ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-09-2022


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 40/2022 ಕಲಂ 279, 304(ಎ) ಐಪಿಸಿ : ಇಂದು ದಿನಾಂಕ 17/09/2022 ರಂದು ಸಮಯ 12 ಪಿ.ಎಂ.ಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಯಾದಗಿರಿ ಆರ್ಯಭಟ್ಟ ಇಂಟರ್ ನ್ಯಾಷನಲ್ ಶಾಲೆ ಮುಂದಿನ ಮುಖ್ಯ ರಸ್ತೆ ಮೇಲೆ ಈ ಕೇಸಿನ ಪಿಯರ್ಾದಿಯ ಮಗನಾದ ಮೃತ ಶ್ರೀಸಾಯಿ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-1106 ನೇದ್ದನ್ನು ವಾಡಿ ರಸ್ತೆ ಕಡೆಯಿಂದ ಯಾದಗಿರಿಗೆ ಬರುವಾಗ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಿದ್ದಾಗ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಮಾಡಿಕೊಂಡು ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಗಂಭೀರ ಸ್ವರೂಪದ ( ಸೊಂಟಕ್ಕೆ, ಬಲಗಾಲಿನ ತೊಡೆಗೆ, ಗುಪ್ತಾಂಗಕ್ಕೆ) ಆಗಿದ್ದ ಗಾಯಗಳ ಚಿಕಿತ್ಸೆಗಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಸಮಯ 12-30 ಪಿ.ಎಂ.ಕ್ಕೆ ಅಪಘಾತದಲ್ಲಾದ ಭಾರೀ ರಕ್ತಗಾಯ ಮತ್ತು ಗುಪ್ತಗಾಯಗಳ ಬಾಧೆಯಿಂದ ಮೃತಪಟ್ಟ ಬಗ್ಗೆ ತಿಳಿಸಿದ್ದು, ಆತನ ಮೇಲೆ ಮುಂದಿನ ಕ್ರಮ ಜರುಗಿಸುವಂತೆ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 40/2022 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 144/2022 ಕಲಂ: 379 ಐ.ಪಿ.ಸಿ : ಇಂದು ದಿನಾಂಕ 17/09/2022 ರಂದು 10.30 ಎಎಂ ಕ್ಕೆ ಅಜರ್ಿದಾರರಾದ ನರಸಪ್ಪ ತಂದೆ ಭೀಮಪ್ಪ ಗುಡ್ಲಾ ವ|| 28ವರ್ಷ ಉ|| ಆರ್.ಸಿ.ಪಿ.ಜಿ ಸೆಕ್ಯೂರಿಟಿ ಸುಪರವೈಸರ್ ಸಾ|| ಮಾದ್ವಾರ ತಾ|| ಗುರುಮಿಠಕಲ್ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಾನು ಸುಮಾರು 2ವರ್ಷದಿಂದ ಸೆಕ್ಯೂರಿಟಿ ಸುಪರವೈಸರ್ ಅಂತ ಕೆಲಸ ಮಾಡುತ್ತಿದ್ದೇನೆ. ದಿನಾಂಕ 13/09/2022 ರಂದು ಬೆಳಿಗ್ಗೆ 10.00 ಗಂಟೆಗೆ ನಮ್ಮ ಇಂಡಸ್ ಟವರನ ಟೆಕನಿಷನ್ ಸೂಗಪ್ಪ ತಂದೆ ಗುರುನಾಥ ಸಾ|| ಖಾನಾಪೂರ(ಎಸ್.ಕೆ) ಮೊ.ನಂ 7760983358 ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಮಾಲಗತ್ತಿ ಹೊರವಲಯದಲ್ಲಿರುವ ಇಂಡಸ್ ಟವರ್ ಐಡಿ ನಂ 1281322 ಮತ್ತು ಸೈಟ ಐಡಿ ನಂ ಒಉಖಿಗಖ1 ನೇದ್ದರ ರ್ಯಾಕ್ ಬೀಗ ಮುರಿದು ಯಾರೋ ಕಳ್ಳರು ರ್ಯಾಕನಲ್ಲಿ ಇಟ್ಟಿದ್ದ 24 ಬ್ಯಾಟರಿ ಬ್ಯಾಂಕ ಶೆಲಗಳನ್ನು ನಟಬೋಲ್ಟ ನಿಂದ ಬಿಚ್ಚಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದರು. ನಾನು ಈ ವಿಷಯವನ್ನು ನಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ತಿಳಿಸಿ ಯಾದಗಿರಿಯಿಂದ ಸೈಟಗೆ ಹೊರಟೆನು. ನಾನು ದಿನಾಂಕ 13/09/2022 ರಂದು 3.30 ಪಿಎಂ ಕ್ಕೆ ಸೈಟಗೆ ಭೇಟಿ ಕೊಟ್ಟು ಪರಿಶೀಲಿಸಿ ನೋಡಲಾಗಿ ಯಾರೋ ಕಳ್ಳರು ನಮ್ಮ ಸೈಟಗೆ ಹಾಕಿದ ತಂತಿ ಬೇಲಿಯಿಂದ ಒಳಗೆ ಬಂದು ರ್ಯಾಕಗೆ ಹಾಕಿದ ಬೀಗ ಮುರಿದು ಅದರಲ್ಲಿ ಅಳವಡಿಸಿದ 24 ಬ್ಯಾಟರಿ ಶೆಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು 24 ಬ್ಯಾಟರಿ ಬ್ಯಾಂಕ ಶೆಲಗಳ ಅಂದಾಜು ಕಿಮ್ಮತ್ತು 80000/-(ಎಂಬತ್ತು ಸಾವಿರ) ರೂಪಾಯಿಗಳಷ್ಟು ಬೆಲೆ ಬಾಳುತ್ತವೆ. ಅವುಗಳನ್ನು ನಮ್ಮ ಸೈಟ ಟೆಕ್ನೀಶಿಯನ್ ಗುರುತಿಸುತ್ತಾರೆ. ಈ ಘಟನೆಯು ದಿನಾಂಕ 12/09/2022 ರ ರಾತ್ರಿ 10.00 ಗಂಟೆಯಿಂದ ದಿನಾಂಕ 13/09/2022 ರ 6.00 ಎಎಂ ದ ಅವಧಿಯಲ್ಲಿ ಜರುಗಿರಬಹುದು. ಕಾರಣ ದಯಮಾಡಿ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಕಳುವಾದ 24 ಬ್ಯಾಟರಿ ಬ್ಯಾಂಕ್ ಶೆಲಗಳನ್ನು ಪತ್ತೆ ಹಚ್ಚಿಕೊಡಬೇಕಾಗಿ ಮಾನ್ಯರವರಲ್ಲಿ ವಿನಂತಿಸಿಕೊಳ್ಳುತ್ತೇನೆ. ನಾನು ನಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ ಅಂತಾ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 144/2022 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 145/2022 ಕಲಂ: 87 ಕೆಪಿ ಯಾಕ್ಟ : ಇಂದು ದಿನಾಂಕ 17/09/2022 ರಂದು 8.15 ಪಿ.ಎಮ್ ಕ್ಕೆ ಶ್ರೀ ಸುನೀಲ್ ಮೂಲಿಮನಿ ಪಿ.ಐ ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದಿಂದ ಪಡೆದ ಅನುಮತಿ ಪತ್ರ, ಒಂದು ಜಪ್ತಿ ಪಂಚನಾಮೆ, ಮುದ್ದೆಮಾಲು, 12 ಜನ ವ್ಯಕ್ತಿಗಳ ಸಮೇತ ಒಂದು ಜ್ಞಾಪನ ಪತ್ರ ನೀಡಿ ಮುಂದಿನ ಕ್ರಮ ಜರುಗಿಸಂತೆ ಸೂಚಿಸಿದ್ದು ಸದರಿ ಜ್ಞಾಪನ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶವೇನೆಂದರೆ, ನಾನು ಸುನೀಲ್ ಮೂಲಿಮನಿ ಪಿ.ಐ ಸುರಪೂರ ಪೊಲೀಸ್ ಠಾಣೆ ಇದ್ದು, ಇಂದು ದಿನಾಂಕ 17/09/2022 ರಂದು 3.00 ಪಿಎಂ ಕ್ಕೆ ಸುರಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ನಿ ಸೀಮಾಂತರದ ಕೆಬಿಜೆಎನ್.ಎಲ್ ಕಾಲುವೆಯ ಪಕ್ಕದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಆಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದಿದ್ದು, ಸದರಿ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಮಾನ್ಯ ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಸುರಪೂರ ರವರಿಂದ ಅನುಮತಿ ಪಡೆದುಕೊಂಡು ಮಾನ್ಯ ಡಿ.ಎಸ್.ಪಿ.ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಗೋಗಿ ಪೊಲೀಸ್ ಠಾಣೆಯ ಅಯ್ಯಪ್ಪ ಪಿ.ಎಸ್.ಐ(ಕಾ.ಸು), ಶಹಾಪೂರ ಠಾಣೆಯ ವೆಂಕಟೇಶ ಹೆಚ್.ಸಿ 70, ಮಂಜುನಾಥ ಪಿಸಿ 73, ಸುರಪೂರ ಠಾಣೆಯ ಸಿಬ್ಬಂದಿ ಜನರಾದ ಸಣ್ಣಕ್ಕೆಪ್ಪ ಹೆಚ್.ಸಿ 27, ಬಸವರಾಜ ಪಿಸಿ 180, ಶಿವಶರಣಪ್ಪ ಪಿಸಿ 188, ಮಲ್ಲಯ್ಯ ಪಿಸಿ 51, ಸಣ್ಣಕುಂಟೆಪ್ಪ ಪಿಸಿ 391, ಅಮರೇಶ ಪಿಸಿ 14, ಕುಮಾರ ಪಿಸಿ 129, ಗೋಗಿ ಠಾಣೆಯ ಸಿಬ್ಬಂದಿ ಜನರಾದ ದೇವಿಂದ್ರ ಹೆಚ್.ಸಿ 86, ಹಣಮಂತ ಪಿಸಿ 331, ನಿಂಗಪ್ಪ ಪಿಸಿ 259, ಪ್ರದೀಪಕುಮಾರ ಪಿಸಿ 81 ರವರೊಂದಿಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಸಾ|| ಕೆಂಭಾವಿ ಹಾಗೂ 2) ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಸಾ|| ಕೆಂಭಾವಿ ಇವರನ್ನು ಕರೆದುಕೊಂಡು ಎರಡು ಖಾಸಗಿ ಜೀಪಗಳಲ್ಲಿ ಸುರಪೂರ ಠಾಣೆಯಿಂದ 5.00 ಪಿಎಂ ಕ್ಕೆ ಹೊರಟು ಅಗ್ನಿ ಸೀಮಾಂತರದ ಕೆ.ಬಿ.ಜೆ.ಎನ್.ಎಲ್ ಮುಖ್ಯ ಕಾಲುವೆಯ ರಸ್ತೆಯ ಮೇಲೆ ಅಗ್ನಿ-ಸದಬ ಗ್ರಾಮದ ಮಧ್ಯದಲ್ಲಿ 6.15 ಪಿಎಂ ಕ್ಕೆ ಹೋಗಿ ಅಲ್ಲಿ ಮರೆಯಾಗಿ ನಿಂತು ನೋಡಲಾಗಿ 10-12 ಜನರು ದುಂಡಾಗಿ ಕುಳಿತು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಒಬ್ಬರು ಅಂದರ್ 100 ರೂಪಾಯಿ ಇನ್ನೊಬ್ಬ ಬಾಹರ್ 100 ರೂಪಾಯಿ ಅನ್ನುತ್ತಾ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು 6.30 ಪಿಎಂ ಕ್ಕೆ ನಾನು ಮತ್ತು ಸಿಬ್ಬಂದಿ ಜನರು ಸುತ್ತುವರೆದು ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 12 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಗೊಲ್ಲಾಳಪ್ಪ ತಂದೆ ಮಡಿವಾಳಪ್ಪ ಹಿರೇಕುರುಬರ ವ|| 28 ಜಾ|| ಕುರುಬರ ಉ|| ಕೂಲಿ ಸಾ|| ಅಲ್ಲಾಪೂರ ತಾ|| ಜೇವಗರ್ಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 2200/- ರೂ ಸಿಕ್ಕಿದ್ದು, 2) ರಾಘವೇಂದ್ರ ತಂದೆ ಗಂಗಪ್ಪ ದ್ಯಾಮನಾಳ ವ|| 36 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಇಸಾಂಪೂರ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 3200/- ರೂ ಸಿಕ್ಕಿದ್ದು, 3) ಹಣಮಂತ ತಂದೆ ಬಸಣ್ಣ ದೊರಿ ವ|| 30 ಜಾ|| ಬೇಡರ ಉ|| ಕೂಲಿ ಸಾ|| ಸಿದ್ದಾಪೂರ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 1500/- ರೂ ಸಿಕ್ಕಿದ್ದು, 4) ಯಮನಪ್ಪ ತಂದೆ ಜೆಟ್ಟೆಪ್ಪ ನಡುವಿನಮನಿ ವ|| 35 ಜಾ|| ಮಾದರ ಉ|| ಕೂಲಿ ಸಾ|| ಗುಂಡಲಗೇರಾ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 1200/- ರೂ ಸಿಕ್ಕಿದ್ದು, 5) ಬೀರಪ್ಪ ತಂದೆ ಪರಮಪ್ಪ ಹೂಗಾರ ವ|| 31 ಜಾ|| ಕುರುಬರ ಉ|| ಒಕ್ಕಲುತನ ಸಾ|| ಯಡಿಯಾಪೂರ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 3600/- ರೂ ಸಿಕ್ಕಿದ್ದು, 6) ಗುರಣ್ಣ ತಂದೆ ಸಿದ್ದಣ್ಣ ಹದನೂರ ವ|| 45 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಇಸಾಂಪೂರ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 2100/- ರೂ ಸಿಕ್ಕಿದ್ದು, 7) ಶಂಕರಗೌಡ ತಂದೆ ಸಂಗಣ್ಣಗೌಡ ಪಾಟೀಲ್ ವ|| 24 ಜಾ|| ಲಿಂಗಾಯತ ಉ|| ಚಾಲಕ ಸಾ|| ಅಲ್ಲಾಪೂರ ತಾ|| ಜೇವಗರ್ಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 2000/- ರೂ ಸಿಕ್ಕಿದ್ದು, 8) ಮಲ್ಲಪ್ಪ ತಂದೆ ಭೀಮರಾಯ ಜಾಲಿಬೆಂಚಿ ವ|| 37 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಇಸಾಂಪೂರ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 2400/- ರೂ ಸಿಕ್ಕಿದ್ದು, 9) ಮಲ್ಲಪ್ಪ ತಂದೆ ಸಿದ್ದಪ್ಪ ಬಡಿಗೇರ ವ|| 25 ಜಾ|| ಕುರುಬರ ಉ|| ಒಕ್ಕಲುತನ ಸಾ|| ತೆಗ್ಗೆಳ್ಳಿ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 4200/- ರೂ ಸಿಕ್ಕಿದ್ದು, 10) ದತ್ತಾತ್ರೇಯ ತಂದೆ ಲಿಂಗೋಜಿ ವ|| 55 ಜಾ|| ಬ್ರಾಹ್ಮಣ ಉ|| ಒಕ್ಕಲುತನ ಸಾ|| ತೆಗ್ಗೆಳ್ಳಿ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 1100/- ರೂ ಸಿಕ್ಕಿದ್ದು, 11) ಅಂಬರೇಶ ತಂದೆ ದೇವಿಂದ್ರಪ್ಪ ತೆಗ್ಗೆಳ್ಳಿ ವ|| 22 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ತೆಗ್ಗೆಳ್ಳಿ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 2000/- ರೂ ಸಿಕ್ಕಿದ್ದು, 12) ಸಿದ್ದಾರ್ಥ ತಂದೆ ಬಸವರಾಜ ಕಟ್ಟಿಮನಿ ವ|| 36 ಜಾ|| ಹೊಲೆಯ ಉ|| ಕೂಲಿ ಸಾ|| ಆಲಾಳ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿ ಹತ್ತಿರ 1500/- ರೂ ಸಿಕ್ಕಿದ್ದು, ಮತ್ತು ಎಲ್ಲರ ಮಧ್ಯದ ಕಣದಲ್ಲಿ 2500/- ರೂಪಾಯಿ ಹೀಗೆ ಒಟ್ಟು ನಗದು ಹಣ 27500/- ರೂಪಾಯಿ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಸದರಿ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರ ಹತ್ತಿರ ಸಿಕ್ಕ ಮುದ್ದೆಮಾಲನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ಠಾಣೆಗೆ ಬಂದಿದ್ದು, ಸದರಿ ಜ್ಞಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದಿಂದ ಪಡೆದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಟ್ಟು ನೀಡಿದ್ದು ಮುಂದಿನ ಕ್ರಮ ಜರುಗಿಸಲು ಜರುಗಿಸಬೇಕೆಂದು ಕೊಟ್ಟ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 145/2022 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 34/2022 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ: 17/09/2022 ರಂದು 2:00 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ, ತಾವು ಠಾಣೆಯಲ್ಲಿ ಇದ್ದಾಗ 12:15 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಟಗಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 34/2022 ಕಲಂ: 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 4:10 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 1560/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. ರುದ್ರಗೌಡ ತಂದೆ ಸಿದ್ದರಾಮಪ್ಪ ಬಾದೋಡಗಿ ವಯ: 48 ವರ್ಷ, ಜಾ:ಹಿಂದೂ ಲಿಂಗಾಯತ, ಉ:ಡ್ರೈವರ್, ಸಾ:ಬೂದಿಹಾಳ ತಾ:ಹುಣಸಗಿ, ಜಿ:ಯಾದಗಿರಿ

 

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 69/2022 324, 504, 506 ಸಂ 34 ಐಪಿಸಿ (ಕೋರ್ಟ ರೆಫರ್ಡ ಕೇಸ್) : ಇಂದು ದಿನಾಂಕ: 17/09/2022 ರಂದು 07.30 ಪಿ.ಎಮ್ ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರಾದ ಶ್ರೀ ನಾಗಪ್ಪ ಪಿಸಿ 167 ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರ ಖಾಸಗಿ ದಾವೆ ನಂ:78/2022 ನೇದ್ದನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸದರಿ ಖಾಸಗಿ ದಾವೆಯ ಸಾರಾಂಶವೇನೆಂದರೆ, ಫಿಯರ್ಾದಿದಾರರಾದ ಅಬ್ದುಲ್ ಖಯ್ಯೂಮ್ ತಂದೆ ರಸೀದಸಾಬ ಸಾಹು, ವ:65ವರ್ಷ, ಉ:ಒಕ್ಕಲುತನ, ಸಾ:ಗೋಗಿ(ಪಿ) ಇವರು ಗೋಗಿಪೇಠ ಗ್ರಾಮದ ಮನೆ ನಂ:7/68 ನೇದ್ದರ ಮಾಲೀಕ ಹಾಗು ಕಬ್ಜಾದಾರರಾಗಿರುತ್ತಾರೆ. ಆದರೆ ಆರೋಪಿ ಮಕ್ಸೂದ ಅಹ್ಮದ ತಂದೆ ಚಂದಾಸಾಬ ಹವಾಲ್ದಾರ ಇವರು ಮನೆಯ ವಿಷಯದಲ್ಲಿ ಅನಾವಶ್ಯಕವಾಗಿ ಜಗಳ ತೆಗೆದು ತೊಂದರೆ ಕೊಡುತ್ತ ಬಂದಿದ್ದು ಅದಕ್ಕಾಗಿ ಸಣ್ಣಪುಟ್ಟ ಬಾಯಿ ಮಾತಿನ ಜಗಳ ನಡೆಯುತ್ತ ಬಂದಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ 11/06/20222 ರಂದು ಬೆಳಿಗ್ಗೆ 11.30 ಗಂಟೆಗೆ ಗ್ರಾಮದ ಅಂಚೆ ಕಛೇರಿಯ ಹತ್ತಿರ ಮರೆಪ್ಪ ರಸ್ತಾಪೂರ ಹಾಗು ರಿಯಾಜ್ ಖುರೇಶಿ ಇವರ ಜೊತೆ ಮಾತನಾಡುತ್ತ ನಿಂತಾಗ ಅಲ್ಲಿಗೆ ಆರೋಪಿತರು ಇವರು ಅಕ್ರಮ ಕೂಟ ಕಟ್ಟಿಕೊಂಡು ಬಂದವರೇ ಲೇ ಭೋಸಡಿ ಮಗನೆ ಖಯ್ಯೂಮ್ ಸೂಳೀ ಮಗನೆ, ಯಾರಿಗೆ ಹುಟ್ಟಿರುವೆ ಲಫಂಗ್ ಸೂಳಿ ಮಗನೆ ಎಂದು ಅವಾಚ್ಯವಾಗಿ ಬೈದು, ಇದು ನನ್ನ ಮನೆ, ನೀನು ಯಾರು ಕೇಳುವವನು ಎಂದು ಆರೋಪಿ-3 ಈತನು ನನ್ನ ಎರಡೂ ಕೈಗಳನ್ನು ಹಿಂದೆ ಮಾಡಿ ಹಿಡಿದುಕೊಂಡನು. ಆಗ ಆರೋಪಿ ನಂ 01 ಕೈ ಮುಷ್ಠಿ ಮಾಡಿ ಬಾಯಿಗೆ ಹೊಡೆದ. ಆರೋಪಿ ನಂ-2 ಬೆನ್ನಿಗೆ ಗುದ್ದಿದ. ಆಗ ಆರೋಪಿ4 ಬಲಗಾಲಿನಿಂದೊದ್ದು ನೆಲಕ್ಕೆ ಖೆಡವಿದನು. ನಾನು ಚೀರಾಡುತ್ತಿದ್ದಾಗ ಸಾಕ್ಷಿದಾರರು ಜಗಳ ಬಿಡಿಸಿದರು. ಆರೋಪಿತರು ನೋಡು ಇವರು ಜಗಳ ಬಿಡಿಸ್ಯಾರ ಅಂತ ಜೀವ ಉಳಿದಾದ, ಇಲ್ಲಾ ಅಂದರೆ ಪೆಟ್ರೋಲ್ ಹಾಕಿ ಸುಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು. ಕಾರಣ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಖಾಸಗಿ ದಾವೆಯ ಸಾರಾಂಶದ ಮೇಲಿಂದ ಗೋಗಿ ಠಾಣೆಯ ಗುನ್ನೆ ನಂ: 69/2022 ಕಲಂ: 324, 504, 506 ಸಂ 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 72/2022 ಕಲಂ 143, 147, 323, 354, 504, 506 ಸಂಗಡ 34 ಐಪಿಸಿ : ಮುಡಬೂಳ ಸೀಮಾಂತರದಲ್ಲಿ ಫಿಯರ್ಾದಿಯ ಹೊಲವಿದ್ದು ಪಕ್ಕದಲ್ಲಿಆರೋಪಿತರ ಹೊಲವಿದ್ದುಇಬ್ಬರ ನಡುವೆ ಆಸ್ತಿ ಪಾಲಿನ ವಿಷಯದಲ್ಲಿ ಹಳೆಯ ವೈಷಮ್ಯಇರುತ್ತದೆ. ಆರೋಪಿತರುತಮ್ಮ ಹೊಲದಲ್ಲಿನಕಸವನ್ನುಕಿತ್ತು ಫಿಯರ್ಾದಿ ಹೊಲದಲ್ಲಿ ಹಾಕಿದ್ದರಿಂದ ಬಾಯಿ ಮಾತಿನತಕರಾರುಆಗಿರುತ್ತದೆ. ನಿನ್ನೆ ದಿನಾಂಕ:16/09/2022 ರಂದು ಮುಂಜಾನೆ 09.30 ಗಂಟೆ ಸುಮಾರಿಗೆ ಫಿಯರ್ಾದಿ ತನ್ನ ಭಾವನ ಮನೆಗೆ ಹೋದಾಗಆರೋಪಿರೆಲ್ಲರೂಕೂಡಿ ಬಂದು ಭೋಸಡಿ ಮಕ್ಕಳೇ ನಿಮ್ಮದು ಬಹಳವಾಗಿದೆ, ಯಾವಾಗ ನೋಡಿದರೂ ನಮ್ಮೊಂದಿಗೆತಕರಾರು ಮಾಡುತ್ತೀರಿ, ಅಲ್ಲದೇ ನಿನ್ನೆ ಸಾಯಂಕಾಲ ಹೊಲದಲ್ಲಿ ನಮ್ಮೊಂದಿಗೆತಕರಾರು ಮಾಡೀರಿರಂಡಿ ಮಕ್ಕಳೇ ಅಂತಾಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗಯಾಕೆ ಬೈಯ್ಯುತ್ತಿರುವಿ ಅಂತಾ ಕೇಳಿದಾಗ ಆರೋಪಿತರುಫಿಯರ್ಾದಿಯ ಸೀರೆ ಸೆರಗು ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ಫಿಯರ್ಾದಿಯ ಭಾವ ಮತ್ತು ಭಾವನ ಮಗನಿಗೆ ಆರೋಪಿತರು ಹೊಡೆಬಡೆ ಮಾಡಿಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

ಇತ್ತೀಚಿನ ನವೀಕರಣ​ : 18-09-2022 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080