Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/03/2021

ಯಾದಗಿರ ಸಂಚಾರಿ ಪೊಲೀಸ್ ಠಾಣೆ:- 14/2021 ಕಲಂ 279, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 18/03/2021 ರಂದು 7-30 ಪಿ.ಎಂ.ದ ಸುಮಾರಿಗೆ ಯಾದಗಿರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಅಲ್ಲಿಪುರ ಗೇಟ್ ಹತ್ತಿರ ಮುಖ್ಯ ರಸ್ತೆ ಮೇಲೆ ಈ ಕೇಸಿನ ಮೃತ ಲಕ್ಷ್ಮಣ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-05, ಇಇ-8111 ನೇದ್ದನ್ನು ನಡೆಸಿಕೊಂಡು ಅಲ್ಲಿಪುರ ಕಡೆಯಿಂದ ಯಾದಗಿರಿಗೆ ಬರುವಾಗ ಮಾರ್ಗ ಮದ್ಯೆ ಅಲ್ಲಿಪುರ ಗೇಟ್ ಹತ್ತಿರ ಯಾದಗಿರಿ ಕಡೆಯಿಂದ ವಾಡಿ ಕಡೆಗೆ ಹೊರಟಿದ್ದ ಒಂದು ಕ್ರೂಜರ್ ಜೀಪ್ ನಂಬರ ಕೆಎ-36, 5994 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೇದ್ದಕ್ಕೆ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಮೊಟಾರು ಸೈಕಲ್ ಸವಾರ ಲಕ್ಷ್ಮಣ ಈತನಿಗೆ ಸದರಿ ಅಪಘಾತದಲ್ಲಿ ಗಂಬೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಪಘಾತ ಪಡಿಸಿದ ಕ್ರೂಜರ್ ಚಾಲಕನು ತನ್ನ ವಾಹನವನ್ನು ಘಟನಾ ಸ್ಥಳದಿಂದ ಸ್ವಲ್ಪ ದೂರ ನಿಲ್ಲಿಸಿ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ ಈ ಬಗ್ಗೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 14/2021 ಕಲಂ 279, 304(ಎ) ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ:- 45/2021 ಕಲಂ. 279, 338, ಐಪಿಸಿ : ಇಂದು ದಿನಾಂಕ. 18.03.2021 ರಂದು ಮಧ್ಯಾಹ್ನ 1-30 ಗಂಟೆಗೆ ಶ್ರೀ ಸುನೀಲಕುಮಾರ ತಂದೆ ಯಲ್ಲಪ್ಪ ಬೋಯಿನ್ ಸಾ|| ಬಳಿಚಕ್ರ ಇವರು ಠಾಣೆಗೆ ನೀಡಿದ ದೂರು ಸಾರಾಂಶವೇನೆಂದರೆ, ದಿನಾಂಕ 11.03.2021 ರಂದು ಬೆಳಿಗ್ಗೆ 11.30 ಗಂಟೆಗೆ ದೂರುದಾರ ತನ್ನ ಮಗನ ಕೈಹಿಡಿದುಕೊಂಡು ಬಳಿಚಕ್ರ ಗ್ರಾಮದ ಹಾಸ್ಟೇಲ ಹತ್ತಿರದ ಹೈವೆ ರೋಡಿನ ಮೇಲೆ ಹೊರಟಿದ್ದಾಗ ಯಾದಗಿರಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಬಂದ ಕಾರ ನಂ. ಕೆ.ಎ-33, ಎಮ್-5512 ನೇದ್ದರ ಚಾಲಕ ದೂರುದಾರನ ಮಗ ಸವರ್ೋತ್ತಮನಿಗೆ ಡಿಕ್ಕಿಪಡಿಸಿದ್ದರಿಂದ ರೋಡಿನ ಮೇಲೆ ಬಿದ್ದು ಎಡಗಾಲು ಮೂಳೆ ಮುರಿದಂತಾಗಿದ್ದು, ಎಡಪಾದ ಮುಂದೆ ಭಾರಿ ರಕ್ತಗಾಯವಾಗಿರುತ್ತದೆ. ಸದರಿ ಕಾರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ದೂರು ಸಾರಾಂಶ ಇರುತ್ತದೆ.


ಗೋಗಿ ಪೊಲೀಸ್ ಠಾಣೆ:- 21/2021 ಕಲಂ: 363 ಸಂಗಡ 34 ಐಪಿಸಿ : ಇಂದು ದಿನಾಂಕ: 18/03/2021 ರಂದು 2-30 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀ ಭೀಮರಾಯ ತಂದೆ ಮರೆಪ್ಪ ಬಿರಾದಾರ ಸಾ|| ವನದುಗರ್ಾ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮ್ಮ ತಂದೆ-ತಾಯಿಗೆ ನಾವು ಮೂರು ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇದ್ದು, ನಮ್ಮ ಹಿರಿಯ ಅಣ್ಣ ಹಣಮಂತ ತಂ: ಮರೆಪ್ಪ ಬಿರಾದಾರ ಹಾಗೂ ನನ್ನ ತಂಗಿ ವಿಜಯಲಕ್ಷ್ಮೀ ಇವರಿಗೆ ಮದುವೆಯಾಗಿದ್ದು, ನನ್ನ ತಂಗಿಗೆ ಟಿ.ಬೊಮ್ಮನಳ್ಳಿ ಗ್ರಾಮದ ತಿರುಪತಿನಾಯಕ ಪ್ಯಾಪ್ಲಿ ಇತನೊಂದಿಗೆ ಕೊಟ್ಟು ಮದುವೆ ಮಾಡಿದ್ದು, ಗಂಡನ ಮನೆಯಲ್ಲಿ ಇರುತ್ತಾಳೆ. ಮನೆಯಲ್ಲಿ ನಾನು ನಮ್ಮ ತಂದೆ ಮರೆಪ್ಪ ಬಿರಾದಾರ, ತಾಯಿ ಹುಲಗಮ್ಮ ಬಿರಾದಾರ, ನನ್ನ ಅಣ್ಣ ಹಣಮಂತ ಬಿರಾದಾರ, ನಮ್ಮ ಅತ್ತಿಗೆ ಸರಸ್ವತಿ, ನನ್ನ ತಮ್ಮ ಹೊನ್ನಪ್ಪ ಬಿರಾದಾರ ಇರುತ್ತೇವೆ. ಹೀಗಿದ್ದು, ದಿನಾಂಕ: 15/03/2021 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ನನ್ನ ತಮ್ಮನಾದ ಹೊನ್ನಪ್ಪ ತಂದೆ ಮರೆಪ್ಪ ಬಿರಾದಾರ ವಯ|| 29 ವರ್ಷ ಈತನು ಕೆಲಸ ಇದೆ ಅಂತಾ ಹೇಳಿ ಮನೆಯಿಂದ ಶಹಾಪೂರಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದನು. ನಂತರ ಸಾಯಂಕಾಲವಾದರೂ ಕೂಡಾ ಮನೆಗೆ ಬರಲಿಲ್ಲಾ. ನಾವು ಗೆಳೆಯರ ಹತ್ತಿರ ಹೋಗಿರಬಹುದು ಅಂತಾ ಸುಮ್ಮಗಿನಾದೇವು. ದಿನಾಂಕ: 16/03/2021 ರಂದು ಮುಂಜಾನೆ 9-15 ಗಂಟೆ ಸುಮಾರಿಗೆ, ನಮ್ಮ ದೂರದ ಸಂಬಂಧಿಯಾದ ಮೂಡಬೋಳ ಗ್ರಾಮದ ಜಗನ್ನಾಥ ತಂದೆ ರಾಮಯ್ಯ ತಟ್ಟಿಮನಿ ಇವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ, ' ನಿನ್ನ ತಮ್ಮನಾದ ಹೊನ್ನಪ್ಪ ಬಿರಾದಾರ ಈತನು ಮೊಬೈಲ್ ನಂ: 9632424863 ದಿಂದ ನನ್ನ ಮೊಬೈಲ್ ನಂ: 9880665687 ನೇದ್ದಕ್ಕೆ ಪೋನ್ ಮಾಡಿ ನನಗೆ ಕಾಶಿನಾಥ ಸಾ|| ಹಲಕಟ್ಟಿ, ವಿಜಯಕುಮಾರ ಸಾ|| ನಾಲವಾರ ಇವರು ಅಪಹರಣ ಮಾಡಿರುತ್ತಾರೆ ಅಂತಾ ತಿಳಿಸಿರುತ್ತಾನೆ ' ಅಂತಾ ತಿಳಿಸಿದನು. ನಾನು ಮನೆಯಲ್ಲಿ ಹಿರಯರೊಂದಿಗೆ ವಿಚಾರ ಮಾಡಿ ಇಂದು ದಿನಾಂಕ: 18/03/2021 ರಂದು ಠಾಣೆಗೆ ಬಂದು ಅಜರ್ಿ ನೀಡುತ್ತಿದ್ದು, ಕಾರಣ ನನ್ನ ತಮ್ಮನಾದ ಹೊನ್ನಪ್ಪ ತಂದೆ ಮರೆಪ್ಪ ಬಿರಾದಾರ ವಯ|| 29 ವರ್ಷ ಸಾ|| ವನದುಗರ್ಾ ಈತನಿಗೆ ಅಪಹರಣ ಮಾಡಿಕೊಂಡು ಹೋದ ಕಾಶಿನಾಥ ಸಾ|| ಹಲಕಟ್ಟಿ, ವಿಜಯಕುಮಾರ ಸಾ|| ನಾಲವಾರ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಅಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 21/2021 ಕಲಂ, 363 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ:- 02/2021 ಕಲಂ 406, 420 ಐ.ಪಿ.ಸಿ : ದಿನಾಂಕ: 25.02.2021 ರಂದು ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರ ಕಾಯರ್ಾಲಯದಿಂದ ವಿಚಾರಣೆಗಾಗಿ ವಸೂಲಾದ ಶ್ರೀ ನಾಗೇಶರಾವ ತಂದೆ ಶಂಕರರಾವ ಕುಲಕಣರ್ಿ ಹುಣಸಗಿ ರವರು ನೀಡಿರುವ ಅಜರ್ಿ ದಿನಾಂಕ: 22.02.2021 ನೇದ್ದರ ವಿಚಾರಣೆ ಕುರಿತು ಈ ದಿನ 18.03.2021 ರಂದು ಸಮಯ 7:00 ಪಿ.ಎಮ್ ಗೆ ದೂರುದಾರರಾದ ಶ್ರೀ ನಾಗೇಶರಾವ ತಂದೆ ಶಂಕರರಾವ ಕುಲಕಣರ್ಿ ಹುಣಸಗಿ ರವರು ಹಾಜರಾಗಿ ಸದರಿ ಅಜರ್ಿಯನ್ನು ಗುರುತಿಸಿ ತಮ್ಮ ಸಹಿ ಇರುವದಾಗಿ ಹಾಗು ಈ ಅಜರ್ಿಯನ್ನು ತಾವೇ ನೀಡಿರುವದಾಗಿ ತಿಳಿಸಿದ್ದು ಇದರಂತೆ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದು ಸದರಿ ಅಜರ್ಿಯ ಸಾರಂಶವೆನೆಂದರೆ ಅಜರ್ಿದಾರರಾದ ನಾಗೇಶರಾವ ರವರಿಗೆ ಸಂದ್ಯಾವತಿ ಎಂಬ ತಂಗಿ ಇದ್ದು ಆಕೆಯನ್ನು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿಗೆೆ ಲಗ್ನ ಮಾಡಿ ಕೊಟ್ಟಿದ್ದು ಆಕೆಯು ಗಂಡನ ಮನೆಯಾದ ವಾಸವದತ್ತ ಕಾಲೋನಿಯ ಸೇಡಂ ನಗರದಲ್ಲಿ ವಾಸಿಸುತ್ತಿದ್ಧಾಳೆ. ಸಂದ್ಯಾವತಿಗೆ ಮೇಘಾ ಗಂಡ ಭೀಮಸೇನರಾವ ಕುಲಕಣರ್ಿ ಎಂಬ ಗೆಳತಿ ಇದ್ದು ಅವರಿಬ್ಬರು ಸೇಡಂ ಪಟ್ಟಣದಲ್ಲಿ ಒಂದೇ ಕಾಲೂನಿಯಲ್ಲಿ ವಾಸಿಸುತ್ತಿದ್ದಾರೆ. ಮೆಘಾ ಕುಲಕಣರ್ಿಯವರು ಮತ್ತು ಕಲಬುರಗಿ ನಗರದಲ್ಲಿ ಪ್ರೀಯದಶರ್ಿನಿ ಗ್ರಾಮೀಣ ಅಭೀವೃದ್ದಿ ಸಂಸ್ಥೆ ಏಷಿಯನ್ ವ್ಯಾಪಾರ ಕೇಂದ್ರ ಎರಡನೆಯ ಮಹಡಿ ಕಲಬುರಗಿಯಲ್ಲಿ ನಡೆಸುತ್ತಿದ್ದ ಶರಣಮ್ಮ ಕವಲ್ದಾರ @ ಸುಮಾ ಬಡಿಗೇರ ಅವರು ಒಂದೇ ಉರಿನವರಾಗಿದ್ದು ಅವರು ಕೂಡಾ ಒಳ್ಳೆಯ ಗೆಳೆತನ ಹೊಂದಿದ್ದು ಇರುತ್ತದೆ. ಹಿಗಿರುವಾಗ ಶರಣಮ್ಮ ಕವಲ್ದಾರ ಮತ್ತು ಮೆಘಾ ಕುಲಕಣರ್ಿಯವರು ಸೆಪ್ಟೆಂಬರ್-2020 ಇಸ್ವೀಯಲ್ಲಿ ನಮ್ಮ ತಂಗಿಯಾದ ಸಂದ್ಯಾವತಿ ಕುಲಕಣರ್ಿಯವರನ್ನು ಭೇಟಿಮಾಡಿ ಒಖಒಇ ಸ್ಕಿಮ್ನಲ್ಲಿ ಶೇಕಡಾ 25% ರಿಯಾಯಿತಿ ದರದಲ್ಲಿ ಸಣ್ಣ ಉದ್ದೇಮಿಗಳಿಗೆ ನಾವು ಸಾಲವನ್ನು ರೂಪಾಯಿ 10 ಲಕ್ಷದಿಂದ 5 ಕೋಟಿಯ ವರೆಗೆ ಪುರೈಸುತ್ತೇವೆ ಎಂದು ಹೇಳಿದರು. ಕಾರಣ ನಿಮಗೆ ಅಪೇಕ್ಷವಿದ್ದರೆ ನಿಮ್ಮ ಫೈಲಅನ್ನು ಓಪನ್ ಮಾಡಲು ಮುಂಗಡ ಹಣ ಸಲ್ಪ ಹಣ ಬೇಕಾಗುತ್ತದೆ ಎಂದು ಹೇಳಿದರು. ಆದ್ದರಿಂದ ನಮ್ಮ ತಂಗಿಯವರು ಪ್ಲಾಸ್ಟಿಕ ರಹಿತವಾದ ಚೀಲಗಳನ್ನು ತಯ್ಯಾರ ಮಾಡಲು ಅಜರ್ಿಯನ್ನು ಸಲ್ಲಿಸಿದ್ದರಿಂದ ಅವರಿಗೆ 70 ಲಕ್ಷ ಹಣ ಮಂಜೂರಿ ಮಾಡಿಸುತ್ತೇನೆ. ಅದಕ್ಕಾಗಿ ಮುಂಗಡವಾಗಿ ಹಣ 60 ಸಾವಿರ ರೂಪಾಯಿಗಳನ್ನು ಕೊಡಬೇಕೆಂದು ಕೇಳಿದ ಕಾರಣ ನಮ್ಮ ತಂಗಿಯವರು ದಿನಾಂಕ: 30.09.2020 ರಂದು ಬ್ಯಾಂಕ್ ಖಾತೆಯ ಮೂಲಕ ಶರಣಮ್ಮ ಕವಲ್ದಾರ ಇವರಿಗೆ ಸಂದಾಯ ಮಾಡಿದ್ದಾರೆ. ಮುಂದೆ ನಮ್ಮ ತಂಗಿ ಸದರಿ ವಿಷಯವನ್ನು ನನಗೆ ತಿಳಿಸಿದ ಕಾರಣ ನಾನು ನಮ್ಮ ತಂಗಿ ಸಂದ್ಯಾವತಿಯವರು ಕೂಡಿಕೊಂಡು ಶರಣಮ್ಮ ಕವಲ್ದಾರ ಇವರ ಆಫೀಸಿಗೆ ಭೇಟಿ ಮಾಡಲಾಗಿ ನಮಗೂ ಭತ್ತದ ಚೀಲಗಳನ್ನು ತಯಾರು ಮಾಡಲು ಹಣ ಕೊಡಿಸಬೇಕೆಂದು ಕೇಳಿಕೊಂಡಾಗ ಶರಣಮ್ಮ ಕವಲ್ದಾರರವರು ನಿಮ್ಮಂತೆ ಇನ್ನೂ ಎಷ್ಟೂ ಜನ ಸಾಲಕ್ಕೆ ಅಜರ್ಿ ಹಾಕುತ್ತಾರೆ ಅವರೆಲ್ಲರೂ ಒಟ್ಟುಗೂಡಿ ಬಂದು ನಿಮ್ಮ ನಿಮ್ಮ ಫೈಲಗಳನ್ನು ಪ್ರಾರಂಭಿಸಿ ಎಂದು ಹೇಳಿದ ಕಾರಣ ನಾನು ನಮ್ಮೂರಿನಲ್ಲಿ ನನಗೆ ಬೇಕಿದ್ದ ಜನರಿಗೆ ಭೇಟಿಮಾಡಿ ಸದರಿ ವಿಷಯವನ್ನು ತಿಳಿಸಿದಾಗ ಅವರು ಕೂಡಾ ಬೇರೆ ಬೇರೆ ರೀತಿಯ ಸಣ್ಣ ಉದ್ಯಮಿಗಳನ್ನು ಪ್ರಾರಂಬಿಸಲು ಅಪೇಕ್ಷಿಸಿ ಮುಂಗಡ ಹಣ ಕೊಡಲು ಒಪ್ಪಿಕೊಂಡರು ಅದೇ ರೀತಿ ಒಟ್ಟು 21 ಫೈಲಗಳು ರೆಡಿಯಾದ ಕಾರಣ ನಾವು ಶರಣಮ್ಮ ಕವಲ್ದಾರ ರವರಲ್ಲಿಗೆ ಹೋಗಿ ಭೇಟಿಮಾಡಿ ಒಟ್ಟು 21 ಪೈಲಗಳನ್ನು ನೀಡಿ ಹಂತ ಹಂತವಾಗಿ ಒಟ್ಟು 56,48,508=00 ರೂಪಾಯಿಗಳನ್ನು ಬ್ಯಾಂಕಖಾತೆ ಮೂಲಕ ಮತ್ತು ನಗದು ರೂಪದಲ್ಲಿ ಆರೋಪಿತರು ಹಣ ಪಡೆದು ಫಿರ್ಯಾದಿಗೆ ಮತ್ತು ಇತರರಿಗೆ ಯಾವದೇ ಸಾಲ ಕೊಡಿಸದೆ ಮೋಸ ಮತ್ತು ವಂಚನೆ ಮಾಡಿರುತ್ತಾರೆ ಅಂತ ಇತ್ಯಾದಿ ದೂರು ಅಜರ್ಿಯ ಸಾರಾಂಶದ ಮೇರೆಗೆ ಸಿ.ಇ.ಎನ್ ಅಪರಾದ ಪೊಲೀಸ್ ಠಾಣೆ ಯಾದಗಿರಿ ಗುನ್ನೆ ನಂ. 02/2021 ಕಲಂ 406, 420 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿದ್ದು ಇರುತ್ತದೆ.


ಯಾದಗಿರ ನಗರ ಪೊಲೀಸ್ ಠಾಣೆ:- ಪಿ.ಎ.ಆರ್ ನಂ. 06/2021 ಕಲಂ 109 ಸಿ.ಆರ್.ಪಿ.ಸಿ : ಇಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಪಿ.ಎಸ್.ಐ [ಅ.ವಿ] ರವರು ಠಾಣೆಗೆ ಬಂದು ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಹಾಜರು ಪಡಿಸಿ ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೇನೆಂದರೆ, ಇತ್ತೀಚಿಗೆ ಯಾದಗಿರಿ ನಗರದಲ್ಲಿ ಸ್ವತ್ತಿನ ಪ್ರಕರಣಗಳು ಹೆಚ್ಚುತ್ತಿರುವುದ್ದರಿಂದ ಇಂದು ದಿನಾಂಕ 18/03/2021 ರಂದು ಬೆಳಿಗ್ಗೆ 04-00 ಗಂಟೆಯಿಂದ ನಾನು ಸಂಗಡ ಅಪರಾಧ ವಿಭಾಗದ ಸಿಬ್ಬಂಧಿಯಾದ ಅಬ್ದುಲ್ ಭಾಷಾ ಪಿ.ಸಿ 237, ಈರಪ್ಪ ಪಿ.ಸಿ 386 ರವರನ್ನು ಸಂಗಡ ಕರೆದುಕೊಂಡು ಗುಡ್ ಮಾನರ್ಿಂಗ್ ಕರ್ತವ್ಯ ಮಾಡುತ್ತಾ ಯಾದಗಿರಿ ನಗರದ ಹೊಸಾ ಬಸ್ ನಿಲ್ದಾಣ, ಅಜೀಜ್ ಕಾಲೋನಿ, ರೈಲ್ವೆ ಸ್ಟೇಷನ್, ಚಿತ್ತಾಪೂರ ರಸ್ತೆ, ಲಕ್ಷ್ಮೀ ನಗರ, ಮಾತಾ ಮಾಣಿಕೇಶ್ವರಿ ನಗರ ದಿಂದ ಬೆಳಗಿನ ಜಾವ 05-00 ಗಂಟೆಯ ಸುಮಾರಿಗೆ ಎ.ಪಿ.ಎಂ.ಸಿ ಕಡೇಗೆ ಹೋದಾಗ ಪೈರ್ ಆಫೀಸ್ ಹತ್ತಿರ ಒಂದು ಅಡತಿ ಅಂಗಡಿಯ ಮುಂದೆ ಇಬ್ಬರು ಸಂಶಯವಾಗಿ ತಿರುಗಾಡುತ್ತಿದ್ದರು ಸದರಿಯವರಿಗೆ ನಾವು ಮರೆಯಲ್ಲಿ ನಿಂತು ಹಿಡಿದು ವಿಚಾರಣೆ ಮಾಡಲಾಗಿ ಅವರು ತಡವರಿಸುತ್ತ ತಮ್ಮ ಹೆಸರು ತಪ್ಪು ತಪ್ಪಾಗಿ ಹೇಳ ತೊಡಗಿದರು. ಇವರ ಮೇಲೆ ನಮಗೆ ಬಲವಾಗಿ ಸಂಶಯ ಬಂದಿದ್ದರಿಂದ ಬೆಳಿಗ್ಗೆ 05-30 ಗಂಟೆಗೆ ಠಾಣೆಗೆ ಕರೆದುಕೊಂಡು ಕೂಲಂಕುಶವಾಗಿ ವಿಚಾರಿಸಿದಾಗ ಅವರು ತಮ್ಮ ಹೆಸರು 1] ಚನ್ನಪ್ಪ ತಂದೆ ನಾಮಣ್ಣ ಜಾದವ ವಯಾ 23 ವರ್ಷ, ಜಾ|| ಲಮಾಣಿ ಉ|| ಒಕ್ಕಲುತನ ಸಾ|| ಜಿನಿಕೇರಿ ತಾಂಡಾ ತಾ|| ಜಿ|| ಯಾದಗಿರಿ, ಮತ್ತು 2] ವೆಂಕಟೇಶ ತಂದೆ ರೆಡ್ಡೆಪ್ಪ ರಾಠೋಡ ವಯಾ 20 ವರ್ಷ, ಜಾ|| ಲಮಾಣಿ ಉ|| ಒಕ್ಕಲುನ ಸಾ|| ಪಸಪೂಲ್ ತಾಂಡಾ ತಾ|| ಗುರುಮಠಕಲ್ ಜಿ|| ಯಾದಗಿರಿ ಅಂತಾ ಹೇಳಿದರು. ಕಾರಣ ಸದರಿಯವರಿಗೆ ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಇರುವುದ್ದರಿಂದ ಈ ವರದಿಯೊಂದಿಗೆ ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಕಾರಣ ತಾವು ಸದರಿಯವರ ವಿರುದ್ದ ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಈ ಜ್ಞಾಪನ ಪತ್ರದ ಮೂಲಕ ನಿಮಗೆ ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂ 06/2021 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

Last Updated: 19-03-2021 10:17 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080