ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-11-2021

ಯಾದಗಿರಿ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 60/2021 ಕಲಂ 279, 304(ಎ) ಐಪಿಸಿ : ಇಂದು ದಿನಾಂಕ 18/11/2021 ರಂದು 7-15 ಎ.ಎಂ.ಕ್ಕೆ ಪಿಯರ್ಾದಿ ಶ್ರೀಮತಿ ಚಾಂದಬೀ ಗಂಡ ಭಾಷಾ ಮೋಮಿನ್ ವಯ;30 ವರ್ಷ, ಜಾ;ಮುಸ್ಲಿಂ, ಉ;ಹೊಲಮನಿ ಕೆಲಸ, ಸಾ;ಚಿಗಾನೂರ, ತಾ;ಜಿ;ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 7-15 ಎ.ಎಂ.ದಿಂದ 8-15 ಎ.ಎಂ.ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನಮ್ಮ ತಂದೆ-ತಾಯಿಗೆ ನಾವು ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿರುತ್ತಾನೆ, ಮನೆಗೆ ನಾನೇ ಹಿರಿಮಗಳಿದ್ದು, ನಂತರ ನನ್ನ ತಂಗಿ ಶಾಯಿನ್, ತಮ್ಮ ಅಬ್ದುಲ್ ಇರುತ್ತಾರೆ. ನನ್ನ ತವರು ಮನೆ ಗೊಂದೆನೂರು ಇದ್ದು, ನನಗೆ ಚಿಗಾನೂರ ಗ್ರಾಮದ ಭಾಷಾ ತಂದೆ ರಜಾಕಸಾಬ ಮೋಮಿನ್ ಎಂಬುವರಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನ್ನ ತಂದೆ ಲಾಲಸಾಬ ಜಮೇದಾರ ಇವರು ಸುಮಾರು 5 ತಿಂಗಳ ಹಿಂದೆ ಮೃತಹೊಂದಿರುತ್ತಾರೆ. ನನ್ನ ತಂದೆ ಮೃತ ನಂತರ ನನ್ನ ತಾಯಿ ಬೀಬಿ ಫಾತೀಮಾ ಇವರು ಅದೇ ಚಿಂತೆಯನ್ನು ಮಾಡುತ್ತಾ ನಮ್ಮೂರಲ್ಲಿ ಸ್ವಲ್ಪ ದಿವಸ ಮತ್ತು ಗೊಂದೆನೂರಿನಲ್ಲಿ ಸ್ವಲ್ಪ ದಿವಸ ಇರುತ್ತಿದ್ದರು. ದಿನಾಂಕ 17-11-2021 ರಂದು ಬೆಳಿಗ್ಗೆ ಸುಮಾರಿಗೆ ನಮ್ಮ ಚಿಗಾನೂರಿನಲ್ಲಿದ್ದ ನನ್ನ ತಾಯಿಯವರು ರೇಶನ್ ಬಂದಿದೆ ನಾನು ಗೊಂದೆನೂರಿಗೆ ಹೋಗುತ್ತೇನೆಂದು ನನಗೆ ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ 18/11/2021 ರಂದು ಮದ್ಯರಾತ್ರಿ 2 ಎ.ಎಂ.ದ ಸುಮಾರಿಗೆ ನಮ್ಮ ಸಂಬಂಧಿಕರಾದ ಅಜರ್ುಣಗಿ ಗ್ರಾಮದ ಶ್ರೀ ಬಾಬು ತಂದೆ ಉಸ್ಮಾನಸಾಬ ಇವರು ನಮಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ನಾನು ಮತ್ತು ನನ್ನ ಮಗನಾದ ಮಶಾಕ ಇಬ್ಬರು ನಮ್ಮ ಕೆಲಸದ ಮೇಲೆ ಯಾದಗಿರಿಗೆ ಬಂದಿದ್ದು, ಕೆಲಸ ಮುಗಿಯಲು ತುಂಬಾ ತಡ ರಾತ್ರಿಯಾಗಿರುತ್ತದೆ, ನಂತರ ಮರಳಿ ಅಜರ್ುಣಗಿ ಗ್ರಾಮಕ್ಕೆ ಹೋಗಲು ಯಾವುದಾದರೂ ಖಾಸಗಿ ವಾಹನಗಳು ಸಿಗುತ್ತಾವೆಂದು ಯಾದಗಿರಿಯ ಹಳೆ ಬಸ್ ನಿಲ್ದಾಣದ ಹತ್ತಿರ ನಾನು ಮತ್ತು ನನ್ನ ಮಗ ಮಶಾಕ ಇಬ್ಬರು ಕಾಯುತ್ತಾ ನಿಂತಿದ್ದಾಗ ಸಮಯ ಮದ್ಯರಾತ್ರಿ 01-15 ಎ.ಎಂ.ಕ್ಕೆ ಯಾದಗಿರಿ ನಗರದ ಸುಬಾಷ್ ವೃತ್ತದ ಕಡೆಯಿಂದ ಶಹಾಪುರ ರಸ್ತೆ ಕಡೆಗೆ ಹೋಗುತ್ತಿದ್ದ ಒಂದು ಕಬ್ಬು ತುಂಬಿದ ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ರಸ್ತೆ ಬದಿಯಲ್ಲಿ ನಿಂತಿದ್ದ ಒಬ್ಬ ಮಹಿಳೆಗೆ ನೇರವಾಗಿ ಡಿಕ್ಕಿ ಹೊಡೆದಾಗ, ಡಿಕ್ಕಿಹೊಡೆದ ರಭಸಕ್ಕೆ ಆ ಮಹಿಳೆಯು ರಸ್ತೆಗೆ ಬಿದ್ದಾಗ, ಆಕೆಯ ಎರಡು ಕಾಲುಗಳ ಮೇಲೆ ಲಾರಿಯು ಟಯರು ಹರಿದು ಭಾರೀ ರಕ್ತಗಾಯವಾಗಿ ನುಜ್ಜು-ಗುಜ್ಜಾಗಿರುತ್ತವೆ. ಹಣೆಗೆ ಭಾರಿ ಗುಪ್ತಗಾಯ ಹಾಗೂ ತರಚಿದ ಗಾಯವಾಗಿರುತ್ತದೆ. ನಾವಿಬ್ಬರು ಓಡೋಡಿ ಘಟನಾ ಸ್ಥಳಕ್ಕೆ ಹತ್ತಿರ ಬಂದು ನೋಡಲಾಗಿ ಅಪಘಾತದಲ್ಲಿ ಗಾಯಗೊಂಡಿದ್ದವರು ನಿಮ್ಮ ತಾಯಿ ಬೀಬಿ ಫಾತೀಮಾ ಈಕೆಯು ಇದ್ದು ಅಪಘಾತಪಡಿಸಿದ ಲಾರಿ ಮತ್ತು ಅದರ ಚಾಲಕನು ಘಟನಾ ಸ್ಥಳದಲ್ಲಿದ್ದು ಲಾರಿ ನಂಬರ ನೋಡಲಾಗಿ ಎಪಿ-28, ವಾಯ್-3944 ನೇದ್ದು ಇದ್ದು ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸೋಮಲಾಲ್ ತಂದೆ ಹರಿ ರಾಠೋಡ ವಯ;37 ವರ್ಷ, ಜಾ;ಲಂಬಾಣಿ, ಉ;ಲಾರಿ ಚಾಲಕ, ಸಾ;ರಾಯಪಲ್ಲಿ ತಾಂಡ, ತಾ;ಮಗದಮಪಲ್ಲಿ, ಜಿ;ಜಹೀರಾಬಾದ್ (ಆಂದ್ರ ಪ್ರದೇಶ) ಅಂತಾ ತಿಳಿಸಿರುತ್ತಾನೆ. ಘಟನಾ ಸ್ಥಳಕ್ಕೆ ಪೊಲಿಸ್ ವಾಹನಗಳು ಮತ್ತು 108 ಅಂಬುಲೆನ್ಸ್ ಬಂದಿದ್ದು ನಿಮ್ಮ ತಾಯಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇವೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿನ ವೈದ್ಯರು ನಿಮ್ಮ ತಾಯಿಗೆ ಉಪಚಾರ ನೀಡಿ ಪರೀಕ್ಷೆ ಮಾಡಿದ ನಂತರ ಸಮಯ 1-20 ಎ.ಎಂ.ಕ್ಕೆ ಅಪಘಾತದಲ್ಲಾದ ಗಾಯದ ಭಾದೆಯಿಂದ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ನೀವು ಬೇಗನೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರಬೇಕು ಅಂತಾ ತಿಳಿಸಿರುತ್ತಾರೆ. ಆಗ ನನಗೆ ಮತ್ತು ನನ್ನ ಗಂಡನಿಗೆ ಗಾಬರಿಯಾಗಿದ್ದು, ಸಮಯವು ಮದ್ಯರಾತ್ರಿಯಾಗಿದ್ದರಿಂದ ಯಾವುದೇ ಬಸ್ಸಿನ ಸೌಕರ್ಯ ಇಲ್ಲದಿದ್ದರಿಂದ ಇಂದು ಬೆಳಿಗ್ಗೆ ನಾನು ಮತ್ತು ನನ್ನ ಗಂಡ ಇಬ್ಬರು ಕೂಡಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ತಾಯಿಯ ಮೃತದೇಹವನ್ನು ಶವಾಗಾರ ಕೋಣೆಯಲ್ಲಿ ಹಾಕಿದ್ದು ನಾನು ಗುತರ್ಿಸಿರುತ್ತೇನೆ. ನನಗೆ ಈ ಮೇಲೆ ಪೋನಿನಲ್ಲಿ ನನ್ನ ಕಾಕನವರಾದ ಬಾಬು ಇವರು ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಆಸ್ಪತ್ರೆಗೆ ನನ್ನ ಚಿಕ್ಕಮ್ಮಳಾದ ಶರೀಪಾ ಹಾಗೂ ನನ್ನ ಅಜ್ಜಿಯಾದ ಅಮೀರಾಬಿ ಗಂಡ ಮಜೀದಸಾಬ ಆವಂಟಿ ಸಾ;ತುಮಕುರ ರವರು ಬಂದಿರುತ್ತಾರೆ. ಹೀಗಿದ್ದು ಇಂದು ದಿನಾಂಕ 18/11/2021 ರಂದು ಸಮಯ 01-15 ಎ.ಎಂ.ದ ಸುಮಾರಿಗೆ ಯಾದಗಿರಿ-ಶಹಾಪುರ ಮುಖ್ಯ ರಸ್ತೆಯ ಯಾದಗಿರಿ ಹಳೆ ಬಸ್ ನಿಲ್ದಾಣದ ಹತ್ತಿರ ಮುಖ್ಯ ರಸ್ತೆ ಮೇಲೆ ಯಾದಗಿರಿ ನಗರದ ಸುಭಾಷ್ ವೃತ್ತದ ಕಡೆಯಿಂದ ಶಹಾಪುರ ರಸ್ತೆ ಕಡೆಗೆ ಲಾರಿ ನಂ. ಎಪಿ-28, ವಾಯ್-3944 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ನನ್ನ ತಾಯಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ನನ್ನ ತಾಯಿಯ ಆಕೆಯ ಎರಡು ಕಾಲುಗಳ ಮೇಲೆ ಲಾರಿಯು ಟಯರು ಹರಿದು ಭಾರೀ ರಕ್ತಗಾಯವಾಗಿ ನುಜ್ಜು-ಗುಜ್ಜಾಗಿರುತ್ತವೆ, ಹಣೆಗೆ ಭಾರಿ ಗುಪ್ತಗಾಯ ಹಾಗೂ ತರಚಿದ ಗಾಯವಾಗಿರುತ್ತದೆ, ಅಪಘಾತದಲ್ಲಾದ ಗಾಯಗಳ ಭಾದೆಯಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿರುತ್ತಾಳೆ ಈ ಘಟನೆ ಬಗ್ಗೆ ನನ್ನ ಮನೆಯ ಹಿರಿಯರಲ್ಲಿ ವಿಚಾರಿಸಿ ಇಂದು ತಡವಾಗಿ ಪಿಯರ್ಾದಿ ದೂರು ನೀಡುತ್ತಿದ್ದು, ಈ ಘಟನೆಗೆ ಕಾರಣನಾದ ಅಪಘಾತಪಡಿಸಿದ ಲಾರಿ ಚಾಲಕನ ಮೇಲೆ ಕಾನೂನಿನ ಮುಂದಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 60/2021 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
156/2021 ಕಲಂ:279,337,338. ಐ.ಪಿ.ಸಿ.ಮತ್ತು 187 ಐ.ಎಮ್.ವಿ.ಕಾಯ್ದೆ : ಇಂದು ದಿನಾಂಕ 18/11/2021 ರಂದು ಬೆಳಗ್ಗೆ 10-00 ಗಂಟೆಗೆ ಗಾಯಾಳು ಫಿರ್ಯಾಧಿದಾರಳಾದ ಕುಮಾರಿ ತಾರಾದೇವಿ ತಂದೆ ಚಂದ್ರಪ್ಪ ಸಾಃ ಅಬ್ಬೆತುಮಕುರ ತಾಃ ಯಾದಗಿರ ಇವರು ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರ ಸೇರಿಕೆಯಾಗಿದ್ದು ಸದರಿ ಗಾಯಳು ಹೇಳಿಕೆ ಕೊಟ್ಟಿದ್ದೆನೆಂದರೆ. ಇಂದು ದಿನಾಂಕ 18/11/2021 ರಂದು ಬೆಳಗ್ಗೆ 9:00 ಗಂಟೆಯ ಸುಮಾರಿಗೆ ನಮ್ಮ ಅಬ್ಬೆತುಮಕುರ ಗ್ರಾಮದಿಂದ ಯಾದಗಿರಿಗೆ ನಮ್ಮೂರಿನ ಜಗಧೀಶ ತಂದೆ ಮಲ್ಲಪ್ಪ ಕಂಬಾರ ಇವರ ಟಂ ಟಂ ನಂ.ಕೆ.ಎ.33/ ಎ 6176 ನೆದ್ದರಲ್ಲಿ ನಾನು ಮತ್ತು ನಮ್ಮ ಗ್ರಾಮದವರಾದ ಅನುರಾಧ ತಂದೆ ಸಾಬಣ್ಣ ಮತ್ತು ನಮ್ಮೂರಿನ ಇತರರು ಸೇರಿ ಯಾದಗಿರಿಯ ಜೂನಿಯರ ಕಾಲೇಜ್ ಪ್ರೌಢ ಶಾಲೆಗೆ ಹೋಗಲು ಅಬ್ಬೆತುಮಕುರದಲ್ಲಿ ಕುಳಿತುಕೊಂಡು ಯಾದಗಿರದ ಕಡೆಗೆ ರಸ್ತೆಯ ಮಾರ್ಗವಾಗಿ ಹೋಗುತ್ತಿರುವಾಗ ನಮ್ಮ ಗ್ರಾಮದ ಸ್ವಲ್ಪ ದೂರದರಲ್ಲಿ ಡಾಂಬರ ಪ್ಲಾಂಟ ಹತ್ತಿರ ಕಚ್ಚಾ ರಸ್ತೆ ಕಡೆಯಿಂದ ಒಂದು ಟಿಪ್ಪರ ಚಾಲಕನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಏಕಾ ಏಕಿ ಕಟ್ಟ ಹೋಡೆದಿದ್ದರಿಂದ ನಾವು ಕುಳಿತ್ತಿದ್ದ ಟಂ ಟಂ ರಸ್ತೆಯ ಎಡಗಡೆಗೆ ಪಲ್ಟಿಯಾಗಿ ಬಿದ್ದಾಗ ಸದರಿ ಟಂ ಟಂ ನಲ್ಲಿದ್ದ ನನಗೆ ಗದ್ದದ ಕೇಳಗಡೆ ರಕ್ತ ಗಾಯವಾಗಿರುತ್ತದೆ ಮತ್ತು ತಲೆಗೆ ಪೆಟ್ಟಗಾಗಿದ್ದು ಗುಪ್ತಗಾಯವಾಗಿರುತ್ತದೆ,ಬೆನ್ನಿಗೆ ಗುಪ್ತಗಾಯವಾಗಿರುತ್ತದೆ ನನ್ನಂತೆ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಅನುರಾಧ ತಂದೆ ಸಾಬಣ್ಣ ಈಕೆಗೆ ಕೂಡ ಬಲಗೈಮೋಣ ಬಾರಿ ಗುಪ್ತಗಾಯವಾಗಿದ್ದು, ತೆಲೆಗೆ ಮತ್ತು ಬೆನ್ನಿಗೆ ಗುಪ್ತಗಾಯವಾಗಿದ್ದು ನಮ್ಮಂತೆ ಆಟೋದಲ್ಲಿ ಕುಳಿತುಕೊಂಡಿದ್ದ ಮಲ್ಲಮ್ಮ ಗಂಡ ಶಿವಪ್ಪ ಇವಳಿಗೆ ಭುಜಕ್ಕೆ ಭಾರಿ ಒಳಪೆಟ್ಟಾಗಿದ್ದು ಮುರಿದಂತ್ತಾಗಿರುತ್ತದೆ ಮತ್ತು ಸೊಂಟಕ್ಕೆ ಬಾರಿ ಗುಪ್ತಗಾಯವಾಗಿರುತ್ತದೆ,ನಮ್ಮಂತೆ ಟಂ ಟಂ ನಲ್ಲಿ ಪಯಣಿಸುತ್ತಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರು ಆಸ್ಪತ್ರೆಗೆ ಬಂದಿಲ್ಲಾ ಈ ವಿಷಯವನ್ನು ನಮ್ಮ ಗ್ರಾಮದವರಾದ ಸಾಬಣ್ಣ ತಂದೆ ಭೀಮರಾಯ ಹಾಗೂ ಇತರರೂ ಬಂದು ನಮ್ಮರ ಖಾಸಗಿ ವಾಹನದಲ್ಲಿ ಹಾಕಿ ಕೊಂಡು ಬಂದು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಯಾದಗಿರ ಚಿಕಿತ್ಸೆಗಾಗಿ ಸೆರಿಕೆ ಮಾಡಿರುತ್ತಾರೆ. ಕಾರಣ ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಅಪಘಾತಪಡಿಸಿ ಟಿಪ್ಪರ ನಂ. ಕೆ.ಎ-33 ಎ.6850 ನೇದ್ದರ ಚಾಲಕನು ಅಪಘಾತಗೋಳಿಸಿ ನಂತರ ಟಿಪ್ಪರ ಬೀಟ್ಟು ಹೊಲದಲ್ಲಿ ಓಡಿ ಹೊಗಿರುತ್ತಾನೆ.ಆತನ ಹೆಸರು ಗೊತ್ತಿಲ್ಲ ನೊಡಿದರೆ ಗುತರ್ಿಸುತ್ತೆವೆ ಕಾರಣ ಅವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಬೆಕು ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ಹೇಳಿಕೆ ನೀಡಿದ್ದು ಮರಳಿ ಠಾಣೆಗೆ ಬೆಳಗ್ಗೆ 11:00 ಗಂಟೆಗೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 156/2021 ಕಲಂ. 279, 337, 338 ಐಪಿಸಿ ಮತ್ತು 187 ಐ.ಎಮ.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗೋಗಿ ಪೊಲೀಸ ಠಾಣೆ
ಗುನ್ನೆ ನಂ 104/2021 ಕಲಂ, 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 18/11/2021 ರಂದು 06.15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಪೊಲೀಸ್ ಠಾಣೆ. ರವರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 18/11/2021 ರಂದು ಚಾಮನಾಳ ಗ್ರಾಮದ ಗ್ರಾಮ ಪಂಚಾಯಿತಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ರಾಮಪ್ಪ @ ರಾಮು ತಂದೆ ಭಿಮಣ್ಣ ನಾಯ್ಕೋಡಿ ವಯಾ:27 ವರ್ಷ ಉ: ಒಕ್ಕಲುತನ ಜಾ: ಕಬ್ಬಲಿಗ ಸಾ:ಚಾಮನಾಳ ತಾ: ಶಹಾಪೂರ ಜಿ: ಯಾದಗಿರಿ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 04.15 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 2790/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 104/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 180/2020 ಕಲಂ 302, 109 ಸಂಗಡ 34 ಐಪಿಸಿ : ಇಂದು ದಿನಾಂಕ 18.11.2021 ರಂದು ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ಮೃತ ಭೀಮಶಪ್ಪನ ಅಕ್ಕಳಾದ ಫಿರ್ಯಾದಿದಾರಳು ಒಂದು ಲೀಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಮೃತನ ಮೊದಲನೇ ಹೆಂಡತಿಗೆ ಒಬ್ಬಾತ ಗಂಡು ಮತ್ತು 03 ಜನ ಹೆಣ್ಣು ಮಕ್ಕಳೀರುತ್ತಾರೆ. ಆಕೆ ತೀರಿಕೊಂಡಿದ್ದರಿಂದ 2ನೇ ಹೆಂಡತಿಯಾದ ಆರೋಪಿತಳಾದ ಮಾಣಿಕೆಮ್ಮಳಗೆ ಮದುವೆ ಮಾಡಿಕೊಂಡುದ್ದು ಆಕೆಗೆ ಶ್ರೀಕಾಂತ ಮತ್ತು ಕಾವೇರಿ ಅಂತಾ ಇಬ್ಬರು ಮಕ್ಕಳಿರುತ್ತಾರೆ. ಆರೋಪಿತಳ ತಾಯಿ ದೇವರಳ್ಳಿ ಗ್ರಾಮದ ಜಾತ್ರೆಗೆಂದು ಕರೆದಿದ್ದರಿಂದ ಆರೋಪಿತಳಾದ ಮಾಣಿಕೆಮ್ಮಳು ದಿನಾಂಕ 15.11.2021 ರಂದು ಗಾಜರಕೊಟ್ ಗ್ರಾಮಕ್ಕೆ ಹೋಗಿದ್ದು ನಂತರ ದಿನಾಂಕ 17.11.2021 ರಂದು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಮೃತನೂ ಕೂಡ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕರೆದುಕೊಂಡು ಬರುವ ಸಲುವಾಗಿ ಗಾಜರಕೊಟ್ ಗ್ರಾಮಕ್ಕೆ ಹೋಗಿರುತ್ತಾನೆ. ದಿನಾಂಕ 18.11.2021 ರಂದು ಮೃತ ಮತ್ತು ಆತನ ಹೆಂಡತಿಯ ನಡುವೆ ಈ ಮೊದಲಿನಿಂದಲೂ ಮೃತನು ತನ್ನ ಹೆಂಡತಿಯ ಮೇಲೆ ಸಂಶಯ ಪಡುತ್ತಿದ್ದರಿಂದ ಕ್ಷುಲಕ ಕಾರಣಕ್ಕಾಗಿ ಜಗಳವಾಡುತ್ತ ಬಂದಿದ್ದು ಅದೇ ವೈಶಮ್ಯದಿಂದ ಮಾಣೀಕೆಮ್ಮಳ ತಮ್ಮ ಮತ್ತು ಆಕಯ ಪರಿಚಯಸ್ತನು ಕೂಡಿಕೊಂಡು ಮಾಣಿಕೆಮ್ಮಳು ಹೇಳಿದಂತೆ ಮೃತನನ್ನು ತಮ್ಮ ಮೋಟಾರು ಸೈಕಲ್ ಮೇಲೆ ಕೂಡಿಕೊಂಡು ಬಂದು ಮೃತನಿಗೆ ಹೊಡೆ-ಬಡೆ ಮಾಡಿ ಕೊಲೆ ಮಾಡಿದ್ದ ಬಗ್ಗೆ ಫೀರ್ಯಾದಿಯು ನೀಡದ ಲಿಖಿತ ದೂರಿನ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂಬರ 180/2021 ಕಲಂ: 302, 109 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 19-11-2021 03:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080