ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-01-2023



ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 08/2023 ಕಲಂ 279, 337, 338 ಐಪಿಸಿ: ಇಂದು ದಿನಾಂಕ 19.01.2023 ರಂದು ಬೆಳಿಗ್ಗೆ 11.30 ಗಂಟೆಗೆ ಭೀಮರಾಯ ತಂದೆ ಸೋಮಪ್ಪ ಕೋಟಗಾರ ಸಾ|| ಬಳಿಚಕ್ರ ಇವರು ಠಾಣೆಗೆ ಬಂದು ಹಾಜರಪಡಿಸಿದ ಗಣಕೀಕೃತ ದೂರು ಸಾರಾಂಶವೇನೆಂದರೆ, ನನ್ನ ತಂದೆ ಸೋಮಪ್ಪ ಇವರು ದಿನಾಂಕ 16.01.2023 ರಂದು ಬೆಳಿಗ್ಗೆ ನಮ್ಮ ಜಮೀನಗೆ ಹೋಗಿ ದನಗಳಿಗೆ ಮೇವು ತೆಗೆದುಕೊಂಡು ಬರಲು ಹೋಗಿದ್ದರು. ಆ ದಿನ ಬೆಳಿಗ್ಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಶಂಕರಗೌಡ ಇವರು ಬೆಳಿಗ್ಗೆ 10 ಗಂಟೆ ಸುಮಾರಿಗೆ ನನಗೆ ಫೋನ ಮಾಡಿ ನನ್ನ ತಂದೆಗೆ ಮೋಟಾರ ಡಿಕ್ಕಿಯಾಗಿ ಅಪಘಾತವಾದ ವಿಷಯ ತಿಳಿಸಿದ್ದರಿಂದ ನಾನು ಸದರಿ ವಿಷಯವನ್ನು ಮನೆಯಲ್ಲಿ ತಿಳಿಸಿ ಕೂಡಲೇ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ನನ್ನ ತಂದೆಯನ್ನು ನೋಡಲಾಗಿ ಅಪಘಾತದಲ್ಲಿ ನನ್ನ ತಂದೆಗೆ ಮುಖದ ಮೇಲೆ ಮತ್ತು ಬಲಗಾಲಿಗೆ ತೆರೆಚಿದ ರಕ್ತಗಾಯವಾಗಿದ್ದು, ಹೊಟ್ಟೆಗೆ ಭಾರಿ ಒಳಪೆಟ್ಟಾಗಿದ್ದು ಕಂಡುಬಂದಿತು. ನಂತರ ನಾನು 108 ಅಂಬುಲೆನ್ಸ್ದಲ್ಲಿ ನನ್ನ ತಂದೆಯನ್ನು ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ತಂದು ಸೇರಿಕೆ ಮಾಡಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ರಾಯಚೂರ ಭಂಡಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಕಾರಣ ದಿನಾಂಕ 16.01.2023 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೊಂಡಾರೆಡ್ಡಿ ತಂದೆ ರಾಮಲು ಉಪ್ಪಾರ ಸಾ|| ಕಿಲ್ಲನಕೇರಾ ಈತನು ಬಳಿಚಕ್ರ ಗ್ರಾಮದ ಶಂಕರಗೌಡ ಇವರ ಜಮೀನು ಹತ್ತಿರ ರೋಡಿನ ಮೇಲೆ ತನ್ನ ಹಿರೋ ಸ್ಪ್ಲೆಂಡರ ಪ್ಲಸ್ ಮೋಟಾರ ಸೈಕಲ ನಂಬರ ಕೆ.ಎ-33, ಡಬ್ಲೂ-0311 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ನಿಯಂತ್ರಣ ತಪ್ಪಿ ಎನ್-ಹೆಚ್-150 ರೋಡಿನ ಪಕ್ಕಕ್ಕೆ ಹೊರಟಿದ್ದ ನನ್ನ ತಂದೆಗೆ ಡಿಕ್ಕಿಪಡಿಸಿ ಗಂಭೀರ ಮತ್ತು ಸಾದಾ ಗಾಯಗಳನ್ನುಂಟು ಮಾಡಿದ್ದು, ಸದರಿ ಘಟನೆಗೆ ಕಾರಣನಾದ ಮೋಟಾರ ಸೈಕಲ ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ನಾನು ನನ್ನ ತಂದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ.ಅಂತಾ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 08/2023 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.
 

ಇತ್ತೀಚಿನ ನವೀಕರಣ​ : 20-01-2023 10:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080