ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-10-2022

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: ಯು.ಡಿ.ಆರ್ ನಂ. 22/2022 ಕಲಂ 174 ಸಿ.ಆರ್.ಪಿ.ಸಿ: ಇಂದು ದಿನಾಂಕ: 18-10-2022 ರಂದು 5.00 ಎ ಎಮ್ ಕ್ಕೆ ಪಿಯರ್ಾದಿ ರಾಯಣ್ಣ ತಂ ರಾಮಯ್ಯ ವಿಭೂತಿಹಳ್ಳಿ ವ|| 35 ವರ್ಷ ಉ|| ಕೂಲಿಕೆಲಸ ಜಾ|| ಹಿಂದು ಕುರುಬರ ಸಾ|| ಬೋಳಾರಿ ಇವರು ಒಂದು ಕನ್ನಡದಲ್ಲಿ ಟೈಪ ಮಾಡಿದ ಅಜರ್ಿ ನೀಡಿದ್ದರ ಸಾರಾಂಶ ವೇನೆಂದರೆ ನಾನು ನನ್ನ ಹೆಂಡತಿ ಮತ್ತು ಮಕ್ಕಳಾದ 1) ಬೀರಪ್ಪ ವ-9 ವರ್ಷ 2) ರೇಣುಕಾ ವ-7 ವರ್ಷ, 3) ಜೈಯಮ್ಮ ವ- 4 ವರ್ಷ, 4) ಐಶ್ವರ್ಯ-10 ವರ್ಷ ದ ಮಕ್ಕಳೋಂದಿಗೆ ಕೂಲಿ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದು ಅದೆ ಹೀಗಿದ್ದು ದಿನಾಂಕ 14/10/2022 ರಂದು ಬೆಳಿಗ್ಗೆ 10.00 ಗಂಟೆಗೆ ನಮ್ಮೂರಿನ ಗಂಗಮ್ಮ ತಂ. ಮಲ್ಲಪ್ಪ ಗುಡದಪ್ಪರ ಇವರ ಹತ್ತಿ ಹೊಲದಲ್ಲಿ ಕೂಲಿ ಕೆಲಸಕ್ಕೆ ನಮ್ಮೂರಿನ ಲಕ್ಷ್ಮಿ ಬಾಯಿ ಮತ್ತು ಮಹಾದೇವಿ ಇವರೊಂದಿಗೆ ಹೋಗಿದ್ದರು ನಂತರ ಸಾಯಂಕಾಲ 4.30 ಗಂಟೆ ಸುಮಾರಿಗೆ ಒಮ್ಮಿಂದೊಮ್ಮಲೆ ಎಲ್ಲರೂ ಗಾಬರಿಯಿಂದ ಮನೆಗೆ ಬಂದರು ನಾನು ಏನಾಯಿತು ಎಂದು ಕೇಳಲಾಗಿ ಸಾಯಂಕಾಲ 4.00 ಗಂಟೆ ಸುಮಾರಿಗೆ ಹೊಲದಲ್ಲಿ ಕಸ ಕೀಳುತ್ತಿರುವಾಗ ಒಮ್ಮಿಂದೊಮ್ಮೆಲೇ ಚೀರಿದಂತೆ ಮಾಡಿದಳು ಹೀಗಿದ್ದು ಏನಾಯಿತು ಎಂದು ಗಂಗಮ್ಮ ಮತ್ತು ಸಂಗಡ ಇದ್ದ ಲಕ್ಷ್ಮಿಬಾಯಿ, ಮಹಾದೇವಿ ಎಲ್ಲರೂ ಕೂಡಿಕೊಂಡು ಬಂದು ಅವಳಿಗೆ ಕೇಳಾಗಿ ಬಲಗಾಲ ಪಾದದ ಮೇಲೆ ಏನೋ ಕಚ್ಚಿದಂತಾಗಿದೆ ಎಂದು ಹೇಳಿದಳು ನಂತರ ನಾವು ಅವಳ ಕಾಲನ್ನು ನೋಡಲಾಗಿ ಹಾವು ಕಚ್ಚಿದ ಹಾಗೆ ಹಲ್ಲು ಮೂಡಿದ್ದು ಇದ್ದುದ್ದನ್ನುನೋಡಲಾಗಿ ಅಲ್ಲಿ ಕಸದಲ್ಲಿ ಒಂದು ಹಾವು ಇರುತ್ತದೆ ಅದ ಬಲಗಾಲಪಾದದ ಮೇಲೆ ಹಾವು ಕಚ್ಚಿದ್ದು ಇರುತ್ತದೆ ಅಂತ ತಿಳಿಸಿದರು ನಂತರ ಶಂಭು ತಂ. ಮಲ್ಲಪ್ಪ ತೇಕರಾಳ ಮತ್ತು ನಮ್ಮ ಮಾವಂದಿರಾದ ಮಾಳಪ್ಪ, ದೇವಪ್ಪ ಇತರರೊಂದಿಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಲಾಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಕಲಬುಗರ್ಿಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ದಿನಾಂಕ 14/10/2022 ರಂದು ಬೆಳಗಿನಜಾವ 4.05 ಎ ಎಮಕ್ಕೆ ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದೇವು ನಂತರ ಮೃತ ಶ್ರೀಮತಿ ಚೌಡಮ್ಮ ಗಂ . ರಾಯಣ್ಣ ವಿಭೂತಿಹಳ್ಳಿ ವ|| 30 ಜಾ|| ಕುರುಬರ ಉ|| ಕೂಲಿ ಕೆಲಸ ಸಾ|| ಬೋಳಾರಿ ತಾ|| ಶಹಾಪೂರ ಉಪಚಾರ ಪಡೆಯುತ್ತಾ ಚಿಕಿತ್ಸೆ ಫಲಕಾರಿ ಆಗದೆ ದಿನಾಂಕ 17/10/2022 ರಂದು 7.10 ಪಿ ಎಮ್ ಕ್ಕೆ ಮೃತ ಪಟ್ಟಿದ್ದು ಇರುತ್ತದೆ.ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ನೀಡಿದ ಫಿಯರ್ಾದಿಯನ್ನಯ ಸ್ವೀಕರಿಸಿಕೊಂಡು ಠಾಣೆ ಯು.ಡಿ.ಆರ್. ನಂ. 22/2022 ಕಲಂ. 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 137/2022 ಕಲಂ 341, 323, 504, 506 ಸಂ. 34 ಐಪಿಸಿ: ಇಂದು ದಿನಾಂಕ:18/10/2022 ರಂದು 1:00 ಪಿ.ಎಂ. ಕ್ಕೆ ಶ್ರೀಮತಿ ಫವರ್ಿನ ಬೆಗಂ ಗಂಡ ಮಹಿಬೂಬ ಸಾಬ ವ|| 48 ವರ್ಷ ಜಾ|| ಮುಸ್ಲಿಂ ಉ|| ಮನೆಗೆಲಸ ಸಾ|| ಕಬಾಡಗೇರಾ ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನಂದರೆ, ನನ್ನ ಸಂಸಾರಿಕ ಜೀವನದಲ್ಲಿ ನನಗೆ ಮೌಲಾಲಿ ಮತ್ತು ಅಜಿಂ ಎಂಬ ಇಬ್ಬರು ಗಂಡು ಮಕ್ಕಳು ಇರುತ್ತಾರೆ. ನನ್ನ ಹಿರಿಯ ಮನಗನಿಗೆ 2019 ನೇ ಸಾಲಿನಲ್ಲಿ ರಾಯಚೂರಿನ ಉಸ್ಮಾನಸಾಬ ಎಂಬುವರ ಮಗಳಾದ ಫರಹಾಗುಪ್ತನಾಜ್ ಎಂಬುವಳೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಅವರಿಬ್ಬರು ಮದುವೆಯಾದ 15 ದಿನ ಮಾತ್ರ ಚನ್ನಾಗಿದ್ದು ನಂತರ ನನ್ನೊಂದಿಗೆ ತಕರಾರು ಮಾಡಿ ಅವರಿಬ್ಬರು ಬೇರೆ ಕಡೆ ಇರುತ್ತೆವೆ ಅಂತಾ ಹೇಳಿ ರಾಯಚೂರಿನಲ್ಲಿ ವಾಸವಾಗಿದ್ದು. ಹಿಗಿದ್ದು ದಿನಾಂಕ:14/10/2022 ರಂದು ಸಾಯಂಕಾಲ 5:30 ಪಿ.ಎಂ ಕ್ಕೆ ನಾನು ಮತ್ತು ನನ್ನ ಮಗನಾದ ಅಜಿಂ ಇಬ್ಬರು ಮನೆಯಲ್ಲಿದ್ದಾಗ ನನ್ನ ಸೋಸೆಯಾದ 1) ಫರಹಗುಪ್ತನಾಜ್ ಗಂಡ ಮೌಲಾಲಿ, ಆಕೆಯ ತಂದೆಯಾದ 2) ಹುಸ್ಮಾನಸಾಬ, ಇತನ ಇನ್ನಿಬ್ಬರು ಮಕ್ಕಳಾದ 3) ಹಸಿನಾಫರತ್ ತಂದೆ ಉಸ್ಮಾನಸಾಬ, 4) ಜಿಲಾನಬೇಗಂ ತಂದೆ ಉಸ್ಮಾನಸಾಬ ಎಲ್ಲರು ಕೂಡಿ ಬಂದು ನನಗೆ ಸೋಸೆಯಾದ ಫರಹಗುಪ್ತನಾಜ್ ಇವಳು ನನ್ನ ಮದುವೆಯಲ್ಲಿನ ಸಾಮಾನುಗಳು ನನಗೆ ಕೋಡು ಅಂತಾ ಕೆಳುತಿದ್ದಾಗ ನಾನು ಅವರಿಗೆ ತಡೆಯರಿ ನಾನು ನಾಲ್ಕ ಜನ ಹಿರಿಯರಿಗೆ ಕರೆದು ಅವರ ಸಮ್ಮುಖದಲ್ಲಿ ಕೊಡುತ್ತೇನೆ ಅಂತಾ ಹೇಳಿ ಕರೆಯಲಿಕೆ ಹೊರಟಾಗ ನನ್ನನ್ನು ತಡೆದು ನಿಲ್ಲಿಸಿ ನನ್ನ ಸಾಮಾನು ನಾನು ತಗೆದುಕೊಂಡು ಹೊಗಲಿಕೆ ಯಾರ ಪರವಾನಿಗೆ ಬೇಕು ರಂಡಿ ಅಂತಾ ವಾಚ್ಯವಾಗಿ ಬೈದು, ಕೈಯಿಂದ ಕಪಾಳಕ್ಕೆ ಹೊಡೆದಳು, ನನ್ನ ಮಗ ಅಜಿಂ ಇತನು ಬಿಡಿಸಲು ಬಂದಾಗ ಉಸ್ಮಾನಸಾಬ ಇತನು ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದನು. ನನಗೆ ಹಸಿನಾಫರತ್ ಮತ್ತು ಜಿಲಾನಬೆಗಂ ಇಬ್ಬರು ಕೈಯಿಂದ ಮೈಕೈಗೆ ಹೊಡೆಯುತ್ತಿದ್ದಾಗ ನಾನು ಜೋರಾಗಿ ಚಿರಾಡಿದ್ದರಿಂದ ಆಜು ಬಾಜು ಮನೆಯವರಾದ ಇಮ್ರಾನ ತಂದೆ ಅಬ್ದುಲ್ ಖಾಧಾರ ಸಾಬ ಮತ್ತು ಶೇಖ್ ಅಬ್ದುಲ್ ವಾಜೀದ್ ತಂದೆ ಶೇಖ್ ಅಬ್ದುಲ್ ಶುಕ್ಕುರ ಇವರುಗಳು ಬಂದು ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರು ನಮಗೆ ಹೊಡೆಯುವದನ್ನು ಬಿಟ್ಟು ಇವರು ಬಂದು ಬಿಡಿಸಿದ್ದಕ್ಕೆ ಇವತ್ತು ಬಿಟ್ಟಿನಿ ಸೂಳಿ ಇಲ್ಲಂದರೆ ನಿನ್ನ ಜೀವ ಹೊಡೆಯದೆ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೋದನು. ನಮಗೆ ಅಷ್ಟೇನು ಗಾಯಗಳಾಗಿದ್ದರಿಂದ ನಾವು ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲ. ನಂತರ ನಾನು ಮನೆಯಲ್ಲಿ ನನ್ನ ಮಗನಾದ ಅಜಿಂ ಇತನೊಂದಿಗೆ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ನನಗೆ ತಡೆದು ನಿಲ್ಲಿಸಿ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ. ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 137/2022 ಕಲಂ 341, 323, 504, 506 ಸಂ. 34 ಐಪಿಸಿ ನೇದ್ದರ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ/

ಭೀ.ಗುಡಿ ಪೊಲೀಸ ಠಾಣೆ:-

ಗುನ್ನೆ ನಂ: 83/2022 ಕಲಂ 379 ಐಪಿಸಿ:ಬಂದುಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸುವಂತೆದೂರು ನೀಡಿದ್ದರಿಂದಠಾಣೆಗುನ್ನೆ ನಂ:83/2022 ಕಲಂ 379 ಐಭೀ.ಗುಡಿಯಲ್ಲಿನಇಂಡಸ್ಮೊಬೈಲ ಟವರನ್ನುಕರೆಂಟಇಲ್ಲದ ಸಮಯದಲ್ಲಿಡಿಜಿ (ಜನರೇಟರ್)ಓಡಿಸಲುತಂದಿಟ್ಟ 20 ಲೀಟರಡೀಜಲ ಅ.ಕಿ. 1600ರೂ ನೇದ್ದನ್ನುಆರೋಪಿತನುಇಂದು ದಿನಾಂಕ:18/10/2022 ರಂದು 4.49 ಪಿ.ಎಮ್. ಸುಮಾರಿಗೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ಫಿಯರ್ಾದಿ ಮತ್ತು ಟೆಕ್ನಿಶಿಯನರವರು ಕೂಡಿ ಸದರಿಆರೋಪಿತನಿಗೆ ಹಿಡಿದುಕೊಂಡುಠಾಣೆಗೆಕರೆದುಕೊಂಡು ಪಿಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: : 113/2022 ಕಲಂ: 323, 324, 504, 506 ಸಂ. 34 ಐಪಿಸಿ: ಇಂದು ದಿನಾಂಕ. 18/10/2022 ರಂದು 7-30 ಪಿಎಮ್ಕ್ಕೆ ಪಿರ್ಯಾಧಿ ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮಗೆ ಇಬ್ಬರು ಹೆಣ್ಣು, ಇಬ್ಬರು ಗಂಡು ಅಂತಾ ಒಟ್ಟು ನಾಲ್ಕು ಜನ ಮಕ್ಕಳಿದ್ದು ನನ್ನ ಎರಡನೇ ಮಗಳಾದ ಸಂಗೀತಾ ಇವಳಿಗೆ 2 ವರ್ಷಗಳ ಹಿಂದೆ ಯಾದಗಿರಿ ನಗರದ ಅಜೀತಕುಮಾರ ತಂದೆ ಶಿವಪುತ್ರ ನಾಟೇಕಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಗಂಡ, ಹೆಂಡತಿ ಹಾಗೂ ಅಜೀತಕುಮಾರ ಇತನ ತಾಯಿ ರೂತ ಇವರುಗಳು ಯಾದಗಿರಿಯ ಚಿರಂಜೀವಿ ನಗರದಲ್ಲಿ ವಾಸವಾಗಿರುತ್ತಾರೆ. ನನ್ನ ಅಳಿಯನು ಖಾಸಗಿ ಕಾಲೇಜುಗಳಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದು ಮದುವೆಯಾದ ಒಂದು ವರ್ಷ ಗಂಡ ಹೆಂಡತಿ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ಹಿಗ್ಗೆ ಒಂದು ವರ್ಷದಿಂದ ನನ್ನ ಅಳಿಯನಾದ ಅಜೀತಕುಮಾರ ಇತನು ಕೆಲಸ ಬಿಟ್ಟು ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದು ನನ್ನ ಮಗಳಿಗೆ ಸರಿಯಾಗಿ ನೋಡಿಕೊಳ್ಳದೇ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದನು. ನನ್ನ ಅಳಿಯ ಅಜೀತಕುಮಾರ ಇತನು ನನ್ನ ಮಗಳಿಗೆ ಮತ್ತು ಆತನ ತಾಯಿ ರೂತ ಇಬ್ಬರಿಗೆ ಯಾದಗಿರಿಯಲ್ಲಿಯೇ ಬಿಟ್ಟು ಕಳೆದ ಎರಡು ತಿಂಗಳ ಹಿಂದೆ ಬೇರೆ ಕಡೆ ಕೆಲಸಕ್ಕೆ ಹೋಗಿದ್ದು ಆಗ ನನ್ನ ಮಗಳಿಗೆ ಮತ್ತು ಆಕೆಯ ಮಗುವಿನ ಉಪಜೀವನಕ್ಕೆ ಕಷ್ಟವಾಗಿದ್ದರಿಂದ ನನ್ನ ಮಗಳು ಯಾದಗಿರಿಯಿಂದ ತನ್ನ ಮಗನೊಂದಿಗೆ ನಮ್ಮಲ್ಲಿಗೆ ಬಂದು ನಮ್ಮೊಂದಿಗೆ ವಾಸವಾಗಿದ್ದಳು. ಹಿಗೀದ್ದು ದಿನಾಂಕ; 14/10/2022 ರಂದು ನನ್ನ ಮಗಳಿಗೆ ಯಾದಗಿರಿಗೆ ಬಿಟ್ಟು ಹೋಗುವುದಕ್ಕಾಗಿ ನಾನು ಮತ್ತು ನನ್ನ ಮಗಳು ಸಂಗೀತಾ ಹಾಗೂ ನನ್ನ ಗಂಡ ಈಶ್ವರಪ್ಪ ಮೂರು ಜನರು ಕೂಡಿಕೊಂಡು ಯಾದಗಿರಿಗೆ ಬಂದು ಮನೆಯಲ್ಲಿ ನೋಡಲಾಗಿ ನನ್ನ ಅಳಿಯ ಅಜೀತಕುಮಾರ ಇತನು ಇರಲಿಲ್ಲ ಅವಳ ತಾಯಿ ರೂತ ಇವಳು ಮಾತ್ರ ಇದ್ದಳು. ಆಗ ನಾವು ನನ್ನ ಅಳಿಯ ಅಜೀತಕುಮಾರ ಅವನು ಬರುವವರೆಗೆ ಇದ್ದು ಅವನಿಗೆ ಬುದ್ದಿವಾದ ಹೇಳಿ ನನ್ನ ಮಗಳಿಗೆ ಬಿಟ್ಟು ಹೋದರಾಯಿತು ಅಂತಾ ಯಾದಗಿರಿಯಲ್ಲಿಯೇ ಇದ್ದೆವು. ನಿನ್ನೆ ದಿನಾಂಕ; 17/10/2022 ರಂದು 4-30 ಪಿಎಮ್ ಸುಮಾರಿಗೆ ನಾನು, ನನ್ನ ಮಗಳು ಸಂಗೀತಾ, ನನ್ನ ಗಂಡ ಈಶ್ವರಪ್ಪ ಮೂರು ಜನರು ಮನೆಯಲ್ಲಿರುವಾಗ ನನ್ನ ಅಳಿಯ ಅಜೀತಕುಮಾರ ಮತ್ತು ಆತನ ತಂಗಿಯ ಗಂಡದಿರಾದ ವಿನೋದಕುಮಾರ, ಸುನೀಲ ಬಡಿಗೇರ ಇವರು ಬಂದಿದ್ದು ಆಗ ನಾವು ನನ್ನ ಅಳಿಯ ಅಜೀತಕುಮಾರನಿಗೆ ನೀನು ಈ ರೀತಿ ಕೆಲಸ ಮಾಡದೇ ಊರೂರು ಓಡಾಡಿಕೊಂಡಿದ್ದರೇ ನನ್ನ ಮಗಳು ಹಾಗೂ ಅವಳ ಮಗುವಿನ ಗತಿ ಏನಾಗಬೇಕು ಅಂತಾ ಅಂದಾಗ ಅಜೀತಕುಮಾರ ಇತನು ಕೆಟ್ಟದಾಗಿ ಬೈಯುತ್ತಾ ನನ್ನ ಸಂಸಾರದ ಬಗ್ಗೆ ನಿವೇನು ನನಗೆ ಹೇಳಬೇಕಿಲ್ಲ ನಿಮ್ಮದು ಬಹಳ ಆಗಿದೆ ಸುಮ್ಮನೆ ಇಲ್ಲಿಂದ ಹೋಗಿ ಇಲ್ಲವಾದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದನು. ಆಗ ನನ್ನ ಮಗಳು ಅಜೀತಕುಮಾರ ಇತನಿಗೆ ನೀನು ಇದೆ ರೀತಿ ಕೆಲಸ ಮಾಡದೇ ಓಡಾಡಿಕೊಂಡಿದ್ದರೆ ನಮ್ಮ ಗತಿಯೇನು ಅಂತಾ ಅಂದಾಗ ಅವನೊಂದಿಗೆ ಬಂದಿದ್ದ ವಿನೋದಕುಮಾರ ಇತನು ನಿನ್ನದು ಬಹಳ ಆಗಿದೆ ಅಂತಾ ಅಲ್ಲೇ ಇದ್ದ ಕಬ್ಬಿಣದ ರಾಡನಿಂದ ನನ್ನ ಮಗಳಿಗೆ ಹೊಡೆಯಲು ಬಂದಾಗ ನಾನು ಬಿಡಿಸಲು ಹೋಗಿದ್ದು ಆಗ ಆ ರಾಡಿನ ಪೆಟ್ಟು ನನ್ನ ತಲೆಯ ಎಡಭಾಗಕ್ಕೆ ಬಿದ್ದು ರಕ್ತಗಾಯವಾಗಿದ್ದು ಇರುತ್ತದೆ. ಸುನೀಲಕುಮಾರ ಇತನು ಇವಳದೇ ಬಹಳ ಆಗಿದೇ ಸುಮ್ಮನೆ ಬಿಡುವುದು ಬೇಡ ಅಂತಾ ನನಗೆ ಕೈ ಹಿಡಿದು ತಿರುವಿದನು. ಆಗ ನನ್ನ ಗಂಡನು ಜಗಳ ಬಿಡಿಸಲು ಬಂದಾಗ ಸುನೀಲಕುಮಾರ ಇತನು ನನ್ನ ಗಂಡನಿಗೆ ಕೈ ತಿರುವಿ ಕೈ ಮುಷ್ಠಿ ಮಾಡಿ ಎದೆಗೆ ಗುದ್ದಿ ಒಳಪೆಟ್ಟು ಮಾಡಿ ಇವತ್ತು ನಮ್ಮಿಂದ ಬದುಕಿದ್ದೀರಿ ಮತ್ತೆ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಾ ಅಲ್ಲಿಂದ ಹೊರಟು ಹೋದರು. ಆಗ ನಾನು ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಆಗಿದ್ದು, ನನ್ನ ಗಂಡನಿಗೆ ಅಷ್ಟೇನು ಪೆಟ್ಟು ಆಗದೇ ಇದ್ದುದರಿಂದ ಅವರು ಉಪಚಾರ ಪಡೆದುಕೊಂಡಿರುವುದಿಲ್ಲ. ನಾನು ಉಪಚಾರ ಪಡೆಯುವ ಕಾಲಕ್ಕೆ ಎಮ್.ಎಲ್.ಸಿ ವಿಚಾರಣೆ ಕುರಿತು ಪೊಲೀಸರು ಬಂದು ವಿಚಾರಿಸಿದಾಗ ನಾನು ಸದ್ಯ ನನ್ನದು ಈಗ ಯಾವುದೇ ದೂರು ಪಿರ್ಯಾಧಿ ಇರುವುದಿಲ್ಲ. ಮನೆಯವರೊಂದಿಗೆ ಚಚರ್ಿಸಿ ಠಾಣೆಗೆ ಬಂದು ದೂರು ಸಲ್ಲಿಸುವುದಾಗಿ ತಿಳಿಸಿದ್ದು ಇರುತ್ತದೆ. ಈಗ ನಾನು ಠಾಣೆಗೆ ಬಂದು ತಮ್ಮಲ್ಲಿ ದೂರು ನೀಡುತ್ತಿದ್ದು ನಮಗೆ ಹೊಡೆಬಡೆ ಮಾಡಿ, ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ ಈ ಮೇಲಿನವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಯಾದಗಿರಿ ನಗರ ಠಾಣೆ ಗುನ್ನೆ ನಂಬರ. 113/2022 ಕಲಂ. 323, 324, 504, 506 ಸಂ. 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: ಯು.ಡಿ ಆರ್.ನಂ.17/2022 ಕಲಂ 174 (ಸಿ) ಸಿ.ಆರ್.ಪಿ.ಸಿ : ಇಂದು ದಿನಾಂಕ; 18/10/2022 ರಂದು 11-00 ಎಎಮ್ ಸುಮಾರಿಗೆ ಪಿರ್ಯಾಧಿ ಠಾಣೆಗೆ ಹಾಜರಾಗಿ ಒಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ಗಂಡನು ಸುಮಾರು 20 ವರ್ಷಗಳ ಹಿಂದೆ ಮೃತಪಟ್ಟಿರುತ್ತಾನೆ. ನಮ್ಮ ಪಿತ್ರಾಜರ್ಿತ ಆಸ್ತಿ ಹೊಲ ಸವರ್ೆ ನಂ.91/4 ರಲ್ಲಿ 28 ಗುಂಟೆ ಜಮೀನಿದ್ದು ನನ್ನ ಮಗ ದೇವರಾಜನು ಒಕ್ಕಲುತನ ಮಾಡಿಕೊಂಡು ನಮ್ಮ ಕುಟುಂಬವನ್ನು ಸಲಹುತ್ತಿದ್ದಾನೆ. ವ್ಯವಸಾಯ ಸಲುವಾಗಿ ಶಹಾಪೂರದ ಆಕ್ಸಿಸ್ ಬ್ಯಾಂಕಿನಲ್ಲಿ ಹಿಗೇ ಸುಮಾರು 2 ವರ್ಷಗಳ ಹಿಂದೆ 2,00,000/-ರೂ ಗಳನ್ನು ಸಾಲ ಪಡೆದುಕೊಂಡಿದ್ದೆವು. ಸುಮಾರು 2 ವರ್ಷಗಳಿಂದ ನಮ್ಮ ಹೊಲದಲ್ಲಿ ಸರಿಯಾಗಿ ಬೆಳೆ ಬಾರದೇ ಕಾರಣ ಮಾಡಿದ ಸಾಲ ಹೇಗೆ ತಿರಿಸಬೇಕೆಂದು ನನ್ನ ಮಗ ದೇವರಾಜನು ಯಾವಾಗಲೂ ಅದೇ ಚಿಂತೆಯಲ್ಲಿರುತ್ತಿದ್ದನು. ನಾನು ಮತ್ತು ನಮ್ಮ ಮನೆಯವರು ಹೊಲದಲ್ಲಿ ಈ ವರ್ಷ ಚೆನ್ನಾಗಿ ಬೆಳೆ ಬೆಳೆದು ಹೇಗಾದರು ಮಾಡಿ ಸಾಲ ತಿರಿಸೋಣಾ ಎಂದು ಧೈರ್ಯ ಹೇಳುತ್ತಿದ್ದೆವು. ಹಿಗೀದ್ದು ನಿನ್ನೆ ದಿನಾಂಕ; 17/10/2022 ರಂದು ಬೆಳೆಗ್ಗೆ 11-30 ಗಂಟೆಯ ಸುಮಾರಿಗೆ ನಮ್ಮ ಮಗನಾದ ದೇವರಾಜನು ಯಾದಗಿರಿಗೆ ಹೋಗಿ ತನ್ನ ಸ್ನೇಹಿತರಾದ ಮಲ್ಲಿಕಾಜರ್ುನ ತಂದೆ ಶರಣಪ್ಪ ಯಾದಗಿರಿ ಇತನಿಗೆ ಭೇಟಿಯಾಗಿ ಬರುತ್ತೇನೆಂದು ಹೇಳಿ ಹೋದನು. ರಾತ್ರಿ 8-30 ಗಂಟೆ ಸುಮಾರಿಗೆ ಮಲ್ಲಿಕಾಜರ್ುನ ಯಾದಗಿರಿ ಇತನು ನಮಗೆ ಫೋನ ಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ಮಗನಾದ ದೇವರಾಜನು ನಮ್ಮ ರೂಮಿಗೆ ಬಂದಾಗ ನಾವು ರೂಮಿನಲ್ಲಿ ಊಟ ಮಾಡಲು ಕೈ ಕಾಲಿ ಮುಖ ತೊಳೆಯಲು ಪಕ್ಕದ ರೂಮಿಗೆ ಹೋಗಿ ಬರುವಷ್ಟರಲ್ಲಿ ದೇವರಾಜನ ಕೈಯಲ್ಲಿ ಒಂದು ವಿಷದ ಬಾಟಲಿಯಿದ್ದು ವಿಷ ಕುಡಿಯುತ್ತಿದ್ದನು. ನೋಡಿ ನಾನು ಆತನ ಕೈಯಿಂದ ವಿಷದ ಬಾಟಲಿಯನ್ನು ಕಸಿದುಕೊಂಡಾಗ ನಾನು ಸಾಯಬೇಕು ನನಗೆ ಸಾಲ ಬಹಳ ಆಗಿದೆ ನನಗೆ ಬಿಡಿರಿ ಅಂತಾ ನಮ್ಮಿಂದ ಬಿಡಿಸಿಕೊಂಡು ರೂಮಿನಿಂದ ಮುಖ್ಯ ರಸ್ತೆಯ ಕಡೆಗೆ ಓಡಿ ಹೋಗುವಾಗ ನಾವು ಸಹಾ ಅವನ ಹಿಂದೆ ಓಡಿ ಹೋದೆವು. ದೇವರಾಜನು ಜೋಲಿ ಹೋಗುತ್ತಾ ಓಡುತ್ತಾ ಯಾದಗಿರಿ ಹೈದ್ರಾಬಾದ ಮುಖ್ಯ ರಸ್ತೆಯ ಹೊಸಳ್ಳಿ ಕ್ರಾಸ ಸಮೀಪದ ಪಿಲ್ಟರ ಬೆಡ್ ಹತ್ತಿರ ರಸ್ತೆಯ ಡಿವೈಡರಗೆ ಹೋಗಿ ಬಿದ್ದನು. ಆಗ ನಆನು ಮತ್ತು ನನ್ನ ಸ್ನೇಹಿತರಾದ ಶರಣಪ್ಪ ಹಳಿಮನಿ, ಬಸವರಾಜ ಊಡೆದ ರವರು ಕೂಡಿಕೊಂಡು ದೇವರಾಜನಿಗೆ ಎತ್ತಿಕೊಂಡು ರಸ್ತೆಯ ಪಕ್ಕಕ್ಕೆ ಬಂದು ನೋಡಲಾಗಿ ಆತನ ಎಡ ಮೊಳಕೈಗೆ ತಲೆಯ ಬಲಗಡೆ ತರಚಿದ ಗಾಯಗಳಾಗಿದ್ದು ಕೂಡಲೇ ದೇವರಾಜನಿಗೆ ಖಾಸಗಿ ಆಟೋದಲ್ಲಿ ಯಾದಗಿರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ದೇವರಾಜನಿಗೆ ನೋಡಿದ ವೈದ್ಯರು ಈಗಾಗಕೇ ಸತ್ತಿರುತ್ತಾನೆ ಎಂದು ತಿಳಿಸಿದ್ದು ದೇವರಾಜನ ಮೃತ ದೇಹವನ್ನು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿರುತ್ತೇವೆ ಎಂದು ತಿಳಿಸಿದನು. ಆಗ ಕೂಡಲೇ ನಾನು ಮತ್ತು ಈತರರು ಕೂಡಿಕೊಂಡು ಯಾದಗಿರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನೋಡಿದ್ದು ನನ್ನ ಮಗ ದೇವರಾಜನು ಮೃತಪಟ್ಟಿದ್ದು ಇರುತ್ತದೆ. ಕಾರಣ ನನ್ನ ಮಗ ದೇವರಾಜ ಇತನು ಸಾಲ ಭಾದೆಯಿಂದ ದಿನಾಂಕ; 17/10/2022 ರಂದು 8-00 ಪಿಎಮ್ ಕ್ಕೆ ಯಾದಗಿರಿ ನಗರದ ಪಿಲ್ಟರ ಬೆಡ್ ಏರಿಯಾದಲ್ಲಿ ಮಲ್ಲಿಕಾಜರ್ುನ ಗುತ್ತೆದಾರ ಇವರ ಬಾಡಿಗೆ ರೂಮಿನಲ್ಲಿ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ. ಆದರು ನನ್ನ ಮಗನ ಸಾವಿನಲ್ಲಿ ನನಗೆ ಸಂಶಯವಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್ ನಂ.17/2022 ಕಲಂ.174 (ಸಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 11-11-2022 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080