Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-11-2021

ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 155/2021 ಕಲಂ:457,380. ಐ.ಪಿ.ಸಿ. : ಇಂದು ದಿನಾಂಕ 17/11/2021 ರಂದು ಬೆಳಗ್ಗೆ 11:00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಭೀಮಶಂಕರ ತಂದೆ ಅಜರ್ುನಪ್ಪ ಹೋರಕೇರಿ ಪ್ರಾಂಶುಪಾಲ ಸರಕಾರಿ ಐ.ಟಿ.ಐ ಕಾಲೇಜು ಯಾದಗಿರ ಅಜರ್ಿ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಚಾಮನಳ್ಳಿ ಗ್ರಾಮದ ಸಿಮಾಂತರದಲ್ಲಿನ ಸರಕಾರಿ ಐ.ಟಿ.ಐ ಕಾಲೇಜು ಯಾದಗಿರಿಯಲ್ಲಿ ಪ್ರಾಂಶುಪಾಲ ಅಂತ ಸುಮಾರು ಐದು ತಿಂಗಳಿನಿಂದ ಸೇವೆ ಸಲ್ಲಿಸುತ್ತಿರುತ್ತೇನೆ. ಹೀಗಿರುವಾಗ ದಿನಾಂಕ:21/10/2021 ರಂದು 09:30ಎ.ಎಮ್. ಕ್ಕೆ ಎಂದಿನಂತೆ ಕಾಲೇಜಿಗೆ ಬಂದು ನನ್ನ ಕಾರ್ಯಲಯದ ಸರಕಾರಿ ಕೆಲಸಗಳನ್ನು ಮುಗಿಸಿಕೊಂಡು ಸಾಯಂಕಾಲ 05:00 ಪಿ.ಎಮ್. ಕ್ಕೆ ಕಾಲೇಜಿನ ಎಲ್ಲಾ ಕೋಣೆಗಳ ಬಾಗಿಲುಗಳನ್ನು ಬೀಗ ಹಾಕಿಕೊಂಡು ಹೊಗಿರುತ್ತೆನೆ ಮತ್ತೆ ನಾನು ಎಂದಿನಂತೆ ಮರುದಿನ ದಿನಾಂಕ:-22/10/2021 ರಂದು ಮುಂಜಾನೆ 9:30 ಗಂಟೆಗೆ ಕಾಲೇಜಿಗೆ ಬಂದು ಆಫೀಸಿನ ಬೀಗ ತೆಗೆಯಲು ಹೋದಾಗ ಬೀಗ ಮುರಿದು ಬಿದ್ದಿರಿವದು ಕಂಡು ಬಂದಿತು ಆಗ ನಾನು ಗಾಬರಿಗೊಂಡು ನಮ್ಮ ಸಹ ಸಿಬ್ಬಂದಿಯವರಾದ ಅಣ್ಣರಾವ್ ಜೆ.ಟಿ.ಒ ಮತ್ತು ವಿಜಯೆಂದ್ರ ಕುಮಾರ ಜೆ.ಟಿ.ಒ ರವರನ್ನು ಕರೆದುಕೊಂಡು ಒಳಗಡೆ ನೋಡಲಾಗಿ ಎಲ್ಲಾ ಕಛೆರಿಯ ಕಡತಗಳು ಚೆಲ್ಲಾಪಿಲ್ಲಿಯಾಗಿದ್ದವು ಮತ್ತು ಉಗ್ರಾಣದ ಕಡೆ ನೋಡಲಾಗಿ ಎರಡು ಉಗ್ರಾಣದ ಬೀಗ ಮುರಿದು ಬಿದ್ದಿದ್ದವು ಆಗ ನಾವು ಒಳಗಡೆ ನೋಡಲಾಗಿ ಉಗ್ರಾಣದಲ್ಲಿ ಇಟ್ಟಿದ್ದ ಸಾಮಾನುಗಳಾದ 01) 2 ಲೇಖಕ ಎಲ್ಕಟ್ರಿಷನ ಸೆಕ್ಟರ್ ಟೂಲ ಕಿಟ್ ಅ.ಕಿ/8550/-ರೂ 02) 2 ಫಿಲ್ಟರ್ ಟೂಲ್ ಕಿಟ್ ಅ.ಕಿ.1650/-ರೂ 03)5 ಬ್ರಾಸ್ ಸೆವನ್ ನವತಾಲ ಕೀಲಿಗಳು ಅ.ಕಿ. 11500/-ರೂ 04) 8 ಸಿಲಿಂಗ ಫ್ಯಾನ್ ಅ.ಕಿ.1600/- 05) ಮೈಕ್ರೋಮೀಟರ್ 0.25 ಎಮ್.ಎಮ್. ಔಟ್ ಸೈಡ್ ಅ.ಕಿ.800/-ರೂ 06) ಡಿಜಟೆಲ್ ಮೈಕ್ರೋಮೀಟರ್ 0.25 ಎಮ್.ಎಮ್. ಔಟ್ ಸೈಡ್ ಅ.ಕಿ.8500/-ರೂ 07) ಮೈಕ್ರೋಮೀಟರ್ 50-75 ಎಮ್.ಎಮ್. ಔಟ್ ಸೈಡ್ ಅ.ಕಿ 11500/-ರೂ 08) ಟ್ಯಾಪ್ ಮತ್ತು ಡೈಸ್ ಕಂಪ್ಲಿಟ್ ಸೆಟ್ ಇನ್ ಬಾಕ್ಸ್ 3-18 ಎಮ್.ಎಮ್ 10 ಪಿಸ್ ಅ.ಕಿ.8500/-ರೂ ಹೀಗೆ ಒಟ್ಟು ಅಂದಾಜು 52,600/-ರೂಪಾಯಿಗಳ ಮೌಲ್ಯದ ಸಾಮಾನುಗಳು ದಿನಾಂಕ:- 21/10/2021 ರ ಸಾಯಂಕಾಲ 5:00 ಪಿ.ಎಮ್ ದಿಂದ 22/10/2021ರ ಬೆಳಿಗ್ಗೆ 09:30ರ ಅವಧಿಯಲ್ಲಿ ಕಳ್ಳತನವಾಗಿರುತ್ತವೆ ಆದ್ದರಿಂದ ಕಳ್ಳತನವಾದ ಈ ಮೇಲ್ಕಾಣಿಸಿದ ಸಾಮಾನುಗಳನ್ನು ನಮಗೆ ಹುಡುಕಿ ಕೊಟ್ಟು ಕಳ್ಳತನ ಮಾಡಿಕೊಂಡು ಹೋದವರ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದು ಈ ಮೂಲಕ ವಿನಂತಿ ಈ ಬಗ್ಗೆ ನಮ್ಮ ಇಲಾಖೆಯ ಮೇಲಾಧಿಕಾರಿಗಳ ಹತ್ತಿರ ಚರ್ಚ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಅಂತಾ ಒಂದು ಗಣಕ ಯಂತ್ರದಲ್ಲಿ ಟೈಪ್ ಮಾಡಿದ ಅಜರ್ಿ ನೀಡಿದ್ದು ಅದರ ಸಾರಾಂಶದ ಮೇಲೀಂದ ಠಾಣೆ ಗುನ್ನೆ ನಂ.155/2021 ಕಲಂ.457,380 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 137/2021 ಕಲಂ: 379 ಐಪಿಸಿ : ದಿನಾಂಕ:17/11/2021 ರಂದು 7-15 ಪಿಎಮ ಕ್ಕೆ ಶ್ರೀ ಲಿಂಗರಾಜ ತಂದೆ ಕುಪ್ಪೆರಾಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾದಗಿರಿ ಜಿಲ್ಲೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ:17/11/2021 ರಂದು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಸಮಯ ಮದ್ಯಾಹ್ನ ಅಂದಾಜು 1 ಗಂಟೆ ಪಿಎಮ್ ಗೆ ಬಾತ್ಮಿ ಬಂದಿರುವುದೇನಂದರೆ ವಡಗೇರಾ ತಾಲೂಕಿನ ಗೋನಾಲ ಗ್ರಾಮ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿದು ಬಂದ ಕಾರಣ ನಾನು ಮತ್ತು ನನ್ನ ಕಛೇರಿಯ ಭೂ ವಿಜ್ಞಾನಿ ಕಿರಣ ಡಿ.ಆರ್ ಹಾಗೂ ನಮ್ಮ ಕಛೇರಿಯ ವಾಹನ ಚಾಲಕ ಶ್ರೀ ಬಾಬು ಅಲಿ ಬಹಾದ್ದೂರ ಇವರನ್ನು ಕರೆದುಕೊಂಡು ಮದ್ಯಾಹ್ನ 2-30 ಗಂಟೆಗೆ ಯಾದಗಿರಿಯಿಂದ ಬಿಟ್ಟು ಅಂದಾಜು ಸಮಯ 3 ಗಂಟೆ ಪಿಎಮ್ ಗೆ ತಹಸೀಲ್ದಾರ ಕಾರ್ಯಲಯ ವಡಗೇರಾಗೆ ಬಂದೆವು. ನಂತರ ಅಲ್ಲಿ ಶ್ರೀ ಸಂಜೀವ ಕವಲಿ ಕಂದಾಯ ನಿರೀಕ್ಷಕರು ವಡಗೇರಾ ಹೋಬಳಿ ಹಾಗೂ ಶ್ರೀ ಮಲ್ಲಿಕಾಜರ್ುನ ಗ್ರಾಮ ಲೆಕ್ಕಾಧಿಕಾರಿ ಗೋನಾಳ ಗ್ರಾಮ ಇವರೆಲ್ಲರಿಗೂ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿಸಿ, ಶ್ರೀ ಕಿರಣ ಡಿ.ಆರ್ ಭೂ ವಿಜ್ಞಾನಿ ಮತ್ತು ಶ್ರೀ ಸಂಜೀವ ಕವಲಿ ಕಂದಾಯ ನಿರೀಕ್ಷಕರು ಇವರನ್ನು ಪಂಚರನ್ನಾಗಿ ಮಾಡಿಕೊಂಡು ಹಾಗೂ ವಡಗೇರಾ ಪೊಲೀಸ್ ಠಾಣೆಯ ಬೀರಪ್ಪ ಹೆಚ್.ಸಿ 148 ರವರನ್ನು ಹಾಗೂ ಮಲ್ಲಿಕಾಜರ್ುನ ಗ್ರಾಮ ಲೆಕ್ಕಾಧಿಕಾರಿ ಗೋನಾಲ ಎಲ್ಲರೂ ಸೇರಿ ನಮ್ಮ ಕಛೇರಿಯ ವಾಹನ ಸಂ. ಕೆಎ 32 ಜಿ 437 ರಲ್ಲಿ ಎಲ್ಲರೂ ಕುಳಿತುಕೊಂಡು ಮದ್ಯಾಹ್ನ 3-30 ಪಿಎಮ್ ಗೆ ಹೊರಟು ಗೋನಾಲ ಗ್ರಾಮದ ಕೃಷ್ಣಾ ನದಿ ಪಾತ್ರಕ್ಕೆ ಅಂದಾಜು 4-30 ಪಿಎಮ್ ಗೆ ತಲುಪಿದೆವು. ಕೃಷ್ಣಾ ನದಿಯಲ್ಲಿ ಮರಳನ್ನು ತೆಗೆದಿರುವುದನ್ನು ಅಳತೆ ಮಾಡಿ ಅದರನ್ವಯ ಉದ್ದ 58 ಮೀಟರ್ ಅಗಲ 35 ಮೀಟರ್ ಪ್ರದೇಶ ಹಾಗೂ ಆಳ 1 ಮೀಟರ್ ಆಗಿರುತ್ತದೆ. ಸದರಿ ಪ್ರದೇಶದಿಂದ ಒಟ್ಟು 2030 ಘನ ಮೀಟರ್ ಪ್ರಮಾಣದ ಮರಳನ್ನು ಸಾಗಾಣಿಕೆ ಮಾಡಿರುವುದು ಕಂಡು ಬಂದಿರುತ್ತದೆ. ಇದರಿಂದ ಸರಕಾರದ 1,62,400/- ರೂ. ರಾಜಧನ ಮೊತ್ತದ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡಿರುತ್ತಾರೆ. ಸದರಿ ಸ್ಥಳದ ಚೆಕ್ಕ ಬಂದಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ದೃಢಪಡಿಸಿರುತ್ತಾರೆ. ಕಾರಣ ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಗೋನಾಳ ಗ್ರಾಮದ ಕೃಷ್ಣಾ ನದಿಯಿಂದ ಕಳ್ಳತನ ಮಾಡಿ ಸಾಗಾಣಿಕೆ ಮಾಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಲಾಗಿದೆ. ಮಹಜರ ಪಂಚನಾಮೆಯನ್ನು ಈ ಕೂಡಾ ಲಗ್ತ ಇಡಲಾಗಿದೆ. 7-15 ಪಿಎಮ್ ಕ್ಕೆ ಪೊಲೀಸ್ ಠಾಣೆಗೆ ಆಗಮಿಸಿ, ಈ ದೂರು ಸಲ್ಲಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 137/2021 ಕಲಂ:379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 179/2021 ಕಲಂ 505 (2) ಐ.ಪಿ.ಸಿ. : ದಿನಾಂಕ: 17.11.2021 ರಂದು 06.00 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಬಂದು ಲಿಖಿತ ದೂರು ನೀಡಿದ ಸಾರಂಶ ವೇನೆಂದರೆ, ಇಂದು ದಿನಾಂಕ: 17.11.2021 ರಂದು 06.00 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಬಂದು ಲಿಖಿತ ದೂರು ನೀಡಿದ ಸಾರಂಶ ವೇನೆಂದರೆ, ನಾನು ಜಗದೀಶ ತಂದೆ ಲಕ್ಷ್ಮಣ ಹಂದರಕಿ ವಯಾ: 27 ವರ್ಷ ಜಾ: ಕುರುಬ ಉ: ಒಕ್ಕಲುತನ ಮತ್ತು ಕುರುಬ ಸಮಾಜದ ತಾಲೂಕ ಪ್ರಧಾನ ಕಾರ್ಯದಶರ್ಿ ಸಾ: ರಾಂಪೂರ ಗ್ರಾಮ ತಾ: ಗುರುಮಠಕಲ್ ಜಿ: ಯಾದಗಿರ ಇದ್ದು ನನ್ನ ಮೊಬೈಲ ನಂಬರ 8971084037, ಒಇ ಓಠ : 353088113253080, 353088113253098 ಇರುತ್ತದೆ. ನಮ್ಮ ಸಮಾಜದ ಬನ್ನಪ್ಪ ತಂದೆ ಮರೆಪ್ಪ ಪೂಜಾರಿ ವಯಾ: 25 ವರ್ಷ ಜಾ: ಕುರುಬರ ಉ: ಗಾರೆಕೆಲಸ ಸಾ: ಕುರಕುಂದಿ ಗ್ರಾಮ ತಾ: ವಡಗೇರಾ ಜಿ: ಯಾದಗಿರ ಇವರ ಪರಿಚಯ ನನಗೆ ಇರುತ್ತದೆ. ಇಂದು ದಿನಾಂಕ: 17.11.2021 ರಂದು ಬೆಳಿಗ್ಗೆ 11.08 ಗಂಟೆ ಸುಮಾರಿಗೆ ನನಗೆ ಪರಿಚಯಸ್ತರಾದ ನಮ್ಮ ಸಮಾಜದ ಮೇಲ್ಕಂಡ ಬನ್ನಪ್ಪ ತಂದೆ ಮರೆಪ್ಪ ಪೂಜಾರಿ ವಯಾ: 25 ವರ್ಷ ಜಾ: ಕುರುಬರ ಉ: ಗಾರೆಕೆಲಸ ಸಾ: ಕುರಕುಂದಿ ಗ್ರಾಮ ತಾ: ವಡಗೇರಾ ಇವರು ನನ್ನ ಮೊಬೈಲಗೆ ಕ್ರಾಂತಿ ವೀರ ಸಂಗೋಳ್ಳ ರಾಯಣ್ಣ ಮತ್ತು ಭಕ್ತ ಕನಕದಾಸ ರವರಿಗೆ ಸಾಮಾಜೀಕ ಜಾಲತಾಣದಲ್ಲಿ ಅಪಮಾನವಾಗುವ ರೀತಿಯಲ್ಲಿ ಭಾವಚಿತ್ರಗಳನ್ನು ಯಾರೋ ಹಾಕಿರುತ್ತಾರೆ ಅಂತಾ ಹೇಳಿ ಅವನ ಮೊಬೈಲ ನಂಬರ 9108811054 ನೇದ್ದರಿಂದ ನನ್ನ ಮೊಬೈಲಗೆ ವಾಟ್ಸಪ ಮೂಲಕ ಕಳುಹಿಸಿರುತ್ತಾರೆ. ನಾನು ನೋಡಲಾಗಿ 4 ಜನರ ಮತ್ತು ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಭಕ್ತ ಕನಕದಾಸ ಹಾಗೂ ವಾಲ್ಮಿಕಿ ಋಷಿಗಳ ಭಾವಚಿತ್ರಗಳಿದ್ದು ಒಬ್ಬನು ಕೊಡಲಿ ಎತ್ತಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರವರಿಗೆ ಹಲ್ಲೆೆ ಮಾಡುವ ಬಂಗಿಯಲ್ಲಿ ನಿಂತಿದ್ದು, ಇನ್ನೊಬ್ಬನು ಭಕ್ತ ಕನಕದಾಸರ ತಲೆಯಮೇಲೆ ನಿಂತಿದ್ದು, ಇನ್ನೊಬ್ಬನು ವಾಲ್ಮಿಕಿ ಋಷಿಗಳಿಗೆ ಕೈಮುಗಿದು ನಿಂತಿದ್ದು, ಇನ್ನೊಬ್ಬನು ವಾಲ್ಮಿಕಿ ಋಷಿಗಳು ಇರುವ ಭಾವುಟ ಹಿಡಿದು ನಿಂತಿರುವ ಭಾವಚಿತ್ರ ಇರುತ್ತವೆ. ನೋಡಲಾಗಿ ವಾಲ್ಮಿಕಿ ಋಷಿಗಳು ಇರುವ ಭಾವುಟ ಹಿಡಿದು ನಿಂತಿರುವ ಮತ್ತು ಭಕ್ತ ಕನಕದಾಸರ ತಲೆಯಮೇಲೆ ನಿಂತಿರುವ ಭಾವಚಿತ್ರ ಒಬ್ಬನೆಯಾಗಿದ್ದು, ವಾಲ್ಮಿಕ ಮಹಾಋಷಿಗಳಿಗೆ ಕೈಮುಗಿದು ನಿಂತಿರುವ ಮತ್ತು ಕೊಡಲಿ ಎತ್ತಿ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ರವರಿಗೆ ಹಲ್ಲೆಮಾಡುವ ಬಂಗಿ ಮಾಡಿ ನಿಂತಿರುವ ಭಾವಚಿತ್ರ ಒಬ್ಬನೆಯಾಗಿದ್ದು ಇರುತ್ತದೆ. ಸಿದ್ದಪ್ಪ ತಂದೆ ದೇವೀಂದ್ರಪ್ಪ ನಾಯ್ಕೋಡಿ ವಯಾ: ಅಂದಾಜ: 22 ವರ್ಷ ಜಾ: ಬೇಡರ ಸಾ: ಶಿವಪೂರ ಗ್ರಾಮ ತಾ: ಗುರುಮಠಕಲ್ ಇವನು ಸದರಿ ಭಾವಚಿತ್ರಗಳನ್ನು ಮೊಬೈಲ ಮುಖಾಂತರ ಅಪಮಾನವಾಗುವ ರೀತಿಯಲ್ಲಿ ಪ್ರಸಾರ ಮಾಡಿರುವದು ಭಾವಚಿತ್ರಗಳನ್ನು ಪರಶೀಲನೆಯಿಂದ ನನಗೆ ಗೊತ್ತಾಗಿರುತ್ತದೆ. ಸದರಿ ಸಿದ್ದಪ್ಪ ತಂದೆ ದೇವೇಂದ್ರಪ್ಪ ನಾಯ್ಕೋಡಿ ವಯಾ: ಅಂದಾಜು 22 ವರ್ಷ ಜಾ: ಬೇಡರ ಸಾ: ಶಿವಪೂರ ಇವನು ಉದ್ದೇಶಪೂರಕವಾಗಿ ಹಾಲುಮತ ಮತ್ತು ವಾಲ್ಮಿಕಿ(ನಾಯಕ) ಸಮಾಜಗಳ ಜನಾಂಗಗಳ ಮದ್ಯ ಅಪರಾದವನ್ನು ಮಾಡುವಂತೆ ಪ್ರಚೊದಿಸುವ ಉದ್ದೇದಿಂದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಮತ್ತು ಭಕ್ತ ಕನಕದಾಸರ ಭಾವಚಿತ್ರಗಳಿಗೆ ಅಪಮಾನ ಮಾಡಿ ಮೊಬೈಲ ಮುಖಾಂತರ ಪ್ರಸಾರ ಮಾಡರುತ್ತಾನೆ. ಸದರಿಯವನ ವಿರುದ್ದ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ನನ್ನ ಫಿಯರ್ಾದಿ ಇರುತ್ತದೆ. ಸದರಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮತ್ತು ಭಕ್ತಕನಕದಾಸರಿಗೆ ಅಪಮಾನ ಮಾಡಿ ಹಾಕಿರುವ ಭಾವಚಿತ್ರಗಳ ಸಿ.ಡಿ ಮತ್ತು ಭಾವಚಿತ್ರ ಫಿಯರ್ಾದಿಯೊಂದಿಗೆ ಲಗತ್ತಿಸಿ ಸಲ್ಲಿಸಲಾಗಿದೆ ಅಂತಾ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 179/2021 ಕಲಂ 505(2)ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು.

 


ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 177/2021 ಕಲಂ 379 ಐ.ಪಿ.ಸಿ. ಮತ್ತು ಕಲಂ.44(1) ಕೆ.ಎಮ್.ಎಮ್.ಸಿ. ಆರ್.ಆಕ್ಟ : ಇಂದು ದಿನಾಂಕ:17/11/2021 ರಂದು 11:00 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿ ತಪರ್ೆ ಪಿಯರ್ಾದಿ ಶ್ರೀ ಸುನೀಲ್ ಮೂಲಿಮನಿ ಪಿಐ ಸುರಪೂರ ಠಾಣೆ ಸಾಹೇಬರು ಮೂರು ಮರಳು ತುಂಬಿದ ಟಿಪ್ಪರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:17/11/2021 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಮೂರು ಜನರು ತಮ್ಮ ಟಿಪ್ಪರದಲ್ಲಿ ಚೌಡೇಶ್ವರಿಹಾಳ ಸೀಮಾಂತರದ ಕೃಷ್ಣಾ ನದಿಯಲ್ಲಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂಧಿಯವರಾದ ಶ್ರೀ ಮನೋಹರ್ ಹೆಚ್ಸಿ-105, ಶ್ರೀ ಹೊನ್ನಪ್ಪ ಸಿಪಿಸಿ-427, ಶ್ರೀ ಸಿದ್ರಾಮರೆಡ್ಡಿ ಸಿಪಿಸಿ-423, ಜೀಪ್ ಚಾಲಕ ಶ್ರೀ ಮಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಹೊನ್ನಪ್ಪ ಪಿಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಹೊನ್ನಪ್ಪ ಸಿಪಿಸಿ ರವರು ಇಬ್ಬರು ಪಂಚರಾದ 1) ಸಾವಿತ್ರಿ ತಂದೆ ಮಂಜಪ್ಪ ಮಗ್ಗಾ ವ|| 24 ವರ್ಷ ಜಾ|| ಕುರಬರ ಉ|| ಗ್ರಾಮ ಲೇಕ್ಕಾಧಿಕಾರಿ ಸಾ|| ಬೊರನಹಳ್ಳಿ ತಾ|| ಕೊಟ್ಟುರ ಹಾ||ವ|| ಸುರಪುರ 2) ಗುರುಬಸಪ್ಪ ತಂದೆ ಕಾಶಿರಾಯ ಪಾಟೀಲ್ ವ|| 53 ವರ್ಷ ಜಾ|| ಲಿಂಗಾಯತ ಉ|| ಕಂದಾಯ ನಿರೀಕ್ಷಕರು ಸಾ|| ವಿ.ಕೆ.ಜಿ ಬಾರ ಹತ್ತಿರ ಅಫಜಲಪುರ ಹಾ||ವ|| ಸುರಪುರ ಇವರನ್ನು ಬೆಳಿಗ್ಗೆ 7:30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಸಿಬ್ಬಂಧಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-238 ನೇದ್ದರಲ್ಲಿ ಕುಳಿತುಕೊಂಡು 7:45 ಎ.ಎಂ ಸುಮಾರಿಗೆ ಠಾಣೆಯಿಂದ ಹೊರಟು 8:30 ಎ.ಎಂ ಸುಮಾರಿಗೆ ಚೌಡೇಶ್ವರಿಹಾಳ ಸಿಮಾಂತರ ಕೃಷ್ಣಾ ನದಿಯಿಂದ ಮೂರು ಟಿಪ್ಪರನಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದನ್ನು ನೊಡಿ ಮರೆಯಾಗಿ ನಿಂತುಕೊಂಡಾಗ ಕೃಷ್ಣಾ ನದಿ ಡಿಬ್ಬಿ ಏರುತ್ತಿದ್ದಂತೆ ನಮ್ಮ ಜೀಪ್ ನೋಡಿ ಮೂರು ಟಿಪ್ಪರ ಚಾಲಕರು ಮರಳು ಅನ್ಲೋಡ ಮಾಡಿ ಟಿಪ್ಪರ ಸ್ಥಳದಲ್ಲಿಯೇ ಬಿಟ್ಟು ಟಿಪ್ಪರ ಚಾಲಕರು ಓಡಿ ಹೊದರು. ನಂತರ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಹೊಗಿ ನೋಡಲಾಗಿ ಮೂರು ಟಿಪ್ಪರಗಳು ಭಾರತ ಬೆಂಜ್ ಟಿಪ್ಪರ ಇದ್ದು, ಮೂರು ಟಿಪ್ಪರಗಳಿಗೆ ನಂಬರ ಇರುವುದಿಲ್ಲ. ಒಂದೊಂದು ಟಿಪ್ಪರನಲ್ಲಿ ಅನ್ಲೌಡ ಮಾಡಿದ ಮರಳು ಅಂದಾಜು 12 ಘನ ಮೀಟರ್ ಮರಳು ಇದ್ದು ಅದರ ಅ.ಕಿ 9,600/- ರೂ. ಒಂದೊಂದು ಭಾರತ್ ಬೆಂಜ್ ಟಿಪ್ಪರನ ಅ.ಕಿ 10,00,000/- ರೂ. ಇದ್ದು. ಹೀಗೆ ಒಟ್ಟು 36 ಮೀಟರ್ ಘನ ಮೀಟರ್ ಮರಳು ಅದರ ಅ.ಕಿ 28,800/- ರೂ ಮೂರು ಭಾರತ್ ಬೆಂಜ್ ಟಿಪ್ಪರನ ಅ.ಕಿ 30,00,000/- ರೂ. ಇರುತ್ತದೆ. ಸದರಿ ಟಿಪ್ಪರಗಳನ್ನು ಪಂಚರ ಸಮಕ್ಷಮ ಮುಂಜಾನೆ 8:30 ಎ.ಎಂ ದಿಂದ 9:30 ಎ.ಎಂ ದ ಅವದಿವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟಿಪ್ಪರ ಮತ್ತು ಮರಳು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರಗಳ ಚಾಲಕರು ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 28,800/- ರೂ.ಗಳ ಕಿಮ್ಮತ್ತಿನ ಅಂದಾಜು 36 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟಿಪ್ಪರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ 11 ಎ.ಎಂ ಕ್ಕೆ ತಂದು ಒಪ್ಪಿಸಿ, ಟಿಪ್ಪರ ಚಾಲಕ ಮತ್ತು ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲು ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 177/2021 ಕಲಂ 379 ಐ.ಪಿ.ಸಿ. ಮತ್ತು ಕಲಂ.44(1) ಕೆ.ಎಮ್.ಎಮ್.ಸಿ. ಆರ್.ಆಕ್ಟ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 84/2021 87 ಕೆ.ಪಿ ಯಾಕ್ಟ : ಇಂದು ದಿನಾಂಕ 17/11/2021 ರಂದು 18.15 ಪಿಎಂ ಕ್ಕೆ ಶ್ರೀ ಚಿದಾನಂದ ಸೌದಿ ಪಿ.ಎಸ್.ಐ ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ವರದಿ, ಮುದ್ದೆಮಾಲು, ಜಪ್ತಿ ಪಂಚನಾಮೆ ಸಮೇತ 9 ಜನ ಆರೋಪಿತರನ್ನು ಹಾಜರುಪಡಿಸಿ ಕ್ರಮ ಜರುಗಿಸುವಂತೆ ಆದೇಶಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ: 17/11/2021 ರಂದು 15.45 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಕೋಳಿಹಾಳ ಗ್ರಾಮದ ಹನುಮಾನ ದೇವರ ಗುಡಿಯ ಮುಂಭಾಗ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಹಾಗೂ ಠಾಣೆಯ ಸಿಬ್ಬಂದಿಯವರಾದ ವಿರೇಂದ್ರ ಪಿಸಿ-264, ನಿಂಗಪ್ಪ ಪಿಸಿ-216, ಮಂಜುನಾಥ ಪಿಸಿ-119, ಲಿಂಗನಗೌಡ ಪಿಸಿ-87 ರವರಿಗೆ ಕರೆದು ಬಾತ್ಮಿ ವಿಷಯ ತಿಳಿಸಿ ನಂತರ ಕೋಳಿಹಾಳ ಗ್ರಾಮಕ್ಕೆ ಖಾಸಗಿ ಜೀಪ್ನಲ್ಲಿ ಸಿಬ್ಬಂದಿಯೊಂದಿಗೆ ಹೋಗಿ ಇವರ ಕೋಳಿಹಾಳ ಗ್ರಾಮದ ಬಸವೇಶ್ವರ ವೃತ್ತದ ಹತ್ತಿರ ನಿಂತು ಠಾಣೆಯ ವಿರೇಂದ್ರ ಪಿಸಿ-264, ಇವರಿಗೆ 2 ಪಂಚರಿಗೆ ಕರೆದುಕೊಂಡು ಬರಲು ತಿಳಿಸಿದ ಮೇರೆಗೆ 2 ಜನ ಪಂಚರಾದ 1)ಶ್ರೀ. ರೇಣುಕಾ ಪಾಟೀಲ ತಂದೆ ಅಯ್ಯನಗೌಡ ಪಾಟೀಲ ವಯ:41 ವರ್ಷ ಜಾತಿ:ಹಿಂದೂ ಬೇಡರ ಉ:ಒಕ್ಕಲುತನ ಸಾ:ಕೋಳಿಹಾಳ ತಾ:ಹುಣಸಗಿ ಜಿಲ್ಲಾ:ಯಾದಗಿರ 2)ಶ್ರೀ.ಸಿದ್ದು ತಂದೆ ಯಲ್ಲಪ್ಪ ಪೂಜಾರಿ ವಯ:25 ವರ್ಷ ಜಾತಿ:ಕುರುಬರು ಉ:ಒಕ್ಕಲುತನ ಸಾ:ಕೋಳಿಹಾಳ ತಾ:ಹುಣಸಗಿ ಜಿಲ್ಲಾ:ಯಾದಗಿರ ರವರಿಗೆ 16.15 ಗಂಟೆಗೆ ಕರೆದುಕೊಂಡು ಬಂದು ನನ್ನ ಮುಂದೆ ಹಾಜರು ಪಡಿಸಿದ್ದು, ಸದರಿಯವರಿಗೆ ಬಾತ್ಮೀ ವಿಷಯವನ್ನು ತಿಳಿಸಿ, ದಾಳಿ ಮಾಡಿದಾಗ ನೋಡಿ ಜಪ್ತಿ ಪಂಚನಾಮೆಯನ್ನು ಬರೆಯಿಸಿಕೊಡಲು ಕೇಳಿಕೊಂಡಾಗ ಅವರು ಒಪ್ಪಿಕೊಂಡಿದ್ದು, ಅಲ್ಲಿಯಿಂದ ಸಿಬ್ಬಂದಿ ಹಾಗೂ ಪಂಚರೊಂದಿಗೆ 16.40 ಗಂಟೆಗೆ ನಡೆದುಕೊಂಡು ಹೋಗಿ ಕೋಳಿಹಾಳ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ನಿಂತು ಎಲ್ಲರೂ ಮರೆಯಾಗಿ ನಿಂತು ನೋಡಲಾಗಿ ಗುಡಿಯ ಮುಂದಿನ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅದರಲ್ಲಿ ಒಬ್ಬನು ರಾಣಿ ಹೊರಗೆ ಅಂತ ಇನ್ನೊಬ್ಬ ರಾಣಿ ಒಳಗೆ ಅಂತ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 16.45 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 9 ಜನರು ಸಿಕ್ಕಿದ್ದು 4-5 ಜನರು ಓಡಿ ಹೋಗಿದ್ದು, ಸಿಕ್ಕ 9 ಜನರ ಹೆಸರು ವಿಳಾಸ ವಿಚಾರಿಸಲಾಗಿ 1) ಅಪ್ಪಣ್ಣ ತಂದೆ ಲಕ್ಷ್ಮಣ ದೇಸಾಯಿ ವಯ:48 ವರ್ಷ ಜಾತಿ: ಬೇಡರು ಉ:ಒಕ್ಕಲುತನ ಸಾ:ಕೋಳಿಹಾಳ 2) ಭೀಮರಾಯ ತಂದೆ ಮಾಳಪ್ಪ ಕುರುಬರು ವಯ:38 ವರ್ಷ ಜಾತಿ:ಕುರುಬರು ಉ:ಒಕ್ಕಲುತನ ಸಾ:ಕೋಳಿಹಾಳ, 3) ಮಲಿಕಿಂದ್ರಯ್ಯ ತಂದೆ ಹಣಮಂತ್ರಾಯ ಜಾಧವ ವಯ:30 ವರ್ಷ ಜಾತಿ:ಮರಾಠ ಉ:ಕೂಲಿ ಕೆಲಸ ಸಾ:ಕೋಳಿಹಾಳ 4) ಬಸವರಾಜ ತಂದೆ ಮದನಪ್ಪ ಹಡಪದ ವಯ:35 ವರ್ಷ ಜಾತಿ:ಹಡಪದ ಉ:ಕುಲಕಸುಬು ಸಾ: ಕೋಳಿಹಾಳ 5) ಗೊವರ್ದನ ತಂದೆ ಪರಮಣ್ಣಗೌಡ ಬಿರಾದಾರ ವಯ:30 ವರ್ಷ ಜಾತಿ: ಬೇಡರು ಉ:ಕೂಲಿ ಕೆಲಸ ಸಾ:ಕೋಳಿಹಾಳ 6) ಹಣಮಂತ್ರಾಯ ತಂದೆ ಯಮನಪ್ಪ ಬಸರಿಗಿಡ ವಯ:40 ವರ್ಷ ಜಾತಿ: ಹಿಂದೂ ಮಾದಿಗ ಉ:ಕೂಲಿ ಕೆಲಸ ಸಾ:ಕೋಳಿಹಾಳ. 7) ಮಾನಪ್ಪ ತಂದೆ ಬಾಬಣ್ಣ ಬೈರಡಗಿ ವಯ:65 ವರ್ಷ ಜಾತಿ: ಮರಾಠ ಉ: ಕೂಲಿ ಕೆಲಸ ಸಾ:ಕೋಳಿಹಾಳ 8) ಬಸವರಾಜ ತಂದೆ ಕಾಶೇಪ್ಪ ಹಳ್ಳಳ್ಳಿ ವಯ:40 ವರ್ಷ ಜಾತಿ:ಬೇಡರು ಉ: ಕೂಲಿ ಕೆಲಸ ಸಾ:ಕೋಳಿಹಾಳ 9) ಮಂಜುನಾಥ ತಂದೆ ರಾಮಣ್ಣ ಗುರಿಕಾರ ವಯ:25 ವರ್ಷ ಜಾತಿ:ಬೇಡರು ಉ:ಒಕ್ಕಲುತನ ಸಾ: ಕೋಳಿಹಾಳ ಅಂತಾ ತಿಳಿಸಿದ್ದು ಸದರಿಯವರು ಇಸ್ಪೀಟ್ ಜೂಜಾಟಕ್ಕೆ ಇಟ್ಟ ನಗದು ಹಣ 10240=00 ರೂಪಾಯಿ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು 16.45 ಗಂಟೆಯಿಂದ 17.45 ಗಂಟೆಯ ವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ಅದೆ. ಕಾರಣ ಮೇಲೆ ನಮೂದಿಸಿದ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 18.15 ಗಂಟೆಗೆ 9 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದಿದ್ದು ಸದರಿ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಈ ವರದಿ ನೀಡಿದ್ದು ವರದಿಯ ಆದಾರದ ಮೇಲಿಂದ ರೆಗೆ ಠಾಣಾ ಗುನ್ನೆ ನಂ 84/2021 ಕಲಂ 87 ಕೆಪಿ ಯಾಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

Last Updated: 18-11-2021 10:17 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080