021 ಕಲಂ 279, 338, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ದಿನಾಂಕ 02/08/2021 ರಂದು ಸಮಯ 8-30 ಪಿ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಗಂಜ್ ಕ್ರಾಸ್ ಹತ್ತಿರ, ಈ ಕೇಸಿನ ಪಿಯರ್ಾದಿಯವರ ಗಂಡನಾದ ಗಾಯಾಳು ರಾಜಶೇಖರ ವಯ;51 ವರ್ಷ, ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಎಸ್-3618 ನೇದ್ದನ್ನು ನಡೆಸಿಕೊಂಡು ಗಂಜ್ ಕಡೆಯಿಂದ ಹೊಸಳ್ಳಿ ಕ್ರಾಸ್ ಕಡೆಗೆ ಬರುವಾಗ ಈ ಕೇಸಿನ ಆರೋಪಿತನಾದ ಲಾರಿ ನಂಬರ ಕೆಎ-32, ಡಿ-0062 ನೇದ್ದರ ಚಾಲಕನು ತನ್ನ ಲಾರಿಯನ್ನು ಯಾದಗಿರಿಯಿಂದ ಮುಂಡರಗಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಜರುಗಿದ್ದು, ಈ ಅಪಘಾತದಲ್ಲಿ ಗಾಯಾಳು ರಾಜಶೇಖರ ಈತನಿಗೆ ತಲೆಗೆ ಭಾರೀ ಒಳಪೆಟ್ಟಾಗಿ ಮೂಚರ್ೆ ಹೋಗಿದ್ದು ಇರುತ್ತದೆ. ಈ ಅಪಘಾತದ ನಂತರ ಲಾರಿ ಚಾಲಕನು ತನ್ನ ವಾಹನವನ್ನು ಘಟನಾ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಈ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿ ಇಂದು ದಿನಾಂಕ 03/08/2021 ರಂದು ಲಾರಿ ಚಾಲಕನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ತಡವಾಗಿ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 40/2021 ಕಲಂ 279, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಇಂದು ದಿನಾಂಕ 16/08/2021 ರಂದು ಸದರಿ ಪ್ರಕರಣದಲ್ಲಿ ಪಿಯರ್ಾದಿಯವರು ಠಾಣೆಗೆ ಹಾಜರಾಗಿ ತಮ್ಮದೊಂದು ಪಿಯರ್ಾದಿ ಪುರವಣಿ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ಈ ಕೇಸಿನ ಗಾಯಾಳು ರಾಜಶೇಖರ ಈತನಿಗೆ ದಿನಾಂಕ 02/08/2021 ರಂದು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಅದೇ ದಿವಸ ಕಲಬುರಗಿಗೆ ರೆಫರ್ ಮಾಡಿದ್ದರಿಂದ ಗಾಯಾಳು ರಾಜಶೇಖರ ಈತನಿಗೆ ಕಲಬುರಗಿಯ ಎ.ಎಸ್.ಎಮ್. ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ಇರುತ್ತದೆ. ದಿನಾಂಕ 02/08/2021 ರಿಂದ ದಿನಾಂಕ 16/08/2021 ರ ವರೆಗೆ ಅದೇ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೇ ರಸ್ತೆ ಅಪಘಾತದಲ್ಲಾದ ಗಾಯದ ಭಾದೆಯಿಂದ ದಿನಾಂಕ 16/08/2021 ರಂದು ಬೆಳಿಗ್ಗೆ 07-55 ಎ.ಎಂ.ಕ್ಕೆ ಎ.ಎಸ್.ಎಮ್. ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಿರಿ ಅಂತಾ ಪುರವಣಿ ಹೇಳಿಕೆ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ಕ್ರಮ ಕೊಂಡಿದ್ದು ಇರುತ್ತದೆ.

 

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 80/2021 ಕಲಂ: 279, 304 (ಂ) ಐಪಿಸಿ : ಇಂದು ದಿನಾಂಕ: 16/08/2021 ರಂದು 09.10 ಎಎಂಕ್ಕೆ ಪಿಯರ್ಾದಿ ಶ್ರೀಮತಿ ರೇಣುಕಾ ಗಂಡ ಶರಣಪ್ಪ ಕಟ್ಟಮನಿ ವಯ|| 30 ಜಾತಿ|| ಎಸ್.ಸಿ( ಹೊಲೇಯ) ಉ|| ಮನೆಗೆಲಸ ದಾ|| ಕಕ್ಕಸಗೇರಾ ತಾ: ಶಹಾಪೂರ ಜಿ: ಯಾದಗಿರಿ.ಇವರು ಠಾಣೆಗೆ ಬಂದು ಒಂದು ಲಿಖಿತ ದೂರು ಅಜರ್ಿ ಹಾಜರ ಪಡೆಸಿದ್ದು ಅದರ ಸಾರಂಶ ಏನಂದರೆ, ನನಗೆ 16 ವರ್ಷಗಳ ಹಿಂದೆ ಮದುವೆ ಆಗಿದ್ದು, ಮಹೇಶ ವ: 14 ವರ್ಷ, ಗಣೇಶ ವ:11 ವರ್ಷ ಹೀಗೆ ಇಬ್ಬರು ಮಕ್ಕಳು ಇರುತ್ತಾರೆ. ನನ್ನ ಗಂಡನಾದ ಶರಣಪ್ಪ ಈತನು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದನು. ಈಗ ಸುಮಾರು 2 ವರ್ಷಗಳಿಂದ ನಮ್ಮ ಮಕ್ಕಳ ಶಾಲೆಯ ಸಲುವಾಗಿ ನಾನು ನಮ್ಮ ತವರೂರಲ್ಲಿ ರಸ್ತಾಪೂರದಲ್ಲಿ ಇದ್ದೇನು. ನನ್ನ ಗಂಡನು ಕಕ್ಕಸಗೇರಿಯಿಂದ ಬಂದು ಹೋಗಿ ಮಾಡುತ್ತಿದ್ದನು.
ಹೀಗಿದ್ದು, ನಿನ್ನೆ ದಿನಾಂಕ:15/08/2021 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಕಕ್ಕಸಗೇರಿಗೆ ಹೋಗಿ ಬರುತ್ತೇನೆ ಅಂತಾ ತನ್ನ ಮೋಟಾರ್ ಸೈಕಲ್ ನಂಬರ ಕೆಎ-33-ವಾಯ್-6229 ನೇದ್ದನ್ನು ತೆಗೆದುಕೊಂಡು ಹೋಗಿದ್ದನು. ರಾತ್ರಿ ಮನೆಗೆ ಬಂದಿರುವದಿಲ್ಲ. ನಮ್ಮ ಮಾವನವರಾದ ಮಲ್ಲಪ್ಪ ಕಟ್ಟಿಮನಿ ಇವರಿಗೆ ವಿಚಾರಿಸಿದಾಗ ರಾತ್ರಿ 10.00 ಗಂಟೆಯ ವರೆಗೆ ಕಕ್ಕಸಗೇರಿಯಲ್ಲಿದ್ದ. ನಾನು ಮನೆಗೆ ಕರೆದರೆ ಬರದೆ ಯಷ್ಟೋತ್ತಿದ್ದರು ರಸ್ತಾಪೂರಕ್ಕೆ ಹೋಗುತ್ತೇನೆ ಎಂದು ಹೋಗಿರುತ್ತಾನೆ ಎಂದು ತಿಳಿಸಿದರು. ಇಂದು ಬೆಳಿಗ್ಗೆ ಅಂದರೆ, ದಿನಾಂಕ: 16/08/2021 ರಂದು ಬೆಳಿಗ್ಗೆ 07.13 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಭೀಮಪ್ಪ ಹೋಸ್ಮನಿ ಇವರಿಗೆ ಪೋನ್ ಮೂಲಕ ನನ್ನ ಗಂಡನಾದ ಶರಣಪ್ಪ ಈತನು ತನ್ನ ಮೋಟಾರ್ ಸೈಕಲ್ ಸಮೇತ ಶೆಟ್ಟಿಕೇರಿ-ಹೋಸಕೇರಾ ರೋಡಿನ ಶೆಟ್ಟಿಕೇರಾ ಸಮೀಪ ಬಿದ್ದಿದ್ದು, ಗಾಯಹೊಂದಿ ಮೃತಪಟ್ಟಿದ್ದಾನೆ ಅಂತ ಸುದ್ದಿ ತಿಳಿದ ಮೇರೆಗೆ ನಾನು ನಮ್ಮ ಅಣ್ಣ ಯಲ್ಲಪ್ಪ ತಂದೆ ತಾಯಪ್ಪ, ದೇವಿಂದ್ರಪ್ಪ ತಂದೆ ಬಸ್ಸಪ್ಪ ಅಯ್ಯಪ್ಪಗೋಳ ಕೂಡಿ ಶೇಟ್ಟಿಕೇರಾ ಹತ್ತಿರ ಸ್ಥಳಕ್ಕೆ ಹೋಗಿ ನೋಡಿಲಾಗಿ ಅಲ್ಲಿಗೆ ನಮ್ಮ ಮಾವನವರಾದ ಮಲ್ಲಪ್ಪ ಕಟ್ಟಿಮನಿ. ಭೀಮರಾಯ ವಡಗೇರಾ, ಮಲ್ಲಿಕಾಜರ್ುನ ಬಡಿಗೇರ ಮತ್ತು ಸಂಗನಗೌಡ ಬಿರೇದಾರ ಇವರುಗಳು ಕಕ್ಕಸಗೇರಿಯಿಂದ ಸುದ್ದಿತಿಳಿದು ಬಂದಿದ್ದರು. ನೋಡಲಾಗಿ ನನ್ನ ಗಂಡನಾದ ಶರಣಪ್ಪ ಈತನು ತನ್ನ ಮೋಟಾರ ಸೈಕಲ್ ನಂಬರ ಕೆಎ-33-ವಾಯ್-6229 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಮೋಟಾರ್ ಸೈಕಲ್ ಸ್ಕೀಡ್ಡಾಗಿ ರೋಡಿನ ಮೇಲೆ ಬಿದ್ದಿದ್ದನು. ಮೋಟಾರ್ ಸೈಕಲ್ ರೋಡಿನ ಪಕ್ಕದಲ್ಲಿ ಬಿದ್ದಿತ್ತು. ನನ್ನ ಗಂಡನ ಎಡಗಡೆ ಕಣ್ಣಿನಿಂದ ಮೂಗಿನ ವರೆಗೆ ಭಾರಿ ರಕ್ತಗಾಯವಾಗಿ ಎಡಹುಬ್ಬಿಗೆ ಮತ್ತು ಎಡಗಡೆ ಹಣೆಯಿಂದ ತೆಲೆಯ ವರೆಗೆ ಭಾರಿ ರಕ್ತಾಗಾಯವಾಗಿತ್ತು ಬಲಗಡೆ ಮೇಲಕಿಗೆ ಕಪಾಳಕ್ಕೆ ತರಚಿದ ಗಾಯವಾಗಿತ್ತು. ಎದೆಗೆ ಎಡಗೈ ಬುಜಕ್ಕೆ ಎಡಗೈ ಮೋಳಕೈಗೆ ಮತ್ತು ಎರಡು ಅಂಗೈಗಳ ಮೇಲೆ ತರೆಚಿದ ಗಾಯಗಳು ಆಗಿದ್ದವು. ಎರಡು ಮೋಳಕಾಲಿಗೆ ತೆರೆಚಿದ ಗಾಯಗಳು ಆಗಿದ್ದವು. ನನ್ನ ಗಂಡನು ನಿನ್ನೆ ದಿನಾಂಕ:15/08/2021 ರಂದು 10.15 ಪಿಎಂ ದಿಂದ 16/08/2021 ರ 07.00 ಎಎಂ ಮಧ್ಯದ ಅವಧಿಯಲ್ಲಿ ಅಪಘಾತ ಹೊಂದಿ ಮೃತಪಟ್ಟಿದ್ದು ಶವವವನ್ನು ಶಹಾಪೂರ ಸರಕಾರಿ ಆಸ್ಪತ್ರೆಗೆ ಸಾಗಿಸಿರುತ್ತೇವೆ. ಅಂತಾ ಅಜರ್ಿಯನ್ನು ನನ್ನ ತಮ್ಮನಾದ ಭೀಮಪ್ಪ ಹೋಸ್ಮನಿ ಇವರಿಂದ ಬರೆಯಿಸಿದ್ದು ಮುಂದಿನ ಕ್ರಮ ಕೈಕೋಳ್ಳಲು ವಿನಂತಿ. ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 80/2021 ಕಲಂ: 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೇ ಕೈಕೊಂಡಿದ್ದು ಇರುತ್ತದೆ.

 

ಯಾದಗಿರ ಮಹಿಳಾ ಪೊಲೀಸ್ ಠಾಣೆ
ಗುನ್ನೆ ನಂ : 53/2021 ಕಲಂ 323. 354, 354 (ಬಿ), 504, 506 ಐಪಿಸಿ : ಇಂದು ದಿನಾಂಕ 16-08-2021 ರಂದು 2-30 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ  ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಟ್ಯಪ ಮಾಡಿಸಿದ ಅಜರ್ಿ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಮಹೇಶ ತಂದೆ ಶಿವಪ್ಪಾ ಸಿದ್ದಿ ಈತನು ಪೋನ ಮೂಲಕ ದಿನನಿತ್ಯ ಕರೆಮಾಡಿ ನನ್ನ ನಗ್ನ ಸ್ವರೂಪದ ವಿಡಿಯೋ ಮಾಡಿದ್ದೆನಂದು ನನಗೆ ಕಿರಕುಳ ಕೊಡುತ್ತಿದ್ದನು. ನಾನು ಅವನ ಮಾತಿಗೆ ಭಯದಿಂದ ನಾನು ಮಾತು ಆಡಿದ್ದೆನೆ ಅದಕ್ಕೆ ನನಗೆ ನಿನ್ನ ಬತ್ತಲೆ ವಿಡಿಯೋ ಮಾಡಿದ್ದೆನೆ ನೀನು ನಿನ್ನ ಮನೆಗೆ ಯಾರಿಗೂ ಹೇಳದೇ ನನ್ನಲ್ಲಿ ಬಂದು ಮಲಗಬೇಕು ಎಂದು 4 ತಿಂಗಳಿಂದ ನನಗೆ ಕಿರುಕುಳ ನೀಡುತ್ತಿದ್ದು ನಾನು ಭಯ ಬೀತಿಯಿಂದ ನಾನು ಯಾರಿಗೂ ತಿಳಿಸಿಲ್ಲಾ. ಒಂದು ತಿಂಗಳಿಂದ ಮನೆಗೆ ಬಂದು ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದನು. ನಾನು ಒಪ್ಪಿಕೊಂಡಿರುವುದಿಲ್ಲಾ ಅದಕ್ಕೆ ನನಗೆ ಹೊಡೆದು ಹೋಗಿರುತ್ತಾನೆ. ಇಷ್ಟಾದರೂ ನಾನು ನನ್ನ ಗಂಡನಿಗಾಗಲಿ, ನನ್ನ ಮನೆಯವರಿಗಾಗಲಿ ಹೇಳಿರುವುದಿಲ್ಲಾ. ಆದ ಕಾರಣ ನನಗೆ ಇವನಿಂದ ಬಹಳ ನೋವು ಆಗಿದೆ. ಇತನ ಹಿಂಸೆ ತಾಳಲಾರದೇ ನಾನು ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದೆ, ನನಗೆ ನನ್ನ ತಾಯಿ ಬಂದು ರಕ್ಷಣೆ ಮಾಡಿದಳು. ಏನಾಯಿತು ಏಕೆ ಈ ರೀತಿ ಮಾಡಿಕೊಳ್ಳುತ್ತಿದ್ದಿ ಅಂತಾ ಕೇಳಿದಾಗ ನಾನು ಆತನ ಹಿಂಸೆ ತಾಳಲಾರದೇ ನನ್ನ ತಾಯಿಗೆ ವಿಷಯವನ್ನು ತಿಳಿಸಿದ್ದೆನು. ನನ್ನ ತಾಯಿ ಅವನ ತಾಯಿಗೆ ಈ ವಿಷಯವನ್ನು ಹೇಳಿದ್ದು ಹಾಗೇ ಸುಮ್ಮನೇ ಇದ್ದು 15 ದಿನಗಳ ಕಾಳ ನನಗೆ ಫೋನ ಮಾಡಿರುವುದಿಲ್ಲಾ. ಇದಾದ ನಂತರ ಅವನು ಮತ್ತೆ ಫೋನ ಮಾಡಿ ಲೇ ಸೂಳಿ ರಂಡಿ ನನ್ನ ತಾಯಿಗೆ ಹೇಳುತ್ತಿ? ಲೇ ಭೋಸಡಿ ಮಗಳೇ ನೋಡು ನಿನ್ನನ್ನು ಏನು ಮಾಡುತ್ತೆನೆ ಸೀದಾ ನನ್ನ ಮಾತಿಗೆ ಬೆಲೆ ಕೊಟ್ಟು ಮಲಕೊಂಡಿ ಅಂದರೆ ಸುಮ್ಮನೇ ಇರುತ್ತೆನೆ ಇಲ್ಲಾ ಅಂದರೆ ನಿನ್ನ ಖಲಾಸ ಮಾಡುತ್ತೆನೆಂದು ನನಗೆ ಬೆದರಿಕೆ ಹಾಕಿರುತ್ತಾನೆ. ಇದಾದ ನಂತರ ನಾನು ಕಾಳು ಬಿಳುತ್ತಿನಿ ನನಗೆ ಯಾಕೇ ಈ ರೀತಿ ಮಾಡುತ್ತಿ ಎಂದು ಕಾಲಿಗೆ ಬಿದ್ದು ಕೇಳಿರುತ್ತಿನಿ. ಲೇ ಸೂಳಿ ನಿನ್ನ ಜೋತೆ ಮಲಗಿದ್ದ ಮೇಲೆ ನನಗೆ ಸಮಾಧಾನ ಆಗುತ್ತದೆ ಎಂದು ಹೇಳಿರುತ್ತಾನೆ. ಮತ್ತು ಇದಾದ ಮೇಲೆ ನಿನ್ನೆ ದಿನಾಂಕ 14-08-2021 ರಂದು ಸಾಯಂಕಾಲ 4-30 ಗಂಟೆಗೆ ಯಾರೂ ಇಲ್ಲದ ಸಮಯಕ್ಕೆ ಬಂದು ನನಗೆ ಹೊಡೆದು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದ. ಇದಕ್ಕೆ ನಾನು ಭಯದಿಂದ ಹೊರಗಡೆ ಬಂದು ಲೇ ರಂಡಿ ನಿನ್ನ ಬತ್ತಲೇ ಪೋಟೋ ಫೆಸಬುಕ್ ಮತ್ತು ವ್ಯಾಟ್ಸಾಪ್ ನಲ್ಲಿ ಬಿಡುತ್ತೆನೆ ಎಂದು ಹೊಡೆದು ಹೋಗಿರುತ್ತಾನೆ. ನನ್ನ ತಾಯಿಗೆ ನಾನು ತಿಳಿಸಿದೆ. ನನ್ನ ತಾಯಿ ನನ್ನ ಸಹೋದರ ಮಾವನವರಿಗೆ ತಿಳಿಸಿದಳು. ನನ್ನ ಸೋದರ ಮಾವನವರು ಆ ಹುಡುಗನಿಗೆ ಕೇಳಲು ಹೋದಾಗ ಲೇ ಭೋಸಡಿ ಮಕ್ಕಳೆ ಯಾರೂ ಬತರ್ಿರಿ ಬರ್ರಿ ನಾನು ನೋಡುತ್ತೆನೆಂದು ನಮ್ಮ ಮಾವನಿಗೆ ಫೋನ ಮಾಡಿದಾಗ ಅವನು ಲೇ ರಂಡಿ ಮಗನೇ ಬರಿ ಡಿಗ್ರಿ ಕಾಲೇಜನಲ್ಲಿ ಇದ್ದೆನೆ ಬಾ ಎಂದು ಗುಂಪು ಘರ್ಷಣೆಯಾಗಿ ನನ್ನ ಮಾವನಿಗೆ ಹೊಡೆದು ಹೋಗಿರುತ್ತಾರೆ. ಇಷ್ಟಾದರೂ ನಾನು ಸಾಯಲು ತಿಮರ್ಾನಿಸಿದ್ದೆ. ಆದ ಕಾರಣ ದಯಾಳುಗಳಾದ ತಾವು ನನಗೆ ನೀವು ರಕ್ಷಣೆ ನೀಡಿ ಆತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಕು ಅಂತಾ ಸಲ್ಲಿಸಿದ ಅಜರ್ಿ ಸಾರಾಂಶದ ಮೇಲಂದ ಠಾಣೆ ಗುನ್ನೆ ನಂ: 53/2021 ಕಲಂ 323. 354, 354 (ಬಿ), 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ : 129/2021 ಕಲಂ 379 ಐ.ಪಿ.ಸಿ. : ಇಂದು ದಿನಾಂಕ:16-08-2021 ರಂದು 01-30 ಪಿ.ಎಂ.ಕ್ಕೆ ಠಾಣೆಯಲ್ಲ್ಲಿದ್ದಾಗ ಶ್ರೀ ಬಾಲಪ್ಪ ತಂದೆ ಹಣಮಂತ ಬಡಿಗೇರ ಸಾ:ಪೇಠಅಮ್ಮಾಪೂರ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ಅಜರ್ಿ ನೀಡಿದ್ದು ಸಾರಾಂಶವೆನೆಂದರೆ, ದಿನಾಂಕ:22-07-2021 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಾನು ಪೇಠ ಅಮ್ಮಾಪೂರ ಗ್ರಾಮದಿಂದ ನನ್ನ ಮೊಟಾರ ಸೈಕಲ್ ನಂಬರ ಕೆಎ-33 ಆರ್-3887 ನೇದ್ದನ್ನು ಚಲಾಯಿಸಿಕೊಂಡು ಸುರಪೂರದ ನಗರ ಸಭೆಯ ಕಛೇರಿ ಹತ್ತಿರ ಇರುವ ಕನರ್ಾಟಕ ಬ್ಯಾಂಕಿಗೆ ಬಂದು ಕ್ಯಾಸಿಯರ ಹತ್ತಿರ ಹೋಗಿ ಚೆಕ್ ತೋರಿಸಿ ನಾನು 3 ಲಕ್ಷ ರೂಗಳ ಹಣ ಡ್ರಾ ಮಾಡಬೇಕು ಅಂತಾ ಹೇಳಿದಾಗ ಕ್ಯಾಸಿಯರವರು ನೂರು-ಇನ್ನೂರು ರೂ.ಗಳ ನೋಟಗಳಿದ್ದು ಕೊಡುತ್ತೇವೆ ಅಂತಾ ಹೇಳಿದಾಗ ನಾನು ನೂರು-ಇನ್ನೂರ ರೂ.ಗಳ ನೋಟ ಬೇಡ ನನಗೆ ಐದುನೂರ ರೂ.ಗಳ ನೋಟು ಕೊಡ್ರಿ ಅಂತಾ ಹೇಳಿದಾಗ ಕ್ಯಾಸಿಯರ್ ರವರು ಐದುನೂರು ರೂ.ಗಳ ನೋಟುಗಳು ಈ ಸಧ್ಯ ಇಲ್ಲ ಅಂತಾ ಹೇಳಿದಾಗ ನಾನು ಕ್ಯಾಸಿಯರಿಗೆ ಈ ಸದ್ಯ ಟೋಕನ್ ತೆಗೆದುಕೊಂಡು ಹೋಗಿ ಆಮೇಲೆ ಬಂದರೆ ನಡೆಯುತ್ತದೆ ಏನು ಸರ್ ಅಂತಾ ಕೇಳಿದಾಗ ಅವರು ನಡೆಯುತ್ತದೆ ಅಂತಾ ಹೇಳಿ ನನಗೆ ಟೋಕನ್ ಕೊಟ್ಟರು. ನಾನು ಟೋಕನ್ ತಗೆದುಕೊಂಡು ತಾಲೂಕ ಪಂಚಾಯತ ಆಫೀಸಿಗೆ ಹೋಗಿ ಕೆಲಸ ಮುಗಿಸಿಕೊಂಡು ಒಂದು ತಾಸು ಬಿಟ್ಟು ಅಂದರೆ ಮದ್ಯಾಹ್ನ 12:30 ಗಂಟೆಗೆ ಕನರ್ಾಟಕ ಬ್ಯಾಂಕಿಗೆ ಬಂದೆನು. ಆಗ ಅದೇ ಸಮಯಕ್ಕೆ ಬ್ಯಾಂಕಿಗೆ ಬಂದ ನನ್ನ ಮಗನಾದ ಹಣಮಂತ್ರಾಯನಿಗೆ ಟೋಕನ್ ಕೊಟ್ಟು ಹಣ ಡ್ರಾ ಮಾಡಿಕೊ ನಾನು ಇಲ್ಲೆ ನಿಲ್ಲುತ್ತೆನೆ ಅಂತಾ ನನ್ನ ಮಗನಿಗೆ ಪಾಳೆ ಹಚ್ಚಿದೆನು. ಅಂದಾಜು ಮದ್ಯಾಹ್ನ 12:43 ಗಂಟೆಗೆ ನನ್ನ ಮಗ 3 ಲಕ್ಷರೂಗಳ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ನಂತರ ನನ್ನ ಮಗ ಹಣ ಹಿಡಿದುಕೊಂಡು ಮ್ಯಾನೇಜರ ಚೆಂಬರ ಮುಂದೆ ನಿಂತುಕೊಂಡಿದ್ದು ನಾನು ಮ್ಯಾನೇಜರ ಹತ್ತಿರ ಹೋಗಿ ಇನ್ನೊಂದು 2,90,000=00 ರೂಗಳ ಚೆಕ್ನ ಡೆಟ ನಾಳೆ ಇರುತ್ತದೆ. ನಾಳಿಗೆ ಬಂದು ಹಣ ಡ್ರಾ ಮಾಡಿಕೊಳ್ಳುತ್ತೆನೆ ಅಂತಾ ಚೆಕ್ನ್ನು ಮ್ಯಾನೇಜರ ಕಡೆ ಹೊಟ್ಟು ನಾನು, ನನ್ನ ಮಗ ಹಣಮಂತ್ರಾಯ ಇಬ್ಬರು ಹೊರಗಡೆ ಬಂದು ಗ್ಯಾರೇಜ ಮುಂದುಗಡೆ ನಿಲ್ಲಿಸಿದ ನನ್ನ ಮೊಟಾರ ಸೈಕಲ್ ಟ್ಯಾಂಕಿನ ಕವರದಲ್ಲಿ ಹಣ ಹಾಕಿದ ಪ್ಲಾಸ್ಟಿಕ ಚೀಲವನ್ನು ಇಟ್ಟುಕೊಂಡು ನನ್ನ ಮೊಟಾರ ಸೈಕಲ್ ಚಲಾಯಿಸಿಕೊಂಡು ದಿವಳಗುಡ್ಡದಲ್ಲಿರುವ ಕುಮಾರಸ್ವಾಮಿ ತಂದೆ ಬಸಪ್ಪ ಗುಡ್ಡಡಗಿ ಇವರಿಗೆ ಹಣ ಕೊಡಲು ಹೊರಟಿದ್ದೆನು. ನನ್ನ ಮಗ ಹಣಮಂತ್ರಾಯ ಈತನು ತಾನು ತಗೆದುಕೊಂಡು ಬಂದ ಮೊಟಾರ ಸೈಕಲ್ ನಡೆಸುಕೊಂಡು ನನ್ನ ಹಿಂದೆ ಬರುತ್ತಿದ್ದನು. ನಾವಿಬ್ಬರು ವೀರಶೈವ ಕಲ್ಯಾಣ ಮಂಟಪದ ಹತ್ತಿರ ಇರುವ ಟೈಲ್ಸ ಅಂಗಡಿ ಹತ್ತಿರ ಹೋಗುತ್ತಿರುವಾಗ ನನ್ನ ಮಗ ಹಣಮಂತ್ರಾಯ ಈತನು ನನ್ನ ಗೆಳೆಯರು ಬಂದಾರ ಅಪ್ಪಾ ನಾನು ಅಲ್ಲಿಗ್ಯಾಕೆ ಬರಲಿ ನೀನೆ ಹೋಗಿ ಬಾ ಅಂತಾ ಹೇಳಿ ತನ್ನ ಮೊಟಾರ ಸೈಕಲ್ ತಿರುಗಿಸಿಕೊಂಡು ಹೋದನು. ನಾನು ಮುಖ್ಯ ರಸ್ತೆಯ ವಡ್ಡರಗಲ್ಲಿಯ ಹತ್ತರ ರಾಜೋರಿ ಸ್ಟೀಲ್ ಅಂಗಡಿಯ ಹತ್ತಿರ ಮಧ್ಯಾಹ್ನ 01-06 ಗಂಟೆ ಸುಮಾರಿಗೆ ಹೋಗುತ್ತಿರುವಾಗ ನನ್ನ ಎದರುಗಡೆಯಿಂದ ಒಬ್ಬ ಅಪರಿಚಿತ ಬೈಕ ಸವಾರನು ತನ್ನ ಹಿಂದುಗಡೆ ಒಬ್ಬನನ್ನು ಕೂಡಿಸಿಕೊಂಡು ಹೊರಟಿದ್ದವನೆ ನನಗೆ ನಿಮ್ಮ ರೊಕ್ಕ ಬಿದ್ದಾವ ನೋಡ್ರಿ ಅಂತಾ ಹೇಳಿ ಹೋದನು. ಆಗ ನಾನು ನನ್ನ ಬೈಕ ಟ್ಯಾಂಕ ಕವರನಲ್ಲಿದ್ದ ರೊಕ್ಕ ಟ್ಯಾಂಕನಲ್ಲಿಯೆ ಇದ್ದುದ್ದನ್ನು ನೋಡಿ ನಾನು ಸುಮ್ಮನೆ ಬೈಕ ಚಲಾಯಿಸಿಕೊಂಡು ಹೊರಟಿದ್ದೆನು. ಆಗ ಅದೇ ಸಮಯಕ್ಕೆ ಇನ್ನೊಂದು ಬೈಕ ಸವಾರನು ತನ್ನ ಬೈಕ ಹಿಂದುಗಡೆ ಒಬ್ಬನನ್ನು ಕೂಡಿಸಿಕೊಂಡು ನನ್ನ ಹಿಂದುಗಡೆಯಿಂದ ಬಂದವನೇ ನನ್ನ ಬೈಕಿಗೆ ಸೈಡ ಹೊಡೆದು ನನಗೆ ಏ ಏಜಮಾನರೆ ನಿಮ್ಮ ಕಿಸ್ತೆನು ರೊಕ್ಕ ಬಿದ್ದಾವ ನೋಡ್ರಿ ಹಂಗೆ ಹೊಂಟಿರಲ್ಲಾ ಅಂತಾ ಹೇಳಿದಾಗ ನಾನು ನನ್ನ ಬೈಕ ತಿರುಗಿಸಿಕೊಂಡು ಬಂದು ಬೈಕ ನಿಲ್ಲಿಸಿ ರಸ್ತೆಯಲ್ಲಿ ಬಿದ್ದಿದ್ದ ಒಂದು 50 ರ ಎರಡು ನೋಟು ಹಾಗೂ 10 ರ ಎರಡು ನೋಟು, ಮತ್ತು 20 ರ ಒಂದು ನೋಟನ್ನು ಆರಿಸಿಕೊಂಡು ಮೋಟಾರ ಸೈಕಲ್ ಹತ್ತಿರ ಬಂದು ಮೋಟರ್ ಸೈಕಲ್ ಟ್ಯಾಂಕಿನ ಕವರಿನಲ್ಲಿಟ್ಟಿದ್ದ ಹಣ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದರು. ಆಗ ನಾನು ಗಾಭರಿಗೊಂಡು ನನ್ನ ಮಗನಿಗೆ ಪೋನ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಅತ್ತ-ಇತ್ತ ಕಡೆ ಪತ್ತೆ ಮಾಡಲು ಎಲ್ಲಿಯೂ ಯಾವುದೆ ಮಾಹಿತಿ ಸಿಗಲಿಲ್ಲ. ನಂತರ ನಮಗೆ ಏನು ತೋಚದೆ ಇರುವದರಿಂದ ಇಲ್ಲಿಯವರೆಗೆ ಯಾರಿಗೂ ತಿಳಿಸದೆ ಮನೆಯಲ್ಲಿ ವಿಚಾರ ಮಾಡಿ ಇಂದು ಠಾಣೆಗೆ ತಡವಾಗಿ ಬಂದು ದೂರು ನಿಡಿದ್ದು ಇರುತ್ತದೆ. ನನ್ನ ಮೊಟಾರ ಸೈಕಲ್ ಟ್ಯಾಂಕ ಕವರಿನಲ್ಲಿಟ್ಟಿದ್ದ 3 ಲಕ್ಷ ರೂಪಾಯಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾನೂನು ಕ್ರಮ ಜರಿಗಿಸಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 119/2021 ಕಲಂ:341, 323, 504,506, ಸಂಗಡ 34 ಐಪಿಸಿ : ಇಂದು ದಿ: 16/08/2021 ರಂದು 7.15 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಅನ್ನಮ್ಮ ಗಂಡ ಭೀಮನಗೌಡ ಪಾಟೀಲ ವಯಾ|| 45 ಜಾ|| ಲಿಂಗಾಯತ ರೆಡ್ಡಿ ಉ|| ಹೊಲಮನೆಗೆಲಸ ಸಾ|| ಕೂಡಲಗಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಏನಂದರೆ, ನನ್ನ ಗಂಡನ ಅಣ್ಣತಮ್ಮಂದಿರು ಒಟ್ಟು 3 ಜನ ಅಣ್ಣತಮ್ಮಂದಿರಿದ್ದು, ಹಳ್ಳೆಪ್ಪಗೌಡ ಈತನು ಹಿರಿವನಾಗಿದ್ದು, 2 ನೇಯವನು ನನ್ನ ಗಂಡ ಭೀಮನಗೌಡ ಹಾಗೂ 3ನೇಯವನು ಶಿವರಾಜ ಅಂತ ಇರುತ್ತಾರೆ. ಸದ್ಯ ಎಲ್ಲರು ಬೇರೆಬೇರೆಯಾಗಿ ಮನೆ ಮಾಡಿಕೊಂಡು ಇರುತ್ತಾರೆ. ನಮ್ಮ ಅತ್ತೆಯಾದ ಗಂಗಮ್ಮ ಇವರು ಮೈದುನನಾದ ಶಿವರಾಜ ಇವರ ಹತ್ತಿರವೇ ಇದ್ದಳು. ಅವಳ ಪಾಲಿಗೆ ಉಪಜೀವನಕ್ಕಾಗಿ 4 ಎಕರೆ ಒಣಬೇಸಾಯದ ಹೊಲವಿದ್ದು, ಸದರಿಯವಳಿಗೆ ಶಿವರಾಜ ಇವರೇ ನೋಡಿಕೊಂಡು ಹೋಗುತ್ತಿದ್ದನು. ನಮ್ಮ ಅತ್ತೆ ತೀರಿಹೋದ ನಂತರ ಅವಳ ಹೆಸರಿನಲ್ಲಿದ್ದ ಆಸ್ತಿ ಎಲ್ಲರು ಸಮನಾಗಿ ಹಂಚಿಕೊಳ್ಳುವಂತೆ ಹಾಗೂ ಅವರ ಮಣ್ಣಿನ ಖಚರ್ಿಗಾಗಿ ಆದ ಹಣದಲ್ಲಿಯೂ ಸಹ 3 ಜನರು ಸಮನಾಗಿ ಕೊಡಬೇಕು ಅಂತ ಹಿರಿಯರ ಸಮ್ಮುಖದಲ್ಲಿ ಮಾತುಕತೆಯಾಗಿದ್ದು ಇರುತ್ತದೆ. ಅದರಂತೆ ದಿನಾಂಕ: 08/04/2021 ರಂದು ನಮ್ಮ ಅತ್ತೆ ಗಂಗಮ್ಮ ಇವರು ತೀರಿಹೋಗಿದ್ದು, ಆ ಸಮಯದಲ್ಲಿ ಶಿವರಾಜ ಈತನೆ ಮಣ್ಣು ಖಚರ್ು ಮಾಡಿದ್ದು ಅಂದಾಜು 1,50,000/- ರೂ. ಖಚರ್ಾಗಿದ್ದು ಇರುತ್ತದೆ. ಊರಿನ ಹಿರಿಯರು ಹೇಳಿದಂತೆ 1,50,000/- ರೂ ನಲ್ಲಿ ಮೂರು ಭಾಗ ಮಾಡಿ ಒಂದು ಭಾಗ ನನ್ನ ಗಂಡನಿಗೆ ಕೊಡಲು ತಿಳಿಸಿದ ಪ್ರಕಾರ ನನ್ನ ಗಂಡನು ತನ್ನ ಪಾಲಿಗೆ ಬಂದ 50000/- ರೂ ಹಣ ಕೊಟ್ಟಿದ್ದು ಇರುತ್ತದೆ. ಅಲ್ಲದೆ ನನ್ನ ಗಂಡ ಹಾಗೂ ಇಬ್ಬರು ಅಣ್ಣತಮ್ಮಂದಿರ ಪೈಕಿ ಒಟ್ಟು ಒಟ್ಟು 21 ಎಕರೆ ಜಮೀನು ಇದ್ದು, ಅದರಲ್ಲಿ ನನ್ನ ಗಂಡನ ಹೆಸರಿನಲ್ಲಿ 4 ಎಕರೆ ಹೊಲವಿದ್ದು, ಉಳಿದ 17 ಎಕರೆ ಮಾವನಾದ ಹಳ್ಳೆಪ್ಪಗೌಡ ಇವರ ಹೆಸರಿನಲ್ಲಿದ್ದು, ಸದರಿ ಹೊಲದಲ್ಲಿ ನನ್ನ ಗಂಡನಿಗೆ ಬರಬೇಕಾದ ಪಾಲು ಕೊಡಬೇಕು ಹಾಗೂ ಪ್ಲಾಟಿನಲ್ಲಿ ನನ್ನ ಗಂಡನಿಗೆ ಬರಬೇಕಾದ ಪಾಲು ಕೊಡಬೇಕು ಅಂತ ನನ್ನ ಗಂಡ ಅವರ ಅಣ್ಣ ಹಳ್ಳೆಪ್ಪಗೌಡ ಹಾಗೂ ತಮ್ಮ ಶಿವರಾಜ ಇವರಿಗೆ ಕೇಳಿದ್ದಕ್ಕೆ ಸದರಿ ಎರಡೂ ಜನರು ನನ್ನ ಗಂಡನ ಮೇಲೆ ಹಗೆತನ ಸಾದಿಸುತ್ತಿದ್ದರು.ಹೀಗಿದ್ದು ದಿನಾಂಕ: 02/08/2021 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಗಂಡ ಭೀಮನಗೌಡ ಇಬ್ಬರು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಪಕ್ಕದ ಹೊಲದಲ್ಲಿದ್ದ 1) ಹಳ್ಳೆಪ್ಪಗೌಡ ತಂದೆ ಬಲವಂತ್ರಾಯಗೌಡ ಪಾಟೀಲ 2) ಶಿವರಾಜ ತಂದೆ ಬಲವಂತ್ರಾಯಗೌಡ ಪಾಟೀಲ 3) ಮಹಾದೇವಿ ಗಂಡ ಹಳ್ಳೆಪ್ಪಗೌಡ ಪಾಟೀಲ 4) ಶಿಲ್ಪಾ ಗಂಡ ಶಿವರಾಜ ಪಾಟೀಲ ಈ ನಾಲ್ಕು ಜನರು ನನ್ನ ಗಂಡನಿಗೆ ಎಲೆ ಸೂಳೆಮಗನೆ ನಮಗೆ ಪಾಲು ಕೇಳುತ್ತಿಯಾ ರಂಡಿಮಗನೆ ಅಂತ ಬೈಯುತ್ತಿದ್ದಾಗ ನಾನು ಹಾಗೂ ನನ್ನ ಗಂಡ ಇಬ್ಬರು ಕೂಡಿ ಅವರ ಹೊಲದಲ್ಲಿ ಯಾಕೆ ಬೈಯುತ್ತೀರಿ ಅಂತ ಕೇಳಲು ಹೋದಾಗ ನಮ್ಮಿಬ್ಬರನ್ನು ತಡೆದು ನಿಲ್ಲಿಸಿ ನನ್ನ ಗಂಡನಿಗೆ ಈ ಸೂಳೆಮಗನ ಸೊಕ್ಕು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರು ಕೂಡಿ ಆತನಿಗೆ ಕೈಯಿಂದ ಹೊಡೆಬಡೆ ಮಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ಬಿಡಿಸಲು ಹೋದಾಗ ನನಗೂ ಸಹ ಮಹಾದೇವಿ ಹಾಗೂ ಶಿಲ್ಪಾ ಇವರು ಈ ಸೂಳೆಯದು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈದು ನನಗೂ ಸಹ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆಯುತ್ತಿದ್ದಾಗ ನಾನು ಹಾಗೂ ನನ್ನ ಗಂಡ ಇಬ್ಬರು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಚನ್ನಾರೆಡ್ಡಿ ತಂದೆ ಬಸವರಾಜ ಮಲ್ಹಾರ ಸಾ|| ಗೋಗಿ ಹಾಗೂ ಸಿದ್ದಣ್ಣ ತಂದೆ ರುದ್ರಣ್ಣ ವಣಿಕ್ಯಾಳ ಸಾ|| ನಗನೂರ ಇವರು ಬಂದು ಬಿಡಿಸಿಕೊಂಡರು. ನಂತರ ಸದರಿಯವರು ಮಗನೆ ಇನ್ನೊಮ್ಮೆ ಪಾಲು ಕೊಡು ಅಂತ ನಮ್ಮಲ್ಲಿಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿರುತ್ತಾರೆ ಅಂತ ಇತ್ಯಾದಿ ವಿವರದ ಅಜರ್ಿ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 119/2021 ಕಲಂ: 341, 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ:89/2021 ಕಲಂ. 41(ಡಿ), 102 ಸಿ.ಆರ್.ಪಿ.ಸಿ ಮತ್ತು 98 ಕೆ.ಪಿ ಎಕ್ಟ್ : ಇಂದು ದಿನಾಂಕ:16/08/2021 ರಂದು 3:00 ಪಿ.ಎಮ್.ಕ್ಕೆ ಶ್ರೀ.ವೀರಣ್ಣ ಪಿ.ಎಸ್.ಐ (ತನಿಖೆ) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಹಾಜರಾಗಿ ತಮ್ಮ ವರದಿ ಸಲ್ಲಿಸಿದ್ದೇನೆಂದರೆ, ಇಂದು ದಿನಾಂಕ:16/08/2021 ರಂದು 1:00 ಪಿ.ಎಮ್. ಕ್ಕೆ ನಾನು ಸಿಬ್ಬಂದಿಯವರಾದ ಗಜೇಂದ್ರ ಹೆಚ್.ಸಿ-123, ಶಿವಶಂಕರ ಹೆಚ್.ಸಿ-175, ರವೀಂದ್ರ ಪಿ.ಸಿ-281 ರವರೊಂದಿಗೆ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಯಾದಗಿರಿ ನಗರದ ಹಳೇ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಹಳೆ ಬಸ್ ನಿಲ್ದಾಣದ ಹತ್ತಿರ ಮಾರುತಿ ಎಕೊ ಕಾರ್ ನಂ:ಕೆಎ-32 ಎಮ್-9761 ನಿಂತಿದ್ದು, ಅದರಲ್ಲಿದ್ದ ಒಬ್ಬ ಮನುಷ್ಯ ಹಾಗು ಹೆಣ್ಣುಮಗಳು ಹಳೇ ಬಸ್ ನಿಲ್ದಾಣದಲ್ಲಿ ಓಡಾಡುವುದು ಮತ್ತೆ ಪುನಃ ಕಾರ್ ಒಳಗಡೆ ಬಂದು ಕೂಡುವುದು ಹೀಗೆ ಬಂದು ಹೋಗುವುದು ಮಾಡುತ್ತಾ ಸುಮಾರು ಸಮಯದ ವರೆಗೆ ಕಾರನ್ನು ಅಲ್ಲಿಯೇ ನಿಲ್ಲಿಸಿಕೊಂಡು ನಿಂತಿದ್ದರಿಂದ ನನಗೆ ಅವರ ಮೇಲೆ ಸಂಶಯ ಬಂದು ನಾನು ಕಾರ್ ಒಳಗಡೆ ಕುಳಿತಿದ್ದ ಅವರಿಬ್ಬರ ಹತ್ತಿರ ಹೋಗುತ್ತಿದ್ದಂತೆ ಅವರಿಬ್ಬರು ನನ್ನನ್ನು ನೋಡಿ ಓಡಲು ಪ್ರಾರಂಭಿಸಿದ್ದು, ಕೂಡಲೇ ಸಿಬ್ಬಂದಿಯವರ ಸಹಾಯದಿಂದ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಅವರು ತಡವರಿಸುತ್ತ ಹೆಸರನ್ನು ಬೇರೆ ಬೇರೆ ಹೇಳಿದ್ದರಿಂದ ಅವರ ಮೇಲೆ ಸಂಶಯ ಬಂದು ಅವರನ್ನು 1:10 ಪಿ.ಎಮ್.ಕ್ಕೆ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ತಮ್ಮ ಹೆಸರು 1)ಆನಂದ ತಂದೆ ವೆಂಕಟೇಶ ಬೆಲ್ಲಪ, ವಯ:22 ವರ್ಷ, ಜಾತಿ:ಚಿಟ್ಟಿಬಲಿಜ, ಉ||ಕೂಲಿ, ಸಾ||ಶಂಕರಪಲ್ಲಿ, ಜಿ||ರಂಗಾರೆಡ್ಡಿ 2)ಅಶ್ವಿನಿ ತಂದೆ ಅಶ್ವಥ್ ಎಲುಕಲ್, ವಯ:21 ವರ್ಷ, ಜಾತಿ:ಎರುಕಲ್, ಉ||ಕೂಲಿ, ಸಾ|ಗಾಂಧಿನಗರ, ರೈಲ್ವೇ ಸ್ಟೇಶನ್ ಹತ್ತಿರ, ಲಕ್ಷ್ಮೀ ಟಾಕೀಸ್ ಹತ್ತಿರ ಮೈಸೂರು, ಹಾ||ವ||ಮನೆ ನಂ:10/2/822/ಎ/5 ಸಂತೋಷನಗರ, ಆಸಿಫ್ ನಗರ, ಹೈದ್ರಾಬಾದ್ ಎಂದು ತಿಳಿಸಿದ್ದು, ಸದರಿಯವರ ಹತ್ತಿರ ಕಾರ್ನಲ್ಲಿದ್ದ ಬ್ಯಾಗನ್ನು ಪರಿಶೀಲಿಸಲಾಗಿ ಅದರಲ್ಲಿ ವಿವಿದ ಕಂಪನಿಗಳ ಒಟ್ಟು 40 ಮೊಬೈಲ್ ಫೋನ್ಗಳು ಇದ್ದು, ಸದರಿ ಮೊಬೈಲ್ ಫೋನ್ಗಳ ಬಗ್ಗೆ ಅವರಿಬ್ಬರಿಗೆ ವಿಚಾರಿಸಿದಾಗ ಸದರಿಯವರು ಅವರ ಹತ್ತಿರ ಇದ್ದ 40 ಮೊಬೈಲ್ ಫೋನ್ಗಳ ಬಗ್ಗೆ ಮತ್ತು ಅವರ ಹತ್ತಿರ ಇದ್ದ ಮಾರುತಿ ಎಕೊ ಕಾರ್ ನಂ:ಕೆಎ-32 ಎಮ್-9761 ಬಗ್ಗೆ ಯಾವುದೇ ಸಮರ್ಪಕ ದಾಖಲಾತಿಗಳು ಹಾಜರಪಡಿಸದೇ ಅವುಗಳ ಬಗ್ಗೆ ಯಾವುದೇ ವಿವರಣೆ ನೀಡದೇ ಇದ್ದು, ಸದರಿಯವರ ಹತ್ತಿರ ಇರುವ 40 ಮೊಬೈಲ್ ಫೋನ್ಗಳು ಕಳ್ಳತನವೆಂದು ಕಂಡುಬಂದಿದ್ದರಿಂದ ಇಬ್ಬರು ಪಂಚರನ್ನು ಬರಮಾಡಿಕೊಂಡು ಆನಂದ ಮತ್ತು ಅಶ್ವಿನಿ ಇವರು ಹಾಜರಪಡಿಸಿದ 40 ಮೊಬೈಲ್ ಫೋನ್ಗಳನ್ನು ಮತ್ತು ಮಾರುತಿ ಎಕೊ ಕಾರ್ ನಂ:ಕೆಎ-32 ಎಮ್-9761 ನೇದ್ದನ್ನು ಪ್ರತ್ಯೇಕವಾಗಿ ಜಪ್ತಿ ಪಂಚನಾಮೆಯನ್ನು 1:20 ಪಿ.ಎಮ್. ದಿಂದ 2:20 ಪಿ.ಎಮ್. ವರೆಗೆ ಕೈಗೊಂಡು ಪಂಚರ ಚೀಟಿ ಲಗತ್ತಿಸಿ 40 ವಿವಿಧ ಕಂಪನಿಗಳ ಮೊಬೈಲ್ ಫೋನ್ಗಳನ್ನು ಮತ್ತು ಮಾರುತಿ ಎಕೊ ಕಾರ್ ನಂ:ಕೆಎ-32 ಎಮ್-9761 ನೇದ್ದನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಕಾರಣ 1)ಆನಂದ ತಂದೆ ವೆಂಕಟೇಶ ಬೆಲ್ಲಪ, ವಯ:22 ವರ್ಷ, ಜಾತಿ:ಚಿಟ್ಟಿಬಲಿಜ, ಉ||ಕೂಲಿ, ಸಾ||ಶಂಕರಪಲ್ಲಿ, ಜಿ||ರಂಗಾರೆಡ್ಡಿ 2)ಅಶ್ವಿನಿ ತಂದೆ ಅಶ್ವಥ್ ಎಲುಕಲ್, ವಯ:21 ವರ್ಷ, ಜಾತಿ:ಎರುಕಲ್, ಉ||ಕೂಲಿ, ಸಾ|ಗಾಂಧಿನಗರ, ರೈಲ್ವೇ ಸ್ಟೇಶನ್ ಹತ್ತಿರ, ಲಕ್ಷ್ಮೀ ಟಾಕೀಸ್ ಹತ್ತಿರ ಮೈಸೂರು ಹಾ||ವ||ಮನೆ ನಂ:10/2/822/ಎ/5 ಸಂತೋಷನಗರ, ಆಸಿಫ್ ನಗರ, ಹೈದ್ರಾಬಾದ್ ಇವರು ತಮ್ಮ ಹತ್ತಿರ ಇದ್ದ 40 ವಿವಿಧ ಕಂಪನಿಗಳ ಮೊಬೈಲ್ ಫೋನ್ಗಳ ಬಗ್ಗೆ ಮತ್ತು ಮಾರುತಿ ಎಕೊ ಕಾರ್ ನಂ:ಕೆಎ-32 ಎಮ್-9761 ಬಗ್ಗೆ ಯಾವುದೇ ದಾಖಲಾತಿಗಳನ್ನು ಮತ್ತು ಸಮರ್ಪಕ ಮಾಹಿತಿಯನ್ನು ನೀಡದೇ ಇದ್ದರಿಂದ ಸದರಿಯವರು ತಮ್ಮ ಹತ್ತಿರ ಇದ್ದ 40 ಮೊಬೈಲ್ ಫೋನ್ಗಳನ್ನು ಮತ್ತು ಕಾರನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದಂತೆ ಕಂಡುಬಂದಿದ್ದರಿಂದ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ಪಂಚನಾಮೆ, ಮುದ್ದೇಮಾಲಿನೊಂದಿಗೆ ಆರೋಪಿತರಾದ 1)ಆನಂದ ತಂದೆ ವೆಂಕಟೇಶ ಬೆಲ್ಲಪ, ವಯ:22 ವರ್ಷ, ಜಾತಿ:ಚಿಟ್ಟಿಬಲಿಜ, ಉ||ಕೂಲಿ, ಸಾ||ಶಂಕರಪಲ್ಲಿ, ಜಿ||ರಂಗಾರೆಡ್ಡಿ 2)ಅಶ್ವಿನಿ ತಂದೆ ಅಶ್ವಥ್ ಎಲುಕಲ್, ವಯ:21 ವರ್ಷ, ಜಾತಿ:ಎರುಕಲ್, ಉ||ಕೂಲಿ, ಸಾ|ಗಾಂಧಿನಗರ, ರೈಲ್ವೇ ಸ್ಟೇಶನ್ ಹತ್ತಿರ, ಲಕ್ಷ್ಮೀ ಟಾಕೀಸ್ ಹತ್ತಿರ ಮೈಸೂರು ಹಾ||ವ||ಮನೆ ನಂ:10/2/822/ಎ/5 ಸಂತೋಷನಗರ, ಆಸಿಫ್ ನಗರ, ಹೈದ್ರಾಬಾದ್ ಇವರನ್ನು ತಂದೆ ಹಾಜರಪಡಿಸಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 89/2021 ಕಲಂ: 41(ಡಿ), 102 ಸಿ.ಆರ್.ಪಿ.ಸಿ. & 98 ಕೆ.ಪಿ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 17-08-2021 12:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080