Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-06-2022


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ.106/2022 ಕಲಂ 279, 304(ಎ) ಐ.ಪಿ.ಸಿ : ಇಂದು ದಿನಾಂಕ: 17/06/2022 ರಂದು 11.30 ಪಿ.ಎಂ.ಕ್ಕೆ ಶ್ರೀಮತಿ ಪಾರ್ವತಿ ಗಂ/ ಮಲ್ಲಿಕಾಜರ್ುನ ಹಳಿಸಗರ, ಸಾ|| ರಾಕಮಗೇರಾ,ರವರು ಇಂದು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ದೂರು ಅಜರ್ಿಯನ್ನು ಸಲ್ಲಿಸಿದ್ದು, ಸದರಿ ಫಿಯರ್ಾದಿ ಸಾರಾಂಶ ಏನೆಂದರೆ, ಇಂದು ದಿನಾಂಕ: 17/06/2022 ರಂದು ಬೆಳಿಗ್ಗೆ ಎಂದಿನಂತೆ ನನ್ನ ಗಂಡನವರು, ಗೌಂಡಿ ಕೆಲಸಕ್ಕೆಂದು ಮನೆಯಿಂದ ಹೋಗಿದ್ದರು. ರಾತ್ರಿಯಾದರೂ ಬಂದಿರಲಿಲ್ಲ. ರಾತ್ರಿ 9.30 ಪಿ.ಎಂ. ಸುಮಾರಿಗೆ ನನ್ನ ಗಂಡನವರು ಬರುವ ದಾರಿ ನೋಡಿಕೊಂಡು ಮನೆಯ ಮುಂದೆ ಕುಳಿತಿದ್ದಾಗ ನಮ್ಮೂರ ರಾಜಶೇಖರ ತಂ/ ಭೀಮರಾಯಗೌಡ ಪೊಲೀಸ್ ಪಾಟೀಲ್ ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ನಾನು ಮತ್ತು ತಿಪ್ಪನಳ್ಳಿ ಗ್ರಾಮದ ಹಣಮಂತ ತಂ/ ಮಲ್ಲಪ್ಪ ಪೂಜಾರಿ ಇಬ್ಬರೂ ಮಾತನಾಡುತ್ತಾ ನಿಂತಿದ್ದಾಗ ಶಹಾಪೂರ-ಹತ್ತಿಗುಡೂರ ಮೇನ್ ರೋಡನಲ್ಲಿರುವ ರೇಣುಕಾ ವೈನ್ಸ್ ಮುಂದೆ ರೋಡಿನ ಬಲ ಸೈಡಿನಲ್ಲಿ ನಿನ್ನ ಗಂಡ ಮಲ್ಲಿಕಾಜರ್ುನನು ತನ್ನ ಕೆಲಸ ಮುಗಿಸಿಕೊಂಡು ರಸ್ತೆಯ ಪಕ್ಕದಲ್ಲಿ ನಡೆದಕೊಂಡು ಮನೆಯ ಕಡೆಗೆ ಹೊರಟಿದ್ದನು, ರಾತ್ರಿ ಅಂದಾಜು 9.15 ಪಿ.ಎಂ. ಸುಮಾರಿಗೆ ದೇವದುರ್ಗ ಕಡೆಯಿಂದ ಬರುತ್ತಿದ್ದ ಒಂದು ಕೆ.ಕೆ.ಆರ್.ಟಿ.ಸಿ ಬಸ್ ಚಾಲಕನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ಎದುರಿನಿಂದ ಬರುತ್ತಿದ್ದ ಒಂದು ವಾಹನಕ್ಕೆ ಸೈಡ್ ಕೊಡಲು ಒಮ್ಮೆಲೆ ತನ್ನ ಎಡಕ್ಕೆ ಕಟ್ ಮಾಡಿದಾಗ ರಸ್ತೆಯ ಬಲ ಸೈಡಿನಲ್ಲಿ ರಾಕಮಗೇರಾ ಕಡೆಗೆ ಹೊರಟಿದ್ದ ನಿನ್ನ ಗಂಡ ಮಲ್ಲಿಕಾಜರ್ುನನಿಗೆ ಡಿಕ್ಕಿಪಡಿಸಿದ ಪರಿಣಾಮ ಮಲ್ಲಿಕಾಜರ್ುನನು ರಸ್ತೆಯಲ್ಲಿ ಬಿದ್ದನು ಅಲ್ಲಿಯೇ ಇದ್ದ ನಾನು ಮತ್ತು ಹಣಮಂತ ತಂ/ ಮಲ್ಲಪ್ಪ ಪೂಜಾರಿ ಇಬ್ಬರೂ ಕೂಡಿ ಹೋಗಿ ನೋಡಲಾಗಿ ಹಣಮಂತನಿಗೆ ಬಲ ಮೆಲಕಿಗೆ, ಭಾರೀರಕ್ತಗಾಯವಾಗಿದ್ದು, ಕಿವಿಯಿಂದ ರಕ್ತ ಬರುತ್ತಿದೆ, ಬಲ ಬುಜಕ್ಕೆ ತರಚಿದ ಗಾಯ, ಬಲಗೈ ಬೆರಳಿಗೆ ರಕ್ತಗಾಯ, ಎಡಗಾಲ ಪಾದದ ಹತ್ತಿರ ತರಚಿದಗಾಯ, ಎಡ ಮೊಳಕಾಲಿಗೆ ತರಚಿದಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ ಇಲ್ಲಿಯೇ ಇದ್ದ ಬಸ್ಸ ನಂಬರ ನೋಡಲಾಗಿ ಕೆಎ-36 ಎಫ್-992 ಅಂತಾ ಇದ್ದು, ಅದರ ಚಾಲಕನ ಹೆಸರು ವಿಚಾರಿಸಲಾಗಿ ಹುಲಗಪ್ಪ ತಂ/ ಹಣಮಂತ ಮಾದರ ಸಾ|| ಹಣಮಪೇಠ ತಾ|| ಹುನಗುಂದ ಅಂತಾ ಗೊತ್ತಾಗಿರುತ್ತೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಮೈದುನ ಬಸವರಾಜ ತಂ/ ಭೀಮರಾಯ ಹಳಿಸಗರ ಇಬ್ಬರೂ ಕೂಡಿಕೊಂಡು ಘಟನೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನಿಗೆ ಮೇಲ್ಕಾಣಿಸಿದಂತೆ ಗಾಯಗಳಾಗಿ ಮಾತನಾಡುವ ಸ್ಥೀತಿಯಲ್ಲಿರಲಿಲ್ಲ,
ನಂತರ ಸ್ಥಳಕ್ಕೆ ಬಂದ 108 ಅಂಬ್ಯೂಲೈನ್ಸ್ದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದಾಗ ತಪಾಸಣೆ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರಕ್ಕಾಗಿ ಹೋಗಲು ತಿಳಿಸಿದಾಗ ನನ್ನ ಗಂಡನಿಗೆ 108 ಅಂಬ್ಯೂಲೈನ್ಸ್ದಲ್ಲಿ ಹಾಕಿಕೊಂಡು ಕಲಬುಗರ್ಿಗೆ ಹೊರಟಿದ್ದಾಗ 10.15 ಪಿಎಂ ಸುಮಾರಿಗೆ ಹುಲಕಲ್ ಗ್ರಾಮದ ಹತ್ತಿರ ಇದ್ದಾಗ ನನ್ನ ಗಂಡ ಮಲ್ಲಿಕಾಜರ್ುನ ರವರು ಅಪಘಾತದಲ್ಲಿ ಆದ ಗಾಯಗಳಿಂದ ಚೇತರಿಸಿಕೊಳ್ಳದೆ ಮೃತಪಟ್ಟಿದ್ದರಿಂದ ಮರಳಿ ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿ ಹಾಕಿ ಠಾಣೆಗೆ ಬಂದಿರುತ್ತೇವೆ. ಕಾರಣ ರಸ್ತೆ ಅಪಘಾತಪಡಿಸಿ ನನ್ನ ಗಂಡ ಮಲ್ಲಿಕಾಜರ್ುನ ತಂ/ ಭಿಮರಾಯ ಹಳಿಸಗರ, ಸಾ|| ರಾಕಮಗೇರಾ, ಇವರ ಸಾವಿಗೆ ಕಾರಣನಾದ ಕೆ.ಕೆ.ಆರ್.ಟಿ.ಸಿ ಬಸ್ ನಂ. ಕೆಎ-36 ಎಫ್-992 ನೇದ್ದರ ಚಾಲಕ ಹುಲಗಪ್ಪ ತಂ/ ಹಣಮಂತ ಮಾದರ ಸಾ|| ಹಣಮಪೇಠ ತಾ|| ಹುನಗುಂದ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.106/2022 ಕಲಂ 279, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 99/2022 ಕಲಂ 143,147,148, 323, 324, 355,504, 506 ಸಂ 149 ಐ.ಪಿ.ಸಿ : ದಿನಾಂಕ:13.06.2022 ರಂದು ಮಸ್ಸೆಮ್ಮ ಕೆರಿಯಲ್ಲಿ ಮೀನುಗಳನ್ನು ಪಿರ್ಯಾಧಿ ಮತ್ತು ಗಾಯಾಳು ಇಬ್ಬರೂ ಕಳ್ಳತನ ಮಾಡಿದ್ದಾಗಿ ಹೇಳಿ ಇವರಿಬ್ಬರಿಗೆ ವಿಚಾರಣೆ ಮಾಡಬೇಕು ಅಂತಾ ಇಬ್ಬರಿಗೆ ಅರಕೇರಾ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದು ಅರಕೇರಾ ಗ್ರಾಮದ ಮಸ್ಸೆಮ್ಮ ಗುಡಿಯ ಹತ್ತಿರ ಆರೋಪಿತರು ಎಲ್ಲರೂ ಕೂಡಿ ಗುಂಪು ಕಟ್ಟಿಕೊಂಡು ಪಿರ್ಯಾಧಿ ಮತ್ತು ಗಾಯಾಳುವಿಗೆ ಕೈ ಕಟ್ಟಿಗೆ ಮತ್ತು ಚಪ್ಪಲಿಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋಗಿದ್ದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಸ ಇರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 98/2022 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ : ದಿನಾಂಕ: 17.06.2022 ರಂದು ಬೆಳಿಗ್ಗೆ 8:10 ಗಂಟೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಠಾಣೆಯಲ್ಲಿದ್ದಾಗ ಆರೋಪಿತನು ಪುಟಪಾಕ ತಾಂಡಾದ ಕ್ರಾಸ್ನಲ್ಲಿ ಅಕ್ರಮವಾಗಿ ಹೆಂಡವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೊರಟು ಸಮಯ ಬೆಳಿಗ್ಗೆ 9:00 ಗಂಟೆಗೆ ಪುಟಪಾಕ್ ತಾಂಡಾದ ಕ್ರಾಸ್ನ ಸ್ವಲ್ಪ ದೂರ ತಲುಪಿ ಮರೆಯಾಗಿ ನೋಡಲಾಗಿ ಅಲ್ಲಿ ಆರೋಪಿತನು ತನ್ನ ವಶದಲ್ಲಿದ್ದ ಮಸಾಲಿ ಚೀಲದಲ್ಲಿಯ ಪ್ಲಾಸ್ಟೀಕ್ ಪಾಕೆಟ್ಗಳಲ್ಲಿ ಕಟ್ಟಿದ ಹೆಂಡವನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಯ ಬೆಳಿಗ್ಗೆ 9:00 ಗಂಟೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿದಾಗ ಅಲ್ಲಿಗೆ ಕುಡಿಯಲು ಮತ್ತು ಕೊಳ್ಳಲು ಬಂದಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಸಿಕ್ಕಿಬಿದ್ದುರುತ್ತಾನೆ. ನಂತರ ಆತನ ವಶದಲಿದ್ದ ಬಿಳೀ ಬಣ್ಣದ ಮಸಾಲಿ ಚೀದಲ್ಲಿದ್ದ ಬಿಳಿ ಬಣ್ಣದ ಪಾಕೇಟ್ಗಳಲ್ಲಿ ಕಟ್ಟಿದ 30 ಲೀಟರ ಹೆಂಡವನ್ನು ಮತ್ತು ಆರೋಪಿತನ ವಶದಲ್ಲಿದ್ದ ಹೆಂಡ ಮಾರಾಟದಿಂದ ಬಂದ 120/- ರೂ ನಗದು ಹಣ ಸೇರಿ ಹೀಗೆ ಒಟ್ಟು 1020/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ನಂತರ ಸಮಯ ಬೆಳಿಗ್ಗೆ 10:30 ಗಂಟೆಗೆ ಮರಳಿ ಠಾಣೆಗೆ ಬಂದು ಆರೋಪಿ, ಮುದ್ದೆ ಮಾಲು ಮತ್ತು ಮೂಲ ಜಪ್ತಿಪಂಚನಾಮನೆಯನ್ನು ಹಾಜರುಪಡಿಸಿ ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದ ಅದರ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ 379 ಐಪಿಸಿ : ಇಂದು ದಿನಾಂಕ: 17.06.2022 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀ ವಿಜಯಕುಮಾರ ಪಿ..ಐ ರವರು ಠಾಣೆಗೆ ಹಾಜರಾಗಿ ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.73/2022 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ: 87 ಕೆ.ಪಿ ಆಕ್ಟ್ 1963 : ದಿನಾಂಕ:17/06/2022 ರಂದು 5-30 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:17/06/2022 ರಂದು ನಾನು ಮತ್ತು ಸಿಬ್ಬಂದಿಯವರಾದ 1) ತಾಯಪ್ಪ ಹೆಚ್.ಸಿ 79, 2) ಮಹೇಂದ್ರ ಪಿಸಿ 254 ಮತ್ತು 3) ವೇಣುಗೋಪಾಲ ಪಿಸಿ 36 ರವರೆಲ್ಲರೂ ಠಾಣೆಯಲ್ಲಿದ್ದಾಗ ನನಗೆ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ವಡಗೇರಾ ಸೀಮಾಂತರದ ಚನ್ನೂರು (ಜೆ) ಸೀಮಾಂತರದ ಹೊರ ವಲಯದಲ್ಲಿರುವ ಮರಗಮ್ಮ ದೇವಿ ಗುಡಿಯ ಹಿಂದೆ ಬಯಲು ಪ್ರದೇಶದ ಸಾರ್ವಜನಿಕ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಿಗೆ ದಾಳಿ ವಿಷಯ ತಿಳಿಸಿ, ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕೂಡಿಸಿಕೊಂಡು 2-15 ಪಿಎಮ್ ಕ್ಕೆ ವಡಗೇರಾ ಪೊಲೀಸ್ ಠಾಣೆಯಿಂದ ಹೊರಟು 2-45 ಪಿಎಮ್ ಕ್ಕೆ ಚನ್ನೂರು (ಜೆ) ಸೀಮಾಂತರದ ಹೊರ ವಲಯದಲ್ಲಿರುವ ಮರಗಮ್ಮ ದೇವಿ ಗುಡಿಯಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಶರಣಪ್ಪ ಅಗಸರ ಈತನ ಶೆಡ್ಡನ್ನು ಮರೆಯಾಗಿ ನಿಂತು ನೋಡಲಾಗಿ ಸದರಿ ಗುಡಿಯ ಹಿಂದುಗಡೆ ಖಾಲಿ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎನ್ನುವ ಇಸ್ಪಿಟ್ ಜೂಜಾಟವನ್ನು ಹಣ ಪಣಕ್ಕಿಟ್ಟು ಆಡುತ್ತಿದ್ದರು. ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು 3 ಪಿಎಮ್ ಕ್ಕೆ ಒಮ್ಮೆಲೆ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದವರ ಪೈಕಿ 3 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ನು 3 ಜನರು ಅಲ್ಲಿಂದ ಓಡಿ ಹೋದರು. ವಶಕ್ಕೆ ಪಡೆದವರನ್ನು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಪರ್ವತರೆಡ್ಡಿ ತಂದೆ ಬಸವರಾಜಪ್ಪಗೌಡ ದಿಮ್ಮಿ, ವ:55, ಜಾ:ಲಿಂಗಾಯತರೆಡ್ಡಿ, ಉ:ಒಕ್ಕಲುತನ ಸಾ:ಚನ್ನೂರು (ಜೆ) ಅಂತಾ ಹೇಳಿದ್ದು ಸದರಿಯವನು ತಾನು ಪಣಕ್ಕೆ ಇಟ್ಟ ನಗದು ಹಣ 570/- ರೂ ಮತ್ತು 21 ಇಸ್ಪೀಟ್ ಎಲೆಗಳು ತನ್ನ ಕೈಯಲ್ಲಿ ಇದ್ದದ್ದನ್ನು ಹಾಜರಪಡಿಸಿದನು. 2) ಹರಳಯ್ಯ ತಂದೆ ನಾಗಪ್ಪ ಹರಿಜನ, ವ:25, ಜಾ:ಎಸ್.ಸಿ, ಉ:ಕೂಲಿ ಸಾ:ಚನ್ನೂರು (ಜೆ) ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 490/- ರೂ, ಹಾಜರಪಡಿಸಿದನು. 3) ಹಣಮಂತ್ರಾಯ ತಂದೆ ಮಲ್ಲಪ್ಪ ಮಡಿವಾಳ, ವ:25, ಜಾ:ಅಗಸರ, ಉ:ಕೂಲಿ ಸಾ:ಚನ್ನೂರು (ಜೆ) ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 640/- ರೂ, ಹಾಜರಪಡಿಸಿದನು. ಜೂಜಾಟದ ಸ್ಥಳದಲ್ಲಿ ಎಲ್ಲರ ಮಧ್ಯೆ 31 ಇಸ್ಪಿಟ್ ಎಲೆಗಳು ಮತ್ತು 2800/- ರೂ. ಹೀಗೆ ಒಟ್ಟು 4500/- ರೂ. ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ದೊರೆತ್ತಿದ್ದು, ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆ ಚಿಟಿಯನ್ನು ಅಂಟಿಸಿ ಜಪ್ತಿ ಪಡಿಸಿಕೊಂಡೆನು. ಓಡಿ ಹೋದವರ ಹೆಸರು ವಿಳಾಸವನ್ನು ವಶಕ್ಕೆ ಪಡೆದುಕೊಂಡವರಿಗೆ ವಿಚಾರಿಸಿದಾಗ 4) ಹಣಮಂತ ತಂದೆ ಹೊನ್ನಪ್ಪ ಮಡಿವಾಳ, 5) ಯಂಕಪ್ಪ ತಂದೆ ಶರಣಪ್ಪ ಮಡಿವಾಳ ಮತ್ತು 6) ಬೀರಪ್ಪ ತಂದೆ ಭೀಮಣ್ಣ ಕನಕ ಎಲ್ಲರೂ ಸಾ:ಚನ್ನೂರು (ಜೆ) ಈ ಮೂರು ಜನ ಇಸ್ಪೀಟ ದಾಳಿ ಕಾಲಕ್ಕೆ ಓಡಿ ಹೋದವರಾಗಿರುತ್ತಾರೆ ಎಂದು ಹೇಳಿದರು. ಸದರಿ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ಸಲ್ಲಿಸುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 86/2022 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 87/2022 ಕಲಂ: 78(3) ಕೆ.ಪಿ.ಆಕ್ಟ್ 1963 : ದಿನಾಂಕ:17/06/2022 ರಂದು 8-30 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಒಬ್ಬ ಆರೋಪಿತನಿಗೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:17/06/2022 ರಂದು ಸಮಯ ಸಾಯಂಕಾಲ 5-40 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ತಾಯಪ್ಪ ಹೆಚ್.ಸಿ 79, ಮಹೇಂದ್ರ ಪಿಸಿ 254, ಸಾಬರೆಡ್ಡಿ ಪಿಸಿ 290 ಮತ್ತು ವೇಣುಗೋಪಾಲ ಪಿಸಿ 36 ಎಲ್ಲರೂ ವಡಗೇರಾ ಠಾಣೆಯಲ್ಲಿದ್ದಾಗ ಹುಲಕಲ್ (ಜೆ) ಗ್ರಾಮದ ಮೆಥೋಡಿಸ್ಟ ಚರ್ಚ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ನನಗೆ ಖಚಿತ ಮಾಹಿತಿ ಬಂದಿದ್ದರಿಂದ ಇಬ್ಬರು ಪಂಚರನ್ನು 12-30 ಪಿಎಮ್ ಕ್ಕೆ ಬರ ಮಾಡಿಕೊಂಡು ಸದರಿ ಪಂಚರು ಮತ್ತು ಸಿಬ್ಬಂದಿಯವರಿಗೆ ಮಾಹಿತಿ ತಿಳಿಸಿ, ಪಿಎಮ್ ಕ್ಕೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದರಲ್ಲಿ ಪಂಚರು ಮತ್ತು ಸಿಬ್ಬಂದಿಯವರಿಗೆ ಕರೆದುಕೊಂಡು 6 ಪಿಎಮ್ ಸುಮಾರಿಗೆ ಹೊರಟು 6-30 ಪಿಎಮ್ಕ್ಕೆ ಹುಲಕಲ್ (ಜೆ) ಗ್ರಾಮದ ಮೆಥೋಡಿಸ್ಟ ಚರ್ಚ ಹತ್ತಿರ ಸ್ವಲ್ಪ ದೂರದಲ್ಲಿ ವಾಹನ ನಿಲ್ಲಿಸಿ, ಆನಂದಪ್ಪ ದೊಡ್ಡಮನಿ ಈತನ ಪಾನಡಬ್ಬಿಯನ್ನು ಮರೆಯಾಗಿ ನಿಂತು ನೋಡಲಾಗಿ ಸದರಿ ಚರ್ಚ ಮುಂದುಗಡೆ ರಸ್ತೆ ಮೇಲೆ ಒಬ್ಬ ವ್ಯಕ್ತಿ ನಿಂತು ರಸ್ತೆ ಮೇಲೆ ಹೋಗಿ ಬರುವ ಜನರಿಗೆೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದು ಮಟಕಾ ನಂಬಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಒಂದೊಂದು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 6-45 ಪಿಎಮ್ಕ್ಕೆ ಪಂಚರ ಸಮಕ್ಷಮದಲ್ಲಿ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಹಣಮಂತ ತಂದೆ ಮಲ್ಲಪ್ಪ ಹೊರಟೂರು, ವ:35, ಜಾ:ಮಾದರ, ಉ:ಕೂಲಿ ಸಾ:ಹುಲಕಲ್ (ಜೆ) ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನು ತನ್ನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ ಇದ್ದ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 460/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಇವುಗಳನ್ನು ಹಾಜರಪಡಿಸಿದ್ದು, ಆತನು ಹಾಜರುಪಡಿಸಿದ್ದ ಹಣವು ಮಟಕಾ ಬರೆದುಕೊಟ್ಟಿದ್ದರಿಂದ ಬಂದಿದ್ದು ಅಂತಾ ತಿಳಿಸಿದನು. ಸದರಿ ಮುದ್ದೆಮಾಲನ್ನು ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆ ಚಿಟಿಯನ್ನು ಅಂಟಿಸಿ ತಾಬಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ಮುದ್ದೆಮಾಲನ್ನು ಜಪ್ತಿಪಡಿಸಿಕೊಂಡು ಆರೋಪಿತನಿಗೆ ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಜರುಗಿಸಿ, ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 87/2022 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: ಗುನ್ನೆ ನಂಬರ 105/2022 ಕಲಂ: 78 (3) ಕೆಪಿ ಆಕ್ಟ್ : ಇಂದು ದಿನಾಂಕ: 17/06/2022 ರಂದು 8-20 ಪಿ.ಎಮ್ ಕ್ಕೆ ಶ್ರೀನಿವಾಸ ವಿ. ಅಲ್ಲಾಪೂರ ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ:17/06/2022 ರಂದು ರಂದು 6.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಚಟ್ನಳ್ಳಿ ಗ್ರಾಮದ ಈಶಪ್ಪ ಹಣಮಪ್ಪನವರ ಪಂಚರ ಅಂಗಡಿ(ಗ್ಯಾರೇಜ) ಹತ್ತಿರ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಶ್ರೀ ಬಾಬುರಾವ ಪಿ.ಎಸ್.ಐ(ತನಿಖಾ) ಹಾಗೂ ಠಾಣೆಯ ಸಿಬ್ಬಂದಿಯವರಾದ ಶ್ರೀ ವಿಠೋಬಾ ಎ.ಎಸ್.ಐ, ಶ್ರೀ ಕಾಶಿನಾಥ ಹೆಚ್.ಸಿ-48, ಶಂಕರಲಿಂಗ ಹೆಚ್.ಸಿ-131, ಶ್ರೀ ಸುನಿಲ್ ಪಿ.ಸಿ-221, ಮತ್ತು ಶ್ರೀ ಭೀಮನಗೌಡ ಪಿ.ಸಿ-402 ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ಭೀಮನಗೌಡ ಪಿ.ಸಿ-402 ರವರಿಗೆ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1) ಶ್ರೀ ಮೌನೇಶ ತಂದೆ ಮಲ್ಲಪ್ಪ ನಾಟೆಕಾರ ವಯಾ: 24 ವರ್ಷ ಜಾತಿ: ಕಬ್ಬಲಿಗ ಉ: ಕೂಲಿಕೆಲಸ ಸಾ: ಮರಮಕಲ್ ತಾ: ಶಹಾಪೂರ 2) ಶ್ರೀ ನಬಿಸಾಬ ತಂದೆ ಸಿಲಾರುದ್ದಿನ ಕಂಬಾರ ವಯಾ: 25 ವರ್ಷ ಜಾತಿ: ಮುಸ್ಲಿಂ ಉ: ಟೇಲರಿಂಗ ಸಾ: ಮರಮಕಲ್ ತಾ: ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಾನು, ಪಂಚರು ಮತ್ತು ಸಿಬ್ಬಂದಿವರೊಂದಿಗೆ ಠಾಣೆಯಿಂದ 6.15 ಪಿ.ಎಮ್.ಕ್ಕೆ ಒಂದು ಖಾಸಗಿ ವಾಹನದಲ್ಲಿ ಹೊರಟು 6.45 ಪಿ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಜನರನ್ನು ಕೂಗಿ ಕರೆಯುತ್ತಾ ಬರ್ರಿ ಬರ್ರಿ ಇದು ದೈವಲೀಲೆಯ ಆಟ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕೂಗಿ ಕರೆಯುತ್ತಾ ನಂಬರ ಬರೆದುಕೊಂಡು ಚೀಟಿ ಬರೆದು ಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಕೂಡಿ 6.50 ಪಿ.ಎಮ್.ಕ್ಕೆ ದಾಳಿ ಮಾಡಿದ್ದು ಮಟಕಾ ನಂಬರ ಬರೆಯಿಸಲು ಬಂದಿದ್ದ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಬಸವರಾಜ ತಂದೆ ಚಂದ್ರಪ್ಪ ಅಲಿಪೂರ ವಯ: 24 ವರ್ಷ ಜಾ: ಕಬ್ಬಲಿಗ ಉ: ಮಟಕ ಬರೆದುಕೊಳ್ಳುವದು ಸಾ: ಮರಮಕಲ್ ತಾ: ಶಹಾಪೂರ ಅಂತಾ ತಿಳಿಸಿದ್ದು ಸದರಿಯವರಿಗೆ ಪರಿಶಿಲನೆ ಮಾಡಲಾಗಿ ಆತನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) 820 ರೂ. ನಗದು ಹಣ 2) ಒಂದು ಮಟಕಾ ನಂಬರ ಬರೆದ ಚೀಟಿ ಅ.ಕಿ.00=00 ಮತ್ತು 3) ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ನಾನು ಜಪ್ತಿ ಪಂಚನಾಮೆಯನ್ನು 6:50 ಪಿ.ಎಮ್ ದಿಂದ 7:50 ಪಿ.ಎಮ್.ದ ವರೆಗೆ ಸ್ಥಳದಲ್ಲೆ ಕುಳಿತು ಜೀಪಿನ ಲೈಟಿನ ಬೆಳಕಿನಲ್ಲಿ ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ಒಬ್ಬ ಆರೋಪಿ ಮತ್ತು ಮುದ್ದೇಮಾಲನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಮರಳಿ ಠಾಣೆಗೆ 8:10 ಪಿ.ಎಮ್.ಕ್ಕೆ ಬಂದು ವರದಿ ತಯಾರಿಸಿ 8:20 ಪಿ.ಎಮ್ ಕ್ಕೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 105/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 44/2022 ಕಲಂ: 324,307,504,506 ಸಂ 34 ಐಪಿಸಿ : ಗಾಯಾಳು ರವೀಂದ್ರ ಇವರು ದಿನಾಂಕ 09,14/04/2022 ರಂದು ಆರೋಪಿ ದೇವಾನಂದ ಇವರಿಗೆ 6100/- ರೂ ಧಾರಣಿಯಂತೆ ಒಟ್ಟು 2 ಲಾರಿ ಅಂದರೆ 550 ಕ್ವಿಂಟಲ್ ತೊಗರಿಯನ್ನು ಕೊಟ್ಟಿದ್ದು, ಅದರಲ್ಲಿ ದೆವಾನಂದ ಇವರು 10 ಲಕ್ಷ ಕೊಟ್ಟು ಬಾಕಿ ಹಣ 2355000/- ರೂ ನಂತರದಲ್ಲಿ ಕೊಡುವುದಾಗಿ ಹೇಳುತ್ತ ಇಲ್ಲಿಯವರೆಗೆ ಕೊಡದೇ ಸತಾಯಿಸುತ್ತ ಬಂದಿದ್ದರು. ಇಂದು ದಿನಾಂಕ 17/06/2022 ರಂದು ಆರೋಪಿತರು ಫೋನ ಮಾಡಿ ಬಾಕಿ ಇದ್ದ ತೊಗರಿ ಹಣ ಕೊಡುತ್ತೆವೆ ಗೋಗಿ ಕಡೆಗೆ ಬಾ ಅಂತ ರವೀಂದ್ರ ಈತನಿಗೆ ಕರೆ ಮಾಡಿ ಗಾಯಾಳುದಾರನು ತನ್ನ ಮೋ/ಸೈ ಮೇಲೆ ಗೋಗಿ ಕಡೆಗೆ ಚಂದಾಪೂರ ಕ್ರಾಸ ಸಮೀಪ ಹೊರಟಾಗ 6 ಪಿಎಮ್ ಸುಮಾರಿಗೆ ಆರೋಪಿತರು ಹಿಂದಿನಿಂದ ಬಂದವರೇ ಶಿವಾನಂದ ಈತನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ಗಾಯಳುವಿಗೆ ಹೊಡೆದಾಗ ಬಲಗೈಗೆ ಹಾಗು ತಲೆಗೆ ರಕ್ತಗಾಯವಾಗಿರುತ್ತದೆ. ಫಿಯರ್ಾದಿಯು ತಾನು ನಿಂತರ ತನಗೆ ಬಿಡುವುದಿಲ್ಲ ಕೊಲೆ ಮಾಡುತ್ತಾರೆ ಅಂತ ಹಾಗೇ ಸಂಭಾಳಿಸಿಕೊಂಡು ಮುಂದಕ್ಕೆ ಬರುತ್ತಿದ್ದಾಗ ಆರೋಫಿತರೆಲ್ಲರೂ ಸಏರಿ ಬಿಡಬ್ಯಾಡ್ರೋ ಈ ಸೂಳೇ ಮಗನಿಗೆ ಖಲಾಸ ಮಾಡ್ರಿ, ಇವನಿಗೆ ಖಲಾಸ ಮಡಿದರೆ ಅವಿಗೆ ಕೊಡುವ ಹಣ ಉಳಿತಾವ ಅಂತ ಬೆನ್ನತ್ತಿದ್ದಾಗ ಎದುರಿಗೆ 2-3 ಮೋ/ಸೈ ಹಾಗು ವಾಹನಗಳು ಬಂದಾಗ ಬಿಟ್ಟು ಓಡಿ ಹೋಗಿದ್ದು ಸದರಿ ನಮ್ಮ ಅಣ್ಣ ರವೀಂದ್ರ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಮಚ್ಚಿನಿಂದ ಹಲ್ಲೆ ಮಾಡಿದವರ ಮೇಳೆ ಕ್ರಮ ಕೈಗೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 49/2022 78 (3) ಕೆ.ಪಿ ಯಾಕ್ಟ : ದಿನಾಂಕ:17/06/2022 ರಂದು 15.00 ಪಿ.ಎಮ್ ಕ್ಕೆ, ಶ್ರೀ. ಚಿದಾನಂದ ಪಿಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:49/2022 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ ನಂತರ ಪಿಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಸಾಯಂಕಾಲ 17.30 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1310/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು,್ದ ಇರುತ್ತದೆ. ಆರೋಪಿತರ ಹೆಸರು 1) ಮಲ್ಲಣ್ಣ ತಂದೆ ಭಿಮಣ್ಣ ಶಖಾಪೂರ ವಯಾ-34 ವರ್ಷ, ಜಾ:ಹಿಂದೂ ಬೇಡರ ಉ:ಮಟಕಾ ಬರೆಯುವದು ಸಾ:ಯಡಹಳ್ಳಿ ತಾ:ಹುಣಸಗಿ ಜಿ:ಯಾದಗಿರಿ.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 97/2022 ಕಲಂ: 323, 324, 354, 504, 506 ಸಂ. 34 ಐಪಿಸಿ : ಇಂದು ದಿನಾಂಕಃ 17/06/2022 ರಂದು 07:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀಮತಿ ಬಸಮ್ಮ ಗಂಡ ಹಣಮಂತ್ರಾಯ ಜಾಲಿಬೆಂಚಿ ವ|| 42 ವರ್ಷ ಜಾ|| ಕುರುಬರ ಉ|| ಮನೆಗೆಲಸ ಸಾ|| ದೇವತ್ಕಲ್ ಇವರು ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮಗೆ 3 ಜನ ಮಕ್ಕಳಿದ್ದು, ಇಬ್ಬರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗನಿರುತ್ತಾನೆ. ಹಿರಿಯ ಮಗ ಮತ್ತು ಕಿರಿಯ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ದೊಡ್ಡ ಮಗಳಾದ ದೇವಮ್ಮ ಇವಳಿಗೆ ನಮ್ಮೂರ ಅಶೋಕ ತಂದೆ ನಿಂಗಣ್ಣ ಮಾರಲಬಾವಿ ಈತನೊಂದಿಗೆ ಸುಮಾರು 5 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಮಗಳು ದೇವಮ್ಮ ಇವಳು ತನ್ನ ಗಂಡನೊಂದಿಗೆ 3-4 ವರ್ಷಗಳವರೆಗೆ ಚೆನ್ನಾಗಿ ಸಂಸಾರ ಮಾಡಿದ್ದು, ಅವರ ವೈವಾಹಿಕ ಜೀವನದಲ್ಲಿ ಅವರಿಗೆ ಎರಡೂವರೆ ವರ್ಷದ ಒಂದು ಗಂಡುಮಗು ಇರುತ್ತದೆ. ಈಗ ಸುಮಾರು ಒಂದು ವರ್ಷದಿಂದ ನಮ್ಮ ಮಗಳೊಂದಿಗೆ ವಿನಾಕಾರಣ ಆಕೆಯ ಗಂಡ ಹಾಗೂ ಗಂಡನ ಮನೆಯವರು ಕಿರಿಕಿರಿ ಕೊಡುತ್ತಿದ್ದರಿಂದ ನನ್ನ ಮಗಳಾದ ದೇವಮ್ಮ ಇವಳು ನಮ್ಮ ಮನೆಯಲ್ಲಿಯೇ ಬಂದು ವಾಸವಾಗಿದ್ದಳು. ಮುಂದೆ ಸರಿಹೋಗಬಹುದು ಅಂತ ತಿಳಿದು ನಾವೂ ಸುಮ್ಮನಿದ್ದೆವು. ಹೀಗಿದ್ದು ಇಂದು ದಿನಾಂಕ: 17/06/2022 ರಂದು ಮದ್ಯಾಹ್ನ 3:30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಭಾವನಾದ ಹೈಯಾಳಪ್ಪ ತಂದೆ ಸಕ್ರೆಪ್ಪ ಜಾಲಿಬೆಂಚಿ ಇಬ್ಬರು ಕೂಡಿ ನನ್ನ ಮಗಳ ಗಂಡನ ಮನೆಯ ಮುಂದೆ ಹೋಗಿ ನಮ್ಮ ಮಗಳಿಗೆ ಯಾಕೆ ಕರೆದುಕೊಂಡು ಬರುವದಿಲ್ಲ ಎಷ್ಟು ದಿನ ಅಂತ ನಮ್ಮ ಮನೆಯಲ್ಲಿ ಬಿಡುತ್ತೀರಿ ಅಂತ ಅನ್ನುತ್ತಿದ್ದಾಗ ಮನೆಯಲ್ಲಿದ್ದ ನನ್ನ ಅಳಿಯ 1) ಅಶೋಕ ತಂದೆ ನಿಂಗಣ್ಣ ಮಾರಲಬಾವಿ, ಮಗಳ ಅತ್ತೆಯಾದ 2) ಹುಲಗಮ್ಮ ಗಂಡ ನಿಂಗಣ್ಣ ಮಾರಲಬಾವಿ, 3) ಬಸವರಾಜ ತಂದೆ ಸಿದ್ದಪ್ಪ ಮಾರಲಬಾವಿ 4) ಮಲ್ಲಮ್ಮ ಗಂಡ ಸಿದ್ದಪ್ಪ ಮಾರಲಬಾವಿ ಎಲ್ಲರು ಕೂಡಿ ನಮ್ಮ ಬಳಿ ಬಂದು ಏನಲೇ ಸೂಳೆ ಅಶೋಕನಿಗೆ ಇನ್ನೊಂದು ಮದುವೆ ಮಾಡುತ್ತೇವೆ ನಿಮ್ಮ ಮಗಳಿಗೆ ನಮ್ಮ ಮನೆಗೆ ಕರೆದುಕೊಳ್ಳುವದಿಲ್ಲ ಏನು ಮಾಡಕೋತೀರಿ ಅಂತ ಅನ್ನುತ್ತಿದ್ದಾಗ, ನಾನು ಯಾಕೇ ಈ ರೀತಿ ಅನ್ನುತ್ತೀರಿ ನಮ್ಮ ಮಗಳು ಏನು ತಪ್ಪು ಮಾಡಿದ್ದಾಳೆ ಅಂತ ಅನ್ನುತ್ತಿದ್ದಾಗ ಅವರಲ್ಲಿಯ ಅಶೋಕ ಈತನು ನನಗೆ ಕೈಯಿಂದ ಬೆನ್ನಿಗೆ, ಎಡಭುಜಕ್ಕೆ ಹೊಡೆದನು. ಹುಲಗಮ್ಮ ಇವಳು ಕೈಯಿಂದ ನನ್ನ ಎಡಗೈಗೆ ಚೂರಿ ಗಾಯ ಮಾಡಿದಳು. ಬಸವರಾಜ ಈತನು ಕೈ ಮುಷ್ಠಿ ಮಾಡಿ ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿ ಸೀರೆ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿದನು. ಮಲ್ಲಮ್ಮ ಇವಳು ನನ್ನ ಕೂದಲು ಹಿಡಿದು ಜಗ್ಗಾಡಿ, ಕೈಯಿಂದ ಬೆನ್ನಿಗೆ ಹೊಡೆದಳು. ಆಗ ಅಲ್ಲಿಯೆ ಇದ್ದ ನನ್ನ ಭಾವ ಹೈಯಾಳಪ್ಪ ಹಾಗೂ ಅಲ್ಲಿಯೇ ಹೊರಟಿದ್ದ ಹಣಮಂತ್ರಾಯ ತಂದೆ ಭೀಮಣ್ಣ ನಾಯ್ಕೋಡಿ, ಸಿದ್ದಪ್ಪ ತಂದೆ ಪರಮಣ್ಣ ಮೆದಕಿನಾಳ ಮೂವರು ಕೂಡಿ ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಅವರೆಲ್ಲರು ಹೊಡೆಯುವದನ್ನು ಬಿಟ್ಟು ಇನ್ನೊಮ್ಮೆ ನಮ್ಮ ಮನೆತನಕ ಬಂದರೆ ನಿನ್ನ ಜೀವಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ನಾನು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ಉಪಚಾರ ಪಡೆದುಕೊಂಡು ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ನನಗೆ ಹೊಡೆ ಬಡೆ ಮಾಡಿ, ಮಾನಭಂಗ ಮಾಡಲು ಪ್ರಯತ್ನಿಸಿ, ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ ನಾಲ್ಕೂ ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 97/2022 ಕಲಂ: 323, 324, 354, 504, 506 ಸಂ. 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 96/2022 ಕಲಂ: 323, 324, 307, 504, 506 ಸಂಗಡ 34 ಐಪಿಸಿ : ಇಂದು ದಿ: 17/06/22 ರಂದು 1.30 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಶಿವರಾಜ ತಂದೆ ಅಯ್ಯನಗೌಡ ಮಾಲಿ ಪಾಟೀಲ ವಯಾ|| 37 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ವಾಗಣಗೇರಾ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿರುತ್ತೇವೆ. ಎಲ್ಲರದು ಮದುವೆಯಾಗಿರುತ್ತದೆ. ಸುಮಾರು 2-3 ವರ್ಷಗಳ ಹಿಂದೆ ಮೊಹರಂ ಹಬ್ಬದಲ್ಲಿ ಅಲಾಯ್ ಆಡುವಾಗ ನನ್ನ ಕಾಲು ಸಿದ್ರಾಮ ತಂದೆ ಬಿಕ್ಕಪ್ಪ ಗೊಗಡಿಹಾಳ ಈತನ ಕಾಲಿಗೆ ತಗಲಿದ್ದರಿಂದ ಸಿದ್ರಾಮ ಮತ್ತು ಅವರ ಮನೆಯವರು ಬಂದು ನನ್ನೊಂದಿಗೆ ಬಾಯಿಮಾತಿನ ತಕರಾರು ಮಾಡಿದ್ದರು. ಇದಾದ ನಂತರ ನಮ್ಮೊಂದಿಗೆ ಆಗಾಗ ತಕರಾರು ಮಾಡುತ್ತಾ ಬಂದಿದ್ದರು. ಆದರೂ ಕೂಡ ನಾವು ಮುಂದೆ ಸರಿಹೋಗಬಹುದು ಅಂತ ತಿಳಿದು ಸುಮ್ಮನಿದ್ದೆವು. ಹೀಗಿದ್ದು ನಿನ್ನೆ ದಿನಾಂಕ: 16/06/2022 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆಯಾದ ಅಯ್ಯನಗೌಡ, ತಾಯಿಯಾದ ತಾರಮ್ಮ ಮೂವರು ನಮ್ಮ ಮನೆಯ ಮುಂದೆ ಇರುವ ಕಟ್ಟಿಯ ಮೇಲೆ ಕುಳಿತಿದ್ದೆವು. ನಮ್ಮ ಮನೆಯ ಹತ್ತಿರ ಇರುವ ಚಾವಡಿ ಕಟ್ಟೆಯ ಮೇಲೆ ನಮ್ಮ ತಮ್ಮನಾದ ರಾಮನಗೌಡ ತಂದೆ ಅಯ್ಯನಗೌಡ ಮಾಲಿಪಾಟೀಲ ವಯಸ್ಸು||32 ವರ್ಷ ಈತನು ಕುಳಿತಿದ್ದನು, ಆಗ ನಮ್ಮೂರ ನಮ್ಮ ಜನಾಂಗದ 1) ಸಿದ್ರಾಮ ತಂದೆ ಬಿಕ್ಕಪ್ಪ ಗೊಗಡಿಹಾಳ 2) ಬಸವರಾಜ ತಂದೆ ಯಂಕಪ್ಪ ಗೊಗಡಿಹಾಳ ಇಬ್ಬರು ತಮ್ಮ ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಏಕಾಏಕಿ ನಮ್ಮ ತಮ್ಮನ ಹತ್ತಿರ ಬಂದವರೇ, ಲೇ ರಾಮ್ಯಾ ನಿಂದು ನಿನ್ನ ಅಣ್ಣ ಶಿವರಾಜಂದು ಊರಾಗ ಬಾಳ ನಡದಾದಲೇ ನಿಮ್ಮ ಸೊಕ್ಕು ಬಾಳ ಆಗಾದ್ಯ ಇವತ್ತು ನಿಮ್ಮ ಜೀವ ತೆಗೆದೇ ಬಿಡತೀವಿ ಅಂತ ಅನ್ನುತ್ತಾ ಅವರಲ್ಲಿಯ ಸಿದ್ರಾಮ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಮ್ಮನಿಗೆ ಕೊಲೆ ಮಾಡುವ ಉದ್ದೇಶದಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಬಸವರಾಜ ಈತನು ಕಲ್ಲಿನಿಂದ ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿ ಕಾಲಿನಿಂದ ತೊರಡಿಗೆ ಒದ್ದು ಗುಪ್ತಗಾಯ ಮಾಡಿದನು. ಆಗ ಅಲ್ಲೇ ಹತ್ತಿರ ಇದ್ದ ನಾನು, ನಮ್ಮ ತಂದೆ, ತಾಯಿ ಹಾಗೂ ಅಲ್ಲಿಯೇ ಕಟ್ಟೆಯ ಹತ್ತಿರ ಇದ್ದ ವೆಂಕಟೇಶ ತಂದೆ ಗೋವಿಂದಪ್ಪ ಪೂಜಾರಿ, ಕಂಡರಾಯಗೌಡ ತಂದೆ ಕಾಶಿರಾಯಗೌಡ ಮಾಲಿ ಪಾಟೀಲ ಎಲ್ಲರು ಕೂಡಿ ನಮ್ಮ ತಮ್ಮನಿಗೆ ಹೊಡೆಯುವನ್ನು ನೋಡಿ ಬಿಡಿಸಿಕೊಂಡೆವು. ಆಗ ಅವರು ಹೊಡೆಯುವದನ್ನು ಬಿಟ್ಟು ಇವತ್ತು ಉಳದಿರಿ ಸೂಳೇ ಮಕ್ಕಳೆ ಇನ್ನೊಮ್ಮೊ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ತೆಗೆಯದೇ ಬಿಡುವದಿಲ್ಲ. ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಂತರ ಘಟನೆಯಲ್ಲಿ ಗಾಯಗೊಂಡ ನನ್ನ ತಮ್ಮನಿಗೆ ನಾನು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಉಪಚಾರ ಪಡಿಸಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಸೇರಿಕೆ ಮಾಡಿ, ತಂದೆ ತಾಯಿಯವರೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ನನ್ನ ತಮ್ಮನಿಗೆ ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 96/2022 ಕಲಂ: 323, 324, 307, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Last Updated: 18-06-2022 10:17 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080