ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18-06-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 135/2021 ಕಲಂ 279, 337, 338, 304(ಎ) ಐ.ಪಿ.ಸಿ : ಇಂದು ದಿನಾಂಕ 17/06/2021 ರಂದು ಮುಂಜಾನೆ 08-00 ಎ.ಎಂ.ಕ್ಕೆ ಫಿಯರ್ಾದಿ ಶ್ರೀ ನಿಂಗಪ್ಪ ತಂ/ ಭೀಮಪ್ಪ ಕದರಾಪೂರ, ಸಾ|| ಹಳಿಪೇಟ್ ಶಹಾಪೂರ, ತಾ|| ಶಹಾಪೂರ, ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸರಾಂಶವೆನೆಂದರೆ. ದಿನಾಂಕ: 17/06/2021 ರಂದು 1.00 ಎ.ಎಂ. ಸುಮಾರಿಗೆ ನನ್ನ ಗೆಳೆಯ ಉದಯಕುಮಾರ ತಂ/ ಸ್ಯಾಮುವೆಲ್ ಬೆಳಗುಂದಿ, ಸಾ|| ಸಾ|| ತಾರಫೈಲ್, ಕಲಬುಗರ್ಿ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿನ್ನೆ ದಿನಾಂಕ:16/06/2021 ರಂದು ನನ್ನ ಅಣ್ಣನ ಮಗ ಪೃತ್ವಿರಾಜ ತಂ/ ಶಾಂತಪ್ಪ ರಾಂಪೂರ ಮತ್ತು ಅವನ ಗೆಳೆಯರಾದ ನಿಂಗರಾಜ ತಂ/ ಭೀಮಶಾ ರಾಮನಾಳಕರ್, ಜೈಭೀಮ್ ತಂ/ ಮಲ್ಲಿಕಾಜರ್ುನ ಪಾಳ, ರವಿ ತಂ/ ಯಂಕಪ್ಪ ಬೂದಿನಾಳ ಎಲ್ಲರೂ ಕೂಡಿ ಟಾಟಾ ವಿಸ್ತಾ ಕಾರ್.ನಂ. ಕೆಎ-32 ಸಿ-5726 ನೇದ್ದರಲ್ಲಿ ಮದುವೆಗೆಂದು ರಾಯಚೂರಿಗೆ ಹೋಗಿ ಮರಳಿ ಕಲಬುಗರ್ಿಗೆ ಬರುವಾಗ ಗೂಗಲ್ ಬ್ರಿಡ್ಜ ಮಾರ್ಗವಾಗಿ ಬರುತ್ತಿದ್ದ ಸಮಯದಲ್ಲಿ ರವಿ ಬೂದಿನಾಳನು ಡ್ರೈವಿಂಗ್ ಮಾಡುತ್ತಿದ್ದನು. ರಾತ್ರಿ 10.00 ಪಿ.ಎಂ. ಸುಮಾರಿಗೆ ಹೈಯಾಳ(ಬಿ) ಗ್ರಾಮ ದಾಟಿ ಅಂದಾಜು 3 ಕಿ.ಮೀ ದಾಟಿ ಹತ್ತಿಗುಡೂರ ಕಡೆಗೆ ಹೊರಟಿದ್ದಾಗ ಚಾಲಕ ರವಿ ಬೂದಿನಾಳ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ಹೈಯಾಳ(ಬಿ)-ಹತ್ತಿಗುಡೂರ ರಸ್ತೆಯಲ್ಲಿರುವ ರಾಯನ ಹಳ್ಳದ ಹತ್ತಿರ ಕಾರ ಚಾಲಕನ ನಿಯಂತ್ರಣ ತಪ್ಪಿ ಕಾರನ್ನು ಹಳ್ಳದಲ್ಲಿ ಹಾಕಿದರಿಂದ ಕಾರಿನಲ್ಲಿದ್ದವರಿಗೆ ಭಾರೀ ಗಾಯಗಳಾಗಿದ್ದು, ಗಾಯಾಳುಗಳಿಗೆ 108 ವಾಹನದಲ್ಲಿ ಹಾಕಿಕೊಂಡು ಬರುತ್ತಿದ್ದಾರೆ ಅಂತಾ ರವಿ ತಂ/ ಯಂಕಪ್ಪ ಬೂದನಾಳ ಇವನು ಫೋನ್ ಮಾಡಿ ತಿಳಿಸಿದ್ದರಿಂದ ನಾನು ಮತ್ತು ನಿಂಗರಾಜನ ಅಕ್ಕ ಶ್ರೀಮತಿ ನಿರ್ಮಲಾ ಗಂ/ ಶರಣಪ್ಪ ಏರೂರ ಮತ್ತು ಅಣ್ಣ ಶ್ರೀನಿವಾಸ ತಂ/ ಭೀಮಶ್ಯಾ ರಾಮನಾಳಕರ್ ರವರೊಂದಿಗೆ ಶಹಾಪೂರಕ್ಕೆ ಬಂದಿದ್ದೇವೆ ನೀನು ಬಾ ಅಂತಾ ಅಂದಾಗ ನಾನು ಶಹಾಪೂರ ಸರಕಾರಿ ಆಸ್ಪತ್ರೆಯ ಹತ್ತಿರ ಇದ್ದ ಉದಯನ ಹತ್ತಿರ ಹೋದಾಗ 1.45 ಎ.ಎಂ. ಸುಮಾರಿಗೆ 108 ವಾಹನ ಬಂದಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋದಾಗ 1.52 ಎ.ಎಂ. ಸುಮಾರಿಗೆ ಪರೀಕ್ಷೆ ಮಾಡಿದ ವೈಧ್ಯಾಧಿಕಾರಿಗಳು ನಿಂಗರಾಜನು ಆಸ್ಪತ್ರೆಗೆ ಬರುವುದಕ್ಕಿಂತ ಮೊದಲೆ ಮೃತಪಟ್ಟಿರುತ್ತಾನೆ ಅಂತಾ ಹೇಳಿದಾಗ ನಿಂಗರಾಜನ ಅಕ್ಕ ನಿರ್ಮಲಾ ಇವರು ತಾನು ಕಲಬುಗರ್ಿಯ ಸಂಗಮೇಶ್ವರ ಆಸ್ಪತ್ರೆಯಲ್ಲಿ ಸ್ಟ್ಯಾಫ್ ನರ್ಸ ಅಂತಾ ಕೆಲಸ ಮಾಡುತ್ತಿದ್ದು, ನನ್ನ ತಮ್ಮ ನಿಂಗರಾಜನು ಇನ್ನೂ ಜೀವಂತ ಇರಬಹುದು ನಾನು ಇವನಿಗೆ ಕಲಬುಗರ್ಿಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿ ನಿಂಗರಾಜನಿಗೆ ಒಂದು ವಾಹನದಲ್ಲಿ ಹಾಕಿಕೊಂಡು ಹೋದರು. ಇನ್ನಿತರ ಗಾಯಾಳುಗಳಿಗೆ ವಿಚಾರಿಸಲಾಗಿ ಎದಗೆ ಮತ್ತು ತಲೆಗೆ ಭಾರೀ ಒಳಪೆಟ್ಟಾಗಿರುವುದು ತಿಳಿದು ಬಂದಿದ್ದು, ಪೃತ್ವಿರಾಜನಿಗೆ ಎದೆಗೆೆ ಮತ್ತು ತಲೆಗೆ ಭಾರೀ ಒಳಪೆಟ್ಟಾಗಿರುತ್ತದೆ. ಜೈಭೀಮ ಪಾಳ ಇವನಿಗೆ ಸೊಂಟಕ್ಕೆ, ಎಡ ಬುಜಕ್ಕೆ ಮತ್ತು ಎಡಗಾಲಿಗೆ ಒಳಪೆಟ್ಟು ಆಗಿದ್ದು, ಚಾಲಕ ರವಿ ಬೂದಿನಾಳ ಇವನಿಗೆ ಎಡಬುಜಕ್ಕೆ ಮತ್ತು ಎಡಗಾಲ ತೊಡೆಗೆ ಒಳಪೆಟ್ಟಾಗಿರುತ್ತದೆ. ಸದರಿಯವರು ನಾವು ಶಹಾಪೂರದಲ್ಲಿ ಉಪಚಾರ ಪಡೆಯುವುದಿಲ್ಲ ಅಂತಾ ಹೇಳಿ 108 ವಾಹನದಲ್ಲಿ ಕಲಬುಗರ್ಿಗೆ ಹೋಗಿರುತ್ತಾರೆ. ಇಂದು ಬೆಳಿಗ್ಗೆ ಗೊತ್ತಾಗಿದ್ದೇನೆಂದರೆ, ಇಂದು ಬೆಳಗಿನ ಜಾವ 4.20 ಎ.ಎಂ. ಸುಮಾರಿಗೆ ಗಾಯಾಳು ನಿಂಗರಾಜನಿಗೆ ಕಲಬುಗರ್ಿಯ ಕಾಮರೆಡ್ಡಿ ಆಸ್ಪತ್ರೆ ಕರೆದುಕೊಂಡು ಹೋಗಿ ಉಪಚಾರಕ್ಕಾಗಿ ಸೇರಿಕೆ ಮಾಡಿದಾಗ ತಪಾಸಣೆ ಮಾಡಿದ ವೈಧ್ಯರು ಆಸ್ಪತ್ರೆಗೆ ಬರುವುದಕ್ಕಿಂತ ಮೊದಲೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಬಗ್ಗೆ ಉದಯಕುಮಾರನು ನನಗೆ ಫೋನ್ ಮಾಡಿ ತಿಳಿಸಿದ್ದರಿಂದ ನಾನು ಠಾಣೆಗೆ ಹಾಜರಾಗಿರುತ್ತೇನೆ. ಈ ಅಪಘಾತಕ್ಕೆ ಕಾರಣನಾದ ಕಾರ್ ನಂ.ಕೆಎ-32 ಸಿ-5726 ನೇದ್ದರ ಚಾಲಕನ ರವಿ ತಂ/ ಯಂಕಪ್ಪ ಬೂದಿನಾಳ ವ|| 25 ಸಾ|| ತಾರಫೈಲ್ ಕಲಬುಗರ್ಿ ಇವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 135/2021 ಕಲಂ 279, 337, 338, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 137/2021 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ 17/06/2021 ರಂದು 18-00 ಗಂಟೆಗೆ ಫಿಯರ್ಾದಿ ಶ್ರೀ ಹಣಮಂತ್ರಾಯಗೌಡ ತಂದೆ ಪರ್ವತರಡ್ಡಿ ಮಾಲಿಪಾಟೀಲ್, ವಯಸ್ಸು 52 ವರ್ಷ, ಜಾತಿ ಲಿಂಗಾಯತ, ಉಃ ಒಕ್ಕಲುತನ, ಸಾಃ ಶಾರದಹಳ್ಳಿ, ತಾಃ ಶಹಾಪೂರ, ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 13/06/2021 ರಂದು ಮುಂಜಾನೆಯ ಸುಮಾರಿಗೆ ನಾನು, ನನ್ನ ಹೆಂಡತಿ ಮಲ್ಲಮ್ಮ ವಯಸ್ಸು 48 ವರ್ಷ ಹಾಗೂ ಮಗ ಗುರುನಾಥರಡ್ಡಿ ತಂದೆ ಹಣಮಂತ್ರಾಯಗೌಡ ಮಾಲಿಪಾಟೀಲ್ ವಯಸ್ಸು 13 ವರ್ಷ ಮೂರು ಜನ ಕೂಡಿ ಶಾರದಹಳ್ಳಿಯಿಂದ- ಕೃಷ್ಣಾಪೂರಕ್ಕೆ ಹೋಗುವ ರೋಡಿನ ಪಕ್ಕದಲ್ಲಿ ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡಿ, ಸಾಯಂಕಾಲದ ಸುಮಾರಿಗೆ ಹೊಲದಿಂದ ಮರಳಿ ಮನೆಯ ಕಡೆಗೆ ನಡೆದುಕೊಂಡು ರೋಡಿನ ಎಡಬದಿಗೆ ಬರುತಿದ್ದೇವು. ಸಾಯಂಕಾಲ 5-00 ಗಂಟೆಯ ಸುಮಾರಿಗೆ ಕೃಷ್ಣಾಪೂರ- ಶಾರದಹಳ್ಳಿ ರೋಡಿನ ಮೇಲೆ ನಮ್ಮೂರ ರುದ್ರಗೌಡ ಶಾರದಹಳ್ಳಿ ಇವರ ಹೊಲದ ಹತ್ತಿರ ಬರುತಿದ್ದಾಗ, ಹಿಂದುಗಡೆಯಿಂದ ಅಂದರೆ ಕೃಷ್ಣಾಪೂರ ಕಡೆಯಿಂದ ಒಂದು ಟ್ರ್ಯಾಕ್ಟರ್ ಇಂಜಿನ್ ವಾಹನ ಚಾಲಕನು, ತನ್ನ ಟ್ರ್ಯಾಕ್ಟರ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನನ್ನ ಮಗನಿಗೆ ಡಿಕ್ಕಿ ಮಾಡಿದ್ದರಿಂದ ನನ್ನ ಮಗ ರೋಡಿನ ಮೇಲೆ ಬಿದ್ದಾಗ, ಟ್ರ್ಯಾಕ್ಟರ್ ಇಂಜಿನ್ನ ಎಡಭಾಗದ ಹಿಂದಿನ ದೊಡ್ಡ ಟೈರ್ ನನ್ನ ಮಗನ ಮೈಮೇಲೆ ಹಾದು ಹೋಗಿ ಟ್ರ್ಯಾಕ್ಟರ್ ಸ್ವಲ್ಪ ಮುಂದೆ ಹೋಗಿ ನಿಂತಿತು. ನನ್ನ ಮಗನಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿದ್ದನ್ನು ನೋಡಿದ ರಸ್ತೆಯ ಮೇಲೆ ಹೋಗುತಿದ್ದ ನಮ್ಮೂರ ಯಂಕಪ್ಪ ತಂದೆ ಭೀಮಪ್ಪ ಹೆಳವರ ಹಾಗೂ ಹೊಲದಲ್ಲಿ ಕೆಲಸ ಮಾಡುತಿದ್ದ ಸಾಹೇಬಗೌಡ ತಂದೆ ನಾಗಣ್ಣಗೌಡ ಪೊಲೀಸ್ ಪಾಟೀಲ್ ಇವರು ನೋಡಿ ಸ್ಥಳಕ್ಕೆ ಓಡಿ ಬಂದರು, ನನ್ನ ಮಗನಿಗೆ ಎಬ್ಬಿಸಿ ಕೂಡಿಸಿದಾಗ, ನನ್ನ ಮಗ ಗುರುನಾಥ ರಡ್ಡಿ ಈತನು ಎದೆ ಮತ್ತು ಬಲ ಹಾಗೂ ಎಡ ಪಕ್ಕಡಿಯಲ್ಲಿ ತುಂಬಾ ನೋವಾಗುತ್ತಿದೆ ಅಂತ ಹೇಳಿ ಜೋರಾಗಿ ಅಳುತಿದ್ದನು. ನನ್ನ ಮಗನ ಮೈಮೇಲೆ ಟ್ರ್ಯಾಕ್ಟರ್ ಹಾದು ಹೋಗಿದ್ದರಿಂದ ಎದೆಗೆ ಮತ್ತು ಬಲ ಹಾಗೂ ಎಡ ಪಕ್ಕಡಿಗೆ ಭಾರಿ ಒಳಪೆಟ್ಟಾಗಿರುತ್ತದೆ. ಅಪಘಾತ ಪಡಿಸಿ ಅಲ್ಲೆ ನಿಂತಿದ್ದ ಟ್ರ್ಯಾಕ್ಟರ್ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಚಂದ್ರಶೇಖರ ತಂದೆ ಈರಣ್ಣಗೌಡ ಪೊಲೀಸ್ ಪಾಟೀಲ್, ವಯಸ್ಸು 30 ವರ್ಷ, ಜಾತಿ ಲಿಂಗಾಯತ, ಸಾಃ ಶಾರದಹಳ್ಳಿ ಅಂತಾ ಹೇಳಿದನು. ಟ್ರ್ಯಾಕ್ಟರ್ ಇಂಜಿನ್ ನಂಬರ ನೋಡಲಾಗಿ ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ್ ಇದ್ದು, ಇಂಜಿನ್ ನಂಬರ ಂಕ-21-ಖಿಚ-4852 ಇರುತ್ತದೆ. ಈ ಅಪಘಾತವು ದಿನಾಂಕ 13/06/2021 ರಂದು, ಸಾಯಂಕಾಲ 5-00 ಗಂಟೆಯ ಸುಮಾರಿಗೆ ಕೃಷ್ಣಾಪೂರ- ಶಾರದಹಳ್ಳಿ ರೋಡಿನ ಮೇಲೆ ರುದ್ರಗೌಡ ಶಾರದಳ್ಳಿ ಇವರ ಹೊಲ ದಹತ್ತಿರ ಅಪಘಾತವಾಗಿರುತ್ತದೆ.ನಂತರ ನಾನು, ನನ್ನ ಹೆಂಡತಿ ಮಲ್ಲಮ್ಮ ಇಬ್ಬರೂ ಕೂಡಿ ಭಾರಿ ಒಳಪೆಟ್ಟಿನ ನೋವಿನಿಂದ ನರಳಾಡುತಿದ್ದ ನನ್ನ ಮಗ ಗುರುನಾಥರಡ್ಡಿ ಈತನಿಗೆ ಒಂದು ಆಟೋದಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಶಹಾಪೂರಕ್ಕೆ ಬಂದು, ಶಹಾಪೂರದ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ಡಾಕ್ಟರ್ ರವರು ತಿಳಿಸಿದಂತೆ ಹೆಚ್ಚಿನ ಉಪಚಾರ ಕುರಿತು ನನ್ನ ಮಗನಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ, ಅದೇ ದಿನ ವಾತ್ಸಲ್ಯ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ನಂತರ ವಾತ್ಸಲ್ಯ ದವಾಖಾನೆಯ ಡಾಕ್ಟರ್ ರವರು ನನ್ನ ಮಗನಿಗೆ ಉಪಚಾರ ಮಾಡಿದ ನಂತರ ಇನ್ನೂ ಹೆಚ್ಚಿನ ಉಪಚಾರ ಕುರಿತು ಮುಂದೆ ಹೋಗಲು ತಿಳಿಸಿದ್ದರಿಂದ, ದಿನಾಂಕ 15/06/2021 ರಂದು, ನಾನು ಕಲಬುರಗಿಯ ವಾತ್ಸಲ್ಯ ದವಾಖಾನೆಯಿಂದ ನನ್ನ ಮಗನಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಹೈದ್ರಾಬಾದಿಗೆ ಹೋಗಿ ಅದೇ ದಿನ ರಾತ್ರಿ ವೇಳೆಯಲ್ಲಿ ಎ.ಐ.ಜಿ ಆಸ್ಪತ್ರೆ ಹೈದ್ರಾಬಾದಲ್ಲಿ ನನ್ನ ಮಗನಿಗೆ ಸೇರಿಕೆ ಮಾಡಿರುತ್ತೇನೆ. ಸದ್ಯ ನನ್ನ ಮಗ ಹೈದ್ರಾಬಾದನ ಎ.ಐ.ಜಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದಾನೆ. ನನ್ನ ಮಗನಿಗೆ ಉಪಚಾರದ ಅವಶ್ಯಕತೆ ಇದ್ದುದ್ದರಿಂದ ಅವನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಠಾಣೆಗೆ ಬರಲು ತಡವಾಗಿರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣಿಭೂತನಾದ ಟ್ರ್ಯಾಕ್ಟರ್ ಇಂಜಿನ್ ನಂಬರ ಂಕ-21-ಖಿಚ-4852 ನೇದ್ದರ ಚಾಲಕನಾದ ಚಂದ್ರಶೇಖರ ತಂದೆ ಈರಣ್ಣಗೌಡ ಪೊಲೀಸ್ ಪಾಟೀಲ್ ಸಾಃ ಶಾರದಹಳ್ಳಿ ಈತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 137/2021 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 74/2021 ಕಲಂ: 457, 380 ಐಪಿಸಿ : ದಿನಾಂಕ:17/06/2021 ರಂದು 3-30 ಪಿಎಮ್ ಕ್ಕೆ ಶ್ರೀ ಬಿ. ಸಂಗಮೇಶ ತಂದೆ ವಿಶ್ವನಾಥ ಬೆಂಡೆಬೆಂಬಳ್ಳಿ, ವ:26, ಜಾ:ಜಂಗಮ, ಉ:ಅರ್ಚಕ ಸಾ:ಬೆಂಡೆಬೆಂಬಳ್ಳಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಸಂಗಮ ಬೇಚರಾಕ ಗ್ರಾಮದ ಕೃಷ್ಣಾ-ಭೀಮ ನದಿಗಳು ಕೂಡುವ ಸಂಗಮ ಸ್ಥಳದ ಹತ್ತಿರ ಶ್ರೀ ಸಂಗಮೇಶ್ವರ ದೇವಸ್ಥಾನ ಇರುತ್ತದೆ. ಸದರಿ ದೇವಸ್ಥಾನಕ್ಕೆ ನಾನು ಸುಮಾರು 5 ವರ್ಷಗಳಿಂದ ಅರ್ಚಕನೆಂದು ಪೂಜೆ ಪುನಸ್ಕಾರ ಮಾಡಿಕೊಂಡು ಗುಡಿಯ ಆವರಣದಲ್ಲಿ ಇರುವ ಕೋಣೆಯಲ್ಲಿ ನನ್ನ ತಂದೆ-ತಾಯಿಯೊಂದಿಗೆ ವಾಸವಾಗಿರುತ್ತೇನೆ. ಸದರಿ ದೇವಸ್ಥಾನಕ್ಕೆ ಶಾಂತಮೂತರ್ಿ ತಂದೆ ಬಸವರಾಜಯ್ಯ ಸ್ವಾಮಿ ಇವರು ಮುಖ್ಯ ಅರ್ಚಕರಾಗಿದ್ದು, ಗೊಬ್ಬೂರದಲ್ಲಿ ವಾಸವಾಗಿದ್ದು, ಆಗಾಗ ದೇವಸ್ಥಾನಕ್ಕೆ ಬಂದು ಹೋಗುತ್ತಿರುತ್ತಾರೆ. ಸದರಿ ಸಂಗಮೇಶ್ವರ ದೇವಸ್ಥಾನಕ್ಕೆ ಕಮಿಟಿ ಕೂಡಾ ಇರುತ್ತದೆ. ಹೀಗಿದ್ದು ಪ್ರತಿ ದಿನದಂತೆ ನಿನ್ನೆ ದಿನಾಂಕ:16/06/2021 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ದೇವರಿಗೆ ದೀಪ ಹಚ್ಚಿ ಪೂಜೆ ಮಾಡಿ, ದೇವರ ಹಳೆಯ ಬೆಳ್ಳಿ ಮೂತರ್ಿಯನ್ನು ಇಳಿಸಿ, ಪಕ್ಕದಲ್ಲಿರುವ ಕಟ್ಟೆ ಮೇಲೆ ಇಟ್ಟೆನು. ನಂತರ ದೇವಸ್ಥಾನದ ಮೇನ ಗೇಟನ್ನು ಮುಚ್ಚಿ ಅದಕ್ಕೆ ಬೀಗ ಹಾಕಿಕೊಂಡು ನನ್ನ ಕೋಣೆಗೆ ಬಂದು ಊಟ ಮಾಡಿಕೊಂಡು ರಾತ್ರಿ 9 ಗಂಟೆ ಸುಮಾರಿಗೆ ಮಲಗಿಕೊಂಡೆನು. ದಿನಾಂಕ:17/06/2021 ರಂದು ರಾತ್ರಿ 2 ಗಂಟೆ ಸುಮಾರಿಗೆ ನಾಯಿ ಬೊಗಳುತ್ತಿದ್ದಾಗ ನನಗೆ ಎಚ್ಚರವಾಗಿ ಎದ್ದು ಹೊರಗಡೆ ದೇವಸ್ಥಾನದ ಗೇಟ ಹತ್ತಿರ ಬಂದು ನೋಡಿದೆನು. ಸದರಿ ದೇವಸ್ಥಾನದ ಮೇನ ಗೇಟಿನ ಬೀಗ ಮುರಿದಿದ್ದು, ಕಂಡುಬಂದು ಗಾಭರಿಯಾಗಿ ಒಳಗಡೆ ಹೋಗಿ ನೋಡಲಾಗಿ ಕಟ್ಟೆ ಮೇಲೆ ಇಟ್ಟಿದ್ದ ಸಂಗಮೇಶ್ವರ ದೇವಸ್ಥಾನದ ಬೆಳ್ಳಿ ಮೂತರ್ಿ ಕಾಣಲಿಲ್ಲ. ಆ ಕಡೆ ಈ ಕಡೆ ಹುಡುಕಾಡಿದೆನು. ಯಾರೋ ಕಳ್ಳರು ದಿನಾಂಕ:16/06/2021 ರಂದು 9 ಪಿಎಮ್ ದಿಂದ ದಿನಾಂಕ:17/06/2021 ರಂದು ರಾತ್ರಿ 2 ಎಎಮ್ ಮದ್ಯದ ಅವಧಿಯಲ್ಲಿ ಸಂಗಮೇಶ್ವರ ದೇವಸ್ಥಾನದ ಮೇನ ಗೇಟಿನ ಬೀಗವನ್ನು ಮುರಿದು ಅಂದಾಜು 4 ಕೆ.ಜಿ ತೂಕದ ಸಂಗಮೇಶ್ವರ ದೇವರ ಹಳೆಯ ಬೆಳ್ಳಿ ಮೂತರ್ಿಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಬೆಳ್ಳಿ ಮೂತರ್ಿ ಅಂದಾಜು ಬೆಲೆ 1,48,000/- ರೂ. ಆಗಬಹುದು. ನಾನು ಸದರಿ ವಿಷಯವನ್ನು ಮುಖ್ಯ ಅರ್ಚಕ ಶಾಂತಮೂತರ್ಿ ಮತ್ತು ದೇವಸ್ಥಾನದ ಕಮಿಟಿಯವರಾದ ಗುರುನಾಥರೆಡ್ಡಿ, ಬಸವರಾಜಪ್ಪಗೌಡ, ಈಶಪ್ಪಗೌಡ, ಮರೆಪ್ಪ ಶಿವಪೂರ, ವೆಂಕಟರೆಡ್ಡಿ ಮತ್ತು ಇತರರಿಗೆ ಫೋನ ಮಾಡಿ ಹೇಳಿದೆನು. ಕಮಿಟಿಯವರು ರಾತ್ರಿಯೇ ಸ್ಥಳಕ್ಕೆ ಬಂದು ನೋಡಿರುತ್ತಾರೆ. ಕಾರಣ ಸದರಿ ಸಂಗಮೇಶ್ವರ ದೇವಸ್ಥಾನದ ಮೇನ ಗೇಟಿನ ಬೀಗ ಮುರಿದು ಅಂದಾಜು 4 ಕೆ.ಜಿ ತೂಕದ ಸಂಗಮೇಶ್ವರ ದೇವರ ಬೆಳ್ಳಿಯ ಹಳೆ ಮೂತರ್ಿಯನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 74/2021 ಕಲಂ: 457, 380 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 38/2021 ಮಹಿಳೆ ಕಾಣೆಯಾದ ಬಗ್ಗೆ : ದಿನಾಂಕ:17/06/2021 ರಂದು ಮದ್ಯಾಹ್ನ 12.30 ಗಂಟೆಗೆ ಪಿಯರ್ಾದಿ ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಕೊಟ್ಟಿದ್ದರ ಸರಾಂಶವೆನೆಂದರೇ, ದಿನಾಂಕ:15/06/2021 ರಂದು ಬೆಳಿಗ್ಗೆ 10.00 ಗಂಟೆಯಿಂದ ಮದ್ಯಾಹ್ನ 2.00 ಗಂಟೆಯ ಮದ್ಯದ ಅವಧಿಯಲ್ಲಿ ತನ್ನ ಹೆಂಡತಿಯಾದ ರೇಣುಕಾ ಇವಳು ಫಿರ್ಯಾದಿ ವಾಸಿಸುವ ಮನೆಯಿಂದ ಹೋದವಳು ಕಾಣೆಯಾಗಿದ್ದು, ಸದರಿಯವಳಿಗೆ ಇಲ್ಲಿಯವರೆಗೆ ಹುಡುಕಾಡಿದ್ದು ಸಿಕ್ಕಿರುವದಿಲ್ಲ. ಕಾರಣ ತನ್ನ ಹೆಂಡತಿಯಾದ ರೇಣುಕಾ ಇವಳಿಗೆ ಹುಡುಕಿ ಕೊಡಬೇಕು ಅಂತಾ ಇಂದು ಠಾಣೆಗೆ ಬಂದು ದೂರು ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 84/2021 ಕಲಂ: 338 ಐ.ಪಿ.ಸಿ : ಇಂದು ದಿನಾಂಕ 17.06.2021 ರಂದು 05.45 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಚಂದ್ರಶೇಖರ ತಂದೆ ಅಯ್ಯಪ್ಪ ಹೆಳವರ ವ|| 20 ಜಾ|| ಹೆಳವರ ಉ|| ಒಕ್ಕಲುತನ ಸಾ|| ದಂಡಸೊಲ್ಲಾಪೂರ ತಾ|| ಸುರಪೂರ ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮ್ಮ ತಂದೆ ತಾಯಿಗೆ ನಾವು ಎರಡು ಜನ ಗಂಡುಮಕ್ಕಳು ಹಾಗು ಎರಡು ಜನ ಹೆಣ್ಣು ಮಕ್ಕಳು ಇರುತ್ತೇವೆ. ಹೀಗಿದ್ದು ದಿನಾಂಕ: 10.06.2021 ರಂದು ರಾತ್ರಿ 00.30 ಎಎಮ್ ಕ್ಕೆ ನಮ್ಮ ಹೊಲಕ್ಕೆ ನೇಗಿಲು ಹೊಡೆಯಲು ನಮ್ಮೂರ ಮುರುಗೆಪ್ಪ ತಂದೆ ಹಣಮಂತ್ರಾಯ ಹೆಳವರ ಇವರ ಟ್ರ್ಯಾಕ್ಟ್ರ್ ಇಂಜನ ನಂಬರ ಕೆಎ-33 ಟಿಬಿ-1855 ನೇದ್ದನ್ನು ತೆಗೆದುಕೊಂಡು ನಾನು ಹಾಗು ನಮ್ಮ ತಮ್ಮನಾದ ವಿನೋದ ತಂದೆ ಅಯ್ಯಪ್ಪ ಹೆಳವರ ವ|| 16 ಇಬ್ಬರೂ ಕೂಡಿಕೊಂಡು ನಮ್ಮ ದಂಡಸೊಲ್ಲಾಪೂರ ಸೀಮಾಂತರದ ಹೊಲ ಸವರ್ೆ ನಂಬರ 76 ನೇದ್ದಕ್ಕೆ ಹೋಗಿ ನೇಗಿಲು ಹೊಡೆಯುತ್ತಿದ್ದಾಗ ರಾತ್ರಿ ಅಂದಾಜು 1 ಎಎಮ್ ಕ್ಕೆ ಸದರಿ ಟ್ರ್ಯಾಕ್ಟ್ರ ಹಿಂದೆ ನಮ್ಮ ತಮ್ಮನಾದ ವಿನೋದ ಈತನು ನಡೆದುಕೊಂಡು ಹೋಗುತ್ತಿದ್ದಾಗ ಒಮ್ಮಲೇ ಸದರಿ ಟ್ರ್ಯಾಕ್ಟರ್ ಚಾಲಕನಾದ ನಿಂಗಯ್ಯ ತಂದೆ ಮಲ್ಲಪ್ಪ ಹೆಳವರ ಈತನು ಅಲಕ್ಷತನದಿಂದ ತನ್ನ ಟ್ರ್ಯಾಕ್ಟರನ್ನು ಒಮ್ಮಲೇ ವೇಗವಾಗಿ ಮತ್ತು ಬೇಜವಬ್ದಾರಿತನದಿಂದ ಹಿಂದಕ್ಕೆ ತೆಗೆದುಕೊಂಡಾಗ ಸದರ ಟ್ರ್ಯಾಕ್ಟ್ರ ನಮ್ಮ ತಮ್ಮನಾದ ವಿನೋದ ಈತನ ಬಲಗಾಲ ತೊಡೆಯ ಮೆಲೆ ಹಾದು ಎದೆಯ ಮೇಲೆ ಹೋಗಿದ್ದು ಆಗ ನಮ್ಮ ತಮ್ಮನು ಬಲವಾಗಿ ಚೀರಿದಾಗ ನಾನು ಹೋಗಿ ನೋಡಲು ಸದರ ಟ್ರ್ಯಾಕ್ಟರ ನಮ್ಮ ತಮ್ಮನ ಮೇಲೆ ಹಾದು ಹೋಗಿ ಟೊಂಕಕ್ಕೆ ಹಾಗು ಎದೆಗೆ ಭಾರೀ ಗುಪ್ತಗಾಯವಾಗಿ ಎಲುಬು ಮುರಿದಂತಾಗಿದ್ದು ಅಲ್ಲದೇ ಎಡಕಪಾಳಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ಅಷ್ಟರಲ್ಲಿ ಅಲ್ಲಿಯೇ ಪಕ್ಕದ ಹೊಲದಲ್ಲಿದ್ದ ಸತೀಶ ತಂದೆ ಮಲ್ಲಪ್ಪ ಹೆಳವರ ಹಾಗು ನಿಂಗಪ್ಪ ತಂದೆ ಸಾಯಬಣ್ಣ ಹೆಳವರ ಇವರು ಸಹ ಓಡಿ ಬಂದಿದ್ದು ಎಲ್ಲರೂ ಕೂಡಲೆ ನನ್ನ ತಮ್ಮನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪೂರದ ಸ್ಪಂದನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಪಡೆಯಿಸಿ ನಂತರ ಬೆಳಿಗ್ಗೆ ಅಂಬ್ಯೂಲೆನ್ಸ ಮೂಲಕ ನನ್ನ ತಮ್ಮನಾದ ವಿನೋದ ಈತನಿಗೆ ಉಪಚಾರ ಕುರಿತು ಕಲಬುಗರ್ಿಯ ಚಿರಾಯು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಲ್ಲಿಯವರೆಗೆ ಉಪಚಾರ ಪಡೆಯಿಸಿ ದಿನಾಂಕ 14.06.2021 ರಂದು ಬಿಡುಗಡೆ ಮಾಡಿಕೊಂಡು ಮರಳಿ ಮನೆಗೆ ಬಂದಿದ್ದು ಸದ್ಯ ನಮ್ಮ ತಮ್ಮನಿಗೆ ತಿರುಗಾಡಲು ಬಾರದೇ ಇರುವದರಿಂದ ಅವನಿಗೆ ಮನೆಯಲ್ಲಿಯೇ ಬಿಟ್ಟು ಇಂದು ನಾನು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ಟ್ರ್ಯಾಕ್ಟ್ರ್ ಇಂಜನ ನಂಬರ ಕೆಎ-33 ಟಿಬಿ-1855 ನೇದ್ದರ ಚಾಲಕ ನಿಂಗಯ್ಯ ತಂದೆ ಮಲ್ಲಪ್ಪ ಹೆಳವರ ಸಾ|| ಮಸರಕಲ್ ಈತನ ಅಲಕ್ಷತನದ ಹಾಗು ಬೇಜವಬ್ದಾರಿಯ ಚಾಲನೆಯೇ ಕಾರಣವಿದ್ದು ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 84/2021 ಕಲಂ 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 93/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 17.06.2021 ರಂದು ಮಧ್ಯಾಹ್ನ 01:45 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಗಾಯಾಳು ರಾಮರೆಡ್ಡಿ ಈತನು ತನ್ನ ಹೆಂಡತಿ ಮತ್ತು ಮಗಳನ್ನು ಕೂಡಿಸಿಕೊಂಡು ಮೋಟಾರು ಸೈಕಲ್ ನಂಬರ ಕೆಎ-33-ವಿ-8581 ನೇದ್ದರ ಮೇಲೆ ಗುರುಮಠಕಲ್ದಿಂದ ಚಪೆಟ್ಲಾ ಗ್ರಾಮದ ಮಾರ್ಗವಾಗಿ ತನ್ನ ಊರಾದ ದೇವರಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಗುರುಮಠಕಲ್- ಚಪೆಟ್ಲಾ ಸೀಮಾಂತರದ ಗಂಡುಕೋಟಿ ಮಶಮ್ಮ ಗುಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಹಿಂದಿನಿಂದ ಗುರುಮಠಕಲ್ ಕಡೆಯಿಂದ ಬಂದ ಮೋಟಾರು ಸೈಕಲ್ ನಂ. ಕೆ.ಎ-32-ಇ.ಎನ್-5918 ನೇದ್ದರ ಚಾಲಕನಾದ ಆರೋಪಿ ರವಿಚಂದ್ರ ಈತನು ತನ್ನ ಮೋಟಾರು ಸೈಕಲ್ನ ಮೇಲೆ ಗಾಯಾಳು ನಾಗಮ್ಮ ಈಕೆಯನ್ನು ಕೂಡಿಸಿಕೊಂಡು ತನ್ನ ಮೋಟಾರು ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಬಂದು ಡಿಕ್ಕಿಪಡಿಸಿದ ಪರಿಣಾಮವಾಗಿ ಫಿರ್ಯಾದಿ ಹಾಗೂ ಆರೋಪಿತನಿಗೆ ಸೇರಿದಂತೆ ಗಾಯಳುದಾರರಿಗೆ ಸಾಧಾ ಹಾಗೂ ಭಾರಿ ಸ್ವರೂಪದ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾಧಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 93/2021 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 136/2021.ಕಲಂ 341 323 324 504 506 ಸಂ 34 ಐ.ಪಿ.ಸಿ. : ಇಂದು ದಿನಾಂಕ 17/06/2021 ರಂದು 17-00 ಗಂಟೆಗೆ ಪಿಯರ್ಾದಿ ಶ್ರೀ ಸಾಯಬಣ್ಣ ತಂದೆ ಮಲ್ಲಪ್ಪ ಶಹಾಪೂರ ವ|| 26 ಜಾ|| ಕುರುಬರ ಉ|| ಕೂಲಿ ಸಾ|| ದೋರನಹಳ್ಳಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮ್ಮ ಮನೆಯ ಜಾಗದ ಸಂಬಂದವಾಗಿ ನಮಗು ಮತ್ತು ನನ್ನ ಮಾವ ಸುಬಾಶ್ಚಂದ್ರ ತಂದೆ ಮರೆಪ್ಪ ಆಂದೇಲಿ ಇವರಿಗು ಜಗಳ ಇದ್ದು. ಸದರಿ ಜಾಗದ ಸಂಬಂದವಾಗಿ ನನ್ನ ಮಾವ ಸುಬಾಶ್ಚಂದ್ರ ಆಂದೇಲಿ, ಈತನು ನಮ್ಮೊಂದಿಗೆ ತಕರಾರು ಮಾಡುತ್ತ ಬಂದಿದ್ದು. ನಮಗೆ ಹಿರಿಯರು ಬುದ್ದಿಮಾತು ಹೇಳಿದ್ದರಿಂದ ನಾವು ಸುಮ್ಮನೆ ಆಗಿದ್ದೆವು.ಇಂದು ದಿನಾಂಕ 16/06/2021 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಚಂದಮ್ಮ ಗಂಡ ಮಲ್ಲಪ್ಪ ಶಹಾಪೂರ ಇಬ್ಬರು ಕೂಡಿ ನಮ್ಮ ಮನೆಯ ಮುಂದೆ ಇದ್ದಾಗ ನನ್ನ ಮಾವನ ಮಗನಾದ 1] ದೇವಪ್ಪ ತಂದೆ ಸುಬಾಶ್ಚಂದ್ರ ಆಂದೇಲಿ, ನನ್ನ ಮಾವನಾದ 2] ಸುಬಾಶ್ಚಂದ್ರ ತಂದೆ ಮರೆಪ್ಪ ಆಂದೇಲಿ, ಶಿವಣ್ಣ ತಂದೆ ಕಾಂತಪ್ಪ ಇಂಗಳಿಗಿ, 4] ಮಲ್ಲಮ್ಮ ಗಂಡ ಕಾಂತಪ್ಪ ಇಂಗಳಿಗಿ ಇವರೆಲ್ಲರು ಕೂಡಿಕೊಂಡು ಬಂದವರೆ, ಅವಾಚ್ಯ ಶಬ್ದಗಳಿಂದ ಬಯ್ದು ನಿಮ್ಮ ಮನೆಯ ಜಾಗದಲ್ಲಿ ನಮಗು ಜಾಗ ಬರುತ್ತದೆ ಅಂತ ಅಂದಾಗ, ನಾನು ನಮ್ಮ ಜಾಗದಲ್ಲಿ ನಾವು ಮನೆ ಕಟ್ಟಿದ್ದೆವೆ ನಿಮ್ಮ ಜಾಗದಲ್ಲಿ ನಿವು ಮನೆಕಟ್ಟಿದ್ದಿರಿ ಈಗೆಕೆ ತಕರಾರು ಮಾಡುತ್ತಿರಿ ಅಂತ ಅಂದಾಗ, ದೇವಪ್ಪನು ಎದರು ಮಾತನಾಡತ್ತೆನಲೆ ಸೂಳಿ ಮಗನೆ ಅಂತ ಅಂದವನೆ ತನ್ನ ಬಾಯಿಂದ ನನ್ನ ಎಡಗೈಯ ಉಂಗುರ ಬೆರಳಿಗೆ ಕಡಿದು ರಕ್ತಗಾಯ ಮಾಡಿದನು. ಆಗ ನಾನು ಅಂಜಿ ಹೊಗುತ್ತಿರುವಾಗ ನನ್ನ ಮಾವ ಸುಬಾಶ್ಚಂದ್ರ ಈತನು ನನಗೆ ಮುಂದೆ ಹೊಗದಂತೆ ತಡೆದು ನಿಲ್ಲಿಸಿದನು. ಆಗ ಶಿವಣ್ಣ ಈತನು ತನ್ನ ಕೈಯಿಂದ ನನಗೆ ಎದೆಗೆ, ಎಡಗೆ ಬುಜಕ್ಕೆ ಹೊಡೆದನು. ಆಗ ಮಲ್ಲಮ್ಮಳು ತನ್ನ ಕೈಯಿಂದ ನನ್ನ ತಾಯಿ ಚಂದಮ್ಮಳಿಗೆ ಬಲಕಣ್ಣಿಗೆ ಹೋಡೆದಳು. ಆಗ ಅಲ್ಲೆ ಹೊಗುತ್ತಿದ್ದ ನಮ್ಮೂರ ಸಾಬಣ್ಣ ತಂದೆ ಬಾಲಪ್ಪ ಗುಡಬಲ, ಮಾಳಪ್ಪ ತಂದೆ ಹಣಮಂತ ರಂಜಿಣಿಗಿ, ಇವರು ಜಗಳ ನೋಡಿ ಬಂದು ಬಿಡಿಸಿಕೊಂಡರು. ಆಗ ಮೇಲ್ಕಂಡ ನಾಲ್ಕು ಜನರು ಇವತ್ತು ಉಳಿದುಕೊಂಡಿರಿ ಇಲ್ಲಾ ಅಂದರೆ ನಿಮ್ಮ ಜೀವಸಹಿತ ಬಿಡುತ್ತಿರಲ್ಲಿಲ್ಲಾ ಅಂತ ಜೀವದ ಭಯ ಹಾಕಿ ಹೊದರು. ಆಗ ನನಗೆ ಮತ್ತು ನನ್ನ ತಾಯಿ ಚಂದಮ್ಮಗೆ ಸಾಯಬಣ್ಣನು ಈತನು ಒಂದು ಆಟೋದಲ್ಲಿ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ನಾವು ಉಪಚಾರ ಹೊಂದಿ ನಮ್ಮ ಹಿರಿಯ ರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು. ಸದರಿ ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 136/2021 ಕಲಂ 341.323.324.504.506. ಸಂ 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 18-06-2021 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080