Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-08-2021

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 191/2021 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 18/08/2021 ರಂದು 17-25 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್. ಹಿರೆಮಠ ಪಿ.ಐ. ಸಾಹೇಬರು ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ನ್ಯಾಯಾಲಯದ ಅನುಮತಿ ಪತ್ರ ಹಾಜರಪಡಿಸಿ ವರದಿ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 18/08/2021 ರಂದು 16-20 ಗಂಟೆಯ ಸುಮಾರಿಗೆ ನಾನು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂರ ದೇವಿನಗರದ ಮರೆಮ್ಮ ದೇವಿ ಗುಡಿಯ ಮುಂದೆ ಇರುವ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣೆಯ ಎನ್ ಸಿ ನಂ 47/2021 ನೇದ್ದು ದಾಖಲಿಸಿಕೊಂಡು. ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು 17-15 ಗಂಟೆಗೆ ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 191/2021 ಕಲಂ 78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ನಂತರ ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 2720=00 ರೂಪಾಯಿ ಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 130/2021 ಕಲಂ 417, 419, ಐ.ಪಿ.ಸಿ ಮತ್ತು ಕಲಂ. 6 ಸಂಗಡ 19 ಕೆ.ಪಿ.ಎಮ್.ಇ ಕಾಯ್ದೆ : ಇಂದು ದಿನಾಂಕ:18/08/2021 ರಂದು 11:45 ಎ.ಎಂ. ಕ್ಕೆ ಡಾ|| ರಾಜಾ ವೆಂಕಪ್ಪನಾಯಕ ತಾಲೂಕಾ ಆರೋಗ್ಯ ಅಧಿಕಾರಿಗಳು ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ದೂರು ಅಜರ್ಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕಃ18-08-2021 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ನಾನು ನಮ್ಮ ಕಾಯರ್ಾಲಯದಲ್ಲಿದ್ದಾಗ ಸುರಪೂರ ತಾಲೂಕಿನ ಬಾಧ್ಯಾಪೂರ ಗ್ರಾಮದಲ್ಲಿ ಕೆ.ಪಿ.ಎಂ.ಇ ನೊಂದಾವಣೆ ಇಲ್ಲದೆ ಇಬ್ಬರು ನಕಲಿ ವೈದ್ಯರು ಆಸ್ಪತ್ರೆ ತಗೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ನಮ್ಮ ಕಾಯರ್ಾಲಯದ ಸಿಬ್ಬಂದಿಯವರಾದ 1) ಶ್ರೀ ಡಾ|| ಅಲ್ಲಾವುದ್ದೀನ್ ವೈಧ್ಯಾಧಿಕಾರಿಗಳು ಹಸನಾಪೂರ 2) ಶ್ರೀ ವಿಶ್ವನಾಥ ನಾಯಕ ಬಿ.ಪಿ.ಎಮ್, 3) ಶ್ರೀ ಸುದರ್ಶನ್ ನಾಯಕ ಗ್ರೂಪ್ ಡಿ ಸಿಬ್ಬಂದಿ, ಹಾಗು ನಮ್ಮ ಜೀಪ ಚಾಲಕನಾದ 4) ಶ್ರೀ ಶರಣಪ್ಪ ಮತ್ತು ಸುರಪುರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ 5) ಶ್ರೀ ಜಗದೀಶ ಪಿ.ಸಿ 335 ಹಾಗೂ ಶ್ರೀ ಹೊನ್ನಪ್ಪ ಸಿಪಿಸಿ-427 ಎಲ್ಲರನ್ನು ನಮ್ಮ ಕಾಯರ್ಾಲಯಕ್ಕೆ ಕರೆಯಿಸಿ ಎಲ್ಲರಿಗೂ ವಿಷಯ ತಿಳಿಸಿ ಆರೋಗ್ಯ ಕಾರ್ಯಲಯದ ಜೀಪ್ ನಂ. ಕೆಎ-33-ಜಿ-183 ನೇದ್ದರಲ್ಲಿ 10 ಎ.ಎಮ್ ಕ್ಕೆ ಸುರಪೂರದ ನಮ್ಮ ಕಾಯರ್ಾಲಯದಿಂದ ಹೊರಟು 10-30 ಎ.ಎಮ್ ಕ್ಕೆ ಬಾದ್ಯಾಪೂರ ಗ್ರಾಮಕ್ಕೆ ತಲುಪಿ ಬಾಧ್ಯಾಪೂರ ವಾಲ್ಮಿಕಿ ಚೌಕ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸರಕಾರಿ ಸಮುಧಾಯ ಭವನದಲ್ಲಿ ಕ್ಲಿನೀಕ ಇಟ್ಟುಕೊಂಡಿದ್ದ ನಕಲೀ ವೈಧ್ಯನ ಕ್ಲೀನಿಕಗೆ 10-45 ಎ,.ಎಂ.ಕ್ಕೆ ದಾಳಿ ಮಾಡಲು ಕ್ಲೀನಿಕ ಉಪಚಾರ ಕುರಿತು ಬಂದ ಸಾರ್ವಜನಿಕರು ಅಲ್ಲಿಂದ ಹೋಗಿದ್ದು, ವೈಧ್ಯ ವೃತ್ತಿ ಮಾಡುತ್ತಿದ್ದ ಕ್ಲೀನಿಕನ ವೈಧ್ಯನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಜರ್ುನ್ಕುಮಾರ ತಂದೆ ದಿಲೀಪಕುಮಾರ ವ|| 25 ವರ್ಷ ಜಾ|| ಬಂಗಾಲಿ ಸಾ|| ಸಿಂಧನೂರ ಹಾವ|| ಬಾದ್ಯಾಪೂರ ಇದ್ದು, ಸುಮಾರು ಮೂರು ವರ್ಷಗಳಿಂದ ಕ್ಲಿನಿಕ್ ತಗೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವದಾಗಿ ತಿಳಿಸಿದ್ದು, ಅಜರ್ುನ್ಕುಮಾರನಿಗೆ ಕೆ.ಪಿ.ಎಂ.ಇ ಅಡಿಯಲ್ಲಿ ಕ್ಲಿನಿಕ್ ನಡೆಸಲು ನೊಂದಣಿ ಮಾಡಿಸಿರುವ ಬಗ್ಗೆ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದಾಗ ಅವನು ತನ್ನ ಹತ್ತಿರ ಯಾವುದೇ ದಾಖಲೆಗಳು ಇರುವದಿಲ್ಲ. ನಕಲಿಯಾಗಿ ವೈದ್ಯ ವೃತ್ತಿ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡನು. ಆಗ ನಾವು ಸದರಿ ಕ್ಲಿನಿಕ್ ಶೀಲ್ ಮಾಡಿ ಬಂದ್ ಮಾಡಲಾಯಿತು. ನಂತರ ಮುಂದುವರೆದು ಅದೆ ಗ್ರಾಮದ ಮಲ್ಲಪ್ಪ ಹಾವಿನ್ ಇವರ ಹೋಟೆಲ ಪಕ್ಕದಲ್ಲಿರುವ ಶಂಬುಲಿಂಗ ಎತ್ತಿನಮನಿ ಇವರ ಮನೆಯ ಹಿಂದೆ ಇರುವ ರೂಮಿನಲ್ಲಿ ಕ್ಲಿನೀಕ ನಡೆಸುತ್ತಿದ್ದ ವೈಧ್ಯರ ಮೇಲೆ 11 ಎ.ಎಂ.ಕ್ಕೆ ದಾಳಿ ಮಾಡಿ ವೈಧ್ಯ ವೃತ್ತಿ ಮಾಡುತ್ತಿದ್ದ ವೈಧ್ಯನ ಹೆಸರು ವಿಳಾಸ ವಿಚಾರಿಸಲು ಬಾಲಯ್ಯ ತಂದೆ ಬುಳ್ಳಯ್ಯ ಪೂಜಾರಿ ವ|| 48 ವರ್ಷ ಜಾ|| ಕುರುಬರ ಸಾ|| ಲಿಂಗಸೂಗೂರ ಹಾವ|| ಬಾದ್ಯಾಪೂರ ಅಂತಾ ತಿಳಿಸಿದಾಗ ಅವನಿಗೆ ಕ್ಲಿನೀಕ್ ನಡೆಸಲು ಕೆ.ಪಿ.ಎಂ.ಇ ಅಡಿಯಲ್ಲಿ ಕ್ಲಿನಿಕ್ ನಡೆಸಲು ನೊಂದಣಿ ಮಾಡಿಸಿರುವ ಬಗ್ಗೆ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದಾಗ ಅವರು ಸಹ ತಮ್ಮ ಹತ್ತಿರ ಯಾವುದೇ ದಾಖಲೆಗಳು ಇರುವದಿಲ್ಲ. ನಕಲಿಯಾಗಿ ವೈದ್ಯ ವೃತ್ತಿ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡರು ಆಗ ಬಾಲಯ್ಯ ಇವರ ಕ್ಲಿನಿಕ್ ಸಹ ಶೀಲ್ಮಾಡಿ ಬಂದ್ ಮಾಡಿದ್ದು ಇರುತ್ತದೆ. ಆದ್ದರಿಂದ ಸದರಿಯವರು ವೈದ್ಯಕೀಯ ಪದವಿಯನ್ನು ಪಡೆಯದೇ ಜನರಿಗೆ ವೈದ್ಯರೆಂದು ಹೇಳಿ ವಂಚಿಸಿ ನಕಲಿ ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವದರಿಂದ ಅಜರ್ುನ್ ಕುಮಾರ ಹಾಗೂ ಬಾಲಯ್ಯ ಇವರನ್ನು ಕರೆದುಕೊಂಡು 11-45 ಎ.ಎಮ್ ಕ್ಕೆ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು ಅಜರ್ಿ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 44/2021 ಕಲಂ 279, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ : ದಿನಾಂಕ 16/08/2021 ರಂದು ಬೆಳಿಗ್ಗೆ ಸಮಯ 8-30 ಎ.ಎಂ.ದ ಸುಮಾರಿಗೆ ಯಾದಗಿರಿ ನಗರದ ಕನಕ ವೃತ್ತದ ಹತ್ತಿರದ ಹಳೆ ಜಿಲ್ಲಾಸ್ಪತ್ರೆಯ ಮುಂದಿನ ಮುಖ್ಯ ರಸ್ತೆ ಮೇಲೆ ಈ ಕೇಸಿನ ಪಿಯರ್ಾದಿಯು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಮೋಟಾರು ಸೈಕಲ್ ನಂಬರ ಕೆಎ-33, ಎಕ್ಸ್-4423 ನೇದ್ದರ ಸವಾರನು ಕನಕವೃತ್ತದ ಕಡೆಯಿಂದ ನಗರಸಭೆ ಕಡೆಗೆ ತನ್ನ ಮೋಟಾರು ಸೈಕಲ್ ಕೋರಿಯರ್ ದೊಡ್ಡ ಬ್ಯಾಗನ್ನು ಹಾಕಿಕೊಂಡು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ಪಿಯರ್ಾದಿಗೆ ಬಲಗಾಲಿನ ಮೊಣಕಾಲಿಗೆ, ಪಾದದ ಹಿಮ್ಮಡಿಗೆ, ಬಲ ಸೊಂಟಕ್ಕೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಮೋಟಾರು ಸೈಕಲ್ ಸವಾರನು ಅಪಘಾತ ಪಡಿಸಿ ಘಟನಾ ಸ್ಥಳದಿಂದ ಮೋಟಾರು ಸೈಕಲ್ ಸಮೇತ ಓಡಿ ಹೋಗಿದ್ದು ಈ ಘಟನೆಯ ನಂತರ ರಾಜಿ ಮಾಡಿಕೊಂಡಿದ್ದರಿಂದ ಮತ್ತು ಕಾನೂನು ತಿಳುವಳಿಕೆ ಇಲ್ಲದಿದ್ದರಿಂದ ಇಂದು ತಡವಾಗಿ ಗಾಯಾಳು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆಯಾಗಿ ಪಿಯರ್ಾದು ದೂರನ್ನು ನೀಡಿದ್ದು ಮೊಟಾರು ಸೈಕಲ್ ಸವಾರನ ಮೇಲೆ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 44/2021 ಕಲಂ 279, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 115/2021 ಕಲಂ:25 ಆಮ್ರ್ಸ ಆಕ್ಟ್ : ಇಂದು ದಿನಾಂಕ:18/08/2021 ರಂದು ಮಧ್ಯಾಹ್ನ 1-15 ಗಂಟೆಗೆ ಯರಗೋಳ ಗ್ರಾಮದಲ್ಲಿ ಕೇಂದ್ರ ಸರಕಾರದ ಸಚಿವರಾದ ಶ್ರೀಮಾನ ಭಗವಂತ ಖುಬಾ ರವರು ಮತ್ತು ಮಾಜಿ ಸಚಿವರಾದ ಶ್ರೀ.ಬಾಬುರಾವ ಚಂಚನಸೂರ ಹಾಗು ಶ್ರೀ.ವೆಂಕಟರೆಡ್ಡಿ ಮುದ್ನಾಳ ಶಾಸಕರು ಯಾದಗಿರಿ, ಶ್ರೀ.ನರಸಿಂಹನಾಯಕ ಶಾಸಕರು ಸುರಪೂರ, ಶ್ರೀ.ರಾಜಕುಮಾರ ಪಾಟೀಲ್ ತೆಲ್ಕೂರ ಶಾಸಕರು ಸೇಡಂ, ಶ್ರೀ.ಬಿ.ಸಿ.ಪಾಟೀಲ್ ವಿಧಾನಪರಿಷತ್ ಸದಸ್ಯರು, ಶ್ರೀ.ಸುಶೀಲ್ ನಮೋಶಿ ವಿಧಾನಪರಿಷತ್ ಸದಸ್ಯರು, ಹಾಗು ಇನ್ನಿತರ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು ಸುಮಾರು 1000-1500 ಜನರು ಸೇರಿಕೊಂಡು ಜನಆಶೀವರ್ಾದ ಕಾರ್ಯಕ್ರಮ ಕುರಿತು ಯರಗೋಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಬಂದಾಗ ನಾನು ಮತ್ತು ಶ್ರೀ.ಸಿದ್ರಾಯ ಬಳೂಗರ್ಿ ಪಿ.ಎಸ್.ಐ. ವಡಗೇರಾ ಪೊಲೀಸ್ ಠಾಣೆ ಹಾಗು ನಮ್ಮ ಠಾಣೆಯ ಭೀಮಾಶಂಕರ ಎ.ಎಸ್.ಐ, ಶ್ರೀ ಪ್ರಭುಗೌಡ ಸಿಪಿಸಿ-361, ಶ್ರೀ ಬಸವರಾಜ ಸಿಪಿಸಿ-185, ಶ್ರೀ ಜಾಕೀರ ಸಿಪಿಸಿ-215, ಶ್ರೀ.ಸಂತೋಷ ಪಿ.ಸಿ.312, ವೀರೇಶ ಪಿ.ಸಿ.-120 ಮಹೆಬೂಬ ಪಿ.ಸಿ-120 ಎಲ್ಲರೂ ಕೂಡಿ ಬದೋಬಸ್ತ ಕರ್ತವ್ಯದಲ್ಲಿ ಇದ್ದೆವೆ, ಆಗ ಕಾರ್ಯಕರ್ತರು ಕೇಂದ್ರ ಸರಕಾರದ ಸಚಿವರಾದ ಶ್ರೀಮಾನ ಭಗವಂತ ಖುಬಾ ಮತ್ತು ಮಾಜಿ ಸಚಿವರಾದ ಶ್ರೀ ಬಾಬುರಾವ ಚಂಚನಸೂರ ರವರಿಗೆ ಸ್ವಾಗತ ಮಾಡುವ ಸಮಯದಲ್ಲಿ ಅಲ್ಲಿಯೇ ಪಕ್ಕದಲ್ಲಿದ್ದ 4 ಜನರು ಮನೆಗಳಿಂದ ತಮ್ಮ ತಮ್ಮ ಬಂದೂಕುಗಳನ್ನು ಕೈಗಳಲ್ಲಿ ಹಿಡಿದುಕೊಂಡು ಸಾರ್ವಜನಿಕರ ಮಧ್ಯೆ ಬಂದು ಅವರಲ್ಲಿ ಒಬ್ಬ ಶರಣಪ್ಪ ಅನ್ನುವವನು ತನ್ನ ಬಂದೂಕಿನಲ್ಲಿ ಮದ್ದನ್ನು ತುಂಬಿ ಗಾಳಿಯಲ್ಲಿ ಹಾರಿಸಿದ್ದರಿಂದ ಒಮ್ಮೆಲೆ ನಾವೆಲ್ಲರು ಅವರೆಲ್ಲರು ಸುತ್ತುವರೆದು ಅವರನ್ನು ವಿಚಾರಿಸಿದಾಗ ತಮ್ಮ ಹೆಸರು 1)ಶರಣಪ್ಪ ತಂದೆ ಗುಂಡಪ್ಪ ಭೀಮನಳ್ಳಿ 2)ಮೋನಪ್ಪ ತಂದೆ ದುರ್ಗಪ್ಪ ಮಾನೆಗಾರ 3)ನಿಂಗಪ್ಪ ತಂದೆ ಚಂದಪ್ಪ ಹತ್ತಿಕುಣಿ ಮತ್ತು 4)ದೇವಿಂದ್ರ@ಸೋಟ್ಟಪ್ಪ ತಂದೆ ಹಣಮಂತ ಇದ್ದಲಿ ಸಾಃಎಲ್ಲರೂ ಯರಗೋಳ ಅಂತಾ ಹೇಳಿದರು. ಸದರಿಯವರು ಬೆಳೆ ಸಂರಕ್ಷಣೆಗಾಗಿ ಬಂದೂಕು ಪರವಾನಿಗೆ ಹೊಂದಿದ್ದು, ಲೈಸನ್ಸ್ ನಿಯಮಾವಳಿಗಳನ್ನು ಉಲ್ಲಂಘಿಸಿ ಸ್ವಾಗತ ಸಮಯಕ್ಕೆ ಬಂದೂಕುಗಳನ್ನು ತೆಗೆದುಕೊಂಡು ಬಂದು ಬಂದೂಕಿನಲ್ಲಿ ಮದ್ದನ್ನು ತುಂಬಿ ಗಾಳಿಯಲ್ಲಿ ಹಾರಿಸಿ ಲೈಸನ್ಸನ್ನು ದುರುಪಯೋಗಪಡಿಸಿಕೊಂಡಿರುತ್ತಾರೆ. ಕಾರ್ಯಕ್ರಮ ಮುಗಿದ ನಂತರ ಸಚಿವರು, ಶಾಸಕರು ಹೋದ ನಂತರ ನಾನು ಮೇಲ್ಕಂಡ 4 ಜನ ಆರೋಪಿತರನ್ನು ಮತ್ತು ಅವರ ಬಂದೂಕುಗಳನ್ನು ವಶಕ್ಕೆ ಪಡೆದುಕೊಂಡು ಮರಳಿ ಠಾಣೆ 3:00 ಪಿ.ಎಮ್.ಕ್ಕೆ ಮರಳಿ ಠಾಣೆಗೆ ಬಂದು ಮೇಲ್ಕಂಡ ಆರೋಪಿತರನ್ನು ಮತ್ತು ಬಂದೂಕುಗಳನ್ನು ಈ ವರದಿಯೊಂದಿಗೆ ಹಾಜರಪಡಿಸುತ್ತಿದ್ದು, ಅವರ ಮೇಲೆ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:115/2021 ಕಲಂ:25 ಆಮ್ರ್ಸ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 116/2021 ಕಲಂ 269, 270 ಐಪಿಸಿ ಮತ್ತು 51 ಡಿಜಸ್ಟರ ಮ್ಯಾನೆಜಮೆಂಟ ಆ್ಯಕ್ಟ 2005 : ಇಂದು ದಿನಾಂಕ 18/08/2021 ರಂದು ರಾತ್ರಿ 8-05 ಗಂಟೆಗೆ ಫಿರ್ಯಾಧಿದಾರರಾಧ ಶ್ರೀ ಕಲ್ಯಾಣಕುಮಾರ ಪಂಚಾಯತ ಅಭಿವೃಧಿ ಅಧಿಕಾರಿಗಳು ಯರಗೋಳ ಗ್ರಾಮ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ಸಲ್ಲಿಸಿದ್ದು, ಅದರ ಸಾರಾಂಶವೆನೆಂದರೆ ಮಾನ್ಯರವರಲ್ಲಿ ಮೇಲ್ಕಂಡ ವಿಷಯದ ಮತ್ತು ಉಲ್ಲೇಖದ ಅನುಸಾರವಾಗಿ ವಿನಂತಿಸಿಕೊಳ್ಳುವುದೆನೆಂದರೆ ನಾನು ಕಲ್ಯಾಣಕುಮಾರ ಪಂಚಾಯತ ಅಭಿವೃಧಿ ಅಧಿಕಾರಿಗಳು ಯರಗೋಳ ಗ್ರಾಮ ಪಂಚಾಯತ ಆಗಿದ್ದು, ಇಂದು ದಿನಾಂಕ 18/08/2021 ರಂದು ಸಮಯ ಮಧ್ಯಾಹ್ನ 1-15 ಗಂಟೆಯ ಸುಮಾರಿಗೆ ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬಾ ರವರು ನೂತನವಾಗಿ ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿದ್ದು ಮತ್ತು ಜನಾಶಿವರ್ಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದುದ್ದರಿಂದ ಯರಗೋಳ ಗ್ರಾಮದ ಗ್ರಾಮ ಪಂಚಾಯತ ಸದಸ್ಯರುಗಳಾದ 1)ರಾಮಲಿಂಗಪ್ಪ ತಂದೆ ಸಂಜೀವ ಭೀಮಶಾ ಅಲ್ಲಿಪೂರ 2)ಶಾಂತಮುತರ್ಿ ಚಿಕ್ಕಮಠ 3)ಮೋನಪ್ಪ ತಂದೆ ಸಾಬಣ್ಣ ಹಲಕಟ್ಟಿ 4)ಮಹೆಬೂಬಪಾಶಾ ತಂದೆ ಜಮಾಲಸಾಬ ಮತ್ತು ಗ್ರಾಮಸ್ತರಾದ 5)ಹಣಮಂತ ದನಕಾಯೇರ 6)ಶಿವಪ್ಪ ಚಿಮಟಗಿ ಮತ್ತು 7)ಯಂಕಾರೆಡ್ಡಿ ತಂದೆ ಬಸವರಾಜ ಮಾನೆಗಾರ ಇವರೆಲ್ಲರೂ ಕೇಂದ್ರ ಸಚಿವರ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸದರಿ ಕಾರ್ಯಕ್ರಮದಲ್ಲಿ ಸುಮಾರು 1000 ದಿಂದ 1500 ಜನರು ಗುಂಪು ಸೇರಿದ್ದು, ಆ ವೇಳೆಗೆ ಕೆಲವರು ಕೇಂದ್ರ ಸಚಿವರು ಹಾಗೂ ಯಾದಗಿರಿ ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ ಸದಸ್ಯರುಗಳು, ಬಿಜೆಪಿ ನಾಯಕರು ಯರಗೋಳ ಗ್ರಾಮಕ್ಕೆ ಬಂದಾಗ ಅವರ ಸ್ವಾಗತ ವೇಳೆಯಲ್ಲಿ ಮುರ್ನಾಲ್ಕು ಜನರು ಬಂದೂಕಿನಲ್ಲಿ ಮದ್ದು ಹಾಕಿ ಗಾಳಿಯಲ್ಲಿ ಹಾರಿಸಿರುವ ವಿಷಯ ಟಿವಿ ಮಾಧ್ಯಮಗಳಲ್ಲಿ ಪ್ರಸಾರ ಆಗಿದ್ದು ಇರುತ್ತದೆ, ಈ ಘಟನೆಯು ಕುಃ ಲಕ್ಷ್ಮಿ ಗ್ರಾಮ ಲೆಕ್ಕಿಗರು ಯರಗೋಳ, ಶ್ರೀಮತಿ ಗೀತಾರಾಣಿ ಪಂಚಾಯತ ಕಾರ್ಯದಶರ್ಿ, ಶ್ರೀ ಮಲ್ಲು ಪಂಚಾಯತ ಕರ ವಸಲಿಗಾರರು, ಶ್ರೀಮತಿ ಶರಣಮ್ಮ ಕರ ವಸಲಿಗಾರರು, ಶ್ರೀ ಸಿದ್ರಾಮ ಪ್ಯೂನ್ ಇವರು ಕೂಡಾ ಮಾಧ್ಯಮದಲ್ಲಿ ಪ್ರಸಾರವಾದ ಘಟನೆ ನೋಡಿರುತ್ತಾರೆ, ಸದರಿ ಯರಗೋಳ ಗ್ರಾಮದ ಜನಾ ಆಶಿವರ್ಾದ ಕಾರ್ಯಕ್ರಮದ ಈ ಮೇಲ್ಕಂಡ ಆಯೋಜಕರುಗಳು ಉಲ್ಲೇಖದ ಅನ್ವಯ ಕೊವಿಡ್-19 3 ನೇ ಅಲೆ ಹಬ್ಬುವ ಸಾಧ್ಯತೆ ಇರುವದರಿಂದ ಸರಕಾರ ಜಿಲಾಧಿಕಾರಿಗಳು ಬೃಹತ್ ಸಭೆ ಸಮಾರಂಭಗಳನ್ನು ಮಾಡಬಾರದು ಅಂತಾ ನಿಶೆಸಿದ್ದರು ಕೂಡಾ ಸುಮಾರು 1000 ರಿಂದ 1500 ಜನರನ್ನು ಸೇರಿಸಿ ಕೊವಿಡ್-19 ಮಾರ್ಗ ಸೂಚಿಗಳನ್ನು ನಿರ್ಲಕ್ಷಿಸಿದ್ದು ಮತ್ತು ಉಲ್ಲಂಘನೆ ಮಾಡಿದ್ದು ಇರುತ್ತದೆ, ಈ ಮೇಲ್ಕಂಡ ಆಯೋಜಕರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ವಿನಂತಿ. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 116/2021 ಕಲಂ 269, 270 ಐಪಿಸಿ ಮತ್ತು 51 ಡಿಜಸ್ಟರ ಮ್ಯಾನೆಜಮೆಂಟ ಆ್ಯಕ್ಟ 2005 ನೆದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ. 133/2021 ಕಲಂ: 00 ಒಕ ಕಅ : ಫಿರ್ಯಾದಿದಾರಳು ತನ್ನ ಮಗಳಾದ ಆದರ್ಶಪ್ರಿಯಾ ಎಂಬಾಕೆಗೆ ಚಿಕ್ಕಂದಿನಿಂದಲೇ ವಿದ್ಯಾಭ್ಯಾಸಕ್ಕೆಂದು ಗುರುಮಠಕಲ್ ಪಟ್ಟಣದಲ್ಲಿರುವ ತನ್ನ ಅಕ್ಕಳಾದ ವೆಂಕಟಮ್ಮ ಎಂಬಾಕೆಯಲ್ಲಿ ಬಿಟ್ಟಿದ್ದಳು. ಆಕೆ ಎಸ್.ಎಲ್.ಟಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ನಂತರ ದಿನಾಂಕ 13.08.2021 ರಂದು ರಾತ್ರಿ 11:00 ಗಂಟೆಯಿಂದ 11:30 ಗಂಟೆಯ ನಡುವಿನ ಅವದಿಯಲ್ಲಿ ಯಾರಿಗು ಹೇಳದೆ ಮನೆ ಬಿಟ್ಟು ಎಲ್ಲಿಗೋ ಹೋಗಿದ್ದು ಊರಲ್ಲಿ, ಓಣಿಯಲ್ಲಿ ಹುಡುಕಿದರೂ ಸಹ ಪತ್ತಯಾಗದೇ ಇರುವುದರಿಂದ ದಿನಾಂಕ 14.08.2021 ರಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ವೆಂಕಟಮ್ಮಳು ಫಿರ್ಯಾದಿದಾರಳಾದ ಸ್ವಪ್ನಳಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು ನಂತರ ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ವೆಂಕಟಮ್ಮಳ ಮನೆಗೆ ಬಂದು ವಿಚಾರಿಸಿ ವಿಷಯ ತಿಳಿದುಕೊಂಡಿದ್ದು ನಂತರ ಎಲ್ಲಾ ಕಡೆಗಳಲ್ಲಿ ಹುಡುಕಾಡಿ ನಂತರ ತನ್ನ ಸಂಬಂದಿಕರು ಇರುವ ಕಡೆಗೆಳಲ್ಲಿ ಫೋನ್ ಮಾಡಿ ವಿಚಾರಿಸಿದ ನಂತರ ತನ್ನ ಮಗಳು ಆದರ್ಶಪ್ರಿಯಾಳು ಎಲ್ಲಿಯೂ ಪತ್ತೆಯಾಗದೇ ಇರುವುದರಿಂದ ಇಂದು ದಿನಾಂಕ 18.08.2021 ರಂದು ಸಂಜೆ 6:00 ಗಂಟೆಗೆ ಈ ಮೊದಲು ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿ ಕೊಡುವಂತೆ ಲಿಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ. 133/2021 ಕಲಂ: 00

Last Updated: 19-08-2021 11:30 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080