ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-09-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 146/2022 ಕಲಂ: 279, 337, 304(ಎ) ಐಪಿಸಿ : ಇಂದು ದಿನಾಂಕ 18/09/2022 ರಂದು 7.00 ಎಎಮ್ ಕ್ಕೆ ಅಜರ್ಿದಾರರಾದ ಶರಣಪ್ಪ ತಂದೆ ನಿಂಗಪ್ಪ ಹೂಗಾರ ವ|| 45ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಹದನೂರ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಇದ್ದು ಉಪಜೀವನ ಸಾಗಿಸುತ್ತಿದ್ದೇನೆ. ಪ್ರತಿ ನಿತ್ಯದಂತೆ ನಿನ್ನೆ ದಿನಾಂಕ 17/09/2022 ರಂದು ಮುಂಜಾನೆ ನಮ್ಮ ಹೊಲಕ್ಕೆ ಎತ್ತನ ಬಂಡಿ ತೆಗೆದುಕೊಂಡು ನಾನು, ನಮ್ಮ ತಾಯಿಯಾದ ನೀಲಮ್ಮ ಗಂಡ ನಿಂಗಪ್ಪ ಹೂಗಾರ, ನನ್ನ ಹೆಂಡತಿಯಾದ ಗೂಳಮ್ಮ ಗಂಡ ಶರಣಪ್ಪ ಹೂಗಾರ ನಮ್ಮ ಕಾಕಾನ ಮಗನಾದ ಮಲ್ಲಪ್ಪ ತಂದೆ ಹೂವಪ್ಪ ಹೂಗಾರ ಹಾಗೂ ಸೊಸೆಯಾದ ಗಂಗಮ್ಮ ಗಂಡ ಮಲ್ಲಪ್ಪ ಹೂಗಾರ ಎಲ್ಲರೂ ಕೂಡಿ ಹೊಲಕ್ಕೆ ಹೋಗಿದ್ದೆವು. ನಂತರ ಎಲ್ಲರೂ ಕೂಡಿ ಹೊಲದಲ್ಲಿ ಕೆಲಸ ಮಾಡಿ ಸಂಜೆ 6.30 ಗಂಟೆಯ ಸುಮಾರಿಗೆ ನಾವು ಮನೆಗೆ ಹೋಗಲು ನಮ್ಮ ಎತ್ತಿನ ಬಂಡಿಯಲ್ಲಿ ಕುಳಿತು ಹೊಲದಿಂದ ಹೊರಟೆವು. ನಾವು ನಮ್ಮೂರಾದ ಹದನೂರ ಹತ್ತಿರ ಇರುವ ಹಾಸ್ಟೆಲ್ ದಾಟಿ ಮುಂದೆ ಶಹಾಪೂರ ಸಿಂದಗಿ ಮುಖ್ಯ ರಸ್ತೆಯ ಮೇಲೆ ಹೋಗುತ್ತಿದ್ದಾಗ 7.15 ಪಿಎಂ ಸುಮಾರಿಗೆ ಹಿಂದಿನಿಂದ ಒಬ್ಬ ವ್ಯಕ್ತಿ ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಜೋರಾಗಿ ನಮ್ಮ ಎತ್ತಿನ ಬಂಡಿಗೆ ಡಿಕ್ಕಿಪಡಿಸಿದನು. ಎತ್ತಿನ ಬಂಡಿಯಲ್ಲಿ ಹಿಂದೆ ಕಾಲು ಕೆಳಗೆ ಬಿಟ್ಟು ಕುಳಿತಿದ್ದ ನಮ್ಮ ತಾಯಿಯಾದ ನೀಲಮ್ಮಳ ಕಾಲಿಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಮ್ಮ ತಾಯಿಯು ಕೆಳಗೆ ಬಿದ್ದಿದ್ದು ನಮ್ಮ ತಾಯಿಗೆ ಎರಡೂ ಕಾಲುಗಳು ಮುರಿದು, ತಲೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಬಿದ್ದು ಒದ್ದಾಡುತ್ತಿದ್ದು ಎತ್ತಿನ ಬಂಡಿ ಹೊಡೆಯುತ್ತಿದ್ದ ನನಗೆ ಬಂಡಿಯ ಈಸಿನ ಕಟ್ಟಿಗೆ ಬಡಿದು ಕಾಲಿಗೆ ಒಳಪೆಟ್ಟು ಗಾಯವಾಗಿ ಬಿದ್ದಿದ್ದು ತಕ್ಷಣ ಅಪಘಾತ ನೋಡಿದ ನಮ್ಮೂರ ರುದ್ರಗೌಡ ಹೊಸಮನಿ, ಚಂದ್ರಶೇಖರ ಬೀಳವಾರ ಇವರು ನಮಗೆ ಎಬ್ಬಿಸಿದರು. ಆಗ ನಮಗೆ ಅಪಘಾತ ಮಾಡಿದ ಸೈಕಲ್ ಮೋಟಾರ ನಂಬರ ನೋಡಲಾಗಿ ಕೆಎ 33 ವಿ 5647 ಇದ್ದು ಅಪಘಾತ ಮಾಡಿದ ವ್ಯಕ್ತಿಯನ್ನು ನೋಡಲಾಗಿ ನಮಗೆ ಪರಿಚಯ ಇರುವ ಮಲ್ಲಾ ಗ್ರಾಮದ ರೇವಣೆಪ್ಪ ತಂದೆ ಕೊತಲಪ್ಪ ಪೂಜಾರಿ ಸಾ|| ಮಲ್ಲಾ ಈತನು ಇದ್ದು ರೇವಣೆಪ್ಪನಿಗೂ ಗಾಯಗಳಾಗಿದ್ದುದು ಇರುತ್ತದೆ. ನಮ್ಮ ತಾಯಿಗೆ ಭಾರೀ ಗಾಯಗಳಾಗಿದ್ದರಿಂದ ಒಂದು ಅಂಬುಲೆನ್ಸದಲ್ಲಿ ಹಾಕಿಕೊಂಡು ವಿಜಯಪೂರ ಆಸ್ಪತ್ರೆಗೆ ಹೋಗುತ್ತಿದ್ದು, ನಾವು ದೇವರಹಿಪ್ಪರಗಿ ಹತ್ತಿರ ಹೋಗುತ್ತಿದ್ದಾಗ 9.00 ಪಿಎಂ ಸುಮಾರಿಗೆ ನಮ್ಮ ತಾಯಿಯಾದ ನೀಲಮ್ಮ ಗಂಡ ನಿಂಗಪ್ಪ ಹೂಗಾರ ವ|| 65 ಜಾ|| ಕುರುಬರ ಉ|| ಹೊಲಮನೆಕೆಲಸ ಸಾ|| ಹದನೂರ ಇವಳು ಚಿಕಿತ್ಸೆ ಫಲಿಸದೇ ಮೃತಪಟ್ಟಿರುತ್ತಾಳೆ. ನಮ್ಮ ತಾಯಿಯು ತೀರಿಕೊಂಡ ಕಾರಣ ನಾವು ದೇವರಹಿಪ್ಪರಗಿಯಿಂದ ವಾಪಸ್ ಊರಿಗೆ ಬಂದು ನಮ್ಮ ತಾಯಿಯ ಮೃತದೇಹವನ್ನು ಮುಂದಿನ ಕ್ರಮಕ್ಕಾಗಿ ಸುರಪೂರ ಸರಕಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಇಟ್ಟಿದ್ದು, ನನಗೆ ಅಷ್ಟೊಂದು ಗಾಯಗಳಾಗದ ಕಾರಣ ನಾನು ಆಸ್ಪತ್ರೆಗೆ ತೋರಿಸಿಕೊಂಡಿಲ್ಲ. ರಾತ್ರಿ ಸಮಯ ಜಾಸ್ತಿಯಾಗಿದ್ದರಿಂದ ಇಂದು ಬೆಳಿಗ್ಗೆ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ನಾವು ಹೊಲದಿಂದ ಮನೆಗೆ ಎತ್ತಿನ ಬಂಡಿಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಸೈಕಲ್ ಮೋಟಾರ ನಂ ಕೆಎ 33 ವಿ 5647 ನೇದ್ದರ ಚಾಲಕನಾದ ರೇವಣೆಪ್ಪ ಪೂಜಾರಿ ಈತನು ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎತ್ತಿನ ಬಂಡಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಎತ್ತಿನ ಬಂಡಿಯಲ್ಲಿದ್ದ ನಮ್ಮ ತಾಯಿಯಾದ ನೀಲಮ್ಮಳಿಗೆ ಭಾರೀ ಗಾಯಗಳಾಗಿ ಮೃತಪಟ್ಟಿದ್ದು, ಅಪಘಾತ ಮಾಡಿದ ವ್ಯಕ್ತಿಯ ಮೇಲೆ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 146/2022 ಕಲಂ 279, 337, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 74/2022 ಕಲಂ 279, 304(ಎ) ಐ.ಪಿ.ಸಿ : ಇಂದುದಿನಾಂಕ:18/09/2022 ರಂದು 2.20 ಪಿ.ಎಮ್. ಸುಮಾರಿಗೆ ಮೃತನುತನ್ನ ಸೋದರಮಾವನ ಮಗನಾದಆರೋಪಿತನಾದಅಶ್ರಫಹುಸೇನಈತನೊಂದಿಗೆ ಮತ್ತುತನ್ನ ಗೆಳೆಯರೊಂದಿಗೆ ಶಾಪಿಂಗ್ ಮಾಡಲು ಆರೋಪಿತನಕಾರ್ ನಂ:ಕೆಎ-33, ಎಮ್-7986 ನೇದ್ದರಲ್ಲಿ ಕುಳಿತು ಹುಲಕಲ್(ಕೆ) ಸೀಮಾಂತರ ಅಯ್ಯಣ್ಣಗೌಡ ಮಾಲಿಬಿರಾದಾರ ಇವರ ಹೊಲದ ಹತ್ತಿರ ಶಹಾಪೂರ-ಕಲಬುರಗಿ ಮುಖ್ಯರಸ್ತೆಯ ಮೇಲೆ ಕಲಬುರಗಿಯಕಡೆಗೆ ಹೊರಟಾಗಆರೋಪಿತನು ಇಳಿಜಾರು ರಸ್ತೆಇರುವದನ್ನು ಲೆಕ್ಕಿಸದೇತನ್ನಕಾರನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿದ್ದರಿಂದ ಕಾರ ಚಾಲಕನ ನಿಯಂತ್ರಣತಪ್ಪಿರಸ್ತೆಯ ಬಲಬದಿಯಲ್ಲಿ ಪಲ್ಟಿಯಾಗಿ ಬುಡಮೇಲಾಗಿ ಬಿದ್ದುಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಮೃತನಎಡಗಣ್ಣಿಗೆ, ತಲೆಗೆ ಭಾರಿಗುಪ್ತಗಾಯವಾಗಿ, ಎಡಗೈ ಮೊಳಕೈ ಹತ್ತಿರ ಭಾರಿರಕ್ತಗಾಯವಾಗಿ ವೈದ್ಯಕೀಯಉಪಚಾರಕುರಿತು ಕಲಬುರಗಿಗೆತೆಗೆದುಕೊಂಡು ಹೊರಟಾಗ ಮಾರ್ಗ ಮಧ್ಯದಲ್ಲಿಜೇವಗರ್ಿದಾಟಿಇಂದು ಮದ್ಯಾಹ್ನ 3.35 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಉಳಿದವರಿಗೆ ಯಾವುದೇಗಾಯವಗೈರೆಆಗಿರುವದಿಲ್ಲ ಅಂತಾದೂರುಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 160/2022 ಕಲಂ: 406, 418, 420 ಸಂಗಡ 34 ಐ.ಪಿ.ಸಿ. : ಇಂದು ದಿನಾಂಕ 18/09/2022 ರಂದು 04.00 ಪಿಎಂ ಕ್ಕೆ ಮಾನ್ಯ ನ್ಯಾಯಾಲದಿಂದ ವಸೂಲಾದ ಖಾಸಗಿ ದಾವೆ ನಂ: 19/2022 ನೇದ್ದನ್ನು ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಶ್ರೀ ರಾಮಣ್ಣ ಪಿ.ಸಿ-424 ರವರು ತಂದು ಠಾಣೆಗೆ ಹಾಜರು ಪಡಿಸಿದ್ದು, ಸದರಿ ಹಾಜರು ಪಡಿಸಿದ ಸಾರಾಂಶವೆನಂದರೆ, ದಿನಾಂಕ: 28-2-2021 ರಂದು ಮುಂಜಾನೆ 11 ಗಂಟೆ ಸುಮಾರಿಗೆ ಆರೊಪಿ. ನಂ. 2 ಜೋಷಿ, ಶಾಖಾ ವ್ಯವಸ್ಥಾಪಕರು, ಚೋಳಮಂಡಳಮ್ಮ ಇನ್ವಸ್ಟ ಆಂಡ ಪೈನಾಸ್ನ ಕಂ. ಲಿಮಿಟೆಡ ಮೊದಲನೆ ಮಹಡಿ ಸಿನ್ನುರ ಕಾಂಪ್ಲೆಕ್ಷ ಬಿಬಿ ರೋಡ ಶಹಾಪೂರ ಮತ್ತು ಆರೊಪಿ ನಂ: 3 ಲೋಕೇಶ ಪೀಲ್ಡ ಆಫಿಸರ್ ಚೋಳಮಂಡಳಮ್ಮ ಇನ್ವಸ್ಟ ಆಂಡ ಪೈನಾಸ್ನ ಕಂ. ಲಿಮಿಟೆಡ ಮೊದಲನೆ ಮಹಡಿ ಸಿನ್ನುರ ಕಾಂಪ್ಲೆಕ್ಷ ಬಿಬಿ ರೋಡ ಶಹಾಪೂರ. ಇವರು ಸಗರ ಗ್ರಾಮದಲ್ಲಿರುವ ಪಿರ್ಯಾದಿ ಮನೆಗೆ ಹೋಗಿ ಬಲವಂತವಾಗಿ ಹೆದರಿಸಿ ಅಕ್ರಮವಾಗಿ ವಾಹನವನ್ನು ಜಪ್ತಿ ಮಾಡುವುದಾಗಿ ಹೆದರಿಸಿ ಜೋರಾವರಿಯಿಂದ 16,730/-ರೂಗಳನ್ನು ಪಡೆದುಕೊಂಡಿರುತ್ತಾರೆ. ಈ ವಿಷಯವನ್ನು ಆರೋಪಿ ನಂ: 02 ಮತ್ತು 03 ಇವರು ಆಗಾಗ್ಗೆ ತಮ್ಮ ಮೋಬೈಲ್ ನಂ: 9611501471 ಮತ್ತು 9902209902 ರ ಮೂಲಕ ನನಗೂ ಮತ್ತು ನನ್ನ ಸಹೊದರನ ಮೊಬೈಲ್ಗೆ ಪೋನ ಮಾಡಿ ವಾಹನದ ಸಾಲದ ಕಂತುಗಳನ್ನು ಕಟ್ಟುವಂತೆ ಬೆದರಿಕೆ ಅಕ್ರಮವಾಗಿ ಬೆದರಿಕೆ ಹಾಕಿರುತ್ತಾನೆ.
ಪಿರ್ಯಾದಿ ತಂದೆಯಾದ ವೀರಬದ್ರಸ್ವಾಮಿ ಇವರು ಟೊಯೊಟ್ ಎಟಿಯಸ್ ಸಿಜೆಲ್ ಕಾರನ್ಗನು ಖರಿದಿ ಮಾಡಿದ್ದು ಸದರಿ ಕಾರನ್ನು ಖರಿಸಿ ಮಾಡಲು ಆರೋಪಿ ನಂ: 1 ಚೋಳಮಂಡಳಮ್ಮ ಇನ್ವಸ್ಟ ಆಂಡ ಪೈನಾಸ್ನ ಕಂ. ಲಿಮಿಟೆಡ್ ಡೇರ ಹೌಸ್, ಮೊದಲನೆಯ ಮಹಡಿ ಸಂ: ಎನ್ಎಸ್.ಸಿ ಬೋಸ ರಸ್ತೆ ಪೆರಿಸ್ ಚೆನ್ನೈ-600001 ರವರು ಹಣಕಾಸು ನೆರವನ್ನು ಅವರದೇ ಆದ ಆರೋಪಿ ನಂ: 02 ರವರ ಶಾಖೆಯಿಂದ ದಿನಾಂ: 28-10-2017 ರಲ್ಲಿ ನೀಡಿರುತ್ತಾರೆ ಸದರಿ ಆರೋಪಿ ಸಂ: 1 ಮತ್ತು 2 ಇವರು ಒಟ್ಟು ರೂ. 6,86,888/-ಗಳನ್ನು ವಾಹನ ಖರೀದಿ ಮಾಡಲು ಪೈನಾನ್ಸ ಮಾಡಿರುತ್ತಾರೆ. ಸದರಿ ಹಣವನ್ನು ಪೈನಾನಸ್ಯ ಮಾಡುವಾಗ ಆರೋಪಿ ನಂ.1 ಮತ್ತು 2 ಇವರು ಪಿರ್ಯಾದಿ ಕಡೆಯಿಂದ ತಮ್ಮ ಹೆಸರಿನಲ್ಲಿ ಲೈಪ ಇನ್ಸೂರೆನ್ಸ ಮಾಡಿಕೊಂಡುದ್ದಯು, ಒಂದು ವೇಳೆ ಸಾಲಗಾರನು ಮರಣ ಹೊಂದಿದ ಪಕ್ಷದಲ್ಲಿ ಆರೋಪಿ ನಂ: 1 ಮತ್ತು 2 ಇವರು ತಮ್ಮ ಆಥರ್ಿಕ ನೆರವಿಗೆ ಸಂಬಂಸಿದಂತೆ ಬರಬೇಕಾದ ಬಾಕಿ ಹಣವನ್ನು ಲೈಪ ಇನ್ಸೂರೆನ್ಸ ಕಂಪನಿಯಿಂದ ಹಕ್ಕೊತ್ತಾಯ ಮಾಡಬಹುದಾಗಿದೆ. ಸದರಿ ಲೈಪ ಪೈನಾನ್ಸನ್ನು ಹೆಚ್.ಡಿ.ಎಪ.ಸಿ ಲೈಪ ಕಂಪನಿಯಲ್ಲಿ ಮಾಡಿದ್ದು ಅದರ ಕಡಿಠಜಣತಣ ಗಓ: 101ಓ096ಗಿ03 ಇರುತ್ತದೆ. ಸದರಿ ಲೈಪ ಇನ್ಸುರೆನ್ಸನ್ನು 4 ವರ್ಷದ ಅವದಿಗೆ ಮಾಡಿದ್ದು ಅದರ ಅವದಿ ದಿನಾಂಕ: 28-9-2017 ರಿಂದ ದಿಣಾಂಕ: 27-9-2021 ರವರಗೆ ಇರುತ್ತದೆ. ಅದು ಪಿರ್ಯಾದಿಯ ತಂದೆಂಯು ದಿನಾಂಕ: 5-10-2020 ರಂದು ಮರಣ ಹೊಂದಿದ್ದು ಅವರ ಮರಣದ ವಿಷಯವನ್ನು ಆರೋಪಿ ನಂ: 02 ರವರ ಗಮನಕ್ಕೆ ತಂದಿರುತ್ತೇವೆ ಆರೋಪಿ ನಂ.02 ಇವರು ತಮ್ಮ ಗ್ರಾಹಕನಾದ ಪಿರ್ಯಾದಿ ತಂದೆಯು ಮರಣವನು ಹೊದಿದ್ದರಿಂದ ವಾಹನ ಮೇಲೆ ಪೈನಾನ್ಸ ಮಾಡುವ ಕಾಲಕ್ಕೆ ಫಲಾನುಭವಿಯಾಗಿ ಮಾಡಿಸಲಾದ ಲೈಪ ಪಾಲಿಸಿ ಕೆಳಗೆ ಬಾಕಿ ಸಾಲದ ಹಣವನ್ನು ಇನ್ಸುರೆನ್ಸ ಕಂಪನಿಯಲ್ಲಿ ಕ್ಲೆಮ ಮಾಡದೇ ಅಪರಾಧ ನಂಬಿಕೆ ದ್ರೋಹವನ್ನಿ ಎಸುಗಿದ್ದು ಇದೆ. ಸದರಿ ಲೈಪ ವಿಮೆ ಪ್ರಕಾರ ಸಾಲಗಾರನು ಮರಣದ ನಂತರ ವಿಮೆ ಕಂಪನಿಯಲ್ಲಿ ಆರೊಪಿ ನಂ.1 ಮತ್ತು 2 ಇವರು ನೇರವಾಗಿ ಕ್ಲೇಮ ಮಾಡುವ ಅಧಿಕಾರ ಹೊಂದಿದ್ದು ಸದರಿ ವಿಮೆಯಲ್ಲಿ ಪಲಾನುಭವಿಗಳು ಅವರೇ ಇರುತ್ತಾರೆ. ಸದರಿ ಕರಾರಿನ ಪ್ರಕಾರ ಸಾಲಗಾರನು ಮರಣವನ್ನು ಹೊಂದಿದ ನಂತರ ಯಾವುದೆ ಕಂತು ಇಲ್ಲವೇ ಬಾಕಿ ಸಾಲದ ಹಣವನ್ನು ಕಟ್ಟುವ ಹೊಣೆಯು ಮೃತನ ವಾರಸುದಾರರಿಗೆ ಇರುವುದಿಲ್ಲ ಆದರೆ ಆರೋಪಿ. ನಂ. 1 ರಿಂದ 3 ಇವರು ಸದರಿ ಕರಾರಿನ ವಿರುದ್ದವಗಿ ಪಿರ್ಯಾದಿಗೆ ಆತನ ಕುಟುಂಬ ಸದಸ್ಯರಿಗೆ ಮಾನಸಿಕ ಹಿಂಸೆ ಮತ್ತು ಹೆದರಿಸಿ ಮೋಸ ಹಾಗೂ ವಂಚನೆ ಅಪರಾಧ ಕೃತ್ಯವನ್ನು ಎಸಗಿರುತ್ತಾರೆ. ಆರೋಪಿ ನಂ: 2 ಮತ್ತು 3 ರವರ ಪೈನಾನ್ಸ ಕಂಪನಿಯಲ್ಲಿನ ಅಧಿಕೃತ ಅಧೀಕಾರಿಗಳು ಇದ್ದು ಇವರು ಈ ಮೇಳೆ ಹೇಳಿದಂತೆ ದಿನಾಂಕ: 28-2-2021 ರಂದು ಮನೆಗೆ ಬಂದು ಪಿರ್ಯಾದಿಗೆ ಹೆದರಿಸಿ ಕಾನುನು ರಿತ್ಯವಾಗಿ ತಾವು ನಿರ್ವಹಿಸಬೇಕಾದ ಕ್ರಮವನ್ನು ಬಿಟ್ಟು ಅಪರಾದ ನಂಬಿಕೆ, ವಂಚನೆ ಮತ್ತು ಮೋಸ ಮಾಡಿರುತ್ತಾರೆ. ಪಿರ್ಯಾದಿ ತಂದಗೆ ವಾಹನದ ಮೇಲೆ ಸಾಲವನ್ನು ಪಾವತಿಸುವಗ ಒಂದು ವೇಳೆ ಮೃತನಾದ ಪಕ್ಷದಲ್ಲಿ ಸಾಲವನ್ನು ಲೈಪ ಇನ್ಸೂರೆನ್ಸ ಮುಲಕ ಪಡೆಯುವುದಗಿ ಹೇಳಿ ರೂ. 39,593/- ಗಳ ಲೈಪ ಇನ್ಸೂರೆನ್ಸ ಹಣವನ್ನು ಸ್ವಿಕರಿಸಿ ತಮ್ಮ ಹೆಸರಿನಲ್ಲಿ ವಿಮೇ ಮಾಡಿಕೊಂಡಿದ್ದು, ಅವರ ಮರಣದ ನಂತರ ಅದನ್ನು ಕ್ಷೇಮ ಮಾಡದೆ ಅಪರಾಧ ನಂಬಿಕೆ ದ್ರೋಹವನ್ನು ಮಾಡಿರುತ್ತಾರೆ ಮತ್ತು ದಿನಾಂಕ: 28-2-2021 ರಂದು ಪಿರ್ಯಾದಿ ಲೈಪ ವಿಮೆ ಬಗ್ಗೆ ಮಾಹಿತಿ ನೀಡಿದ್ದರೂ ಅದನ್ನು ಪರಿಗಣಿಸದೇ ಮತ್ತು ಅದರ ಕೆಳಗೆ ಕ್ರಮವನ್ನು ನಿರ್ವಹಿಸುವ ಅಧಿಕಾರವನ್ನು ಆರೋಪಿಗಳು ಹೊಂದಿದ್ದರೂ ಬಲವಂತವಾಗಿ ಪಿರ್ಯಾದಿಯಿಂದ 16,730/- ರೂಗಳನ್ನು ಸ್ವಿಕರಿಸಿ ವಂಚನೆ ಮಾಡಿದ್ದು, ಹೆದರಿಕೆಯ ಮೂಲಕ ಹಾಗೆ ಹಣವನ್ನು ಪ್ರೇರೆಪಿಸಿ ಮೋಸ ಮಾಡಿದ್ದು ಸದರಿ ಆರೋಪಿ ನಂ.1 ಚೋಳಮಂಡಳಮ್ಮ ಇನ್ವಸ್ಟ ಆಂಡ ಪೈನಾಸ್ನ ಕಂ. ಲಿಮಿಟೆಡ್ ಡೇರ ಹೌಸ್ ಮೊದಲನೆಯ ಮಹಡಿ ಸಂ: ಎನ್ಎಸ್.ಸಿ ಬೋಸ ರಸ್ತೆ ಪೆರಿಸ್ ಚೆನ್ನೈ-600001. ಆರೋಪಿ ನಂ.2 ಜೋಷಿ, ಶಾಖಾ ವ್ಯವಸ್ಥಾಪಕರು, ಚೋಳಮಂಡಳಮ್ಮ ಇನ್ವಸ್ಟ ಆಂಡ ಪೈನಾಸ್ನ ಕಂ. ಲಿಮಿಟೆಡ ಮೊದಲನೆ ಮಹಡಿ ಸಿನ್ನುರ ಕಾಂಪ್ಲೆಕ್ಷ ಬಿಬಿ ರೋಡ ಶಹಾಪೂರ. ಆರೋಪಿ ನಂ.3 ಲೋಕೇಶ ಪೀಲ್ಡ ಆಫಿಸರ್ ಚೋಳಮಂಡಳಮ್ಮ ಇನ್ವಸ್ಟ ಆಂಡ ಪೈನಾಸ್ನ ಕಂ. ಲಿಮಿಟೆಡ ಮೊದಲನೆ ಮಹಡಿ ಸಿನ್ನುರ ಕಾಂಪ್ಲೆಕ್ಷ ಬಿಬಿ ರೋಡ ಶಹಾಪೂರ ಇವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಅಂತಾ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 160/2022 ಕಲಂ 406, 418, 420 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ. 161/2022 ಕಲಂ 420, 324, 504 506 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 18/09/2022 ರಂದು, ಸಾಯಂಕಾಲ 17-00 ಗಂಟೆಗೆ ಕೋಟರ್್ ಸಿಬ್ಬಂದಿ ಶ್ರೀ ರಾಮಣ್ಣ ಪಿ.ಸಿ 424 ಶಹಾಪೂರ ಪೊಲೀಸ್ ಠಾಣೆ ರವರು, ಠಾಣೆಗೆ ಬಂದು, ಫಿಯರ್ಾದಿ ಶ್ರೀ ಶಾಂತಪ್ಪ ತಂದೆ ಚಂದ್ರಶ್ಯಾ ಕೋರಿ, ವಯಸ್ಸು 50 ವರ್ಷ, ಉದ್ಯೋಗ, ಖಾಸಗಿ ಕೆಲಸ, ಸಾಃ ಗುತ್ತಿಪೇಠ ಶಹಾಪೂರ ಸದ್ಯ ವಾಸಸ್ಥಳ ಕಲಬುರಗಿ ಇವರು, ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಲ್ಲಿ ಸಲ್ಲಿಸಿದ ಖಾಸಗಿ ದೂರು ಸಂಖ್ಯೆ 65/2022 ನೇದ್ದು ಹಾಜರ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ಶಹಾಪೂರ ನಗರ ಸಭೆಯ ವ್ಯಾಪ್ತಿಯಲ್ಲಿ ಬರುವ ಗುತ್ತಿಪೇಠ ಬಡಾವಣೆಯ ನಿವೇಶನ ನಂ. 24-46 (40 ಮತ್ತು 54 ಉದ್ದಳತೆ ನಿವೇಶನವನ್ನು ತನ್ನ ಮಾವನ ತಂದೆಯವರಾದ ಬಸಟ್ಟೆಪ್ಪ ತಂದೆ ನಿಂಬಣ್ಣ ಜವಳಿ ಅವರು ಹಲವು ವರ್ಷದ ಹಿಂದೆ ಮೃತಪಟ್ಟಿದ್ದು, ನಂತರ ಅವರ ಮಗ ಶಾಂತವೀರಪ್ಪ ತಂದೆ ಬಸಟೆಪ್ಪ ಜವಳಿ ಇವರು ಸದರಿ ಮನೆಯ ವಾರಸ್ಸುದಾರರು ಆಗಿದ್ದರು. ಕೆಲವು ವರ್ಷಗಳ ನಂತರ ತನ್ನ ಮಾವ ಶಾಂತವೀರಪ್ಪ ತಂದೆ ಬಸಟೆಪ್ಪ ಜವಳಿ ಇವರು ತೀರಿಕೊಂಡರು. ತನ್ನ ಮಾವ ಶಾಂತವೀರಪ್ಪ ಜವಳಿ ರವರಿಗೆ ಗಂಡು ಸಂತಾನವಿಲ್ಲದೆ ಒಬ್ಬರು ಹೆಣ್ಣು ಮಗಳಿದ್ದರು. ಅವರ ಹೆಸರು ಮಲ್ಲಕ್ಕ ತಂದೆ ಶಾಂತವೀರಪ್ಪ ಇರುತ್ತದೆ. ಮಲ್ಲಮ್ಮಳನ್ನು ತಾನು ಮದುವೆಯಾಗಿದ್ದು ಇರುತ್ತದೆ. ಮಲ್ಲಮ್ಮಳು ಅನಾರೋಗ್ಯದಿಂದ ದಿನಾಂಕ 15/02/2022 ರಂದು ಮೃತಪಟ್ಟಿದ್ದು ಇರುತ್ತದೆ. ಸದರಿ ಮನೆಯ ವಾರಸ್ಸುದಾರನು ತಾನು ಆಗಿದ್ದರು ಸಹ ಅಂದಿನ ಪುರಸಭೆಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುವ ಉದ್ದೇಶದಿಂದ ಆರೋಪಿಯು ವಂಚನೆಯಿಂದ ಅಕ್ರಮವಾಗಿ ತನ್ನ ಮಾವನ ತಂದೆ ಬಸಟೆಪ್ಪ ತಂದೆ ನಿಂಬಣ್ಣ ಜವಳಿ ಇವರ ಹೆಸರಿನಲ್ಲಿರುವ ಮನೆಯನ್ನು ಆರೋಪಿ ಗಿರಿಜಾ ಗಂಡ ನಾಗಪ್ಪ ಜವಳಿ ವಯಸ್ಸು 45 ಉದ್ಯೋಗ ಖಾಸಗಿ ಕೆಲಸ ಸಾಃ ಗುತ್ತಿಪೇಠ ಶಹಾಪೂರ ಇವರು ಕಾನೂನು ಬಾಹಿರವಾಗಿ ತನ್ನ ಹೆಸರಿಗೆ ವಗರ್ಾವಣೆ ಮಾಡಿಕೊಂಡು ನ್ಯಾಯಬದ್ದವಾಗಿ ತನಗೆ ಸೇರಬೇಕಾದ ಆಸ್ತಿಯನ್ನು ವಂಚನೆ ಮಾಡಿದ್ದಾರೆ. ಆರೋಪಿಯು ತಮ್ಮ ಕುಟುಂಬಕ್ಕೆ ಯಾವುದೇ ಸಂಬಂಧವಿಲ್ಲದಿದ್ದರು ಸಹಿತ ತನ್ನ ಮಾವನ ತಂದೆಯ ಹೆಸರಿನಲ್ಲಿರುವ ಮನೆಯನ್ನು ಪುರಸಭೆ ಅಧಿಕಾರಿಗೆ ತಪ್ಪು ಮಾಹಿತಿ ನೀಡಿ ಮುಟೇಷನ್ ಮಾಡಿಕೊಂಡಿದ್ದು ಇರುತ್ತದೆ. ಫಿಯರ್ಾದಿದಾರನ ಮಾವ ಶಾಂತವೀರಪ್ಪ ತಂದೆ ಬಸಟೆಪ್ಪ ಜವಳಿ ಇವರ ಹೆಸರಿನಲ್ಲಿರುವ ಜಮೀನು ಸವರ್ೇ ನಂ. 27/3 4 ಎಕರೆ 8 ಗುಂಟೆ ಜಮೀನನ್ನು ತಹಸೀಲ ಕಚೇರಿಯಲ್ಲಿ ಫಿಯರ್ಾದಿದಾರನು ತನ್ನ ಹೆಸರಿಗೆ ವಗರ್ಾವಣೆ ಮಾಡಿಸಿಕೊಂಡಿದ್ದು ಇರುತ್ತದೆ. ಅಲ್ಲದೆ ಫಿಯರ್ಾದಿದಾರನು ತನ್ನ ಕುಟುಂಬದ ವಂಶಾವಳಿಯನ್ನು ತಹಸೀಲ ಕಚೇರಿಯಿಂದ ಪಡೆದುಕೊಂಡಿದ್ದು ಇರುತ್ತದೆ.ಹೀಗಿರುವಾಗ ದಿನಾಂಕಃ 24/04/2022 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಫಿಯರ್ಾದಿದಾರರು ತನ್ನ ಗೆಳಯರಾದ ದೇವಿಂದ್ರ ಹಾಗೂ ಚಂದ್ರಕಾಂತ ಜಾನೆ ಮೂವರು ಕೂಡಿ ಗಿರಿಜಾ ಇವರ ಬಳಿ ತೆರಳಿ ನಮ್ಮ ಮಾವನ ತಂದೆಯ ಹೆಸರಿನಲ್ಲಿರುವ ಮನೆಯನ್ನು ಪುರಸಭೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುವ ಉದ್ದೇಶದಿಂದ ವಂಚಿಸಿ ಕಾನೂನುಬಾಹಿರವಾಗಿ ನಮ್ಮ ಕುಟುಂಬಕ್ಕೆ ಸಂಬಂಧವಿಲ್ಲೆ ಇದ್ದರು ಸಹ ಮೋಸದಿಂದ ಮುಟೇಷನ್ ಮಾಡಿಸಿಕೊಂಡಿದ್ದು ಸರಿಯಲ್ಲ. ಕಾನೂನು ಬದ್ದವಾಗಿ ಮನೆಯ ವಾರಸ್ಸುದಾರನು ನಾನಿದ್ದೇನೆ. ನನ್ನ ಹೆಸರಿಗೆ ವಗರ್ಾವಣೆ ಮಾಡು ಅಂತ ಕೇಳಿದಾಗ ಲೇ ಬೊಸಡಿ ಮಗನೆ ಶಾಂತ್ಯಾ ಎಲ್ಲಿದೆ ಮನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಇದು ನನ್ನ ಮನೆ ನೀನು ಯಾರು ಕೇಳುವನು ಸುಮ್ಮನೆ ಹೋಗು ಇಲ್ಲಾ ಅಂದರೆ ಪೆಟ್ರೋಲ್ ಹಾಕಿ ಸುಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದರು. ಆಗ ನನ್ನ ಜೊತೆ ಇದ್ದ ದೇವಿಂದ್ರ ಹಾಗೂ ಚಂದ್ರಕಾಂತ ಜಾನೆ ಇಬ್ಬರಿಗೂ ಸಮಧಾನ ಹೇಳಿ ವಾಪಸ್ಸು ಕಳುಹಿಸಿದರು. ಆದ ಕಾರಣ ಗಿರಿಜಾ ಗಂಡ ನಾಗಪ್ಪ ಜವಳಿ ಸಾಃ ಗುತ್ತಿಪೇಠ ಶಹಾಪೂರ ರವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿಯವರ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 161/2022 ಕಲಂ 420, 324, 504, 506 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 162/2022 ಕಲಂ, 454. 380 ಐ.ಪಿ.ಸಿ : ಇಂದು ದಿನಾಂಕ 18.09.2022 ರಂದು 06.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಶಶಿಕುಮಾರ ತಂದೆ ಬಸವರಾಜ ಶಹಾಪೂರಕರ್ ವ|| 47 ಜಾ|| ಮಡಿವಾಳ ಉ|| ಇಟ್ಟಂಗಿ ಬಟ್ಟಿ ವ್ಯಾಪಾರ ಸಾ|| ತಾಜ ಸುಲ್ತಾನಪೂರ ತಾ||ಜಿ|| ಕಲಬುಗರ್ಿ ಹಾ||ವ|| ದೋರನಳ್ಳಿ ತಾ|| ಶಹಾಪೂರ ತಾ: ಶಹಾಪೂರ ಜಿ: ಯಾದಗಿರ ಮೋ, ನಂ: 6363352424 ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಾನು ಸುಮಾರು 8 ವರ್ಷಗಳಿಂದ ಶಹಾಪೂರ ಪಟ್ಟಣದ, ಶಹಾಪೂರದಿಂದ ಯಾದಗಿರಿಗೆ ಹೋಗುವ ರೋಡಿಗೆ ಹೊಂದಿಕೊಂಡು, ನಂದಿನಿ ಹಾಲಿನ ಡೈರಿಯ ಎದುರಿಗೆ ಇಟ್ಟಂಗಿ ಬಟ್ಟೆ ಮಾಡಿಕೊಂಡು ಇರುತ್ತೇನೆ. ಆ ಬಟ್ಟೆಯ ಹತ್ತಿರ ಸಾಮಾನುಗಳು ಇಡುವದಕ್ಕಾಗಿ ಒಂದು ಇಟ್ಟಂಗಿಯಿಂದ ರೂಮ ಮಾಡಿ ಅದಕ್ಕೆ ಕಬ್ಬಿಣದ ಬಾಗಿಲು ಕೂಡಿಸಿದ್ದು ಇರುತ್ತದೆ. ಸದರಿ ರೂಮಿನಲ್ಲಿ ಟೈರ ಹಾಗು ಇತರೆ ಸಾಮಾನುಗಳು ಇಟ್ಟಿದ್ದು ಇರುತ್ತದೆ. ನಾನು ದಿನಾಲು ಸಾಯಂಕಾಲ 07.00 ಗಂಟೆಗೆ ಮನೆಗೆ ಹೋಗುವಾಗ ಸದರಿ ರೂಮಿಗೆ ಕೀಲಿ ಹಾಕಿಕೊಂಡು ಹೋಗುತ್ತೇನೆ. ಹೀಗಿದ್ದು ದಿನಾಂಕ: 10.09.2022 ರಂದು ಸಾಯಂಕಾಲ 07.00 ಗಂಟೆಗೆ ನನ್ನ ಕೆಲಸ ಮುಗಿದ ನಂತರ ನಾನು ನಮ್ಮ ಇಟ್ಟಂಗಿ ಬಟ್ಟೆಯಲ್ಲಿರುವ ರೂಮಿನ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ಮರಳಿ ಮರುದಿವಸ ದಿನಾಂಕ 11.09.2022 ರಂದು ಮುಂಜಾನೆ 10 ಗಂಟೆಗೆ ಇಟ್ಟಂಗಿ ಬಟ್ಟೆಗೆ ಬಂದು ನೋಡುವಷ್ಟರಲ್ಲಿ ರೂಮಿನ ಕೀಲಿ ಮುರಿದಿತ್ತು ನಂತರ ಗಾಬರಿಯಾಗಿ ಒಳಗಡೆ ಹೋಗಿ ನೋಡಲಾಗಿ ಸದರಿ ರೂಂನಲ್ಲಿ ಇಟ್ಟಿದ್ದ 02 ಅಫೋಲೊ ಕಂಪನಿಯ 10ಥ20 ಅಳತೆಯ 40,000/- ರೂ ಕಿಮ್ಮತ್ತಿನ ಟೈರಗಳು ಕಾಣಲಿಲ್ಲ ನಮ್ಮ ಇಟ್ಟಂಗಿ ಬಟ್ಟೆಯ ಸುತ್ತಲೂ ಹುಡುಕಾಡಿದರೂ ಎಲ್ಲಿಯೂ ಸಿಗಲಿಲ್ಲ. ಯಾರೋ ಕಳ್ಳರು ದಿನಾಂಕ: 10.09.2022 ರಂದು ಸಾಯಂಕಾಲ 07.00 ಗಂಟೆಯಿಂದ ದಿನಾಂಕ 11.09.2022 ರಂದು ಮುಂಜಾನೆ 10 ಗಂಟೆಯ ಮದ್ಯದ ಅವಧಿಯಲ್ಲಿ ನಮ್ಮ ಇಟ್ಟಂಗಿ ಬಟ್ಟೆಯ ರೂಮಿನ ಕೀಲಿ ಮುರಿದು ಅದರಲ್ಲಿದ್ದ 40,000/- ರೂ ಕಿಮ್ಮತ್ತಿನ ಎರಡು ಅಪೋಲೋ ಕಂಪನಿಯ 10ಥ20 ಟೈರಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 162/2022 ಕಲಂ 457,380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ 379 ಐಪಿಸಿ : ದಿನಾಂಕ:13/09/2022 ರಂದು ಮದ್ಯಾಹ್ನ ಫಿಯರ್ಾದಿದಾರರು ಸೈಟಗೆ ಭೇಟಿಕೊಟ್ಟು ಪರಿಶೀಲಿಸಿ ನೋಡಲಾಗಿಯಾರೋ ಕಳ್ಳರು ಸೈಟಿಗೆ ಹಾಕಿದತಂತಿಬೇಲಿಯಿಂದ ಒಳಗೆ ಹೋಗಿ ರ್ಯಾಕ್ಗೆ ಹಾಕಿದಕಬ್ಬಿಣದ ಪಟ್ಟಿಯನ್ನು ಮುರಿದುಅದರಲ್ಲಿ ಅಳವಡಿಸಿದ 24 ಬ್ಯಾಟರಿ ಬ್ಯಾಂಕ ಸೆಲ್ಗಳ ನಟ್ ಬೋಲ್ಟ್ ಬಿಚ್ಚಿಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು 24 ಬ್ಯಾಟರಿ ಸೆಲ್ಗಳ ಅಂದಾಜುಕಿಮ್ಮತ್ತು 48,000=00 (ನಲವತ್ತೆಂಟು ಸಾವಿರ) ರೂಪಾಯಿಗಳಾಗಬಹುದು. ಈ ಕಳ್ಳತನವು ದಿನಾಂಕ:13/09/2022 ರಂದುರಾತ್ರಿ 02.30 ಗಂಟೆ ಸುಮಾರಿಗೆಜರುಗಿರುತ್ತದೆಅಂತಾಅಲಾರಾಮ್ ಮೂಲಕ ತಿಳಿದು ಬಂದಿರುತ್ತದೆ. ಕಾರಣ ಸದರಿಘಟನೆಯ ಬಗ್ಗೆ ಕಾನೂನು ಕ್ರಮ ಜರುಗಿಸಿ 24 ಬ್ಯಾಟರಿ ಬ್ಯಾಂಕ್ ಸೆಲ್ಗಳನ್ನು ಪತ್ತೆ ಮಾಡಿಕೊಡಲು ಮಾನ್ಯರವರಲ್ಲಿ ವಿನಂತಿಅಂತಕೊಟ್ಟದೂರಿನ ಸಾರಾಂಶದ ಮೇಲಿಂದಠಾಣೆಗುನ್ನೆ ನಂ:73/2022 ಕಲಂ 379 ಐಪಿಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 131/2022 ಕಲಂ 87 ಕೆ.ಪಿ.ಕಾಯ್ದೆ : 18/09/2022 ರಂದು 3:20 ಪಿ.ಎಂ.ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗಶ್ರೀ ಕೃಷ್ಣಾ ಸುಬೇದಾರ ಪಿಎಸ್ಐಸಾಹೇಬರು 9 ಜನಆರೋಪಿತರೊಂದಿಗೆಠಾಣೆಗೆ ಬಂದುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:18/09/2022 ರಂದು 1:15 ಪಿಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯ ಸುರಪುರ ನಗರದ ಸಿದ್ದಾರ್ಥ ಲಾಡ್ಜ ಪಕ್ಕದಲ್ಲಿರುವ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ಮಾನ್ಯ ನ್ಯಾಯಾಲಯದಿಂದ ದಾಳಿ ಕುರಿತು ಹೋಗಲು ಪರವಾನಿಗೆ ಪಡೆದುಕೊಂಡಿದ್ದು, ನಂತರಠಾಣೆಯಲ್ಲಿದ್ದ ಸಿಬ್ಬಂಧಿಯವರಾದ ಹೊನ್ನಪ್ಪ ಪಿಸಿ-427, ಸುಭಾಸ ಪಿಸಿ-174, ಬಸವರಾಜ ಪಿಸಿ-180, ಸಣ್ಣಕುಂಟೆಪ್ಪ ಪಿಸಿ-391, ಬಸವರಾಜ ಪಿಸಿ-336, ಇವರೆಲ್ಲರಿಗೂ ವಿಷಯ ತಿಳಿಸಿ, ಹೊನ್ನಪ್ಪ ಪಿಸಿ-427 ಇವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ಹೇಳಿದಂತೆ, ಹೊನ್ನಪ್ಪ ಪಿಸಿ-427 ರವರುಇಬ್ಬರು ಪಂಚರಾದ 1) ರಾಘವೇಂದ್ರತಂದೆ ಮನೋಹರಜೇವಗರ್ಿ ವಃ 38 ಜಾಃ ಬೇಡರು ಉಃ ಕೂಲಿ ಸಾಃ ದೋಬಿ ಮೊಹಲ್ಲಾ ಸುರಪುರ 2) ಅಶೋಕ ತಂದೆ ಬಸವರಾಜ ಮಸರಕಲ್ ವಃ 40 ಜಾಃ ಲಿಂಗಾಯತ ಉಃ ವ್ಯಾಪಾರ ಸಾಃ ಹನುಮಾನಟಾಕೀಜ ಹತ್ತಿರ ಸುರಪುರಇವರನ್ನು 1-45 ಪಿ.ಎಂ ಕ್ಕೆ ಠಾಣೆಗೆಕರೆದುಕೊಂಡು ಬಂದಿದ್ದು, ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು, ನಾನು ಮತ್ತು ಈ ಮೇಲಿನ ಪಂಚರು ಹಾಗೂ ನಮ್ಮ ಸಿಬ್ಬಂದಿಯವರೊಂದಿಗೆ 2:00 ಪಿ.ಎಂ ಕ್ಕೆ ಠಾಣೆಯಜೀಪ್ ನಂ. ಕೆಎ-33.ಜಿ-0238 ನೇದ್ದರಲ್ಲಿಠಾಣೆಯಿಂದ ಹೊರಟು 2-05 ಪಿ.ಎಂ ಕ್ಕೆ ದಗರ್ಾ ಹತ್ತಿರಕಂಪೌಂಡ ಮರೆಯಾಗಿಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಸಿದ್ದಾರ್ಥ ಲಾಡ್ಜ ಹತ್ತಿರ ಪಕ್ಕದಲ್ಲಿರುವಸಾರ್ವಜನಿಕಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೇಲೆಅವರ ಮೇಲೆ 2-10 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು 9 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ರಾಘವೇಂದ್ರತಂದೆ ಪರಶುರಾಮಜಾಲಗಾರ ವ|| 29 ವರ್ಷಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಉದ್ದಾರಓಣಿ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 200/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಕುಮಾರತಂದೆತಿಪ್ಪಣ್ಣಕಟ್ಟಿಮನಿ ವ|| 38 ವರ್ಷಜಾ|| ಬೇಡರು ಉ|| ಡ್ರೈವರ್ ಸಾ|| ದೇವರಗೋನಾಲ ತಾ|| ಸುರಪೂರಅಂತಾ ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 150/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಭೀರಪ್ಪತಂದೆ ಭೀಮಪ್ಪ ವಾರಿ ವ|| 30 ವರ್ಷಜಾ|| ಕುರುಬರು ಉ|| ಕೂಲಿಕೆಲಸ ಸಾ|| ಸಿದ್ದಾಪೂರ ತಾ|| ಸುರಪೂರಅಂತಾ ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 170/- ರೂಗಳು ವಶಪಡಿಸಿಕೊಳ್ಳಲಾಯಿತು. 4) ದೇವಪ್ಪತಂದೆ ಹಣಮಂತ ಮೂಲಿಮನಿ ವ|| 30 ವರ್ಷಜಾ|| ಕಬ್ಬಲಿಗ ಉ|| ಹಮಾಲಿ ಕೆಲಸ ಸಾ|| ಸಿದ್ದಾಪೂರ ತಾ|| ಸುರಪೂರಅಂತಾ ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 180/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಸಿದ್ದಪ್ಪ ತಂದೆಜೋಗಪ್ಪಕರಡಕಲ್ ವ|| 32 ವರ್ಷಜಾ|| ಕುರುಬರು ಉ|| ಗೌಂಡಿ ಕೆಲಸ ಸಾ|| ಉದ್ದಾರಓಣಿ ಸುರಪೂರಅಂತಾ ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 210/- ರೂಗಳು ವಶಪಡಿಸಿಕೊಳ್ಳಲಾಯಿತು. 6) ದೇವಪ್ಪತಂದೆ ಹಣಮಂತಕಕ್ಕಸಗೇರಾ ವ|| 22 ವರ್ಷಜಾ|| ಕಬ್ಬಲಿಗ ಉ|| ಚಾಲಕ ಸಾ|| ಸಿದ್ದಾಪೂರ ತಾ|| ಸುರಪೂರಅಂತಾ ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 160/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಮಲ್ಲಪ್ಪತಂದೆ ಹವಳಪ್ಪ ತೋಟದಾರ ವ|| 40 ವರ್ಷಜಾ|| ಕುರುಬರ ಉ|| ಹಮಾಲಿ ಕೆಲಸ ಸಾ|| ಉದ್ದರಓಣಿ ಸುರಪೂರಅಂತಾ ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 150/- ರೂಗಳು ವಶಪಡಿಸಿಕೊಳ್ಳಲಾಯಿತು. 8) ದೇವಪ್ಪತಂದೆ ಸಿದ್ದಪ್ಪ ವಾರಿ ವ|| 27 ವರ್ಷಜಾ|| ಕುರುಬರು ಉ|| ಹಮಾಲಿ ಕೆಲಸ ಸಾ|| ಸಿದ್ದಾಪೂರ ತಾ|| ಸುರಪೂರಅಂತಾ ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 240/- ರೂಗಳು ವಶಪಡಿಸಿಕೊಳ್ಳಲಾಯಿತು, 9) ಕೃಷ್ಣಪ್ಪತಂದೆಯಂಕಪ್ಪ ನಾಯ್ಕೋಡಿ ವ|| 30 ವರ್ಷಜಾ|| ಬೇಡರು ಉ|| ಹಮಾಲಿ ಕೆಲಸ ಸಾ|| ಡೊಣ್ಣಿಗೇರಿ ಸುರಪೂರಅಂತಾ ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 120/- ರೂಗಳು ವಶಪಡಿಸಿಕೊಳ್ಳಲಾಯಿತು, ಇದಲ್ಲದೆ ಪಣಕ್ಕೆಇಟ್ಟ ಹಣ 2200/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 3780/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 2:10 ಪಿ.ಎಮ್ ದಿಂದ 3:10 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ 9 ಜನಆರೋಪಿತರು ಮತ್ತು ಮುದ್ದೆಮಾಲನ್ನುಠಾಣೆಗೆತಂದು ಹಾಜರುಪಡಿಸುತ್ತಿದ್ದು, ಸದರಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಬೇಕುಅಂತಾಕೊಟ್ಟ ವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 131/2022 ಕಲಂ: 87 ಕೆ.ಪಿ ಆಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 70/2022 ಕಲಂ: 279 ಐಪಿಸಿ : ಇಂದು ದಿನಾಂಕ 18/09/2022 ರಂದು 07.30 ಪಿಎಮ್ ಕ್ಕೆ ಫಿಯರ್ಾದಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ನಾನು ನಮ್ಮ ಬೇಕರಿ ವ್ಯಾಪಾರಕ್ಕಾಗಿ ನಮ್ಮ ಟಾಟಾ ಗೂಡ್ಸ ವಾಹನ ನಂ: ಕೆಎ-33 ಬಿ-3250 ನೇದ್ದಕ್ಕೆ, ಸೈಯದ್ ಮುಸ್ತಾಫಾ ಹುಸೇನಿ ತಂದೆ ಮೈನೋದ್ದೀನ್ ಹುಸೇನಿ ವಯಾ: 50 ವರ್ಷ ಉ: ಡ್ರೈವರ ಜಾ: ಮುಸ್ಲಿಂ ಸಾ: ಗೋಗಿ (ಕೆ) ತಾ: ಶಹಾಪೂರ ಜಿ: ಯಾದಗಿರಿ. ಇವರಿಗೆ ಚಾಲಕ ಅಂತಾ ನೇಮಿಸಿಕೊಂಡಿರುತ್ತೇವೆ. ಹೀಗಿದ್ದು, ದಿನಾಂಕ:17/09/2022 ರಂದು ನಾನು ಮತ್ತು ನಮ್ಮ ಚಾಲಕ ಸೈಯದ್ ಮುಸ್ತಾಫಾ ಹುಸೇನಿ ತಂದೆ ಮೈನೋದ್ದೀನ್ ಹುಸೇನಿ ಇಬ್ಬರು ಕೂಡಿ ದರ್ಶನಾಪೂರ ಗ್ರಾಮಕ್ಕೆ ಬೇಕರಿ ಮಾಲನ್ನು ಇಳಿಸಿ ಮರಳಿ ಗೋಗಿ ಗೆ ಬರುವಾಗ ಅಂದಾಜು ಸಮಯ 06.00 ಪಿಎಮ್ ಸುಮಾರಿಗೆ ಹಾರಣಗೇರಾ ಗೋಗಿ ಮೇನ್ ರೋಡಿನ ಮೇಲೆ ಹಾರಣಹೇರಾ ಗ್ರಾಮದಿಂದ ಪೂರ್ವಕ್ಕೆ 300 ಮೀಟರ್ ಅಂತರದಲ್ಲಿ ಗೋಗಿ ಕಡೆಗೆ ರೋಡಿನಲ್ಲಿ ಬರುವಾಗ ಗೂಡ್ಸ ವಾಹನ ನಂ: ಕೆಎ-33-ಬಿ-3250 ನೇದ್ದರ ಚಾಲಕನಾದ ಸೈಯದ್ ಮುಸ್ತಾಫಾ ಹುಸೇನಿ ತಂದೆ ಮೈನೋದ್ದೀನ್ ಹುಸೇನಿ ಈತನು ನಾನು ನಿಧಾನ ನಡೆಸು ಅಂತಾ ಹೇಳಿದರೂ ಕೇಳದೆ ಸದರಿ ನಮ್ಮ ಗೂಡಸ್ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಒಂದು ಎಮ್ಮೆ ರೋಡಿಗೆ ಅಡ್ಡ ಬಂದಿದ್ದರಿಂದ ನಮ್ಮ ಚಾಲಕನು ಎಮ್ಮೆಗೆ ಡಿಕ್ಕಿ ಪಡಿಸುವದನ್ನು ತಪ್ಪಿಸಲು ನಮ್ಮ ಗೂಡಸ್ ವಾಹನವನ್ನು ಒಮ್ಮೇಲೆ ಕಟ್ ಹೊಡೆದಿದ್ದು, ಅದರಿಂದಾಗಿ ವಾಹನ ನಿಯಂತ್ರಣ ತಪ್ಪಿ ರೋಡಿನ ಪಕ್ಕದ ತಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ಅಪಘಾತದಲ್ಲಿ ನನಗೂ ಮತ್ತು ನಮ್ಮ ಚಾಲಕನಿಗೂ ಯಾವುದೆ ಗಾಯಗಳು ಆಗಿರುವದಿಲ್ಲ. ನಮ್ಮ ಗೂಡ್ಸ ವಾಹನ ನಂ: ನಂ: ಕೆಎ-33 ಬಿ-3250 ನೇದ್ದರ ಬಾಗಿಲು ಮತ್ತು ಕೆಳಗಿನ ಇಂಜಿನ್ ಇರುವ ಭಾಗ ಸಂಪೂರ್ಣ ನುಜ್ಜು ಗುಜ್ಜಾಗಿರುತ್ತದೆ ಅಂತ ಅಜರ್ಿ ಸಾರಾಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 70/2022 ಕಲಂ 279 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 72/2022 ಕಲಂ. 279 337 338 ಐಪಿಸಿ : ದಿನಾಂಕ:18/09/2022 ರಂದು ಸಾಯಂಕಾಲ 5.45 ಗಂಟೆಯ ಸುಮಾರಿಗೆ ಫಿರ್ಯಾದಿಯು ಹುಣಸಗಿ-ನಾರಾಯಣಪೂರ ರಸ್ತೆಯ ಮೇಲೆ ಕಾಮನಟಗಿ ದುಗರ್ಾದೇವಿ ಗುಡಿ ಮತ್ತು ಎರಿಕೆನಾಲ ನಡುವೆ ರಸ್ತೆಯ ಮೇಲೆ ಹೊರಟಾಗ ಫಿರ್ಯಾದಿಯ ಮುಂದೆ ಆರೋಪಿತನು ತಾನು ಚಲಾಯಿಸುವ ಮೋಟಾರ್ ಸೈಕಲ್ ನಂ: ಕೆಎ-33 ಇಬಿ-2237 ನೇದ್ದರ ಮೇಲೆ ಹಿಂದೆ ಒಬ್ಬ ವ್ಯಕ್ತಿಗೆ ಕೂಡಿಸಿಕೊಂಡು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ರಸ್ತೆಯ ಎಡಗಡೆ ಹೋಗುವದು ಬಿಟ್ಟು ಬಲಗಡೆಗೆ ಹೋಗಿ ಎದುರುಗಡೆ ಹುಣಸಗಿ ಕಡೆಯಿಂದ ಹೊರಟ ಮೋಟಾರ್ ಸೈಕಲ್ ಕೆಎ-33 ವಿ-1519 ನೇದ್ದಕ್ಕೆ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಎರಡೂ ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ ಕೆಳಗಡೆ ಬಿದ್ದಿದ್ದು, 3 ಜನರಿಗೆ ಭಾರಿ & ಸಾದಾ ರಕ್ತಗಾಯಗಳಾಗಿದ್ದು, ಫೀರ್ಯಾದಿದಾರನು 108 ವಾಹನಕ್ಕೆ ಪೋನ್ ಮಾಡಿ ವಾಹನ ತರಿಸಿ ಅದರಲ್ಲಿ 3 ಜನರಿಗೆ ಹಾಕಿಕೊಂಡು ಇಲಾಜು ಕುರಿತು ಸರಕಾರಿ ಆಸ್ಪತ್ರೆ ಹುಣಸಗಿ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಫಿರ್ಯಾದಿಯ ದೂರಿನ ಸಾರಾಂಶ ಇರುತ್ತದೆ.

ಇತ್ತೀಚಿನ ನವೀಕರಣ​ : 19-09-2022 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080