ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-05-2022


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 54/2022 ಕಲಂ 380 ಐಪಿಸಿ: ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ರೆಡ್ ಮೀ-8 ಎ ಮೊಬೈಲ್ ಹೊಂದಿದ್ದು, ಅದರ ಐ.ಎಂ.ಇ.ಐ ನಂ-1] 860669051640580, & 2] 860669051640595, ಅಂತಾ ಇರುತ್ತದೆ. ಸದರಿ ಮೊಬೈಲ್ ದಲ್ಲಿ ನಾನು ಏರಟೆಲ್ ಸಿಮ್ ನಂ-7411295990 ಇದನ್ನು ಉಪಯೋಗ ಮಾಡುತ್ತಿದ್ದೆನು. ಈ ಮೊಬೈಲ್ ಅಂದಾಜು ಕಿಮ್ಮತ್ತು 9,500/-ರೂ|| ಇರುತ್ತದೆ. ನಾನು ಪಿ.ಯು.ಸಿ ದ್ವೀತಿಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು, ಯಾದಗಿರಿ ನಗರದ ಗಂಜ್ ಏರಿಯಾದ ಎಸ್.ಸಿ. ಎಸ್.ಟಿ ಹಾಸ್ಟೆಲ್ದಲ್ಲಿ ಇರುತ್ತೇನೆ. ಹೀಗಿದ್ದು ದಿನಾಂಕ 13/05/2022 ರಂದು ರಾತ್ರಿ 11 ಗಂಟೆಯ ವರೆಗೆ ನಾನು ಓದಿಕೊಂಡು ನನ್ನ ಮೊಬೈಲ್ ನಮ್ಮ ರೂಮಿನಲ್ಲಿ ಇಟ್ಟು, ಬಾಗಿಲು ಸ್ವಲ್ಪ ಮುಂದೆ ಮಾಡಿ ನಮ್ಮ ರೂಮಿನಲ್ಲಿ ಮಲಗಿಕೊಂಡಿದ್ದು, ಬೆಳಿಗ್ಗೆ 05-00 ಗಂಟೆಯ ಸುಮಾರಿಗೆ ಎದ್ದು, ನೋಡಿದಾಗ ನನ್ನ ಮೊಬೈಲ್ ಇರಲಿಲ್ಲ. ನನ್ನಂತೆ ಇದೇ ವಸತಿ ನಿಲಯದಲ್ಲಿ ಇದ್ದ ಪ್ರೇಮಕುಮಾರ ಅನಸುಗುರು ಈತನ ಓಪ್ಪೋ ಮೊಬೈಲ್ ಅ.ಕಿ 15,000/-ರೂ|| ಕಿಮ್ಮತ್ತಿನದು ಹಾಗೂ ಸಾಬರೆಡ್ಡಿ ಗೌಡಿಗೇರಿ ಈತನ ಎಂ.ಐ ಮೊಬೈಲ್, 6500/- ರೂ|| ಕಿಮ್ಮತ್ತಿನ ಮೊಬೈಲ್ ಕಳ್ಳತನವಾಗಿದ್ದು ನಮ್ಮ ಹುಡುಗರಿಂದ ನಮಗೆ ಗೊತ್ತಾಗಿರುತ್ತದೆ. ಈ ಹಿಂದೆ ಕೂಡ 2-3 ಮೊಬೈಲ್ಗಳು ಹೋಗಿರುತ್ತವೆ. ಕಾರಣ ದಿನಾಂಕ 13/05/2022 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ 14/05/2022 ರಂದು ಬೆಳಿಗ್ಗೆ 05-00 ಗಂಟೆಯ ಅವಧಿಯಲ್ಲಿ ಯಾದಗಿರಿ ನಗರದ ಗಂಜ್ ಏರಿಯಾದಲ್ಲಿ ಇರುವ ಹಿಂದುಳಿದ ಪ.ಜಾತಿ & ಪ.ಪಂಗಡ ಮೆಟ್ರಿಕ್ ನಂತರದ ಬಾಲಕರ ವಸತಿ ನಿಯದಲ್ಲಿ ಇದ್ದ ಒಟ್ಟು 31,000/-ರೂ|| ಕಿಮ್ಮತ್ತಿನ 03 ಮೊಬೈಲ್ಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇಲ್ಲಿಯ ವರೆಗೆ ನಮ್ಮ ಪರೀಕ್ಷೆ ಇದ್ದ ಕಾರಣ ಠಾಣೆಗೆ ಬಂದು ದೂರು ಕೊಡಲು ವಿಳಂಭವಾಗಿದ್ದು, ನಮ್ಮ ಮೊಬೈಲ್ಗಳನ್ನು ಪತ್ತೆ ಮಾಡಿಕೊಡಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 54/2022 ಕಲಂ 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 55/2022 ಕಲಂ 379 : ಐಪಿಸಿಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಹೊಂಡಾ ಶೈನ್ ಮೋಟರ್ ಸೈಕಲ್ ನಂ ಏಂ 36 ಙ 5508 ಅಂತಾ ಇದ್ದು, ಅದರ ಇಟಿರಟಿಜ ಓಠ-ಎಅ36ಇ3008971,, ಅಊಂಖಖಖ ಓಔ-ಒಇ4ಎಅ36ಃಆಅ8002789, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 30,000/-ರೂ|| ಗಳು ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು ನಾನು ದಿನಾಂಕ 11/05/2022 ರಂದು ರಾತ್ರಿ 7-30 ಗಂಟೆಯ ಸುಮಾರಿಗೆ ನನ್ನ ಮೋಟರ್ ನಂ ಏಂ 36 ಙ 5508 ನೇದ್ದನ್ನು ತೆಗೆದುಕೊಂಡು ಹೋಗಿ ಯಾದಗಿರಿ ನಗರದ ರೈಲ್ವೆ ಸ್ಟೇಷನ್ದ ಮುಂದೆ ನಿಲ್ಲಿಸಿ ಲಾಕ್ ಮಾಡಿ, ನಾನು ಅವಸರದ ಪ್ರಯುಕ್ತ ನನ್ನ ಮಗನ ಉಪಚಾರ ಕುರಿತು ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಗೆ ಹೋಗಿರುತ್ತೇನೆ. ನಂತರ ಮರಳಿ ದಿನಾಂಕ 16/05/2022 ರಂದು ನಾನು ಬೆಳಿಗ್ಗೆ 4-00 ಗಂಟೆಯ ಸುಮಾರಿಗೆ ಯಾದಗಿರಿ ರೈಲ್ವೆ ಸ್ಟೇಷನ್ಗೆ ಬಂದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ನಮ್ಮ ತಮ್ಮನಾದ ಮಲ್ಲಿಕಾಜರ್ುನ ತಂದೆ ಲಕ್ಷ್ಮಣ ಇವರಿಗೆ ಹಾಗೂ ಅವರ ಗೆಳೆಯರಾದ ಚಂದ್ರಕಾಂತ ತಂದೆ ಕಾಶಪ್ಪ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿ ನನಗೆ ವಿಚಾರಿಸಿದರು. ನಂತರ ಎಲ್ಲರು ಕೂಡಿ ರೈಲ್ವೆ ಸ್ಟೇಷನ್ ಏರಿಯಾ, ಹಳೆಯ ಬಸ್ ನಿಲ್ದಾಣ, ಅಜೀಜ್ ಕಾಲೋನಿ, ಮದನಪೂರಗಲ್ಲಿ ಮತ್ತು ಇತರ ಕಡೆಗಳಲ್ಲಿ ತಿರುಗಾಡಿ ನೋಡಲಾಗಿ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಸದರಿ ನನ್ನ ಮೋಟರ್ ಸೈಕಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಅಲ್ಲಿ ಅಲ್ಲಿ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 55/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 80/2022 ಕಲಂ 87 ಕೆ.ಪಿ ಆಕ್ಟ: ಇಂದು ದಿನಾಂಕ 17/05/2022 ರಂದು ಬೆಳಗ್ಗೆ 01.10 ಎ.ಎಂ.ಕ್ಕೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶಾಮಸುಂದರ ಪಿಎಸ್,ಐ(ಅ,ವಿ) ಶಹಾಪೂರ ಪೊಲೀಸ್ ಠಾಣೆ ಇವರು 10 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ದಿನಾಂಕ : 16/05/2022 ರಂದು ರಾತ್ರಿ 9.00 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಮುನಮುಟಗಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಕುರಿತು ಫಿರ್ಯಾದಿಯವರು ಠಾಣೆಯ ಶ್ರೀ ಬಾಬು ಹೆಚ್ಸಿ-162, ಶ್ರೀ ಭಾಗಣ್ಣ ಪಿಸಿ-194, ಶ್ರೀ ಲಕ್ಕಪ್ಪ ಹೆಚ್ಸಿ-102, ಶ್ರೀ ಭೀಮನಗೌಡ ಪಿಸಿ-402 ಮತ್ತು ಶ್ರೀ ಬಸವರಾಜ ಪಿಸಿ-346 ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ಕೆಎ-33 ಜಿ-0162 ನೇದ್ದರಲ್ಲಿ ರಾತ್ರಿ 9.30 ಪಿ.ಎಂ.ಕ್ಕೆ ಠಾಣೆಯಿಂದ ಹೋಗಿ 10.20 ಪಿ.ಎಂ.ಕ್ಕೆ ದಾಳಿ ಮಾಡಿ 10 ಜನ ಆರೋಪಿತರನ್ನು ಹಿಡಿದು ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 23220=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ರಾತ್ರಿ 10.20 ಪಿ.ಎಂ. ಇಂದ 11.50 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 80/2022 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 81/2022 ಕಲಂ 143,147,341,323,504,506 ಸಂಗಡ 149ಐಪಿಸಿ: ಇಂದು ದಿನಾಂಕ: 17/05/2022 ರಂದು 2-30 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಮರೆಮ್ಮ ಗಂಡ ಮರೆಪ್ಪ ಉಳ್ಳೆಸುಗುರ ವಯಾ: 50 ಉ: ಕೂಲಿಕೆಲಸ ಜಾತಿ: ಕುರುಬರ, ಸಾ: ದೊರನಳ್ಳಿ ಇವರು ಠಾಣೆಗೆ ಬಂದು ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ ನಾನು ಸುಮಾರು ನಮ್ಮ ಓಣಿಯ ಶರಣಮ್ಮ ಗಂಡ ಅಯ್ಯಪ್ಪ ಘೋಸಿ ಇವಳಿಗೆ ಸುಮಾರು 5000 ರೂಗಳು ಕೈಗಡ ಕೊಟ್ಟಿರುತ್ತೇನೆ. ನಾನು ಆಗಾಗ ನಾನು ಕೊಟ್ಟಿದ್ದ ಹಣವನ್ನು ಸುಮಾರು ಸಲ ಕೇಳಿದ್ದೆನು, ಆಗ ಅವಳು ಎಷ್ಟು ಸಲ ಕೇಳುತ್ತಿ ಬೋಸಡಿ ನಾನು ಯಾವಾಗ ಕೊಡುತ್ತೇನೆ ಆವಾಗ ತೋಗೊ ಅಂತಾ ನನಗೆ ಅವಾಚ್ಯವಾಗಿ ಬೈದಳು, ನಾನು ಜಗಳ ಆಡೋದು ಬೇಡ ಅಂತಾ ಸುಮ್ಮನಿದ್ದು ಯಾವಾಗಲಾದರು ಹಣ ಕೊಡಲಿ ಬಿಡು ಅಂತಾ ಮನೆಗೆ ಬಂದೆನು.
ಹೀಗಿದ್ದು ನಿನ್ನೆ ದಿನಾಂಕ: 16/05/2022 ರಂದು ಬೆಳಿಗ್ಗೆ 7-00 ಸುಮಾರಿಗೆ ನಾನು ಶರಣಮ್ಮ ಗಂಡ ಅಯ್ಯಪ್ಪ ಘೋಸಿ ಇವಳ ಮನೆ ಮುಂದೆ ಹೋಗಿ ನನ್ನ ಮಗಳು ಬಸರಿ ಇದ್ದಾಳೆ ಅವಳಿಗೆ ಸ್ಕಾನಿಂಗ ಮಾಡಿಸಬೇಕಾಗಿದೆ ನಾನು ಕೊಟ್ಟ 5000 ರೂಗಳು ಕೋಡು ಅಂತಾ ಕೇಳಿದಾಗ ಅಲ್ಲಿಯೇ ಮನೆಯಲ್ಲಿದ್ದ ಅವರ ಅಣ್ಣ-ತಮ್ಮ ಪೈಕಿಯವರಾದ 1) ಶಾಂತಮ್ಮ ಗಂಡ ಮಾಳಪ್ಪ ಬರೆನಳ್ಳಿ 2) ಕಾಂತಮ್ಮ ಗಂಡ ಖಂಡಪ್ಪ ಘೋಸಿ 3) ಶರಣಮ್ಮ ಗಂಡ ಅಯ್ಯಪ್ಪ ಘೋಸಿ 4) ಸಾಬಮ್ಮ 5) ಯಲ್ಲಮ್ಮ 6) ವಿಜಯಲಕ್ಷ್ಮಿ ಗಂಡ ಈಶಪ್ಪ ಘೋಸಿ 7) ಖಂಡಪ್ಪ ತಂದೆ ಮರೆಪ್ಪ ಘೋಸಿ 8) ಅಯ್ಯಪ್ಪ ತಂದೆ ಮರೆಪ್ಪ ಘೋಸಿ 9) ಈಶಪ್ಪ ತಂದೆ ಮರೆಪ್ಪ ಘೋಸಿ ಎಲ್ಲರೂ ಸಾ: ದೋರನಳ್ಳಿ ಇವರೆಲ್ಲರೂ ಕೂಡಿಕೊಂಡು ಬಂದವರೆ ಎಲೇ ಸೂಳೆ ಮಗಳೆ ನಿನ್ನ ಹಣ ಕೊಡುವುದಿಲ್ಲ ನೋಡು ಎನು ಮಾಡಕೊತಿ ಮಾಡಕೊ ಅಂತಾ ಎಲ್ಲರೂ ಕೂಡಿ ಬಂದರು, ಎಲ್ಲರಿಗೂ ನಾನು ಅಂಜಿ ಮನೆ ಕಡೆಗೆ ಹೋಗುತ್ತಿರುವಾಗ ಶಾಂತಮ್ಮ ಗಂಡ ಮಾಳಪ್ಪ, ಕಾಂತಮ್ಮ ಗಂಡ ಖಂಡಪ್ಪ ಘೋಸಿ, ಶರಣಮ್ಮ ಗಂಡ ಅಯ್ಯಪ್ಪ, ಸಾಬಮ್ಮ, ಯಲ್ಲಮ್ಮ, ವಿಜಯಲಕ್ಷ್ಮಿ ಗಂಡ ಈಶಪ್ಪ ಘೋಸಿ ಇವರೆಲ್ಲರೂ ಬಂದು ನನಗೆ ತಡೆದು ನಿಲ್ಲಿಸಿ ತಲೆ ಕೂದಲು ಹಿಡಿದು ಎಲೇ ಸೂಳಿ ನಿನಗೆ ಸೊಕ್ಕು ಬಹಾಳ ಬಂದಿದೆ ಪದೇ ಪದೇ ಮನೆಗ ಹಣ ಕೇಳಲು ಬರುತ್ತಿ ರಂಡಿ, ಸೂಳಿ ಅಂತಾ ಅಂತಾ ಬೈಯುತ್ತಾ ಎಲ್ಲರೂ ನನ್ನ ಕೂದಲು ಹಿಡಿದು ಎಳೆದಾಡಿ ಕೈಯಿಂದ ತಲೆಗೆ, ಹೊಟ್ಟೆಗೆ, ಬೆನ್ನಿಗೆ, ಹೊಡೆದು ಒಳಪೆಟ್ಟು ಮಾಡಿದರು. ಅಲ್ಲದೆ ಖಂಡಪ್ಪ ತಂದೆ ಮರೆಪ್ಪ ಘೋಸಿ, ಅಯ್ಯಪ್ಪ ತಂದೆ ಮರೆಪ್ಪ ಘೋಸಿ, ಈಶಪ್ಪ ತಂದೆ ಮರೆಪ್ಪ ಘೋಸಿ ಇವರು ಕೂಡಾ ಬಂದು ನನಗೆ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಕೈಯಿಂದ ಹೊಡೆದು ಒಳಪೆಟ್ಟು ಮಾಡಿದರು. ಆಗ ನಾನು ನೇಲಕ್ಕೆ ಬಿದ್ದು ಚಿರಾಡುವಾಗ ಅಲ್ಲೇ ಇದ್ದ ನನ್ನ ಮಗನಾದ ವಿಶ್ವನಾಥ ವಯಾ: 21 ಹಾಗೂ ಮಗಳಾದ ಬಸಮ್ಮ ಗಂಡ ಸುನಿಲ ಹೆಬ್ಬಾಳ ವಯಾ: 19 ಇವರಿಬ್ಬರು ಬಂದು ನನಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ನಂತರ ಅವರೆಲ್ಲರು ಕೂಡಿ ಸೂಳಿ ಇವತ್ತು ನಮ್ಮ ಕೈಯಲ್ಲಿ ಉಳಿದಿಯಾ ಇನ್ನೊಮ್ಮೆ ನಮ್ಮ ಮನೆಗ ಕಡೆಗೆ ಹಣ ಕೇಳಲು ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದರು. ನಂತರ ನನಗೆ ಅಷ್ಟೇನು ರಕ್ತಗಾಯ ಆಗದೇ ಇರುವುದರಿಂದ ಆಸ್ಪತ್ರೆಗೆಎ ತೋರಿಸಿಕೊಂಡಿರುವುದಿಲ್ಲ. ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನಗೆ ಮೇಲ್ಕಂಡ 9 ಜನರು ನನಗೆ ತಡೆದು ನಿಲ್ಲಿಸಿ, ಕೈಯಿಂದ ಕಪಾಳಕ್ಕೆ ಬೆನ್ನಿಗೆ, ಹೊಟ್ಟೆಗೆ, ಕೂದಲು ಹಿಡಿದು ತಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿದ್ದು, ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 81/2022 ಕಲಂ: 143, 147, 341, 323, 504, 506 ಸಂಗಡ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 59/2022 ಕಲಂ78(3) ಕೆ.ಪಿ ಕಾಯ್ದೆ: 17.05.2022 ರಂದು ಮಧ್ಯಾಹ್ನ 3.00 ಗಂಟೆಗೆ ವಿಜಯಕುಮಾರ ಪಿ.ಐ ಸಾಹೇಬರು ಸೈದಾಪುರ ಪೊಲೀಸ್ ಠಾಣೆರವರು ಸ್ಥಳಿಯ ಸ್ಟೇಷನ್ ಸೈದಾಪುರದ ಅಜಾನ ಮಸೀದಿ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಒಬ್ಬ ಆಪಾದಿತನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಜಪ್ತಿಪಂಚನಾಮೆ, ಆಪಾದಿತ ವ್ಯಕ್ತಿ ಮತ್ತು ಮುದ್ದೆಮಾಲು ಠಾಣೆಗೆ ತಂದು ಒಪ್ಪಿಸಿದ್ದು, ಮೂಲ ಜಪ್ತಿ ಪಂಚನಾಮೆ ಸಾರಾಂಶವೇನೆಂದರೆ, ಸ್ಟೇಷನ್ ಸೈದಾಪುರದ ಮಸೀದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಮಟಕಾ ಜೂಜಾಟದ ನಂಬರ ಬರೆಸಿ 1 ರೂಪಾಯಿಗೆ 80 ರೂಪಾಯಿಗಳು ಸಿಗುತ್ತವೆ ದೈವಲೀಲೆ ಆಟ ಅಂತಾ ಕೂಗುತ್ತ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆಯುವ ವ್ಯಕ್ತಿ ಮೇಲೆ ದಾಳಿಮಾಡಿ ಮಧ್ಯಾಹ್ನ 1.30 ಗಂಟೆ ಮಟಕಾ ಬರೆಯಿಸಿರಿ ಅಂತ ಕೂಗುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿಯವರು ಹಿಡಿದುಕೊಂಡು ವ್ಯಕ್ತಿಯ ಹೆಸರು, ವಿಳಾಸ ವಿಚಾರಿಸಿ ಅಂಗಶೋಧನೆ ಮಾಡಿದಾಗ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ ಹಾಗೂ ನಗದು ಹಣ 3100=00 ರೂಪಾಯಿ ಮುದ್ದೆಮಾಲನ್ನು ಜಪ್ತಿ ಮಾಡಿ ಪ್ರತ್ಯೇಕ ಕವರನಲ್ಲಿ ಹಾಕಿ ಅದಕ್ಕೆ ಪಂಚರು ಮತ್ತು ಪಿ.ಐ ಸಾಹೇಬರು ಸಹಿ ಮಾಡಿ ಪಂಚರ ಚೀಟಿ ಅಂಟಿಸಿದ್ದು, ಸದರಿ ಜಪ್ತಿ ಪಂಚನಾಮೆಯನ್ನು ದಿನಾಂಕ 17.05.2022 ರಂದು ಮಧ್ಯಾಹ್ನ 1-30 ಗಂಟೆಯಿಂದ 2-30 ಗಂಟೆಯ ಮಧ್ಯದ ಅವಧಿಯಲ್ಲಿ ಸ್ಥಳದಲ್ಲಿಯೇ ಕೈಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 59/2022 ಕಲಂ 78(3) ಕೆ.ಪಿ. ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಕೊಡೆಕಲ್ಲ ಪೊಲೀಸ್ ಠಾಣೆ:-
ಗುನ್ನೆ ನಂ: 40 ಕಲಂ: 78(3) ಕೆ.ಪಿ ಆಕ್ಟ್: ಇಂದು ದಿನಾಂಕ:17.05.2022 ರಂದು 6:00 ಪಿ.ಎಮ್ ಕ್ಕೆ ಸರಕಾರಿ ತಪರ್ೆ ಶ್ರೀ ಶ್ರೀಶೈಲ ಅಂಬಾಟಿ ಪಿಎಸ್ಐ (ಕಾ.ಸು) ಸಾಹೇಬರು ಕೊಡೆಕಲ್ಲ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರವನ್ನು ಮೂಲ ಜಪ್ತಿ ಪಂಚನಾಮೆಯೊಂದಿಗೆ ನೀಡಿದ್ದು ಪಿ.ಎಸ್.ಐ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ಇಂದು ದಿನಾಂಕ:17.05.2022 ರಂದು ಮಧ್ಯಾಹ್ನ 2:30 ಪಿ.ಎಮ್ ಕ್ಕೆ ನಾನು ಕೊಡೆಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಕಕ್ಕೇರಾ ಪಟ್ಟಣದ ಶ್ರೀ ಮರಗಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಯಲ್ಲಪ್ಪ ಹೆಚ್ಸಿ-117 ರವರಿಗೆ ದಾಳಿ ಕುರಿತು ಇಬ್ಬರು ಪಂಚರಿಗೆ ಕರೆದುಕೊಂಡು ಬರಲು ತಿಳಿಸಿದ್ದು ಸದರಿ ಹೆಚ್ಸಿ ರವರು ಪಂಚರನ್ನಾಗಿ 1)ಶ್ರೀ ಕೃಷ್ಣಪ್ಪ ತಂದೆ ಶಿವನಪ್ಪ ಹೆಬ್ಬಾಳದರ ವ|| 48ವರ್ಷ ಜಾ|| ಹಿಂದೂ ಬೇಡರ ಉ|| ಹಮಾಲಿ ಕೆಲಸ ಸಾ||ಕೊಡೇಕಲ್ಲ ತಾ:ಹುಣಸಗಿ 2) ಶ್ರೀ ಸಂಗಯ್ಯ ತಂದೆ ಬಸಯ್ಯ ಹಿರೇಮಠ ವ:34 ವರ್ಷ ಜಾ:ಹಿಂದೂ ಲಿಂಗಾಯತ ಉ:ಕೂಲಿಕೆಲಸ ಸಾ:ಕೊಡೆಕಲ್ಲ ತಾ:ಹುಣಸಗಿ ರವರಿಗೆ 2:40 ಪಿ.ಎಮ್ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು ನಾನು ಪಂಚರಿಗೆ ವಿಷಯ ತಿಳಿಸಿದ್ದು ಪಂಚರು ದಾಳಿ ಕಾಲಕ್ಕೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಒಪ್ಪಿಕೊಂಡಿದ್ದು ನಂತರ ಪಂಚರು ಮತ್ತು ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್ಸಿ-117, ಅಯೂಬ್ಖಾನ್ ಹೆಚ್.ಸಿ-125 ಜೀಪ್ ಚಾಲಕ ಬಸವರಾಜ ಪಿ.ಸಿ-76 ರವರೊಂದಿಗೆ ಸರಕಾರಿ ಜೀಪ್ ನಂ:ಕೆಎ-33 ಜಿ-0165 ವಾಹನದಲ್ಲಿ ಕುಳಿತುಕೊಂಡು ಠಾಣೆಯನ್ನು 2:45 ಪಿ.ಎಮ್ ಕ್ಕೆ ಬಿಟ್ಟು ಕಕ್ಕೇರಾ ಉಪ ಠಾಣೆಗೆ 3:45 ಪಿ.ಎಮ್ ಕ್ಕೆ ತಲುಪಿ ನಾನು ಅಲ್ಲಿನ ಸಿಬ್ಬಂದಿಯವರಾದ ಸಾಂತಪ್ಪ ಪಿ.ಸಿ-91 ರವರಿಗೆ ಕರೆದು ವಿಷಯ ತಿಳಿಸಿ ನಮ್ಮೊಂದಿಗೆ ಕರೆದುಕೊಂಡು ಜೀಪ್ನಲ್ಲಿ ಕೂಡಿಸಿಕೊಂಡಿದ್ದು, 3:50 ಪಿ.ಎಮ್ ಕ್ಕೆ ಬಾತ್ಮೀ ಬಂದ ಸ್ಥಳದ ಸಮೀಪ ಹೋಗಿ ಜೀಪ್ನ್ನು ಮರೆಯಲ್ಲಿ ನಿಲ್ಲಿಸಿ ಎಲ್ಲರೂ ಜೀಪ್ನಿಂದ ಇಳಿದು ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿಯು ಕಕ್ಕೇರಾ ಪಟ್ಟಣದ ಶ್ರೀ ಮರಗಮ್ಮ ದೇವಸ್ಥಾನದ ಹತ್ತಿರ ರಸ್ತೆಯ ಮೇಲೆ ನಿಂತು ಹೋಗಿ ಬರುವ ಜನರಿಗೆ ಕರೆದು ಇದು ಕಲ್ಯಾಣಿ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ 80 ರೂಪಾಯಿ ಬರುತ್ತದೆ ಅದೃಷ್ಟ ಇದ್ದವರು ನಂಬರ ಬರೆಯಿಸಿ ಹಣ ಪಡೆದುಕೊಳ್ಳಿ ಅಂತಾ ಅನ್ನುತ್ತಾ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರವುಳ್ಳ ಚೀಟಿಗಳನ್ನು ಬರೆದುಕೊಡುವದನ್ನು 4:00 ಪಿ.ಎಮ್ ಕ್ಕೆ ಖಚಿತಪಡಿಸಿಕೊಂಡು ನಾನು ಹಾಗೂ ಎಲ್ಲಾ ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮದಲ್ಲಿ ಒಮ್ಮೇಲೆ ದಾಳಿ ಮಾಡಿ ಸದರಿ ವ್ಯಕ್ತಿಗೆ ಹಿಡಿದಿದ್ದು, ನಾನು ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಿದ್ದು, ಅವನು ತನ್ನ ಹೆಸರು ಸೋಮುಸಜರ್ುನಾಯಕ ತಂದೆ ನಂದಯ್ಯ ದೇಸಾಯಿ ವಯಾ-22 ವರ್ಷ, ಜಾ:ಹಿಂದೂ ಬೇಡರ ಉ:ಕಿರಾಣಿ ಅಂಗಡಿ ವ್ಯಾಪಾರ ಸಾ:ಕಕ್ಕೇರಾ ತಾ:ಸುರಪೂರ ಜಿ:ಯಾದಗಿರ ಅಂತಾ ತಿಳಿಸಿದ್ದು, ಸದರಿಯವನು ತನ್ನ ಹತ್ತಿರ ಇದ್ದ ನಗದು ಹಣ ಒಂದು ಮಟಕಾ ನಂಬರ ಬರೆದ ಚೀಟಿಯನ್ನು ಹಾಗೂ ಒಂದು ಬಾಲ್ ಪೆನ್ನನ್ನು ಹಾಜರುಪಡಿಸಿದ್ದು, ನಾನು ಸದರಿಯವನು ಹಾಜರುಪಡಿಸಿದ ಹಣವನ್ನು ಪಂಚರ ಸಮಕ್ಷಮದಲ್ಲಿ ಎಣಿಸಿದ್ದು, 200 ರೂಪಾಯಿಯ ಎರಡು ನೋಟು, 100 ರೂಪಾಯಿಯ ನಾಲ್ಕು ನೋಟುಗಳು ಹಾಗೂ 50 ರೂಪಾಯಿ ಒಂದು ನೋಟು ಹೀಗೆ ಒಟ್ಟು 850/-ರೂ ಗಳು ಇದ್ದು, ಸದರಿ 1) 850/-ರೂ ನಗದು ಹಣ 2) ಒಂದು ಮಟಕಾ ನಂಬರ ಬರೆದ ಚೀಟಿ, 3) ಒಂದು ಬಾಲ್ ಪೆನ್ನನ್ನು ಕೇಸಿನ ಮುಂದಿನ ಪುರಾವೆಗೆಂದು ಜಪ್ತಿ ಮಾಡಿಕೊಂಡು ಒಂದು ಕಾಗದದ ಪಾಕೇಟ್ನಲ್ಲಿ ಹಾಕಿ ಶೀಲ್ ಮಾಡಿ ನನ್ನ ಹಾಗೂ ಪಂಚರು ಸಹಿ ಮಾಡಿದ ನಿಶಾನೆ ಚೀಟಿ ಅಂಟಿಸಿ ನಮ್ಮ ವಶಕ್ಕೆ ಪಡೆದುಕೊಂಡರು. ಸದರಿಯವನಿಗೆ ವಿಚಾರಿಸಲಾಗಿ ಸದರಿಯವನು ಈ ಹಣ ಮಟಕಾ ನಂಬರ್ ಬರೆಯಿಸುವವರಿಂದ ಹಣ ಪಡೆದು ಚೀಟಿ ಬರೆದು ಕೊಟ್ಟಿದ್ದರಿಂದ ಬಂದಿರುವದಾಗಿ ತಿಳಿಸಿದ್ದು, ಸದರಿಯವನು ಕಲ್ಯಾಣ ಮಟಕಾ ಎಂಬುವ ಓಪನಿಂಗ್ ಮತ್ತು ಕ್ಲೋಸಿಂಗ್ ಆಟ ಆಡುತ್ತಿದ್ದುದು ಖಚಿತಪಟ್ಟಿದ್ದು ಇರುತ್ತದೆ. ನಂತರ ಸದರಿ ಮಟಕಾ ಬರೆದುಕೊಳ್ಳುತ್ತಿದ್ದ ಸೋಮುಸಜರ್ುನಾಯಕ ತಂದೆ ನಂದಯ್ಯ ದೇಸಾಯಿ ವಯಾ-22 ವರ್ಷ, ಜಾ:ಹಿಂದೂ ಬೇಡರ ಉ:ಕಿರಾಣಿ ಅಂಗಡಿ ವ್ಯಾಪಾರ ಸಾ:ಕಕ್ಕೇರಾ ತಾ:ಸುರಪೂರ ಜಿ:ಯಾದಗಿರ ಈತನನ್ನು ವಶಕ್ಕೆ ಪಡೆದುಕೊಂಡು ಸಿಬ್ಬಂದಿಯೊಂದಿಗೆ ಮರಳಿ ಕೊಡೆಕಲ್ಲ ಠಾಣೆಗೆ 5:55 ಪಿ.ಎಮ್ ಕ್ಕೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಆರೋಪಿ & ಮೂಲ ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಜರಪಡಿಸಿ ಸರಕಾರದ ಪರವಾಗಿ 6:00 ಪಿಎಮ್ ಗಂಟೆಗೆ ವರದಿ ಸಲ್ಲಿಸಿರುತ್ತೇನೆ. ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಸೂಚಿಸಲಾಗಿದೆ ಅಂತಾ ಇದ್ದು ಸದರ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:40/2022 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ 78 (3) ಕೆ.ಪಿ ಕಾಯ್ದೆ: 17-05-2022 ರಂದು ಸಾಯಂಕಾಲ 05-45 ಗಂಟೆಗೆ ಶ್ರೀ ರಾಜಕುಮಾರ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಯರಗೊಳ ಗ್ರಾಮದ ನಾಗರ ಕಟ್ಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 1020=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.66/2022 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 82/2022 ಕಲಂ 87 ಕೆ.ಪಿ ಆಕ್ಟ : ಇಂದು ದಿನಾಂಕ 17/05/2022 ರಂದು 18-30 ಪಿ.ಎಂ.ಕ್ಕೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ರಾಹುಲ್ ಪವಾಡೆ ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ಇವರು 6 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ದಿನಾಂಕ : 17/05/2022 ರಂದು 15-00 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ದೋರನಳ್ಳಿ ಗ್ರಾಮದ ಹತ್ತಿರ ಇರುವ ಬಿರಲಿಂಗೇಶ್ವರ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಕುರಿತು ಫಿರ್ಯಾದಿಯವರು ಠಾಣೆಯ ಶ್ರೀ ಶರಣಪ್ಪ ಹೆಚ್ಸಿ-164, ಶ್ರೀ ಸಿದ್ದಪ್ಪ ಪಿ.ಸಿ.89, ರಾಮಚಂದ್ರ ಪಿ.ಸಿ.266, ನಿಂಗಪ್ಪ ಪಿ.ಸಿ.284. ಬಸವರಾಜ ಪಿ.ಸಿ.346, ಮಹಾದೇವಪ್ಪ ಪಿ.ಸಿ.334, ಧರ್ಮರಾಜ ಪಿ.ಸಿ.45, ಭಿಮನಗೌಡ ಪಿ.ಸಿ.402, ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ಕೆಎ-32 ಜಿ-0618 ನೇದ್ದರಲ್ಲಿ 15-30 ಪಿ.ಎಂ.ಕ್ಕೆ ಠಾಣೆಯಿಂದ ಹೋಗಿ 16-10 ಪಿ.ಎಂ.ಕ್ಕೆ ದಾಳಿ ಮಾಡಿ 6 ಜನ ಆರೋಪಿತರನ್ನು ಹಿಡಿದು ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 7260=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು 16-10 ಪಿ.ಎಂ. ಇಂದ 17-10 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 82/2022 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 15-11-2022 10:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080