ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-04-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 51/2022 ಕಲಂ.279, ಐ.ಪಿ.ಸಿ. : ಇಂದು ದಿನಾಂಕ 17-04-2022 ರಂದು ಸಾಯಂಕಾಲ 4:00 ಗಂಟೆಗೆ ಫಿರ್ಯಾಧಿದಾರರು ಅಜರ್ಿ ಸಾರಾಂಶವೆನೆಂದರೆ, ನಾನು ವಿನೋದ ಕುಮಾರ ತಂದೆ ಸೇವಾನಾಥ ಚವ್ಹಾಣ ವ:36 ವರ್ಷ ಉ:ವ್ಯಾಪಾರ ಜಾ:ಲಮಾಣಿ ಸಾ|| ರಾಜಾಪೂರ ಶಹಬಾದ ಕ್ರಾಸ್ ಕಲಬುರಗಿ ಇದ್ದು ನಾನು ಸುಮಾರು ನಾಲ್ಕು ವರ್ಷದಿಂದ ನನ್ನ ಟ್ಯಾಂಕರ ಲಾರಿ ನಂ,ಕೆಎ-32 ಡಿ-1605 ನೆದ್ದರಲ್ಲಿ ಸೆಡಂ ದಿಂದ ರಾಯಚೂರು ಜಿಲ್ಲೆಯ ಶಕ್ತಿ ನಗರಕ್ಕೆ ಸಿಮೆಂಟನ್ನು ಸಾಗಿಸಿಕೊಂಡು ಇರುತ್ತೆನೆ. ನನ್ನ ಟ್ಯಾಂಕರಗೆ ಚಾಲಕನಾಗಿ ಶ್ರೀಕೃಷ್ಣ ತಂದೆ ರಾಮಪ್ಪ ಚವ್ಹಾಣ ವ|| 25 ವರ್ಷ ಜಾ|| ಲಮಾಣಿ ಉ|| ಚಾಲಕ ಸಾ|| ಯರಕಿಹಾಳ ತಾಂಡ ತಾ|| ಶೋರಾಪೂರ ಜಿ|| ಯಾದಗಿರಿ ಇವನು ಸುಮಾರು ಒಂದು ವರ್ಷ ದಿಂದ ಸಿಮೇಂಟ್ ಟ್ಯಾಂಕರನ್ನು ನಡೆಸಿಕೊಂಡು ಇರುತ್ತಾನೆ. ಹಿಗಿದ್ದು ದಿನಾಂಕ: 16-04-2022 ರಂದು ರಾತ್ರಿ 10-00 ಗಂಟೆಗೆ ಸುಮಾರಿಗೆ ನಮ್ಮ ಗೋತ್ತಿರುವವರ ಲಾರಿಯಲ್ಲಿ ಕ್ಲಿನರ ಕೆಲಸ ಮಾಡಿಕೊಂಡಿರುವ ಶ್ರಿ ಹರಿಕೃಷ್ಣ ತಂದೆ ರಾಮಪ್ಪ ಚವ್ಹಾಣ ವ:32 ವರ್ಷ ಸಾ:ಯರಕಿಹಾಳ ಇವರು ನನಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ಟ್ಯಾಂಕರ ಸೇಡಂ ವಾಸವದತ್ತ ಸಿಮೇಂಟ್ ಪ್ಯಾಕ್ಟರಿಯಿಂದ ಸಿಮೇಂಟನ್ನು ಲೋಡ ಮಾಡಿಕೊಂಡು ಯಾದಗಿರಿ ಮಾರ್ಗವಾಗಿ ರಾಯಚೂರಿಗೆ ಹೋಗುತ್ತಿರುವಾಗ ಸೌದಗಾರ ತಾಂಡ ಕ್ರಾಸ ಹತ್ತಿರ ರಾತ್ರಿ 11-35 ಗಂಟೆ ಸುಮಾರಿಗೆ ನಡೆಸುತ್ತಿರುವ ಚಾಲಕನು ಇಳಿಜಾರು ಪ್ರದೇಶದಲ್ಲಿ ಸಿಮೇಂಟ್ ಲೋಡ್ ಟ್ಯಾಂಕರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಸಿಕೊಂಡು ಹೋಗಿ ರಸ್ತೆಯು ಇಳಿಜಾರು ಆಗಿರುವದರಿಂದ ನಡೆಸುತಿದ್ದ ಟ್ಯಾಂಕರ ನಂ.ಕೆಎ-32 ಡಿ-1605 ನೆದ್ದನ್ನು ನಿಯಂತ್ರಣ ಕಳೆದುಕೊಂಡು ರೋಡಿನ ಪಕ್ಕದಲ್ಲಿರುವ ತಗ್ಗಿಗೆ ಬಿದ್ದು ಪಲ್ಟಿಯಾಗಿರುತ್ತದೆ ಟ್ಯಾಂಕರ ಪಲ್ಟಿಯಾದಾಗ ಚಾಲಕನಿಗೆ ಯಾವುದೆ ಗಾಯಗಳು ಆಗಿರುವದಿಲ್ಲ ಆಗ ಟ್ಯಾಂಕರ ಪಲ್ಟಿಯಾದ ಬಗ್ಗೆ ನನಗೆ ಕರೆ ಮಾಡಿ ತಿಳಿಸಿರುತ್ತಾನೆ. ನಾನು ಮುಂಜಾನೆ ಸ್ಥಳಕ್ಕೆ ಬಂದು ನೋಡಲಾಗಿ ಟ್ಯಾಂಕರ ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ಇರುತ್ತದೆ ಪಲ್ಟಿಯಾದ ರಭಸಕ್ಕೆ ತಿವ್ರ ತಗ್ಗದ ಸ್ಥಳಕ್ಕೆ ಬಿದ್ದು ಲಾರಿ ಟ್ಯಾಂಕರ ಸಂಪೂರ್ಣವಾಗಿ ನುಜ್ಜುಗುಜ್ಜಾಗಿರುತ್ತದೆ.ಕಾರಣ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಅಪಘಾತಪಡಿಸಿದ ಚಾಲಕನ ವಿರುದ್ದ ಕಾನೂನು ರಿತಿಯಾದ ಕ್ರಮಕೈಕೊಳಲು ಈ ಮೂಲಕ ದೂರು ನೀಡುತ್ತಿರುವದು ಇರುತ್ತದೆ. ಈ ಬಗ್ಗೆ ವಿಚಾರಣೆ ಮಾಡಿಕೊಂಡು ಬರಲು ತಡವಾಗಿರುತ್ತದೆ.ಸದರಿ ಅಜರ್ಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ,51/2022 ಕಲಂ,279 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

 

ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ. ಯುವತಿ ಕಾಣೆಯಾದ ಬಗ್ಗೆ. ದಿನಾಂಕ 17.04.2022 ರಂದು ಸಾಯಂಕಾಲ 5.00 ಗಂಟೆಗೆ ಮಹಾದೇವಮ್ಮ ಗಂಡ ಮಲ್ಲಿಕಾಜರ್ುನ ದಂಡಪ್ಪನ್ನೋರ ಸಾ|| ಅರಕೇರಾ.ಕೆ. ಗ್ರಾಮ ಇವರು ಠಾಣೆಗೆ ಬಂದು ಹಾಜರಪಡಿಸಿದ ದೂರು ಸಾರಾಂಶವೇನೆಂದರೆ, ನನ್ನ ಮಗಳು ತಂದೆ ಮಲ್ಲಿಕಾಜರ್ುನ 21 ವರ್ಷ ಇವಳಿಗೆ ಕಾಳೇಬೆಳಗುಂದಿಯ ವರನಾದ ಆಂಜನೇಯ ತಂದೆ ಭೀಮರಾಯ ಇಟ್ಲಾಪೂರ ಇವನೊಂದಿಗೆ ಮದುವೆ ನಿಶ್ಚಯ ಮಾಡಿ ಇಂದು ದಿನಾಂಕ 17.04.2022 ರಂದು ವರನ ಗ್ರಾಮವಾದ ಕಾಳೇಬೇಳಗುಂದಿಯ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮ ಇತ್ತು. ನನ್ನ ಮಗಳನ್ನು ದಿನಾಂಕ 16.04.2022 ರಂದು ಸಾಯಂಕಾಲ ವರನ ಮನೆಯಲ್ಲಿ ಉಡಿತುಂಬುವ ಕಾರ್ಯಕ್ರಮಗಳ ಸಲುವಾಗಿ ನಮ್ಮ ಸಂಬಂಧಿಕರ ಜೊತೆಗೆ ಕಳಿಸಿಕೊಟ್ಟಿದ್ದೆನು. ಸರಸ್ವತಿ ರಾತ್ರಿ ವೇಳೆ ಕಾರ್ಯಕ್ರಮ ಮುಗಿದ ನಂತರ ದಿನಾಂಕ 17.04.2022 ರಂದು ರಾತ್ರಿ 1.00 ಗಂಟೆಯವರೆಗೆ ಕಾರ್ಯಕ್ರಮ ಮಾಡಿ ಎಲ್ಲರೂ ಮಲಗಿಕೊಂಡಾಗ ರಾತ್ರಿ 1.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗಿನ ಅವಧಿಯಲ್ಲಿ ವರನ ಮನೆಯಿಂದ ಹೋಗಿರುತ್ತಾಳೆ ಕಾಣೆಯಾದ ನನ್ನ ಮಗಳ ಚಹರೆ ಸಾದಾರಣ ಮೈಕಟ್ಟು, ಸಾದಾ ಕಪ್ಪು ಮೈಬಣ್ಣ, ದುಂಡನೆಯ ಮೂಗು ಹೊಂದಿದ್ದು, ಎತ್ತರ 4' 5 ಇದ್ದು ಮದುವೆ ಮನೆಯಿಂದ ಹೋಗುವಾಗ ಕೆಂಪು ಬಾರ್ಡರ ಇವರು ಹಳದಿ ಬಣ್ಣದ ಸೀರೆ, ರೆಡ ಕಲರ ಬ್ಲೌಸ್ ಧರಿಸಿದ್ದು, ನನ್ನ ಮಗಳು ಕನ್ನಡ, ತೆಲಗು, ಭಾಷೆಯನ್ನು ಮಾತನಾಡುತ್ತಾಳೆ. ಕಾಣೆಯಾದ ನನ್ನ ಮಗಳು ಸರಸ್ವತಿ ತಂದೆ ಮಲ್ಲಿಕಾಜರ್ುನ 21 ವರ್ಷ ಇವಳನ್ನು ಎಲ್ಲಾ ಕಡೆಗೆ ಹುಡುಕಾಡಿ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಎಲ್ಲಿಯಾದರು ಇರುವ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪತ್ತೆ ಮಾಡಿಕೊಡಬೇಕು ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.50/2022 ಕಲಂ. ಯುವತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 18-04-2022 10:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080