ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-08-2021

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 81/2021 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994 : ಇಂದು ದಿನಾಂಕ: 17/08/2021 ರಂದು 08.30 ಪಿಎಮ್ ಕ್ಕೆ ಶ್ರೀ ಅಯ್ಯಪ್ಪ ಪಿಎಸ್ಐ (ಕಾ.ಸು) ಗೋಗಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಒಂದು ವರದಿ ಹಾಜರ ಪಡಿಸಿದ್ದು, ಸದರಿ ವರದಿಯ ಸಾರಂಶವೆನಂದರೆ, ದಿನಾಂಕ: 17/08/2021 ರಂದು 07.00 ಪಿಎಂ ಸುಮಾರಿಗೆ ಪೆಟ್ರೋಲಿಂಗ ಕರ್ತವ್ಯದಲ್ಲಿ ಇದ್ದಾಗ ಶೆಟ್ಟಿಕೇರಾ ಕಡೆಯಿಂದ ಹೋಸ್ಕೆರಾ ಮಾರ್ಗವಾಗಿ ಗೋಗಿ ಕಡೆಗೆ ಟ್ರ್ಯಾಕ್ಟರ್ ದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಮಡಿವಾಳಮ್ಮ ಹೆಚ್.ಸಿ-41 ಶರಣಗೌಡ ಹೆಚ್.ಸಿ-155 ಪರಶುರಾಮ ಪಿಸಿ-315, ಮಂಜುನಾಥ ಪಿಸಿ-232 ಜೀಪ್ ಚಾಲಕನಾದ ಜಲಾಲಸಾ ಹೆಚ್.ಜಿ-260 ರವರೊಂದಿಗೆ ಸರಕಾರಿ ಜೀಪ್ ನಂ: ಕೆಎ-33 ಜಿ-161 ನೇದ್ದರಲ್ಲಿ ಗೋಗಿ ಕೆ ಗ್ರಾಮದ ವನದುಗರ್ಾ ಕ್ರಾಸ್ ಹತ್ತಿರ ಹೋಗಿ ರೋಡಿನಲ್ಲಿ ಕಾಯುತ್ತಾ ನಿಂತಾಗ 07.30 ಪಿಎಮ್ ಕ್ಕೆ ಹೋಸ್ಕೇರಾ ಕಡೆಯಿಂದ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ನೋಡಿದ್ದು, ಸದರಿ ಟ್ರ್ಯಾಕ್ಟರ್ ನಿಲ್ಲಿಸಿ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ನಾಗಪ್ಪ ತಂದೆ ಹಣಮಂತ ಕ್ವಾಣಿನವರ ವಯಾ:45 ಉ: ಡ್ರೈವರ ಜಾ: ಮಾದರ ಸಾ: ಗೋಗಿ ಕೆ ತಾ|| ಶಹಾಪೂರ ಅಂತಾ ತಿಳಿಸಿದ್ದು, ಸದರಿ ಟ್ರ್ಯಾಕ್ಟರದಲ್ಲಿಯ ಮರಳಿನ ಬಗ್ಗೆ ರಾಯಲ್ಟಿ ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಅಂತಾ ತಿಳಿಸಿದ್ದು, ತಾನೆ ಟ್ರ್ಯಾಕ್ಟರ ಮಾಲಿಕ ಅಂತಾ ತಿಳಿಸಿದನು. ಟ್ರ್ಯಾಕ್ಟರ್ನ್ನು ಪರಿಶೀಲಿಸಲಾಗಿ 1) ಒಂದು ಸ್ವಾರಜ ಟ್ರ್ಯಾಕ್ಟರ್ ನಂ:ಕೆಎ-33ಟಿಎ-9317 ಅಂ.ಕಿ:1,00,000=00 ರೂ 2) ಒಂದು ಟ್ರಾಯಲಿ ನಂ: ಕೆಎ-33 ಟಿ-4708 ಅಂ. ಕಿ: 50,000=00 3) ಒಂದು ಬ್ರಾಸ್ ಮರಳು ಅಂ:ಕಿ: 1500=00 ರೂ. ಇದ್ದು, ಸದರಿ ಟ್ರ್ಯಾಕ್ಟರ್ನ ಚಾಲಕ ಕಂ ಮಾಲೀಕನು ಸರಕಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿರುವುದಾಗಿ ತಿಳಿದುಬಂದಿದ್ದರಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಚಾಲಕ ಆರೋಪಿತನಾದ ನಾಗಪ್ಪ ತಂದೆ ಹಣಮಂತ ಕ್ವಾಣಿವರ ಇವನೊಂದಿಗೆ ಠಾಣೆಗೆ 08.30 ಪಿಎಮ್ ಕ್ಕೆ ತಂದು ಹಾಜರ್ ಪಡಿಸಿದ್ದು ಇರುತ್ತದೆ. ಆದ್ದರಿಂದ ಸಕರ್ಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 81/2021 ಕಲಂ 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಆಕ್ಟ್-1994 ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 120/2021 ಕಲಂ: 323, 498 (ಎ), 504, 506, 34 ಐಪಿಸಿ : ಇಂದು ದಿ: 17.08.2021 ರಂದು 5.00 ಪಿಎಮ್ಕ್ಕೆ ಶ್ರೀಮತಿ ಕಾಜಲ್ ಗಂಡ ಗೌಸಮೊದ್ದೀನ ಶೇಖ ವಯಾ|| 21 ಜಾ|| ಮುಸ್ಲಿಂ ಉ|| ಮನೆಗೆಲಸ ಸಾ|| ಮೋರೆವಸ್ತಿ, ಕೃಷ್ಣಾ ಟೆಂಪಲ್ ಹತ್ತಿರ, ಚಿಕಲಿ, ಪುಣೆ ರಾಜ್ಯ|| ಮಹಾರಾಷ್ಟ್ರ ಹಾ.ವ|| ಏವೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಏನೆಂದರೆ, ನನ್ನ ತವರು ಮನೆಯು ಸುರಪುರ ತಾಲೂಕಿನ ಏವೂರ ಗ್ರಾಮವಾಗಿದ್ದು, ನನಗೆ 2019 ನೇ ಸಾಲಿನ ಫೆಬ್ರುವರಿ 1 ನೇ ತಾರೀಕಿನಂದು ಮಹಾರಾಷ್ಟ್ರ ರಾಜ್ಯದ ಮೋರೆ ವಸ್ತಿ ಕೃಷ್ಣಾ ಟೆಂಪಲ್ ಹತ್ತಿರ ಚಿಕಲಿ, ಪುಣೆಯವರಾದ ಗೌಸಮೋದ್ದೀನ ತಂದೆ ಮೌಲಾಲಿ ಶೇಖ ಇವರಿಗೆ ಕೊಟ್ಟಿ ಮದುವೆ ಮಾಡಿದ್ದು ಇರುತ್ತದೆ. ಮದುವೆಯು ನನ್ನ ತವರು ಮನೆಯಾದ ಏವೂರ ಗ್ರಾಮದ ನಮ್ಮ ಮನೆಯ ಮುಂದೆ ಜರುಗಿದ್ದು ಇರುತ್ತದೆ. ಮದುವೆಯಾದ ಸುಮಾರು 6 ತಿಂಗಳವರೆಗೆ ನಾನು ಹಾಗೂ ನನ್ನ ಗಂಡ ಅನ್ಯೋನ್ಯವಾಗಿದ್ದು, ನಂತರದ ದಿನಗಳಲ್ಲಿ ನನ್ನ ಗಂಡ ಹಾಗೂ ಅವರ ಮನೆಯವರು ನನಗೆ ನೀನು ಸರಿಯಾಗಿಲ್ಲ, ನಿನಗೆ ಕೆಲಸ ಮಾಡಲು ಬರುವದಿಲ್ಲ ಅಂತ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಿಕ್ಕೆ ಪ್ರಾರಂಬಿಸಿದ್ದರು. ಈ ವಿಷಯವನ್ನು ನಾನು ಆಗಾಗ ನಮ್ಮ ತಂದೆ ತಾಯಿಯವರಿಗೆ ಫೋನ್ ಮೂಲಕ ತಿಳಿಸಿದ್ದು ಅವರು ನಂತರ ಬಂದು ತಿಳಿ ಹೇಳುತ್ತೇವೆ ಅಂತ ಅಂದಿದ್ದರು. ಆ ವೇಳೆಗೆ ನಾನು ಗರ್ಭವತಿಯಾಗಿದ್ದರಿಂದ ನಮ್ಮ ತಂದೆಯವರು ನನಗೆ 2019 ನೇ ಸಾಲಿನ ಆಗಷ್ಟ ತಿಂಗಳಲ್ಲಿ ಪೂನಾಕ್ಕೆ ಬಂದು ನನ್ನನ್ನು ನಮ್ಮ ಏವೂರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದು ಇರುತ್ತದೆ. ನಂತರ 2019ನೇ ಸಾಲಿನ ನವ್ಹೆಂಬರ 30 ರಂದು ನಾನು ಒಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದು ಇರುತ್ತದೆ. ನಾನು ನನ್ನ ಮಗಳಿಗೆ ಜನ್ಮ ನೀಡಿ ಅವಳು ಸುಮಾರು ಒಂದುವರೆ ವರ್ಷದವಳಾದರೂ ನನ್ನ ಗಂಡನಾಗಲಿ ಅಥವಾ ಅವರ ಮನೆಯವರಾಗಲಿ ಯಾರೂ ಬರಲಿಲ್ಲವಾದ್ದರಿಂದ ನಾನು ಸುಮಾರು 2 ತಿಂಗಳ ಹಿಂದೆ ನನ್ನ ಗಂಡನಿಗೆ ಫೋನ್ ಮಾಡಿ ಕರೆದುಕೊಂಡು ಹೋಗುವಂತೆ ತಿಳಿಸಿದಾಗ ಸದರಿಯವನು ನಾನು ಕರೆದುಕೊಂಡು ಹೋಗುವದಿಲ್ಲ, ನೀನು ಸರಿಯಾಗಿಲ್ಲ, ನೀನು ನನಗೆ ಬೇಕಾಗಿಲ್ಲ. ನನ್ನ ಮಗಳು ನೋಡಬೇಕೆನಿಸಿದಾಗ ನಾನು ಮತ್ತು ನನ್ನ ತಾಯಿ ಇಬ್ಬರೂ ಕೂಡಿ ಒಮ್ಮೆ ಬಂದು ನನ್ನ ಮಗಳಿಗೆ ನೋಡಿಕೊಂಡು ಹೋಗುತ್ತೇನೆ ಆದರೆ ನಿನಗೆ ಕರೆದುಕೊಂಡು ಹೋಗುವುದಾಗಲೀ ನಿನ್ನೊಂದಿಗೆ ಮಾತನಾಡುವದಾಗಲೀ ಮಾಡುವ ಅವಶ್ಯಕತೆ ನನಗೆ ಇಲ್ಲ ಅಂತಾ ಹೇಳಿ ಫೋನ್ ಕಟ್ ಮಾಡಿದನು. ನಂತರ ದಿನಾಂಕ 25/07/2021 ರಂದು 10.30 ಎಎಂ ಸುಮಾರಿಗೆ ನಾನು, ನಮ್ಮ ತಂದೆಯಾದ ಇಸ್ಮಾಯಿಲ್ ತಂದೆ ರಹಿಮಾನಸಾಬ ಯತ್ನಾಳ, ತಾಯಿಯಾದ ಬೀಬೀಜಾನ್ ಗಂಡ ಇಸ್ಮಾಯಿಲ್ ಯತ್ನಾಳ ಎಲ್ಲರೂ ಏವೂರ ಗ್ರಾಮದ ನಮ್ಮ ತಂದೆಯ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ನನ್ನ ಗಂಡನಾದ ಗೌಸಮೋದ್ದೀನ ತಂದೆ ಮೌಲಾಲಿ ಶೇಖ ಹಾಗೂ ಅತ್ತೆಯಾದ ತಾಹೇರಾ ಬೇಗಂ ಗಂಡ ಮೌಲಾಲಿ ಶೇಖ ಇಬ್ಬರೂ ಕೂಡಿ ನಮ್ಮ ಮನೆಯ ಮುಂದೆ ಬಂದರು. ಆಗ ಅವರಿಗೆ ನಾನು ಬರ್ರಿ ಮನೆಯೊಳಗೆ ಹೊರಗಡೆ ಏಕೆ ನಿಂತಿರುವಿರಿ ಅಂದಾಗ ನನ್ನ ಗಂಡನು ಏನಲೇ ಸೂಳಿ ಕಾಜಿ ನೀನು ಸರಿ ಇಲ್ಲ, ನಿನಗೆ ಏನೂ ಕೆಲಸ ಬರಲ್ಲ, ನೀನು ನನ್ನ ಹೆಂಡತಿಯಾಗಿ ಬಾಳಲು ಯೋಗ್ಯಳಲ್ಲ ಅಂತಾ ಅವಾಚ್ಯವಾಗಿ ಬೈಯುತ್ತಾ, ನಾವು ನಿನ್ನೊಂದಿಗೆ ಮಾತನಾಡಲು ಬಂದಿಲ್ಲ, ನನ್ನ ಮಗಳು ಹೇಗಿದ್ದಾಳೆ ಅಂತಾ ನೋಡಿಕೊಂಡು ಹೋಗಲು ಬಂದಿದ್ದೇವೆ ಮಗುವಿಗೆ ತಂದು ತೋರಿಸು ಅಂದಾಗ ಮಗಳಿಗೆ ಮನೆಯಲ್ಲಿ ಬಂದು ನೋಡ್ರಿ ಅಂತಾ ನಾನು ಹೇಳಿದ್ದಕ್ಕೆ ನನ್ನ ಗಂಡ ಮತ್ತು ಅತ್ತೆ ನನ್ನ ಕೈ ಹಿಡಿದು ಎಳೆದು ಏನಲೇ ಸೂಳಿ ನಮಗೆ ಬುದ್ದಿ ಹೇಳುವಷ್ಟು ದೊಡ್ಡವಳಾದಿಯಾ ಅಂತಾ ಅಂದು ನನ್ನ ಗಂಡನು ಕೈಯಿಂದ ನನ್ನ ಬೆನ್ನಿಗೆ ಹೊಡೆದಿದ್ದು, ನಮ್ಮ ಅತ್ತೆ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಯುತ್ತಿದ್ದಾಗ ನಮ್ಮ ತಂದೆ ಇಸ್ಮಾಯಿಲ್ ಮತ್ತು ತಾಯಿ ಬೀಬೀಜಾನ ಇವರು ಬಂದು ಜಗಳ ಬಿಡಿಸಿದರು. ಆಗ ನನಗೆ ಹೊಡೆಯುವುದು ಬಿಟ್ಟು ಇದೊಂದು ಸಾರಿ ಬಿಟ್ಟೀವಿ ಇನ್ನೊಮ್ಮೆ ನಮಗೆ ಮಾತನಾಡಿಸುವುದಾಗಲೀ ಗಂಡನ ಮನೆಗೆ ಕರೆದುಕೊಂಡು ಹೋಗು ಅಂತಾ ಹೇಳುವುದಾಗಲೀ ಮಾಡಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿರುತ್ತಾರೆ ಅಂತ ಇತ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 120/2021 ಕಲಂ: 323, 498ಎ, 504, 506, 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 190/2021 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 17/08/2021 ರಂದು, ಮಧ್ಯಾಹ್ನ 15-15 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹಣಮಂತ ಬಿ. ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ರವರು, ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದೇನೆಂದರೆ, ನಾನು ಇಂದು ದಿನಾಂಕ: 17/08/2021 ರಂದು, ಮಧ್ಯಾಹ್ನ 14-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ಪಟ್ಟಣದ ಹಳೆ ಬಸ್ ನಿಲ್ದಾಣದ ಹಾಲಬಾವಿ ರೋಡಿನ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂಬರ 46/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೇರೆಗೆ, ಮಾನ್ಯ ನ್ಯಾಯಾಲಯವು ಇಂದು ಮಧ್ಯಾಹ್ನ 15-00 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಮಟಕಾ ನಂಬರ ಬರೆದುಕೊಳ್ಳುವ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 190/2021 ಕಲಂ 78(3) ಕೆ.ಪಿಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ. 132/2021 ಕಲಂ: 279, 337 ಐ.ಪಿ.ಸಿ : ದಿನಾಂಕ 17.08.2021 ರಂದು ಮಧ್ಯಾಹ್ನ 04.30 ಗಂಟೆಗೆ ಆರೋಪಿತನು ತನ್ನ ಟ್ಯಾಂಕರ ನಂ: ಕೆಎ-32-ಡಿ-1267 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿಯರ್ಾದಿ ಕಾರ ನಂ: ಕೆಎ-33-ಎಮ್-5838 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಕಾರ ಚಾಲಕನಿಗೆ ಸಾದ ಸ್ವರೂಪದ ಗಾಯವಾಗಿದ್ದು ಮತ್ತು ಫಿಯರ್ಾದಿಯ ಕಾರ ಡ್ಯಾಮೇಜಾಗಿದ ಬಗ್ಗೆ ಫಿಯರ್ಾದಿ ವಗೈರೆ ಇರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ. 131/2021 ಕಲಂ: 279, 337 ಐ.ಪಿ.ಸಿ : ದಿನಾಂಕ 17.08.2021 ರಂದು ಮಧ್ಯಾಹ್ನ 04.30 ಗಂಟೆಗೆ ಆರೋಪಿತನು ತನ್ನ ಟ್ಯಾಂಕರ ನಂ: ಕೆಎ-32-ಡಿ-1267 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿಯರ್ಾದಿ ಕಾರ ನಂ: ಕೆಎ-33-ಎಮ್-5838 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಕಾರ ಚಾಲಕನಿಗೆ ಸಾದ ಸ್ವರೂಪದ ಗಾಯವಾಗಿದ್ದು ಮತ್ತು ಫಿಯರ್ಾದಿಯ ಕಾರ ಡ್ಯಾಮೇಜಾಗಿದ ಬಗ್ಗೆ ಫಿಯರ್ಾದಿ ವಗೈರೆ ಇರುತ್ತದೆ.

 

ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 102/2020 ಕಲಂ: 420 ಐಪಿಸಿ : ಇಂದು ದಿನಾಂಕ:17/08/2021 ರಂದು 7-15 ಪಿಎಮ್ ಕ್ಕೆ ಶ್ರೀ ಮರೆಪ್ಪ ತಂದೆ ಸಾಬಣ್ಣ ಹರಿಜನ, ವ:60, ಜಾ:ಮಾದಿಗ, ಉ:ಒಕ್ಕಲುತನ ಸಾ:ಕುಮನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕುಮನೂರು ಗ್ರಾಮದಲ್ಲಿ ಒಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನಗೆ ಸ್ವಂತ 2 ಎಕರೆ 26 ಗುಂಟೆ ಗದ್ದೆ ಇದ್ದು, ಇನ್ನು ನಮ್ಮೂರ ಕೆಲವು ರೈತರ ಸುಮಾರು 08 ಎಕರೆ ಗದ್ದೆಯನ್ನು ಲೀಜಿಗೆ ಹಾಕಿಕೊಂಡಿರುತ್ತೇನೆ. ಸದರಿ ಗದ್ದೆಗಳಲ್ಲಿ ನಾನು ಹೋದ ಬೇಸಿಗೆಯಲ್ಲಿ ಭತ್ತದ ಬೆಳೆಯನ್ನು ಬೆಳೆದಿರುತ್ತೇನೆ. ನನ್ನ ಸ್ವಂತ ಮತ್ತು ಲೀಜಿಗೆ ಮಾಡಿದ ಗದ್ದೆ ಸೇರಿ ಒಟ್ಟು ಸುಮಾರು 205 ಚೀಲಗಳು ಭತ್ತ ಬೆಳೆದಿತ್ತು. ಸದರಿ ನಾನು ಬೆಳೆದ ಭತ್ತವನ್ನು ನಮ್ಮೂರ ಸೀಮೆಯ ಜಯದೇವಿ ಗಂಡ ಅಯ್ಯಣ್ಣಗೌಡ ಇವರ ಮಾನೆದ ಹೆಸರಿನ ಹೊಲದಲ್ಲಿ ಒಣಗಿಸಿದ್ದೇನು. ಹೀಗಿದ್ದು ಈಗ ಸುಮಾರು ಮೂರು ತಿಂಗಳ ಹಿಂದೆ ದಿನಾಂಕ: 23/05/2021 ರಂದು ನಾನು ಭತ್ತ ಒಣಗಿಸಿದ ಜಾಗದಲ್ಲಿ 1) ಆನಂದರೆಡ್ಡಿ ತಂದೆ ಆಂಜನೇಯ ದಾಸಗಾರರು, 2) ಕೆ. ಎ ವಿಕ್ರಮರೆಡ್ಡಿ ಮತ್ತು 3) ನರೇಶ ರೆಡ್ಡಿ ಎಂಬ ಮೂರು ಜನ ನನ್ನ ಹತ್ತಿರ ಬಂದು ನಮಗೆ ರಾಯಚೂರಿನ ಶ್ರೀ ಮಾರುತಿ ರೈಸ್ ಮಿಲ್ ಮತ್ತು ಶ್ರೀ ಎಸ್. ಎಸ್. ಐ ರೈಸ್ ಮಿಲ್ ನವರು ತುಂಬಾ ಪರಿಚಯವಿರುತ್ತಾರೆ. ನಿಮ್ಮ ಭತವನ್ನು ಅಲ್ಲಿ ಮಾರಾಟ ಮಾಡಿಸುತ್ತೇವೆ ಎಂದು ಹೇಳಿ ನಂಬಿಸಿದರು. ಆಗ ನಾನು ಅವರು ಹೇಳಿದಂತೆ ನಮ್ಮ ಗದ್ದೆಗಳಲ್ಲಿ ಬೆಳೆದ ಭತ್ತವನ್ನು ಮೇಲ್ಕಂಡ ಆನಂದರೆಡ್ಡಿ ಮತ್ತು ಸಂಗಡಿಗರ ಮಾತನ್ನು ನಂಬಿ ಸುಮಾರು 205 ಚೀಲ ಭತವನ್ನು ಅವರು ತಂದ ಈ ಕೆಳಕಂಡ ಪಟ್ಟಿಯಲ್ಲಿ ನಮೂದಿಸಿದ ಲಾರಿಗಳಲ್ಲಿ ನನ್ನ ಭತವನ್ನು ಲೋಡ ಮಾಡಿ ರಾಯಚೂರಿನ ಶ್ರೀ ಮಾರುತಿ ರೈಸ ಮಿಲ್ ಗೆ ಹೋಗಿ ಮಾರಾಟ ಮಾಡಿದೆನು. ಸದರಿ ರೈಸ ಮಿಲ್ಲಿನವರು ಸದರಿ ಭತ್ತ ಖರೀದಿ ಮಾಡಿದ ದುಡ್ಡನ್ನು ನಂತರ ಕೊಡುತ್ತೇವೆ ಎಂದು ನನಗೆ ಹೇಳಿದರು. ಕೆಲ ದಿನಗಳು ಬಿಟ್ಟು ನಾನು ಪುನಃ ಶ್ರೀ ಮಾರುತಿ ರೈಸ್ ಮಿಲ್ಲಿಗೆ ಹೋಗಿ ನನ್ನ ಭತ್ತ ಖರೀದಿ ಮಾಡಿದ ದುಡ್ಡು 2,30,000/- ಕೊಡಿ ಎಂದು ಕೇಳಲು ಹೊದರೆ ಅವರು ನಿಮ್ಮ ಭತ್ತದ ಹಣವನ್ನು ಆನಂದರೆಡ್ಡಿ ಮತ್ತು ಸಂಗಡಿಗರಿಗೆ ಕೊಟ್ಟಿರುತ್ತೇವೆ ಎಂದು ಹೇಳಿದರು. ಸದರಿ ಆನಂದರೆಡ್ಡಿ ಮತ್ತು ಸಂಗಡಿಗರು ನನ್ನಂತೆಯೇ ವಡಗೇರಾ ತಾಲ್ಲೂಕಿನ ಈ ಕೆಳಕಂಡ ಪಟ್ಟಿಯಲ್ಲಿ ನಮೂದಿಸಿದ ಸುಮಾರು ಜನ ರೈತರಿಗೆ ಕೂಡಾ ಅವರವರು ಭತ್ತ ಒಣಗಿಸಿದ ಸ್ಥಳಗಳ ಹತ್ತಿರ ಹೋಗಿ ಮೇಲ್ಕಂಡ ಶ್ರೀ ಮಾರುತಿ ರೈಸ್ ಮಿಲ್ ಮತ್ತು ಶ್ರೀ ಎಸ್. ಎಸ್. ಐ ರೈಸ್ ಮಿಲ್ ಈ ಎರಡು ರೈಸ್ ಮಿಲ್ಲಗಳಲ್ಲಿ ಭತ್ತ ಮಾರಾಟ ಮಾಡಿ ಎಂದು ಹೇಳಿ ನಂಬಿಸಿ, ಭತ್ತವನ್ನು ರೈತರಿಂದ ಎರಡು ರೈಸ್ ಮಿಲಗಳಿಗೆ ಮಾರಾಟ ಮಾಡಿಸಿದ್ದು ಇರುತ್ತದೆ. ಸದರಿ ಭತ್ತ ಮಾರಾಟವಾದ ನಂತರ ನಾವು ರೈತರು ಮೇಲ್ಕಂಡ ಎರಡು ರೈಸ್ ಮಿಲ್ಲಗಳಿಗೆ ಹಣ ಕೇಳಲು ಹೊದರೆ ನಿಮ್ಮ ಭತ್ತದ ದುಡ್ಡನ್ನು ಆನಂದರೆಡ್ಡಿ ಮತ್ತು ಸಂಗಡಿಗರಿಗೆ ಕೊಟ್ಟಿರುತ್ತೇವೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಆದ್ದರಿಂದ 1) ಆನಂದರೆಡ್ಡಿ ತಂದೆ ಆಂಜನೇಯ ದಾಸಗಾರರು, 2) ಕೆ. ಎ ವಿಕ್ರಮರೆಡ್ಡಿ, 3) ನರೇಶ ರೆಡ್ಡಿ, 4) ಶ್ರೀ ಮಾರುತಿ ರೈಸ್ ಮಿಲ್ ರಾಯಚೂರು ಮಾಲಿಕ ಮತ್ತು 5) ಎಸ್. ಎಸ್. ಐ ರೈಸ್ ಮಿಲ್ ರಾಯಚೂರು ಮಾಲಿಕ ಇವರೆಲ್ಲರೂ ಸೇರಿ ಈ ಕೆಳಕಂಡ ಪಟ್ಟಿಯಲ್ಲಿ ನಮೂದಿಸಿದ ನಮ್ಮೆಲ್ಲ ರೈತರಿಂದ ಭತವನ್ನು ಖರೀದಿ ಮಾಡಿ, ನಮಗೆ ಭತ್ತ ಖರೀದಿ ಮಾಡಿದ ಹಣ ಸುಮಾರು 76,02,310/-(ಎಪ್ಪತ್ತಾರು ಲಕ್ಷ ಎರಡು ಸಾವಿರದ ಮೂರುನೂರು ಹತ್ತು ರೂಪಾಯಿ) ಹಣವನ್ನು ಕೊಡದೆ ಮೋಸ ಮಾಡಿರುತ್ತಾರೆ. ಆದ್ದರಿಂದ ಈ ಮೇಲ್ಕಂಡ ಆನಂದರೆಡ್ಡಿ ಮತ್ತು ಸಂಗಡಿಗರು ಹಾಗೂ ಮಾರುತಿ ಮತ್ತು ಎಸ್. ಎಸ್. ಐ ರೈಸ ಮಿಲ್ ಗಳ ಮಾಲಿಕರು ಸೇರಿ ನಮ್ಮಿಂದ ಭತ್ತ ಖರೀದಿ ಮಾಡಿ ಮೋಸ ಮಾಡಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನಮಗೆ ನ್ಯಾಯದೊರಕಿಸಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರು ಅಜರ್ಿ ನಿಜವಿರುತ್ತದೆ.

ಇತ್ತೀಚಿನ ನವೀಕರಣ​ : 18-08-2021 12:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080