Feedback / Suggestions

 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/02/2021
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 29/2021 ಕಲಂ. 279, 337, 338, 304(ಎ) ಐಪಿಸಿ. : ದಿನಾಂಕ. 19.02.2021 ರಂದು ಸಾಯಂಕಾಲ 5-30 ಗಂಟೆಗೆ ಶ್ರೀಮತಿ ಗಿರಿಜಮ್ಮ ಗಂಡ ಮಲ್ಲಿಕಾಜರ್ುನ ಸ್ವಾಮಿ ಸಾ|| ಸೈದಾಪೂರ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಬಂದು ನೀಡಿದ ಫಿಯರ್ಾದಿ ಸಾರಾಂಶವೆನೆಂದರೆ, ದಿನಾಂಕ.19.02.2021 ರಂದು ಬೆಳಿಗ್ಗೆ ಫಿಯರ್ಾದಿ ತಮ್ಮ ಸಂಬಂಧಿಕರ ಮನೆಯಲ್ಲಿ ತೆಲಂಗಾಣದ ಚೇಗುಂಟಾ ಗ್ರಾಮದಲ್ಲಿ ಸಮಾರಂಭಕ್ಕೆ ಹೋಗಿದ್ದು, ಸಮಾರಂಭ ಮುಗಿಸಿಕೊಂಡು ಮರಳಿ ಯಾದಗಿರಿಯ ಮಂಜುನಾಥ ತಂದೆ ಗುಂಡಯ್ಯಸ್ವಾಮಿ ಇವರ ಅಟೋ ನಂ. ಕೆಎ-33 ಎ-8453 ನೇದ್ದರಲ್ಲಿ ಕುಳಿತು ಸೈದಾಪೂರಕ್ಕೆ ಹೊರಟಾಗ ಮಧ್ಯಾಹ್ನ 4-00 ಗಂಟೆ ಸುಮಾರಿಗೆ ಕಡೇಚೂರ ಕ್ರಾಸ ಹತ್ತಿರ ಅಟೋ ನಡೆಸುತ್ತಿದ್ದ ಮಂಜುನಾಥ ತಂದೆ ಗುಂಡಯ್ಯಸ್ವಾಮಿ ಇವನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗಿ ಒಮ್ಮೆಲೆ ಕಟ್ ಮಾಡಿದ್ದರಿಂದ ಯಾದಗಿರಿ- ರಾಯಚೂರ ಎನ್.ಹೆಚ್-150 ರೋಡಿನ ಮೇಲೆ ಕಡೇಚೂರ ಕ್ರಾಸ ಬಳಿಯ ಸಿಮೆಂಟ್ ಫೂಲ್ಗೆ ಅಟೋ ಡಿಕ್ಕಿಯಾಗಿ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು, ಸದರಿ ಅಪಘಾತದಲ್ಲಿ 1) ಸಮರ್ಥ ತಂದೆ ಮಂಜುನಾಥ ಸ್ವಾಮಿ 2 ವರ್ಷದ ಮಗು ಸ್ಥಳದಲ್ಲಿಯೆ ಮೃತಪಟ್ಟಿದ್ದು, 2) ಸುಪ್ರಿಯಾ ಗಂಡ ಮಂಜುನಾಥ ಸ್ವಾಮಿ ವಯ|| 20 ವರ್ಷ, ಇವಳಿಗೆ ಬಲಗೈಗೆ, ಬಲಭುಜಕ್ಕೆ, ಬಲ ಮೊಳಕಾಲು ಮತ್ತು ಕಾಲಿನ ಹೆಬ್ಬರಳಿಗೆ ಭಾರಿ ರಕ್ತಗಾಯವಾಗಿದ್ದು, 3) ಶೃತಿ ಗಂಡ ಜಗದೀಶ ಸ್ವಾಮಿ ವಯ|| 20 ವರ್ಷ ಇವಳಿಗೆ ಎಡಗೈಗೆ, ಎಡಗಾಲಿನ ತೊಡೆಗೆ, ಬೆನ್ನಿಗೆ, ತಲೆಗೆ ರಕ್ತಗಾಯವಾಗಿದ್ದು, 4) ಪ್ರಹಾಸಿನಿ ತಂದೆ ಜಗದೀಶ ಸ್ವಾಮಿ ವಯ|| 3 ವರ್ಷ, ಇವಳಿಗೆ ತಲೆಗೆ, ಎಡಗೈ, ಎಡಗಾಲಿಗೆ ರಕ್ತಗಾಯವಾಗಿದ್ದು, 5) ಪವಿತ್ರಾ ತಂದೆ ಸಿದ್ದಲಿಂಗಯ್ಯ ಸ್ವಾಮಿ ವಯ|| 6 ವರ್ಷ, ಇವಳಿಗೆ ತಲೆಗೆ, ಕೈಗಳಿಗೆ, ಕಾಲುಗಳಿಗೆ ಭುಜಕ್ಕೆ ರಕ್ತಗಾಯವಾಗಿದ್ದು, 6) ಪ್ರವೀಣ ತಂದೆ ಸಿದ್ದಲಿಂಗಯ್ಯ ವಯ|| 4 ವರ್ಷ, ಇವನಿಗೆ ಇವನಿಗೆ ಕೈ ಮತ್ತು ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಟೋ ನಡೆಸುತ್ತಿದ್ದ 7) ಮಂಜುನಾಥಸ್ವಾಮಿ ಇವರಿಗೆ ಎಡಗೈಗೆ, ಬಲಭುಜಕ್ಕೆ, ಕಾಲಿಗೆ ರಕ್ತಗಾಯವಾಗಿರುತ್ತದೆ. ಸದರಿ ಅಪಘಾತದಲ್ಲಿ ಮೃತಪಟ್ಟ ಮಗು ಸಮರ್ಥ ತಂದೆ ಮಂಜುನಾಥ ಸ್ವಾಮಿ ವಯ|| 2 ವರ್ಷ, ಜಾ|| ಜಂಗಮ ಸಾ|| ಗಂಜ ಏರಿಯಾ ಯಾದಗಿರಿ ಈತನನ್ನು ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ಒಯ್ದಿದ್ದು ಇರುತ್ತದೆ. ಸದರಿ ಅಪಘಾತ ಪಡಿಸಿದ ಮಂಜುನಾಥ ಸ್ವಾಮಿ ತಂದೆ ಗುಂಡಯ್ಯ ಸ್ವಾಮಿ ವಯ|| 25 ವರ್ಷ, ಜಾ|| ಜಂಗಮ ಉ|| ವಾಟರಸಪ್ಲೆಯರ ಸಾ|| ಗಂಜ ಏರಿಯಾ ಯಾದಗಿರಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಇರುತ್ತದೆ


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 24/2021 ಕಲಂ: 379 ಐ.ಪಿ.ಸಿ : ಇಂದು ದಿ: 19/02/2021 ರಂದು 4.30 ಪಿಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೆನೆಂದರೇ ಅಮರೇಶ ತಂದೆ ರೇವಣಸಿದ್ದಪ್ಪ ಕೆಂಭಾವಿ ವಯಾ|| 34 ಜಾ|| ಹಿಂದೂ ಲಿಂಗಾಯತ ಉ|| ಒಕ್ಕಲುತನ ಸಾ|| ಹೆಗ್ಗಣದೊಡ್ಡಿ ತಾ|| ಸುರಪುರ ತಮ್ಮಲ್ಲಿ ಬರೆದುಕೊಡುವ ಫಿಯರ್ಾದಿ ಅಜರ್ಿ ಏನಂದರೆ ನನ್ನದೊಂದು ಹೊಂಡಾ ಕಂಪನಿಯ ಹೊಂಡಾ ಆಕ್ಟಿವಾ 5ಜಿ ಮೋಟಾರ ಸೈಕಲ ನಂ ಕೆಎ-33.ಡಬ್ಲೂ 7320 ಬಿಳಿಯ ಬಣ್ಣದ ಸ್ಕೂಟಿ ಇದ್ದು ಸದರಿ ಮೋಟಾರ ಸೈಕಲ ಮಾಡಲ್ 2018 ನೇದ್ದು ಇದ್ದು ಸದರಿ ಮೋಟಾರ ಸೈಕಲನ್ನು ದಿನಾಲು ನಾನೇ ನಡೆಸಿಕೊಂಡು ಇರುತ್ತೇನೆ. ಅದನ್ನು ಪ್ರತಿದಿನ ರಾತ್ರಿ ವೇಳೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರುಗಡೆ ಇರುವ ನಮ್ಮ ರೂಮಿನ ಮುಂದೆ ನಿಲ್ಲಿಸುತ್ತಿದ್ದೆನು. ಹೀಗಿದ್ದು ದಿನಾಂಕ 17/02/2021 ರಂದು ರಾತ್ರಿ 9 ಗಂಟೆಗೆ ಸದರಿ ಮೋಟರ ಸೈಕಲನ್ನು ಎಂದಿನಂತೆ ನಮ್ಮ ರೂಮಿನ ಮುಂದೆ ನಿಲ್ಲಿಸಿ ಮನೆಗೆ ಹೋಗಿದ್ದು ಇರುತ್ತದೆ. ನಂತರ ಮರುದಿನ ದಿನಾಂಕ: 18/02/2021 ರಂದು ಬೆಳಿಗ್ಗೆ 6.00 ಗಂಟೆಗೆ ನಮ್ಮ ರೋಮ ಹತ್ತಿರ ಬಂದು ನೋಡಲಾಗಿ ನನ್ನ ಸ್ಕೂಟಿ ನಾನು ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ನಂತರ ನಾನು ಗಾಬರಿಯಾಗಿ ಗ್ರಾಮದಲ್ಲಿ ಎಲ್ಲಾ ಕಡೆ ಹುಡುಕಾಡಲಾಗಿ ಸದರಿ ನನ್ನ ಮೋಟರ ಸೈಕಲ್ ಸಿಗಲಿಲ್ಲ. ನಂತರ ನಾನು ಗೋಡ್ರಿಹಾಳ, ಮಾಲಗತ್ತಿ, ಮಾವಿನಮಟ್ಟಿ ಗ್ರಾಮಗಳಿಗೆ ಹೋಗಿ ನನ್ನ ಮೋಟರ್ ಸೈಕಲ್ ಹುಡುಕಾಡಲಾಗಿ ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ದಿನಾಂಕ 17/02/2021 ರಂದು ರಾತ್ರಿ 9.00 ಗಂಟೆಯಿಂದ ದಿ: 18/02/2021 ರ ಬೆಳಗಿನ 6 ಗಂಟೆಯ ಮದ್ಯದ ಅವಧಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಇರುವ ನಮ್ಮ ರೂಮಿನ ಮುಂದೆ ನಿಲ್ಲಿಸಿದ ನನ್ನ ಮೋಟರ ಸೈಕಲ ಅಂದಾಜು ಕಿಮ್ಮತ್ತು 45,000/- ರೂ. ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆಮಾಡಿ ಕಾನೂನು ಪ್ರಕಾರ ಕ್ರಮಕೈಕೊಳ್ಳ ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವಿರುತ್ತದೆ.


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 25/2021 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 19.02.2021 ರಂದು 2.30 ಪಿ.ಎಮ್ ಕ್ಕೆ ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೆನೆಂದರೆ, ಇಂದು ದಿನಾಂಕ: 19.02.2021 ರಂದು 12.30 ಗಂಟೆಗೆ ಸುಮಾರಿಗೆ ಠಾಣೆಯಲ್ಲಿದ್ದಾಗ ಕಿರದಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸದರಿ ಸ್ಥಳಕ್ಕೆ 1.10 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ರಮೇಶ ತಂದೆ ಗಂಗಾಧರ ವಿಶ್ವಕರ್ಮ ವ|| 49 ಜಾ|| ವಿಶ್ವಕರ್ಮ ಉ|| ಕೂಲಿಕೆಲಸ ಸಾ|| ಕಿರದಳ್ಳಿ ತಾ|| ಸುರಪೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1970/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 1.10 ಗಂಟೆಯಿಂದ 2.10 ಗಂಟೆಯವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ಇರುತ್ತದೆ ಅಂತ ವರದಿ ನೀಡಿದ್ದು ಸದರ ವರಧಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 5.45 ಪಿ ಎಮ್ ಕ್ಕೆೆ ಠಾಣೆ ಗುನ್ನೆ ನಂ 25/2021 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ :- 10/2021 279 337 ಐಪಿಸಿ : ದಿನಾಂಕ:19/02/2021 ರಂದು ಸಾಯಂಕಾಲ 17.15 ಗಂಟೆಯ ಸುಮಾರಿಗೆ ಪಿರ್ಯಾದಿ & ಗಾಯಾಳು ಬಸನಗೌಡ ಇವರು ಬುಲೆರೋ ಜೀಪ್ ನಂ: ಕೆಎ-33 ಎಮ್-4237 ನೇದ್ದರಲ್ಲಿ ರಾಜನಕೊಳೂರದಿಂದ ಹುಣಸಗಿ ಕಡೆಗೆ ಹೊರಟಾಗ ಬಲಶೆಟ್ಟಿಹಾಳ ಸೀಮಾಂತರದ ಮಾಗನೂರ ಶೇಖರಗೌಡ ಇವರ ಪೆಟ್ರೋಲ್ ಪಂಪ್ ಹತ್ತಿರ ಹೊರಟಾಗ ಚಾಲಕನಾದ ವಿರುಫಾಕ್ಷಗೌಡ ತಂದೆ ಭೀಮನಗೌಡ ಮಾಲಿಪಾಟೀಲ ಸಾ:ಕಚಕನೂರ ಈತನು ಸದರಿ ಬುಲೆರೋ ಜೀಪನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ರಸ್ತೆಯ ಎಡಗಡೆ ಮಗ್ಗಲಿಗೆ ಪಲ್ಟಿ ಮಾಡಿದ್ದರಿಂದ ಫಿರ್ಯಾದಿಗೆ & ಬಸನಗೌಡ ಮಾಲಿಪಾಟೀಲ ಇಬ್ಬರಿಗೂ ಒಳೆಟ್ಟುಗಳು & ತರಚಿದ ರಕ್ತಗಾಯಗಳಾಗಿದ್ದು, ಹಾಗೂ ಜೀಪನ್ನು ಸಹ ಜಖಂಗಗೊಂಡಿದ್ದು ಇರುತ್ತದೆ ಅಂತಾ ಕೊಟ್ಟ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ :- 15/2021 ಕಲಂ, 87 ಕೆ.ಪಿ ಆ್ಯಕ್ಟ್ : ದಿನಾಂಕ 19/02/2021 ರಂದು 09.35 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಆರೋಪಿತರು, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಬಂದು ಒಂದು ವರದಿ ನೀಡಿದ್ದು ಅದರ ಸಾರಂಶವೇನಂದರೆ, ಗೋಗಿ ಕೆ ಸೀಮಾಂತರದಲ್ಲಿ ಎಸ್.ಬಿ.ಸಿ ಕೆನಾಲ ಪಕ್ಕದಲ್ಲಿನ ಖುಲ್ಲಾ ಜಾಗದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 09 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 13490=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು ಮತ್ತು ಎರಡು ಚರ್ಜರಲೈಟಗಳನ್ನು, ನಾಲ್ಕು ಮೋಟಾರ ಸೈಕಲಗಳನ್ನು 07.50 ಪಿಎಮ್ ದಿಂದ 08.50 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 09.35 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಹಾಜರಪಡಿಸಿದ್ದರಿಂದ ವರದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ 15/2021 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ :- 14/2021 ಕಲಂ 279, 337, 338 ಐಪಿಸಿ ಸಂಗಡ 187 ಐ.ಎಮ್.ವಿ ಎಕ್ಟ್ : ಇಂದು ದಿನಾಂಕ:19/02/2021 ರಂದು ಸಾಯಂಕಾಲ ಫಿಯರ್ಾದಿಯ ಮಗ ಆರೋಪಿ ಮಹಾರಾಜ ಈತನು ತನ್ನ ಮೋಟರ್ ಸೈಕಲ್ ನಂ:ಕೆಎ-32, ಇಡಬ್ಲು-1943 ಮೇಲೆ ನಿಖಿತಾ ಇವಳಿಗೆ ಕೂಡಿಸಿಕೊಂಡು ಭೀ.ಗುಡಿಯ ಬಲಭೀಮೇಶ್ವರ ದೇವರ ದರ್ಶನ ಮಾಡಿಕೊಂಡು ಮರಳಿ ಶಹಾಪುರ ಕಡೆಗೆ 6 ಪಿ.ಎಮ್. ಸುಮಾರಿಗೆ ತನ್ನ ಮೋಟರ್ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಗೋಗಿ ಮುಖ್ಯ ರಸ್ತೆಯ ಮೇಲೆ ಬಂದಾಗ ಅದೇ ಸಮಯಕ್ಕೆ ಗೋಗಿ ಕಡೆಯಿಂದ ಆರೋಪಿ ತೂಫಾನ್ ಜೀಪ್ ಚಾಲಕನು ಸಹ ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಗೋಗಿ ಕಡೆಯಿಂದ ನಡೆಸಿಕೊಂಡು ಬಂದಿದ್ದರಿಂದ ಗುಡಿಯ ಕಮಾನ್ ಹತ್ತಿರ ಮೋಟರ್ ಸೈಕಲ್ ಮತ್ತು ಜೀಪ್ ಒಂದಕ್ಕೊಂದು ಡಿಕ್ಕಿ ಹೊಡೆದು ಅಪಘಾತವಾಗಿ ಸದರಿ ಅಪಘಾತದಲ್ಲಿ ಆರೋಪಿ ಮಹಾರಾಜ ಮತ್ತು ನಿಖಿತಾ ಇವರಿಗೆ ಭಾರಿ ಮತ್ತು ಸಾದಾ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಜೀಪ್ ಚಾಲಕನು ತನ್ನ ಜೀಪ್ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಕಾರಣ ಸದರಿ ಅಪಘಾತಕ್ಕೆ ಇಬ್ಬರೂ ಚಾಲಕರು ಕಾರಣರಿದ್ದು ಕಾನೂನು ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ :- 19/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 19.02.2021 ರಂದು ಮಧ್ಯಾಹ್ನ 12:30 ಗಂಟೆಗೆ ಗುರುಮಠಕಲ್ ಪಟ್ಟಣದ ಎಸ್.ಬಿ.ಐ ಬ್ಯಾಂಕ್ನ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 04/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-124 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ಮಧ್ಯಾಹ್ನ 3:00 ಗಂಟೆಗೆ ತಂದು ಪಿ.ಎಸ್.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ಮಧ್ಯಾಹ್ನ 3:30 ಗಂಟೆಗೆ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 2150/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಸಮಯ ಸಂಜೆ 4:45 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಹೆಚ್.ಸಿ-108 ಗುರುಮಠಕಲ್ ಠಾಣೆ ಗುನ್ನೆ ನಂಬರ 19/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

Last Updated: 20-02-2021 10:52 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080