ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-02-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 27/2022 ಕಲಂ 420 ಐಪಿಸಿ : ಇಂದು ದಿನಾಂಕ:18/02/2022 ರಂದು 12:30 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ.ಅನಂತಕುಮಾರ ತಂದೆ ಗೌತಮ ದೋಖಾ ಜೈನ್, ವಯ:36 ಜಾ; ಜೈನ್ ಉ; ಬಂಗಾರದ ವ್ಯಾಪಾರ ಸಾ|| ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆದರೆ, ನಾನು ಯಾದಗಿರಿ ನಗರದ ಚಕ್ಕರಕಟ್ಟ ಹತ್ತಿರ ಗೌತಮ್ ಜುವೆಲರ್ಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ:17/02/2022 ರಂದು ಮಧ್ಯಾಹ್ನ 1:34 ರಿಂದ 1:50 ಗಂಟೆಯ ಸುಮಾರಿಗೆ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ನಮ್ಮ ಅಂಗಡಿಗೆ ಬಂದು ಕನ್ನಡ ಮತ್ತು ತೆಲುಗಿನಲ್ಲಿ ಮಾತನಾಡುತ್ತಾ ಮೂರು ಜನರು ಬಂಗಾರದ ಆಭರಣಗಳನ್ನು ಖರೀಧಿಸುತ್ತೇವೆ ಎಂದು ಹೇಳಿದ್ದು, ನಾನು ಅವರಿಗೆ ನಮ್ಮ ಅಂಗಡಿಯಲ್ಲಿರುವ ಬಂಗಾರದ ಆಭರಣಗಳನ್ನು ತೋರಿಸಿದ್ದು, ಅವರು 1 ತಾಳಿಚೈನ್, 2 ನೆಕ್ಲೆಸ್, 1 ಜುಮ್ಕಿ ಗಳನ್ನು ಖರೀದಿಸಿದ್ದು, ನಾನು ಅವುಗಳನ್ನು ತೂಕ ಮಾಡಿದಾಗ ಒಟ್ಟು 8 ತೊಲೆ ಆಗಿರುತ್ತವೆ. ಅವರು ಮೇಲ್ಕಂಡ ಆಭರಣಗಳನ್ನು ತೆಗೆದುಕೊಂಡು ಬಿಲ್ ಮಾಡುವಂತೆ ನನಗೆ ಹೇಳಿದಾಗ ನಾನು ಬಿಲ್ ಮಾಡಿ ರೂ.400000/- ಆಗಿರುತ್ತದೆ ಅಂತಾ ಅವರಿಗೆ ಹೇಳಿದ್ದು, ಅವರು ಬಿಲ್ ತೆಗೆದುಕೊಂಡು ಹಣ ಎಣಿಸುತ್ತಿರುವಾಗ ನಾನು ಅಂಗಡಿಯಲ್ಲಿ ಬಹಳ ಜನ ಗ್ರಾಹಕರು ಇದ್ದರಿಂದ ಬೇರೆ ಗ್ರಾಹಕರಿಗೆ ವಿಚಾರಿಸಿ ನೋಡುವಷ್ಟರಲ್ಲಿ ಆ ಮೂರು ಜನರು ನಾನು ಕೊಟ್ಟ ಬಿಲ್ಲನ್ನು ಅಲ್ಲಿಯೇ ಬಿಟ್ಟು ಹಣ ಕೊಡದೇ 8 ತೊಲೆಯ ಬಂಗಾರದ ಆಭರಣಗಳಾದ 1 ತಾಳಿಚೈನ್, 2 ನೆಕ್ಲೆಸ್, 1 ಜುಮ್ಕಿ ಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿರುತ್ತಾರೆ. ಕಾರಣ ನಮ್ಮ ಅಂಗಡಿಯಗೆ ಬಂಗಾರ ಖರೀದಿಸುವ ನೆಪದಲ್ಲಿ ಬಂದು ಮೋಸದಿಂದ ಅಂದಾಜು ಕಿಮ್ಮತ್ತು ರೂ.400000/- ಬೆಲೆಯ 8 ತೊಲೆಯ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋದ ಮೂರು ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನಮ್ಮ ಬಂಗಾರವನ್ನು ಮರಳಿ ಕೊಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.27/2022 ಕಲಂ. 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 26/2022 ಕಲಂ: 78(3) ಕೆ.ಪಿ.ಆಕ್ಟ್ 1963 : ದಿನಾಂಕ: 18/02/2022 ರಂದು 5-30 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:18/02/2022 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ವಡಗೇರಾ ಠಾಣೆ ಪೊಲೀಸರ ಕರೆಯ ಮೇರೆಗೆ ಠಾಣೆಗೆ ಬಂದು ಹಾಜರಾದೆವು. ಠಾಣೆಯಲ್ಲಿ ಪೊಲೀಸ ಅಧಿಕಾರಿಗಳಾದ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ರಾಜಕುಮಾರ ಹೆಚ್ಸಿ 179, ಮತ್ತು ಬಾಬುರಾಯ ಪಿಸಿ 101, ವೇಣುಗೋಪಾಲ ಪಿಸಿ 36 ವಡಗೇರಾ ಠಾಣೆ ರವರು ಇದ್ದು, ಪಿ.ಎಸ್.ಐ ಸಾಹೇಬರು ನಮಗೆ ಮತ್ತು ತಮ್ಮ ಸಿಬ್ಬಂದಿಯವರಿಗೆ ಹೇಳಿದ್ದೆನಂದರೆ, ಮಾನ್ಯ ಡಿ.ಎಸ್.ಪಿ ಸಾಹೇಬರು ಯಾದಗಿರಿ ಮತ್ತು ಸಿ.ಪಿ.ಐ. ಯಾದಗಿರಿ ವೃತ್ತ ರವರ ಮಾರ್ಗದರ್ಶನದಲ್ಲಿ ತುಮಕೂರು ಗ್ರಾಮದ ಡೋಂಗ್ರಿ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ನಾವು ಅಲ್ಲಿಗೆ ಹೋಗಿ ದಾಳಿ ಮಾಡಬೇಕಾಗಿದೆ ದಾಳಿ ಸಮಯದಲ್ಲಿ ಪಂಚರಾಗಿ ಹಾಜರಿದ್ದು ಸಹಕರಿಸಲು ಕೇಳಿಕೊಂಡ ಮೇರಗೆ ನಾವು ಪಂಚರಾಗಲು ಒಪ್ಪಿಕೊಂಡೆವು. ನಂತರ ಈ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂ: ಕೆಎ-33 ಜಿ-0164 ನೇದ್ದರಲ್ಲಿ ಕುಳಿತು ವಡಗೇರಾ ಠಾಣೆಯಿಂದ ಸಮಯ 3-00 ಪಿಎಮ್ ಕ್ಕೆ ಹೊರಟು ಸಮಯ 3-30 ಪಿಎಮ್ ಸುಮಾರಿಗೆ ತುಮಕೂರು ಗ್ರಾಮ ತಲುಪಿ ಸಕರ್ಾರಿ ಆಸ್ಪತ್ರೆ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಡೋಂಗ್ರಿ ಹೊಟೇಲ್ ಮುಂದಗಡೆ ಸಾರ್ವಜನಿಕ ಕಟ್ಟೆ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 3-45 ಪಿಎಮ್ ಕ್ಕೆ ಪಿ.ಎಸ್.ಐ ಸಾಹೇಬರು ಮತ್ತು ಅವರ ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಸಂತೋಷ ತಂದೆ ತಿಮ್ಮಣ್ಣ ಕೆರೆರ, ವ:45, ಜಾ:ಕಬ್ಬಲಿಗ, ಉ:ಕೂಲಿ ಸಾ:ತುಮಕೂರು ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 2450/-ರೂ. 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 2450/-. ರೂ. ನಗದು ಹಣ ಮತ್ತು ಮುದ್ದೆ ಮಾಲನ್ನು ವಶಪಡಿಸಿಕೊಂಡು ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಮ್ಮ ತಾಭಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ವಶಕ್ಕೆ ಪಡೆದುಕೊಂಡ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 26/2022 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 22/2022 ಕಲಂ ಮಹಿಳಾ ಕಾಣೆ : ಈ ವಿಷಯಕ್ಕೆ ಸಂಭಂದಿಸಿದಂತೆ ನಾನು ವೆಂಕಟೇಶ ತಂದೆ ಕೃಷ್ಟಪ್ಪ ಪೂಜಾರಿ ವಯಸ್ಸು 40 ವರ್ಷ ಉ: ಒಕ್ಕಲತನ ಸಾ: ಮುದ್ನಾಳ ಇದ್ದು ಕುಮಾರಿ ಈಶಮ ತಂದೆ ವೆಂಕಟೇಶ ವಯ:19 ವರ್ಷ ಎರಡು ದಿನ ಮೊದಲ;ಉ ಒಂದು ನೆಂಟಸತನದ ಬಗ್ಗೆ ನಮ್ಮ ಮನೆಯಲ್ಲಿ ಮಾತನಾಡಿದೇವು ಬಿಗರು ಬರವ ವಿಚಾರ ಕೂಡ ನಮ್ಮ ಮಗಳ ಜೊತೆಯಲ್ಲಿ ಮಾತನಾಡಿದ್ದೇವೆ. ಆದರೆ ದಿನಾಂಕ 17/02/2022 ರಂದು ರಾತ್ರಿ 09:00 ಗಂಟೆಗೆ ಎಲ್ಲರು ಜೊತೆಯಲ್ಲಿ ಊಟ ಮಾಡಿರುತ್ತೆವೆ. ಆದರೆ ರಾತ್ರಿ 11:30 ಕ್ಕೆ ನಮ್ಮ ಮಗಳು ಕಾಣೆಯಾಗಿರುತ್ತಾಳೆ.

 

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 36/2022 ಕಲಂ: 143, 147, 323, 354, 504, 506 ಸಂ 149 ಐಪಿಸಿ : ಇಂದು ದಿನಾಂಕ 18.02.2022 ರಂದು 5 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಕಾಂತಮ್ಮ ಗಂಡ ಗುತ್ತಪ್ಪ ಹರಿಜನ ವ|| 65ವರ್ಷ ಜಾ|| ಹಿಂದೂ ಹೊಲೆಯ ಉ|| ಕೂಲಿ ಸಾ|| ಯಕ್ತಾಪೂರ ತಾ|| ಸುರಪೂರ ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನನ್ನ ಗಂಡ ಗುತ್ತಪ್ಪ ಹಾಗು ನಮ್ಮ ಜನಾಂಗದ ನಿಂಗಪ್ಪ ತಂದೆ ಶಿವಲಿಂಗಪ್ಪ ಹರಿಜನ ಇವರ ತಂದೆಯಾದ ಶಿವಲಿಂಗಪ್ಪ ಇವರು ಖಾಸ ಅಣ್ಣ ತಮ್ಮಂದಿರಿದ್ದು ಅವರು ಒಟ್ಟು ಐದು ಜನ ಅಣ್ಣತಮ್ಮಂದಿರಿದ್ದು ಅವರಲ್ಲಿ ಮೂರು ಜನರು ತಮ್ಮ ಪಾಲಿಗೆ ಬಂದ ಆಸ್ತಿ ತೆಗೆದುಕೊಂಡು ಬೇರೆ ಬೇರೆಯಾಗಿದ್ದು ಆದರೆ ನನ್ನ ಗಂಡನ ತಮ್ಮನಾದ ಶಿವಲಿಂಗಪ್ಪನ ಹೆಸರಿನಲ್ಲಿದ್ದ ಆಸ್ತಿಯನ್ನು ನಮ್ಮ ಸಂಬಂದಿಯಾದ ನಿಂಗಪ್ಪ ಈತನು ನಮ್ಮ ಹೆಸರಿಗೆ ಮಾಡದೇ ಸುಮಾರು ದಿನಗಳಿಂದ ಸತಾಯುಸುತ್ತಾ ಬಂದಿರುತ್ತಾನೆ. ಆದರೆ ನನ್ನ ಗಂಡನ ಪಾಲಿಗೆ ಬರಬೇಕಾದ ಆಸ್ತಿ ಸವರ್ೆ ನಂಬರ 34 ರಲ್ಲಿ ನನಗೆ 6 ಎಕರೆ ಹೊಲ ಬರುತ್ತಿದ್ದು ಆದರೆ ನನ್ನ ಗಂಡನ ತಮ್ಮನ ಮಗನಾದ ನಿಂಗಪ್ಪ ಈತನು ಆ ಹೊಲ ನಮ್ಮ ಹೆಸರಿಗೆ ಮಾಡಿಕೊಡುತ್ತೇನೆ ಅಂತ ದಿ ಮುಂದೂಡುತ್ತಾ ಬಂದಿರುತ್ತಾನೆ. ಆದರೆ ಸದರಿ ಹೊಲವನ್ನು ಸುಮಾರು 15 ವರ್ಷಗಳಿಂದ ನಾನೇ ಉಣ್ಣುತ್ತಾ ಬಂದಿದ್ದು ಸದ್ಯ ನನ್ನ ಕಬ್ಜಾದಲ್ಲಿರುತ್ತದೆ. ಹೀಗಿದ್ದು ಇಂದು ದಿನಾಂಕ 18.02.2022 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನಾನು ನನ್ನ ಕಬ್ಜಾದಲ್ಲಿರುವ ಹೊಲ ಸವರ್ೆ ನಂಬರ 34 ರಲ್ಲಿ ನಮ್ಮ ಸಂಬಂದಿಯವರಾದ 1] ನಿಂಗಪ್ಪ ತಂದೆ ಶಿವಲಿಂಗಪ್ಪ ಹರಿಜನ 2] ರವಿ ತಂದೆ ನಿಂಗಪ್ಪ ಹರಿಜನ 3] ಸುನಿತಾ ಗಂಡ ನಿಂಗಪ್ಪ ಹರಿಜನ 4] ಬಸಪ್ಪ ತಂದೆ ಶಿವಲಿಂಗಪ್ಪ ಹರಿಜನ 5] ಗಂಗವ್ವ ಗಮಡ ಬಸಪ್ಪ ಹರಿಜನ ಈ ಐದು ಜನರು ನಮ್ಮ ಹೊಲದಲ್ಲಿ ಬಂದವರೇ ಹೊಲದ ಬಾಂದಾರಿಯಲ್ಲಿರುವ ಗಿಡಗಳನ್ನು ಕಡಿದು ಹಾಕುತ್ತಿದ್ದು ಆಗ ನಾನು ಹೋಗಿ ನನ್ನ ಕಬ್ಜಾದಲ್ಲಿರುವ ಹೊಲದಲ್ಲಿ ನೀವು ಏನು ಮಾಡುತ್ತೀರಿ ಅಂತ ಕೇಳಿದಾಗ ಎಲ್ಲರೂ ಈ ಸೂಳೆಯ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯ ನಿಂಗಪ್ಪ ತಂದೆ ಶಿವಲಿಂಗಪ್ಪ ಈತನು ನನ್ನ ಸೀರೆ ಹಾಗು ಕೂದಲು ಹೊಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾನೆ. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ರೋಡಿನಲ್ಲಿ ಹೊರಟಿದ್ದು ಬಸವರಾಜ ತಂದೆ ನಿಂಗಪ್ಪ ಕಟ್ಟಿಮನಿ ಹಾಗು ಬಸಯ್ಯಸ್ವಾಮಿ ಯಕ್ತಾಪೂರ ಇವರು ಬಮದು ಬಿಡಿಸಿಕೊಂಡರು. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ನೀನು ಹೊಲ ಬೇಕು ಅಂತ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದನು. ಕಾರಣ ನನ್ನ ಕಬ್ಜಾದಲ್ಲಿರುವ ನನ್ನ ಗಮಡನಿಗೆ ಬರಬೇಕಾದ ಆಸ್ತಿ ಕೇಳಿದ್ದಕ್ಕೆ ನನ್ನ ಮೇಲೆ ಹಗೆತನ ಸಾಧಿಸಿ ನನಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಭಯ ಹಾಕಿದ ಮೇಲ್ಕಾಣಿಸಿದ 05 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 36/2022 ಕಲಂ 143,147,323,354,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 18/2022 ಕಲಂ 279, 338, 304(ಎ) ಐ.ಪಿ.ಸಿ : ಫಿಯರ್ಾದಿಯುತನ್ನತಂದೆಆರೋಪಿ ನಾಗಪ್ಪ ಹವಾಲ್ದಾರಈತನ ಮೂರುಗಾಲಿಯ ಮೋಟರ್ ಸೈಕಲ್ನಂ:ಕೆಎ-33, ಟಿಎಸ್-0021 ನೇದ್ದರ ಮೇಲೆ ಕುಳಿತು ನಗನೂರ ದಿಂದಯಾದಗಿರಿಯಕಡೆಗೆದಿನಾಂಕ:12/02/2022 ರಂದು ಮುಂಜಾನೆ 11 ಗಂಟೆ ಸುಮಾರಿಗೆ ಗೋಗಿ-ಭೀ.ಗುಡಿರೋಡಿನ ಮೇಲೆ ಭೀ.ಗುಡಿಯಯಂಕಪ್ಪಈತನ ಪಂಚರ್ಗ್ಯಾರೇಜ ಮುಂದೆ ಹೊರಟಾಗಆರೋಪಿತನುತನ್ನ ಮೋಟರ್ ಸೈಕಲನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಮೂರುಗಾಲಿಯ ಮೋಟರ್ ಸೈಕಲ್ಆರೋಪಿತನ ನಿಯಂತ್ರಣತಪ್ಪಿರಸ್ತೆಯ ಮೇಲೆ ಸ್ಕಿಡ್ ಆಗಿ ಬಿದ್ದುಅಪಘಾತವಾಗಿರುತ್ತದೆ. ಸದರಿಅಪಘಾತದಲ್ಲಿಆರೋಪಿತನ ಬಲ ಮೆಲಕಿಗೆ ಭಾರಿರಕ್ತಗಾಯವಾಗಿದ್ದು, ತಲೆಗೆ ಭಾರಿ ಒಳಪೆಟ್ಟಾಗಿದ್ದರಿಂದ ಪ್ರಜ್ಞೆತಪ್ಪಿರುತ್ತದೆ. ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲ. ಮುಂದಿನ ಕಾನೂನು ಕ್ರಮಜರುಗಿಸುವಂತೆದೂರು ನೀಡಿದ್ದರಿಂದಗುನ್ನೆ ನಂ:18/2022 ಕಲಂ 279, 338 ಐಪಿಸಿ ಅಡಿಯಲ್ಲಿ ಪ್ರಕರಣದಾಖಲಾಗಿರುತ್ತದೆ. ಅಪಘಾತದಲ್ಲಿಗಾಯಗೊಂಡಆರೋಪಿ ನಾಗಪ್ಪಈತನುಜಿಮ್ಸ್ ಕಲಬುರಗಿಯಲ್ಲಿಉಪಚಾರ ಪಡೆಯುತ್ತಿದ್ದಾಗಉಪಚಾರ ಫಲಿಸದೆಇಂದು ದಿನಾಂಕ 18/02/2022 ರಂದು 5.20 ಎ.ಎಮ್. ಕ್ಕೆ ಮೃತಪಟ್ಟಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಅಳವಡಿಸಿಕೊಳ್ಳಲಾಗಿದೆ ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆಅಂತ ವಿನಂತಿ.

 

ಹುಣಸಗಿ ಪೊಲೀಸ್ ಠಾಣೆ :-
ಗುನ್ನೆ ನಂ: ಕಲಂ12/2022 279, 337, 338, ಐಪಿಸಿ : ದಿನಾಂಕ:17/02/2022 ರಂದು ಮದ್ಯಾಹ್ನ 12.40 ಗಂಟೆಯ ಸುಮಾರಿಗೆ ಗಾಯಾಳು ಕು.ಹಣಮವ್ವ ಇವಳು ತಾನು ಓದುವ ಶಾಲೆಯಲ್ಲಿ ಯಾವುದೋ ಕಾರ್ಯಕ್ರಮ ಇದ್ದುದರಿಂದ ಸೀರೆ ಉಟ್ಟುಕೊಂಡು ತಯಾರಾಗಿ ಕಾರ್ಯಕ್ರಮಕ್ಕೆ ಹೋಗುವಾಗ, ಕಾಮನಟಗಿಯ ದುಗರ್ಾದೇವಿ ಗುಡಿಗೆ ನಮಸ್ಕಾರ್ ಮಾಡಿ, ಶಾಲೆಗೆ ಹೋಗಲು ತನ್ನ ಗೆಳತಿಯರೊಂದಿಗೆ ದುಗರ್ಾದೇವಿ ಗುಡಿಯ ಹತ್ತಿರ ರಸ್ತೆಯ ಮೇಲೆ ಹೊರಟಾಗ ಆರೋಪಿತನು ತನ್ನ ಕಾರ್ ನಂ:ಕೆಎ-25 ಎನ್-4859 ನೇದ್ದನ್ನು ಹುಣಸಗಿ ಕಡೆಯಿಂದ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು ಕು.ಹಣಮವ್ವಳಿಗೆ ಹಿಂದಿನಿಂದ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಗಾಯಾಳು ಕೆಳಗೆ ಬಿದ್ದಿದ್ದು, ತಲೆಗೆ ಭಾರಿ ರಕ್ತಗಾಯವಾಗಿದ್ದು & ಎರಡೂ ಮೊಣಕಾಲಿಗೆ ತರಚಿದ ಗಾಯಗಳಾದ ಬಗ್ಗೆ ಅಪರಾಧ.

 


ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನೆ ಸಂಖ್ಯೆ 27/2022 ಕಲಂ 323, 354, 504, 506 ಐಪಿಸಿ : ಇಂದು ದಿನಾಂಕ 18.02.2022 ರಂದು ರಾತ್ರಿ 8 ಗಂಟೆಗೆ ಮದಿನಾಬೇಗಂ ಗಂಡ ಖಾಜಾಹುಸೇನ್ ವಯಾ|| 50 ವರ್ಷ, ಜಾ|| ಮುಸ್ಲಿಂ, ಉ|| ಒಕ್ಕಲುತನ, ಸಾ|| ವಂಕಸಂಬ್ರ ಗ್ರಾಮ ತಾ|| ಗುರಮಿಠಕಲ್ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 16-02-2022 ರಂದು ಮಧ್ಯಾಹ್ನ 2-30 ಕ್ಕೆ ನಾನು ಮತ್ತು ನನ್ನ ಮಗನಾದ ಹಬೀದ್ ತಂದೆ ಖಾಜಾಹುಸೇನ್ ಇಬ್ಬರು ಕೂಡಿಕೊಂಡು ನಮ್ಮ ಹೊಲದಲ್ಲಿರುವ ಹುಣಸೆ ಮರದ ಹಣ್ಣನ್ನು ಆರಿಸಲು ಹೋಗಿದ್ದು ನನ್ನ ಮಗ ಹುಣಸೆ ಮರದ ಮೇಲೆ ಇದ್ದನು, ನಾನು ಮರದ ಕೇಳಗೆ ಬಿದ್ದ ಹುಣಸೆ ಹಣ್ಣನ್ನು ಆರಿಸುತ್ತಿದೆ. ಅದೇ ಸಮಯಕ್ಕೆ ನನ್ನ ಹಿಂದಿನಿಂದ ಬಂದ ನನ್ನ ಭಾವನಾದ ಪೀರಖಾನ್ ತಂದೆ ಮಹಿಬೂಬು ಖಾನ್ ಪಟ್ನಂ ರವರು ಏಕಾಏಕಿ ನನ್ನ ಹತ್ತಿರ ಬಂದು ಸೂಳೆ ಮಗಳೇ ಈ ಹುಣಸೆ ಹಣ್ಣು ಮರ ಯಾರಪ್ಪಂದು ಎಂದು ಅವಚ್ಚ ಶಬ್ದಗಳಿಂದ ಬೈಯುತ್ತಾ ನನ್ನ ಹತ್ತಿರಕ್ಕೆ ಬಂದು ನನ್ನ ಸೀರೆಯ ಸೇರಗನ್ನು ಹಿಡಿದು ಎಳೆದಾಡಿದನು. ಮತ್ತು ನನ್ನ ಬಲಗೈಯನ್ನು ಜೋರಾಗಿ ತಿರುಗಿಸಿ ಕೇಳಗೆ ತಳ್ಳಿದನು ಮತ್ತು ಕಾಲಿನಿಂದ ಹೊಟ್ಟೆಯ ಭಾಗಕ್ಕೆ ಒದ್ದನು. ಮತ್ತು ಕೈಯಿಂದ ಎದೆಯ ಮತ್ತು ಬೆನ್ನಿನ ಭಾಗಕ್ಕೆ ಹೊಡೆದನು. ನಂತರ ನನ್ನ ಕೂದಲನ್ನು ಹಿಡಿದು ಜಗ್ಗಾಡಿದನು. ನಾನು ನೋವಿನಿಂದ ಕಿರುಚಾಡಿದ್ದನ್ನು ನೋಡಿ ನನ್ನ ಮಗ ಹುಣಸೆ ಮರದಿಂದ ಕೆಳಗೆ ಇಳಿದು ಬಂದು ನನ್ನನ್ನು ಬಿಡಿಸಿಕೊಂಡನು. ಪೀರಖಾನನು ಇನ್ನೂಂದು ಸಲ ನಮ್ಮ ಹುಣಸೆ ಮರದ ಕಡೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬೀಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದನು. ಅದೇ ದಿನ ಸುಮಾರು 4-30 ಕ್ಕೆ ಮನೆಗೆ ಬಂದು ನಾನು ಮತ್ತು ನನ್ನ ಮಗ ಪಕ್ಕದ ಊರಾದ ಬದ್ದೇಪಲ್ಲಿಯಲ್ಲಿ ನನಗೆ ಆದ ಓಳ ಪೆಟ್ಟಿಗೆ ಚಿಕಿತ್ಸೆ ಪಡೆದುಕೊಂಡು ಬಂದೆವು.
ಅದೇ ರಾತ್ರಿ ನಾನು ನನ್ನ ಕುಟುಂಬದವರಿಗೆ ವಿಷಯವನ್ನು ತಿಳಿಸಿದೆ. ಪೀರಖಾನ್ ತಂದೆ ಮಹಿಬೂಬ್ ಖಾನ್ ಪಟ್ನಂ ರವರು ನನಗೆ ಹೊಡೆಬಡೆ ಮಾಡಿ ಜೀವಬೆದರಿಕೆ ಹಾಕಿರುವುದರಿಂದ ಅವರ ಮೇಲೆ ಕಾನುನೂ ಕ್ರಮವನ್ನು ಕೈಗೊಳ್ಳಬೇಕಾಗಿ ತಮ್ಮಲ್ಲಿ ವಿನಂತಿ. ನಾನು ಮನೆಯಲ್ಲಿ ಈ ವಿಷಯವನ್ನು ಚಚರ್ಿಸಿ ಇಂದು ದೂರು ಕೊಡಲು ಬಂದಿದ್ದೇನೆ. ಅಂತಾ ಆಪಾದನೆ

ಇತ್ತೀಚಿನ ನವೀಕರಣ​ : 19-02-2022 10:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080