ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-11-2022

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 167/2022 ಕಲಂ 279, 304(ಎ),336 ಐಪಿಸಿ ಮತ್ತು ಕಲಂ. 187 ಐ.ಎಮ.ವಿ.ಎಕ್ಟ: ದಿನಾಂಕಃ 17.11.2022 ರಂದು 4-25 ಪಿ.ಎಮ ಸುಮಾರಿಗೆ ಗುರುಮಠಕಲ್ ಪಟ್ಟಣದ ಲಕ್ಷ್ಮೀನಗರ ಓಣೆಯಲ್ಲಿರುವ ಈ ಕೇಸಿನ ಫಿಯರ್ಾದಿಯ ಮನೆಯ ಮುಂದುಗಡೆ ರಸ್ತೆಯ ಮೇಲೆ ಈ ಪ್ರಕರಣದಲ್ಲಿ ಆರೋಪಿತನಾದ ಗುರುಮಠಕಲ್ ಪಟ್ಟಣದಲ್ಲಿರುವ ಫ್ರಂಟ ಲೈನ ಶಿಕ್ಷಣ ಸಂಸ್ಥೆಯ ಐಷರ ಕಂಪನಿಯ ಶಾಲಾ ವಾಹನ ನಂ.ಕೆ.ಎ-33-ಎ-6310 ನೇದ್ದರ ಚಾಲಕನಾದ ನಾಗೇಶ ತಂದೆ ಕಿಶನರಾವ ಜ್ಞಾನಿ ಸಾ||ಗುರುಮಠಕಲ್, ಇತನು ಶಾಲಾ ಮಕ್ಕಳಿಗೆ ಇಳಿಸಿದ ತಕ್ಷಣ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ರಸ್ತೆಯನ್ನು ದಾಟುತ್ತಿರುವ ಮನಸ್ವಿನಿ ವಯಾ|| 2 1/2 ವರ್ಷ ಇವಳ ಮೇಲೆ ಹಾಯಸಿದ್ದರಿಂದ ಈ ಅಪಘಾತದಲ್ಲಿ ಸದರಿ ವಾಹನದ ಮುಂದಿನ ಗಾಲಿ ಮನಸ್ವಿನಿ ತಲೆಯ ಮೇಲೆ ಹಾಯ್ದುಹೋಗಿದ್ದರಿಂದ ತಲೆ ಒಡೆದು, ಮೆದುಲು ಹೊರಗೆ ಬಂದು, ಕಿವಿ, ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವವಾಗಿ ಉಪಚಾರ ಕುರಿತು ಗುರುಮಠಕಲ್ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯ 4.40 ಪಿ.ಎಮ ಸುಮಾರಿಗೆ ಮೃತಪಟ್ಟಿರುತ್ತಾಳೆ. ಸದರಿ ಅಪಘಾತ ಪಡಿಸಿದ ಶಾಲಾ ವಾಹನದಲ್ಲಿ ಡ್ರೈವರ ಒಬ್ಬನೆ ಇದ್ದನು, ಸದರಿ ವಾಹನದಲ್ಲಿ ಮಕ್ಕಳನ್ನು ಏರಿಸಲು, ಇಳಿಸಲು ಹಾಗೂ ಮಕ್ಕಳನ್ನು ನೋಡಲು ಶಾಲೆಯ ಒಬ್ಬ ಸಿಬ್ಬಂದಿ ಅಥವಾ ಕ್ಲೀನರ ಸಹಾಯಕನಾಗಿ ಇರಬೇಕಾಗಿತ್ತು. ಆದರೆ ಇರಲಿಲ್ಲ. ಹೀಗಾಗಿ ಈ ಅಪಘಾತದಲ್ಲಿ ಆಡಳಿತ ಮಂಡಳಿಯವರು ಫ್ರಂಟ ಲೈನ ಶಿಕ್ಷಣ ಸಂಸ್ಥೆ ಗುರುಮಠಕಲ್ ಇವರ ನಿರ್ಲಕ್ಷತನ ಸಹ ಇರುತ್ತದೆ.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 160/2022 ಕಲಂ 379 ಐಪಿಸಿ : ಇಂದು ದಿನಾಂಕ: 17-11-2022 ರಂದು ಮದ್ಯಾಹ್ನ 3-30 ಗಂಟೆಗೆ ಶ್ರೀ ಭೀಮಾಶಂಕರ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ಯಡ್ಡಳ್ಳಿ ಮತ್ತು ಓರುಂಚಾ ಗ್ರಾಮದ ಹಳ್ಳದ ಪಕ್ಕದಲ್ಲಿ ಅನಧಿಕೃತವಾಗಿ ಅಂದಾಜು 8 ಟಿಪ್ಪರನಷ್ಟು ಮರಳು ಸಂಗ್ರಹ ಮಾಡಿದ ಮರಳನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆಯೊಂದಿಗೆ ವರದಿಯನ್ನು ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಮತ್ತು ವರದಿಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.160/2022 ಕಲಂ. 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 160/2022 ಕಲಂ 379 ಐಪಿಸಿ : ಇಂದು ದಿನಾಂಕ: 17-11-2022 ರಂದು ಮದ್ಯಾಹ್ನ 3-30 ಗಂಟೆಗೆ ಶ್ರೀ ಭೀಮಾಶಂಕರ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ಯಡ್ಡಳ್ಳಿ ಮತ್ತು ಓರುಂಚಾ ಗ್ರಾಮದ ಹಳ್ಳದ ಪಕ್ಕದಲ್ಲಿ ಅನಧಿಕೃತವಾಗಿ ಅಂದಾಜು 8 ಟಿಪ್ಪರನಷ್ಟು ಮರಳು ಸಂಗ್ರಹ ಮಾಡಿದ ಮರಳನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆಯೊಂದಿಗೆ ವರದಿಯನ್ನು ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಮತ್ತು ವರದಿಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.160/2022 ಕಲಂ. 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 148/2022 ಕಲಂ: 143, 147, 341, 323, 324, 354, 504, 506 ಸಂ. 149 ಐಪಿಸಿ: ಇಂದು ದಿನಾಂಕಃ 17/11/2022 ರಂದು 7:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಸದಾಶಿವ ತಂದೆ ಬಾಲಪ್ಪ ಮಂಗಿಹಾಳ ವ|| 48 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಲಿಂಗದಳ್ಳಿ ಎಸ್ಕೆ ತಾ|| ಸುರಪುರ ಇದ್ದು, ತಮ್ಮಲ್ಲಿ ಕೊಡುವ ದೂರು ಅಜರ್ಿ ಏನೆಂದರೆ, ತಮ್ಮಲ್ಲಿ ಕೊಡುವ ದೂರು ಅಜರ್ಿ ಏನೆಂದರೆ, ನನಗೆ ಇಬ್ಬರು ಗಂಡುಮಕ್ಕಳು ಒಬ್ಬಳು ಹೆಣ್ಣುಮಗಳಿದ್ದು, ನನಗೆ ಹೊಲ ಸವರ್ೇ ನಂ, 7 ರಲ್ಲಿ 1 ಎಕರೆ 2 ಗುಂಟೆ ಜಮೀನು ಪಾಲು ಇರುತ್ತದೆ. ಆ ಹೊಲದಲ್ಲಿ ತೊಗರಿ ಹಾಗೂ ಶೇಂಗಾ ಬಿತ್ತನೆ ಮಾಡಿರುತ್ತೇನೆ. ಇಂದು ದಿನಾಂಕ: 17/11/2022 ರಂದು ಬೆಳಿಗ್ಗೆ ಹೊಲದಲ್ಲಿ ಶೇಂಗಾ ಕಿತ್ತುವ ಸಲುವಾಗಿ ನಾನು, ನಮ್ಮ ಅಣ್ಣ ಗೋಪಾಲಪ್ಪ ತಂದೆ ಬಾಲಪ್ಪ ಮಂಗಿಹಾಳ, ಅಣ್ಣನ ಹೆಂಡತಿಯಾದ ತಿಪ್ಪಮ್ಮ ಹಾಗೂ ಅಣ್ಣನ ಮಕ್ಕಳಾದ ಮೌನೇಶ, ಗುರುರಾಜ ಎಲ್ಲರು ಕೂಡಿ ನಮ್ಮ ಹೊಲಕ್ಕೆ ಹೋಗಿದ್ದೆವು. ಹೀಗಿದ್ದು ಇಂದು ಮದ್ಯಾಹ್ನ 11 ಗಂಟೆ ಸುಮಾರಿಗೆ ಹಣಮಂತ ತಂದೆ ಭೀಮಣ್ಣ ಸಾಹುಕಾರ ಈತನ ಆಕಳು ನಮ್ಮ ಹೊಲದಲ್ಲಿ ಬಂದು ತೊಗರಿ ಮೇಯುತ್ತಿದ್ದಾಗ ಅಣ್ಣನ ಮಗನಾದ ಮೌನೇಶ ಈತನು ಆಕಳಿಗೆ ನಮ್ಮ ಹೊಲದಿಂದ ಹೊರಗೆ ಓಡಿಸಿದ್ದನು. ನಂತರ ಮದ್ಯಾಹ್ನ 1 ಗಂಟೆ ಸುಮಾರಿಗೆ ನಾವೆಲ್ಲರು ನಮ್ಮ ಹೊಲದಲ್ಲಿ ಶೆಂಗಾ ಕಿತ್ತುತ್ತಿದ್ದಾಗ ನಮ್ಮೂರಿನ ನಮ್ಮ ಜನಾಂಗದವರಾದ 1) ಶೀಲವಂತ ತಂದೆ ಮಹಾದೇವಪ್ಪ ಸಾಹುಕಾರ 2) ಹಣಮಂತ ತಂದೆ ಭೀಮಣ್ಣ ಸಾಹುಕಾರ 3) ಅಂಬ್ರೇಶ ತಂದೆ ಸೋಮಲಿಂಗಪ್ಪ ಸಾಹುಕಾರ 4) ಮಹಾದೇವಪ್ಪ ತಂದೆ ಯಮನಪ್ಪ ಸಾಹುಕಾರ 5) ಆದಪ್ಪ ತಂದೆ ದುಂಡಪ್ಪ ಸಾಹುಕಾರ 6) ಪರಮಣ್ಣ ತಂದೆ ಭೀಮಣ್ಣ ಸಾಹುಕಾರ 7) ಸಣ್ಣ ಹಣಮಂತ ತಂದೆ ಸಾಲಿ ಹಣಮಪ್ಪ ಸಾಹುಕಾರ 8) ನಂದಪ್ಪ ತಂದೆ ಸಾಲಿ ಹಣಮಪ್ಪ ಸಾಹುಕಾರ 9) ಪರಶುರಾಮ ತಂದೆ ನಿಂಗಣ್ಣ ಸಾಹುಕಾರ 10) ಬಸವರಾಜ ತಂದೆ ನಿಂಗಣ್ಣ ಸಾಹುಕಾರ 11) ಮಾನಪ್ಪ ತಂದೆ ಮಹಾದೇವಪ್ಪ ಸಾಹುಕಾರ 12) ಶರಣಪ್ಪ ತಂದೆ ಬಸಪ್ಪ ಸಾಹುಕಾರ ಈ ಎಲ್ಲಾ ಜನರು ಗುಂಪುಕಟ್ಟಿಕೊಂಡು ನಮ್ಮ ಹೊಲದ ದಾರಿಯಲ್ಲಿ ಬಂದವರೇ ಏನಲೇ ಮೌನ್ಯಾ ನಮ್ಮ ಆಕಳಿಗೆ ಹೊಡೆದು ಓಡಿಸ್ತಿ ಸೂಳೆಮಗನೆ, ನಿನ್ನ ಸೊಕ್ಕ ಬಾಳ ಆಗಿದೆ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ, ಮೌನೇಶ ಈತನು ನಿಮ್ಮ ಆಕಳು ನಮ್ಮ ಹೊಲದಲ್ಲಿ ತೊಗರಿ ಮೇಯುತ್ತಿತ್ತು ಅದಕ್ಕೆ ನಾನು ಹೊಲದಿಂದ ಹೊರಗೆ ಓಡಿಸಿರುತ್ತೇನೆ ಅಂತ ಅಂದಾಗ, ಅವರಲ್ಲಿಯ ಶೀಲವಂತ ಈತನು ಅಲ್ಲೇ ಬಿದ್ದ ಕಲ್ಲನ್ನು ತೆಗೆದುಕೊಂಡು ಮೌನೇಶ ಈತನ ಎಡಪಕ್ಕಡಿಗೆ ಹೊಡೆದು ಗುಪ್ತಪೆಟ್ಟುಗೊಳಿಸಿದನು, ಹಣಮಂತ ಈತನು ಅಲ್ಲೇ ಬಿದ್ದ ಒಂದು ಬಡಿಗೆಯಿಂದ ಮೌನೇಶನ ತಲೆಗೆ ಹೊಡೆದು ಗುಪ್ತಪೆಟ್ಟು ಮಾಡಿದನು. ಆಗ ಮೌನೇಶ ಈತನು ಅವರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಅಂಬ್ರೇಶ ಈತನು ತಡೆದು ನಿಲ್ಲಿಸಿ ಎದೆ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕೆಡವಿದಾಗ ಎಲ್ಲರು ಕೂಡಿ ಕಾಲಿನಿಂದ ಬೆನ್ನಿಗೆ ಹೊಟ್ಟೆಗೆ ಒದ್ದರು. ಆಗ ಬಿಡಿಸಲು ಹೋದ ನಮ್ಮ ಅಣ್ಣನ ಹೆಂಡತಿಯಾದ ತಿಪ್ಪಮ್ಮ ಇವಳಿಗೆ ಮಹಾದೇವಪ್ಪ ಈತನು ಕೈಯಿಂದ ಕಪಾಳಕ್ಕೆ ಹೊಡೆದು ಸೀರೆ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿದನು. ಆಗ ಅಲ್ಲೇ ಇದ್ದ ನಾನು, ನಮ್ಮ ಅಣ್ಣ ಗೋಪಾಲಪ್ಪ, ಅಣ್ಣನ ಮಗನಾದ ಗುರುರಾಜ ಮತ್ತು ಬಾಜು ಹೊಲದ ಸಣ್ಣ ತಿಮ್ಮಣ್ಣ ತಂದೆ ಬಾಲಪ್ಪ ಕರನಾಳ ಎಲ್ಲರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡೆವು. ಆಗ ಅವರು ಹೊಡೆಯುವದನ್ನು ಬಿಟ್ಟು ಇವತ್ತು ಇವರು ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿದಿರಿ ಸೂಳೆ ಮಕ್ಕಳೆ ಇಲ್ಲದಿದ್ದರೆ ನಿಮ್ಮ ಜೀವಸಹಿತ ಬಿಡುತ್ತಿರಲಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ಮೌನೇಶ ಈತನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಸುರಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ತಿಪ್ಪಮ್ಮ ಇವಳಿಗೆ ಅಷ್ಟೇನು ಗಾಯಗಳು ಆಗಿರದ ಕಾರಣ ಆಸ್ಪತ್ರೆಗೆ ತೋರಿಸಿರುವದಿಲ್ಲ. ಕಾರಣ ನಮ್ಮ ಅಣ್ಣನ ಮಗನಾದ ಮೌನೇಶ ಈತನಿಗೆ ಮತ್ತು ಅಣ್ಣನ ಹೆಂಡತಿ ತಿಪ್ಪಮ್ಮ ಇವರಿಗೆ ಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿ, ಮಾನಭಂಗ ಮಾಡಲು ಪ್ರಯತ್ನಿಸಿ, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 148/2022 ಕಲಂ: 143, 147, 341, 323, 324, 354, 504, 506 ಸಂ. 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 149/2022 ಕಲಂ: 143, 147, 323, 324, 504, 506 ಸಂ. 149 ಐಪಿಸಿ: ಇಂದು ದಿನಾಂಕ:17/11/2022 ರಂದು 8:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರಳಾದ ಶ್ರೀ ನಿಂಗಪ್ಪ ತಂದೆ ಭೀಮಣ್ಣ ಮಕಾಶಿ ವ|| 50 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಲಿಂಗದಳ್ಳಿ (ಎಸ್.ಕೆ) ತಾ|| ಸುರಪೂರ ಇದ್ದು, ತಮ್ಮಲ್ಲಿ ಸಲ್ಲಿಸುವ ದೂರು ಏನೆಂದರೆ, ಇಂದು ದಿನಾಂಕ: 17/11/2022 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ನನ್ನ ತಮ್ಮನಾದ ಹಣಮಂತ ತಂದೆ ಭೀಮಣ್ಣ ಮಕಾಶಿ ಈತನು ಎಂದಿನಂತೆ ನಮ್ಮ ದನಗಳನ್ನು ಮೇಯಿಸುವ ಕುರಿತು ಹೊಡೆದುಕೊಂಡು ಹೋದನು. ನಂತರ ಮದ್ಯಾಹ್ನ 2:15 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಕಾಕನ ಮಗನಾದ ಬಸವರಾಜ ತಂದೆ ಸಣ್ಣಹಣಮಂತ ಇಬ್ಬರು ಮನೆಯಲ್ಲಿದ್ದಾಗ ನಮ್ಮ ಕಾಕನ ಮಗನಾದ ಶೀಲವಂತ ತಂದೆ ಮಹಾದೇವಪ್ಪ ಸಾಹುಕಾರ ಈತನು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ, ಹುಣಸಿಹೊಳಿ ಸೀಮಾಂತರದ ಸರಕಾರಿ ಗೈರಾಣಿ ಖುಲ್ಲಾ ಜಾಗದಲ್ಲಿ ನಿಮ್ಮ ತಮ್ಮನಾದ ಹಣಮಂತ ತಂದೆ ಭೀಮಣ್ಣ ಮಕಾಶಿ ಈತನ ದನಗಳನ್ನು ಮೇಯಿಸುತ್ತಿರುವಾಗ ನಮ್ಮ ಗ್ರಾಮದವರಾದ ಮೌನೇಶ ತಂದೆ ಗೋಪಾಲಪ್ಪ ಮಂಗಿಹಾಳ ಮತ್ತು ಅವರ ಮನೆಯವರು ತಕರಾರು ಮಾಡುತ್ತಿದ್ದಾರೆ ಕೂಡಲೇ ಬರುವಂತೆ ತಿಳಿಸಿದ್ದರಿಂದ ನಾವು ಅಲ್ಲಿಗೆ ಹೋಗಿ ನೋಡಲಾಗಿ ಅಲ್ಲಿ 1) ಮೌನೇಶ ತಂದೆ ಗೋಪಾಲಪ್ಪ ಮಂಗಿಹಾಳ 2) ಸದಾಶಿವ ತಂದೆ ಬಾಲಪ್ಪ ಮಂಗಿಹಾಳ, 3) ಗೋಪಾಲಪ್ಪ ತಂದೆ ಬಾಲಪ್ಪ ಮಂಗಿಹಾಳ, 4) ಅರಣುಕುಮಾರ ತಂದೆ ಸದಾಶಿವ ಮಂಗಿಹಾಳ, 5) ಮೌನೇಶ ತಂದೆ ಲಕ್ಷ್ಮಣ ಮಂಗಿಹಾಳ, 6) ಗುರುರಾಜ ತಂದೆ ಗೋಪಾಲಪ್ಪ ಮಂಗಿಹಾಳ, 7) ರಾಮಕುಮಾರ ತಂದೆ ಸದಾಶಿವ ಮಂಗಿಹಾಳ, 8) ಗೌರಮ್ಮ ಗಂಡ ಸದಾಶಿವ ಮಂಗಿಹಾಳ, 9) ತಿಪ್ಪವ್ವ ಗಂಡ ಗೋಪಾಲಪ್ಪ ಮಂಗಿಹಾಳ ಎಲ್ಲರೂ ಗುಂಪುಕಟ್ಟಿಕೊಂಡು ನಮ್ಮ ತಮ್ಮನಾದ ಹಣಮಂತ ಈತನಿಗೆ ಇಲ್ಲಿ ಯಾಕೇ ದನಗಳನ್ನು ಮೇಯಿಸುತ್ತಿ ಅಂತಾ ತಕರಾರು ಮಾಡುತ್ತಿದ್ದು, ಆಗ ನಮ್ಮ ತಮ್ಮ ಅವರಿಗೆ ಇದು ಸರಕಾರಿ ಗೈರಾಣಿ ಇದ್ದು ಇಲ್ಲಿ ದನಗಳನ್ನು ಮೇಯಿಸಿದರೆ ನಿಮಗೇನು ತೊಂದರೆ ಅಂತಾ ಅಂದಾಗ ಅವರು ಇದು ನಮಗೆ ಸೇರಿದ ಜಾಗ ಇರುತ್ತದೆ. ಇಲ್ಲಿ ನಿನ್ನ ದನಗಳು ಮೇಯಿಸಿಬೇಡ ಬೇರೆ ಕಡೆ ಹೊಡೆದುಕೊಂಡು ಹೋಗಿ ಮೇಯಿಸು ಅಂತಾ ಅಂದರು. ಆಗ ನನ್ನ ತಮ್ಮ ಅವರಿಗೆ ಇದು ಸರಕಾರಿ ಗೈರಾಣಿ ಇದ್ದು, ನಿಮಗೆ ಸಂಬಂಧಪಡುವುದಿಲ್ಲ ಅಂತಾ ಅಂದಿದಕ್ಕೆ ಅವರು ಲೇ ಮಗನೇ ನಮ್ಮ ಜಾಗ ಸರಕಾರಿ ಗೈರಾಣಿ ಹೇಗೆ ಆಗುತ್ತೆ ಸುಮ್ಮನ್ನೇ ಬಿಟ್ಟರೆ ನೀನು ನಿಮ್ಮ ದನಗಳನ್ನು ಬಿಟ್ಟು ಹೊಲದಲ್ಲಿ ಕೂಡ ಮೇಯಿಸುತ್ತಿ. ಈಗ ಇಲ್ಲಿಂದ ದನಗಳನ್ನು ಹೊಡೆದುಕೊಂಡು ಹೋದರೆ ಸರಿ. ಇಲ್ಲವಾದರೇ ನಿನಗೆ ಜೀವ ಸಹೀತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದಾಗ ನಮ್ಮ ತಮ್ಮ ಯಾಕೇ ಬೈಯುತ್ತಿರಿ ಅಂತಾ ಅಂದಿದಕ್ಕೆ ಎದುರು ಮಾತಾಡುತ್ತಿ ಮಗನೇ ಅಂತಾ ಅಂದವರೇ ಅವರಲ್ಲಿ ಮೌನೇಶ ತಂದೆ ಗೋಪಾಲಪ್ಪ ಈತನು ನನ್ನ ತಮ್ಮ ಹಣಮಂತನಿಗೆ ಬಡಿಗೆಯಿಂದ ತಲೆಯ ಹಿಂದುಗಡೆ ಹೊಡೆದು ಒಳಪೆಟ್ಟು ಮಾಡಿದ್ದು, ಸದಾಶಿವ ಈತನು ಬಡಿಗೆಯಿಂದ ಬಲಭುಜಕ್ಕೆ ಹೊಡೆದು ಗುಪ್ತಪೆಟ್ಟು ಮಾಡಿದ್ದು, ಗೋಪಾಲಪ್ಪ ಮತ್ತು ಅರಣುಕುಮಾರ ಇವರು ಕಾಲಿನಿಂದ ಸೊಂಟಕ್ಕೆ, ಬೆನ್ನಿಗೆ ಒದ್ದಿದ್ದು, ಮೌನೇಶ ತಂದೆ ಲಕ್ಷ್ಮಣ ಮತ್ತು ಗುರುರಾಜ, ರಾಮಕುಮಾರ ಇವರು ನನ್ನ ತಮ್ಮನಿಗೆ ನೆಲಕ್ಕೆ ಹಾಕಿ ಕಾಲಿನಿಂದ ಮನಬಂದಂತೆ ಒದ್ದರು. ಗೌರಮ್ಮ ಮತ್ತು ತಿಪ್ಪವ್ವ ಇವರು ಇವನಿಗೆ ಸೊಕ್ಕು ಬಹಳ ಇದೆ ಜೀವ ಸಹಿತ ಬಿಡಬಾರದು ಅಂತಾ ಕೈಯಿಂದ ಹೊಡೆಬಡೆ ಮಾಡಿದರು. ಆಗ ಮೌನೇಶ ತಂದೆ ಗೋಪಾಲಪ್ಪ ಈತನು ಕುತ್ತಿಗೆಗೆ ಚೂರಿರುತ್ತಾನೆ. ನನ್ನ ತಮ್ಮ ಚೀರಾಡುತ್ತಿರುವಾಗ ನಾನು ಮತ್ತು ಬಸವರಾಜ, ಶೀಲವಂತ ಹಾಗೂ ಬಾಜು ಹೊಲದ ರಂಗಪ್ಪ ತಂದೆ ಬಸಪ್ಪ, ತಿಮ್ಮಯ್ಯ ತಂದೆ ದುರ್ಗಪ್ಪ ಕೂಡಿಕೊಂಡು ಜಗಳ ಬಿಡಿಸಿಕೊಂಡೆವು. ಸದರಿ ಘಟನೆಯು ಇಂದಿ ದಿನಾಂಕ: 17/11/2022 ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ ಹುಣಸಿಹೊಳೆ ಸೀಮಾಂತರದ ಸರಕಾರಿ ಗೈರಾಣಿ ಜಾಗದಲ್ಲಿ ಜರುಗಿದ್ದು, ನಂತರ ನನ್ನ ತಮ್ಮನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪೂರಕ್ಕೆ ಕರೆದುಕೊಂಡು ಬಂದು ಸೇರಿಕೆ ಮಾಡಿ ನಾನು ಠಾಣೆಗೆ ಬಂದು ದೂರು ಅಜರ್ಿ ನೀಡಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರು ಅಜರ್ಿ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 149/2022 ಕಲಂ: 143, 147, 323, 324, 504, 506 ಸಂ. 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 19-11-2022 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080