ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-10-2022


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 153/2022 ಕಲಂ 279, 337 ಐಪಿಸಿ ಮತ್ತು 177 ಐ.ಎಮ್.ವಿ ಆಕ್ಟ್: ದಿನಾಂಕ 14.10.2022 ರಂದು ಸಂಜೆ 7:30 ಗಂಟೆಯ ಸುಮಾರಿಗೆ ಆರೋಪಿತನಾದ ಮಂಜೂನಾಥನು ತನ್ನ ಮೋಟಾರು ಸೈಕಲ್ ನಂಬರ ಕೆಎ-33-ಇ.ಎ-0807 ನೇದ್ದರ ಮೇಲೆ ತನ್ನ ಮಾವನಾದ ಮಲ್ಲಪ್ಪನಿಗೆ, ತನ್ನ ತಾಯಿಯಾದ ಯಂಕಮ್ಮಳಿಗೆ ಕೂಡಿಸಿಕೊಂಡು ಕೊಡ್ಲಾ ದಿಂದ ಹೊನಗೇರಾ ಗ್ರಾಮಕ್ಕೆ ಬರುತ್ತಿದ್ದಾಗ ಭೀಮನಳ್ಳಿ ಗೇಟ್-ಬಾಚವಾರ ಗೇಟ್ಗಳ ನಡುವೆ ರೋಡಿನ ಮೇಲೆ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ಸ್ಕೀಡಾಗಿ ಬಿದ್ದಿದ್ದು ಅದರಲ್ಲಿ ಗಾಯಾಳುದಾರರಿಗೆ ಭಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದು ಆ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ ಠಾಣೆ ಗುನ್ನೆ ನಂಬರ 153/2022 ಕಲಂ 279, 337 ಐಪಿಸಿ ಮತ್ತು 177 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 112/2022 ಕಲಂ 78() ಕೆ.ಪಿ ಎಕ್ಟ್ 1963 : ಇಂದು ದಿನಾಂಕ; 17/10/2022 ರಂದು 5-25 ಪಿಎಮ್ ಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಬ್ಬ ಆರೋಪಿ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಂದು ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 17/10/2022 ರಂದು 03-15 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಗಂಗಾನಗರ ಕ್ರಾಸಿನಲ್ಲಿರುವ ಹನುಮಾನ ಗುಡಿಯ ಹತ್ತಿರ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಮಡಿವಾಳಪ್ಪ ಪಿಸಿ-105, ವಿನೋದ ಪಿಸಿ-88 ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಸ್ಥಳಕ್ಕೆ ಹೋಗಿ 04-10 ಎಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆರೋಪಿತನು ತನ್ನ ಹೆಸರು ತಿಮ್ಮಣ್ಣ ತಂದೆ ಗೋಯಪ್ಪ ಕರಿತಿಮ್ಮಣ್ಣನವರ ವ:23 ಜಾತಿ:ದೊರೆ(ಬೇಡರ) ಉ:ಖಾಸಗಿ ಕೆಲಸ ಸಾ: ಗಂಗಾನಗರ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) ನಗದು ಹಣ 710/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 17/10/2022 ರಂದು 04-10 ಪಿಎಂ ದಿಂದ 05-10 ಪಿಎಂ ದವರೆಗೆ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 05-25 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾದಿಕಾರಿರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ.ಅಂತಾ ಸಲ್ಲಿಸಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 112/2022 ಕಲಂ 78() ಕೆಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತೇನೆ.


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 45/2022 ಕಲಂ 279, 338 ಐ.ಪಿ.ಸಿ: 17/10/2022 ರಂದು ಸಾಯಂಕಾಲ 5-15 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಬೀಮರಾಯ ತಂದೆ ಅಯ್ಯಪ್ಪ ಜಂಗಳಿ ವಯ;42 ವರ್ಷ, ಉ;ಸಮಾಜ ಸೇವೆ, ಜಾ;ಕುರಬರ, ಸಾ;ಹಳ್ಳಿಪೇಠ, ಶಹಾಪುರ, ಹಾ;ವ;ಲಕ್ಕಿ ನಗರ ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ದಿನಾಂಕ 03/10/2022 ರಂದು 9-30 ಎ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಗಣಕೀಕರಣ ಮಾಡಿದ ಫಿಯರ್ಾದಿ ದೂರನ್ನು ಹಾಜರುಪಡಿಸಿದ್ದು, ಪಿಯರ್ಾದಿ ಅಜರ್ಿ ಹೇಳಿಕೆಯ ಸಾರಾಂಶವೇನೆಂದರೆ ನಾನು ಈ ಮೂಲಕ ದೂರು ಅಜರ್ಿ ಸಲ್ಲಿಸುವುದೇನೆಂದರೆ ದಿನಾಂಕ 03/10/2022 ರಂದು ಬೆಳಿಗ್ಗೆ 9-30 ಎ.ಎಂ.ದ ಸುಮಾರಿಗೆ ನಾನು ನನ್ನ ಮೋಟಾರು ಸೈಕಲ್ ನಂ.ಕೆಎ-02, ಇ.ಎಲ್-5461 ನೇದ್ದರ ಮೇಲೆ ಯಾದಗಿರಿ ನಗರದ ಡಿಗ್ರಿ ಕಾಲೇಜ್ ಕಡೆಯಿಂದ ಚಿತ್ತಾಪುರ ರಸ್ತೆಗೆ ಇರುವ ಹೊಂಡಾ ಶೋರೂಂ ಕಡೆಗೆ ಹೊರಟಿದ್ದಾಗ ಮಾರ್ಗ ಮದ್ಯೆ ಆರ್.ಟಿ.ಓ ಕಾಯರ್ಾಲಯದ ಹತ್ತಿರದ ಮಹೇಂದ್ರ ಶೋ ರೂಂ ಹತ್ತಿರ ನನ್ನ ಎದುರಿಗೆ ಬರುತ್ತಿದ್ದ ಒಬ್ಬ ಆಟೋ ಚಾಲಕನು ವಾಡಿ ರಸ್ತೆ ಕಡೆಯಿಂದ ಯಾದಗಿರಿ ನಗರದ ಕಡೆಗೆ ಬರುತ್ತಿದ್ದಾಗ ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತಾನು ಹೋಗುತ್ತಿದ್ದ ರಸ್ತೆ ಮಾರ್ಗವನ್ನು ಬಿಟು,್ಟ ಒಮ್ಮೊಲೆ ಬಲಕ್ಕೆ ಕಟ್ ಹೊಡೆಯುತ್ತಾ ನಾನು ಹೋಗುತ್ತಿದ್ದ ರಸ್ತೆಗೆ ಮಾರ್ಗದ ಕಡೆಗೆ ಬಂದು ನನ್ನ ಮೋಟಾರು ಸೈಕಲ್ ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ಸದರಿ ಅಪಘಾತದ ರಭಸಕ್ಕೆ ನಾನು ಮೋಟಾರು ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದಾಗ ಸದರಿ ಅಪಘಾತದಲ್ಲಿ ನನ್ನ ಬಲಗಾಲಿನ ಮೊಣಕಾಲಿಗೆ, ಮೊಣಕಾಲು ಕೆಳಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿ ಕಾಲು ಮುರಿದಿರುತ್ತದೆ. ತಲೆಗೆ ರಕ್ತಗಾಯವಾಗಿದ್ದು ಇರುತ್ತದೆ. ಘಟನೆಯ ಕಾಲಕ್ಕೆ ನನಗೆ ಅಪಘಾತ ಪಡಿಸಿದ ಆಟೋ ನಂಬರ ನಾನು ಸ್ಪಷ್ಟವಾಗಿ ನೋಡಿರಲಿಲ್ಲ, ಈ ಅಪಘಾತವನ್ನು ಕಂಡು ಇದೇ ರಸ್ತೆ ಮಾರ್ಗವಾಗಿ ಹೊರಟಿದ್ದ ಯಾದಗಿರಿಯ ಶ್ರೀ ಮಾಣಿಕಪ್ರಭು ತಂದೆ ತಿಪ್ಪಣ್ಣ ಹಿರೇನೂರ ಸಾ;ಯಾದಗಿರಿ ಹಾಗು ಶ್ರೀ ಖಂಡಪ್ಪ ತಂದೆ ದೇವಿಂದ್ರಪ್ಪ ಚಾಮನೋರ ಸಾ;ಯಾದಗಿರಿ ಇವರುಗಳು ಬಂದು ನನಗೆ ವಿಚಾರಿಸಿರುತ್ತಾರೆ. ನಂತರ ನನಗೆ ಒಂದು ಖಾಸಗಿ ಆಟೋದಲ್ಲಿ ಯಾದಗಿರಿಯ ಖಾಸಗಿ ಆಸ್ಪತ್ರೆಯಾದ ನೀಲಕಂಠ ಸೈದಾಪುರ ಇವರಲ್ಲಿ ಪ್ರಥಮ ಚಿಕಿತ್ಸೆ ಗಾಗಿ ಕರೆದುಕೊಂಡು ಬಂದಿರುತ್ತಾರೆ. ನೀಲಕಂಠ ಸೈದಾಫುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಇದು ರಸ್ತೆ ಅಪಘಾತದ ಕೇಸು ಆಗಿದ್ದರಿಂದ ನೀವು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗಿ ಅಂತಾ ತಿಳಿಸಿದಾಗ ನಾವುಗಳು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಎಮ್.ಎಲ್.ಸಿ ಮಾಡಿರುತ್ತೇವೆ. ನನಗೆ ಅಪಘಾತದ ಪಡಿಸಿದ ಆಟೋ ನಂಬರನ್ನು ಮಾಣಿಕಪ್ರಭು ಇವರಿಗೆ ನಾನು ಮತ್ತೆ ವಿಚಾರಿಸಿದಾಗ ಆಗ ಅವರು ನಿನಗೆ ಅಪಘಾತ ಪಡಿಸಿದ ಆಟೋ ನಂಬರ ಕೆಎ-33, ಬಿ-2622 ನೇದ್ದು ಮತ್ತು ಆತನ ಹೆಸರು ವಿಳಾಸ, ವಿಚಾರಿಸಿದ್ದು ತನ್ನ ಹೆಸರು ಮಲ್ಲಿಕಾಜರ್ುನ ತಂದೆ ಶಿವಪ್ಪ ಸಾ;ಹೆಡಗಿ ಮದ್ರಿ ಇರುತ್ತದೆ ಅಂತಾ ತಿಳಿಸಿರುತ್ತಾರೆ. ವೈದ್ಯರು ಕೂಡಲೇ ಬೇರೆ ಆಸ್ಪತ್ರೆಗೆ ರೆಫರ್ ಮಾಡಿದ್ದರಿಂದ ನನಗೆ ಅಪಘಾತದಲ್ಲಿ ಉಂಟಾದ ಗಾಯಗಳ ಗಾಯದ ಬಾಧೆಯಿಂದ ತಡೆಯಲಾಗದೇ ಅವಸರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಮಿರಜ್ ಆಸ್ಪತ್ರೆಗೆ ಹೋಗಿ ಸೇರಿಕೆ ಆಗಿರುತ್ತೇನೆ. ಹೀಗಿದ್ದು ನಾನು ಅಪಘಾತದ ನಂತರ ಅಂದಿನಿಂದ ಇಲ್ಲಿಯವರೆಗೆ ಮಿರಜ್ ಆಸ್ಪತ್ರೆಯಲ್ಲಿ ಉಪಚಾರ ಹೊಂದಿ ಗುಣಮುಖನಾಗಿ ಮರಳಿ ಬಂದಿದ್ದು, ಈ ಘಟನೆ ಬಗ್ಗೆ ನಮ್ಮ ಮನೆಯ ಹಿರಿಯರು ಕೇಸು ಮಾಡು ಅಂತಾ ನನಗೆ ತಿಳಿಸಿದ್ದರಿಂದ ಇಂದು ದಿನಾಂಕ 17/10/2022 ರಂದು ತಡವಾಗಿ ಠಾಣೆಗೆ ಬಂದ್ದಿದ್ದು, ದಿನಾಂಕ 03/10/2022 ರಂದು ಬೆಳಿಗ್ಗೆ 9-30 ಎ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದಲ್ಲಿ ನನ್ನ ಮೋಟಾರು ಸೈಕಲ್ ನಂ.ಕೆಎ-02, ಇ.ಎಲ್-5461 ನೇದ್ದಕ್ಕೆ ಆಟೋ ನಂಬರ ಕೆಎ-33, ಬಿ-2622 ನೇದ್ದರ ಚಾಲಕ ಮಲ್ಲಿಕಾಜರ್ುನ ಈತನು ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಆತನ ಮೇಲೆ ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸಿರಿ ಅಂತಾ ಈ ಮೂಲಕ ದೂರು ಸಲ್ಲಿಸಿರುತ್ತೇನೆ ಅಂತಾ ವಿನಂತಿ ಅಂತಾ ಕೊಟ್ಟ ಪಿಯರ್ಾದಿ ಅಜರ್ಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 45/2022 ಕಲಂ: 279, 338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಗೋಗಿ ಪೊಲೀಸ ಠಾಣೆ:-
ಗುನ್ನೆ ನಂ: ಕಲಂ 324, 504, 506 ಸ 149 ಐಪಿಸಿ (ಕೋರ್ಟ ರೆಫರ್ಡ ಕೇಸ್): ಇಂದು ದಿನಾಂಕ: 17/10/2022 ರಂದು ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರಾದ ಶ್ರೀ ನಾಗಪ್ಪ ಪಿಸಿ 167 ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರ ಖಾಸಗಿ ದಾವೆ ನಂ:97/2022 ನೇದ್ದನ್ನು ಮುಂದಿನ ಕ್ರಮಕ್ಕಾಗಿ 07.30 ಪಿ.ಎಮ್ ಕ್ಕೆ ಹಾಜರಪಡಿಸಿದ್ದು, ಸದರಿ ಖಾಸಗಿ ದಾವೆಯ ಸಾರಾಂಶವೇನೆಂದರೆ, ದಿನಾಂಕ: 30-05-2022 ರಂದು ರಾತ್ರಿ 10 ಗಂಟೆಯ ಸಮಯಕ್ಕೆ ನಾನು ಗ್ರಾಮದ ದಗರ್ಾದ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲೆ ಆರೋಪಿಗಳಾದ 1 ರಿಂದ 9 ಅವರು ರಸ್ತೆಯ ಮೇಲೆ ನಿಂತು ಮಾತಾನಾಡುತ್ತಾ ನಿಂತಿದ್ದರು. ಆಗ ಫಿಯರ್ಾರದಿದಾರನನ್ನು ನೋಡಿದ ಆರೋಪಿ ನಂ.09 ಅವರು ಲೇ ಬೋಸಡಿ ಮಗನೆ ಮಹಿಬೂಬ ಎಷ್ಟು ಸೊಕ್ಕು ನಿನ್ನದು. ಇಷ್ಟು ಮಂದಿ ನಿಂತಿದ್ದು ಕಾಣಿಸುವುದಿಲ್ಲವೇ ಎಂಬ ಅವಾಚ್ಯ ಶಬ್ದಗಳಿಂದ ನಿಂದಿಸಿದನು. ಆಗ ಆರೋಪಿ ನಂ.1 ಅವರು ಮುಂದೆ ನಿಂತು ನನ್ನ ಕೈ ಹಿಡಿದುಕೊಂಡ, ಆಗ ಆರೋಪಿ ನಂ.2&3 ಅವರು ನನ್ನ ಎದೆಯ ಅಂಗಿ ಹಿಡಿದುಕೊಂಡು ನಿಂತರು. ಆಗ ಆರೋಪಿ ನಂ.4&5 ಅವರು ಹಿಂದಿನಿಂದ ಬಂದು ಬೆನ್ನಿಗೆ ಕೈಯಿಂದ ಹೊಡೆದರು. ಆಗ ಆರೋಪಿ ನಂ6&7 ಅವರು ಎದೆಗೆ ಹಾಗೂ ಮುಖಕ್ಕೆ ಕೈಯಿಂದ ಗುದ್ದಿದರು. ಆಗ ಆರೋಪಿ ನಂ.8&9 ಅವರು ಇವನಿಗೆ ಹೀಗೆ ಬಿಡಬ್ಯಾಡರಿ ಅಂತ ನೆಲಕ್ಕೆ ಕೆಡವಿ ಒದ್ದರು. ಆಗ ಆರೋಪಿ ನಂ.1 ಅವರು ಚೂಪಾದ ಕಲ್ಲಿನಿಂದ ನನ್ನ ಎದೆಯ ಬಲಬಾಗಕ್ಕೆ ಹೊಡೆದು ಗಾಯಗೊಳಿಸಿದ. ಆಗ ನಾನು ಚೀರಾಡಲು ಆರಂಭಿಸಿದೆ ಆಗ ಅಲ್ಲೆ ರಸ್ತೆಯ ಮೇಲೆ ತೆರಳುತ್ತಿದ್ದ ಸಾಕ್ಷಿದಾರರಾದ ಮಹಿಬೂಬು ತಂದೆ ಮೂತರ್ುಜ ಹಾಗೂ ಮಹಿಬೂಬ ತಂದೆ ಬಾರಿಸಾಬ್ ಇಬ್ಬರು ಸೇರಿ ನಮ್ಮ ಜಗಳ ಬಿಡಿಸಿ ಎಲ್ಲರೂ ಕೊಡಿ ಹೊಡೆಯ ಬಾರದು. ಎಲ್ಲರು ಒಂದೇ ಬಡಾವಣೆಯಲ್ಲಿ ಇದ್ದೇವೆ ಹಿಗೆಲ್ಲಾ ಮಾಡಬಾರದು ಎಂದು ಬುದ್ದಿವಾದ ಹೇಳಿದರು. 6.ಆಗ ಆರೋಪಿಗಳಾದ 1 ರಿಂದ 9 ಅವರು ಕೂಡಿ ಲೇ, ಬೋಸಡಿಕ್ಯಾ ಇವರು ಬಂದು ಜಗಳ ಬಿಡಿಸ್ಯಾರ ಅಂತ ನಿನ್ನ ಜೀವ ಉಳಿದಾದ ಇಲ್ಲಾ ಅಂದರೆ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತಿದ್ದೆವು ಎಂದು ಜೀವ ಬೆದರಿಕೆ ಹಾಕಿ ಎಲ್ಲರು ತೆರಳಿದರು. ಕಾರಣ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಖಾಸಗಿ ದಾವೆಯ ಸಾರಾಂಶದ ಮೇಲಿಂದ ಗೋಗಿ ಠಾಣೆಯ ಗುನ್ನೆ ನಂ: 75/2022 ಕಲಂ: 324, 504, 506 ಸಂ 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ ಠಾಣೆ:-
ಗುನ್ನೆ ನಂ: ಇಂದು ದಿನಾಂಕ: ಕಲಂ: 120(ಬಿ), 406, 420, 384 ಐಪಿಸಿ (ಕೋರ್ಟ ರೆಫರ್ಡ ಕೇಸ್):17/10/2022 ರಂದು ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರಾದ ಶ್ರೀ ನಾಗಪ್ಪ ಪಿಸಿ 167 ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರ ಖಾಸಗಿ ದಾವೆ ನಂ:116/2022 ನೇದ್ದನ್ನು ಮುಂದಿನ ಕ್ರಮಕ್ಕಾಗಿ 08.45 ಪಿ.ಎಮ್ ಕ್ಕೆ ಹಾಜರಪಡಿಸಿದ್ದು, ಸದರಿ ಖಾಸಗಿ ದಾವೆಯ ಸಾರಾಂಶವೇನೆಂದರೆ, ನನಗೆ ದಿನಾಂಕ: 21/05/2021 ರಂದು ಆರೋಪಿ ನಂ 01 ರವರೊಂದಿಗೆ ಆರೋಪಿತರೆಲ್ಲರೂ ಕೂಡಿ ಮದುವೆ ಮಾಡಿದ್ದು, ಆರೋಪಿ ನಂ: 01 ನೇದ್ದವರಗೆ ಯಾವುದೆ ಉಪಚಾರಕ್ಕೂ ಕಡಿಮೆಯಾಗದಂತಹ ಚರ್ಮರೋಗ ಇರುವ ಬಗ್ಗೆ ನನಗೆ ಯಾವದೇ ಮಾಹಿತಿ ನೀಡದೆ, ಮೋಸ ಮಾಡಿ ನನ್ನ ಜೋತೆಗೆ ಮದುವೆ ಮಾಡುವ ಉದ್ದೇಶದಿಂದ ಒಳಸಂಚು ಮಾಡಿ, ಆರೋಪಿತರೆಲ್ಲರೂ ಕೂಡಿ ಆರೋಪಿ ನಂ:01 ರವರ ಜೋತೆಗೆ ಮದುವೆ ಮಾಡಿಸಿದ್ದು, ನಂತರ ಆರೋಪಿ ನಂ: 01 ರವರಿಗೆ ಆಸ್ಪತ್ರೆಗೆ ತೋರಿಸಿದ್ದು ಅವರಿಗೆ ಇದ್ದ ಚರ್ಮ ರೋಗದ ಬಗ್ಗೆ ಉಪಚಾರ ಇರುವದಿಲ್ಲ ಅಂತಾ ತಿಳಿದು ಬಂದಿರುವರಿಂದ ನನ್ನ ಮತ್ತು ನನ್ನ ಕುಟುಂಬದ ಮಾನ ಹಾನಿ ಮಾಡುವ ಉದ್ದೇಶದಿಂದ ಆರೋಪಿತರೆಲ್ಲರೂ ಕೂಡಿ ನನ್ನ ಮೇಲೆ ಮತ್ತು ನನ್ನ ಕುಟುಂಬದವರ ಮೇಲೆ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿರುತ್ತಾರೆ. ಕಾರಣ ಆರೋಪಿತರೆಲ್ಲರೂ ಕೂಡಿ ಒಳಸಂಚು ಮಾಡಿ ನನಗೆ ಮೋಸ ಮಾಡಿ ಆರೋಪಿ ನಂ-01 ರವರೊಂದಿಗೆ ಮದುವೆ ಮಾಡಿಸಿದ ಎಲ್ಲರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಖಾಸಗಿ ಪಿಯರ್ಾದಿ ಸಾರಂಶದಮೇಲಿಂದ ಗೋಗಿ ಠಾಣೆಯ ಗುನ್ನೆ ನಂ: 76/2022 ಕಲಂ: 120(ಬಿ), 406, 420, 384 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 176/2022 ಕಲಂ 323, 324, 307, 504, ಸಂಗಡ 34 ಐ.ಪಿ.ಸಿ: ಇಂದು ದಿನಾಂಕ 17/10/2022 ರಂದು ರಾತ್ರಿ 21-00 ಗಂಟೆಗೆ ಫಿಯರ್ಾದಿ ಶ್ರೀ ಸಿದ್ದಣ್ಣ ತಂದೆ ಚಂದಪ್ಪ ಚಾಮನೂರ ಸಾಃ ಬಾಪುಗೌಡ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 13/10/2022 ರಂದು ನನ್ನ ವೈಯಕ್ತಿಕ ಕೆಲಸದ ಸಂಬಂಧ ಬೆಂಗಳೂರಿಗೆ ಹೋಗಿ, ದಿನಾಂಕ 16/10/2022 ರಂದು ಮರಳಿ ಊರಿಗೆ ಬರುತಿದ್ದಾಗ, ರಾತ್ರಿ 9-45 ಗಂಟೆಯ ಸುಮಾರಿಗೆ ನನ್ನ ಮಗ ಶರಣಪ್ಪ ತಂದೆ ಸಿದ್ದಣ್ಣ ಚಾಮನೂರ, ವಯಸ್ಸು 27 ವರ್ಷ ಈತನು ಫೋನ್ ಮಾಡಿ ಅಪ್ಪಾ ಎಲ್ಲಿದ್ದಿಯಾ ಇನ್ನೂ ಯಾವಾಗ ಊರಿಗೆ ಬರುತ್ತಿಯಾ ಅಂತಾ ಕೇಳಿದ್ದು, ಆಗ ನಾನು ಟ್ರೈನ್ನಲ್ಲಿ ಕುಳಿತುಕೊಂಡಿದ್ದೇನೆ ಬೆಳಿಗ್ಗೆ ಊರಿಗೆ ಬರುತ್ತೇನೆ, ನೀನು ಏಲ್ಲಿದ್ದಿಯಾ ಅಮ್ಮನಿಗೆ ಫೋನ್ ಕೊಡು ಅಂತಾ ಹೇಳಿದಾಗ, ಇಲ್ಲಾ ನಾನು ಹೊರಗಡೆ ಇದ್ದೇನೆ ಸತ್ಕಾರ ಧಾಬಾಗೆ ಇದಿಗ ತಾನೆ ಊಟಕ್ಕೆ ಬಂದಿರುತ್ತೇನೆ ಅಂತಾ ಹೇಳಿದನು. ಆಯ್ತು ಊಟ ಮಾಡಿ ಬೇಗ ಮನೆಗೆ ಹೋಗು ಅಂತಾ ಹೇಳಿದೆನು.
ರಾತ್ರಿ 10-45 ಗಂಟೆಯ ಸುಮಾರಿಗೆ ನನ್ನ ಅಳಿಯ ಅಂದರೆ ಮಗಳ ಗಂಡನಾದ ಹೊನ್ನಪ್ಪ ತಂದೆ ಸಿದ್ದಪ್ಪ ಅಂಬಿಗೇರ ಈತನು ಫೋನ್ ಮಾಡಿ, ಮಾಮಾ ಎಲ್ಲಿದ್ದಿರಾ, ಶರಣಪ್ಪನ ಫೋನ್ ಸ್ವಿಚ್ ಆಫ್ ಬರುತ್ತಿದೆ ನಿಮಗೇನಾದರು ಫೋನ್ ಮಾಡಿದ್ದನೇನು ಅಂತಾ ಕೇಳಿದ್ದು, ಆಗ ನಾನು ಅಂದಾಜು ಅರ್ಧ ಗಂಟೆಯ ಹಿಂದೆ ಫೋನ್ ಮಾಡಿದ್ದನು ಆತನು ಸತ್ಕಾರ ಧಾಬಾಗೆ ಊಟಕ್ಕೆ ಬಂದಿದ್ದೇನೆ ಅಂತಾ ಹೇಳಿದ್ದನು ಅಂತಾ ತಿಳಿಸಿದಾಗ, ಇನ್ನೂ ಮನೆಗೆ ಬಂದಿರುವುದಿಲ್ಲ ಅಂತಾ ಹೇಳಿದ, ರಾತ್ರಿಯಾಗಿದೆ ನಿನೇ ಸತ್ಕಾರ ಧಾಬಾಕ್ಕೆ ಹೋಗಿ ಶರಣಪ್ಪನಿಗೆ ಕರೆದುಕೊಂಡು ಬಾ ಅಂತಾ ತಿಳಿಸಿದ ಮೇರೆಗೆ, ನನ್ನ ಅಳಿಯ ಹೊನ್ನಪ್ಪನು ಆಯ್ತು ಹೋಗುತ್ತೇನೆ ಅಂತಾ ಹೇಳಿ ಸ್ವಲ್ಪ ಸಮಯದ ನಂತರ ರಾತ್ರಿ 11-00 ಗಂಟೆಗೆ ನನ್ನ ಅಳಿಯ ಹೊನ್ನಪ್ಪನು ಪುನಃ ಫೋನ್ ಮಾಡಿ ಮಾಮಾ ಸತ್ಕಾರ ಧಾಬಾಗೆ ಬಂದಾಗ ಶರಣಪ್ಪನ ಜೊತೆ ಸತ್ಕಾರ ಧಾಬಾದ ಮಾಲೀಕ ಮತ್ತು ಅವನ ಮಗ ಹಾಗೂ ಇನ್ನೂ ಇಬ್ಬರೂ ಕೂಡಿ ಬಿಲ್ ಸಂಬಂಧ ತಕರಾರು ಮಾಡಿ ಆತನಿಗೆ ಮನ ಬಂದಂತೆ ಹೊಡೆಯುತಿದ್ದರು.
ಆಗ ನಾನು, ನನ್ನ ಹೆಂಡತಿ ಮತ್ತು ಅತ್ತೆ ಮೂರು ಜನರು ಹೋಗಿ ಜಗಳ ಬಿಡಿಸಿಕೊಂಡು ಶರಣಪ್ಪನಿಗೆ ವಿಚಾರಿಸಿದಾಗ ಆತನು ಹೇಳಿದ್ದೇನೆಂದರೆ, ನಾನು ಸತ್ಕಾರ ಧಾಬಾಗೆ ಊಟಕ್ಕೆ ಬಂದಿದ್ದು, ಊಟ ಮಾಡಿದ ಬಿಲ್ 1000-00 ರೂಪಾಯಿ ಆಗಿತ್ತು. ಅದಕ್ಕೆ ನಾನು ಫೋನ್ ಫೇ ಮಾಡುವಾಗ ನನ್ನ ಫೋನ್ ಸ್ವಿಚ್ ಆಫ್ ಆಯಿತು. ಅದಕ್ಕೆ ನಾನು ಧಾಬಾದ ಮಾಲೀಕರಿಗೆ ಫೋನ್ ಸ್ವೀಚ್ ಆಫ್ ಆಗಿದೆ ನಾನು ಮನೆಗೆ ಹೋಗಿ ಹಣ ತಂದು ಕೊಡುತ್ತೇನೆ ಅಂತಾ ಹೇಳಿದಕ್ಕೆ ಧಾಬಾದ ಮಾಲೀಕ 1) ಸಿದ್ದಾರೂಢ ತಂದೆ ಬಸಲಿಂಗಪ್ಪ ಜಗದಿ, ಮತ್ತು ಅವನ ಮಗ 2) ಮಂಜುನಾಥ ತಂದೆ ಸಿದ್ದಾರೂಢ ಜಗದಿ, ಇಬ್ಬರೂ ಕೂಡಿ ಅಲ್ಲಿಯವರೆಗೆ ನಿನ್ನ ತಾಯಿ ಮತ್ತು ಹೆಂಡತಿಯನ್ನು ಇಲ್ಲಿ ತಂದು ಕೂಡಿಸಿ ಹೋಗು ಬೋಳಿ ಮಗನೆ ಹಣ ಇಲ್ಲದಿದ್ದರೆ ಧಾಬಾಗೆ ಏಕೆ ಸೆಂಟಾ ಹರಿಯುವುದಕ್ಕೆ ಊಟಕ್ಕೆ ಬಂದಿದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಿದ್ದಕೆ ಈ ರೀತಿ ಮಾತಾಡುವುದು ಸರಿಯಲ್ಲ ನಾನು ಮನೆಗೆ ಹೋಗಿ ಹಣ ತಂದು ಕೊಡುತ್ತೇನೆ ಅಂತಾ ಹೇಳಿದರೂ ಸಹಿತ ನನ್ನ ಜೊತೆ ತಕರಾರು ಮಾಡಿ ಸತ್ಕಾರ ದಾಭಾದ ಮಾಲೀಕ ಮತ್ತು ಅವನ ಮಗ ಹಾಗೂ ದಾಬಾಗೆ ಊಟಕ್ಕೆ ಬಂದಿದ್ದ 3) ಸಂತೋಷ ತಂದೆ ಮಾದೇವರಡ್ಡಿ ಸಾಃ ಬಸವೇಶ್ವರ ನಗರ ಶಹಾಪೂರ 4) ಲಿಂಗರಾಜ ತಂದೆ ಅಪ್ಪಾರಾವ್ ದೇಸಾಯಿ ಹಳಿಪೇಠ ಶಹಾಪೂರ ಇವರೆಲ್ಲರೂ ಕೊಲೆ ಮಾಡುವ ಉದ್ದೇಶದಿಂದ ನನಗೆ ಕಬ್ಬಿಣದ ರಾಡ್ನಿಂದ ಬೆನ್ನಿಗೆ, ಕುಂಡಿಯ ಚಪ್ಪಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ಎಡಗಣ್ಣಿಗೆ ಕೈಯಿಂದ ಮುಷ್ಠಿ ಮಾಡಿ ಹೊಡೆದರಿಂದ ಭಾರಿ. ಕಂದುಗಟ್ಟ ಗಾಯವಾಗಿರುತ್ತದೆ ಅಂತಾ ಹೇಳಿರುತ್ತಾನೆ ಅಂತಾ ತಿಳಿಸಿದ ಮೇರೆಗೆ, ನಾನು ಆಯ್ತು ಬೆಳಿಗ್ಗೆ ಶಹಾಪೂರಕ್ಕೆ ಬಂದು ವಿಚಾರಿಸುತ್ತೇನೆ ನೀವು ಶರಣಪ್ಪನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗಿರಿ ಅಂತಾ ತಿಳಿಸಿರುತ್ತೇನೆ. ನಾನು ಈ ದಿನ ಶಹಾಪೂರಕ್ಕೆ ಬಂದಾಗ, ನನ್ನ ಮಗ ಶರಣಪ್ಪನು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದ ಬಗ್ಗೆ ತಿಳಿದುಕೊಂಡು, ನಾನು ಅಲ್ಲಿಗೆ ಹೋಗಿ ನನ್ನ ಮಗ ಶರಣಪ್ಪನಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು, ಸದರಿ ಘಟೆನಯು ನಿನ್ನೆ ದಿನ ರಾತ್ರಿ 10-30 ಗಂಟೆಯಿಂದ 11-00 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ. ಈ ಬಗ್ಗೆ ಕುಟುಂಬದವರ ಜೊತೆ ವಿಚಾರಣೆ ಮಾಡಿ, ಇಂದು ತಡವಾಗಿ ಠಾಣೆಗೆ ಹಾಜರಾಗಿ ನನ್ನ ಮಗ ಶರಣಪ್ಪನಿಗೆ ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿದ ಮೇಲ್ಕಂಡ 4 ಜನರ ವಿರುದ್ಧ ಕ್ರಮ ಕೈಗೊಳ್ಳಲು ವಿನಂತಿ.ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 176/2022 ಕಲಂ 323, 324, 307, 504 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: ಗುನ್ನೆ ನಂ 155/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 17/10/2022 ರಂದು 8.15 ಪಿಎಂ ಕ್ಕೆ ಶ್ರೀ ಹಣಮಂತ ಪಿ.ಎಸ್.ಐ(ಕಾ.ಸು) ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಹಣಮಂತ ಪಿ.ಎಸ್.ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ನಾನು ಇಂದು ದಿನಾಂಕ 17/10/2022 ರಂದು 6.20 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಮುನೀರ ಬೊಮ್ಮನಳ್ಳಿ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು, ನಮ್ಮ ಠಾಣೆಯ ಆನಂದ ಪಿಸಿ 43 ಮತ್ತು ಮಾಳಪ್ಪ ಪಿಸಿ 29 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 6.30 ಪಿಎಂ ಕ್ಕೆ ಹೊರಟು ಮುನೀರ ಬೊಮ್ಮನಳ್ಳಿ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದ ಹತ್ತಿರ 6.45 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 6.50 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ಸಂತೋಷ ತಂದೆ ನರಸಪ್ಪ ಪೂಜಾರಿ ವ|| 30 ಜಾ|| ಕುರುಬರ ಉ|| ಕೂಲಿ ಸಾ|| ಮುನೀರ ಬೊಮ್ಮನಳ್ಳಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ ಒಂದು ಬಾಲ್ ಪೆನ್ನು ಮತ್ತು ನಗದು ಹಣ 1150/- ರೂಪಾಯಿ ಸಿಕ್ಕಿದ್ದು ಸದರಿ ವ್ಯಕ್ತಿಗೆ ಸಾರ್ವಜನಿಕರಿಂದ ದೈವಲೀಲೆಯ ಮಟಕಾ ನಂಬರ ಬರೆಯಿಸಲು ಪಡೆದ ಹಣ ಮತ್ತು ಮಟಕಾ ನಂಬರ ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಿದಾಗ ಮುದನೂರ ಗ್ರಾಮದ ಮಕ್ಬೂಲ್ಸಾಬ ತಂದೆ ಅಬ್ದುಲಸಾಬ ಅಗತೀರ್ಥ ಸಾ|| ಮುದನೂರ ಇವರಿಗೆ ಕೊಡುತ್ತಿದ್ದೇನೆ ಅಂತಾ ತಿಳಿಸಿದ್ದರಿಂದ ಸದರಿ ಮಕ್ಬೂಲ್ಸಾಬ ತಂದೆ ಅಬ್ದುಲಸಾಬ ಅಗತೀರ್ಥ ಸಾ|| ಮುದನೂರ ಈತನಿಗೆ ಹುಡುಕಾಡಲಾಗಿ ಮುದನೂರಿನಲ್ಲಿ ಇರದೇ ಪರಾರಿಯಾಗಿರುತ್ತಾನೆ ಅಂತಾ ಮಾಹಿತಿ ಬಂದಿದ್ದು ದಾಳಿಯಲ್ಲಿ ಸಿಕ್ಕಿರುವ ಸಂತೋಷ ತಂದೆ ನರಸಪ್ಪ ಪೂಜಾರಿ ಈತನಿಗೆ ವಶಕ್ಕೆ ಪಡೆದು ಅವನ ಹತ್ತಿರ ಸಿಕ್ಕ ಮಟಕಾ ನಂಬರ ಬರೆದ ಚೀಟಿ, ಪೆನ್ನು ಮತ್ತು ನಗದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 6.50 ಪಿಎಂ ದಿಂದ 7.50 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 155/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 18-10-2022 10:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080