Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-11-2022


ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 151/2022 ಕಲಂ: 143, 147, 148, 341, 323, 324, 307, 427, 354, 448, 504, 506 ಸಂಗಡ 149 ಐಪಿಸಿ: ಇಂದು ದಿ: 18/11/22 ರಂದು 10:00 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ನಾಗಮ್ಮ ಗಂಡ ಖಂಡಪ್ಪ ದೇವಿಕೇರಿ ವ|| 50 ವರ್ಷ ಜಾ|| ಕುರಬರ ಉ|| ಹೊಲಮನೆ ಗೆಲಸ ಸಾ|| ದೇವಿಕೇರಿ ಹಾ.ವ|| ಹಾಲಬಾವಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾವು ಈಗ ಸುಮಾರು 8-10 ವರ್ಷಗಳಿಂದ ಹಾಲಬಾವಿ ಗ್ರಾಮದಲ್ಲಿ ನಾನು, ನನ್ನ ಗಂಡ ಹಾಗೂ ಮಕ್ಕಳು ಸೊಸೆಯಂದಿಯರೊಂದಿಗೆ ಕುಟುಂಬ ಸಮೇತವಾಗಿ ವಾಸವಾಗಿರುತ್ತೆವೆೆ. ಹಾಲಬಾವಿ ಸೀಮಾಂತರದಲ್ಲಿ ನಮ್ಮದು 4 ಎಕರೆ ಸ್ವಂತ ಹೊಲ ಇದ್ದು ಮತ್ತು 20 ಎಕರೆ ಹೊಲ ಲೀಜಿಗೆ ಹಾಕಿಕೊಂಡು ಹತ್ತಿ ಬಿತ್ತಿರುತ್ತೇವೆ. ವರ್ಷ ವರ್ಷ ಸರಿಯಾಗಿ ಬೆಳೆ ಬೆಳೆದು ನಾವು ಕುಟುಂಬ ಸಮೇತವಾಗಿ ಚೆನ್ನಾಗಿ ಇರುವಾಗ ನಮ್ಮೂರಿನ ದೇವೆಗೌಡ ತಂದೆ ಬಸನಗೌಡ ಮಾಲಿ ಪಾಟೀಲ ಹಾಗೂ ಅವರ ಕಡೆಯವರು ನಮಗೆ ಆಗಾಗ ಇವರು ಊರು ಬಿಟ್ಟು ನಮ್ಮೂರಿಗೆ ಬಂದು ವ್ಯವಸಾಯ ಚೆನ್ನಾಗಿ ಮಾಡಿಕೊಂಡು ನಮ್ಮೆದುರೇ ಹೊಸ ಮನೆ ಕಟ್ಟಿಕೊಂಡು ಇರುತ್ತಾರೆ ಇವರಿಗೆ ಹೇಗಾದರು ಮಾಡಿ ಊರು ಬಿಟ್ಟು ಕಳಿಸಬೇಕು ಮತ್ತು ನಾವು ಲೀಜಿಗೆ ಮಾಡಿದ ಹೊಲಗಳನ್ನು ತಾವು ಲೀಜಿಗೆ ಹಾಕಿಕೊಳ್ಳಬೇಕು ಅಂತ ನಮ್ಮ ಸಂಗಡ ಆಗಾಗ ತಕರಾರು ಮಾಡಿ ನಮ್ಮ ವಿರುದ್ದ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ದಿನಾಂಕ: 16/11/2022 ರಂದು ಮುಂಜಾನೆ 7 ಗಂಟೆ ಸುಮಾರಿಗೆ ನಾನು, ನನ್ನ ಮಗ ಭೀಮಣ್ಣ, ಮಲ್ಲಣ್ಣ ಹಾಗೂ ಸೊಸೆಯಂದಿರಾದ ರಾಚಮ್ಮ, ಮತ್ತು ಗಂಗಮ್ಮ ಹಾಗೂ ನನ್ನ ಗಂಡ ಖಂಡಪ್ಪ ಎಲ್ಲರು ಮನೆಯಲ್ಲಿರುವಾಗ ನಮ್ಮೂರಿನ 1) ದೇವೆಗೌಡ ತಂದೆ ಬಸನಗೌಡ ಮಾಲಿ ಪಾಟೀಲ 2) ಮಲ್ಲಪ್ಪ ತಂದೆ ಚಂದಪ್ಪ ನಾಯ್ಕೋಡಿ 3) ಚನ್ನಪ್ಪಗೌಡ ತಂದೆ ಸಾಹೇಬಗೌಡ ಬಿರಾದಾರ 4) ಹಣಮಂತ್ರಾಯಗೌಡ ತಂದೆ ಸಣ್ಣಮಲ್ಲಯ್ಯಗೌಡ ಮಾಲಿ ಪಾಟೀಲ 5) ದಂಡಪ್ಪ ತಂದೆ ಹುಲಗಪ್ಪ ಗುಳಬಾಳ 6) ಪಕೀರಪ್ಪಗೌಡ ತಂದೆ ಭಾಗಣಗೌಡ ಮಾಲಿ ಪಾಟೀಲ 7) ಅರವಿಂದ ತಂದೆ ರಂಗಪ್ಪ ನಾಯ್ಕೋಡಿ 8) ಪರಮಣ್ಣಗೌಡ ತಂದೆ ಮಲ್ಲಯ್ಯ ಬಿರಾದಾರ ಇವರು ಒಮ್ಮೆಲೆ ನಮ್ಮ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ನಮಗೆ ಬೋಸಡಿಮಕ್ಕಳೆ ಊರು ಬಿಟ್ಟು ಊರು ಬಂದು ಎಷ್ಟು ಮೆರಿತೀರಿ ಊರಾಗ, ಊರು ಬಿಟ್ಟು ಹೋದರೆ ಸರಿ ಇಲ್ಲವಾದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಮನೆಯಲ್ಲಿ ಜಗಳ ತೆಗೆದು ದೇವೆಗೌಡ ಈತನು ಮನೆಯಲ್ಲಿ ಇಟ್ಟಿದ್ದ ಒಂದು ಸ್ಟೀಲಿನ ಕಳಸಿ (ಕೊಡ), ಒಂದು ಸ್ಟೀಲಿನ ಬಕೀಟ ಎತ್ತಿ ನೆಲಕ್ಕೆ ಒಡೆದು ಲುಕ್ಸಾನು ಮಾಡಿ, ದೇವೆಗೌಡ ಈತನು ನನ್ನ ಸೊಸೆ ರಾಚಮ್ಮ ಇವಳಿಗೆ ಕೈ ಹಿಡಿದು, ಕೂದಲು ಹಿಡಿದು ಜಗ್ಗಾಡಿ, ಕೈ ಮುಷ್ಠಿ ಮಾಡಿ ಜೋರಾಗಿ ಹೊಟ್ಟೆಗೆ ಗುದ್ದಿರುತ್ತಾನೆ ಇವತ್ತು ಇವರಿಗೆ ಜೀವ ಸಹಿತ ಬಿಡುವದು ಬೇಡ ಕೊಲೆ ಮಾಡಿಯೇ ಬಿಡೋಣ ಅಂತ ಕೊಲೆ ಮಾಡುವ ಉದ್ದೇಶದಿಂದ ನಮ್ಮ ಮನೆಯಲ್ಲಿ ಹೊಕ್ಕಿದ್ದು ಮಲ್ಲಪ್ಪ ತಂದೆ ಚಂದಪ್ಪ, ಚನ್ನಪ್ಪಗೌಡ ತಂದೆ ಸಾಹೇಬಗೌಡ ಇವರು ನನ್ನ ಗಂಡ ಖಂಡಪ್ಪ ಈತನಿಗೆ ನೆಲಕ್ಕೆ ಕೆಡವಿ ಹೆಡಕಿಗೆ, ಬೆನ್ನಿಗೆ, ಹೊಟ್ಟೆಗೆ, ಕೈಗಳಿಗೆ ಮನಬಂದಂತೆ ಒದ್ದಿರುತ್ತಾರೆ. ನಮಗೆಲ್ಲರಿಗೂ ಈ ಮೇಲಿನವರು ಮನೆಯಿಂದ ಎಳೆದುಕೊಂಡು ಮನೆಯ ಹೊರಗೆ ಬಂದಾಗ ಹೊರಗಡೆ ಅವರ ಕಡೆಯವರಾದ 9) ದೇವಿಂದ್ರಪ್ಪ ತಂದೆ ರಂಗಪ್ಪ ದೊರಿ 10) ಚಂದಪ್ಪ ತಂದೆ ಭೀಮಣ್ಣ ದೊರಿ 11) ಪರಮಣಗೌಡ ತಂದೆ ಭಾಗಣಗೌಡ ಮಾಲಿ ಪಾಟೀಲ 12) ದೇವರಾಜ ತಂದೆ ದೇವಿಂದ್ರಪ್ಪ ಜಂಬಲದಿನ್ನಿ 13) ದೇವಿಂದ್ರಪ್ಪ ತಂದೆ ಪರಮಣ್ಣ ಬಗರೆಂಗುಂಡು 14) ಹಣಮಂತ್ರಾಯ ತಂದೆ ಪರಮಣ್ಣ ಬಗರೆಂಗುಂಡು 15) ದೇವಿಂದ್ರಪ್ಪ ತಾಯಿ ಬಸಮ್ಮ ಬಗರೆಂಗುಂಡು 16) ಗಣಪ ತಾಯಿ ಬಸಮ್ಮ ಬಗರೆಂಗುಂಡು 17) ಚನ್ನಬಸವ ತಂದೆ ನಾಗಪ್ಪ ಗುಳಬಾಳ 18) ಮಲ್ಲಪ್ಪ ತಂದೆ ಭೀಮಣ್ಣ ದೊರಿ 19) ಬಸವರಾಜ ತಂದೆ ಮಲ್ಲಪ್ಪ ನಾಯ್ಕೋಡಿ 20) ಹಣಮಂತ್ರಾಯಗೌಡ ತಾಯಿ ಶಿವಮ್ಮ ಕೋಳಿಹಾಳ 21) ಬಸವರಾಜ ತಂದೆ ಮಲ್ಲಯ್ಯ ಗುರುವಿನ್ 22) ಬಸವರಾಜ ತಂದೆ ನಿಂಗಪ್ಪ ದೇವದುರ್ಗ 23) ಹಣಮಂತ್ರಾಯ ತಂದೆ ರಂಗಪ್ಪ ನಾಯ್ಕೋಡಿ 24) ಭೀಮಣ್ಣ ತಂದೆ ಅಯ್ಯಪ್ಪ ದೊರಿ 25) ನೀಲಮ್ಮ ಗಂಡ ಬಸನಗೌಡ ಮಾಲಿ ಪಾಟೀಲ 26) ದೇವಮ್ಮ ಗಂಡ ನಾರಾಯಣ ಗಂಟಿ 27) ಪರಮವ್ವ ತಂದೆ ಮಲ್ಲಯ್ಯಗೌಡ ಮಾಲಿ ಪಾಟೀಲ 28) ಶಾಂತಮ್ಮ ಗಂಡ ಬಾಗಪ್ಪಗೌಡ ಬಿರಾದಾರ ರವರು ನಮ್ಮ ಮನೆಯ ಮುಂದೆ ಗುಂಪುಕಟ್ಟಿಕೊಂಡು ಕೈಯಲ್ಲಿ ಬಡಿಗೆ, ರಾಡು, ಕಲ್ಲು ಹಿಡಿದುಕೊಂಡು ನಮಗೆ ಮುಂದಕ್ಕೆ ಹೋಗದಂತೆ ತಡೆದು ನಿಂತರು. ಆಗ ಜಗಳವನ್ನು ನೋಡಿ ನಮ್ಮ ಸಂಬಂದಿಕನಾದ ಮಲ್ಲಪ್ಪ ತಂದೆ ಅಪ್ಪಯ್ಯ ಬಂಡಿ ಈತನು ಬಂದಾಗ ಆತನಿಗೆ ಹಣಮಂತ್ರಾಯಗೌಡ, ದಂಡಪ್ಪ, ಪಕೀರಪ್ಪಗೌಡ ಇವರು ನೆಲಕ್ಕೆ ಕೆಡವಿ ನಿಂದೆನಲೇ ಎಲ್ಲದಕ್ಕೂ ಅಡ್ಡ ಬರುತ್ತಿ ಅಂತ ಅನ್ನುತ್ತಾ ಕಾಲಿನಿಂದ ಹೊಟ್ಟೆಗೆ ಬೆನ್ನಿಗೆ ಒದ್ದಿರುತ್ತಾರೆ. ಆಗ ಪಕೀರಪ್ಪಗೌಡ ಈತನು ಕಲ್ಲಿನಿಂದ ಹೊಟ್ಟಗೆ ಹೊಡೆದನು, ಅರವಿಂದ ಈತನು ನನ್ನ ಮಗ ಭೀಮಣ್ಣನಿಗೆ ಕೈಯಿಂದ ಕಪಾಳಕ್ಕೆ ಹೊಡೆದಿರುತ್ತಾನೆ. ಪರಮಣ್ಣಗೌಡ ಈತನು ರಾಡಿನಿಂದ ಇವತ್ತು ಇವರಿಗೆ ಕೊಲೆ ಮಾಡಿಯೇ ಬಿಡೋಣ ಅಂತ ಮಲ್ಲಪ್ಪ ತಂದೆ ಅಪ್ಪಯ್ಯನಿಗೆ ಹೆಡಕಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ದೇವಿಂದ್ರಪ್ಪ ತಂದೆ ರಂಗಪ್ಪ, ಚಂದಪ್ಪ ತಂದೆ ಭೀಮಣ್ಣ ಇವರು ನನ್ನ ಸೊಸೆ ಗಂಗಮ್ಮಳಿಗೆ ಕೈ ಹಿಡಿದು ಎಳೆದಾಡಿ ಕೂದಲು ಹಿಡಿದು ಜಗ್ಗಾಡಿ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿರುತ್ತಾರೆ. ಪರಮಣ್ಣಗೌಡ ತಂದೆ ಭಾಗಣಗೌಡ, ದೇವರಾಜ ತಂದೆ ದೇವಿಂದ್ರಪ್ಪ, ದೇವಿಂದ್ರಪ್ಪ ತಂದೆ ಪರಮಣ್ಣ ಇವರು ನನ್ನ ಇನ್ನೊಬ್ಬ ಮಗ ಮಲ್ಲಣ್ಣ ನಿಗೆ ನೆಲಕ್ಕೆ ಹಾಕಿ ಒದ್ದಿರುತ್ತಾರೆ. ಹಣಮಂತ್ರಾಯ ತಂದೆ ಪರಮಣ್ಣ, ದೇವಿಂದ್ರಪ್ಪ ತಾಯಿ ಬಸಮ್ಮ, ಗಣಪ ತಾಯಿ ಬಸಮ್ಮ ಇವರು ನನ್ನ ಮಗ ಭೀಮಣ್ಣನಿಗೆ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಚನ್ನಬಸವ ತಂದೆ ನಾಗಪ್ಪ, ಮಲ್ಲಪ್ಪ ತಂದೆ ಭೀಮಣ್ಣ, ಬಸವರಾಜ ತಂದೆ ಮಲ್ಲಪ್ಪ ಇವರು ನನ್ನ ಗಂಡನಿಗೆ ಕೈಯಿಂದ ಹೊಡೆಬಡೆ ಮಾಡಿ ಕಾಲಿನಿಂದ ಒದ್ದಿರುತ್ತಾರೆ. ಹಣಮಂತ್ರಾಯಗೌಡ ತಾಯಿ ಶಿವಮ್ಮ, ಬಸವರಾಜ ತಂದೆ ಮಲ್ಲಯ್ಯ, ಬಸವರಾಜ ತಂದೆ ನಿಂಗಪ್ಪ, ಹಣಮಂತ್ರಾಯ ತಂದೆ ರಂಗಪ್ಪ, ಬೀಮಣ್ಣ ತಂದೆ ಅಯ್ಯಪ್ಪ ಇವರು ಈ ಸೂಳೆಮಕ್ಕಳಿಗೆ ಇವತ್ತು ಜೀವ ಸಹಿತ ಬಿಡಕೂಡದು ಅಂತ ಜೀವದ ಬೆದರಿಕೆ ಹಾಕಿ ಮಲ್ಲಪ್ಪ ತಂದೆ ಅಪ್ಪಯ್ಯ ಈತನಿಗೆ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ನೀಲಮ್ಮ ಗಂಡ ಬಸನಗೌಡ, ದೇವಮ್ಮ ಗಂಡ ನಾರಾಯಣ, ಪರಮವ್ವ ತಂದೆ ಮಲ್ಲಯ್ಯಗೌಡ, ಶಾಂತಮ್ಮ ಗಂಡ ಬಾಲಪ್ಪಗೌಡ ಇವರೆಲ್ಲರು ನನಗೆ ನೆಲಕ್ಕೆ ಹಾಕಿ ಕೈಯಿಂದ ಹೊಡೆದು, ಎಡಗೈ ತಿರುವಿ, ಕಾಲಿನಿಂದ ಒದ್ದಿರುತ್ತಾರೆ. ಆಗ ನಾವು ಚೀರಾಡುತ್ತಿರುವಾಗ ನಮ್ಮೂರಿನ ನಮ್ಮ ಮನೆಯ ಅಕ್ಕಪಕ್ಕದ ಮನೆಯವರಾದ ಪರಮಪ್ಪ ತಂದೆ ಬಸಪ್ಪ ಚಲವಾದಿ, ದೇವಿಂದ್ರಪ್ಪ ತಂದೆ ಪರಮಣ್ಣ ಬಿರಾದಾರ, ಬಸವರಾಜ ತಂದೆ ಹಣಮಂತ್ರಾಯ ಅಸ್ಕಿ, ರೇವಣಸಿದ್ದ ತಂದೆ ಬೀರಪ್ಪ ದೇವತ್ಕಲ್ ಇವರು ಜಗಳ ಬಿಡಿಸಿರುತ್ತಾರೆ. ಆಗ ಅವರು ನೀವು ಊರು ಬಿಟ್ಟು ಹೋದರೆ ಸರಿ ಇಲ್ಲವಾದರೆ ಮತ್ತೆ ನಿಮಗೆ ಹೊಡೆಬಡೆ ಮಾಡುವದು ಬಿಡುವದಿಲ್ಲ ಸೂಳೇ ಮಕ್ಕಳೆ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಂತರ ಘಟನೆಯಲ್ಲಿ ಗಾಯಗೊಂಡ ನನ್ನ ಗಂಡ ಖಂಡಪ್ಪ, ಸೊಸೆ ರಾಚಮ್ಮ, ಸಂಬಂದಿ ಮಲ್ಲಪ್ಪ ಇವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದೆವು. ನನಗೆ ಮತ್ತು ನನ್ನ ಇಬ್ಬರು ಮಕ್ಕಳಾದ ಮಲ್ಲಣ್ಣ, ಭಿಮಣ್ಣ ಹಾಗೂ ಇನ್ನೊಬ್ಬ ಸೊಸೆ ಗಂಗಮ್ಮ ಅಷ್ಟೆನು ಪೆಟ್ಟಾಗಿರದಿದ್ದರಿಂದ ದವಾಖಾನೆಗೆ ತೋರಿಸಿರುವದಿಲ್ಲ. ನಂತರ ಹೆಚ್ಚಿನ ಉಪಚಾರ ಕುರಿತು ನನ್ನ ಗಂಡ ಖಂಡಪ್ಪ, ಸೊಸೆ ರಾಚಮ್ಮ, ಸಂಬಂದಿ ಮಲ್ಲಪ್ಪ ಇವರಿಗೆ ಕಲಬುರಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರಿಂದ ನಾವು ಕಲಬುರಗಿಯಲ್ಲಿ ಆಸ್ಪತ್ರೆಗೆ ಸೇರಿಕೆ ಮಾಡಿ ಜಗಳದ ಬಗ್ಗೆ ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 151/2022 ಕಲಂ: 143, 147, 148, 341, 323, 324, 307, 427, 354, 448, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 121/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ.18/11/2022 ರಂದು 4-30 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 18/11/2022 ರಂದು 2-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಸ್ಟೇಷನ್ ಏರಿಯಾದ ಸಿದ್ದೇಶ್ವರ ಲಾಡ್ಜ ಕ್ರಾಸಿನಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬನು ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 3-15 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಅಭಿಷೇಕ ತಂದೆ ಬಸ್ಸಯ್ಯ ಮಠಪತಿ ವ; 20 ಜಾ; ಮಠಪತಿ ಉ; ಕೂಲಿಕೆಲಸ ಸಾ; ಮದನಪೂರಗಲ್ಲಿ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 520-00 ರೂ. 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 18/11/2022 ರಂದು 3-15 ಪಿಎಂ ದಿಂದ 4-15 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 4-30 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿ ರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.121/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 89/2022 ಕಲಂ 78(3) ಕೆ.ಪಿ. ಎಕ್ಟ್: ಇಂದು ದಿನಾಂಕ:18/11/2022 ರಂದು 02.00 ಪಿ.ಎಮ್. ಕ್ಕೆ ಭೀ.ಗುಡಿಯಕೆಬಿಜೆಎನ್ಎಲ್ ಐ.ಬಿ ಹತ್ತಿರಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿಕರೆದು ಬಾಂಬೆ ಕಲ್ಯಾಣ ಮಟಕಾದೈವದ ಆಟ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬರ್ರಿ ನಂಬರ ಬರೆಯಿಸಿರಿ ಅಂತಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿಅವನಿಂದ 1) ನಗದು ಹಣರೂಪಾಯಿ 1150=00, 2) ಒಂದು ಮಟಕಾ ನಂಬರ ಬರೆದಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳು 02.50 ಪಿ.ಎಮ್ ದಿಂದ 03.50 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು 04.00 ಪಿ.ಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 90/2022 ಕಲಂ 78(3) ಕೆ.ಪಿ. ಎಕ್ಟ್: ಇಂದು ದಿನಾಂಕ:18/11/2022 ರಂದು 04.00 ಪಿ.ಎಮ್. ಕ್ಕೆ ಭೀ.ಗುಡಿಯಕೋರಿಕೆ ಬಸ್ ನಿಲ್ದಾಣದ ಹತ್ತಿರಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿಕರೆದು ಬಾಂಬೆ ಕಲ್ಯಾಣ ಮಟಕಾದೈವದ ಆಟ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬರ್ರಿ ನಂಬರ ಬರೆಯಿಸಿರಿ ಅಂತಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿಅವನಿಂದ 1) ನಗದು ಹಣರೂಪಾಯಿ 1250=00, 2) ಒಂದು ಮಟಕಾ ನಂಬರ ಬರೆದಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳು 04.50 ಪಿ.ಎಮ್ ದಿಂದ 05.50 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು 06.00 ಪಿ.ಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 195/2022 ಕಲಂ 78 (3) ಕೆ.ಪಿ ಆಕ್ಟ್: ಇಂದು ದಿನಾಂಕ 18/11/2022 ರಂದು 1900 ಗಂಟೆಗೆ ಶ್ರೀ ರಾಹುಲ್ ಪವಾಡೆ ಪಿ.ಎಸ್.ಐ. ಶಹಾಪೂರ ಠಾಣೆ ರವರು ಠಾಣೆಗೆ ಹಾಜರಾಗಿ ಕೊಟ್ಟ ವರಧಿ ಸಾರಾಂಶವೇನಂದರೆ ಇಂದು ದಿನಾಂಕ 18/11/2022 ರಂದು 16-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಸಗರ [ಬಿ] ಗ್ರಾಮದ ವಾಲ್ಮಿಕಿ ಕಟ್ಟೆಯ ಹತ್ತಿರದ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿಯವರಾದ ಶ್ರೀ ಶಿವಲಿಂಗಪ್ಪ ಹೆಚ್ ಸಿ 185. ನಾಗರಾಜ ಪಿಸಿ 12 ಹಾಗು ನೀಲಪ್ಪ ಪಿಸಿ 44, ಗುರುಶೇಖರ ಪಿಸಿ 186 ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಗುರುಶೇಖರ ಪಿಸಿ 186 ರವರಿಗೆ 15-35 ಗಂಟೆಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ಕಳಿಸಿದ್ದರಿಂದ ಸದರಿಯವರು ಇಬ್ಬರೂ ಪಂಚರಾದ 1] ಶರಣಪ್ಪ ತಂದೆ ಶಿವಪ್ಪ ಅಂಗಡಿ ವ|| 30 ಜಾ|| ಲಿಂಗಾಯತ ಉ|| ಕೂಲಿ ಸಾ|| ಹಳಿಸಗರ ಶಹಾಪೂರ 2] ಶ್ರೀ ಮೌನೇಶ ತಂದೆ ಸಾಯಬಣ್ಣ ವಿಶ್ವಕರ್ಮ ವ|| 23 ಜಾ|| ವಿಶ್ವಕರ್ಮ ಉ|| ಒಕ್ಕಲುತನ ಸಾ|| ವಿಬೂತಿಹಳ್ಳಿ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 16-40 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ ದಾಳಿ ಕುರಿತು ಹೋಗುವುದಿದೆ ತಾವು ನಮ್ಮ ಜೊತೆಯಲ್ಲಿ ಬಂದು ಜಪ್ತಿ ಪಂಚನಾಮೆಯ ಪಂಚರಾಗಿ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಪಂಚರಾಗಿ ನಮ್ಮ ಜೊತೆಯಲ್ಲಿ ಬರಲು ಒಪ್ಪಿಕೊಂಡರು. ಮೇಲಾಧಿಕಾರಿಗಳ ಮಾರ್ಗದಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಹಾಗು ಪಂಚರು ಹಾಗು ಸಿಬ್ಬಂದಿಯವರು ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಠಾಣೆಯಿಂದ 16-45 ಗಂಟೆಗೆ ಹೊರಟು ಸಗರ [ಬಿ] ಗ್ರಾಮದ ವಾಲ್ಮಿಕಿ ಕಟ್ಟೆಯಿಂದ ಸ್ವಲ್ಪ ದೂರದಲ್ಲಿ ನಮ್ಮ ವಾಹನ ನಿಲ್ಲಿಸಿ. ವಾಹನದಿಂದ ಈ ಮೇಲ್ಕಂಡ ನಾವೆಲ್ಲರು ಕೆಳಗೆ ಇಳಿದು ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ ವಾಲ್ಮಿಕಿ ಕಟ್ಟೆಯ ಮುಂದಿನ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಗೆ ಕೂಗಿ, ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದನು. ಆಗ ನಾವೆಲ್ಲರೂ ಸದರಿಯವನು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು 17-20 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ. ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು. ಮಟಕಾ ಅಂಕಿ ಸಂಖ್ಯೆಗಳನ್ನು ಬರೆಯಿಸಲು ಬಂದ ಜನರು ಓಡಿ ಹೋಗಿರುತ್ತಾರೆ. ಆಗ ನಾನು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಭೀಮಾಶಂಕರ ತಂದೆ ಕಲ್ಲಪ್ಪ ಸಿದ್ರಾ ವ|| 27 ಜಾ|| ಗಾಣಿಗ ಉ|| ಮಟಕಾ ನಂಬರ ಬರೆದುಕೊಳ್ಳುವದು ಸಾ|| ಸಗರ [ಬಿ] ತಾ|| ಶಹಾಪೂರ ಅಂತ ಹೇಳಿದನು. ಈತನ ಹತ್ತಿರ 1) ನಗದು ಹಣ 3820=00 ರೂಪಾಯಿ ಇದ್ದು 2) ಒಂದು ಮಟಕಾ ನಂಬರ ಬರೆದುಕೊಂಡಿದ್ದ ಚೀಟಿ ಇರುತ್ತದೆ ಅ.ಕಿ 00-00. 3) ಒಂದು ಬಾಲ್ ಪೆನ್ ಸಿಕ್ಕಿದು,್ದ ಅ.ಕಿ 00-00 ಸದರಿಯವನಿಗೆ ವಿಚಾರಣೆ ಮಾಡಲಾಗಿ, ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ನಂಬರಗಳು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಇರುತ್ತವೆ ಅಂತಾ ಹೇಳಿ ಹಾಜರ ಪಡಿಸಿದನು. ನಾನು ಮಟಕಾ ನಂಬರ ಬರೆದುಕೊಂಡ ಹಣವನ್ನು ಬುಕ್ಕಿಯಾದ ಮಲ್ಲಣಗೌಡ ಶಹಾಪೂರ ಇವರಿಗೆ ಕೊಡುತ್ತೇನೆ ಅಂತ ತಿಳಿಸಿದ್ದು ನಂತರ ಆತನಿಂದ ಪಡೆದ ಮುದ್ದೆಮಾಲುಗಳನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 17-20 ರಿಂದ 18-20 ಗಂಟೆಯವರೆಗೆ ಮಾಡಿಕೊಂಡು ನಂತರ ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 19-00 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯಾರಿಸಿ ಭೀಮಾಶಂಕರ ತಂದೆ ಕಲ್ಲಪ್ಪ ಸಿದ್ರಾ ಹಾಗು ಬುಕ್ಕಿ ಮಲ್ಲಣಗೌಡ ಸಾ|| ಶಹಾಪೂರ ಇವರ ವಿರುದ್ದ ಮುಂದಿನ ಕ್ರಮಕೈಕೊಳ್ಳಲು ವರಧಿ ಸಲ್ಲಿಸಿದ್ದು ಸದರಿ ವರಧಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 195/2022 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕ್ಯಕೊಂಡಿದ್ದು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ 323, 341, 504, 506 ಸಂ.34 ಐಪಿಸಿ:ಫಿರ್ಯಾಧಿಯು ಆರೋಪಿ ನಂ: 1ನೇದ್ದವನು ತನ್ನ ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂದ ಹೊಂದಿದ್ದಾನೆ ಅಂತಾ 2-3ಸಲ ತಕರಾರು ಮಾಡಿಕೊಂಡಿದ್ದು, ಅದೇ ಒಂದು ವೈಮನಸ್ಸು ಬೆಳೆದಿದ್ದು, ದಿನಾಂಕ:07/11/2022 ರಂದು ಫಿರ್ಯಾದಿಯು ತನ್ನ ಮೋಟಾರ್ ಸೈಕಲ್ ನಂ: ಕೆ-33, ಆರ್-5354 ನೇದ್ದನ್ನು ತೆಗೆದುಕೊಂಡು ತಮ್ಮೂರಿಗೆ ಹೋಗಲು ಹುಣಸಗಿ-ಕೆಂಭಾವಿ ರಸ್ತೆಯ ಬಾಜು ಅರಕೇರಾ(ಜೆ) ಸೀಮಾಂತರದ ಗುಂಡಲಗೇರಾ ಗ್ರಾಸ್ ದಾಟಿ ಹೊರಟಾಗ, ಆರೋಫಿ ನಂ:1ನೇದ್ದವನು ತನ್ನ ಮೋಟಾರ್ ಸೈಕಲ್ ಮೇಲೆ ಹಿಂದೆ ಆರೋಪಿ ನಂ:2 ನೇದ್ದವನಿಗೆ ಕೂಡಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲ್ಲಗೆ ಅಡ್ಡ ತಂದು ಡಿಕ್ಕಿ ಕೊಟ್ಟಿದ್ದು, ಫಿರ್ಯಾದಿಯು ಕೆಳಗೆ ಬಿದ್ದಿದ್ದು, ಆರೋಪಿತರು ಫಿರ್ಯಾದಿಗೆ ಹೊಡೆಯಬೇಕು ಅಂತಾ ಬೆನ್ನು ಹತ್ತಿದಾಗ ಫಿರ್ಯಾಧಿಯು ಅಲ್ಲಿಯೇ ಇದ್ದ ಹತ್ತಿ ಹೊಲದಲ್ಲಿ ಓಡಿ ಹೊಗಿ ತಪ್ಪಿಸಿಕೊಂಡಿದ್ದು, ಆರೋಪಿತನಾದ ಕೂಡ್ಲಿಗೆಪ್ಪ ಈತನಿಗೆ ಕಾಲಿಗೆ ಗಾಯವಾಗಿದ್ದು ಆತನಿಗೆ ಓಡಲು ಬರದ್ದರಿಂದ ಈ ಮಗ ಸೋಮ್ಯಾ ಎಲ್ಲಿಗೆ ಹೋಗುತ್ತಾನೆ ನೊಡೋಣ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಇವತ್ತ ನಮ್ಮ ಕೈಯಾಗ ಸಿಕ್ಕರೆ ಅವನಿಗೆ ಜೀವಂತ ಬಿಡುತ್ತಿರಲಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಾ ಕತ್ತಲಲ್ಲಿ ಹೋದ ಬಗ್ಗೆ ಅಪರಾಧ.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 161/2022, ಕಲಂ: 427, 504, ಸಂ.34 ಐ.ಪಿ.ಸಿ ಮತ್ತು 3(1)(ಡಿ),3(1)(), 3(1)(ತಿ),3(2)(ತ-ಚಿ) ಅಟ್ರಾಸಿಟಿ ಕಾಯ್ದೆ : ಇಂದು ದಿನಾಂಕ: 18-11-2022 ರಂದು ರಾತ್ರಿ 09-00 ಗಂಟೆಗೆ ಪಿಯರ್ಾಧಿದಾರನಾದ ಯಂಕಾರೆಡ್ಡಿ ತಂದೆ ಮಲ್ಲಪ್ಪ ಕಟಕಟಿ ವ|| 50 ವರ್ಷ ಜಾ|| ಪರಿಶಿಷ್ಟ ಜಾತಿ (ಬೇಡರು) ಉ|| ಕಿರಾಣಿ ಅಂಗಡಿ ಕೆಲಸ ಸಾ|| ಹೆಡಮಗಿಮದ್ರ ತಾ|| ಜಿ|| ಯಾದಗಿರಿ ಈತನು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೆನೆಂದರೆ ನಾನು 1) ಯಂಕಾರೆಡ್ಡಿ ತಂದೆ ಮಲ್ಲಪ್ಪ ಕಟಕಟಿ 2) ಶ್ರೀಮತಿ ಲಕ್ಷ್ಮೀ ಗಂಡ ಯಂಕಾರೆಡ್ಡಿ ಕಟಕಟಿ ಸಾ|| ಹೆಡಗಿಮದ್ರ ತಾ|| ಜಿ|| ಯಾದಗಿರಿ ಇದ್ದು ತಮ್ಮಲ್ಲಿ ವಿನಂತಿಸಿಕೊಳ್ಳುವದೇನೆಚಿದರೆ ನಮ್ಮ ಹೆಡಗಿಮದ್ರ ಗ್ರಾಮದಲ್ಲಿ ನಾವು ನಡೆಸುತ್ತಿರುವ ಕಿರಾಣಿ ಅಂಗಡಿಯನ್ನು ದಿನಾಂಕ: 17-11-2022 ರಂದು ರಾತ್ರಿ ಸುಟ್ಟು ಹಾಕಿ ದಿನಾಂಕ: 18-11-2022 ರಂದು ಮಧ್ಯಾಹ್ನ 03-30 ಕ್ಕೆ ಅಂಗಡಿಯ ಡಬ್ಬಿಯನ್ನು ಕೊತ್ತೊಗೆದು ಈ ಕೃತ್ಯ ಮಾಡಿದವರಾದ 1) ಶ್ರೀ ಬಸವರಾಜ ದೇವರು ಶಾಂತಶಿವಯೋಗಿ ಮಠ ಹೆಡಗಿಮದ್ರ ಮಠ @ ಶ್ರೀ ಷ|| ಬ್ರ|| ಶಾಂತಮಲ್ಲಿಕಾಜರ್ುನ ಪಂಡಿತರಾಧ್ಯ ಶಾಂತಶಿವಯೋಗಿ ಮಠ ಹೆಡಗಿಮದ್ರ 2) ಶಿವಪ್ಪ ತಂದೆ ಸಿದ್ದಪ್ಪ ಮಡಿವಾಳ 3) ಸುನಿಲ್ ತಂದೆ ಮಲ್ಲಪ್ಪ ಸಣ್ಣೆಪ್ಪನೋರ 4) ಶಿವು ತಂದೆ ಈರಪ್ಪ ಎಲ್ಲರು ಸಾ|| ಹೆಡಗಿಮದ್ರ ಇವರುಗಳೆಲ್ಲರು ಸೇರಿ ನೀವು ಬೇಡ ಜಾತಿಯವರು ಮಠದ ಆವರಣದಲ್ಲಿ ನಿಮ್ಮ ಅಂಗಡಿ ಇರಬಾರದು ಎಂದು ಜಾತಿ ಎತ್ತಿ ಕೀಳಾಗಿ ಮಾನಾತಾಡಿ ನನ್ನ ಡಬ್ಬಿಯನ್ನು ಈ ರೀತಿ ಸುಟ್ಟು ಹಾಕಿದ್ದು ಅದರಲ್ಲಿ ಸುಮಾರು 2 ಲಕ್ಷದ ಸಾಮಾಗ್ರಿಗಳು ಇರುತ್ತವೆ. ಈ ರೀತಿ ನಮ್ಮ ಮೇಲೆ ಹಳೆಯ ದ್ವೇಷದಿಂದ ನನ್ನ ಡಬ್ಬಿಯನ್ನು ಸುಟ್ಟು ಹಾಕಿ ಅಲ್ಲಿಂದ ತೆಗೆದು ಹಾಕಿದ್ದಲ್ಲದೆ ಸದರಿ ಮಠದಲ್ಲಿ ಒಬ್ಬ ಬೆಡ ಜಾತಿಯವನು ಇರಬಾರದೆಂಬ ಉದ್ದೇಶಕ್ಕೆ ಈ ಕೃತ್ಯ ಎಸಗಿ ನನ್ನ ಮೇಲೆ ಜಾತಿ ನಿಂದನೆ ಮಾಡಿದ್ದಲ್ಲದೇ ಅಂಗಡಿ ಸುಟ್ಟು ಹಾಕಿ ನನಗೆ ಅನ್ಯಾಯ ಮಾಡಿರುತ್ತಾರೆ, ಆದುದ್ದರಿಂದ ಮೇಲ್ಕಂಡವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿ ಮತ್ತು ನನ್ನ ಅಂಗಡಿಯನ್ನು ಸುಟ್ಟು ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ & ರಕ್ಷಣೆ ಒದಗಿಸಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇನೆ.

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 150/2022 ಕಲಂ. 143,147,323,354, 504, 506 ಸಂಗಡ 149 ಐಪಿಸಿ ಮತ್ತು ಕಲಂ. 3(1)(ಆರ್), 3(1)(ಎಸ್), 3(2)(ವಿ-ಎ), ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989: ಇಂದು ದಿಃ 18/11/2022 ರಂದು 7-00 ಪಿ.ಎಮ್ ಕ್ಕೆ ಶ್ರೀಮತಿ ಅಯ್ಯಮ್ಮಗಂಡಚಂದಪ್ಪದೊರಿ ಸಾ: ಹಾಲಬಾವಿ ಇವರುಠಾಣೆಗೆ ಹಾಜರಾಗಿಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನಮ್ಮೂರಲ್ಲಿ ಭೀಮಣ್ಣತಂದೆಖಂಡಪ್ಪದೇವಿಕೇರಿಜಾತಿ: ಕುರುಬರಇವರ ಮನೆಯ ಹತ್ತಿರ ಸಾರ್ವಜನಿಕ ನೀರಿನ ನಳ ಇದ್ದು, ನಾವೆಲ್ಲರೂ ಗೃಹ ಬಳಕೆಗಾಗಿ ಅದೇ ನಳದಿಂದ ದಿನಾಲು ನೀರುತುಂಬುತ್ತೇವೆ. ಆದರೆಇತ್ತಿಚಿಗೆಒಂದು ವಾರದಿಂದ ನೀರಿನ ನಳದ ಸಮೀಪದಲ್ಲಿ ಮನೆ ಇರುವ ಭೀಮಣ್ಣದೇವಿಕೇರಿಇತನು ನಮ್ಮ ಬೇಡರಜನಾಂಗದವರಿಗೆ ನಮ್ಮ ಮನೆಯ ಹತ್ತಿರದ ನಳಕ್ಕೆ ಯಾಕ ಬರುತ್ತೀರಿ, ಬರಬ್ಯಾಡ್ರಿಅಂತ ಹೇಳುತ್ತ ಬಂದಿದ್ದು, ಆದರೂ ನಮ್ಮಜನಾಂಗದವರುಇದು ಸಾರ್ವಜನಿಕ ನಳ ಇದೆಅಂತ ಹೇಳಿ ಅವರ ಮಾತನ್ನು ಲೆಕ್ಕಿಸದೇಅಲ್ಲೆತುಂಬುತ್ತ ಬಂದಿರುತ್ತೇವೆ. ಅದರಂತೆ ದಿನಾಂಕಃ 16-11-2020 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ನಾನು ಕೊಡ ಹಿಡಿದುಕೊಂಡು ನೀರುತುಂಬುವ ಸಲುವಾಗಿ ಭೀಮಣ್ಣದೇವಿಕೇರಿಇವರ ಮನೆಯ ಹತ್ತಿರಇರುವ ನಳಕ್ಕೆ ಹೋದಾಗ ನನ್ನನ್ನು ನೋಡಿ ಲೇ ಬ್ಯಾಡರ ಸಣ್ಣಜಾತಿಯ ಸೂಳೆ, ಇಲ್ಲಿಗೆ ನೀರಿಗೆ ಬರಬ್ಯಾಡ್ರಿಅಂತ ಎಷ್ಟು ಸಲ ಹೇಳಬೇಕು, ಇಲ್ಲೇನು ನನ್ನ ಹತ್ತಿರ ಮಲಗುವದಕ್ಕೆ ಬಂದೇನು, ನಿಮ್ಮವ್ವನರಂಡಿಎಂದುಜಾತಿ ನಿಂದನೆ ಮಾಡಿಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗ, ನಾನು ಆತನಿಗೆ ಏಕೆ ಬೈಯ್ಯುತ್ತೀದ್ದಿ ನಾನೇನು ಮಾಡಿನಿ ಅಂತ ಕೇಳಿದ್ದಕ್ಕೆ ಸೂಳೇರೆ ನಿಮಗೆ ನಮ್ಮ ಮನೆಯ ಹತ್ತಿರ ನೀರಿಗೆ ಬರಬ್ಯಾಡ್ರಿಅಂತ ಹೇಳಿನಿ, ಆದರೂ ಬಿಡುತ್ತೀಲ್ಲಾ, ನಿಮ್ಮದು ಬಹಳ ಆಗ್ಯಾದ ಬೇಡರ ಸೂಳೇರೆ, ನನ್ನ ನಾಲ್ಕು ಎಕರೆಜಮೀನು ಹೋಗಲಿ, ಹಾಲಬಾವಿಯಲ್ಲಿಇರುವಎಲ್ಲಾ ಬೇಡರ ಸೂಳಿಯರಿಗೆ ಹಡುತ್ತೇನೆಎಂದು ಮನಬಂದಂತೆಜಾತಿ ನಿಂದನೆ ಮಾಡಿ ಬೈಯ್ಯುತ್ತೀರುವದನ್ನು ಕೇಳಿ ನಮ್ಮಜನಾಂಗದ ಪರಮಮ್ಮಗಂಡ ಮಲ್ಲಯ್ಯಗೌಡ ಮಾಲಿಪಾಟೀಲ್, ದೇವಮ್ಮಗಂಡ ಮಲ್ಲಣ್ಣ ಬಿರೇದಾರ, ನೀಲಮ್ಮಗಂಡ ಬಸನಗೌಡ ಮಾಲಿಪಾಟೀಲ್, ಪಾರ್ವತಿಗಂಡ ಬಸನಗೌಡದೊರಿಇವರೆಲ್ಲರೂ ನಳದ ಹತ್ತಿರ ಬಂದು, ಭೀಮಣ್ಣನಿಗೆಯಾಕಪ್ಪ ನಮ್ಮಜಾತಿಯ ಹೆಣ್ಣುಮಕ್ಕಳ ಏನ ಮ್ಯಾಡಾರ, ಜಾತಿಎತ್ತಿಯಾಕೆ ಬೈಯ್ಯುತ್ತೀ, ನಿನಗೆ ಯಾರಾದರೂತೊಂದರೆಕೊಟ್ಟರೆಒಬ್ಬರಿಗೆ ಹೇಳು, ಊರಲ್ಲಿರುವಎಲ್ಲಾ ಬೇಡರ ಹೆಣ್ಣುಮಕ್ಕಳಿಗೆ ಬೈದರೆ ನಾವು ಸುಮ್ಮನಿರಲ್ಲಾ ನೋಡುಅಂತ ಹೇಳಿದ್ದಕ್ಕೆ 1) ಭೀಮಣ್ಣತಂದೆಖಂಡಪ್ಪದೇವಿಕೇರಿಇತನುತಮ್ಮಜನಾಂಗದದವರಿಗೆಇವತ್ತು ಬೇಡರಎಲ್ಲಾ ಸೂಳೆಯರು ಕೂಡಿಬಂದಾರ,ಬರ್ರಿಇವತ್ತುನೊಡೇ ಬಿಡೋಣಾಅಂತ ಹೇಳಿದ್ದರಿಂದ ಒಮ್ಮೆಲೆ ನಮ್ಮೂರಿನಕುರುಬ ಜನಾಂಗದ 2) ಮಲ್ಲಪ್ಪತಂದೆಅಪ್ಪಯ್ಯ ಬಂಡಿ 3) ಬೀರಪ್ಪತಂದೆಅಪ್ಪಯ್ಯ ಬಂಡಿ 4) ಭೀಮಪ್ಪತಂದೆ ಮಲ್ಲಪ್ಪ ಬಡ್ಡಿ 5) ಚನ್ನಪ್ಪತಂದೆ ಸೋಮರಾಯಐದಬಾವಿ 6) ಚನ್ನಬಸಪ್ಪತಂದೆಯಂಕಪ್ಪ ಬಂಡಿ 7) ಬಸವರಾಜತಂದೆ ಪರಮಣ್ಣ ಬನ್ನಿಗಿಡ 8) ಧರ್ಮಣ್ಣತಂದೆ ಭೀಮಪ್ಪ ಬಂಡಿ 9) ಬಸವರಾಜತಂದೆ ಮಹಾದೇವಪ್ಪ ಬಂಡಿ 10) ಯಂಕಪ್ಪತಂದೆದೇವಿಂದ್ರಪ್ಪ ಬಂಡಿ 11) ಅಯ್ಯಪ್ಪತಂದೆ ಮಲ್ಲಪ್ಪ ಬಡ್ಡಿ 12) ರಾಚಮ್ಮಗಂಡ ಭೀಮಣ್ಣದೇವಿಕೇರಿ 13) ನಿಂಗಮ್ಮಗಂಡ ಮಲ್ಲಪ್ಪ ಬಡ್ಡಿ 14) ನಾಗಮ್ಮಗಂಡ ಬೀರಪ್ಪ ಬಡ್ಡಿಎಲ್ಲರೂಒಮ್ಮೆಲೆಗುಂಪುಕಟ್ಟಿಕೊಂಡು ಬಂದುಅವರಲ್ಲಿ ಭೀಮಣ್ಣದೇವಿಕೇರಿಇತನು ಲೇ ಬೇಡರ ಸೂಳೇರೆ ಎಲ್ಲರ ಬಂದ್ ಏನ ಕಿತ್ತಕೋತೀರಿ, ನಮ್ಮವರು ಬಂದಾರ ಈಗ ನೋಡ್ರಿ ನಿಮ್ಮ ಫಜಿತಿಅಂತ ಹೇಳಿ, ತಮ್ಮಜನಾಂಗದವರಿಗೆ ಈ ಎಲ್ಲಾ ಸೂಳೆಯರಿಗೆ ಸೀರೆ ಬಿಚ್ಚಿ ಹೊಡೆರಿ, ಮುಂದೆ ಬಂದಿದ್ದಲ್ಲಾ ನಾನು ನೋಡಿಕೊಳ್ಳುತ್ತೇನೆ ಅಂದಾಗ ಮಲ್ಲಪ್ಪ ಬಂಡಿಇತನು ಪರಮಮ್ಮಗಂಡ ಮಲ್ಲಯ್ಯಗೌಡ ಇವಳ ತಲೆಯಕುದುಲು ಹಿಡಿದುಜಗ್ಗಾಡಿಕೈಯಿಂದತಲೆಗೆ ಹೊಡೆದಾಗ, ಬೀರಪ್ಪ ಬಂಡಿಇತನು ಪರಮಮ್ಮ ಇವಳೀಗೆ ಕೈಯಿಂದ ಬಲಗೈ ಮೇಲೆ, ಟೊಂಕದ ಮೇಲೆ ಹೊಡೆದಿರುತ್ತಾನೆ. ಭೀಮಪ್ಪ ಬಡ್ಡಿಇತನು ಪರಮಮ್ಮ ಇವಳ ಬೆನ್ನಿಗೆಕೈಯಿಂದಗುದ್ದಿರುತ್ತಾನೆ. ಚನ್ನಪ್ಪಐದಬಾವಿ, ಚನ್ನಬಸಪ್ಪ ಬಂಡಿ, ಬಸವರಾಜ ಬನ್ನಿಗಿಡ ಮೂವರುಕೂಡಿದೇವಮ್ಮಗಂಡ ಮಲ್ಲಣ್ಣ ಬಿರೇದಾರ ಇವಳಿಗೆ ಕೈಯಿಂದ ಮುಖದ ಮೇಲೆ, ಎದೆಗೆ, ಎಡಗೈ ಮೇಲೆ ಹೊಡೆಯುತ್ತಿದ್ದಾಗಅವರಿಬ್ಬರೂಚೀರಾಡುವದನ್ನು ಕೇಳಿ ನಾವೆಲ್ಲ ಹೆಣ್ಣು ಮಕ್ಕಳು ನಮ್ಮ ಮನೆಯಕಡೆಗೆ ಓಡಿ ಹೊರಟಿದ್ದಾಗಧರ್ಮಣ್ಣ, ಬಸವರಾಜ, ಯಂಕಪ್ಪ, ಅಯ್ಯಪ್ಪ, ರಾಚಮ್ಮ, ನಿಂಗಮ್ಮ, ನಾಗಮ್ಮಇವರೆಲ್ಲರೂ ಲೇ ಬೇಡರ ಸಣ್ಣಜಾತಿ ಸೂಳೆರೆ, ನಿಂದರಿಇವತ್ತು ನಿಮ್ಮ ಸೊಕ್ಕು ಮುರಿಯುತ್ತೇವೆಎಂದುಚೀರಾಡುತ್ತ ನಮ್ಮ ಹಿಂದೆ ಓಡಿ ಬರುತ್ತಿದ್ದಾಗ ನಾವೆಲ್ಲರೂ ನಮ್ಮ ಮನೆಯಲ್ಲಿ ಹೋಗಿ ಬಾಗಿಲು ಮುಚ್ಚಿಕೊಂಡಾಗಅವರು ಮರಳಿ ಹೋಗಿರುತ್ತಾರೆ. ಆಗ ನಮ್ಮೂರಿನ ಬಸವರಾಜಗುರುವಿನ, ಉಸ್ಮಾನ್ ನದಾಫ್ ಹಾಗು ಮಲ್ಲಪ್ಪ ನಾಯ್ಕೋಡಿ ಮೂವರು ಹೋಗಿ ಪರಮಮ್ಮ ಹಾಗು ದೇವಮ್ಮಇಬ್ಬರಿಗೆ ಬಿಡಿಸಿದ್ದು, ಆಗ ಅವರೆಲ್ಲರೂಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರಅಂದೇ ಪರಮಮ್ಮ ಹಾಗು ದೇವಮ್ಮಇಬ್ಬರಿಗೆಅವರ ಮನೆಯವರು ಸುರಪೂರ ಸಕರ್ಾರಿಆಸ್ಪತ್ರೆಗೆ ಹೋಗಿ ಕರೆದುಕೊಂಡು ಬಂದು ಸೇರಿಕೆ ಮಾಡಿಚಿಕಿತ್ಸೆ ಕೊಡಿಸಿರುತ್ತಾರೆ. ಇಂದು ನಾವು ಊರಲ್ಲಿ ನಮ್ಮ ಸಮಾಜದ ಹಿರಿಯರ ಹತ್ತಿರಅವರ ಮೇಲೆ ಕೇಸ್ ಮಾಡುವ ಬಗ್ಗೆ ಚಚರ್ೆ ಮಾಡಿಕೊಂಡುಇಂದುತಡವಾಗಿಠಾಣೆಗೆ ಬಂದಿರುತ್ತೇನೆ. ಕಾರಣ ನಮಗೆ ಜಾತಿನಿಂದನೆ ಮಾಡಿಅವಾಚ್ಯ ಶಬ್ದಗಳಿಂದ ಬೈದುಇಬ್ಬರೂ ಹೆಣ್ಣುಮಕ್ಕಳಿಗೆ ಕೈಯಿಂದ ಹೊಡೆಬಡೆ ಮಾಡಿಜೀವ ಬೆದರಿಕೆ ಹಾಕಿರುವ 14 ಜನರ ಮೇಲೆ ಸೂಕ್ತ ಕಾನೂನು ಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 150/2022 ಕಲಂ. 143, 147, 323, 354, 504, 506 ಸಂಗಡ 149 ಐಪಿಸಿ ಮತ್ತು ಕಲಂ. 3(1)(ಆರ್), 3(1)(ಎಸ್), 3(2)(ವಿ-ಎ), ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

Last Updated: 19-11-2022 10:37 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080