ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-06-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 91/2022 ಕಲಂ. 279, 304(ಎ) ಐಪಿಸಿ : ಇಂದು ದಿನಾಂಕ:18-06-2022 ರಂದು 9:30 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ.ಗೋವಿಂದ ತಂದೆ ವೆಂಕಟೇಶ ಪವಾರ್, ವಯ:31 ವರ್ಷ, ಜಾತಿ:ಲಂಬಾಣಿ, ಉ||ಕೂಲಿಕೆಲಸ, ಸಾ||ಉಮ್ಲಾನಾಯಕತಾಂಡಾ, ಮುದ್ನಾಳ ತಾ||ಜಿ||ಯಾದಗಿರಿ ಇವರು ಒಂದು ದೂರು ಅಜರ್ಿ ಹಾಜರಪಡಿಸಿದ್ದು, ಸದರಿ ದೂರು ಅಜರ್ಿಯ ಸಾರಾಂಶವೇನೆಂದರೆ, ಇಂದು ದಿನಾಂಕ:18-06-2022 ರಂದು ಮಧ್ಯಾಹ್ನ ನನ್ನ ತಂದೆಯವರು ಯಾವುದೋ ಕೆಲಸಕ್ಕಾಗಿ ಯಾದಗಿರಿಗೆ ಹೋಗಿ ಬರುತ್ತೇನೆಂದು ಮೋಟರ್ ಸೈಕಲ್ ನಂ:ಕೆಎ-33 ಇಬಿ-5800 ತೆಗೆದುಕೊಂಡು ಹೋಗಿದ್ದನು. ನಂತರ ನಾನು ಸಹ ಕೆಲಸದ ನಿಮಿತ್ಯ ಮುದ್ನಾಳ ದೊಡ್ಡತಾಂಡಾದ ಆನಂದ ತಂದೆ ಉಮಾಜಿ ಚವ್ಹಾಣ ಇವರ ಹತ್ತಿರ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಆನಂದರವರ ಕಾರಿನಲ್ಲಿ ನಾನು ಮತ್ತು ಆನಂದ ಇಬ್ಬರು ಮುದ್ನಾಳಕ್ಕೆ ಹೋಗುವಾಗ ರಾತ್ರಿ 8:45 ಗಂಟೆಯ ಸುಮಾರಿಗೆ ಯಾದಗಿರಿ-ಮುದ್ನಾಳ ರಸ್ತೆಯ ಮೇಲೆ ನಮ್ಮ ಕಾರಿನ ಮುಂದುಗಡೆ ಸ್ವಲ್ಪ ದೂರದಲ್ಲಿ ನನ್ನ ತಂದೆಯವರು ಹೋಗುತ್ತಿದ್ದು, ಪೊಲೀಸ್ ಕ್ವಾರ್ಟರ್ಸ್ ಗೇಟ್ ಹತ್ತಿರ ಹೋಗುತ್ತಿರುವಾಗ ನನ್ನ ತಂದೆ ವೆಂಕಟೇಶರವರು ತನ್ನ ಮೋಟರ್ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದು, ನಾವು ನೋಡು ನೋಡುತ್ತಿದ್ದಂತೆ ನನ್ನ ತಂದೆಯವರು ಮೋಟರ್ ಸೈಕಲ್ ಮೇಲೆ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಮೋಟರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದು ನಂತರ ಜಾರಿಕೊಂಡು ರಸ್ತೆಯ ಪಕ್ಕದಲ್ಲಿರುವ ಗಿಡಕ್ಕೆ ಹೋಗಿ ಬಿದ್ದು ಅಪಘಾತವಾಗಿದ್ದು, ಆಗ ನಾವು ಕೂಡಲೇ ಕಾರನ್ನು ನಿಲ್ಲಿಸಿ ನಾನು ಮತ್ತು ಆನಂದ ಇಬ್ಬರು ಹೋಗಿ ನನ್ನ ತಂದೆಗೆ ನೋಡಲಾಗಿ ತಲೆಗೆ ಹಣೆಯಿಂದ ತಲೆಯ ಮಧ್ಯದವರೆಗೆ ಹರಿದ ಭಾರಿರಕ್ತಗಾಯವಾಗಿದ್ದು, ಕುತ್ತಿಗೆಗೆ ರಕ್ತಗಾಯವಾಗಿದ್ದು, ಬಲಕಾಲಿನ ಪಾದಕ್ಕೆ ತರುಚಿದಗಾಯಗಳಾಗಿ ಮೃತಪಟ್ಟಿದ್ದನು. ನಂತರ ಕೂಡಲೇ ನಾನು ಈ ವಿಷಯವನ್ನು ನನ್ನ ತಾಯಿಗೆ ಫೋನ್ ಮಾಡಿ ತಿಳಿಸಿ ನನ್ನ ತಂದೆಯ ಮೃತದೇಹವನ್ನು ಆನಂದರವರ ಕಾರಿನಲ್ಲಿ ಹಾಕಿಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತೇವೆ. ಕಾರಣ ದಿನಾಂಕ:18-06-2022 ರಂದು ರಾತ್ರಿ 8:45 ಗಂಟೆಯ ಸುಮಾರಿಗೆ ನನ್ನ ತಂದೆ ವೆಂಕಟೇಶ ತಂದೆ ರೇವು ಪವಾರ್, ವಯ:53 ವರ್ಷ, ಜಾತಿ:ಲಂಬಾಣಿ, ಉ||ಒಕ್ಕಲುತನ, ಸಾ||ಉಮ್ಲಾನಾಯಕತಾಂಡಾ ಮುದ್ನಾಳ ಈತನು ತನ್ನ ಮೋಟರ್ ಸೈಕಲ್ ನಂ:ಕೆಎ-33 ಇಬಿ-5800 ರ ಮೇಲೆ ಉಮ್ಲಾನಾಯಕ ತಾಂಡಾಕ್ಕೆ ಹೋಗುವಾಗ ಯಾದಗಿರಿ-ಮುದ್ನಾಳ ರಸ್ತೆಯ ಮೇಲೆ ಪೊಲೀಸ್ ಕ್ವಾರ್ಟರ್ಸ್ ಗೇಟ್ ತನ್ನ ಮೋಟರ್ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಬಿದ್ದು ಅಪಘಾತಪಡಿಸಿಕೊಂಡಿದ್ದು, ಅಪಘಾತದಲ್ಲಿ ಭಾರಿ ರಕ್ತಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಈ ಅಜರ್ಿಯ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:91/2022 ಕಲಂ:279, 304(ಎ) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಅಂತಾ ವಿನಂತಿ.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 98/2022 ಕಲಂ: 323, 354, 504, 506 ಸಂ. 34 ಐಪಿಸಿ : ಇಂದು ದಿನಾಂಕಃ 18/06/2022 ರಂದು 1:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀಮತಿ ಸಿದ್ದಮ್ಮ ಗಂಡ ಯಂಕಪ್ಪ ಗೊಗಡಿಹಾಳ ವ|| 35 ವರ್ಷ ಉ|| ಹೊಲಮನೆ ಕೆಲಸ ಸಾ|| ವಾಗಣಗೇರಿ ತಾ|| ಸುರಪೂ ಇವರು ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನಮಗೆ 5 ಜನ ಮಕ್ಕಳಿದ್ದು, ಇಬ್ಬರು ಹೆಣ್ಣುಮಕ್ಕಳು, ಮೂರು ಜನ ಗಂಡು ಮಕ್ಕಳಿರುತ್ತಾರೆ. ಇಬ್ಬರು ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಲ್ಲಿ ಹಿರಿಯವನಾದ ಬಸವರಾಜ ಈತನಿಗೆ ಮದುವೆ ಆಗಿರುತ್ತದೆ. ಇನ್ನುಳಿದ ಇಬ್ಬರು ಗಂಡು ಮಕ್ಕಳಿಗೆ ಮದುವೆ ಆಗಿರುವದಿಲ್ಲ. ಅವರಿಬ್ಬರೂ ಬೆಂಗಳೂರಿಗೆ ದುಡಿಯಲು ಹೋಗಿರುತ್ತಾರೆ. ಹಿರಿಯ ಮಗನಾದ ಬಸವರಾಜ ಈತನು ಕೂಲಿ ಕೆಲಸ ಮಾಡಿಕೊಂಡು ನಮ್ಮೊಂದಿಗೆ ಇರುತ್ತಾನೆ. ನಮ್ಮ ಗ್ರಾಮದ ನಮ್ಮ ಜನಾಂಗವನೇ ಆದ ರಾಮನಗೌಡ ತಂದೆ ಅಯ್ಯಣ್ಣಗೌಡ ಪಾಟೀಲ್ ಈತನು ವಿನಾ ಕಾರಣ ನನ್ನ ಮಗ ಬಸವರಾಜ ಈತನೊಂದಿಗೆ ಆಗಾಗ ತಕರಾರು ಮಾಡುತ್ತಾ ಬಂದಿದ್ದನು. ಈ ವಿಷಯವನ್ನು ನಮ್ಮ ಮಗನು ನಮಗೆ ತಿಳಿಸಿದಾಗ ನಾವು ಅವರ ತಂದೆಯವರಿಗೆ ಹೇಳಿದರಾಯ್ತು ನೀನು ಸುಮ್ಮನೇ ಇರು ಅಂತಾ ನಮ್ಮ ಮಗನಿಗೆ ಬುದ್ಧಿ ಮಾತು ಹೇಳಿದ್ದೇವು. ಹೀಗಿದ್ದು ಇಂದು ದಿನಾಂಕ: 16/06/2022 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು, ನನ್ನ ಮಗ ಬಸವರಾಜ ಮತ್ತು ನಮ್ಮ ಭಾವನ ಮಗನಾದ ಸಿದ್ರಾಮ ತಂದೆ ಬಿಕ್ಕಪ್ಪ ಮೂವರು ನಮ್ಮ ಮನೆಯ ಮುಂದೆ ಅಂಗಳದಲ್ಲಿ ಮಾತನಾಡುತ್ತಾ ಕೂಳಿತುಕೊಂಡಿದ್ದಾಗ ನಮ್ಮ ಗ್ರಾಮದ 1) ಶಿವರಾಜ ತಂದೆ ಅಯ್ಯಣ್ಣಗೌಡ ಪಾಟೀಲ್ ಹಾಗೂ ಅವರ ತಮ್ಮ 2) ರಾಮನಗೌಡ ತಂದೆ ಅಯ್ಯಣ್ಣಗೌಡ ಪಾಟೀಲ್ ಇಬ್ಬರು ನಮ್ಮ ಮನೆಯ ಮುಂದೆ ನಿಂತುಕೊಂಡು ವಿನಾ ಕಾರಣ ಎಲೇ ಬಸ್ಯಾ ಸೂಳಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ರಂಡಿ ಮಗನೆ ಅಂತಾ ಅವಾಚಯ ಶಬ್ದಗಳಿಂದ ಬೈಯುತ್ತಿದ್ದರು. ಆಗ ನಾನು ಸುಮ್ಮನೇ ಯಾಕೇ ಈ ರೀತಿ ವೈಯುತ್ತಿದ್ದಿರಿ. ನಮ್ಮ ಮಗನ ನಿಮಗೇನು ಮಾಡಿದ್ದಾನೆ. ನಿವೇ ಅವನೊಂದೊಗೆ ವಿನಾ ಕಾರಣ ಜಗಳ ಮಾಡುತ್ತಾ ಬಂದಿದ್ದರು ನಾವು ಸುಮ್ಮನೇ ಇದ್ದಿವಿ ಅಂತಾ ಅನ್ನುತ್ತಿದ್ದಾಗ ಶಿವರಾಜ ಈತನು ಎನಲೇ ರಂಡಿ ನೀ ಏನು ಕೇಳಿತ್ತಿ ಅಂತಾ ಅವಾಚ್ಯವಾಗಿ ಬೈದವನೇ ತನ್ನ ಕೈಯಿಂದ ನನ್ನ ಬೆನ್ನಿಗೆ, ಬಲಗಡೆ ಭುಜಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ರಾಮನಗೌಡ ಈತನು ತನ್ನ ಕಾಲಿನಿಂದ ನನ್ನ ಹೊಟ್ಟೆಗೆ ಒದ್ದು ಗುಪ್ತಗಾಯ ಮಾಡಿ, ನನ್ನ ಸೀರೆ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡುತ್ತಿದ್ದಾಗ ಬಿಡಸಲು ಬಂದ ನನ್ನ ಮಗ ಬಸವರಾಜ ಮತ್ತು ಸಿದ್ರಾಮ ಇವರಿಗೆ ನೆಲಕ್ಕೆ ದಬ್ಬಿಸಿಕೊಟ್ಟರು. ಆಗ ನಾವು ಚಿರಾಡುವ ಶಬ್ದ ಕೇಳಿ ಕುಮಾರ ನಾಯಕ ತಂದೆ ಮಾನಪ್ಪಗೌಡ ಪಾಟೀಲ್, ಅಂಬ್ಲಪ್ಪ ತಂದೆ ಮಾನಪ್ಪ ಟಣಕೇದಾರ ಇವರು ಬಂದು ಜಗಳ ಬಿಡಿಸಿದರ. ಆಗ ಅವರು ಇವತ್ತು ಇವರು ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿದಿರಿ ಸೂಳೆ ಮಕ್ಕಳೆ. ಇಲ್ಲದಿದ್ದರೆ ನಿಮ್ಮ ಜೀವಸಹಿತ ಬಿಡುತ್ತಿರಲಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ಘಟನೆಯಲ್ಲಿ ಅಷ್ಟೇನು ಗಾಯಗಳಾಗಿರದ ಕಾರಣ ಆಸ್ಪತ್ರೆಗೆ ತೊರೊಸಿಕೊಂಡಿರುವದಿಲ್ಲ. ಮನೆಯಲ್ಲಿ ನಾನು ಗಂಡನೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ನನಗೆ ಹೊಡೆ ಬಡೆ ಮಾಡಿ, ಮಾನಭಂಗ ಮಾಡಲು ಪ್ರಯತ್ನಿಸಿ, ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ ನಾಲ್ಕೂ ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 98/2022 ಕಲಂ: 323, 354, 504, 506 ಸಂ. 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 107/2022 ಕಲಂ 87 ಕೆ.ಪಿ ಆಕ್ಟ : ಇಂದು ದಿನಾಂಕ 18/06/2022 ರಂದು, ಸಾಯಂಕಾಲ 19-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಬಾಬುರಾವ್ ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ರವರು, 7 ಜನರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 18/06/2022 ರಂದು, ಸಾಯಂಕಾಲ 16-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಕನ್ಯಾಕೊಳ್ಳುರ ಗ್ರಾಮದ ಹನುಮಾನ ಗುಡಿಯ ಮುಂದೆ ಇರುವ ಕಟ್ಟೆಯ ಮೇಲೆ ಜೂಜಾಟ ಆಡುತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಫಿಯರ್ಾದಿ ಮತ್ತು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-0316 ನೇದ್ದರಲ್ಲಿ ಕನ್ಯಾಕೊಳ್ಳುರ ಗ್ರಾಮಕ್ಕೆ ಹೋಗಿ ಸಾಯಂಕಾಲ 17-00 ಗಂಟೆಗೆ ಜೂಜಾಟ ಆಡುತಿದ್ದವರ ಮೇಲೆ ದಾಳಿ ಮಾಡಿ 7 ಜನ ಆರೋಪಿತರನ್ನು ಹಿಡಿದು ಅವರೆಲ್ಲರಿಂದ ನಗದು ಹಣ 2970 ರೂಪಾಯಿ ಮತ್ತು ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 17-15 ಗಂಟೆಯಿಂದ 18-15 ಗಂಟೆಯ ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿದ್ದು ಸದರಿ 7 ಜನರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 107/2022 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 106/2022 ಕಲಂ: 87 ಕೆಪಿ ಯಾಕ್ಟ : ಇಂದು ದಿನಾಂಕ 18.06.2022 ರಂದು 6.30 ಪಿ ಎಮ್ ಮಾನ್ಯ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ಒಂದು ವರಧಿ ಹಾಜರುಪಡಿಸಿದ್ದರ ಸಾರಾಂಶವೇನಂದರೆ, ಇಂದು ದಿನಾಂಕ 18.06.2022 ರಂದು 4.00 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ನಗನೂರ ಗ್ರಾಮದ ಗುಡ್ಡದ ಗುರಲಿಂಗಯ್ಯನ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು, ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎನ್ನುವ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಮಾನ್ಯ ಸಿಪಿಐ ಸಾಹೇಬರು ಹುಣಸಗಿ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಠಾಣೆಯ ಶಿವಲಿಂಗಪ್ಪ ಹೆಚ್ ಸಿ 185, ಆನಂದ ಪಿಸಿ 43, ಈರಪ್ಪ ಪಿಸಿ 386, ಪ್ರಭುಗೌಡ ಪಿಸಿ 361, ಬಸವರಾಜ ಪಿಸಿ 363, ಮಾಳಪ್ಪ ಪಿಸಿ 29 ಮತ್ತು ಸೈಯದ್ ಪಿಸಿ 106, ಸಿದ್ದಪ್ಪ ಪಿಸಿ 129, ಶಿವಪ್ಪ ಪಿಸಿ 326 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಮತ್ತು ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 4.10 ಪಿಎಂ ಕ್ಕೆ ಹೊರಟು 4.35 ಪಿಎಂ ಕ್ಕೆ ನಗನೂರ ಗ್ರಾಮದ ಗುಡ್ಡದ ಗುರಲಿಂಗಯ್ಯನ ಗುಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಎನ್ನುವ ಇಸ್ಪೀಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 4.40 ಪಿಎಂ ಕ್ಕೆ ನಾನು, ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 10 ಜನರು ಸಿಕ್ಕಿದ್ದು ಸಿಕ್ಕವರ ಹೆಸರು ವಿಳಾಸ ವಿಚಾರಿಸಲಾಗಿ 1) ಆಂಜನೇಯ ತಂದೆ ಗೋವಿಂದರಾಜ ವ|| 48 ಜಾ|| ರಜಪೂತ ಉ|| ಕೂಲಿ ಸಾ|| ವನದುಗರ್ಾ ತಾ|| ಶಹಾಪೂರ ಈತನ ಒಂದು ಟೈಟಲ್ ಕಂಪನಿಯ ಮೋಬೈಲ್ ಅಕಿ, 600/- ರೂ 2) ಮುರಗೇಶ ತಂದೆ ಶರಣಪ್ಪ ಕಲಕೇರಿ ವ|| 35 ಜಾ|| ಲಿಂಗಾಯತ ಉ|| ಕೂಲಿ ಸಾ|| ಮಲ್ಲಾ[ಬಿ]. ಈತನ ಒಂದು ಕೆಚಡಾ ಕಂಪನಿಯ ಮೋಬೈಲ್ ಅಕಿ,300/-ರೂ 3) ಈಶ್ವರ ತಂದೆ ಸಾಹೇಬಗೌಡ ದೇವರ ಹಿಪ್ಪರಗಿ ವ|| 32 ಜಾ|| ಕುರಬರ ಉ|| ಕೂಲಿ ಸಾ|| ದೇವರ ಗೋನಾಲ ಈತನ ಒಂದು ರೆಡಮಿ ಕಂಪನಿಯ ಮೋಬೈಲ ಅಕಿ.1500/-ರೂ. 4] ಗುರಲಿಂಗ ತಂದೆ ಅಡಿವೆಪ್ಪ ಮೈಲಾಪೂರ ವ|| 45 ಜಾ|| ಲಿಂಗಾಯತ ಉ|| ಕೂಲಿ ಸಾ|| ನಗನೂರ ಈತನ ಒಂದು ರೀಯಲ್ ಮಿ ಕಂಪನಿಯ ಮೋಬೈಲ ಅಕಿ.1200/-ರೂ 5] ನಿಜಾಮ ತಂದೆ ಭಾಷಾಸಾಬ ಮುಲ್ಲಾ ವ|| 19 ಜಾ|| ಮುಸ್ಲೀಂ ಉ|| ಕೂಲಿ ಸಾ|| ಹದನೂರ ಈತನ ಒಂದು ರೆಡಮೀ ಮೋಬೈಲ್ ಅಕಿ,1000/- ರೂ 6] ಅಭಿಶೇಖ ತಂದೆ ವಿಜಯಕುಮಾರ ರಾಠೋಡ ವ|| 22 ಜಾ|| ಲಮಾಣಿ ಉ|| ಕೂಲಿ ಸಾ|| ಉಕ್ಕಿನಾಳ ತಾಂಡಾ 7] ಕೈಲಾಸ ತಂದೆ ದೇವರಾಜ ಜಾದವ ವ|| 22 ಜಾ|| ಲಮಾಣಿ ಉ|| ಕೂಲಿ ಸಾ|| ಉಕ್ಕಿನಾಳ ತಾಂಡಾ ಈತನ ಒಂದು ಓಪೋ ಕಂಪನಿಯ ಮೋಬೈಲ ಅಕಿ 1500/-ರೂ 8] ಪೀರಸಾಬ ತಂದೆ ಬಂದಗೀಸಾಬ ಮುಜಾವರ ವ|| 28 ಜಾ|| ಮುಸ್ಲೀಂ ಉ|| ಕೂಲಿ ಸಾ|| ಮಲ್ಲಾ[ಬಿ].ಈತನ ಹತ್ತಿರ ಒಂದು ರೆಡಮೀ ಕಂಪನಿಯ ಮೋಬೈ ಇದ್ದು ಅಕಿ 1000/- ರೂ. 9] ಸಿದ್ದಪ್ಪ ತಂದೆ ಶಿವಣ್ಣ ಕಟ್ಟಿಮನಿ ವ|| 31 ಜಾ|| ಕಬ್ಬಲಿಗ ಉ|| ಕೂಲಿ ಸಾ|| ನಗನೂರ ಈತನ ಒಂದು ಓಪೋ ಕಂಪನಿಯ ಮೋಬೈಲ್ ಅಕಿ.1200/- ರೂ. 10] ಕಾಂತು ತಂದೆ ಮಲ್ಲಣ್ಣ ಉಪ್ಪಾರ ವ|| 36 ಜಾ|| ಕಬ್ಬಲಿಗ ಉ|| ಕೂಲಿ ಸಾ|| ನಗನೂರ ಅಂತ ತಿಳಿಸಿದ್ದು 11] ರೋಷನ್ ತಂದೆ ಪಾಂಡು ಚವ್ಹಾನ ವ|| 30 ಜಾ|| ಲಮಾಣಿ ಉ|| ಕೂಲಿ ಸಾ|| ಉಕ್ಕನಾಳ ತಾಂಡಾ ಒಂದು ವಿವೋ ಕಂಪನಿಯ ಮೋಬೈಲ ಅಕಿ 1500/- ರೂ 12] ಶರಣಪ್ಪ ತಂದೆ ಅಮೋಗಸಿದ್ದಪ್ಪ ಗೊರ್ ವ|| 30 ಜಾ|| ಕುರಬರ ಉ|| ಕೂಲಿ ಸಾ|| ನಗನೂರ ಅಂತ ತಿಳಿಸಿದ್ದು ಈತನ ಹತ್ತಿರ ಒಂದು ಓಪೋ ಕಂಪನಿಯ ಮೋಬೈಲ್ ಇದ್ದು ಅಕಿ 1200/- ರೂ ಅಂತ ಇದ್ದು ಎಲ್ಲರ ಮಧ್ಯ ಕಣದಲ್ಲಿ 37,940/- ರೂ ಹಣ ಸಿಕ್ಕಿದ್ದು ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಅಲ್ಲದೇ ಅಲ್ಲಿಯೇ ಸ್ಥಳದಲ್ಲಿ ಹದಿನೆಂಟು ಮೋಟರ ಸೈಕಲಗಳು ಬಿಟ್ಟು ಓಡಿ ಹೋಗಿದ್ದು ಅವುಗಳನ್ನು ಪರಿಶೀಲಿಸಿ ನೋಡಲು 1] ಒಂದು ಸುಜುಕಿ ಕಂಪನಿಯ ಮೋಟರ್ ಸೈಕಲ್ ಎಮ್ಹೆಚ್-05 ಇವ್ಹಿ-1413 2] ಒಂದು ಹೆಚ್ ಎಫ್ ಡಿಲೆಕ್ಷ್ ಕಂಪನಿಯ ಕೆಎ-33 ಯು-0579 ಮೋಟರ ಸೈಕಲ 3] ಒಂದು ಸ್ಪೆಲಂಡರ್ ಪ್ಲಸ್ ಕಂಪನಿಯ ಕೆಎ-33 ಇಬಿ-0936 ಮೋಟರ ಸೈಕಲ 4] ಒಂದು ಹೆಚ್ ಎಫ್ ಡಿಲೆಕ್ಷ್ ಕಂಪನಿಯ ಕೆಎ-33 ಎಸ್-3154 ಮೋಟರ ಸೈಕಲ 5] ಒಂದು ಸ್ಪೆಲಂಡರ್ ಪ್ಲಸ್ ಕಂಪನಿಯ ಕೆಎ-33 ವ್ಹಿ-7250 ಮೋಟರ ಸೈಕಲ 6] ಒಂದು ಹೊಂಡಾ ಶೈನ್ ಕಂಪನಿಯ ಕೆಎ-33 ಕ್ಯೂ-5609 ಮೋಟರ ಸೈಕಲ 7] ಒಂದು ಪ್ಯಾಶನ್ ಪ್ಲಸ್ ಕಂಪನಿಯ ಕೆಎ-33 ಜೆ-2171 ಮೋಟರ ಸೈಕಲ 8] ಒಂದು ಯುನಿಕಾರ್ನ ಕಂಪನಿಯ ಕೆಎ-33 ಕೆ-2102 ಮೋಟರ ಸೈಕಲ 9] ಒಂದು ಪಲ್ಸರ್ ಕಂಪನಿಯ ಕೆಎ-33 ವಾಯ್-2732 ಮೋಟರ್ ಸೈಕಲ 10] ಒಂದು ಡಿಸ್ಕವರ ಕಂಪನಿಯ ಕೆಎ-32 ಇಡಿ-3847 11] ಒಂದು ಹಿರೋ ಹೊಂಡಾ ಕಂಪನಿಯ ಕೆಎ-36 ವ್ಹಿ-8919 ಮೋಟರ್ ಸೈಕಲ 12] ಒಂದು ಸ್ಪೆಲಂಡರ್ ಪ್ಲಸ್ ಕಂಪನಿಯ ಕೆಎ-33 ಡಬ್ಲ್ಯು-5490 ಮೋಟರ್ ಸೈಕಲ 13] ಒಂದು ಪಲ್ಸರ್ ಕಂಪನಿಯ ಚೆಸ್ಸಿ ನಂಬರ ಟಜ2ಚಿ11ಛಿದ9ಜಿತಿಜ21264 ಮೋಟರ್ ಸೈಕಲ 14] ಒಂದು ಸ್ಪೆಲೆಂಡರ್ ಕಂಪನಿಯ ಕೆಎ-33 ಕೆ-5437 ಮೋಟರ್ ಸೈಕಲ 15] ಒಂದು ಹೊಂಡಾ ಶೈನ ಕಂಪನಿಯ ಕೆಎ-19 ಇಎಸ್-8614 ಮೋಟರ್ ಸೈಕಲ 16] ಒಂದು ಸಿಟಿ100 ಕಂಪನಿಯ ಚೆಸ್ಸಿ ನಂಬರ ಟಜ2ಚಿ18ಚಿತ2ತಿಜ02287 ಮೋಟರ್ ಸೈಕಲ 17] ಒಂದು ಪಲ್ಸ್ರ್ ಕಂಪನಿಯ ಚೆಸ್ಸಿ ನಂಬರ ಟಜ2872ಛಥ2ಟಛಿಜಿ38341 ಮೋಟರ್ ಸೈಕಲ ಅಂತ ಇದ್ದು ಸದರಿ ಎಲ್ಲವುಗಳನ್ನು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 4.40 ಪಿಎಂ ದಿಂದ 6 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿತರು ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಮರಳಿ ಠಾಣೆಗೆ 6.30 ಪಿಎಮ್ ಕ್ಕೆ ಬಂದು ಈ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ವರಧಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 106/2022 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 20-06-2022 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080