Feedback / Suggestions


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19-07-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 157/2021 ಕಲಂ 279, 337, 304(ಎ) ಐ.ಪಿ.ಸಿ : ಇಂದು ದಿನಾಂಕ 18/07/2021 ರಂದು ರಾತ್ರಿ 10.00 ಪಿ.ಎಂ.ಕ್ಕೆ ಫಿಯರ್ಾದಿ ಶ್ರೀಮತಿ ಯಲ್ಲಮ್ಮ ಗಂ/ ಮಲ್ಲಪ್ಪ ಮಡಿವಾಳ, ಸಾ|| ಗುಂಡಗುತರ್ಿ, ತಾ|| ವಡಗೇರಾ, ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸರಾಂಶವೆನೆಂದರೆ. ನಿನ್ನೆ ದಿನಾಂಕ:17/07/2021 ರಂದು ನನ್ನ ಗಂಡನವರಾದ ಮಲ್ಲಪ್ಪ ತಂ/ ಹೊನ್ನಪ್ಪ ಮಡಿವಾಳ, ವ|| 40 ವರ್ಷ, ಜಾ|| ಅಗಸರ, ಉ|| ಒಕ್ಕಲುತನ, ಸಾ|| ಗುಂಡಗುತರ್ಿ, ತಾ|| ವಡಗೇರಾ ರವರು ತಡಿಬಿಡಿಯಲ್ಲಿ ಕೆಲಸ ಇದೆ ನಾನು ಮತ್ತು ನನ್ನ ಗೆಳೆಯ ಹಣಮಂತರಾಯ ತಂ/ ಯಲ್ಲಪ್ಪ ಕಡ್ಡೋಣಿ, ಈತನೊಂದಿಗೆ ಮೋಟರ್ ಸೈಕಲ್ ಮೇಲೆ ಹೋಗಿ ಬರುತ್ತೇನೆ ಅಂತಾ ಹೇಳಿ ಸಾಯಂಕಾಲ 6.00 ಪಿ.ಎಂ.ಕ್ಕೆ ಹೋಗಿದ್ದರು. ಸಾಯಂಕಾಲ 7.00 ಪಿ.ಎಂ,ಕ್ಕೆ ನಮ್ಮೂರ ಮಲ್ಲಯ್ಯ ತಂ/ ಬಸಯ್ಯ ಗುತ್ತೆದಾರ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಖಾನಾಪೂರದಲ್ಲಿ ಕೆಲಸ ಇದ್ದ ಕಾರಣ ನಾನು ನನ್ನ ಮೋಟರ ಸೈಕಲದಲ್ಲಿ ಖಾನಾಪುರಕ್ಕೆ ಹೋಗುತ್ತಿದ್ದಾಗ ಸಾಯಂಕಾಲ 6.50 ಪಿ.ಎಂ. ಸುಮಾರಿಗೆ ಖಾನಾಪೂರ-ಹತ್ತಿಗುಡೂರ ಮುಖ್ಯ ರಸ್ತೆಯಲ್ಲಿ ಕಾಡಮಗೇರಾ ಕ್ರಾಸ್ ಇನ್ನೂ ಅಂದಾಜು 200 ಅಡಿ ದೂರದಲ್ಲಿದ್ದಾಗ ನನ್ನ ಎದುರಿನಿಂದ ಅಂದರೆ ತಡಿಬಿಡಿ ಕಡೆಯಿಂದ ಒಬ್ಬ ವ್ಯಕ್ತಿಯು ತನ್ನ ಮೋಟರ ಸೈಕಲ್ ಹಿಂಬದಿಯಲ್ಲಿ ಒಬ್ಬ ವ್ಯಕ್ತಿಯನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದಾಗ ಮೋಟರ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸ್ಕಿಡ್ಡಾಗಿ ಬಿದ್ದಾಗ ನಾನು ನನ್ನ ಮೋಟರ ಸೈಕಲ್ನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ರಸ್ತೆಯಲ್ಲಿ ನಿನ್ನ ಗಂಡ ಮಲ್ಲಪ್ಪ ಮತ್ತು ಹಣಮಂತರಾಯ ತಂ/ ಯಲ್ಲಪ್ಪ ಕಡ್ಡೋಣಿ ಇಬ್ಬರು ಮೋಟರ ಸೈಕಲ್ ಸಮೇತವಾಗಿ ಬಿದ್ದಿದ್ದು, ನಿನ್ನ ಗಂಡನಿಗೆ ತಲೆಗೆ ಭಾರೀ ರಕ್ತಗಾಯವಾಗಿದ್ದು, ಮುಖಕ್ಕೆ, ಬಲಗಾಲ ಮೊಳಕಾಲಿಗೆ ತರಚಿದ ರಕ್ತಗಾಯವಾಗಿದ್ದು ಮಾತನಾಡಿಸಿದರೂ ಮಾತನಾಡಲಿಲ್ಲ, ಅಲ್ಲಿಯೇ ಬಿದ್ದಿದ್ದ ಮೋಟರ ಸೈಕಲ್ ನಂಬರ ನೋಡಲಾಗಿ ಕೆಎ-02 ಜೆ.ಡಿ-6614 ಅಂತಾ ಇದ್ದು, ಮೋಟರ ಸೈಕಲ್ ನಡೆಸುತ್ತಿದ್ದ ಹಣಮಂತರಾಯ ಕಡ್ಡೋಣಿ ಈತನಿಗೆ ಸಣ್ಣ ಪುಟ್ಟಗಾಯಗಳಾಗಿರುತ್ತವೆ ಬೇಗನೆ ಬನ್ನಿ ಅಂತಾ ಹೇಳಿದಾಗ ನಾನು ಮತ್ತು ನನ್ನ ಮೈದುನ ಮರೆಪ್ಪ ತಂ/ ಹೊನ್ನಪ್ಪ ಇಬ್ಬರೂ ಕೂಡಿಕೊಂಡು ಘಟನೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನಿಗೆ ಮೇಲ್ಕಾಣಿಸಿದಂತೆ ಗಾಯಗಳಾಗಿದ್ದವು, ಸ್ವಲ್ಪ ಸಮಯದಲ್ಲಿ ಸ್ಥಳಕ್ಕೆ ಬಂದ 108 ವಾಹನದಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದಾಗ ಪ್ರಥಮೋಪಚಾರ ಮಾಡಿದ ವೈದ್ಯರು ಗಾಯಾಳುವಿಗೆ ಹೆಚ್ಚಿನ ಉಪಚಾರ ಕುರಿತು ಹೋಗಲು ತಿಳಿಸಿದ್ದರಿಂದ ನನ್ನ ಗಂಡನಿಗೆ ಕಲಬುಗರ್ಿಗೆ ಕರೆದುಕೊಂಡು ಹೋಗಿ ಕಲಬುಗರ್ಿಯ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ.

 

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 76/2021 ಕಲಂ: 323,326,504.506 ಸಂ.34 ಐಪಿಸಿ : ಇಂದು ದಿನಾಂಕ;18/07/2021 ರಂದು 11-00 ಎಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀ ಈಶಪ್ಪ ತಂದೆ ಬಾಬು ಹಡಪದ ವ;38 ಜಾ; ಹಡಪದ ಉ; ಕ.ರಾ.ಸಾ ಸೆಕ್ಯೂರಿಟಿ ಗಾರ್ಡ ಪ್ರಾದೇಶಿಕ ಕಾಯರ್ಾಗಾರ ಯಾದಗಿರಿ ಸಾ; ಅಜರ್ುಣಗಿ ತಾ; ವಡಗೇರಾ ಜಿ; ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದರ ಸಾರಾಂಶವೆನೆದರೆ, ನಾನು ಸುಮಾರು 05 ವರ್ಷಗಳಿಂದ ಯಾದಗಿರಿ ಪ್ರಾದೇಶಿಕ ಕಾಯರ್ಾಗಾರದಲ್ಲಿ ಕನರ್ಾಟಕ ರಾಜ್ಯ ಸಾರಿಗೆ ಸೆಕ್ಯೂರಿಟಿ ಗಾರ್ಡ ಅಂತಾ ಕೆಲಸ ಮಾಡಿಕೊಂಡಿದ್ದು ಯಾದಗಿರಿ ನಗರದ ಲಕ್ಷ್ಮೀ ನಗರದಲ್ಲಿ ರವೀಂದ್ರ ಟೀಚರ್ ರವರ ಮನೆಯಲ್ಲಿ ನಾನು ಮತ್ತು ನನ್ನ ಅಳಿಯ ಪವನ್ ತಂದೆ ಶ್ರೀನಿವಾಸ ಹಡಪದ ಇಬ್ಬರು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇವೆ. ನಾನು ಯಾದಗಿರಿ ಪ್ರಾದೇಶಿಕ ಕಾಯರ್ಾಗಾರದಲ್ಲಿ ಮೇನ್ ಗೇಟದಲ್ಲಿ ಸೆಕ್ಯೂರಿಟಿ ಗಾರ್ಡ ಕೆಲಸ ಮಾಡುತ್ತಿರುವಾಗ ನಮ್ಮ ಕೆಲಸ ಗೇಟದಲ್ಲಿ ಕೆಲಸಕ್ಕೆ ಬರುವ ಹಾಗೂ ಹೋಗುವ ಸಮಯದಲ್ಲಿ ಸಮಯವನ್ನು ರಿಜಿಸ್ಟರದಲ್ಲಿ ಸಮಯವನ್ನು ನಮೂದಿಸವುದು ಮತ್ತು ತಡವಾಗಿ ಕೆಲಸಕ್ಕೆ ಬಂದವರ ಹೆಸರುಗಳು ಮತ್ತು ಅವರು ಕೆಲಸಕ್ಕೆ ಬಂದ ಸಮಯವನ್ನು ನಮೂದಿಸಿ ಮೇಲಾಧಿಕಾರಿಗಳಿಗೇ ಮಾಹಿತಿ ನೀಡುವುದು ನಮ್ಮ ಕೆಲಸವಾಗಿರುತ್ತದೆ. ನಮ್ಮ ವಿಭಾಗೀಯ ಕಾಯರ್ಾಗಾರ ಉಗ್ರಾಣ ಶಾಖೆಯಲ್ಲಿ ಕಿರಿಯ ಸಹಾಯಕ ಕೆಲಸ ಮಾಡುವ ರವೀಂದ್ರರೆಡ್ಡಿ ಸಾ; ತುಮಕೂರ ತಾ; ವಡಗೇರಾ ರವರು ಆಗಾಗ ಕೆಲಸಕ್ಕೆ ತಡವಾಗಿ ಬರುತ್ತಿದ್ದರಿಂದ ನಾನು ಮೇಲಾಧಿಕಾರಿಗಳಿಗೇ ತಿಳಿಸಿದ್ದರಿಂದ ಈ ವಿಷಯದ ಬಗ್ಗೆ ಆತನಿಗೂ ನನಗೂ ತಕರಾರು ಆಗಿದ್ದು ಇರುತ್ತದೆ. ಹಿಗೀದ್ದು ನಿನ್ನೆ ದಿನಾಂಕ; 17/07/2021 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನಾನು ಮತ್ತು ಗೆಳೆಯರಾದ ಅಬ್ರಾಹಂ ತಂದೆ ಸಿದ್ದಪ್ಪ ಮಾತಪಳ್ಳಿ ಸಾ; ಅಂಬೇಡ್ಕರ ನಗರ ಯಾದಗಿರಿ ಇಬ್ಬರೂ ಕೂಡಿಕೊಂಡು ಊಟಕ್ಕೆಂದು ಯಾದಗಿರಿಯ ಹಳೆ ಬಸ ನಿಲ್ದಾಣದ ಎದುರುಗಡೆ ಇರುವ ಅನ್ಸಾರ ಹೊಟೇಲಗೆ ಹೋದರಾಯಿತು ಅಂತಾ ಹೊಟೇಲ ಮುಂದುಗಡೆ ಇರುವಾಗ ಅನ್ಸಾರ ಹೊಟೇಲ ಒಳಗಡೆಯಿಂದ ರವೀಂದ್ರರೆಡ್ಡಿ ಮತ್ತು ವಿಭಾಗೀಯ ಕಾಯರ್ಾಗಾರ ಕಾನೂನು ಶಾಖೆಯಲ್ಲಿ ಕಿರಿಯ ಸಹಾಯಕ ಕೆಲಸ ಮಾಡುವ ಮಹೇಶ ಇಬ್ಬರು ಹೊರಗಡೆ ಬಂದಿದ್ದು ರವೀಂದ್ರರೆಡ್ಡಿ ಈತನು ನನಗೆ ನೋಡಿ ಲೇ ಈಶಪ್ಪ ಸೂಳೇ ಮಗನೇ ನಿನ್ನದು ಬಹಳ ಆಗಿದೆ ನಾನು ಕೆಲಸಕ್ಕೆ ತಡವಾಗಿ ಬಂದರೆ ನಿನಗೇನು ಕಷ್ಟ ನೀನು ಇನ್ನು ಮೊನ್ನೆ ಮೊನ್ನೆ ಕೆಲಸಕ್ಕೆ ಬಂದಿದ್ದೀಯಾ ಸುಮ್ಮನೇ ನಮ್ಮ ತಂಟೆಗೆ ಬರಬೇಡ ಅಂತಾ ಬೈದನು. ಆಗ ನಾನು ರವೀಂದ್ರರೆಡ್ಡಿ ಈತನಿಗೆ ಯಾಕೆ ಸುಮ್ಮನೆ ನನಗೆ ಬೈಯುತ್ತೀಯಾ ನಾನು ನನ್ನ ಕೆಲಸ ಮಾಡುತ್ತೇನೆ ಅಷ್ಟೆ ಅಂತಾ ಅಂದಾಗ, ರವೀಂದ್ರರೆಡ್ಡಿ ಈತನು ಮಹೇಶನಿಗೆ, ಈಶಪ್ಪ ಈತನು ನಾನು ಕೆಲಸಕ್ಕೆ ತಡವಾಗಿ ಬಂದರೆ ನನ್ನ ಮೇಲೆ ಹಿರಿಯ ಅಧಿಕಾರಿಗಳಿಗೆ ತಡವಾಗಿ ಬಂದ ಬಗ್ಗೆ ಮಾಹಿತಿ ನೀಡುತ್ತಾನೆ ಅಂತಾ ಅಂದಾಗ ಮಹೇಶ ಈತನು ಹೌದು ಈ ಸೂಳೇ ಮಗನದು ಬಹಳ ಆಗಿದೆ ಅಂತಾ ಬೈದನು. ಆಗ ರವೀಂದ್ರರೆಡ್ಡಿ ಈತನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ಹಲ್ಲಿನಿಂದ ನನ್ನ ಬಲಗೈ ಉಂಗುರ ಬೆರಳನ್ನು ಜೋರಾಗಿ ಕಚ್ಚಿ ಉಗುರು ಸಮೇತ ಮುಂದಿನ ಬೆರಳಿನ ತುದಿ ಕತ್ತರಿಸಿ ಬೆರಳಿನಿಂದ ಬೆರ್ಪಡಿಸಿ ಅಲ್ಲೇ ಗಟಾರದಲ್ಲಿ ಉಗುಳಿರುತ್ತಾನೆ. ಆಗ ಅಬ್ರಾಹಂ ಈತನು ಜಗಳ ಬಿಡಿಸಲು ಬಂದಾಗ ಮಹೇಶ ಈತನು ನಿನೇನು ಜಗಳ ಬಿಡಿಸುವೆ ಅಂತಾ ಕೈಯಿಂದ ಎದೆಗೆ ಗುದ್ದಿದನು. ಆಗ ಅಲ್ಲೇ ಪಕ್ಕದಲ್ಲಿದ್ದ ನನಗೆ ಪರಿಚಯವಿರುವ ಚನ್ನವೀರಯ್ಯ ತಂದೆ ಚನ್ನಬಸ್ಸಯ್ಯ ಹಿರೇಮಠ ಸಾ; ಕಾಜಗಾರವಾಡಿ ಯಾದಗಿರಿ, ಮಲ್ಲಿಕಾಜರ್ುನ ತಂದೆ ಬಸ್ಸಪ್ಪ ಬಸನಾಯಕ್ ಸಾ; ಆಶನಾಳ ರವರು ಜಗಳ ಬಿಡಿಸಿರುತ್ತಾರೆ. ನಂತರ ನಾನು ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿದ್ದು ಉಪಚಾರ ಪಡೆಯುವ ಕಾಲಕ್ಕೆ ಯಾದಗಿರಿ ನಗರ ಠಾಣೆ ಪೊಲೀಸರು ನನಗೆ ವಿಚಾರಿಸಿದ್ದು ಆಗ ನಾನು, ಪೊಲೀಸರಿಗೆ ಈಗ ನನ್ನದು ಯಾವುದೇ ದೂರು ಇರುವುದಿಲ್ಲ. ನಾನು ಮನೆಯಲ್ಲಿ ವಿಚಾರಿಸಿ ನಂತರ ನಾವು ಠಾಣೆಗೆ ಬಂದು ದೂರು ಸಲ್ಲಿಸುತ್ತೇನೆ ಅಂತಾ ತಿಳಿಸಿದ್ದು ಈಗ ಇಂದು ದಿನಾಂಕ; 18/07/2021 ರಂದು ನಾನು ಠಾಣೆಗೆ ಬಂದು ದೂರು ನೀಡುತ್ತಿದ್ದು ನನಗೆ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಈ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.76/2021 ಕಲಂ.323, 326, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 77/2021 ಕಲಂ: 341,323,324,504.506 ಸಂ.34 ಐಪಿಸಿ : ಇಂದು ದಿನಾಂಕ; 18/07/2021 ರಂದು 2-30 ಪಿಎಮ್ ಕ್ಕೆ ಪಿರ್ಯಾಧಿದಾರರಾದ ರವೀಂದ್ರರೆಡ್ಡಿ ತಂದೆ ವಿಶ್ವನಾಥರೆಡ್ಡಿ ಪೊಲೀಸ ಪಾಟೀಲ ವ;27 ಜಾ; ಲಿಂಗಾಯತರೆಡ್ಡಿ ಉ; ಕೆ.ಎಸ್.ಆರ್.ಟಿ ಜ್ಯೂನಿಯರ್ ಅಸಿಸ್ಟೆಂಟ್ ವಿಭಾಗೀಯ ಕಾಯರ್ಾಲಯ ಯಾದಗಿರಿ ಸಾ; ತುಮಕೂರ ತಾ; ವಡಗೇರಾ ಜಿ; ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಸುಮಾರು 07 ವರ್ಷಗಳಿಂದ ಯಾದಗಿರಿಯ ಕೆ.ಎಸ್.ಆರ್.ಟಿ ವಿಭಾಗೀಯ ಕಾಯರ್ಾಗಾರದಲ್ಲಿ ಜ್ಯೂನಿಯರ್ ಅಸಿಸ್ಟೆಂಟ್ ಅಂತಾ ಕೆಲಸ ಮಾಡಿಕೊಂಡಿದ್ದು ಯಾದಗಿರಿ ನಗರದ ಮಾತಾಮಾಣಿಕೇಶ್ವರಿ ನಗರದಲ್ಲಿರುವ ನಮ್ಮ ಅಕ್ಕನವರ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತೇನೆ. ನಾನು ವಿಭಾಗೀಯ ಕಾಯರ್ಾಗಾರ ಕೆಲಸಕ್ಕೆ ಹೋಗುವಾಗ ನಮ್ಮ ಪ್ರಾದೇಶಿಕ ಕಾಯರ್ಾಗಾರದಲ್ಲಿ ಮೇನ್ ಗೇಟದಲ್ಲಿ ಸೆಕ್ಯೂರಿಟಿ ಗಾರ್ಡ ಕೆಲಸ ಮಾಡುವ ಈಶಪ್ಪ ತಂದೆ ಬಾಬು ಹಡಪದ ಸಾ; ಅಜರ್ುಣಗಿ ಈತನು ಕೆಲಸ ಮಾಡಿಕೊಂಡು ಇರುತ್ತಿದ್ದನು. ನಾನು ಕೆಲಸಕ್ಕೆ ಸ್ವಲ್ಪ ತಡವಾಗಿ ಹೋದಾಗ ಅವನು ರಿಜಿಸ್ಟರದಲ್ಲಿ ತಡವಾದ ಬಗ್ಗೆ ಸಮಯವನ್ನು ನಮೂದಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದು, ನಾನು ಈಶಪ್ಪನಿಗೆ ಕೆಲಸಕ್ಕೆ ಬರಲು ಆಗಾಗ ವಾಹನ ಸಮಸ್ಯೆಯಾಗಿ ಸ್ವಲ್ಪ ಹೆಚ್ಚು ಕಮ್ಮಿ ಸಮಯವಾಗುತ್ತದೆ ಆದ್ದರಿಂದ ಮೇಲಾಧಿಕಾರಿಗಳಿಗೆ ತಿಳಿಸಬೇಡ ಅಂತಾ ವಿನಂತಿಸಿಕೊಂಡರು ಕೂಡಾ ಆತನು ಅದೇ ರೀತಿ ಮಾಡುತ್ತಿದ್ದನು ಆದ್ದರಿಂದ ಈ ವಿಷಯದ ಬಗ್ಗೆ ಆತನಿಗೂ ನನಗೂ ತಕರಾರು ಆಗಿದ್ದು ಇರುತ್ತದೆ. ಹಿಗೀದ್ದು ನಿನ್ನೆ ದಿನಾಂಕ; 17/07/2021 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಾನು ಮತ್ತು ಗೆಳೆಯನಾದ ಮಹೇಶ ತಂದೆ ರಮೇಶ ಬೊಜ್ಜಿ ವ;33 ಜಾ; ನೇಕಾರ ಉ; ಕಿರಿಯ ಸಹಾಯಕ ವಿಭಾಗೀಯ ಕಛೇರಿ ಯಾದಗಿರಿ ಸಾ; ವಡಗೇರಾ ಹಾ.ವ; ಚಕ್ರಕಟ್ಟಾ ಯಾದಗಿರಿ ಇಬ್ಬರೂ ಕೂಡಿಕೊಂಡು ಊಟಕ್ಕೆಂದು ಯಾದಗಿರಿಯ ಹಳೆ ಬಸ ನಿಲ್ದಾಣದ ಎದುರುಗಡೆ ಇರುವ ಅನ್ಸಾರ ಹೊಟೇಲಗೆ ಹೋಗಿ ಊಟ ಮಾಡಿಕೊಂಡು 10-00 ಪಿಎಮ್ ಸುಮಾರಿಗೆ ಹೊಟೇಲ ಹೊರಗಡೆ ಬಂದಾಗ ಆಗ ಅಲ್ಲಿ ಈಶಪ್ಪ ಮತ್ತು ನಮಗೆ ಪರಿಚಯವಿರುವ ಅಬ್ರಾಹಂ ಇಬ್ಬರು ಊಟಕ್ಕೆಂದು ಹೊಟೇಲಗೆ ಬರುತ್ತಿದ್ದು, ಆಗ ಈಶಪ್ಪ ಈತನು ನಮಗೆ ನೋಡಿ ನಮ್ಮ ವಿಭಾಗೀಯ ಕಾಯರ್ಾಗಾರದಲ್ಲಿ ಕೆಲಸ ಮಾಡುವ ಈ ಕಿರಿಯ ಸಹಾಯಕರಿಗೆ ಸೊಕ್ಕು ಬಹಳ ಬಂದಿದೆ ಇವರು ಅನುಕಂಪದ ಮೇಲೆ ನೌಕರಿಗೆ ಬಂದಿದ್ದಾರೆ ಆಗಿದ್ದರೂ ಕೂಡಾ ಎಷ್ಟು ಸೊಕ್ಕು ಇವರಿಗೆ ಇವರು ನಮ್ಮಂತೆಯೇ ಪರೀಕ್ಷೆ ಬರೆದು ನೇಮಕಾತಿ ಆಗಿದ್ದರೆ ಇನ್ನೆಷ್ಟು ಧೀಮಾಕು ಮಾಡುತ್ತಿದ್ದರು ಅಂತಾ ಅಂದನು. ಆಗ ನಾನು ಯಾಕೆ ಈ ರೀತಿ ಮಾತನಾಡುತ್ತೀಯಾ ನಾವು ಎಲ್ಲಾ ಒಂದೇ ಇಲಾಖೆಯವರಿದ್ದು ನಮ್ಮಲ್ಲಿ ಹೊಂದಾಣಿಕೆ ಇರಬೇಕು ಅಂತಾ ಹೇಳಿ ಅಲ್ಲಿಂದ ಹೋಗುತ್ತಿರುವಾಗ ಈಶಪ್ಪ ಈತನು ಲೇ ಸೂಳೇ ಮಗನೇ ಎಲ್ಲಿಗೆ ಹೋಗುತ್ತೀಯಾ ಅಂತಾ ತಡೆದು ನಿಲ್ಲಿಸಿ, ನಿನ್ನೊಂದಿಗೆ ಏನು ಹೊಂದಾಣಿಕೆ ಮಾಡಿಕೊಳ್ಳಬೇಕು ಅಂತಾ ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ಕುತ್ತಿಗೆಗೆ ಚೂರಿದ್ದು ಕೈ ಮುಷ್ಟಿ ಮಾಡಿ ಬಾಯಿಗೆ ಗುದ್ದಿದ್ದು ತುಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಬಲಗಡೆ ಎಡಕಿಗೆ, ಬೆನ್ನಿಗೆ ಹೊಡೆದು, ಕೆಳಗಡೆ ಕೆಡವಿ ತಲೆ ಹಿಡಿದು ನೆಲಕ್ಕೆ ಹಿರಿದಾಗ ತಲೆಯ ಹಿಂದೆ ಸಣ್ಣ ರಕ್ತಗಾಯವಾಗಿದ್ದು ಮತ್ತು ಕಾಲಿನಿಂದ ಬಲಪಕ್ಕೆಗೆ, ಹೊಟ್ಟೆಗೆ, ಎರಡು ಮೊಳಕಾಲುಗಳಿಗೆ ಒದ್ದು ಒಳಪೆಟ್ಟು ಮಾಡಿದನು. ಆಗ ಸಂಗಡ ಇದ್ದ ಮಹೇಶ ಈತನು ಜಗಳ ಬಿಡಿಸಲು ಬಂದಾಗ ಅಬ್ರಾಹಂ ಈತನು ಲೇ ಸೂಳೇ ಮಗನೇ ನಿನೇನು ಜಗಳ ಬಿಡಿಸುವೆ ಅಂತಾ ಕೈಯಿಂದ ಗದ್ದಕ್ಕೆ ಗುದ್ದಿ ಗುಪ್ತಗಾಯ ಮಾಡಿದ್ದು ಆಗ ಅಲ್ಲೇ ಹೊಟೇಲಗೆ ಬಂದಿದ್ದ ನನಗೆ ಪರಿಚಯವಿರುವ ಶಿವರಾಜ ತಂ. ದೇವಿಂದ್ರಪ್ಪ ಕೊಳ್ಳಿ, ಸುಭಾಸ ತಂ. ಶರಣಪ್ಪ ಸಾಃ ಇಬ್ಬರೂ ಯಾದಗಿರಿ ರವರು ಜಗಳ ಬಿಡಿಸಿರುತ್ತಾರೆ. ನಂತರ ನಾವು ರಾತ್ರಿಯಾಗಿದ್ದರಿಂದ ಮತ್ತು ಮಳೆ ಬರುತ್ತಿದ್ದರಿಂದ ನಮ್ಮ ನಮ್ಮ ಮನೆಗೆ ಹೋಗಿದ್ದು ನಂತರ ನಮಗೆ ಗಾಯದ ಬೇನೆ ಆಗುತ್ತಿದ್ದರಿಂದ ಇಂದು ದಿನಾಂಕ. 18/07/2021 ರಂದು ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಇಬ್ಬರು ಉಪಚಾರ ಹೊಂದಿ ಈಗ ಠಾಣೆಗೆ ಬಂದು ದೂರು ಅಜರ್ಿ ನೀಡುತ್ತಿದ್ದು ಕಾರಣ ನಮಗೆ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಈ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.77/2021 ಕಲಂ. 341, 323, 324, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 123/2021 ಕಲಂ 87 ಕೆ.ಪಿ. ಕಾಯ್ದೆ : ದಿನಾಂಕ: 18-07-2021 ರಂದು 8 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಚಂದ್ರಶೇಖರ್ ಪಿ.ಎಸ್.ಐ. ಸಾಹೇಬರು 9 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:18/07/2021 ರಂದು 5-15 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಸನಾಪೂರ ಗಂಜ್ ಏರಿಯಾದ ಶ್ರೀ ಕಾಳಮ್ಮ ದೇವಿ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮನೋಹರ್ ಹೆಚ್ಸಿ-105, 2) ಶ್ರೀ ಮಂಜುನಾಥ ಸಿಪಿಸಿ-271, 3) ಶ್ರೀ ರವಿಕುಮಾರ ಸಿಪಿಸಿ-376, 4) ಶ್ರೀ ಸಿದ್ರಾಮರೆಡ್ಡಿ ಸಿಪಿಸಿ-423, 5) ಶ್ರೀ ವಿರೇಶ ಸಿಪಿಸಿ-374 ಇವರೆಲ್ಲರಿಗೂ ವಿಷಯ ತಿಳಿಸಿ, ಮನೋಹರ್ ಹೆಚ್ಸಿ-105 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಚಂದ್ರಶೇಖರ್ ತಂದೆ ದೊಡ್ಡ ಯಲ್ಲಪ್ಪ ಎಲಿಗಾರ ವ|| 27 ವರ್ಷ ಜಾ|| ಕುರುಬ ಉ|| ಕೂಲಿ ಸಾ|| ತಿಮ್ಮಾಪೂರ ಸುರಪುರ 2) ಶ್ರೀ ಮಲ್ಲಪ್ಪ ತಂದೆ ನಿಂಗಪ್ಪ ಕೊಡಿವೆರ ವ|| 35 ವರ್ಷ ಜಾ|| ಕಬ್ಬಲಿಗ ಉ|| ಆಟೋ ಡ್ರೈವರ್ ಸಾ|| ತಿಮ್ಮಾಪೂರ ಸುರಪುರ ಇವರನ್ನು 5:45 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದು, ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33. ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು, 6:15 ಪಿ.ಎಂ ಕ್ಕೆ ಹಸನಾಪೂರ ಗಂಜ್ ಏರಿಯಾದ ಶ್ರೀ ಕಾಳಮ್ಮ ದೇವಿ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 6:20 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 9 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಭೀಮಾಶಂಕರ್ ತಂದೆ ಬಸವರಾಜ ಬೋನಗಿರಿ ವ|| 36 ವರ್ಷ ಜಾ||ಲಿಂಗಾಯತ ಉ|| ಲಾರಿ ಚಾಲಕ ಸಾ|| ತಿಮ್ಮಾಪೂರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಮಹ್ಮದ್ ಸಿರಾಜ ತಂದೆ ಬಾಬುಸಾಬ್ ಚಿಟ್ಟೆವಾಲೆವ|| 34 ವರ್ಷ ಜಾ|| ಮುಸ್ಲಿಂ ಉ|| ಲಾರಿಚಾಲಕ ಸಾ|| ತಿಮ್ಮಾಪೂರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 3) ದೇವು ತಂದೆ ಮಲ್ಲಪ್ಪ ಮಡಿವಾಳ ವ|| 30 ವರ್ಷ ಜಾ|| ಅಗಸರ ಉ|| ಕೂಲಿ ಸಾ|| ತಿಮ್ಮಾಪೂರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 250/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಚಂದಪ್ಪ ತಂದೆ ತಿರುಪತಿ ದಾಸರ ವ|| 31 ವರ್ಷ ಜಾ|| ದಾಸರ ಉ|| ಡ್ರೈವರ್ ಸಾ|| ಬುಡಬೋವಿಗಲ್ಲಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು 5) ಮಹಾಂತೇಶ ತಂದೆ ಹೈಯಾಳಪ್ಪ ಕರೆಗಾರ ವ|| 32 ವರ್ಷ ಜಾ|| ಕುರುಬರ ಉ|| ಡ್ರೈವರ್ ಸಾ|| ತಿಮ್ಮಾಅಪೂರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 6) ನಿಂಗಣ್ಣ ತಂದೆ ಹನಮಂತ ಲಿಂಗದಳ್ಳಿ ವ|| 41 ವರ್ಷ ಜಾ|| ಬೇಡರು ಉ|| ಕೂಲಿಕೆಲಸ ಸಾ|| ಸತ್ಯಂಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು, 7) ದಾವುದ್ ತಂದೆ ಮೈನೋದ್ದಿನ್ ಬೈಬರೆ ವ|| 30 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ್ ಸಾ|| ಸತ್ಯಂಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು, 8) ಬಸವರಾಜ ತಂದೆ ಯಂಕಪ್ಪ ಲಿಂಗದಳ್ಳಿ ವ|| 38 ವರ್ಷ ಜಾ|| ಉಪ್ಪಾರ ಉ|| ಡ್ರೈವರ್ ಸಾ|| ಲಿಂಗದಳ್ಳಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 200/- ರೂಗಳು ವಶಪಡಿಸಿಕೊಳ್ಳಲಾಯಿತು, 9) ನಿಂಗಪ್ಪ ತಂದೆ ಹೈಯಾಳಪ್ಪ ಕರೆಗಾರ ವ|| 33 ವರ್ಷ ಜಾ|| ಕುರುಬರ ಉ|| ಡ್ರೈವರ್ ಸಾ|| ತಿಮ್ಮಾಪೂರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು, ಇದಲ್ಲದೆ ಪಣಕ್ಕೆ ಇಟ್ಟ ಹಣ 4,350/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 7350/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 6:20 ಪಿ.ಎಮ್ ದಿಂದ 7:20 ಪಿ.ಎಮ್ದ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದು ಇರುತ್ತದೆ. ನಂತರ 9 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಒಪ್ಪಿಸಿದ್ದು, ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 123/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

Last Updated: 19-07-2021 04:44 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080