ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-03-2022


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 15/2022 ಕಲಂ 279, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ : :- ಇಂದು ದಿನಾಂಕ 18/03/2022 ರಂದು 6-15 ಎ.ಎಂ.ಕ್ಕೆ ಯಾದಗಿರಿ ಜಿಜಿಎಚ್ ನಿಂದ ರಸ್ತೆ ಅಪಘಾತದ ಬಗ್ಗೆ ಡೆತ್/ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ಮಾಹಿತಿ ನೀಡಿದ್ದರಿಂದ ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತನ ಪತ್ನಿಯಾದ ಪಿಯರ್ಾದಿ ಶ್ರೀಮತಿ ಗುರಮ್ಮ ಗಂಡ ಹಣಮಂತ ತೆಲಗರ ವಯ;46 ವರ್ಷ, ಜಾ;ಕಬ್ಬಲಿಗ, ಉ;ಕೂಲಿ, ಸಾ;ಹನುಮಾನ ನಗರ ಯಾದಗಿರಿ, ಹಾ;ವ;ಅಲ್ಲಿಪುರ ತಾ;ಜಿ;ಯಾದಗಿರಿ ಇವರು ಆಸ್ಪತ್ರೆಯಲ್ಲಿ ಹಾಜರಿದ್ದು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 6-30 ಎ.ಎಂ.ದಿಂದ 7-30 ಎ.ಎಂ.ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ಮತ್ತು ವಿಳಾಸದ ನಿವಾಸಿತಳಿದ್ದು ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನಾವು ಸುಮಾರು 6-7 ವರ್ಷಗಳ ಹಿಂದೆ ಯಾದಗಿರಿಯಿಂದ ಅಲ್ಲಿಪುರದ ನಮ್ಮ ಸಂಬಂಧಿಕರ ಹತ್ತಿರ ಬಂದು ಕೂಲಿ-ನಾಲಿ ಮಾಡಿಕೊಂಡು ಇಲ್ಲಿಯೇ ವಾಸವಾಗಿರುತ್ತೇವೆ. ನಮಗೆ ಇಬ್ಬರು ಗಂಡು ಮಕ್ಕಳಿದ್ದು ಹಿರಿಮಗನಿಗೆ ಮದುವೆಯಾಗಿದ್ದು, ತನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಇರುತ್ತಾನೆ. ಇನ್ನೊಬ್ಬ ಮಗ ಭೀಮರಾಯ ಈತನು ನಮ್ಮೊಂದಿಗೆ ಇದ್ದು ಪಿ.ಯು.ಸಿ ವ್ಯಾಸಂಗ ಮಾಡಿಕೊಂಡಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ ರಾತ್ರಿ 9 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ಮನೆಯಲ್ಲಿದ್ದಾಗ ನನ್ನ ಗಂಡನಾದ ಹಣಮಂತ ವಯ;52 ವರ್ಷ, ಈತನು ಊಟ ಮಾಡಿದ ಬಳಿಕ ನಾನು ಮತ್ತು ನಮ್ಮ ಸಂಬಂಧಿ ಶರಣಪ್ಪ ತಂದೆ ತಿಮ್ಮಣ್ಣ ಅಕ್ಕಿ ಇಬ್ಬರು ಸೇರಿಕೊಂಡು ಹಂಪಯ್ಯ ಮುತ್ಯಾನ ಗುಡಿಯಲ್ಲಿ ಭಜನಿ ಮಾಡಾಕ ಹೊಂಟಿವಿ ಬೆಳಿಗ್ಗೆ ಬರ್ತೀವಿ ಅಂತಾ ನಮಗೆ ತಿಳಿಸಿ ಹೋಗಿದ್ದು ಇರುತ್ತದೆ. ಮದ್ಯರಾತ್ರಿ ಅಂದಾಜು 3 ಎ.ಎಂ.ದ ಗಂಟೆ ಸುಮಾರಿಗೆ ಶರಣಪ್ಪ ಈತನು ನಮಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ನಿನ್ನ ಗಂಡ ಇಬ್ಬರು ರಾತ್ರಿ ಹಂಪಯ್ಯ ಮುತ್ಯಾನ ಗುಡಿಗೆ ಭಜನಿ ಮಾಡಾಕ ಬಂದಿದ್ದು, ಮದ್ಯರಾತ್ರಿ 2 ಗಂಟೆಯ ಸುಮಾರಿಗೆ ನಿನ್ನ ಗಂಡನು ಸಂಡಾಸಕ್ಕೆ ಹೋಗಿ ಬರೋಣ ಬಾ ಅಂತಾ ನನಗೆ ಕರೆದುಕೊಂಡು ಅಲ್ಲಿಪುರ ಗೇಟ್ ಹತ್ತಿರ ಬಂದೆವು. ಆಗ ನಾನು ನಾನು ಗೇಟ್ ಹತ್ತಿರ ನಿಂತಿರ್ತೀನಿ ನೀನು ಹೋಗಿ ಬಾ ಅಂತಾ ಕಳಿಸಿದೆನು. ಸಮಯ ಅಂದಾಜು ಮದ್ಯರಾತ್ರಿ 2-30 ಎ.ಎಂ.ಕ್ಕೆ ಒಂದು ಯಾವುದೋ ವಾಹನ ವಾಡಿ ಕಡೆಯಿಂದ ಯಾದಗಿರಿ ಕಡೆಗೆ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಿದ್ದಾಗ ನನಗೆ ಒಮ್ಮೊಲೆ ದಡ್ ಅಂತಾ ಸಪ್ಪಳ ಕೇಳಿ ಬಂದಾಗ ಯಾರೋ ಚೀರಿದಂತೆ ಆಗಿದ್ದು ಕತ್ತಲಲ್ಲಿ ಅದು ಯಾವ ವಾಹನ ಅಂತಾ ನನಗೆ ಕಾಣಿಸಲಿಲ್ಲ, ಓಡೋಡಿ ನಿನ್ನ ಗಂಡನು ಬಹಿದರ್ೆಸೆಗೆ ಹೋಗಿದ್ದ ಜಾಗದ ಕಡೆಗೆ ಹೋಗಿ ನೋಡಲು ನಿನ್ನ ಗಂಡನಿಗೆ ಸದರಿ ವಾಹನವು ಡಿಕ್ಕಿ ಹೊಡೆದು ಹೋಗಿದ್ದು, ಸದರಿ ಅಪಘಾತದಲ್ಲಿ ನಿನ್ನ ಗಂಡನಿಗೆ ತಲೆಗೆ ಭಾರೀ ರಕ್ತಗಾಯವಾಗಿದ್ದು, ಬಲಗೈ ಮುಂಗೈ ಹತ್ತಿರ ಭಾರೀ ತರಚಿದ ಗಾಯ ಮತ್ತು ಕೈಗಳಿಗೆ , ಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಅಷ್ಟರಲ್ಲಿಯೇ ಅಲ್ಲಿಪುರ ಗೇಟ್ನಲ್ಲಿ ಬೇಕರಿ ಅಂಗಡಿಯಲ್ಲಿ ಮಲಗಿದ್ದ ನಮ್ಮೂರಿನ ಮೌನೇಶ ತಂದೆ ಜಗನ್ನಾಥ ಸದರಿ ಈತನು ನಮ್ಮ ಹತ್ತಿರ ಬಂದು ವಿಚಾರಿಸಿದ್ದು, ಇಬ್ಬರು ನಿನ್ನ ಗಂಡನಿಗೆ ಎಬ್ಬಿಸಿ ವಿಚಾರಿಸಲು ಎಡಕು ಕೆಳಗೆ ಹಾಕಿದ್ದು, ಮೂಗಿನ ಹತ್ತಿರ ಕೈ ಹಿಡಿದು ಉಸಿರು ನೋಡಲು ಉಸಿರು ನಿಂತಿರುತ್ತದೆ ಈ ಅಪಘಾತದಲ್ಲಿ ಆದ ಗಾಯದ ಭಾದೆಯಿಂದ ನಿನ್ನ ಗಂಡನು ಮೃತಪಟ್ಟಿದ್ದು ಇರುತ್ತದೆ. ನೀವು ಕೂಡಲೇ ಅಲ್ಲಿಪುರ ಗೇಟ್ ಹತ್ತಿರ ಬರ್ರೀ ಅಂತಾ ತಿಳಿಸಿದಾಗ ನನಗೆ ಗಾಬರಿಯಾಗಿ ಈ ವಿಷಯವನ್ನು ನನ್ನ ಮಗ ಭೀಮರಾಯ ಮತ್ತು ಶರಣಪ್ಪನ ಹೆಂಡತಿ ಇಂದ್ರಮ್ಮಳಿಗೆ ವಿಷಯ ತಿಳಿಸಿ ನಾವುಗಳು ಒಂದು ಖಾಸಗಿ ಆಟೋದಲ್ಲಿ ಅಲ್ಲಿಪುರ ಕ್ರಾಸ್ ಹತ್ತಿರ ಬಂದು ನೋಡಲಾಗಿ ನನ್ನ ಗಂಡನು ರಸ್ತೆ ಅಪಘಾತದಲ್ಲಿ ಆಗಿದ್ದ ಗಾಯಗಳ ಭಾದೆಯಿಂದ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ನಮಗೆ ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ನಂತರ ನಾವುಗಳು ನನ್ನ ಗಂಡನ ಮೃತದೇಹವನ್ನು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದಿದ್ದು, ವೈದ್ಯರು ಪರಿಶೀಲಿಸಿ ಇವರು ಈಗಾಗಲೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿ ಶವವನ್ನು ಯಾದಗಿರಿ ಸಕರ್ಾರಿ ಆಸ್ಪತ್ರೆಯ ಶವಗಾರ ಕೋಣೆಗೆ ಕಳಿಸಿರುತ್ತಾರೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ನನ್ನ ಗಂಡನ ಮೃತದೇಹವನ್ನು ನಾನು ಮತ್ತು ನನ್ನ ಮಗ ಬೀಮರಾಯ ಇಬ್ಬರು ಗುತರ್ಿಸಿರುತ್ತೇವೆ. ಹೀಗಿದ್ದು ಇಂದು ದಿನಾಂಕ 18/03/2022 ರಂದು ಮದ್ಯರಾತ್ರಿ 2-30 ಎ.ಎಂ.ಕ್ಕೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಅಲ್ಲಿಪುರ ಗೇಟ್ ರಸ್ತೆ ಬದಿಯಲ್ಲಿ ನನ್ನ ಗಂಡನು ಸಂಡಾಸಕ್ಕೆ ಹೋಗುತ್ತಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನನ್ನ ಗಂಡನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ನನ್ನ ಗಂಡನಿಗೆ ತಲೆಗೆ ಭಾರೀ ರಕ್ತಗಾಯವಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಪಘಾತಪಡಿಸಿ ಓಡಿ ಹೋದ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಮಾಡಲು ಮತ್ತು ಕೂಡಲೇ ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 6-30 ಎ.ಎಂ.ದಿಂದ 7-30 ಎ.ಎಂ.ದ ವರೆಗೆ ಪಡೆದುಕೊಂಡಿದ್ದು, ಮರಳಿ ಠಾಣೆಗೆ 7-45 ಎ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 15/2022 ಕಲಂ 279, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 38/2022 ಕಲಂ 379 ಐಪಿಸಿ : ದಿನಾಂಕ 18.03.2022 ರಂದು ಮಧ್ಯಾಹ್ನ 3.30 ಗಂಟೆಗೆ ಲಿಂಗರಾಜ ತಂದೆ ಕುಪ್ಪೇರಾಯ, ವ|| 32 ವರ್ಷ, ಜಾ|| ವಡ್ಡರ, ಉ|| ಭೂವಿಜ್ಞಾನಿ, ಸಾ|| ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ ಸಾರಾಂಶವೇನೆಂದರೆ, ಗುರಮಿಠಕಲ್ ತಾಲ್ಲೂಕಿನ ಕೊಂಕಲ್ ಹೋಬಳಿಯ ಜೈಗ್ರಾಂ ಗ್ರಾಮದ ಜಮೀನು ಸವರ್ೆಸಂಖ್ಯೆ 257 ರಲ್ಲಿ ಯಾರೋ ಅಕ್ರಮವಾಗಿ ಸಕರ್ಾರದ ಸ್ವತ್ತಾದ ಮೊರಂ ಖನಿಜವನ್ನು ಸಾಗಾಣಿಕೆ ಮಾಡುತ್ತಿದ್ದು ಈ ಸಂಬಂಧ ದೂರುಗಳು ಬಂದಿರುವ ಕಾರಣ ಇಂದು ದಿನಾಂಕ 18.03.2022 ರಂದು ಬೆಳಿಗ್ಗೆ 10 ಗಂಟೆಗೆ ನಾನು ಹಾಗೂ ನನ್ನ ಇಲಾಖೆಯ ಭೂವಿಜ್ಞಾನಿ ಕಿರಣ್ ಡಿ. ಆರ್ ಹಾಗೂ ನಮ್ಮ ಇಲಾಖೆಯ ವಾಹನ ಚಾಲಕರಾದ ನಜೀರ್ ಎಲ್ಲರೂ ಸೇರಿ ನಮ್ಮ ಇಲಾಖೆಯ ಜೀಪ್ ವಾಹನ ಸಂಖ್ಯೆ ಏಂ-04/ಉ1490 ರಲ್ಲಿ ಕುಳಿತುಕೊಂಡು ಯಾದಗಿರಿ ನಗರದಿಂದ ಹೊರಟು ಬೆಳಿಗ್ಗೆ 11.30 ಗಂಟೆಗೆ ಗುರಮಿಠಕಲ್ ತಾಲ್ಲೂಕಿನ ಕೊಂಕಲ್ ಹೋಬಳಿಯ ಜೈಗ್ರಾಂ ಗ್ರಾಮದ ಸವರ್ೆಸಂಖ್ಯೆ 257 ಗೆ ಹಾಜಾರಾದೆವು. ಸದರಿ ಸವರ್ೆಸಂಖ್ಯೆ 257 ಪ್ರದೇಶದಲ್ಲಿ ಗುರುಮಿಠಕಲ್ ತಹಶೀಲ್ದಾರರ ಕಾಯರ್ಾಲಯದ ಕೊಂಕಲ್ ವಲಯದ ಕಂದಾಯ ನಿರೀಕ್ಷಕರು ಭಿಮಸೇನ್ರಾವ್ ಹಾಗೂ ಮೊಹಮ್ಮದ್ ಹಾಜಿ ಗ್ರಾಮ ಲೆಕ್ಕಾಧಿಕಾರಿಗಳು, ಜೈಗ್ರಾಂ ಗ್ರಾಮ ಇವರು ಜೈಗ್ರಾಂ ಗ್ರಾಮದ ಸವರ್ೆಸಂಖ್ಯೆ 257 ರಲ್ಲಿ ಹಾಜರಿದ್ದು, ಸದರಿ ಸವರ್ೆನಂ. ಪ್ರದೇಶವನ್ನು ಎಲ್ಲರೂ ಸೇರಿ ಪರಿಶೀಲಿಸಿದ್ದು ಅದರನ್ವಯ ಸದರಿ ಸವರ್ೆ ನಂ. ಪ್ರದೇಶದಲ್ಲಿ ಯಾರೋ ಅಕ್ರಮವಾಗಿ ಸಕರ್ಾರದ ಸ್ವತ್ತಾದ ಮೊರಂ ಖನಿಜವನ್ನು ಸಾಗಾಣಿಕೆ ಮಾಡಿರುವುದು ಕಂಡುಬಂದಿರುತ್ತದೆ. ಮೊರಂ ಖನಿಜವನ್ನು ಸಾಗಾಣಿಕೆ ಮಾಡಿರುವ ಪ್ರದೇಶವನ್ನು ಅಳತೆ ಮಾಡಿ ನೋಡಲಾಗಿದ್ದು ಅದರನ್ವಯ ಅಂದಾಜು ಉದ್ದ: 45 ಮೀಟರ್, ಅಗಲ: 32 ಮೀಟರ್, ಆಳ 2.50 ಮೀಟರ್ ಇರುತ್ತದೆ. ಸದರಿ ಪ್ರದೇಶದಿಂದ ಒಟ್ಟು 5,400 ಮೆಟ್ರಿಕ್ ಟನ್ ರಷ್ಟು ಸಕರ್ಾರದ ಸ್ವತ್ತಾದ ಮೊರಂ ಖನಿಜವನ್ನು ಸಾಗಾಣಿಕೆ ಮಾಡಿರುವುದು ಕಂಡುಬಂದಿರುತ್ತದೆ. ಇದರ ರಾಜಧನ ಮೌಲ್ಯವು 2,16,000/- ರೂಪಾಯಿಗಳು ಇರುತ್ತದೆ. ಸದರಿ ಸವರ್ೆ ಸಂಖ್ಯೆ ಪ್ರದೇಶವನ್ನು ಕಂದಾಯ ಇಲಾಖೆಯವರು ಧೃಢಪಡಿಸಿರುತ್ತಾರೆ. ಕಾರಣ ಗುರಮಿಠಕಲ್ ತಾಲ್ಲೂಕಿನ ಕೊಂಕಲ್ ಹೋಬಳಿಯ ಜೈಗ್ರಾಂ ಗ್ರಾಮದ ಸವರ್ೆಸಂಖ್ಯೆ 257 ರಲ್ಲಿ ಯಾರೋ ದಿನಾಂಕ 15.12.2021 ರಿಂದ ಇಂದಿನವರೆಗೆ ಅಕ್ರಮವಾಗಿ ಸಕರ್ಾರದ ಸ್ವತ್ತಾದ ಮೊರಂ ಖನಿಜವನ್ನು ಕಳ್ಳತನ ಮಾಡಿ ಸಾಗಾಣಿಕೆ ಮಾಡಿದ್ದ ಅನಾಮಧೆಯ ವ್ಯಕ್ತಿಗಳನ್ನು ಪತ್ತೆಹಚ್ಚಲು ಕೋರಿದೆ. ಅಲ್ಲದೆ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ.

ಇತ್ತೀಚಿನ ನವೀಕರಣ​ : 19-03-2022 05:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080