ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-12-2022


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 98/2022 ಕಲಂ.498(ಎ), 304(ಬಿ) ಸಂಗಡ 34 ಐಪಿಸಿ & 3, 4 ಡಿಪಿ ಯಾಕ್ಟ್: ಮೃತಳಿಗೆ ಆರೋಪಿತರೆಲ್ಲರೂ ಮದುವೆಯಾದ ಸ್ವಲ್ಪ ದಿನದವರೆಗೆ ಸರಿಯಾಗಿ ಇಟ್ಟುಕೊಂಡು ನಂತರ ಮದುವೆ ಕಾಲಕ್ಕೆ ಕೊಟ್ಟ ವರದಕ್ಷಿಣೆ 2 1/2 ತೊಲೆ ಬಂಗಾರ, 51,000/- ನಗದು ಹಣ ಹಾಗೂ ಗೃಹ ಉಪಯೋಗಿ ವಸ್ತುಗಳ ಕೊಟ್ಟಿದ್ದು, ನಂತರ ತವರು ಮನೆಯಿಂದ ಇನ್ನೂ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಕಿರುಕುಳ ನೀಡುತ್ತಾ ಬಂದಿದ್ದು, ದಿನಾಂಕ:16/12/2022 ರಂದು ಮೃತಳು ತನ್ನ ತವರು ಮನೆಯಿಂದ ತನ್ನ ಗಂಡನೊಂದಿಗೆ ಗಂಡನ ಮನೆಗೆ ಬಂದಾಗ ದಿನಾಂಕ:17/12/2022 ರಂದು ಆರೋಪಿತರೆಲ್ಲರೂ ಸೇರಿ ನೀನು ಇಷ್ಟು ದಿನ ತವರುಮನೆಯಲ್ಲಿದ್ದು, ಬರುವಾಗ ತವರು ಮನೆಯಿಂದ ವರದಕ್ಷೀಣೆ ತಂದಿರುವದಿಲ್ಲ, ನಮ್ಮ ಹುಡುಗನಿಗೆ ನಿನಗಿಂತ ಒಳ್ಳೆಯ ಹುಡುಗಿ ಸಿಗುತ್ತಿದ್ದಳು ಅಂತಾ ವರದಕ್ಷಿಣಿ ಸಲುವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದರಿಂದ ಮೃತಳು ದಿನಾಂಕ:18/12/2022 ರಂದು ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟ ಬಗ್ಗೆ ಅಪರಾಧ


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ:175/2022 ಕಲಂ: 454, 380 ಐಪಿಸಿ:ದಿನಾಂಕಃ 17/12/2022 ರಂದು 11.30 ಎ.ಎಮ ದಿಂದ 2 ಪಿ.ಎಮ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಗುಂಜನೂರ ಗ್ರಾಮದಲ್ಲಿರುವ ಫಿಯರ್ಾದಿಯ ಮನೆಯ ಬಾಗಿಲಗೆ ಹಾಕಿದ ಕೀಲಿಯನ್ನು ಮುರಿದು, ಮನೆಯೊಳಗೆ ಪ್ರವೇಶ ಮಾಡಿ ಕಬ್ಬಿಣದ ಅಲಮಾರಿಯಲ್ಲಿ ಸಣ್ಣದೊಂದು ಪೆಟ್ಟಿಗೆಯಲ್ಲಿಟ್ಟಿದ್ದ 1] 25 ಗ್ರಾಂ ದ ಬಂಗಾರದ ಬ್ರಾಸಲೆಟ್ ಅಂ.ಕಿ. 1,25,000/- ರೂ, 2] ತಲಾ 10 ಗ್ರಾಂ ದ 2 ಬಂಗಾರದ ಉಂಗುರಗಳು ಅಂ.ಕಿ. 1,00,000/- ರೂ, 3] ತಲಾ 5 ಗ್ರಾಂ ದ 4 ಬಂಗಾರದ ಉಂಗುರಗಳು ಅಂ.ಕಿ. 1,00,000/- ರೂ ಹೀಗೆ ಒಟ್ಟು 3,25,000/- ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ ಠಾಣೆ ಗುನ್ನೆ ನಂ. 175/2022 ಕಲಂ. 454, 380 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 132/2022 ಕಲಂ: 341, 323, 504, 506 ಸಂ. 34 ಐಪಿಸಿ: ಇಂದು ದಿನಾಂಕ; 18/12/2022 ರಂದು 6-30 ಪಿಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀ ಸಂದೀಪಕುಮಾರ ತಂದೆ ಮೀಠಾಲಾಲ ದೋಖಾ, ವಯಸ್ಸು: 37 ವರ್ಷ, ಉದ್ಯೋಗ: ವ್ಯಾಪಾರ, ಸಾಕಿನ: ಕಾಜಗಾರವಾಡಿ ಯಾದಗಿರಿ, ತಾ:ಜಿ:ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಮ್ಮ ಕುಟುಂಬಕ್ಕೆ ಸೇರಿದ ಅಂದರೆ ನನ್ನ ತಂದೆಯ ಅಣ್ಣ-ತಮ್ಮಂದಿರ ಮಧ್ಯೆ ಆಸ್ತಿಯ ವಿಷಯದಲ್ಲಿ ಬಹಳ ವರ್ಷಗಳಿಂದ ವೈಮನಸ್ಸು ಇದೆ. ಈ ವಿಷಯಕ್ಕೆ ಸಂಬಂಧಿದಂತೆ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು ಅವುಗಳು ಇನ್ನು ಚಾಲ್ತಿಯಲ್ಲಿ ಇರುತ್ತವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ:30-11-2022 ರಂದು ಸಮಯ ಸಾಯಂಕಾಲ 5 ರಿಂದ 6 ಗಂಟೆಯ ಒಳಗಾಗಿ ನಾನು ಮತ್ತು ನನ್ನ ಅಣ್ಣನಾದ ವೇದಾಂತಕುಮಾರ ತಂದೆ ಮೀಠಾಲಾಲ ದೋಖಾ ಇಬ್ಬರೂ ಕೂಡಿಕೊಂಡು ನಮ್ಮ ವೈಯಕ್ತಿಕ ಕೆಲಸಕ್ಕೆ ಗಾಂಧಿಚೌಕದ ಬಜಾರದಲ್ಲಿ ಅಂಬಿಕಾ ಕ್ಲಾಥಸ್ಟೋರ ಹತ್ತಿರ ಬರುತ್ತಿರುವಾಗ, ಅದೇ ಸಮಯದಲ್ಲಿ 1) ಮಹಾವೀರಚಂದ ತಂದೆ ಪೂರಣಮಲ್ (ದತ್ತು ತಂದೆ ಕಿಶನಲಾಲಾ) ಸಾ: ವೈದ್ಯರಾಮನ ಸ್ಟ್ರೀಟ ಚನೈ, 2) ಧನರಾಜ ತಂದೆ ಪೂರಣಮಲ್ ಸಾ: ಕಲ್ಲೂರ ಕಾಲೋನಿ ರಾಯಚೂರ 3) ಆರ್. ಸರವಣನ್ ತಂದೆ ಎನ್.ವಿ. ರಾಮಮೂತರ್ಿ ಸಾ: ಮಡಿಪಾಕಂ ಚನೈ, 4) ಅಭಯಕುಮಾರ ತಂದೆ ಶ್ರೇಣಿಕರಾಜ ಸಾ: ವೈದ್ಯರಾಮನ ಸ್ಟ್ರೀಟ ಚನೈ, ಇವರು ತಮ್ಮ ವಾಹನ ಕಾರ ಸಂ.ಕೆಎ-36 ಎನ್-9829, ನೀಲಿ ಬಣ್ಣದ್ದು ನೇದ್ದನ್ನು ತೆಗೆದುಕೊಂಡು ಬಂದು ನಮಗೆ ತಡೆದು ನಿಲ್ಲಿಸಿ ಹಳೆಯ ದ್ವೇಷದಿಂದ ಅವಾಚ್ಯ ಶಬ್ಧಗಳಿಂದ ಬೋಸೂಡಿಕೆ, ಮಾದರ ಚೌದ, ರಂಡಿ ಮಕ್ಕಳೇ ಹರಾಮಿ ಅಂತಾ ಎಲ್ಲರೂ ಬೈಯ್ದರು ಆ ಸಮಯದಲ್ಲಿ ನಾವು ನಮಗೆ ಏಕೆ ಬೈಯುತ್ತೀರಿ ಅಂತಾ ಪ್ರಶ್ನಿಸಿದಕ್ಕೆ ಎದುರು ಮಾತನಾಡುತ್ತಿರು ಮಕ್ಕಳೆ ಇವತ್ತು ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಮಹಾವೀರಚಂದ ಮತ್ತು ಧನರಾಜ ಇವರು ನನಗೆ ತಡೆದು ನಿಲ್ಲಿಸಿ ಹಿಡಿದುಕೊಂಡಾಗ ಆರ್. ಸರವಣನ್, ಅಭಯಕುಮಾರ ಇವರು ಕೈಯಿಂದ ಹೊಟ್ಟೆ ಎದೆಗೆ ಹೊಡೆದರು ಆಗ ಅಣ್ಣ ವೇದಾಂತಕುಮಾರ ಈತನು ಯಾಕೆ ಹೊಡೆಯುತ್ತಿರಿ ಅಂತ ಜಗಳ ಬಿಡಿಸಲು ಬಂದಾಗ ಅವನಿಗೆ ಆರ್. ಸರವಣನ್, ಅಭಯಕುಮಾರ ಇವರು ಎದೆಯ ಮೇಲಿನ ಅಂಗಿ ಹಿಡಿದು ನಿಲ್ಲಿಸಿದಾಗ ನನಗೆ ಹಿಡಿದುಕೊಂಡ ಮಹಾವೀರಚಂದ ಮತ್ತು ಧನರಾಜ ಇವರು ನನ್ನನ್ನು ಬಿಟ್ಟು ನಮ್ಮ ಅಣ್ಣ ವೇದಾಂತಕುಮಾರ ಈತನ ಹೊಟ್ಟೆಗೆ ಎದೆಗೆ ಕೈಯಿಂದ ಹೊಡೆದು ಮತ್ತು ಕಾಲಿನಿಂದ ಒದ್ದಿರುತ್ತಾರೆ. ಜಗಳದ ಸಮಯದಲ್ಲಿ ಅಲ್ಲೆ ಇದ್ದ 1) ಮೋಹ್ಮದ ಸಲೀಮ ತಂದೆ ಮೋಹ್ಮದ ಗಫಾರ 2) ರಾಮೇಶ್ವರ ಮಾಳಿ ತಂದೆ ವೀರಂಜೀ ಮಾಳಿ, 3) ಮುಬಾರಕ ಅಹ್ಮದ ತಂದೆ ಮಹ್ಮದ ಸರದಾರ ಇವರು ಬಂದು ಜಗಳ ನೋಡಿ ಬಿಡಿಸಿರುತ್ತಾರೆ. ಜಗಳದಲ್ಲಿ ನಮಗೆ ಅಂತಹ ಯಾವುದೇ ಗಾಯ ಆಗದೇ ಇರುವುದರಿಂದ ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲ ಮತ್ತು ತೊರಿಸಿಕೊಳ್ಳುವುದಿಲ್ಲ. ಈ ವಿಷಯದ ಬಗ್ಗೆ ನಮ್ಮ ಕುಟುಂಬದ ಸಂಗಡ ಚಚರ್ಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ನನಗೆ ಮತ್ತು ನನ್ನ ಅಣ್ಣನಿಗೆ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿಸಿಕೊಳ್ಳುತ್ತೆನೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.132/2022 ಕಲಂ.341, 323, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 139/2022 ಕಲಂ: 87 ಕೆ.ಪಿ ಆಕ್ಟ್ 1963: ಇಂದು ದಿನಾಂಕ:18/12/2022 ರಂದು 5-30 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಇಸ್ಪೀಟ್ ದಾಳಿ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ಇಂದು ದಿನಾಂಕ:18/12/2022 ರಂದು 2-30 ಪಿಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರಾದ 1) ತಾಯಪ್ಪ ಹೆಚ್.ಸಿ 79, 2) ಮಲ್ಲಪ್ಪ ಹೆಚ್.ಸಿ 72, 3) ಮಹೇಂದ್ರ ಪಿಸಿ 254 ಜೀಪ ಚಾಲಕ 4) ಲಾಲ ಅಹ್ಮದ ಪಿಸಿ 360, 5) ಸಾಬರೆಡ್ಡಿ ಪಿಸಿ 290 ಮತ್ತು 6) ಮಲ್ಲಿನಾಥ ಪಿಸಿ 222 ರವರೆಲ್ಲರೂ ಠಾಣೆಯಲ್ಲಿದ್ದಾಗ ನನಗೆ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಗುಂಡಳ್ಳಿ ಸೀಮಾಂತರದ ಹೊರ ವಲಯದಲ್ಲಿರುವ ಕೆರೆ ಮೇಲ್ಗಡೆ ಇರುವ ಸರಕಾರಿ ಗೈರಾಣ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ತಾಯಪ್ಪ ಹೆಚ್.ಸಿ 79 ರವರ ಮುಖಾಂತರ 2-40 ಪಿಎಮ್ ಕ್ಕೆ ಇಬ್ಬರೂ ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಇಸ್ಪೀಟ ಜೂಜಾಟ ದಾಳಿ ವಿಷಯ ತಿಳಿಸಿ, ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕೂಡಿಸಿಕೊಂಡು 3 ಪಿಎಮ್ ಕ್ಕೆ ವಡಗೇರಾ ಪೊಲೀಸ್ ಠಾಣೆಯಿಂದ ಹೊರಟು 3-30 ಪಿಎಮ್ ಕ್ಕೆ ಗುಂಡಳ್ಳಿ ಸೀಮಾಂತರದ ಹೊರ ವಲಯದಲ್ಲಿರುವ ಊರ ಕೆರೆ ಮೇಲ್ಗಡೆ ಸರಕಾರಿ ಗೈರಾಣದಲ್ಲಿರುವ ಜಾಲಿ ಕಂಟಿ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಸದರಿ ಜಾಲಿಗಿಡಗಳನ್ನು ಮರೆಯಾಗಿ ನಿಂತು ನೋಡಲಾಗಿ ಸದರಿ ಜಾಲಿಗಿಡಗಳ ಹಿಂದುಗಡೆ ಖಾಲಿ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎನ್ನುವ ಇಸ್ಪಿಟ್ ಜೂಜಾಟವನ್ನು ಹಣ ಪಣಕ್ಕಿಟ್ಟು ಆಡುತ್ತಿದ್ದರು. ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು 3-40 ಪಿಎಮ್ ಕ್ಕೆ ಒಮ್ಮೆಲೆ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದವರನ್ನು ವಶಕ್ಕೆ ಪಡೆದುಕೊಂಡು ಅವರಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು ಮತ್ತು ವಿಳಾಸ ಹೇಳಿದ್ದೇನಂದರೆ 1) ಮರಲಿಂಗಪ್ಪ ತಂದೆ ಈರಪ್ಪ ಕುದುರಿ, ವ:35, ಜಾ:ಹೊಲೆಯ, ಉ:ಒಕ್ಕಲುತನ ಸಾ:ದೋರನಹಳ್ಳಿ ಅಂತಾ ಹೇಳಿದ್ದು ಸದರಿಯವನು ತಾನು ಪಣಕ್ಕೆ ಇಟ್ಟ ನಗದು ಹಣ 1170/- ರೂ ಮತ್ತು 21 ಇಸ್ಪೀಟ್ ಎಲೆಗಳು ತನ್ನ ಕೈಯಲ್ಲಿ ಇದ್ದದ್ದನ್ನು ಹಾಜರಪಡಿಸಿದನು. 2) ಶಿವಪ್ಪ ತಂದೆ ಮಲ್ಲಪ್ಪ ಕಸನ, ವ:40, ಜಾ:ಹೊಲೆಯ, ಉ:ಒಕ್ಕಲುತನ ಸಾ:ದೋರನಹಳ್ಳಿ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1490/- ರೂ, ಹಾಜರಪಡಿಸಿದನು. 3) ನಬಿ ತಂದೆ ಖಾಜಾಪೀರ ಹಳೆಕಟ್ಟೆ, ವ:30, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಕುರುಕುಂದಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1350/- ರೂ, ಹಾಜರಪಡಿಸಿದನು. 4) ಹೊನಕರೆಪ್ಪ ತಂದೆ ಹಣಮಂತ ಸಗರ, ವ:35, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 790/- ರೂ, ಹಾಜರಪಡಿಸಿದನು. 5) ಶಾರುಖಾನ ತಂದೆ ಅಬ್ದುಲ್ ಖದೀರ ಗೋಲ್ಖಂಡಿ, ವ:22, ಜಾ:ಮುಸ್ಲಿಂ, ಉ:ಕೂಲಿ ಸಾ:ನಾಯ್ಕಲ್ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1330/- ರೂ, ಹಾಜರಪಡಿಸಿದನು. 6) ವಿಜಯಕುಮಾರ ತಂದೆ ಭೀಮರಾಯ ಉಳ್ಳೆಸೂಗೂರು, ವ:30, ಜಾ:ಉಪ್ಪಾರ, ಉ:ಕೂಲಿ ಸಾ:ಖಾನಾಪೂರ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1210/- ರೂ, ಹಾಜರಪಡಿಸಿದನು. 7) ಅಬ್ಬಾಸ ಅಲಿ ತಂದೆ ಖಾಜಾಹುಸೇನ ಹೊಸಳ್ಳಿ, ವ:28, ಜಾ:ಮುಸ್ಲಿಂ, ಉ:ವ್ಯಾಪಾರ ಸಾ:ನಾಯ್ಕಲ್ ತಾ:ವಡಗೇರಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1080/- ರೂ, ಹಾಜರಪಡಿಸಿದನು. 8) ಬಸಪ್ಪ ತಂದೆ ಭೀಮಪ್ಪ ಜಂಭೆ, ವ:42, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಕುರುಕುಂದಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 840/- ರೂ, ಹಾಜರಪಡಿಸಿದನು. ಜೂಜಾಟದ ಸ್ಥಳದಲ್ಲಿ ಎಲ್ಲರ ಮಧ್ಯೆ 31 ಇಸ್ಪಿಟ್ ಎಲೆಗಳು ಮತ್ತು 1240/- ರೂ. ಹೀಗೆ ಒಟ್ಟು 10,500/- ರೂ. ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ದೊರೆತ್ತಿದ್ದು, ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆ ಚಿಟಿಯನ್ನು ಅಂಟಿಸಿ ಜಪ್ತಿ ಪಡಿಸಿಕೊಂಡೆನು. ಸದರಿ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ ಸಲ್ಲಿಸುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 139/2022 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 211/2022 ಕಲಂ 379 ಐಪಿಸಿ: ಇಂದು ದಿನಾಂಕ: 18/12/2022 ರಂದು ಸಾಯಂಕಾಲ: 5-30 ಪಿ.ಎಂ ಕ್ಕೆ ಠಾಣೆಗೆ ಪಿರ್ಯಾದಿದಾರರಾದ ರಾಘವೇಂದ್ರ ತಂದೆ ಪರಶುರಾಮ ಶಾಗೋಟಿ ವಯ: 35 ಉ: ವಧರ್ಾ ಸೋಲಾರ (ಮಹಾರಾಷ್ಟ್ರ) ಪ್ರೈವೇಟ ಲಿಮಿಟೆಡ್ ಕಂಪನಿಯಲ್ಲಿ ಅಸೋಸಿಯೆಟ್ ಮ್ಯಾನೇಜರ ಜಾ: ಕೊರಮ(ಎಸ್ಸಿ) ಸಾ: ವಿರೇಶ್ವರ ನಗರ ಗದಗ ಹಾ: ವ: ಎನ್ ಜಿ ಓ ಕಾಲೋನಿ ಶಹಾಪೂರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೇಂದರೆ. ನಾನು ಈಗ ಸುಮಾರು 06 ತಿಂಗಳುಗಳಿಂದ ವಧರ್ಾ ಸೋಲಾರ (ಮಹಾರಾಷ್ಟ್ರ) ಪ್ರೈವೇಟ ಲಿಮಿಟೆಡ್ ಕಂಪನಿಯಲ್ಲಿ ಅಸೋಸಿಯೆಟ್ ಮ್ಯಾನೇಜರ ಅಂತ ಕೆಲಸ ಮಾಡಿಕೊಂಡಿರುತ್ತೆನೆ. ಹೀಗಿದ್ದು ನಮ್ಮ ಕಂಪನಿಯು ಸುಮಾರು 240 ಎಕರೆ ಜಮೀನಿನಲ್ಲಿ ಸೋಲಾರ ಪ್ಲೇಟ ಅಳವಡಿಸಿದ್ದು ಸದರಿ ಜಮೀನಿನ ಸುತ್ತ ತಂತಿ ಬೇಲಿ ಹಾಕಿಕೊಂಡಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ: 16/12/2022 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ಕಂಪನಿಯ ಒಳಗಡೆ ಬಂದು ನಾವು ನಮ್ಮ ಸೋಲಾರ ಪ್ಲೇಟಗಳಿಗೆ ಅಳವಡಿಸಿದ ಡಿ.ಸಿ.ಕೇಬಲ್ ಅಂದಾಜು 1850 ಮೀಟರನಷ್ಟು ಅಂದಾಜು ಕಿಮ್ಮತ್ತ 25,100-00 ರೂಪಾಯಿ ಬೆಲೆ ಬಾಳುವ ಡಿ.ಸಿ ಕೇಬಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದಾರೆ. ಅಂತ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಎಲೆಕ್ಟ್ರಿಕಲ್ ಟೆಕ್ನಿಸಿಯನ ಆದ ಗಯಾಸುದ್ದಿನ ತಂದೆ ಫಯಾಜಹುಸೇನ ಇನಾಮದಾರ ವಯ: 28 ಉ: ಎಲೆಕ್ಟ್ರಿಕಲ್ ಟೆಕ್ನಿಸಿಯನ ಜಾ: ಮುಸ್ಲಿಂ ಸಾ: ಶಹಾಪೂರ ರವರು ನನಗೆ ತಿಳಿಸಿರುತ್ತಾರೆ. ನಂತರ ನಾನು ಹೋಗಿ ನೋಡಲಾಗಿ ಅಲ್ಲಿ ಕೇಬಲ ಕಟ್ಟ ಮಾಡಿಕೊಂಡು ಹೋಗಿದ್ದು ಕಂಡು ಬಂದಿರುತ್ತದೆ. ಹತ್ತಿಗುಡೂರ-ಹಯ್ಯಾಳ ಮುಖ್ಯರಸ್ತೆಯಲ್ಲಿರು ವಧರ್ಾ ಸೋಲಾರ (ಮಹಾರಾಷ್ಟ್ರ) ಪ್ರೈವೇಟ ಲಿಮಿಟೆಡ್ ಕಂಪನಿಯಲ್ಲಿನ 1850 ಮೀಟರ ಡಿಸಿ ಕೇಬಲ್ ಅಂದಾಜು ಕಿಮ್ಮತ 25,100-00 ರೂ ಕಿಮ್ಮತ್ತಿನ ಡಿಸಿ ಕೇಬಲ್ ಯಾರೋ ಕಳ್ಳರು ದಿನಾಂಕ: 16/12/2022 ರ ರಾತ್ರಿ 11-30 ಪಿ.ಎಂ ದಿಂದ ಬೆಳಗಿನ 5-00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಕಂಪನಿಯ ಜಮೀನಿನ ಖುಲ್ಲಾ ಜಾಗದಲ್ಲಿ ಅಳವಡಿಸಿದ ಡಿ.ಸಿ ಕೇಬಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನಾನು ನಮ್ಮ ಮ್ಯಾನೇಜರ ಜೊತೆ ವಿಚಾರ ಮಾಡಿಕೊಂಡು ಇಂದು ದಿನಾಂಕ: 18/12/2022 ರಂದು ಠಾಣೆಗೆ ಬಂದು ಡಿಸಿ ಕೇಬಲ್(ತಾಮ್ರದ ತಂತಿ) ಕಳ್ಳತನವಾದ ಬಗ್ಗೆ ಅಜರ್ಿ ಸಲ್ಲಿಸಿದ್ದು ಕಳ್ಳತನಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿ ನಮ್ಮ ಡಿ.ಸಿ. ಕೇಬಲ್ ಪತ್ತೆ ಮಾಡಿ ಕೊಡಲು ಮಾನ್ಯರವರಲ್ಲಿ ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 211/2022 ಕಲಂ: 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.


ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 96/2022 ಕಲಂ 279, 338 ಐ.ಪಿ.ಸಿ: ದಿನಾಂಕ: 14/12/2022 ರಂದು10.30 ಎ.ಎಮ್. ಸುಮಾರಿಗೆಫಿಯರ್ಾದಿಯ ಮಗನಾದಅಜಯಈತನುಆರೋಪಿತನಟ್ರಾಕ್ಟರ್ಇಂಜಿನ್ ನಂ:ಚಓಂ2ಉಅಂ8851 ಚೆಸ್ಸಿ ನಂ:ಒಃಓಉಂಂಐಏಃಓಚಂ04892ನೇದ್ದರಲ್ಲಿ ಕುಳಿತು ತನ್ನ ಹೊಲಕ್ಕೆ ಹೊರಟಾಗಆರೋಪಿತನುತನ್ನಟ್ರಾಕ್ಟರನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿದ್ದರಿಂದ ಟ್ರಾಕ್ಟರ್ಚಾಲಕನ ನಿಯಂತ್ರಣತಪ್ಪಿರಸ್ತೆಯಬಲಭಾಗದಲ್ಲಿ ಪಲ್ಟಿಯಾಗಿಅಪಘಾತವಾಗಿದ್ದರಿಂದ ಸದರಿಅಪಘಾತದಲ್ಲಿ ಗಾಯಾಳುಅಜಯಈತನ ಹೆಡಕಿಗೆಭಾರಿರಕ್ತಗಾಯವಾಗಿದ್ದು, ಎರಡೂ ಭುಜಗಳಿಗೆ ತರಚಿದ ರಕ್ತ್ತಗಾಯಗಳಾಗಿದ್ದು ಕಾರಣ ಸದರಿಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸಲು ವಿನಂತಿಅಂತಾ ಫಿಯರ್ಾದಿ.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 167/2022 ಕಲಂ: 279, 337, 338 ಐಪಿಸಿ: ಇಂದು ದಿ: 18/12/2022 ರಂದು 06:30 ಪಿ.ಎಮ್ಕ್ಕೆ ಶ್ರೀ ಕಾಡಪ್ಪ ತಂದೆ ಹಣಮಂತ ಪೂಜಾರಿ ವಯಸ್ಸು|| 26 ವರ್ಷ ಜಾ|| ಕುರುಬ ಉ|| ಲಾರಿ ಚಾಲಕ ಸಾ|| ಲಕ್ಷ್ಮೀಪುರ ತಾ|| ಸುರಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನ್ನ ಅಕ್ಕಳಾದ ಹಣಮಂತಿ ಇವಳಿಗೆ ಸುಮಾರು 9 ವರ್ಷಗಳ ಹಿಂದೆ ಶಹಾಪುರ ತಾಲೂಕಿನ ರಾಜಾಪುರ ಗ್ರಾಮದ ಹಣಮಂತ ಲಕ್ಷ್ಮೀಪುರ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಅವಳಿಗೆ ಒಟ್ಟು 4 ಜನ ಹೆಣ್ಣುಮಕ್ಕಳು ಇರುತ್ತಾರೆ. ಮೊದಲನೆಯವಳು ರೇಣುಕಾ, ಎರಡನೇಯವಳು ಅಕ್ಷತಾ, ಮೂರನೆಯವಳು ಭೂಮಿಕಾ ವಯಾ|| 5 ವರ್ಷ, ನಾಲ್ಕನೇಯವಳು ಅಂಜಲಿ ಅಂತ ಮಕ್ಕಳು ಇರುತ್ತಾರೆ. ಇಂದು ದಿನಾಂಕ: 18/12/2022 ರಂದು ನಮ್ಮೂರಿನಲ್ಲಿ ನಮ್ಮ ದೊಡ್ಡಮ್ಮ ಬಸಮ್ಮ ಗಂಡ ಮಲ್ಲಪ್ಪ ಇವರ ಮನೆ ಶಾಂತಿ ಇದ್ದುದರಿಂದ ನಾನು ಇಂದು ಬೆಳಿಗ್ಗೆ ರಾಜಾಪುರಕ್ಕೆ ಹೋಗಿ ನಮ್ಮ ಅಕ್ಕ ಹಣಮಂತಿ, ಆಕೆಯ ಮಕ್ಕಳಾದ ಅಕ್ಷತಾ, ಭೂಮಿಕಾ, ಅಂಜಲಿ ಇವರನ್ನು ಕರೆದುಕೊಂಡು ಬಸ್ ಮೂಲಕ ಬಂದು ಲಕ್ಷ್ಮೀಪುರ ಕ್ರಾಸ್ನಲ್ಲಿ ಇಳಿದಿದ್ದೆವು. ಹೀಗಿರುವಾಗ ಮದ್ಯಾಹ್ನ 1-30 ಗಂಟೆ ಸುಮಾರಿಗೆ ನಾವು ನಮ್ಮೂರಿನ ಕ್ರಾಸ್ನಲ್ಲಿ ರೋಡಿನ ಬದಿಗೆ ನಿಂತಿದ್ದಾಗ ಸುರಪುರ ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡಿನ ಬದಿಗೆ ನಿಂತಿದ್ದ ಭೂಮಿಕಾ ಇವಳಿಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ಭೂಮಿಕಾ ಇವಳು ರಸ್ತೆಯ ಕೆಳಗೆ ಬಿದ್ದಳು. ತಕ್ಷಣ ನಾನು ಮತ್ತು ನಮ್ಮ ಅಕ್ಕ ಇಬ್ಬರು ಭೂಮಿಕಾ ಇವಳಿಗೆ ನೋಡಲಾಗಿ ಹಣೆಗೆ, ತೆಲೆಗೆ ಭಾರಿಕ್ತಗಾಯವಾಗಿ ಕಿವಿಯಿಂದ ರಕ್ತಸ್ರಾವ ಆಗುತ್ತಿದ್ದು, ಗದ್ದಕ್ಕೆ ರಕ್ತಗಾಯ, ಎದೆಗೆ, ಹೊಟ್ಟೆಗೆ ಬೆನ್ನಿಗೆ ತರಚಿದ ಗಾಯ ಮತ್ತು ಒಳಪೆಟ್ಟು ಆಗಿದ್ದು, ಬಲಗಾಲ ತೊಡೆಯ ಹತ್ತಿರ ಮುರಿದಂತಾಗಿರುತ್ತದೆ. ನಂತರ ಅಪಘಾತಪಡಿಸಿದ ಕಾರ್ ಸ್ಥಳದಲ್ಲಿ ನಿಂತಿದ್ದು, ಅದರ ನಂಬರ ನೋಡಲಾಗಿ ಕೆಎ-33 ಎಮ್-6485 ಇದ್ದು, ಚಾಲಕನಿಗೆ ನೋಡಲಾಗಿ ಅವನಿಗೂ ಗಾಯಗಳಾಗಿದ್ದು, ಬಲಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯ, ಮೂಗಿನ ಮೇಲೆ, ತಲೆಯ ಮೇಲೆ ರಕ್ತಗಾಯವಾಗಿದ್ದು, ಬಲಗಾಲಿಗೆ ಬಾರಿ ಒಳಪೆಟ್ಟು ಆಗಿರುತ್ತದೆ. ನಂತರ ಅವನ ಹೆಸರು ವಿಳಾಸ ವಿಚಾರಿಸಲಾಗಿ ಸುರೇಶ ತಂದೆ ದೇವಿಂದ್ರಪ್ಪ ಗುಳಿಹಾಳ ಸಾ|| ಕುಂಬಾರಪೇಠ ಅಂತ ತಿಳಿಸಿದನು. ನಂತರ ನಾವು ಅದೇ ರಸ್ತೆಯಲ್ಲಿ ಬಂದ ಒಂದು ಖಾಸಗಿ ವಾಹನದಲ್ಲಿ ಭೂಮಿಕಾ ಮತ್ತು ಕಾರ ಚಾಲಕ ಸುರೇಶ ಈತನಿಗೆ ಹಾಕಿಕೊಂಡು ಚಿಕಿತ್ಸೆಗಾಗಿ ಸುರಪುರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿರುತ್ತೇವೆ. ಸುರಪುರ ಆಸ್ಪತ್ರೆಯಲ್ಲಿ ವೈದ್ಯರು ಇಬ್ಬರಿಗೂ ಪ್ರಥಮ ಉಪಚಾರ ಮಾಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ಭೂಮಿಕಾ ಇವಳಿಗೆ ನಮ್ಮ ಅಕ್ಕ ಹಣಮಂತಿ ಹಾಗೂ ವಿಷಯ ತಿಳಿದು ಆಸ್ಪತ್ರೆಗೆ ಬಂದಿದ್ದ ನಮ್ಮ ಅಣ್ಣ ದೇವಪ್ಪ ಪೂಜಾರಿ ಇಬ್ಬರು ಕೂಡಿ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಕಾರ್ ನಡೆಸಿ ಅಪಘಾತಪಡಿಸಿದ ಕಾರ್ ನಂ. ಕೆಎ-33 ಎಮ್-6485 ನೇದ್ದರ ಚಾಲಕ ಸುರೇಶ ತಂದೆ ದೇವಿಂದ್ರಪ್ಪ ಗುಳಿಹಾಳ ಸಾ|| ಕುಂಬಾರಪೇಠ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.167/2022 ಕಲಂ:279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 19-12-2022 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080