Feedback / Suggestions

      ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/02/2021
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 22/2021 ಕಲಂ 143, 147, 148, 323, 324, 504, 506 ಸಂ 149 ಐಪಿಸಿ : ದಿನಾಂಕ 17/02/2021 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಅವನ ಹೆಂಡತಿ ಇಬ್ಬರೂ ತಮ್ಮ ಮನೆ ಮುಂದೆ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದು ಹಳೇ ದ್ವೇಶದಿಂದ ಜಗಳ ತೆಗೆದು ಸೂಳೇ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದು, ಕಲ್ಲಿನಿಂದ, ಕಟ್ಟಿಗೆಯಿಂದ ಮತ್ತು ಕೈಯಿಂದ ಫಿರ್ಯಾದಿಗೆ ಮತ್ತು ಅವನ ಹೆಂಡತಿಗೆ ಹೊಡೆದು ರಕ್ತಗಾಯ, ಗುಪ್ತಗಾಯ ಮತ್ತು ತರಚಿದಗಾಯಗಳು ಮಾಡಿದ್ದು ಮತ್ತು ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿರಿ ಮಕ್ಕಳೇ ಇನ್ನೊಂದು ಸಲ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 23/2021 ಕಲಂ 279, 338 ಐಪಿಸಿ : ಇಂದು ದಿನಾಂಕ 18-02-2021 ರಂದು 2-15 ಪಿ.ಎಮ್ ಕ್ಕೆ ಶ್ರೀ ಶೇಖ್ ಹಜರತ್ ಹೆಚ್.ಸಿ-142 ಯಾದಗಿರಿ ಗ್ರಾಮೀಣ ಠಾಣೆರವರು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಶ್ರೀ ರಾಮು ತಂದೆ ಭಿಮ್ಯಾ ರಾಠೊಡ ವಯಾ: 50 ಜಾ: ಲಂಬಾಣಿ ಉ:ಒಕ್ಕಲುತನ ಸಾ: ಎಂಪಾಡ ತಾಂಡಾ ತಾ:ಗುರುಮಠಕಲ್ ಜಿ: ಯಾದಗಿರಿ ಇವರು ಹೇಳಿಕೆ ನೀಡಿದ್ದೆನೆಂದರೆ ಆರೋಪಿತನಾದ ರಾಜೇಶ ತಂದೆ ಉಮಲಾ ರಾಠೊಡ ಸಾ; ಯಂಪಾಡ ತಾಂಡಾ ಇತನು ತನ್ನ ಮೋಟಾರ ಸೈಕಲ್ ಮೇಲೆ ತನ್ನ ಹೆಂಡತಿಯಾದ ಕಾಂತಿಬಾಯಿ ಇವಳನ್ನು ಕೂಡಿಸಿಕೊಂಡು ಯಾದಗಿರಿಯಲ್ಲಿ ಜರುಗುವ ಸೇವಾಲಾಲ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ಯಂಪಾಡದಿಂದ ಆಶನಾಳ ತಾಂಡಾ ಮಾರ್ಗವಾಗಿ ಯಾದಗಿರಿ ಕಡೆಗೆ ಬರುವಾಗ ಆಶನಾಳ ಮತ್ತು ಆಶನಾಳ ಗೇಟ ಮಧ್ಯ ಬರುತ್ತಿರುವಾಗ ಆರೋಪಿತನು ತನ್ನ ಮೋಟಾರ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಹೋಗಿ ಸ್ಕೀಡ್ ಮಾಡಿ ಮೋಟಾರ ಸೈಕಲ್ ಅಪಘಾತ ಮಾಡಿದ್ದರಿಂದ ಈ ಘಟನೆಯಲ್ಲಿ ಫಿರ್ಯಧಿ ಹೆಂಡತಿ ಕಾಂತಿಬಾಯಿಗೆ ತಲೆಯ ಹಿಂಬಾಗಕ್ಕೆ ಬಾರಿ ಗುಪ್ತಗಾವವಾಗಿ ಕೋಮಾ ಸ್ಥಿತಿಗೆ ಹೋಗಿದ್ದು ಇರುತ್ತದೆಈ ಬಗ್ಗೆ ಆರೋಫಿತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 23/2021 ಕಲಂ 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 24/2021 ಕಲಂ 447, 341, 323, 504, 506 ಸಂ 34 ಐಪಿಸಿ : ದಿನಾಂಕ 17/02/2021 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಅವನ ಹೆಂಡತಿ ಹಾಗೂ ಸಂಬಂಧಿಕರು ಕೂಡಿ ಫಿರ್ಯಾಧಿ ಹೊಲಕ್ಕೆ ಹೋದಾಗ ಆರೋಪಿತರೆಲ್ಲರೂ ಕೂಡಿ ಫಿರ್ಯಾಧಿ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಹಳೇ ದ್ವೇಶದಿಂದ ಫಿರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಹೊಡೆಬಡೆ ಮಾಡಿ ಜೀವ ಭಯ ಹಾಕಿರುವ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 35/2021 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ : ಇಂದು ದಿನಾಂಕ 18/02/2021 ರಂದು 1-30 ಎ.ಎಂ. ಕ್ಕೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಚೆನ್ನಯ್ಯ ಎಸ್. ಹಿರೇಮಠ. ಪಿ.ಐ. ಶಹಾಪೂರ ಪೊಲೀಸ್ ಠಾಣೆ ರವರು, ಒಂದು ಮರಳು ತುಂಬಿದ ಟಿಪ್ಪರ ನಂ ಕೆಎ-33ಎ-7189 ನೇದ್ದನ್ನು ಹಾಜರಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ದಿನಾಂಕ 17/02/2021 ರಂದು ರಾತ್ರಿ ಸಮಯದಲ್ಲಿ ಮಾನ್ಯ ಯಾದಗಿರಿಯ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರಾದ ಶ್ರೀ ಶಂಕರಗೌಡ ಸೋಮನಾಳ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಹತ್ತಿಗುಡೂರ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಚೆಕ್ ಪೋಸ್ಟ್ ಕರ್ತವ್ಯದಲ್ಲಿ ಪಿ.ಸಿ.194 ರವರು ಹಾಜರಿದ್ದರು. ರಾತ್ರಿ 10-31 ಗಂಟೆಗೆ ದೇವದುಗರ್ಾ ಕಡೆಯಿಂದ ಮರಳು ತುಂಬಿದ ಒಂದು ಟಿಪ್ಪರ್ ಶಹಾಪೂರ ಕಡೆಗೆ ಬರುತ್ತಿದ್ದು ಅದನ್ನು ಎ.ಸಿ. ಸಾಹೇಬರು, ಬಾಗಣ್ಣ ಪಿ.ಸಿ.194. ಮತ್ತು ಎ.ಸಿ. ಸಾಹೇಬರು ವಾಹನ ಚಾಲಕ ದೇವು ಇವರೊಂದಿಗೆ ಕೈಮಾಡಿ ನಿಲ್ಲಿಸಿ ಮರಳು ಸಾಗಾಣಿಯ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಲಾಗಿ ಟಿಪ್ಪರ್ ಚಾಲಕನು ಯಾವುದೇ ಮರಳು ಸಾಗಾಣಿಕೆ ಪರವಾನಗಿ ಪತ್ರ ಹಾಜರ ಪಡಿಸದೇ ಟಿಪ್ಪರ್ ಚಾಲಕನು ಚೆಕ್ ಪೋಸ್ಟ್ ಮುಂದೆ ಟಿಪ್ಪರ್ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಟಿಪ್ಪರ್ ಪರಿಶಿಲಿಸಲಾಗಿ ಟಿಪ್ಪರ್ ನಂ ಕೆಎ-33ಎ-7189 ನೇದ್ದು ಇದ್ದು ಅದರಲ್ಲಿ ಮರಳು ತುಂಬಿದ್ದು ಇರುತ್ತದೆ. ಮರಳು ಸಾಗಾಣಿಗೆ ಪರವಾನಗಿ ಪತ್ರ ಇಲ್ಲದೇ ಇರುವದು ಕಂಡುಬಂದಿದ್ದರಿಂದ, ಈ ಬಗ್ಗೆ ಪ್ರಕರಣ ದಾಖಲಿಸಲು ಬಾಗಣ್ಣ ಪಿ.ಸಿ.194 ರವರಿಗೆ ಎ.ಸಿ. ಸಾಹೇಬರು ಸೂಚನೆ ನೀಡಿದ್ದು ಇರುತ್ತದೆ. ಈ ವಿಚಾರವಾಗಿ ಪಿ.ಸಿ. 194 ಬಾಗಣ್ಣ ರವರಿಂದ ನಾನು ಮಾಹಿತಿ ಪಡೆದು, ನಾನು ಮತ್ತು ಸಂಗಡ ಶ್ರೀ ಮಲ್ಲಣ್ಣ ಹೆಚ್.ಸಿ.79, ದೇವರಾಜ ಪಿ.ಸಿ.282, ಮತ್ತು ಠಾಣೆಯ ಜೀಪ್.ನಂ.ಕೆಎ-33 ಜಿ-0138 ನೇದ್ದರ ಚಾಲಕ ನಾಗರೆಡ್ಡಿ ಎ.ಪಿ.ಸಿ-161 ರವರನ್ನು ಕರೆದುಕೊಂಡು. ಹತ್ತಿಗುಡೂರದ ಚೆಕ್ ಪೋಸ್ಟ್ 11-15 ಪಿ.ಎಂ.ಕ್ಕೆ ಭೇಟಿ ನೀಡಿ ಸದರಿ ಅಕ್ರಮ ಮರಳು ತುಂಬಿದ ಟಿಪ್ಪರ್ ನಂ ಕೆಎ-33 ಎ-7189 ನೇದ್ದು ಅ:ಕಿ: 10,00,000=00 ರೂ ಇದ್ದು ಅದರಲ್ಲಿ ಅಂದಾಜು 10 ಕ್ಯೂಬಿಕ್ ಮರಳು ಅ:ಕಿ: 7500/- ರೂ ಇದ್ದು. ಸದರಿ ಟಿಪ್ಪರನ್ನು ಬೇರೆ ಚಾಲಕನ ಸಹಾಯದಿಂದ ಠಾಣೆಗೆ ದಿನಾಂಕ 18/02/2021 ರಂದು 1-00 ಎ.ಎಂ. ಕ್ಕೆ ತಂದು ಟಿಪ್ಪರ್ನ್ನು ಹಾಜರುಪಡಿಸಿ, ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ಚಾಲಕ ಮತ್ತು ಮಾಲಿಕನ ಮೇಲೆ 1-30 ಎ.ಎಂ.ಕ್ಕೆ ಸರಕಾರದ ಪರವಾಗಿ ಪಿಯರ್ಾದಿ ಸಲ್ಲಿಸುತ್ತಿದ್ದು ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 35/2021 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 36/2021 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 18/02/2021 ರಂದು, ಸಾಯಂಕಾಲ 18-30 -ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, ಕನ್ನಡದಲ್ಲಿ ಟೈಪ್ ಮಾಡಿದಿ ವರದಿ ಸಲ್ಲಿಸಿದ್ದೇನೆಂದರೆ, ನಾನು ಇಂದು ದಿನಾಂಕ: 18/02/2021 ರಂದು, ಸಾಯಂಕಾಲ 17-30 ಗಂಟೆಯ ಸುಮಾರಿಗೆ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತಿದ್ದಾನೆ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಖಚಿತ ಪಡಿಸಿಕೊಂಡು, ಸದರಿ ಮಾಹಿತಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂಬರ 10/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು ಇಂದು ಸಾಯಂಕಾಲ 18-15 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಮಟಕಾ ನಂಬರ ಬರೆದುಕೊಳ್ಳುವ ಅಪರಿಚಿತ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 36/2021 ಕಲಂ 78(3) ಕೆ.ಪಿಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ನಂತರ ದಾಳಿ ಮಾಡಿ ಆರೋಪಿತನಿಂದ ನಗದು ಹಣ 1070 ರೂಪಾಯಿ ಮತ್ತು ಒಂದು ಬಾಲ್ ಪೆನ್ ಹಾಗೂ ಎರಡು ಮಟಕಾ ಚೀಟಗಳು ಜಪ್ತಿ ಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲು ಹಾಜರ ಪಡಿಸಿರುತ್ತಾರೆ.

 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 03/2021 ಕಲಂ: 110 (ಇ)&(ಜಿ) ಸಿ.ಆರ್.ಪಿ.ಸಿ : ಮಾನ್ಯರವರಲ್ಲಿ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಶರಣಪ್ಪ ಪಿಎಸ್ಐ (ಅ.ವಿ) ಸುರಪೂರ ಪೊಲೀಸ ಠಾಣೆ, ಸರಕಾರಿ ತಪರ್ೆ ಫಿರ್ಯಾದಿ ನೀಡುವುದೆನೆೆಂದರೆ, ಇಂದು ದಿನಾಂಕ: 18/02/2021 ರಂದು 11 ಎ.ಎಂ ಸುಮಾರಿಗೆ ಹೆಚ್.ಸಿ-105 ರವರನ್ನು ಸಂಗಡ ಕರೆದುಕೊಂಡು ನಗರದಲ್ಲಿ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ 11-30 ಎ.ಎಮ್ ಸುಮಾರಿಗೆ ಸುರಪುರ ಪಟ್ಟಣದ ಹುಲಕಲಗುಡ್ಡ ಏರಿಯಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಎದುರುದಾರನು ರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ಯುತ್ತಾ, ಅಸಭ್ಯವಾಗಿ ವತರ್ಿಸುತ್ತಾ, ಕೈಯಲ್ಲಿ ಕಲ್ಲು ಹಿಡಿದುಕೊಂಡು ಇವತ್ತು ಧಮ್ಮಿದ್ದರೆ ನನ್ನ ಹತ್ತಿರ ಬನ್ನಿ ಅಂತಾ ಅನ್ನುತ್ತಾ, ಹೋಗಿ ಬರುವ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಾ ಏರಿಯಾದಲ್ಲಿ ಗುಂಡಾಗಿರಿ ವರ್ತನೆ ಪ್ರದಶರ್ಿಸಿ, ಏರಿಯಾದ ಜನರಿಗೆ ಕಿರಿಕಿರಿ ಮಾಡುತ್ತಿದ್ದು, ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಹುಲಕಲಗುಡ್ಡ ಏರಿಯಾದಲ್ಲಿ ಕಿರಿಕರಿ ಮಾಡಿ ಏರಿಯಾದ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ ಸದರಿಯವನನ್ನು ಸ್ಥಳದಲ್ಲಿಯೇ ವಶಕ್ಕೆ ತಗೆದುಕೊಂಡು ಠಾಣೆಗೆ ತಂದಿದ್ದು ಇರುತ್ತದೆ. ಸದರಿಯವನು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದ್ದಿದ್ದರಿಂದ ಅವನ ವಿರುದ್ಧ ಮುಂಜಕಾಗೃತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸುವ ಕುರಿತು ಸರಕಾರದ ತಪರ್ೆಯಾಗಿ ಠಾಣೆ ಪಿ.ಎ.ಆರ್ ನಂ. 03/2021 ಕಲಂ 110 (ಇ)&(ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿ ಬಂಧನ ಕ್ರಮ ಜರುಗಿಸಿದ್ದು, ಈ ವರದಿಯನ್ನು ನಿವೇಧಿಸಿಕೊಂಡಿದ್ದು ಇರುತ್ತದೆ.


ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ :- 12/2021 ಕಲಂ: 143, 147, 323, 354, 504, 506, ಸಂಗಡ 149 ಐಪಿಸಿ : ಇಂದು ದಿನಾಂಕ 18/02/2021 ರಂದು 5:30 ಪಿ.ಎಂ ಕ್ಕೆ ಶ್ರೀಮತಿ ಲಕ್ಷ್ಮೀ ಗಂಡ ಜುಮ್ಮಣ್ಣ ಮೇಟಿ ವ:25 ಉ:ಹೊಲಮನೆ ಕೆಲಸ ಜಾ:ಹಿಂದು ಕುರಬರ ಸಾ:ಯಣ್ಣಿವಡಗೇರಾ ಹಾ:ವ: ಬಲಶೆಟ್ಟಿಹಾಳ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಮಾವ ಬಸಪ್ಪ ನವರಿಗೆ ಾಯಬಣ್ಣ ಅಂತಾ ಒಬ್ಬ ತಮ್ಮನಿದ್ದ ಸಾಯಬಣ್ಣ ರವರಿಗೆ ಮತ್ತು ನಮಗೆ ಯಣ್ಣಿವಡಗೇರಾ ಸೀಮಾಂತರದ ಹೊಲ ಸವರ್ೆ ನಂ 73 ರಲ್ಲಿಯ 1 ಎಕರೆ 39 ಗುಂಟೆ ಜಮೀನಿನ ವಿಷಯದಲ್ಲಿ ತಕರಾರು ಇದ್ದು ಅವರಿಗೆ ಮತ್ತು ನಮಗೆ ಈ ಹೊಲದ ವಿಷಯವಾಗಿ ಕೊರ್ಟನಲ್ಲಿ ದಾವೆ ನಡೆದಿದ್ದು ಕೊರ್ಟನಲ್ಲಿ ವಿಚಾರಣೆಯಲ್ಲಿ ಇರುತ್ತದೆ. ನಾನು ಹಾಗೂ ನನ್ನ ಗಂಡ ಜುಮ್ಮಣ್ಣ ರವರು ದಿನಾಂಕ 16/02/2021 ರಂದು ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನಮ್ಮೂರ ಹಣಮಂತ ತಂದೆ ಸೋಮಶೇಖರ ಮೇಟಿ ರವರ ಟ್ರ್ಯಾಕ್ಟರ ತಗೆದುಕೊಂಡು ನಮ್ಮ ಹೊಲಕ್ಕೆ ಗಳೆ ಹೊಡೆಯಲು ಹೋದಾಗ ಎಣ್ಣಿ ವಡಗೇರಾ ಗ್ರಾಮದ ನಮ್ಮ ಮಾವನ ತಮ್ಮನಾದ ಸಾಯಬಣ್ಣ ತಂದೆ ಜುಮ್ಮಣ್ಣ, ಹಾಗೂ ಅವರ ಹೆಂಡತಿ ನೀಲಮ್ಮ ಗಂಡ ಸಾಯಬಣ್ಣ, ಹಾಗೂ ಅವರ ಮಗಳು ಬಸಮ್ಮ ಗಂಡ ಶರಣಪ್ಪ ಮತ್ತು ಅವರ ಸಂಬಂದಿಕರಾದ ಶರಣಪ್ಪ ತಂದೆ ಈರಪ್ಪ ಆಶ್ಯಾಳ, ಈರಪ್ಪ ತಂದೆ ಗದ್ದೆಪ್ಪ ಆಶ್ಯಾಳ, ಹಣಮಂತ ತಂದೆ ಈರಪ್ಪ ಆಶ್ಯಾಳ, ಪ್ರಭು ತಂದೆ ಈರಪ್ಪ ಆಶ್ಯಾಳ ರವರು ನಮ್ಮ ಹೊಲಕ್ಕೆ ಬಂದು ನಾನು ಮತ್ತು ನನ್ನ ಗಂಡ ಜುಮ್ಮಣ್ಣ ರವರು ಹೊಲದಲ್ಲಿ ಗಳೆ ಹೊಡೆಸುತ್ತಿದ್ದಾಗ ನಮಗೆ ಅವರಲ್ಲಿಯ ಸಾಯಬಣ್ಣ ಈತನು ಬೋಸುಡಿ ಮಕ್ಕಳೆ ಇದು ಯಾರ ಹೊಲ ಅಂತಾ ಗಳೆ ಹೊಡೆಸಲು ಬಂದಿರುವಿರ ಇಂದು ಅಂತಾ ಅವಾಚ್ಯ ಶಬ್ದಗಳಿಂದ ಬೈದನು ಆಗ ನಾನು ಸಾಯಬಣ್ಣ ರವರಿಗೆ ಇದು ನಮ್ಮ ಹೊಲ ಇದ್ದು ನಾವು ಗಳೆ ಹೊಡೆಸಲು ಬಂದಿರುವೆವು ಬಾಯಿ ಬಿಗಿಹಿಡಿದು ಮಾತನಾಡಿರಿ ಅಂತಾ ಅಂದೆನು ಅದಕ್ಕೆ ಅವರಲ್ಲಿಯ ನೀಲಮ್ಮ ಹಾಗೂ ಅವರ ಮಗಳು ಬಸಮ್ಮ ರವರು ನನಗೆ ಬೋಸುಡಿ ಸೂಳಿ ನಮಗ ಎದುರುಮಾತನಾಡುತ್ತಿಯಾ ಅಂತಾ ಅಂದು ನನ್ನೊಂದಿಗೆ ತೆಕ್ಕೆಕುಸ್ತಿಗೆ ಬಿದ್ದು ಅವರಲ್ಲಿಯ ನೀಲಮ್ಮಳು ನನ್ನ ತಲೆ ಕೂದಲು ಹಿಡಿದು ನನ್ನ ಕಪಾಳಕ್ಕೆ ಕೈಯಿಂದ ಹೊಡೆದಿದ್ದು ಬಸಮ್ಮಳು ಕಾಲಿನಿಂದ ನನ್ನ ಸೊಂಟಕ್ಕೆ ಒದಿಯಲಾರಂಬಿಸಿದರು ಅವರು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಳ್ಳಲು ಬಂದ ನನ್ನ ಗಂಡನಿಗೆ ಶರಣಪ್ಪನು ಬೋಸುಡಿ ಮಗನೆ ಬಿಡಿಸಿಕೊಳ್ಳಲು ಬರುತ್ತಿಯಾ ಅಂತಾ ಅಂದು ನನ್ನ ಗಂಡನೊಂದಿಗೆ ತೆಕ್ಕೆಕುಸ್ತಿಗೆ ಬಿದ್ದು ಕೈಯಿಂದ ನನ್ನ ಗಂಡನ ಕಪಾಳಕ್ಕೆ ಹೊಡೆದನು. ನಂತರ ಅವರಲ್ಲಿಯ ಪ್ರಭು ತಂದೆ ಈರಪ್ಪ ಆಶ್ಯಾಳ ಈತನು ನಮ್ಮ ಮಾವನ ಹೊಲದಲ್ಲಿ ಗಳೆಹೊಡಸಲು ಬಂದಿರುವೆಯಾ ಅಂತಾ ಅಂದು ನನ್ನ ಸೀರೆ ಹಿಡಿದು ಎಳೆದಾಡಿ ನನಗೆ ಅವಮಾನ ಮಾಡಿದ್ದು ಈರಪ್ಪ ಹಾಗೂ ಹಣಮಂತ ರವರು ನಮಗೆ ಈ ಬೊಸುಡಿ ಮಕ್ಕಳನ್ನು ಬಿಡಬ್ಯಾಡರಿ ಇನ್ನೊಮ್ಮೆ ಈ ಹೊಲಕ್ಕೆ ಬಂದರ ಇವರಿಗೆ ಖಲಾಸ ಮಾಡಿಬಿಡರಿ ಅಂತಾ ಜೀವದ ಬೆದರಿಕೆ ಹಾಕಿದ್ದು ಆಗ ನಾನು ಮತ್ತು ನನ್ನ ಗಂಡ ಜುಮ್ಮಣ್ಣರು ಚೀರಾಡಿದಾಗ ನಮ್ಮ ಹೊಲದಲ್ಲಿ ಟ್ರ್ಯಾಕ್ಟರದಲ್ಲಿ ಗಳೆಹೊಡೆಯುತ್ತಿದ್ದ ಹಣಮಂತ ತಂದೆ ಸೋಮಶೇಖರ ಮೇಟಿ ಈತನು ಬಂದು ಜಗಳಬಿಡಿಸಿದ್ದು ಇರುತ್ತದೆ. ಆಗ ನಾನು ಮತ್ತು ನನ್ನ ಗಂಡ ಇಬ್ಬರು ಬಲಶೆಟ್ಟಿಹಾಳಕ್ಕೆ ಹೋಗಿ ನಮ್ಮ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ಪಿಯರ್ಾದಿ ನೀಡಿದ್ದು ಇರುತ್ತದೆ ಈ ಘಟನೆಯಲ್ಲಿ ನನಗೆ ಅಷ್ಟೆನು ಪೆಟ್ಟಾಗಿರುವದಿಲ್ಲ ನಾನು ಉಪಚಾರ ಕುರಿತು ಆಸ್ಪತ್ರೆಗೆ ಹೋಗುವದಿಲ್ಲ ಅಂತಾ ಪಿಯರ್ಾದಿ ನೀಡಿದ್ದು ಇರುತ್ತದೆ. ನೀಡಿದ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 12/2021 ಕಲಂ 143,147,323,354,504,506,ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ :- 21/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 18/02/2021 ರಂದು 7-15 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಸವೆನೆಂದರೆ, ಇಂದು ದಿನಾಂಕ.18/02/2021 ರಂದು 6-00 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಲಾಡೇಸಗಲ್ಲಿ ಬೀಟ್ ಸಿಬ್ಬಂದಿ ಅಬ್ದುಲ ಬಾಷಾ ಪಿಸಿ-237 ರವರು ಬಂದು ಯಾದಗಿರಿಯ ಲಾಡೇಸಗಲ್ಲಿಯ ಹಳೆ ತಹಸೀಲ್ ಕಾಯರ್ಾಲಯದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಬಂದಿರುತ್ತದೆ ಅಂತಾ ಮಾಹಿತಿ ನೀಡಿದ್ದು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 7-00 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 7-15 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.21/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 23/2021 ಕಲಂ: 323, 354,504,506 ಐಪಿಸಿ : ಇಂದು ದಿನಾಂಕ 18.02.2021 ರಂದು 6.30 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ರೇಣುಕಾ ಗಂಡ ಸಿದ್ರಾಮ ಬಂಡಿ ವಯಾ|| 40 ಜಾ|| ಹಿಂದೂ ಹೊಲೆಯ ಉ|| ಕೂಲಿ ಸಾ|| ಹದನೂರ ತಾ|| ಸುರಪೂರ ಆದ ನಾನು ತಮ್ಮಲ್ಲಿ ಬರೆದುಕೊಡುವ ಫಿಯರ್ಾದಿ ಅಜರ್ಿ ಏನಂದರೆ, ದಿನಾಂಕ 04/02/2021 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನಾನು ಕಟ್ಟಿಗೆ ತರಲೆಂದು ಹದನೂರ ಸೀಮಾಂತರದ ಎಣ್ಣಿ ಹೊಲದ ಹತ್ತಿರ ಇರುವ ಹಳ್ಳಕ್ಕೆ ಹೋಗಿದ್ದು, ನಾನು ನನ್ನಷ್ಟಕ್ಕೆ ಕಟ್ಟಿಗೆ ಕಡೆಯುತ್ತಿದ್ದಾಗ ನಮ್ಮೂರ ನಮ್ಮ ಜನಾಂಗದ ಜಟ್ಟೆಪ್ಪ @ ಮುದಕಪ್ಪ ತಂದೆ ಚಂದಪ್ಪ ಬಂಡಿ ಈತನು ಏಕಾಏಕಿ ನನ್ನ ಹತ್ತಿರ ಬಂದು ನನ್ನ ಸೀರೆ ಹಿಡಿದು ಜಗ್ಗಾಡುತ್ತಿದ್ದಾಗ ನಾನು ಏಕೆ ಹೀಗೆ ಮಾಡುತ್ತಿ ಅಂತ ಅಂದಾಗ ಸೂಳೆ ನಿನ್ನ ಸೊಕ್ಕು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು, ನನ್ನ ಸೀರೆ ಹಾಗೂ ಕೂದಲು ಹಿಡಿದು ಎಳೆದಾಡುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊಲದಲ್ಲಿದ್ದ ನಿಂಗನಗೌಡ ತಂದೆ ಗೌಡಪ್ಪಗೌಡ ಮಾಲಿ ಪಾಟೀಲ ಸಾ|| ಹದನೂರ ಇವರು ಓಡಿ ಬಂದಾಗ ಸದರಿಯವನು ನನಗೆ ಅಷ್ಟಕ್ಕೆ ಬಿಟ್ಟು ಸೂಳೆ ಈ ವಿಷಯ ಯಾರ ಮುಂದಾದರು ಹೇಳಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದನು. ನಂತರ ನಾನು ಮನೆಗೆ ಬಂದು ನನ್ನ ಗಂಡನಿಗೆ ವಿಷಯ ತಿಳಿಸಿ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 18/2021 ಕಲಂ 323, 354, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ :- 09/2021 78 (3) ಕೆ.ಪಿ ಯಾಕ್ಟ : ದಿನಾಂಕ:18/02/2021 ರಂದು 17.35 ಪಿ.ಎಮ್ ಕ್ಕೆ, ಶ್ರೀ. ದೌಲತ್ ಎನ್.ಕೆ ಸಿಪಿಐ ಹುಣಸಗಿ ವೃತ್ತ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಮ್ಮ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:09/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ ನಂತರ ಸಿಪಿಐ ಸಾಹೇಬರು ರವರು ಸಾಯಂಕಾಲ 19.15 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 4320/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು,್ದ ಇರುತ್ತದೆ. ಆರೋಪಿತರ ಹೆಸರು 1) ಬಸಯ್ಯ ತಂದೆ ರುದ್ರಯ್ಯ ಬಾಚಿಮಟ್ಟಿ ವಯ:65 ವರ್ಷ ಜಾತಿ: ಹಿಂದೂ ಜಂಗಮ ಉ:ಮಟಕಾ ಬರೆಯುವುದು ಸಾ:ಹುಣಸಗಿ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.

Last Updated: 19-02-2021 10:31 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080