ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-08-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 103/2022 ಕಲಂ: 78(3) ಕೆ.ಪಿ ಎಕ್ಟ 1963 : ಇಂದು ದಿನಾಂಕ: 18/08/2022 ರಂದು 2:10 ಪಿಎಮ್ಕ್ಕೆ ಶ್ರೀ (ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಠಾಣೆಯಲ್ಲಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 18/08/2022 ರಂದು 2 ಪಿಎಮ್ಕ್ಕೆ ನಾನು ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ಕಾಡಂಗೇರಾ (ಬಿ) ಗ್ರಾಮದ ಬೀಟ್ ಸಿಬ್ಬಂದಿ ಶ್ರೀ ಭಾಗಪ್ಪ ಪಿಸಿ 283 ರವರು ನನಗೆ ಮಾಹಿತಿ ನಿಡಿದ್ದೇನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಸಂ. 07 ರಲ್ಲಿ ಬರುವ ಕಾಡಂಗೇರಾ (ಬಿ) ಗ್ರಾಮದ ಶರಣಪ್ಪ ಕಂಬಾರ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಕುಳಿತುಕೊಂಡು ಅಲ್ಲಿಂದ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿರುತ್ತದೆ. ಆದ್ದರಿಂದ ಸದರಿಯವನ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಕಾರಣ ಈ ಬಗ್ಗೆ ದಾಳಿ ಮಾಡಿ ಮಟಕಾ ಜೂಜಾಟ ಜಪ್ತಿ ಪಂಚನಾಮೆ ಜರುಗಿಸಬೇಕಾಗಿರುವುದರಿಂದ ಸರಕಾರಿ ತಫರ್ೆಯಿಂದ ಪ್ರಕರಣ ದಾಖಲಿಸಲು ದೂರು ನಿಮಗೆ ಸಲ್ಲಿಸುತ್ತಿದ್ದು, ನೀವು ಈ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರ. ವ. ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 103/2022 ಕಲಂ: 78(3) ಕೆ.ಪಿ ಎಕ್ಟ 1963 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 97/2022 ಕಲಂ 279, 337, 338ಐಪಿಸಿ : ದಿನಾಂಕ 17.08.2022 ರಂದು ಮಧ್ಯಾಹ್ನ 4 ಗಂಟೆಗೆ ಸುಮಾರಿಗೆ ಫಿಯರ್ಾದಿಯ ಗಂಡ ಅಶೋಕ ತಂದೆ ಬುಗ್ಗಪ್ಪ ಮಡಿವಾಳ ಇವನು ಮೋಟಾರ ಸೈಕಲ ನಂಬರ ಕೆ.ಎ-33, ಇ.ಎ-7164 ನೇದ್ದರ ಮೇಲೆ ಆರೋಪಿತನೊಂದಿಗೆ ಮೋಟಾರ ಸೂಕಲ ಹಿಂದೆ ಕುಳಿತು ಸೈದಾಪೂರದಿಂದ ರಾಯಚೂರ ಕಡೆಗೆ ಹೋರಟಿದ್ದಾಗ ಶೆಟ್ಟಿಹಳ್ಳಿ ಬ್ರಿಡ್ಜ್ ಹತ್ತಿರ ಎನ್.ಹೆಚ್-150 ಮೇನರೋಡ ಮೇಲೆ ಆರೋಪಿತನು ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿದ್ದರಿಂದ ನಿಯಂತ್ರಣ ತಪ್ಪಿ ಬೈಕ ಮೇಲಿಂದ ರೋಡಿನ ಮೇಲೆ ಬಿದ್ದು ಫಿಯರ್ಾದಿ ಗಂಡ ಗಾಯಗೊಂಡಿದ್ದು, ಬಲಗಾಲ ತೊಡೆಮೂಳೆ ಮುರಿದಿದ್ದು, ಸದರಿ ಬೈಕ ಸವಾರನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 64/2022 ಕಲಂ.32, 34 ಕನರ್ಾಟಕ ಅಭಕಾರಿ ಕಾಯ್ದೆ : ದಿನಾಂಕ:18/08/2022 ರಂದು ಮದ್ಯಾಹ್ನ 14.50 ಗಂಟೆಗೆ ಆರೋಪಿತನು ಅಬಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸರಾಯಿ ಸಂಗ್ರಹಣೆ ಮಾಡಿಕೊಂಡು ಗುಂಡಲಗೇರಿ ಗ್ರಾಮದ ತನ್ನ ಹೊಟೇಲದಲ್ಲಿ ಸಾರ್ವಜನಿಕರಿಗೆ ಅಭಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಮದ್ಯ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶೋರಾಪೂರ & ಮಾನ್ಯ ಸಿಪಿಐ ಸಾಹೇಬರು ಹುಣಸಗಿ ಮಾರ್ಗದರ್ಶನದಲ್ಲಿ ಪಿಯರ್ಾದಿ ಹಾಗೂಸಿಬ್ಬಂದಿಯಾದ ವಿರೇಂದ್ರ ಪಿಸಿ-264, ಲಿಂಗನಗೌಡ ಪಿಸಿ-87. ಸುರೇಶ ಪಿಸಿ-20, ಸಂತೋಷ ಎಪಿಸಿ-126 ರವರು ಮತ್ತು ಪಂಚರೊಂದಿಗೆ ಗುಂಡಲಗೇರಿ ಗ್ರಾಮಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ, ಆರೋಪಿತನಿಗೆ ಹಿಡಿದಿದ್ದು, ಆರೋಪಿತನು ಮಾರಾಟ ಮಾಡುತ್ತಿದ್ದ 1) ಬ್ಯಾಗಪೇಪರ್ ವಿಸ್ಕಿ 180 ಎಮ್.ಎಲ್ ಟೆಟ್ರಾಪ್ಯಾಕಗಳು ಇದ್ದು, ಒಂದಕ್ಕೆ 106.23/- ರೂ.ಗಳಂತೆ ಒಟ್ಟು 21 ಟೆಟ್ರಾಪ್ಯಾಕಗಳು ಅ:ಕಿ:2230.83/- ರೂ.ಗಳು, 2) ಓರಿಜಿನಲ್ ಚ್ವಾಯಿಸ್ ಟೆಟ್ರಾಪ್ಯಾಕಗಳು 90 ಎಮ್.ಎಲ್ ಇದ್ದು, ಒಂದಕ್ಕೆ 35.13/- ರೂಗಳಂತೆ, ಒಟ್ಟು 50 ಟೆಟ್ರಾಪ್ಯಾಕಗಳು ಅ:ಕಿ:1756.5/- ರೂ.ಗಳು, 3) ಕಿಂಗ್ ಪಿಶರ್ ಸ್ಟ್ರಾಂಗ್ ಬಿಯರ್ ಬಾಟಲ 650 ಎಮ್.ಎಲ್ ಇದ್ದದ್ದು 6 ಬಾಟಲಿಗಳು ಒಂದು ಬಾಟಲಿಗೆ 160/- ರೂ.ಗಳಂತೆ ಇದ್ದು, ಒಟ್ಟು 6 ಬಾಟಲಿಗಳಿಗೆ ಅ:ಕಿ: 960/- ರೂ.ಗಳು, 4) ಕಿಂಗ್ ಪಿಷರ್ ಸ್ಟ್ರಾಂಗ್ ಬಾಟಲಿ 330 ಎಮ್.ಎಲ್ ಇದ್ದದ್ದು, ಒಂದು ಬಾಟಲಿಗೆ 95/-.ರೂಗಳಂತೆ ಇದ್ದು, ಒಟ್ಟು 8 ಬಾಟಲಿಗಳಿಗೆ ಅ:ಕಿ:760/- ರೂ.ಗಳು, ಸದರಿ ಒಟ್ಟು ಮದ್ಯದ ಅ.ಕಿ. 5707.33/- ರೂ. ಕಿಮ್ಮತಿನ ಮದ್ಯವನ್ನು ಜಪ್ತಿ ಮಾಡಿಕೊಂಡು ಸ್ಥಳದಲ್ಲಿಯೇ ಪಂಚನಾಮೆ ಬರೆದುಕೊಂಡು ಬಂದಿದ್ದು ಜಪ್ತಿದ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ 87 ಕೆ.ಪಿ ಯಾಕ್ಟ : ದಿನಾಂಕ:18/08/2022 ರಂದು 16.30 ಗಂಟೆಗೆ ಫಿರ್ಯಾದಿದಾರರು ಠಾಣೆಯಲ್ಲಿದ್ದಾಗ, ಹುಣಸಗಿ ಪಟ್ಟಣದ ಹೊರ ವಲಯದ ಬಸವರಾಜ ತತ್ತಿ ಇವರ ಹೊಲದ ಹತ್ತಿರ ಹಳ್ಳದ ದಂಡೆಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಕೂಡಿಕೊಂಡು ದುಂಡಾಗಿ ಕುಳಿತು ಇಸ್ಪೀಟ್ ಎಲೆಗಳ ಸಹಾಯದಿಂದಾ ಹಣವನ್ನು ಪಣಕ್ಕೆ ಇಟ್ಟು ಅಂದರ್ ಬಾಹರ್ ಎಂಬ ನಶೀಭದ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯವರಾದ ಸಂಗಡ ಹೆಚ್.ಸಿ-10, ಪಿಸಿ-264, 248, 20, 324, 87 ರವರೊಂದಿಗೆ ಪಂಚರ ಸಮಕ್ಷಮದಲ್ಲಿ ಸಾಯಂಕಾಲ 18.05 ಗಂಟೆಗೆ ಇಸ್ಪೀಟ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ, 5 ಜನರ ಆರೋಪಿತರಿಗೆ ಹಿಡಿದು ಆರೋಪಿತರಿಂದ ನಗದು ಹಣ 11600/- ರೂ.ಗಳು & 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರು & ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಕೊಟ್ಟ ವರದಿಯ ಸಾರಾಂಶದ


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 131/2022 ಕಲಂ: 279, 338 ಐಪಿಸಿ, 187 ಐಎಂವಿ ಯಾಕ್ಟ್ : ಇಂದು ದಿನಾಂಕ 18/08/2022 ರಂದು 8.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಲ್ಲಪ್ಪ ತಂದೆ ರಾಯಪ್ಪ ಹೂಗಾರ ವ|| 55ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಹದನೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿಯ ಸಾರಾಂಶವೇನೆಂದರೆ, ನಾನು ಮತ್ತು ನನ್ನ ಹೆಂಡತಿಯಾದ ಮಲಕಮ್ಮ ಇಬ್ಬರೂ ಒಕ್ಕಲುತನ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಇದ್ದು ಉಪಜೀವಿಸುತ್ತಿದ್ದೇವೆ. ಹೀಗಿದ್ದು ದಿನಾಂಕ 11/08/2022 ರಂದು 12.30 ಪಿಎಂ ಸುಮಾರಿಗೆ ನಾನು ಹೊಲದಲ್ಲಿದ್ದಾಗ ನನ್ನ ಮಗನಾದ ಸುರೇಶ ತಂದೆ ಮಲ್ಲಪ್ಪ ಹೂಗಾರ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಮ್ಮ ತಾಯಿಯಾದ ಮಲಕಮ್ಮ ಗಂಡ ಮಲ್ಲಪ್ಪ ಹೂಗಾರ ವ|| 45ವರ್ಷ ಜಾ|| ಕುರುಬರ ಉ|| ಹೊಲಮನೆ ಕೆಲಸ ಸಾ|| ಹದನೂರ ಇವಳು ನಮ್ಮ ಹೊಲಕ್ಕೆ ಹದನೂರದಿಂದ ಯಾಳಗಿ ಗ್ರಾಮಕ್ಕೆ ಹೋಗುವ ಹಳೆಯ ರಸ್ತೆಯ ಮೇಲೆ ಚಂದ್ರಶೇಖರ ದೇಸಾಯಿ ಇವರ ಹೊಲದ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಸೈಕಲ್ ಮೋಟಾರ ಸವಾರನು ತನ್ನ ಸೈಕಲ್ ಮೋಟಾರನ್ನು ಎದುರಿಗೆ ವೇಗವಾಗಿ ನಡೆಸಿಕೊಂಡು ಬಂದು ಮಲಕಮ್ಮಳಿಗೆ ಸೈಕಲ್ ಮೋಟಾರ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದಾಗಿ ಮಲಕಮ್ಮಳು ನೆಲಕ್ಕೆ ಬಿದ್ದಿದ್ದು ಅವಳಿಗೆ ಬಲಗಾಲಿನ ತೊಡೆಗೆ ಭಾರೀ ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿದ್ದು, ತಲೆಗೆ, ಕಿವಿಯ ಹತ್ತಿರ ರಕ್ತಗಾಯವಾಗಿ ಮಾತನಾಡದೇ ಬಿದ್ದಿದ್ದು ಅರ್ಜಂಟ್ ದವಾಖಾನೆಗೆ ಕರೆದುಕೊಂಡು ಹೋಗಬೇಕಾಗಿದ್ದು ಬಾ ಅಂತಾ ತಿಳಿಸಿದಾಗ ನಾನು ಹೊಲದಿಂದ ತಕ್ಷಣ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಹೆಂಡತಿಯಾದ ಮಲಕಮ್ಮಳು ತೀವ್ರತರವಾದ ಗಾಯಗಳಾಗಿ ಮಾತನಾಡದೇ ನೆಲಕ್ಕೆ ಬಿದ್ದಿದ್ದು ನಾನು ಮತ್ತು ನನ್ನ ಮಗನಾದ ಸುರೇಶ ಇಬ್ಬರೂ ಕೂಡಿ ಒಂದು ಖಾಸಗಿ ಕಾರಿನಲ್ಲಿ ನನ್ನ ಹೆಂಡತಿಯಾದ ಮಲಕಮ್ಮಳಿಗೆ ವಿಜಯಪೂರದ ಭಾಗ್ಯವಂತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ಅಪಘಾತವಾದ ದಿನ ನನ್ನ ಹೆಂಡತಿಗೆ ಯಾರು ಡಿಕ್ಕಿಪಡಿಸಿದರು ಅಂತಾ ಗೊತ್ತಾಗದೇ ಇದ್ದುದರಿಂದ ಮತ್ತು ನನ್ನ ಹೆಂಡತಿಗೆ ಭಾರೀ ಪ್ರಮಾಣದ ಗಾಯಗಳಾಗಿದ್ದರಿಂದ ಅರ್ಜಂಟ್ ದವಾಖಾನೆಗೆ ಹೋಗಿದ್ದು ನನ್ನ ಹೆಂಡತಿಯು ಸದ್ಯ ಚಿಕಿತ್ಸೆ ಪಡೆದುಕೊಂಡು ಮಾತನಾಡುತ್ತಿದ್ದು ಅವಳಿಗೆ ಇಂದು ದಿನಾಂಕ 18/08/2022 ರಂದು ಮುಂಜಾನೆ ಪೂರ್ಣ ಪ್ರಜ್ಞೆ ಬಂದಿದ್ದರಿಂದ ಯಾರು ಅಪಘಾತ ಮಾಡಿದರು ಅಂತಾ ಕೇಳಿದಾಗ ನನ್ನ ಹೆಂಡತಿಯಾದ ಮಲಕಮ್ಮಳು ತಿಳಿಸಿದ್ದೇನೆಂದರೆ, ನಮ್ಮೂರ ದಾವಲಸಾಬ ಮುಲ್ಲಾ ಇವರ ಮಗನಾದ ಹುಸೇನಭಾಷಾ ಈತನು ತನ್ನ ಸೈಕಲ್ ಮೋಟಾರನ್ನು ಅತೀವೇಗದಿಂದ ನಡೆಸಿಕೊಂಡು ಎದುರಿಗೆ ಬಂದು ತನಗೆ ಜೋಲಿ ಸಾಲದೇ ಅಲಕ್ಷತನದಿಂದ ನನಗೆ ಡಿಕ್ಕಿಪಡಿಸಿದ್ದರಿಂದ ನಾನು ನೆಲಕ್ಕೆ ಬಿದ್ದು ಗಾಯಗಳಾಗಿದ್ದು ನನಗೆ ಡಿಕ್ಕಿಪಡಿಸಿದ ಸೈಕಲ್ ಮೋಟಾರ ಹೊಸದಿದ್ದು ಅದಕ್ಕೆ ನಂಬರ ಇರಲಿಲ್ಲ ಅಂತಾ ತಿಳಿಸಿದಳು. ನನ್ನ ಹೆಂಡತಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಸೈಕಲ್ ಮೋಟಾರ ಚಾಲಕನ ಹೆಸರು ಹುಸೇನಭಾಷಾ ತಂದೆ ದಾವಲಸಾಬ ಮುಲ್ಲಾ ಸಾ|| ಹದನೂರ ಅಂತಾ ನನ್ನ ಹೆಂಡತಿಯಿಂದ ಗೊತ್ತಾಗಿದ್ದು ಅಪಘಾತ ಮಾಡಿದ ಚಾಲಕನು ಆ ದಿನ ಅಪಘಾತ ಮಾಡಿ ತನ್ನ ಸೈಕಲ್ ಮೋಟಾರ ನಿಲ್ಲಿಸದೇ ಓಡಿ ಹೋಗಿದ್ದು ಇಂದು ನಾನು ವಿಜಯಪೂರ ದವಾಖಾನೆಯಿಂದ ನಮ್ಮೂರಾದ ಹದನೂರಿಗೆ ಹೋಗಿ ಅಪಘಾತ ಮಾಡಿದ ಚಾಲಕನಾದ ಹುಸೇನಭಾಷಾ ಈತನಿಗೆ ಅಪಘಾತದ ಬಗ್ಗೆ ಕೇಳಲಾಗಿ ಅಪಘಾತ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಅವನಿಗೆ ಯಾಕೆ ಹೀಗೆ ಮಾಡಿರುವಿ ಅಂತಾ ಕೇಳಿದಾಗ ನಾನು ಹೊಲದಿಂದ ಮನೆಗೆ ಅವಸರದಲ್ಲಿ ಬರುವಾಗ ನನಗೆ ನಿಯಂತ್ರಣ ತಪ್ಪಿ ಡಿಕ್ಕಿಪಡಿಸಿದ್ದು ಆ ದಿನ ನಾನು ಅಲ್ಲಿದ್ದರೆ ನನಗೆ ಯಾರಾದರೂ ಹೊಡೆಯಬಹುದು ಎಂಬ ಭಯದಿಂದ ಹಾಗೆಯೇ ಮನೆಗೆ ಬಂದಿದ್ದೆನು ಅಂತಾ ತಿಳಿಸಿದ್ದು ಮತ್ತು ಹುಸೇನಭಾಷಾ ಈತನು ಅಪಘಾತ ಮಾಡಿದ ಸೈಕಲ್ ಮೋಟಾರ ನೋಡಲಾಗಿ ಅದು ಬಜಾಜ್ ಪ್ಲಾಟಿನಾ 100 ಅಂತಾ ಇದ್ದು ಅದಕ್ಕೆ ನಂಬರ ಇರಲಿಲ್ಲ. ಅದು ಹೊಸ ಸೈಕಲ್ ಮೋಟಾರ ಇದ್ದು ಅದರ ಚೆಸ್ಸಿ ನಂಬರ ನೋಡಲಾಗಿ ಒಆ2ಂ76ಂಘಿ3ಒಘಐ13748 ಅಂತಾ ಇದ್ದುದು ತಿಳಿದು ಬಂದಿರುತ್ತದೆ. ನನ್ನ ಹೆಂಡತಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಲ್ಲಿಯವರೆಗೆ ಉಪಚಾರ ಮಾಡಿಸಿ ನನ್ನ ಹೆಂಡತಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಸೈಕಲ್ ಮೋಟಾರ ಮತ್ತು ಸೈಕಲ್ ಮೋಟಾರ ಚಾಲಕನ ವಿವರ ತಿಳಿದುಕೊಂಡು ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ದಿನಾಂಕ 11/08/2022 ರಂದು ಮಧ್ಯಾಹ್ನ 12.20 ಪಿಎಂ ಸುಮಾರಿಗೆ ಮನೆಯಿಂದ ಹೊಲಕ್ಕೆ ಹದನೂರ ಯಾಳಗಿ ಹಳೆಯ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ನನ್ನ ಹೆಂಡತಿಯಾದ ಮಲಕಮ್ಮಳಿಗೆ ನಂಬರ ಇಲ್ಲದ ಬಜಾಜ್ ಸೈಕಲ್ ಮೋಟಾರ ಚೆಸ್ಸಿ ನಂ ಒಆ2ಂ76ಂಘಿ3ಒಘಐ13748 ನೇದ್ದರ ಚಾಲಕನಾದ ಹುಸೇನಭಾಷಾ ಈತನು ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ಅಪಘಾತ ಮಾಡಿ ಸೈಕಲ್ ಮೋಟಾರ ನಿಲ್ಲಿಸದೇ ಓಡಿ ಹೋಗಿದ್ದು ಸದರಿ ಸೈಕಲ್ ಮೋಟಾರ ಚಾಲಕನಾದ ಹುಸೇನಭಾಷಾ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 131/2022 ಕಲಂ 279,338 ಐಪಿಸಿ ಸಂಗಡ 187 ಐಎಮ್ವಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಇತ್ತೀಚಿನ ನವೀಕರಣ​ : 19-08-2022 12:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080