ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-05-2022

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 77/2022 ಕಲಂ 279, 304(ಎ) ಐಪಿಸಿ: ಇಂದು ದಿನಾಂಕ 18.05.2022 ರಂದು ಸಮಯ ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಖ್ಯೆ 16 ರ ಮೇಲೆ ಧರ್ಮಪೂರ-ಗುಂಜನೂರ ಗೇಟ್ಗಳ ನಡುವೆ ಲಾರಿ ನಂಬರ ಎಪಿ-28-ಟಿ.ಎ-6464 ನೇದ್ದರ ಚಾಲಕನಾದ ಬ್ರಹ್ಮಾನಂದರಡ್ಡಿ ತಂದೆ ಭೀಮರಡ್ಡಿ ಬುರ್ಜ ವ|| 50 ವರ್ಷ ಜಾ||ರಡ್ಡಿ ಉ||ಚಾಲಕ ಸಾ||ಬುರಗಪಲ್ಲಿ ತಾ||ಸೇಡಂ ಜಿ||ಕಲಬುರಗಿ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಬಲ ಇಂಡಿಕೇಟರ ಹಾಕದೇ, ಹಾಗೂ ಬಲಗೈಯನ್ನು ಸನ್ನೆಯ ಮೂಲಕ ಸೂಚಿಸದೇ ಇಂದಿನಿಂದ ಮೋಟಾರು ಸೈಕಲ್ ನಂಬರ ಎಪಿ-09-ಎಸ್-0297 ನೇದ್ದರ ಮೇಲೆ ಹೋಗುತ್ತಿದ್ದ ನನ್ನ ಬಸಪ್ಪ, ಭೀಮೇಶ, ಅಂಜಪ್ಪ ಇವರಿಗೆ ಮುಂದೆ ಹೋಗಲು ಸೈಡ್ ಕೊಟ್ಟಂತೆ ಮಾಡಿ ಬಲಕ್ಕೆ ಕಟ್ ಹೊಡಿದ್ದರ ಪರಿಣಾಮವಾಗಿ ಸದರಿ ಲಾರಿಯು ಬಸಪ್ಪ ತಂದೆ ಹುಸೇನಪ್ಪ ಮದನ ಈತನು ಚಲಾಯಿಸಿಕೊಂಡು ಹೋಗುತ್ತಿದ್ದ ಎಪಿ-09-ಎಸ್-0297 ನೇದ್ದಕ್ಕೆ ಅಪಘಾತವಾಗಿ ಮೋಟಾರು ಸೈಕಲ್ನ ಮೇಲಿದ್ದ ಅಂಜಪ್ಪ ತಂದೆ ತಿಮ್ಮಪ್ಪ ಗಡ್ಡಂ ವ||22 ವರ್ಷ ಜಾ||ಕಬ್ಬಲಿಗ ಉ||ವಿಧ್ಯಾಥರ್ಿ ಸಾ||ಪಾಕಲ್ ತಾ||ಸೇಡಂ ಜಿ||ಕಲಬುರಗಿ ಈತನಿಗೆ ಮುಖಕ್ಕೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದರಿಂದ ಮೃತಪಟ್ಟಿದ್ದು ಕಾರಣ ಸದರಿ ಲಾರಿಯ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮೃತನ ತಂದೆಯು ಠಾಣೆಗೆ ಹಾಜರಾಗಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ : 77/2022 ಕಲಂ 279, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ :-
ಗುನ್ನೆ ನಂ: 27/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್: ದಿನಾಂಕ 18/05/2022 ರಂದು ಸಾಯಂಕಾಲ ಸಮಯ 5 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಅನಂತರೆಡ್ಡಿ ತಂದೆ ಅಮರೇಶಪ್ಪ ಸಿದ್ದಾಪುರ ವಯ;30 ವರ್ಷ, ಜಾ;ಲಿಂಗಾಯತ್, ಉ;ಖಾಸಗಿ ಕೆಲಸ, ಸಾ;ಗೊಲ್ಲಾದಿನ್ನಿ, ತಾ;ಸಿರವಾರ, ಜಿ;ರಾಯಚೂರು, ಹಾ;ವ;ಮಾತಾ ಮಾಣಿಕೇಶ್ವರಿ ಕಾಲನಿ, ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ನಿನ್ನೆ ದಿನಾಂಕ 17/05/2022 ರಂದು ರಾತ್ರಿ 9-45 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆಯ ಬಗ್ಗೆ ತಮ್ಮದೊಂದು ಲಿಖಿತ ದೂರು ಅಜರ್ಿಯನ್ನು ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಖಾಸಗಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಮ್ಮ ಕುಟುಂಬವು ಸುಮಾರು 6-7 ವರ್ಷಗಳಿಂದ ನಮ್ಮುರಿನಿಂದ ಯಾದಗಿರಿಗೆ ಬಂದು ಇಲ್ಲಿಯೇ ನೆಲಸಿರುತ್ತೇವೆ. ನನ್ನ ತಂದೆಯಾದ ಅಮರೇಶಪ್ಪರವರು ಯಾದಗಿರಿಯ ಗಾಂಧಿಚೌಕ್ನಲ್ಲಿ ಬರುವ ನತ್ತು ಹೊಟೆಲನಲ್ಲಿ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 17/05/2022 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನನ್ನ ತಂದೆಯವರು ಎಂದಿನಂತೆ ನತ್ತು ಹೊಟೆಲಗೆ ತಮ್ಮ ಸೈಕಲ್ ನೇದ್ದನ್ನು ತೆಗೆದುಕೊಂಡು ಕೆಲಸಕ್ಕೆ ಹೋಗಿರುತ್ತಾರೆ. ನಿನ್ನೆ ರಾತ್ರಿ 10 ಪಿ.ಎಂ.ದ ಸುಮಾರಿಗೆ ನಾನು ಮತ್ತು ನನ್ನ ತಾಯಿಯವರಾದ ಶಾಂತಮ್ಮರವರು ನಮ್ಮ ಮನೆಯಲ್ಲಿದ್ದಾಗ ನನ್ನ ಸ್ನೇಹಿತರಾದ ಶೀ ಮಲ್ಲಣ್ಣ ತಂದೆ ಮಲ್ಲಿಕಾಜರ್ುನ ಪೂಜಾರಿ ಸಾ;ಯಾದಗಿರಿ ಇವರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ನನ್ನ ಸ್ನೇಹಿತನಾದ ರಮೇಶ ತಂದೆ ಸಕ್ರೆಪ್ಪ ಮಡಿವಾಳ ಸಾ;ಯಾದಗಿರಿ ಇಬ್ಬರು ಮಾತನಾಡುತ್ತಾ ಗಂಜ್ ಹತ್ತಿರ ಬರುವ ಸೈದಾಪುರ ಹೊಟೆಲ್ ಹತ್ತಿರ ನಿಂತಿದ್ದಾಗ ಸಮಯ ರಾತ್ರಿ 9-45 ಪಿ.ಎಂ.ದ ಸುಮಾರಿಗೆ ನಿಮ್ಮ ತಂದೆಯವರು ಸೈಕಲನ್ನು ಹಿಡಿದುಕೊಂಡು ಕೊಟಗಾರವಾಡಿ ರಸ್ತೆ ಕಡೆಯಿಂದ ಸೈದಾಪುರ ಹೊಟೆಲ್ ಕಡೆಯ ರಸ್ತೆ ಬದಿಯಲ್ಲಿ ಬಂದು ನಿಂತಿದ್ದಾಗ ನಾವಿಬ್ಬರು ನೋಡು ನೋಡುತ್ತಿದ್ದಂತೆ ಅದೇ ಸಮಯಕ್ಕೆ ಒಂದು ಕಾರ್ ನೇದ್ದರ ಚಾಲಕನು ತನ್ನ ಕಾರನ್ನು ಹೊಸಳ್ಳಿ ಕ್ರಾಸ್ ಕಡೆಯಿಂದ ಗಂಜ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ನಿಮ್ಮ ತಂದೆಗೆ ಡಿಕ್ಕಿಹೊಡೆದು ಅಪಘಾತ ಮಾಡಿದನು ಆಗ ನಾವಿಬ್ಬರು ಓಡೋಡಿ ನಿಮ್ಮ ತಂದೆ ಹತ್ತಿರ ಬಂದು ನೊಡಲಾಗಿ ಸದರಿ ಅಪಘಾತದಲ್ಲಿ ನಿಮ್ಮ ತಂದೆಗೆ ತಲೆಗೆ, ಹಣೆಗೆ ಭಾರೀ ಒಳಪೆಟ್ಟಾಗಿ ಅಲ್ಲಲ್ಲಿ ತರಚಿದ ರಕ್ತಗಾಯ ಆಗಿರುತ್ತವೆ. ನಿಮ್ಮ ತಂದೆಗೆ ಅಪಘಾತಪಡಿಸಿದ ಕಾರ್ ನೇದ್ದರ ಚಾಲಕನು ಸ್ವಲ್ಪ ಮುಂದೆ ಹೋಗಿ ದಾಲ್ ಮಿಲ್ ಹತ್ತಿರ ನಿಲ್ಲಿಸಿದ್ದು ಕಾರ ಹತ್ತಿರ ನಾವು ನೋಡಲು ಹೋಗುತ್ತಿದ್ದಾಗ ಕಾರ್ ಚಾಲಕನು ಗಡಿಬಿಡಿ ಮಾಡುತ್ತಾ ತನ್ನ ಕಾರನ್ನು ಚಾಲು ಮಾಡಿಕೊಂಡು ಓಡಿ ಹೋಗಿರುತ್ತಾನೆ. ಸಣ್ಣ ಮಳೆ ಬರುತ್ತಿದ್ದರಿಂದ ಹಾಗೂ ಕತ್ತಲು ಇದ್ದುದರಿಂದ ಕಾರ್ ನಂಬರ ನಮಗೆ ಸರಿಯಾಗಿ ಕಂಡು ಬಂದಿರುವುದಿಲ್ಲ, ನಾವುಗಳು ಕಾರ್ ಮತ್ತು ಅದರ ಚಾಲಕನನ್ನು ಮತ್ತೆ ನೋಡಿದರೆ ಗುತರ್ಿಸುತ್ತೇವೆ. ನೀನು ಕೂಡಲೇ ಘಟನಾ ಸ್ಥಳಕ್ಕೆ ಬಾ ಅಂದಾಗ ನಾನು ಈ ವಿಷಯವನ್ನು ನನ್ನ ತಾಯಿಗೆ ತಿಳಿಸಿ ಇಬ್ಬರು ಕೂಡಿಕೊಂಡು ಒಂದು ಖಾಸಗಿ ಆಟೋದಲ್ಲಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನನಗೆ ಈ ಮೇಲೆ ಪೋನಿನಲ್ಲಿ ಮಲ್ಲಣ್ಣರವರು ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ, ನನ್ನ ತಂದೆಯವರಿಗೆ ತಲೆಗೆ ಒಳಪೆಟ್ಟಾಗಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿರುತ್ತಾರೆ. ನಾವುಗಳು ನನ್ನ ತಂದೆಗೆ ಉಪಚಾರ ಕುರಿತು ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತೇವೆ. ಹೀಗಿದ್ದು ಯಾದಗಿರಿಯ ಸಕರ್ಾರಿ ಆಸ್ಪತ್ರೆಯ ವೈದ್ಯರು ನನ್ನ ತಂದೆಗೆ ಉಪಚರಿಸಿದ ನಂತರ ಹೆಚ್ಚಿನ ಉಪಚಾರಕ್ಕಾಗಿ ಉಪಚಾರ ಕುರಿತು ಕಲಬುರಗಿಯ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನನ್ನ ತಂದೆಗೆ ಕಲಬುರಗಿಯ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು, ನಂತರ ಅಲ್ಲಿಂದ ಶ್ರೀ ಬಸವೆಶ್ವರ ಆಸ್ಪತ್ರೆ ಕಲಬುರಗಿಗೆ ರೆಫರ್ ಮಾಡಿದ್ದು, ಅಲ್ಲಿಂದ ರಿಮ್ಸ್ ಆಸ್ಪತ್ರೆ ರಾಯಚೂರಿಗೆ ಕರೆದುಕೊಂಡು ಹೋಗಲು ವೈದ್ಯರು ತಿಳಿಸಿದ ಮೇರೆಗೆ ರಾಯಚೂರಿಗೆ ರಿಮ್ಸ್ ಆಸ್ಪತ್ರೆ ಕರೆದುಕೊಂಡು ಹೊರಟಿದ್ದು, ಈ ಘಟನೆ ಬಗ್ಗೆ ನಮ್ಮ ಮನೆಯ ಹಿರಿಯರು ಕೇಸು ಕೊಡಲು ತಿಳಿಸಿದ ಮೇರೆಗೆ ತಡವಾಗಿ ಇಂದು ದಿನಾಂಕ 18/05/2022 ರಂದು ಸಾಯಂಕಾಲ ಖುದ್ದಾಗಿ ಠಾಣೆಗೆ ಬಂದು ಅಜರ್ಿ ದೂರು ನೀಡುತ್ತಿದ್ದು, ನಿನ್ನೆ ದಿನಾಂಕ 17/05/2022 ರಂದು ರಾತ್ರಿ 9-45 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಯಾದಗಿರಿ ನಗರದ ಗಂಜ್ ಏರಿಯಾದ ಸೈದಾಪುರ ಹೊಟೆಲ್ ಹತ್ತಿರ ಮುಖ್ಯ ರಸ್ತೆಯ ಬದಿಯಲ್ಲಿ ನಿಂತಿದ್ದ ನನ್ನ ತಂದೆಗೆ ಯಾವುದೋ ಒಂದು ಕಾರ್ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಡಿಕ್ಕಿಹೊಡೆದು ಅಪಘಾತಪಡಿಸಿ, ಘಟನಾ ಸ್ಥಳದಿಂದ ಕಾರ್ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಘಟನೆಯ ಬಗ್ಗೆ ತಮ್ಮದೊಂದು ಲಿಖಿತ ದೂರು ಅಜರ್ಿಯನ್ನು ಸಲ್ಲಿಸಿದ್ದು, ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 27/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ: 447 ಐಪಿಸಿ: ಇಂದು ದಿನಾಂಕ:18/05/2022 ರಂದು 2-30 ಪಿಎಮ್ ಕ್ಕೆ ಶ್ರೀ ಪ್ರಶಾಂತ ತಂದೆ ಗುರುನಾಥರೆಡ್ಡಿ ಬಸರೆಡ್ಡಿ, ವ:37, ಜಾ:ಲಿಂಗಾಯತ ರೆಡ್ಡಿ, ಉ:ಒಕ್ಕಲುತನ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾಯ್ಕಲ್ ಗ್ರಾಮದ ಹೊರ ವಲಯದಲ್ಲಿ ಜಮೀನು ಸವರ್ೆ ನಂ. 448 ವಿಸ್ತೀರ್ಣ 1 ಎಕರೆ 01 ಗುಂಟೆ ಜಮೀನು ಇದ್ದು, ಸದರಿ ಜಮೀನನ್ನು ಅದರ ಮೂಲ ಮಾಲಿಕರಾದ ಶ್ರೀ ಸಂಗಮೇಶ್ವರ ತಂದೆ ಸಿದ್ದಬಸಯ್ಯ ಗುರುಸ್ಥಲಮಠ ಈತನು ಸದರಿ ಜಮೀನನ್ನು ದಿನಾಂಕ:19/01/2015 ರಂದು ನನಗೆ ಖರೀದಿ ಕೊಡಲು ಮಾತುಕತೆಯಾಗಿರುತ್ತದೆ. ಸದರಿ ಮಾತುಕತೆಯಂತೆ ಸವರ್ೆ ನಂ. 448 ವಿಸ್ತೀರ್ಣ 1 ಎಕರೆ 01 ಗುಂಟೆ ಜಮೀನನ್ನು ದಿನಾಂಕ:25/03/2022 ರಂದು ಶ್ರೀ ಸಂಗಮೇಶ್ವರ ಈತನು ನನಗೆ ಶಹಾಪುರ ಉಪ-ನೊಂದಣಿ ಕಛೇರಿಯಲ್ಲಿ ರಿಜಿಸ್ಟರ ಮಾಡಿಕೊಟ್ಟಿರುತ್ತಾರೆ. ಅದರಂತೆ ಜಮೀನು ನನ್ನ ಹೆಸರಿಗೆ ವಗರ್ಾವಣೆಯಾಗಿ ಪಹಣಿಯಲ್ಲಿ ನನ್ನ ಹೆಸರು ಬಂದಿರುತ್ತದೆ. ಆಗಿನಿಂದ ನಾನು ಸದರಿ ಮೇಲ್ಕಂಡ ಜಮೀನಿನ ಕಬ್ಜೆದಾರನು ಮತ್ತು ಸಾಗುವಳಿದಾರನಾಗಿರುತ್ತೇನೆ. ಹೀಗಿದ್ದು ಸುಮಾರು ಒಂದು ತಿಂಗಳ ಹಿಂದೆ ದಿನಾಂಕ:25/04/2022 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಾನು ಮತ್ತು ಶಿವಕುಮಾರ ತಂದೆ ಮಹಿಪಾಲರೆಡ್ಡಿ ಹಾಗೂ ಮಹಿಪಾಲರೆಡ್ಡಿ ತಂದೆ ಭೀಮರೆಡ್ಡಿ ರವರು ನಮ್ಮ ಮೇಲ್ಕಂಡ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ 1) ಮಲ್ಲಿಕಾಜರ್ುನರೆಡ್ಡಿ ತಂದೆ ಚನ್ನಾರೆಡ್ಡಿ ದೇಸಾಯಿ, 2) ವೆಂಕಟರೆಡ್ಡಿ ತಂದೆ ಚನ್ನಾರೆಡ್ಡಿ ದೇಸಾಯಿ ಮತ್ತು 3) ಸುರೇಶ ತಂದೆ ಚನ್ನಾರೆಡ್ಡಿ ದೇಸಾಯಿ ಎಲ್ಲರೂ ಸಾ:ನಾಯ್ಕಲ್ ಈ ಮೂರು ಜನ ಬಂದು ನನ್ನ ಮೇಲ್ಕಂಡ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಸಿಮೆಂಟ್ ಕಂಬಗಳನ್ನು ತಂದು ಹಾಕುತ್ತಿದ್ದರು. ಆಗ ನಾನು ನನ್ನ ಜಮೀನಿನಲ್ಲಿ ಸಿಮೆಂಟ್ ಕಂಬಗಳನ್ನು ಏಕೆ ಹಾಕುತ್ತಿರಿ, ನನ್ನ ಜಮೀನಿಗೂ ನಿಮಗೂ ಏನು ಸಂಬಂಧ ಇರುವುದಿಲ್ಲ ಎಂದು ಹೇಳಿದರು ಕೇಳದೆ ಅವರು ನನ್ನ ಜಮೀನಿನಲ್ಲಿ ಅತಿಕ್ರಮಣ ಮಾಡಿ ಸುಮಾರು 08 ಸಿಮೆಂಟ್ ಕಂಬಗಳನ್ನು ಹಾಕಿ ಹೋಗಿರುತ್ತಾರೆ. ನಾನು ಕಂದಾಯ ಇಲಾಖೆ ಮತ್ತು ಇತರ ಇಲಾಖೆಗಳಿಗೆ ಈ ಸಂಬಂಧ ಭೇಟಿಯಾಗಿ ಇನ್ನು ಕೆಲ ದಾಖಲಾತಿಗಳನ್ನು ಸಂಗ್ರಹಿಸಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಕಬ್ಜೆಯಲ್ಲಿರುವ ಜಮೀನು ಸವರ್ೆ ನಂ. 448 ವಿಸ್ತೀರ್ಣ 1 ಎಕರೆ 01 ಗುಂಟೆ ನೇದರಲ್ಲಿ ಬಂದು ಅತಿಕ್ರಮಣ ಪ್ರವೇಶ ಮಾಡಿ ಸಿಮೆಂಟ್ ಕಂಬಗಳನ್ನು ನೇಡು ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 66/2022 ಕಲಂ: 447 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 17/2022 ಕಲಂ: 174 ಸಿ.ಆರ್.ಪಿ.ಸಿ: ಇಂದು ದಿನಾಂಕ: 18/05/2022 ರಂದು 9 ಎ.ಎಂ.ಕ್ಕೆ ಶ್ರೀಮತಿ ಯಲ್ಲಮ್ಮ ಗಂಡ ರಮೇಶ ಕಡಿಗುಡ್ಡಾ ವಯಾ:40 ವರ್ಷ ಜಾ:ವಡ್ಡರ ಉ:ಕೂಲಿಕೆಲಸ ಸಾ:ತಿಮ್ಮಾಪೂರ ಸುರಪೂರ ಇವರು ಠಾಣೆಗೆ ಬಂದು ಪಿಯರ್ಾದಿ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಮಗೆ ಬಸವರಾಜ ವಯಾ:25 ವರ್ಷ, ಹಣಮಂತ ವಯಾ:17 ವರ್ಷ ಎಂಬ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿದ್ದು ಇವಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಾನು, ನನ್ನ ಗಂಡನಾದ ರಮೇಶ ಇಬ್ಬರು ಕೂಲಿಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಕುಟುಂಬ ಸಮೇತವಾಗಿ ಸುರಪೂರದ ತಿಮ್ಮಾಪೂರ ಏರಿಯಾದ ನಮ್ಮ ಮನೆಯಲ್ಲಿ ಉಪ ಜೀವನ ಮಾಡುತ್ತಿದ್ದೇವೆ. ಹೀಗಿದ್ದು ಇಂದು ದಿನಾಂಕ:18/05/2022 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಾನು, ನನ್ನ ಮಗನಾದ ಹಣಮಂತ, ನಮ್ಮ ಸೊಸೆಯಾದ ಯಲ್ಲಮ್ಮ ಅಂಬ್ರಾಪೂರ ಎಲ್ಲರು ನಮ್ಮ ಮನೆಯಲ್ಲಿರುವಾಗ ನನ್ನ ಗಂಡನಾದ ರಮೇಶ ತಂದೆ ಬಸವರಾಜ ಕಡಿಗುಡ್ಡಾ ವಯಾ:44 ವರ್ಷ ಜಾ:ವಡ್ಡರ ಸಾ:ತಿಮ್ಮಾಪೂರ ಸುರಪೂರ ಈತನು ನನಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮ ಮನೆಯಿಂದ ಹೋಗಿದ್ದು ಇರುತ್ತದೆ. ನಂತರ ಅಂದಾಜು ಬೆಳಿಗ್ಗೆ 8-15 ಗಂಟೆ ಸುಮಾರಿಗೆ ನಮ್ಮ ಓಣಿಯ ಯಲ್ಲಪ್ಪ ತಂದೆ ಹಣಮಂತ ಚಿಂಚಿರಿಕಿ ಇವರು ನಮಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಿನ್ನ ಗಂಡನಾದ ರಮೇಶ ಇತನಿಗೆ ಅಂದಾಜು ಬೆಳಿಗ್ಗೆ 8 ಗಂಟೆ ಸುಮಾರಿಗೆ ತಿಮ್ಮಾಪೂರ ಏರಿಯಾದ ಬಸ್ ನಿಲ್ದಾಣದ ಹತ್ತಿರ ಇರುವ ಎಸ್.ಎಲ್.ವಿ ವೈನ್ ಶಾಪ್ದ ಶೆಟರ್ಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿದನ್ನು ತಿಳಿಯದೇ ನಿನ್ನ ಗಂಡನು ಶೆಟರ್ಗೆ ಅಂಟಿಕೊಂಡು ಕುಳಿತುಕೊಳ್ಳಲು ಹೋದಾಗ ನಿನ್ನ ಗಂಡನಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತ ಪಟ್ಟಿದ್ದು, ನೀವು ಬೇಗ ಬನ್ನೀರಿ ಅಂತಾ ವಿಷಯ ತಿಳಿಸಿದಾಗ ಗಾಭರಿಯಾಗಿ ನಾನು, ನನ್ನ ಮಗನಾದ ಹನಮಂತ, ನಮ್ಮ ಸೊಸೆಯಾದ ಯಲ್ಲಮ್ಮ ಅಂಬ್ರಾಪುರ, ನಮ್ಮ ಓಣಿಯ ಮಲ್ಲೇಶಿ ತಂದೆ ನಾಗಪ್ಪ ಬೋವಿ, ಭೀಮಣ್ಣ ತಂದೆ ರಾಮಣ್ಣ ಬೋವಿ, ಎಲ್ಲರು ಕೂಡಿಕೊಂಡು ತಿಮ್ಮಾಪೂರ ಬಸ್ ನಿಲ್ದಾಣದ ಹತ್ತಿರ ಇರುವ ಎಸ್.ಎಲ್.ವಿ ವೈನ್ ಶಾಪ್ದ ಹತ್ತಿರ ಬಂದು ನೋಡಲಾಗಿ ನನ್ನ ಗಂಡನು ಎಸ್.ಎಲ್.ವಿ ವೈನ್ ಶಾಪ್ದ ಶೆಟರ್ಗೆ ಅಂಟಿಕೊಂಡು ಕುಳಿತಿರುವಾಗ ನನ್ನ ಗಂಡನ ಎಡಗಡೆ ಕಿವಿಗೆ ಆಕಸ್ಮಿಕವಾಗಿ ವಿದ್ಯುತ ತಗುಲಿ ಶಾಖ ಹೊಡೆದ ಪರಿಣಾಮದಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ನಂತರ ನಾನು, ನನ್ನ ಮಗನಾದ ಹನಮಂತ, ನಮ್ಮ ಸೊಸೆಯಾದ ಯಲ್ಲಮ್ಮ ಅಂಬ್ರಾಪುರ, ನಮ್ಮ ಓಣಿಯ ಮಲ್ಲೇಶಿ ತಂದೆ ನಾಗಪ್ಪ ಬೋವಿ, ಭೀಮಣ್ಣ ತಂದೆ ರಾಮಣ್ಣ ಬೋವಿ, ಯಲ್ಲಪ್ಪ ತಂದೆ ಹಣಮಂತ ಚಿಂಚಿರಿಕಿ ಎಲ್ಲರು ಕೂಡಿಕೊಂಡು ಮೃತ ಪಟ್ಟ ನನ್ನ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ಸುರಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ತಂದು ಹಾಕಿದ್ದು ಇರುತ್ತದೆ. ಸದರಿ ನನ್ನ ಗಂಡನಾದ ರಮೇಶ ಕಡಿಗುಡ್ಡ ಇತನಿಗೆ ದಿನಾಂಕ:18/05/2022 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ತಿಮ್ಮಾಪೂರ ಬಸ್ ನಿಲ್ದಾಣದ ಹತ್ತಿರ ಇರುವ ಎಸ್.ಎಲ್.ವಿ ವೈನ್ ಶಾಪ್ದ ಶೆಟರ್ಗೆ ಅಂಟಿಕೊಂಡು ಕುಳಿತಿರುವಾಗ ಆಕಸ್ಮಿಕವಾಗಿ ವಿದ್ಯುತ ತಗುಲಿ ಶಾಖ ಹೊಡೆದ ಪರಿಣಾಮದಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ನನ್ನ ಗಂಡನಾದ ರಮೇಶ ಇತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಬಗೈರೆ ಇರುವುದಿಲ್ಲ ಹಾಗೂ ಯಾರ ಮೇಲು ಪಿಯರ್ಾದಿ ವಗೈರೆ ಇರುವದಿಲ್ಲ ಮಾನ್ಯರವರು ಮುಂದಿನ ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂಬರ 17/2022 ಕಲಂ. 174 ಸಿಆರ್ಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 77/2022 ಕಲಂ 323, 324, 355, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ:18/05/2022 ರಂದು 1:30 ಪಿ.ಎಂ. ಕ್ಕೆ ಶ್ರೀ ಅಲ್ತಾಫ್ ಹುಸೇನ ತಂದೆ ಚಂದಾಹುಸೇನ್ ಸಗರಿ ವ|| 42 ವರ್ಷ ಜಾ|| ಮುಸ್ಲಿಂ ಉ|| ಟೇಲರ ಸಾ|| ಬಡೆ ಬಜಾರ ಬೀಚ್ ಮೊಹಲ್ಲಾ ರಂಗಮಪೇಟ್ ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನನಗೆ ನಾಲ್ಕು ಜನ ಮಕ್ಕಳಿದ್ದು, ಒಬ್ಬ ಗಂಡು ಮಗ, ಮೂರು ಜನ ಹೆಣ್ಣು ಮಕ್ಕಳಿರುತ್ತಾರೆ. ನಮ್ಮ ಓಣಿಯ ನಮ್ಮ ಮನೆಯ ಹತ್ತಿರ ಗಫರಸಾಬ ನಗನೂರಿ ಮತ್ತು ನಮ್ಮ ದೂರದ ಸಂಬಂದಿಕರಾದ ಸೈಯ್ಯದ ಶಫಿಯುರ ರಹೆಮಾನ ತಂದೆ ಸೈಯ್ಯದ ಅತಾವುರ ರಹೆಮಾನ ಸಾ|| ಕಲಬುರಗಿ ರವರ ರಂಗಪೇಟ್ದಲ್ಲಿ ಪ್ಲಾಟ್ನ ಜಾಗದ ವಿಷಯದಲ್ಲಿ ಅವರಿಗೂ ನಮ್ಮ ಸಂಬಂದಿಕರಿಗೂ ತಕರಾರು ಇದ್ದಿರುತ್ತದೆ. ಅದೇ ವಿಷಯವಾಗಿ ದಿನಾಂಕ:15/05/2022 ರಂದು ಮುಂಜಾನೆ 10:00 ಗಂಟೆಗೆ ನಮ್ಮ ಸಂಬಂದಿಕನಾದ ಸೈಯ್ಯದ ಶಫಿಯುರ ರಹೆಮಾನ ಇವರು ತಮ್ಮ ಜಾಗದಲ್ಲಿ ಮಾಕರ್ಿಂಗ್ ಹಾಕುತ್ತಿರುವಾಗ ನಮ್ಮ ಓಣಿಯವರಾದ 1) ಅಬ್ದುಲ್ ಗಫರಸಾಬ ತಂದೆ ಖಾಜಾಸಾಬ ನಗನೂರಿ, 2) ಸಲ್ಮಾನ ತಂದೆ ಅಬ್ದುಲ್ ಗಫರಸಾಬ ನಗನೂರಿ, 3) ಖದೀರ ತಂದೆ ಅಬ್ದುಲ್ ಜಹುರ ನಗನೂರಿ ಮೂರು ಜನರು ಕೂಡಿ ಬಂದು ಈ ಜಾಗದ ವಿಷಯದಲ್ಲಿ ತಕರಾರು ಇರುತ್ತದೆ. ಈ ಜಾಗ ತಕರಾರು ಇದ್ದು ಇದರಲ್ಲಿ ಯಾರು ಏನು ಕೆಲಸ ಮಾಡುವ ಹಾಗಿಲ್ಲ ಅಂತಾ ಅಂದಿದಕ್ಕೆ ಸೈಯ್ಯದ ಶಫಿಯುರ ರಹೆಮಾನ ಇವರು ಸುಮ್ಮನೆ ತಮ್ಮ ಊರಿಗೆ ಹೋದರು. ನಮ್ಮ ತಂದೆಯವರು ಮಾಕರ್ಿಂಗ್ ಮಾಡುವಾಗ ಆ ಜಾಗದ ಕಡೆಗೆ ಹೊಗಿದ್ದರಿಂದ ಅಂದಾಜು 10:30 ಎ.ಎಂ ಕ್ಕೆ ನಾನು ಮತ್ತು ನನ್ನ ತಮ್ಮ ಮಹ್ಮದ ಗೌಸ್ ಇಬ್ಬರು ಕೂಡಿ ನಮ್ಮ ತಂದೆಗೆ ಕರೆಯಲು ಹೊದಾಗ, ನನಗೆ ಗಫರಾಸಾಬ ಇತನು ಎನಲೇ ರಂಡಿಮಗನೆ ಅವರಿಗೂ ನಮಗೂ ಜಗಳ ಹಚ್ಚಿ ಇವಾಗ ನಿಮ್ಮ ತಂದೆಗೆ ಕರೆದುಕೊಂಡು ಹೋಗಲು ಬಂದಿಯನಲೇ ಸೂಳೆ ಮಗನೇ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ, ನನಗೂ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ನಾನು ನಮ್ಮ ತಂದೆಗೆ ಕರೆದುಕೊಂಡು ಹೋಗಲು ಬಂದಿನಿ ಅಂತಾ ಅನ್ನುತ್ತಿದ್ದಾಗ ಸಲ್ಮಾನ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕಡವಿ ಕೈ ಮುಷ್ಠಿ ಮಾಡಿ ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿದನು. ಖದೀರ ಇತನು ತನ್ನ ಎಡಗಾಲಿನ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದನು. ಆಗ ಅಲ್ಲೆ ಇದ್ದ ನನ್ನ ತಮ್ಮ ಮಹ್ಮದ ಗೌಸ್ ಮತ್ತು ನನ್ನ ತಂದೆ ಚಂದಾಹುಸೇನ್, ಅಲ್ಲೆ ಹೊರಟಿದ್ದ ಅಬೂಬಕರ ತಂದೆ ಅಬ್ದುಲ್ ಜಹುರ್ ಕಡಕಡ ಮೂವರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಇವರು ಬಿಡಿಸಿದ್ದಕ್ಕೆ ಇವತ್ತು ಬಿಟ್ಟಿವಿ ಇಲ್ಲಂದರೆ ನಿನ್ನ ಜೀವ ಹೊಡೆಯದೆ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊದರು. ನನಗೆ ಹೊಟ್ಟೆ ನೋವು ಆಗುತ್ತಿದ್ದರಿಂದ ನನ್ನ ತಮ್ಮ ಮಹ್ಮದ ಗೌಸ್ ಇತನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಉಪಚಾರ ಕುರಿತು ಸೇರಿಕೆ ಮಾಡಿದನು. ಉಪಚಾರ ಪಡೆದುಕೊಂಡು ಇಂದು ನನ್ನ ತಂದೆಯವರೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 77/2022 ಕಲಂ: 323, 324, 355, 504, 506 ಸಂಗಡ 34 ಐಪಿಸಿ ನೇದ್ದರ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ: 379 ಐಪಿಸಿ; ಇಂದು ದಿನಾಂಕ:18/05/2022 ರಂದು 9-30 ಎಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ:18/05/2022 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸಂಗಡ ತಾಯಪ್ಪ ಹೆಚ್.ಸಿ 79, ಮಹೇಂದ್ರ ಪಿಸಿ 254 ಮತ್ತು ಸಾಬರೆಡ್ಡಿ ಪಿಸಿ 290 ರವರೊಂದಿಗೆ ಸರಕಾರಿ ಜೀಪ್ ನಂ. ಕೆಎ 33 ಜಿ 0164 ನೇದ್ದರಲ್ಲಿ ರಾತ್ರಿ ಗಸ್ತು ಕರ್ತವ್ಯ ಮಾಡುತ್ತಾ ಮನಗನಾಳ ಗ್ರಾಮಕ್ಕೆ ಭೇಟಿ ನೀಡಿದೆವು. ಆಗ ನನಗೆ ಕೊಂಕಲ್-ಚನ್ನೂರು ಸೀಮಾಂತರದ ಕೃಷ್ಣಾ ನದಿಯಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳನ್ನು ಟಿಪ್ಪರನಲ್ಲಿ ತುಂಬಿಕೊಂಡು ಐಕೂರು, ತಡಿಬಿಡಿ ಮಾರ್ಗವಾಗಿ ಖಾನಾಪೂರ ಕಡೆ ಬರುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದಿದ್ದರಿಂದ ನಮ್ಮ ಸಿಬ್ಬಂದಿಯವರಿಗೆ ಅಕ್ರಮ ಮರಳು ಸಾಗಾಣಿಕೆಯ ಖಚಿತ ಬಾತ್ಮಿ ಬಂದ ವಿಷಯವನ್ನು ತಿಳಿಸಿ, ಎಲ್ಲರನ್ನು ನಮ್ಮ ಸರಕಾರಿ ಜೀಪಿನಲ್ಲಿ ಕರೆದುಕೊಂಡು ಹೊರಟು 6-15 ಎಎಮ್ ಸುಮಾರಿಗೆ ಯಾದಗಿರಿ-ಹತ್ತಿಗೂಡುರು ಮೇನ ರೋಡ ಖಾನಾಪೂರ ಕ್ರಾಸನ ವೆಂಕಟೇಶ್ವರ ಚೌಕನಲ್ಲಿ ಹೋಗಿ ನಿಂತುಕೊಂಡಾಗ 6-30 ಎಎಮ್ ಸುಮಾರಿಗೆ ತಡಿಬಿಡಿ ರೋಡಿನ ಕಡೆಯಿಂದ ಒಂದು ಟಿಪ್ಪರ ಬರುವುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಸದರಿ ಟಿಪ್ಪರ ನಿಲ್ಲಿಸಿ, ಚಾಲಕನಿಗೆ ವಶಕ್ಕೆ ಪಡೆಯಲು ಹೋದಾಗ ಅವನು ನಮ್ಮಿಂದ ಕೊಸರಿಕೊಂಡು ಓಡಿ ಹೋದನು. ಸದರಿ ಟಿಪ್ಪರನಲ್ಲಿ ಮರಳು ತುಂಬಿದ್ದು ಇತ್ತು. ಟಿಪ್ಪರ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಟಿಪ್ಪರ ನಂಬರ ನೋಡಲಾಗಿ ನಂ. ಕೆಎ 33 ಎ 9836 ಇರುತ್ತದೆ. ಸದರಿ ಟಿಪ್ಪರ ಅ:ಕಿ: 5 ಲಕ್ಷ ರೂ. ಮತ್ತು ಟಿಪ್ಪರನಲ್ಲಿರುವ ಮರಳಿನ ಅ:ಕಿ: 10,000/- ರೂ. ಆಗಬಹುದು. ಸದರಿ ಟಿಪ್ಪರ ಚಾಲಕನು ಅಕ್ರಮವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ಕಾರಣ ಸದರಿ ಟಿಪ್ಪರ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು 9-30 ಎಎಮ್ ಕ್ಕೆ ಟಿಪ್ಪರದೊಂದಿಗೆ ಮರಳಿ ಠಾಣೆಗೆ ಬಂದು ನಿಮಗೆ ಈ ದೂರು ನೀಡುತ್ತಿದ್ದು, ಸದರಿ ಟಿಪ್ಪರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 65/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 76/2022 ಕಲಂ 143,147,148, 323, 324, 504, 506 ಸಂ 149 ಐ.ಪಿ.ಸಿ; 17.05.2022 ರಂದು ರಾತ್ರಿ 9.30 ಗಂಟೆಯ ಪಿರ್ಯಾಧಿ ಮತ್ತು ಪಿರ್ಯಾಧಿಯ ತಂದೆ ಅಮ್ಮಪಲ್ಲಿ ಗ್ರಾಮದ ತಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತ್ತಿದ್ದಾಗ ಆರೋಪಿತರು ಗುಂಪುಕಟ್ಟಿಕೊಂಡು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.


ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 67/2022, ಕಲಂ, 143,147,323,341, 354, 504.506. ಸಂ.149 ಐ ಪಿ ಸಿ : 18-05-2022 ರಂದು ಸಾಯಂಕಾಲ 04-00 ಗಂಟೆಗೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 11-05-2022 ರಂದು ರಾತ್ರಿ 07-30 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದಿನ ಜಾಗದಲ್ಲಿ ತಿಪ್ಪೆ ಹಾಕಿದ್ದು ತಿಪ್ಪೆ ಗೊಬ್ಬರ ತುಂಬುವ ಕಾಲಕ್ಕೆ ಆರೋಪಿತರಷಲ್ಲರು ಸೇರಿಕೊಂಡು ಬಂದು ಲೇ ತುರ್ಕ ಸೂಳೆ ಮಕ್ಕಳೆ ಇಲ್ಲಿ ಯಾಕೆ ತಗ್ಗು ಮಾಡುತ್ತಿರಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಅಡ್ಡಗಟ್ಟಿ ನಿಲ್ಲಿಸಿ ಲೇ ಸೂಳೆ ಮಕ್ಕಳೆ ಇಲ್ಲಿನಾದರು ತಗಸು ಮಾಡಿದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಮಕ್ಕಳೆ ಅಂತಾ ಬೇದರಿಕೆ ಹಾಕಿ ಹೆಣ್ಣುಮಗಳಿಗೆ ಸೀರೆ ಬಿಚ್ಚಿ ಹೊಡೆಯತ್ತೇವೆ ಅಂತಾ ಬೈದು ಬೇದರಿಕೆ ಹಾಕಿದ ಬಗ್ಗೆ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 78/2022 ಕಲಂ 341, 323, 504, 506 ಸಂ 34 ಐ.ಪಿ.ಸಿ : ದಿನಾಂಕ:17.05.2022 ರಂದು ರಾತ್ರಿ 9.00 ಗಂಟೆಯ ಪಿರ್ಯಾಧಿ ಮತ್ತು ಅನೀಲ್ ಕುಮಾರ ಇಬ್ಬರೂ ಕೂಡಿ ತಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ಆರೋಪಿತರಿಬ್ಬರು ಬಂದು ಪಿರ್ಯಾಧಿಗೆ ಮತ್ತು ಅನೀಲಕುಮಾರ ಇವರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಾಲಿನಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 ಕಲಂ 279,338,304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿಎಕ್ಟ್: ಇಂದು ದಿನಾಂಕ: 18/05/2022 ರಂದುಮದ್ಯಾಹ್ನ ಮೃತಳು ತನ್ನ ತವರು ಮನೆಗೆ ಬಂದುಇಂದು7 ಪಿ.ಎಮ್. ಸುಮಾರಿಗೆ ಮೃತಳು ತನ್ನ ಗಂಡನ ಮೋಟರ್ ಸೈಕಲ್ ನಂ:ಕೆಎ-33, ಜೆ-443 ನೇದ್ದರ ಮೇಲೆ ಕುಳಿತು ತನ್ನಗಂಡ, ತನ್ನ ಅತ್ತೆ ಮಾಳಮ್ಮ, ತನ್ನ ಅಳಿಯ ಮಹೇಶ ಇವರೊಂದಿಗೆ ಹುಲಕಲ್ ದಿಂದ ಸಾದ್ಯಾಪೂರಗ್ರಾಮಕ್ಕೆ ಸಾದ್ಯಾಪೂರ ಸೀಮಾಂತರದ ಶಹಾಪೂರ-ಜೇವಗರ್ಿ ಮುಖ್ಯರಸ್ತೆಯ ಮೇಲೆ ನೀಲಕಂಠಯ್ಯ ಸ್ವಾಮಿ ಇವರ ಹೊಲದ ಹತ್ತಿರ ಹೊರಟಾಗ ಅವನ ಹಿಂದಿನಿಂದ ಆರೋಪಿತನು ತನ್ನ ಲಾರಿ ನಂ:ಕೆಎ-56, 2458 ನೇದ್ದನ್ನುಅತಿವೇಗ ಮತ್ತು ಅಲಕ್ಷನತದಿಂದ ಓಡಿಸಿಕೊಂಡು ಬಂದಿದ್ದರಿಂದ ಲಾರಿ ಚಾಲಕನ ನಿಯಂತ್ರಣತಪ್ಪಿ ಮೋಟರ್ ಸೈಕಲ್ಗೆಡಿಕ್ಕಿ ಹೊಡೆದು ಅಪಘಾತಪಡಿಸಿ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿಅಪಘಾತದಲ್ಲಿ ಲಾರಿ ಮೃತಳ ಮುಖದ ಮೇಲೆ ಹಾಯ್ದು ಹೋಗಿದ್ದರಿಂದ ಮೃತಳ ಮುಖಕ್ಕೆ, ತಲೆಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಾಳಮ್ಮ ಇವಳ ಎಡ ಭುಜಕ್ಕೆ ಭಾರಿಗುಪ್ತಗಾಯವಾಗಿದ್ದು, ಮಹೇಶ ಈತನ ತಲೆಗೆ ಭಾರಿರಕ್ತಗಾಯವಾಗಿದ್ದು, ಮೋಟರ್ ಸೈಕಲ್ ನಡೆಸುತ್ತಿದ್ದ ಮೃತಳ ಗಂಡನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಆರೋಪಿತನುತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸುವಂತೆ ದೂರು ಇರುತ್ತದೆ.


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:56/2022 ಕಲಂ:143,147,148, 323, 324, 326, 504, 506 ಸಂ.149 ಐಪಿಸಿ: : ಇಂದು ದಿನಾಂಕ.18/05/2022 ರಂದು 5-15 ಪಿಎಂಕ್ಕೆ ಶ್ರೀ ನಾನು ಕಿಷನ ತಂದೆ ಸೋಮ್ಲಾನಾಯಕ ರಾಠೋಡ ಸಾಃ ಮುದ್ನಾಳ ದೊಡ್ಡ ತಾಂಡಾ ತಾಃಜಿಃಯಾದಗಿರಿ ಈತನು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ, ನಮಗೂ ಮತ್ತು ನಮ್ಮ ತಾಂಡಾದ ಮೌನೇಶ ತಂದೆ ಶಂಕರ ಚವ್ಹಾಣ, ಭಿಮ್ಲಾ ನಾಯಕ ತಂದೆ ಸಕ್ರು ರಾಠೋಡ ಇವರಿಗೂ 10-12 ವರ್ಷಗಳಿಂದ ನಮ್ಮ ತಾಂಡಾದ ಹತ್ತಿರ ಇರುವ ರಾಚೋಟಿ ವೀರಣ್ಣ ಗುಡ್ಡದ ಹತ್ತಿರ ಬರುವ ನಮ್ಮ ಹೊಲ ಸವರ್ೆ ನಂ. 688/1 ವಿಸ್ತೀರ್ಣ 12 ಎಕರೆ, 39 ಗುಂಟೆ ಜಮೀನಿನ ಪಾಲಿನ ವಿಷಯದಲ್ಲಿ ತಕರಾರು ಇದ್ದು ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ತಕರಾರು ದಾವೆ ಹೂಡಿದ್ದು ಓ.ಎಸ್. ನಂ. 95/2013 ಪ್ರಕಾರ ದಾವೆ ಹೂಡಿದ್ದು ಇರುತ್ತದೆ. ಸದರಿ ಸವರ್ೆ ನಂ.688/1 ನೇದ್ದಕ್ಕೆ ಸಂಂದಿಸಿದಂತೆ ನಾನೇ ಕಬ್ಜಾದಾರನಿದ್ದು ಮಾನ್ಯ ನ್ಯಾಯಾಲಯದಲ್ಲಿ ನನ್ನಂತೆ ತೀಪರ್ು ಆಗಿರುತ್ತದೆ. ಹೊಲದ ವಿಷಯದಲ್ಲಿ ಮೊದಲಿಂದಲೂ ನಮಗೂ ಮತ್ತು ಅವರಿಗೂ ತಕರಾರು ಜಗಳಗಳು ಆಗುತ್ತಾ ಬಂದಿರುತ್ತವೆ. ಆದ್ದರಿಂದ ಇಂದು ದಿನಾಂಕ. 18/05/2022 ರಂದು ಬೆಳೆಗ್ಗೆ 7-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳು ಕೂಡಿಕೊಂಡು ನಮ್ಮ ಹೊಲ ಸವರ್ೆ ನಂ.688/1 ನೇದ್ದರಲ್ಲಿ ಹೋಗಿ ಹೊಲದಲ್ಲಿ ಬೆಳೆದಿರುವ ಮುಳ್ಳುಕಂಟಿಗಳು ಕಸ ಕಡ್ಡಿಗಳನ್ನು ಜೆ.ಸಿ.ಬಿ ಯಿಂದ ಸ್ವಚ್ಚ ಮಾಡುತ್ತಿದ್ದೆವು. ಆಗ 11-30 ಎಎಂ ಸುಮಾರಿಗೆ ಹೊಲ ಸ್ವಚ್ಚ ಮಾಡುತ್ತಿರುವ ಬಗ್ಗೆ ವಿಷಯ ಗೊತ್ತಾಗಿ ಆರೋಪಿತರೆಲ್ಲರೂ ಕೂಡಿಕೊಂಡು ಗುಂಪುಕಟ್ಟಿಕೊಂಡು ಪಿರ್ಯಾದಿ ಹೊಲದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಈ ಹೊಲದಲ್ಲಿ ಪಾಲು ಕೊಡು ಅಂದರೆ ಹೇಗೆ ಮಾನ್ಯ ನ್ಯಾಯಾಲಯದಲ್ಲಿ ಕೂಡಾ ತೀಪರ್ು ಆಗಿದ್ದು ಇರುತ್ತದೆ ಅಂತಾ ಅಂದಿದ್ದಕ್ಕೆ ಅವರೆಲ್ಲರೂ ಮತ್ತೆ ಕೋರ್ಟ ಕಚೇರಿ ಅಂತಾ ಸೂಳೇ ಮಗ ಇವತ್ತು ಪಾಲು ಕೊಡುವ ಬಗ್ಗೆ ಒಂದು ತೀಮರ್ಾನ ಆಗಬೇಕು ಇಲ್ಲಂದರೆ ಇವರಿಗೆ ಇವತ್ತು ಜೀವ ಸಹಿತ ಬಿಡಬಾರದು ಅಂತಾ ಜಗಳಾ ತೆಗೆದು ಹೊಡೆ ಬಡೆ ಮಾಡಿ ಬಾರಿ ರಕ್ತ ಗುಪ್ತಗಾಯ ಜೆಸಿಬಿಗೆ ಕಲ್ಲಿನಿಂದ ಹೊಡೆದು ಗ್ಲಾಸಗಳನ್ನು ಹೊಡೆದು ಹಾಕಿ 30,000/-ರೂ.ದಷ್ಟು ಲುಕ್ಸಾನ ಮಾಡಿದ್ದು ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 56/2022 ಕಲಂ. 143, 147, 148, 323, 324, 326, 427, 504, 506, ಸಂ. 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 19-05-2022 12:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080