ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18-07-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 109/2021 ಕಲಂ, 341, 323, 504, 506 ಸಂ 34 ಐಪಿಸಿ : ಇಂದು ದಿನಾಂಕ: 17.07.2021 ರಂದು ಮಧ್ಯಾಹ್ನ 1.30 ಗಂಟೆಗೆ ಪಿರ್ಯಾಧಿ ಠಾಣೆಗೆ ಹಾಜರಾಗಿ ಹೇಳಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನೆಂದರೆ ಪಿರ್ಯಾಧಿಯ ಮಗನು ಆರೋಪಿ ಮಲ್ಲಪ್ಪನ ಮಗಳಾದ ಶಕುಂತಲಾ ಇವಳಿಗೆ ಕೆಡಸಿದ್ದಾನೆ ಅಂತಾ ಪ್ರಕರಣ ದಾಖಲಿಸಿ ಜೀಲಿಗೆ ಕಳುಹಿಸಿದ್ದು. ಇದೇ ಸಿಟ್ಟಿನಿಂದಾ ಆರೊಪಿತರು ಪಿರ್ಯಾಧಿಯೊಂದಿಗೆ ಜಗಳ ಮಾಡಿಕೊಂಡು ಬರುತ್ತಿದ್ದು. ಹೀಗಿದ್ದು ದಿನಾಂಕ:12.07.2021 ರಂದು ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ಪಿರ್ಯಾಧಿಯು ತನ್ನ ಮನೆಯಿಂದ ಹೋಗುತ್ತಿರುವಾಗ ಆರೋಪಿತರು ಬಂದು ಪಿರ್ಯಾಧಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವಬೆದರಿಕೆ ಹಾಕಿ ಹೋಗಿದ್ದು. ನಂತರ ಪಿರ್ಯಾಧಿಯು ತಮ್ಮ ಗ್ರಾಮದ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ತಡವಾಗಿ ಈ ದಿವಸ ಬಂದಿದ್ದು ಅಂತಾ ಪಿರ್ಯಾಧಿಯ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ನಂ:109/2021 ಕಲಂ 341 323, 504, 506 ಸಂ 34 ಐಪಿಸಿ ಅಡಿಯಲ್ಲಿ ಪ್ರಕರಣದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 110/2021 ಕಲಂ: 87 ಕೆ.ಪಿ. ಆಕ್ಟ್ : ದಿನಾಂಕ 17.07.2020 ರಂದು ಸಂಜೆ 5:00 ಗಂಟೆಗೆ ಸುಮಾರಿಗೆ ಈ ಮೇಲ್ಕಂಡ ಆರೋಪಿತರು ಕೇಶ್ವಾರ ಸಿಮಾಂತರದ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಲು ಅನುಮತಿ ನೀಡುವಂತೆ ಎನ್.ಎಸಿ ನಂ: 20/2021 ರ ಪ್ರಕಾರ ಅನುಮತಿ ಪಡೆದುಕೊಂಡ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರ ವಶದಲ್ಲಿದ್ದ 15030/-ರೂ ಮತ್ತು 52 ಇಸ್ಪೀಟ್ ಎಲೆಗಳನ್ನು ಸೇರಿ ಒಟ್ಟು 15030/- ರೂ ಬೆಲೆಯ ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 110/2021 ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 99/2021 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 17.07.2021 ರಂದು 1730 ಗಂಟೆಗೆ ಮಾನ್ಯ ಗಜಾನಂದ ಪಿ ಎಸ್ ಐ ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೆನೆಂದರೆ, ಇಂದು ದಿನಾಂಕ: 17.07.2021 ರಂದು ಕೆಂಭಾವಿ ಪಟ್ಟಣದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸದರಿ ಸ್ಥಳಕ್ಕೆ 05.55 ಪಿಎಮ್ಕ್ಕೆ ಹೋಗಿ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಹಣಮಂತ್ರಾಯ ತಂದೆ ವೀರಭದ್ರಪ್ಪ ದುಮ್ಮದ್ರಿ ವ|| 31 ಜಾ|| ಲಿಂಗಾಯತ ಉ|| ವ್ಯಾಪಾರ ಸಾ|| ಕೆಂಭಾವಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1100/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 6 ಪಿಎಮ್ದಿಂದ 7 ಪಿಎಮ್ವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ಇರುತ್ತದೆ ಅಂತ ವರದಿ ನೀಡಿದ್ದು ಸದರ ವರಧಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 99/2021 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ
122/2021 ಕಲಂ 279 337 338 ಐಪಿಸಿ ಮತ್ತು 187 ಐಎಂವಿ ಯ್ಯಾಕ್ಟ : ಇಂದು ದಿನಾಂಕ: 17/07/2021 ರಂದು 11:30 ಎ.ಎಂ ಕ್ಕೆ ಠಾಣೆಯಲ್ಲಿದಾಗ ಠಾಣೆಯಲ್ಲಿದ್ದಾಗ ಶ್ರೀ ಪರಮೇಶ ಹೆಚ್ಸಿ-215 ರವರು ಎಂ.ಎಲ್.ಸಿ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ ದಶರಥ ತಂದೆ ಮಾನಪ್ಪ ಹುಡೇದವರ ವ|| 28 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಅರಳಹಳ್ಳಿ ತಾ|| ಸುರಪುರ ಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ಗಾಯಾಳುದಾರನ ಹೇಳಿಕೆ ತಂದು ಹಾಜರಪಡಿಸಿದ್ದರ ಸಾರಾಂಶವೆನಂದರೆ, ನನ್ನ ತಾಯಿ ಬಸಮ್ಮ ಗಂಡ ಮಾನಪ್ಪ ಹುಡೇದವರ ವ|| 50 ವರ್ಷ ಜಾ|| ಬೇಡರು ಉ|| ಮನೆಗೆಲಸ(ಗ್ರಾಮ ಪಂಚಾಯತ ಅದ್ಯಕ್ಷರು) ಇವರು ದೇವಾಪುರ ಗ್ರಾಮ ಪಂಚಾಯತಿ ಅದ್ಯಕ್ಷರಾಗಿರುತ್ತಾರೆ. ಹಿಗಿದ್ದು ಇಂದು ದಿನಾಂಕ:17/07/2021 ರಂದು ಮುಂಜಾನೆ 11:00 ಗಂಟೆಗೆ ದೇವಾಪುರ ಗ್ರಾಮದ ಪಂಚಾಯತಿಯಲ್ಲಿ ಪಂಚಾಯತ ಸದಸ್ಯರ ಸಾಮಾನ್ಯ ಸಬೇ ಇದ್ದ ಪ್ರಯುಕ್ತ ನಾನು ಮತ್ತು ನನ್ನ ತಾಯಿ ಇಬ್ಬರು ಕೂಡಿ ಮುಂಜಾನೆ 10:45 ಗಂಟೆಗೆ ಮನೆಯಿಂದ ಸಬೆಗೆ ಹಾಜರಾಗಲು ಹೊರಟಾಗ ಸುರಪುರ-ಲಿಂಗಸೂಗೂರು ಮುಖ್ಯ ರಸ್ತೆಯ ದೇವಾಪುರ ಸಣ್ಣ ಬ್ರೀಡ್ಜ ಹತ್ತಿರ ರೋಡಿನ ಮೇಲೆ ಅಂದಾಜು ಮುಂಜಾನೆ 11:00 ಗಂಟೆ ಸುಮಾರಿಗೆ ರೋಡಿನ ಎಡ ಬದಿಗೆ ನನ್ನ ಮೋಟರ್ ಸೈಕಲ್ ನಂ. ಕೆಎ-33 ಯು-1503 ನೇದ್ದು ಎದರುಗಡೆ ದನಗಳು ಬರುತಿದ್ದಾಗ ನಾನು ಮೋಟರ್ ಸೈಕಲ್ ನಿಲ್ಲಿಸಿದ್ದು ಎದರುಗಡಯಿಂದ ಬರುತ್ತಿದ್ದ ಒಂದು ಬಿಳಿ ಬಣ್ಣದ ನಾಲ್ಕು ಗಾಲಿಯ ವಾಹನ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುಕೊಂಡು ಬಂದು ನನ್ನ ಮೋಟರ್ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾನು ಮತ್ತು ನನ್ನ ತಾಯಿ ರೋಡಿನ ಮೇಲೆ ಬಿದ್ದೇವು. ನನಗೆ ಬಲಗೈ ಮೊಳಕೈ ಕೆಳಗೆ ಮತ್ತು ಹಸ್ತಕ್ಕೆ ರಕ್ತಗಾಯವಾಗಿದ್ದು ಹಾಗೂ ಎರಡು ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ನನ್ನ ತಾಯಿಗೆ ನೋಡಲಾಗಿ ಎಡಗಡೆ ಮೇಲಕಿಗೆ, ಎಡಗಣ್ಣಿನ ಕೆಳಗೆ ಭಾರಿ ರಕ್ತಗಾಯ, ತಲೆಗೆ ಭಾರಿ ರಕ್ತಗಾಯ, ಮುಗಿನ ಮೇಲೆ ಮತ್ತು ನಾಲಿಗೆಗೆ ರಕ್ತಗಾಯವಾರುತ್ತದೆ. ನನ್ನ ತಾಯಿ ಮಾತನಾಡು ಸ್ಥೀತಿಯಲ್ಲಿ ಇರಲಿಲ್ಲ. ವಾಹನದ ಚಾಲಕನು ನಮ್ಮ ಕಡೆ ತಿರುಗಿ ನೋಡುತ್ತಾ ತನ್ನ ವಾಹನ ತಗೆದುಕೊಂಡು ಹೊದನು. ವಾಹನದ ಚಾಲಕನಿಗೆ ಮತ್ತೊಮ್ಮೆ ನೋಡಿದರೆ ಗುರುತಿಸುತ್ತೆನೆ. ನಮ್ಮ ಹಿಂದೆ ಹೊರಟಿದ್ದ ನಮ್ಮೂರಿನ ಗ್ರಾಮ ಪಂಚಾಯತ ಸದಸ್ಯನಾದ ಯಮನಪ್ಪ ತಂದೆ ಮಲ್ಲಪ್ಪ ಮ್ಯಾಗೇರಿ ಮತ್ತು ಚನ್ನಪ್ಪ ತಂದೆ ಜಂಬಯ್ಯ ಮೇಲಿನಮನಿ ಇವರುಗಳು ಬಂದು ನಮ್ಮನ್ನು ನೋಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ತಂದು ಸೇರಿಕೆ ಮಾಡಿದರು. ಕಾರಣ ನನಗೆ ಮತ್ತು ನನ್ನ ತಾಯಿ ಬಸಮ್ಮಳಿಗೆ ಯಾವುದೋ ಒಂದು ಬಿಳಿ ಬಣ್ಣದ ನಾಲ್ಕು ಗಾಲಿಯ ವಾಹನ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಜೋರಾಗಿ ಡಿಕ್ಕಿ ಪಡಿಸಿ ವಾಹನ ನಿಲ್ಲಿಸಿದೆ ವಾಹನ ಸಮೇತ ಓಡಿದವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 122/2021 ಕಲಂ 279 337 338 ಐಪಿಸಿ ಮತ್ತು 187 ಐಎಂವಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ: 74/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 17/07/2021 ರಂದು 3-30 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.17/07/2021 ರಂದು 2-30 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡಾ|| ಬಿ.ಆರ್ ಅಂಬೇಡ್ಕರ ನಗರದ ಡಾ|| ಬಿ.ಆರ್ ಅಂಬೇಡ್ಕರ ಭವನದ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ. ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 3-20 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 3-30 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.74/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ: 75/2021 ಕಲಂ: 160 ಐಪಿಸಿ : ಇಂದು ದಿನಾಂಕ;17/07/2021 ರಂದು 7-00 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಒಂದು ವರದಿ ಸಲ್ಲಿಸಿದ್ದರ ಸಾರಾಂಶವೆನೆದರೆ, ಪರಮಣ್ಣ ಪಿಸಿ-289 ಯಾದಗಿರಿ ನಗರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ವರದಿ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ; 17/07/2021 ರಂದು ನಾನು ಮತ್ತು ವಿಠೋಬಾ ಎ.ಎಸ್.ಐ ಹಾಗೂ ಜೀಪ್ ಚಾಲಕ ಜಗನ್ನಾಥರೆಡ್ಡಿ ಹೆಚ್.ಸಿ-10 ರವರು ಕೂಡಿಕೊಂಡು ಸಾಯಂಕಾಲ 6-00 ಪಿಎಮ್ ಸುಮಾರಿಗೆ ಯಾದಗಿರಿ ನಗರದ ಡಿಗ್ರಿ ಕಾಲೇಜ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಯ ಕಡೆಗೆ ಚಿತ್ತಾಪೂರ ರಸ್ತೆಯ ಮೇಲೆ ಪೆಟ್ರೋಲಿಂಗ ಕುರಿತು ಹೋಗುತ್ತಿರುವಾಗ ಭಾತ್ಮಿ ಬಂದಿದ್ದೆನೆಂದರೆ, ಯಾದಗಿರಿ ನಗರದ ಚಿತ್ತಾಪೂರ ರಸ್ತೆಗೆ ಬರುವ ಶ್ರೀ ಸಾಯಿ ಸಮರ್ಥ ದಾಬಾ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರು ಜಗಳ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸ್ಥಳಕ್ಕೆ 6-30 ಪಿಎಮ್ ಕ್ಕೆ ಹೋಗಿ ನೋಡಲಾಗಿ ಚಿತ್ತಾಪೂರ ರಸ್ತೆಗೆ ಬರುವ ಶ್ರೀ ಸಾಯಿ ಸಮರ್ಥ ದಾಬಾ ಮುಂದುಗಡೆ ಯಾರೊ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಯಾವುದೋ ಒಂದು ವಿಷಯಕ್ಕೆ ಕೈಕೈ ಮಿಲಾಯಿಸಿ ಕೈಯಿಂದ ಒಬ್ಬರಿಗೊಬ್ಬರು ಹೊಡೆದಾಡುತ್ತ ಸಾರ್ವಜನಿಕ ಶಾಂತತೆಗೆ ಭಂಗವುಂಟು ಮಾಡುತ್ತಿದ್ದಾಗ ಸದರಿಯವರನ್ನು ಹಿಡಿದು ವಿಚಾರಿಸಲಾಗಿ ತಮ್ಮ ಹೆಸರು ಪಾಟರ್ಿ ನಂ. 01] ರವೀಂದ್ರ ತಂದೆ ಶಂಕರ ಜಾಧವ ವ;29 ಜಾ; ಲಂಬಾಣಿ ಉ; ಟೀಕೆಟ್ ಕ್ಲರ್ಕ ಸಾ; ಅಜೀಜ ಕಾಲೋನಿ ಯಾದಗಿರಿ. ಪಾಟರ್ಿ ನಂ. 02] ಗೋವಿಂದ ತಂದೆ ಬಾಬು ಜಾಧವ ವ;39 ಜಾ; ಲಂಬಾಣಿ ಉ; ವಕೀಲರು ಸಾ; ಗಾಂಧಿನಗರ ತಾಂಡಾ ಯಾದಗಿರಿ ಅಂತಾ ತಿಳಿಸಿದರು. ನಂತರ ಅವರ ಹತ್ತಿರ ಇದ್ದ ಒಬ್ಬ ವ್ಯಕ್ತಿಗೆ ವಿಚಾರಿಸಲು ಅವನು ತನ್ನ ಹೆಸರು ಸೋಮು ತಂದೆ ಮುನ್ಯಾ ಚವ್ಹಾಣ ಸಾ; ರೈಲ್ವೆ ಕ್ವಾಟ್ರಸ್ ಯಾದಗಿರಿ ಅಂತಾ ತಿಳಿಸಿದ್ದು ಜಗಳದ ಬಗ್ಗೆ ವಿಚಾರಿಸಲು ಹೆಣ್ಣು ಮಕ್ಕಳ ವಿಚಾರದಲ್ಲಿ ಇಬ್ಬರು ಒಬ್ಬರಿಗೊಬ್ಬರು ಜಗಳ ಮಾಡುತ್ತಿದ್ದಾರೆ ಅಂತಾ ತಿಳಿಸಿದನು. ನಂತರ ಸದರಿಯವರಿಗೆ ಅಲ್ಲೆ ಬಿಟ್ಟರೆ ಸಾರ್ವಜನಿಕ ಶಾಂತತೆಗೆ ಭಂಗವುಂಟು ಮಾಡುತ್ತಾರೆ ಎಂದು ಅವರನ್ನು ಸ್ಥಳದಲ್ಲೆ ವಶಕ್ಕೆ ತೆಗೆದುಕೊಂಡು 7-00 ಪಿ.ಎಮ್ ಕ್ಕೆ ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಕಲಂ: 160 ಐಪಿಸಿ ಪ್ರಕಾರ ಕ್ರಮ ಜರುಗಿಸಲು ಈ ಜ್ಞಾಪನ ಪತ್ರದ ಮೂಲಕ ನಿಮಗೆ ಸೂಚಿಸಲಾಗಿದೆ ಅಂತಾ ಕೊಟ್ಟ ವರದಿಯ ಮೇಲಿಂದ ಠಾಣೆಯ ಗುನ್ನೆ ನಂ.75/2021 ಕಲಂ.160 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಇತ್ತೀಚಿನ ನವೀಕರಣ​ : 19-07-2021 04:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080