ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-02-2022
ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 33/2022 ಕಲಂ 279, 338 304 (?) ಐಪಿಸಿ ಮತ್ತು ಕಲಂ: 187 ಐ.ಎಮ್.ವಿ ಆಕ್ಟ್ : ದಿನಾಂಕ 18.02.2022 ರಂದು ರಾತ್ರಿ 11.20 ಗಂಟೆಯ ಸುಮಾರಿಗೆ ಮೃತನು ಮೋಟರ್ ಸೈಕಲ್ ನಂ ಕೆಎ- 04 ಹೆಚ್.ಜೆ- 3765 ನೇದ್ದರ ಮೇಲೆ ಹಿಂದೆ ಸಂತೋಷ ಈತನನ್ನು ಕೂಡಿಸಿಕೊಂಡು ಗೋಪಾಲಪೂರ ಕ್ರಾಸ್ ದಿಂದ ಅರಕೇರಾ (ಕೆ) ಕ್ರಾಸ್ ಡಾಟುತ್ತಿರುವುವಾಗ ಯಾದಗಿರಿ ಕಡೆಯಿಂದ ಬಸ್ ನಂ: ಕೆಎ-33 ಎಫ್-0389 ನೇದ್ದರ ಚಾಲಕನು ಬಸ್ಸ್ನ್ನು ಅತೀವೇಗ, ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದು ಭಾರಿ ಸ್ವರೂಪದ ಗಾಯಗಳಾಗಿ ಮೋಟರ್ ಸೈಕಲ್ ಸವಾರ ಅಂಜಪ್ಪನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಸಂತೋಷ ಈತನಿಗೆ ಭಾರಿ ಸ್ವರೂಪದ ಗಾಯಗಳಾಗಿ ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ಅಪಘಾತ ಪಡಿಸಿದ ಬಸ್ ಚಾಲಕನು ಬಸ್ಸನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಪಿರ್ಯಾಧಿ ಇರುತ್ತದೆ.
ಕೊಡೇಕಲ ಪೊಲೀಸ್ ಠಾಣೆ:-
ಗುನ್ನೆ ನಂ: 18/2022 ಕಲಂ:143, 147, 148, 323, 324, 504, 506, 354 ಸಂಗಡ 149 ಐಪಿಸಿ : ಇಂದು ದಿನಾಂಕ:19/02/2022 ರಂದು ಮಧ್ಯಾಹ್ನ 13:30 ಗಂಟೆಗೆ ಫಿಯರ್ಾದಿದಾರಳಾದ ಶ್ರೀಮತಿ ಸುನೀತಾ ಗಂಡ ಮೌನೇಶ ಜಾಧವ ವ:22 ವರ್ಷ, ಜಾ:ಹಿಂದೂ ಲಂಬಾಣಿ, ಉ:ಹೊಲಮೆನೆಗೆಲಸ, ಸಾ||ಏದಲಬಾವಿ ತಾಂಡಾ ಹಾ||ವ||ಸೊನ್ನಾಪೂರ ತಾಂಡಾ ತಾ||ಹುಣಸಗಿ ಇದ್ದು, ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಯವರು ನನಗೆ ಏದಲಬಾವಿ ತಾಂಡಾದ ಸಂಗಪ್ಪ ತಂದೆ ರಾಮಜೀ ಜಾಧವ ಇವರ ಮಗನಾದ ಮೌನೇಶ ಇತನಿಗೆ ಕೊಟ್ಟು ಮದುವೆ ಮಾಡಿದ್ದು, ನಾನು ಈಗ 4-5 ವರ್ಷಗಳಿಂದ ನನ್ನ ಗಂಡನ ಮನೆಯಲ್ಲಿ ನಡೆಯುತ್ತಿದ್ದು, ನಮ್ಮ ತಂದೆ ಶಿವಪ್ಪ ತಂದೆ ರಾಮಲೆಪ್ಪ ಪವಾರ ಹಾಗೂ ತಾಯಿ ಮಾನಾಬಾಯಿ ಹಾಗೂ ಅವರ ಮನೆಯವರೆಲ್ಲರೂ ಈಗ ಮೂರು ತಿಂಗಳ ಹಿಂದೆ ಕಬ್ಬು ಕಡಿಯಲು ಕೂಲಿ ಕೆಲಸಕ್ಕೆ ಹೋಗಿದ್ದು, ನಮ್ಮ ತಂದೆ ತಾಯಿಯವರು ಕಬ್ಬುಕಡಿಯಲು ಹೋಗುವ ಕಾಲಕ್ಕೆ ನನಗೆ ಮತ್ತು ನನ್ನ ಗಂಡನಿಗೆ ಏದಲಬಾವಿ ಸೀಮಾಂತರದಲ್ಲಿಯ ಅವರ ಹೊಲದಲ್ಲಿಯ ಮನೆಯಲ್ಲಿರಲು ಹಾಗೂ ಸದರಿ ಹೊಲವನ್ನು ಊಳುಮೆ ಮಾಡಲು ಹೇಳಿ ಹೋಗಿದ್ದು, ಆವಾಗಿನಿಂದ ನಾನು ಮತ್ತು ನನ್ನ ಗಂಡ ನಮ್ಮ ತಂದೆ ತಾಯಿಯವರ ಹೊಲದಲ್ಲಿಯ ಮನೆಯಲ್ಲಿಯೇ ಇರುತ್ತೇವೆ. ನಾವು ನಮ್ಮ ತಂದೆ ತಾಯಿಯವರ ಮನೆಯಲ್ಲಿರುವುದು ಅಕ್ಕ-ಪಕ್ಕದ ಮನೆಯವರಾದ ನಮ್ಮ ದೊಡ್ಡಪ್ಪನ ಮಕ್ಕಳಾದ ಭೀಮಣ್ಣ, ವೆಂಕಟೇಶ ಹಾಗೂ ನಮ್ಮ ಅಣ್ಣತಮ್ಮಕ್ಕಿಯವರಾದ ಗುಂಡಪ್ಪ, ಸೂರಪ್ಪ ಮತ್ತು ಲಿಂಗಪ್ಪ ರವರಿಗೆ ಸರಿಬರದೇ ವಿನಾ ಕಾರಣ ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ. ಹೀಗಿರುವಾಗ ನಿನ್ನೆ ದಿನಾಂಕ:18/02/2022 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ನಮ್ಮ ತಂದೆ ತಾಯಿಯವರ ಮನೆಯ ಮುಂದಿನ ಅಂಗಳದಲ್ಲಿ ನಾನು ಕಸಗೂಡಿಸುತ್ತಿರುವಾಗ ನನ್ನ ದೊಡ್ಡಪ್ಪ ಶಾಂತಪ್ಪನ ಮಕ್ಕಳಾದ ಭೀಮಣ್ಣ ತಂದೆ ಶಾಂತಪ್ಪ ಪವಾರ, ವೆಂಕಟೇಶ ತಂದೆ ಶಾಂತಪ್ಪ ಪವಾರ ಹಾಗೂ ನಮ್ಮ ಅಣ್ಣತಮ್ಮಕ್ಕೀಯವರಾದ ಲಿಂಗಪ್ಪ ತಂದೆ ದೇಶಪ್ಪ ಪವಾರ, ಗುಂಡಪ್ಪ ತಂದೆ ಲಿಂಗಪ್ಪ ಪವಾರ ಹಾಗೂ ಸೂರಪ್ಪ ತಂದೆ ಕೇಶಪ್ಪ ಪವಾರ ಇವರುಗಳಲ್ಲೆರೂ ಗುಂಪಾಗಿ ನಾನು ಕಸಗೂಡಿಸುವವಲ್ಲಿಗೆ ಬಂದವರೇ ನನಗೆ ಲೇ ಸೂಳಿ ನೀನು ಇಲ್ಲಿಂದ ನಿನ್ನ ಗಂಡನ ಮನೆಗೆ ಹೋಗು ನೀವು ಗಂಡ ಹೆಂಡತಿ ಮನೆ ಖಾಲಿ ಮಾಡು ಅಂದರೆ ಮಾಡುತ್ತಿಲ್ಲ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಅಂದವರೇ ಅವರಲ್ಲಿಯ ಭೀಮಣ್ಣ ತಂದೆ ಶಾಂತಪ್ಪ ಪವಾರ ಇತನು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯ ಪಡಿಸಿ ಅದೇ ಕಟ್ಟಿಗೆಯಿಂದ ನನ್ನ ಬೆನ್ನಿನ ಮೇಲೆ ಎಡಗೈ ಮುಡ್ಡೆಯ ಮೇಲೆ, ಎಡ ತೊಡೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ವೆಂಟಕೇಶ ತಂದೆ ಶಾಂತಪ್ಪ ಇತನು ತನ್ನ ಕೈಯಿಂದ ನನ್ನ ಕಪಾಳ ಮೇಲೆ ಹೊಡೆದಿದ್ದು, ಗುಂಡಪ್ಪ ತಂದೆ ಲಿಂಗಪ್ಪ ಪವಾರ ಇತನು ನನಗೆ ಮಾನಭಂಗ ಪಡಿಸುವ ಉದ್ದೇಶದಿಂದ ತಲೆಯ ಮೇಲಿನ ಕೂದಲನ್ನು ಹಿಡಿದು ಜಗ್ಗಾಡಿದ್ದು, ಸೂರಪ್ಪ ಇತನು ನನ್ನ ಎರಡು ಕೈಗಳನ್ನು ಹಿಡಿದು ಎಳದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು, ಲಿಂಗಪ್ಪ ತಂದೆ ದೇಶಪ್ಪ ಪವಾರ ಇತನು ಅವರೆಲ್ಲರಿಗೂ ಇವಳಿಗೆ ಸೊಕ್ಕು ಬಹಳ ಆಗಿದೆ ಬಿಡಬೇಡಿರಿ ಅಂತಾ ಒದರಾಡುತ್ತಿದ್ದು, ಆಗ ನಾನು ನನ್ನನ್ನು ಉಳಿಸರಪ್ಪೋ ಅಂತಾ ಚೀರಾಡುತ್ತಿದ್ದಾಗ ಅಲ್ಲಿಯೇ ಇದ್ದ ನನ್ನ ಗಂಡ ಮೌನೇಶ ತಂದೆ ಸಂಗಪ್ಪ ಜಾಧವ ಹಾಗೂ ನಮ್ಮ ಮನೆಯ ಹತ್ತಿರದ ಕೆನಾಲ ರಸ್ತೆ ಮೇಲಿಂದ ಹೋಗುತ್ತಿದ್ದ ನಂದಪ್ಪ ತಂದೆ ಹುಲಗಪ್ಪ ಹೊಳಿಜಂಪರ ಸಾ||ಹೊಸುರಪೈದೊಡ್ಡಿ ಕಕ್ಕೇರಾ ಹಾಗೂ ಪೂಜಪ್ಪ ತಂದೆ ಹಣಮಂತ್ರಾಯ ಗೋಡಿಹಾಳ ಸಾ||ಏದಲಬಾವಿ ಇವರುಗಳು ಬಂದು ಬಿಡಿಸಿದ್ದು, ಹೋಗುವಾಗ ಅವರೆಲ್ಲರೂ ಬೋಸಡಿ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನಾನು ನನ್ನ ಗಂಡನೊಂದಿಗೆ ವಿಚಾರ ಮಾಡಿ ಕಬ್ಬು ಕಡಿಯಲು ಕೂಲಿ ಕೆಲಸಕ್ಕೆ ಹೋದ ನನ್ನ ತಂದೆ ಶಿವಪ್ಪ ರವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ಈ ದಿವಸ ನನ್ನ ತಂದೆಯು ಬಂದಿದ್ದು ಅವನೊಂದಿಗೆ ಈ ಬಗ್ಗೆ ವಿಚಾರಿಸಿ ಇಂದು ತಡವಾಗಿ ಬಂದು ದೂರು ಕೊಡುತ್ತಿದ್ದು, ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ ಐದು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:18/2022 ಕಲಂ:143, 147, 148, 323, 324, 504, 506, 354 ಸಂ 149 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 16/2022 ಕಲಂ 87 ಕೆಪಿ ಯ್ಯಾಕ್ಟ : ಇಂದು 19/02/2022 ರಂದು 07.45 ಪಿ.ಎಮ್.ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಪೊಲೀಸ್ ಠಾಣೆ. ರವರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ:19/02/2022 ರಂದು 04.45 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಬೂದನೂರ ಸೀಮಾಂತರದ ಗ್ಯಾನಪ್ಪ ಗುಂಡಾ ಸರಕಾರಿ ಗೌಂಟಾಣದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಯಾರೋ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಯವರೊಂದಿಗೆ ಕೂಡಿಕೊಂಡು 05.15 ಪಿ.ಎಮ್ ಕ್ಕೆ ದಾಳಿ ಮಾಡಿದ್ದು, ದಾಳಿಯಲ್ಲಿ ಮೇಲಿನ 6 ಜನ ಆರೋಪಿತರು ಸಿಕ್ಕಿಬಿದ್ದವರಿಂದ ಮತ್ತು ಜೂಜಾಟ ಕಣದಲ್ಲಿದ್ದ ಒಟ್ಟು ನಗದು ಹಣ 15,960=00 ರೂ, 52 ಇಸ್ಪೇಟ ಎಲೆಗಳನ್ನು 05.40 ಪಿ.ಎಮ್ ದಿಂದ 06.40 ಪಿ.ಎಮ್ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ಪಡೆದು 07.45 ಪಿ.ಎಮ್.ಕ್ಕೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಆರೋಪಿ, ಮುದ್ದೇಮಾಲನ್ನು ಹಾಜರ ಪಡಿಸಿ ಕ್ರಮ ಜರುಗಿಸಲು ವರದಿ ನೀಡಿದ್ದು ವರದಿಯ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 16/2022 ಕಲಂ, 87 ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 27/2022 ಕಲಂ: 87 ಕೆ.ಪಿ.ಆಕ್ಟ್ 1963 : ಇಂದು ದಿನಾಂಕ: 19/02/2022 ರಂದು 8-30 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ದಿನಾಂಕ: 19/02/2022 ರಂದು ನಾನು ಮತ್ತು ಸಿಬ್ಬಂದಿಯವರಾದ 1) ಗುಂಡಪ್ಪ ಹೆಚ್.ಸಿ 37, 2) ಮಹೇಂದ್ರ ಪಿಸಿ 254, 3) ವೇಣುಗೋಪಾಲ ಪಿಸಿ-36, 4) ಸಾಬರೆಡ್ಡಿ ಪಿಸಿ 290 ವಡಗೇರಾ ಪೊಲೀಸ್ ಠಾಣೆ 5) ಪ್ರಭುಗೌಡ ಪಿಸಿ 361 ಯಾದಗಿರಿ ಉಪ-ವಿಭಾಗ ಕಛೇರಿ ರವರೆಲ್ಲರೂ ಠಾಣೆಯಲ್ಲಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇಬರು ಯಾದಗಿರಿ ಮತ್ತು ಸಿ.ಪಿ.ಐ ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ತಡಿಬಿಡಿ ಸೀಮಾಂತರದ ಗುಂಡಳ್ಳಿ ಕೆರೆಯ ಬಯಲು ಪ್ರದೇಶದ ಪಕ್ಕದ ಸಾರ್ವಜನಿಕ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕೂಡಿಸಿಕೊಂಡು 4 ಪಿಎಂ ಕ್ಕೆ ವಡಗೇರಾ ಪೊಲೀಸ್ ಠಾಣೆಯಿಂದ ಹೊರಟು 4-40 ಪಿಎಂ ಕ್ಕೆ ತಡಿಬಿಡಿ ಸೀಮಾಂತರದ ಸರಕಾರಿ ಗೈರಾಣ ಜಾಗದಲ್ಲಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಸರಕಾರಿ ಜಾಲಿ ಗಿಡಗಳನ್ನು ಮರೆಯಾಗಿ ಹಿಂದಿನಿಂದ ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎನ್ನುವ ಇಸ್ಪಿಟ್ ಜೂಜಾಟವನ್ನು ಹಣ ಪಣಕ್ಕಿಟ್ಟು, ಆಡುತ್ತಿದ್ದರು. ಅಲ್ಲಿ ಸುಮಾರು 8-10 ಮೋಟರ್ ಸೈಕಲ್ಗಳನ್ನು ಕೂಡಾ ನಿಲ್ಲಿಸಿಕೊಂಡಿದ್ದರು. ಇದನ್ನು ನೋಡಿ ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು 4-50 ಪಿಎಮ್ ಕ್ಕೆ ಒಮ್ಮೆಲೆ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿದಾಗ ಇಬ್ಬರೂ ಸಿಕ್ಕಿಬಿದ್ದಿದ್ದು, ಇನ್ನುಳಿದ ಸುಮಾರು 8-10 ಜನರು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದರು. ವಶಕ್ಕೆ ಪಡೆದುಕೊಂಡ ಜನರನ್ನು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಅಬ್ದುಲ್ ರಜಾಕ ತಂದೆ ಕಾಸಿಂಸಾಬ ಗುರುಸಣಗಿ, ವ:33, ಜಾ:ಮುಸ್ಲಿಂ, ಉ:ಡ್ರೈವರ ಸಾ:ಮನಗನಾಳ ತಾ:ಶಹಾಪೂರ ಅಂತಾ ಹೇಳಿದ್ದು ಸದರಿಯವನು ತಾನು ಪಣಕ್ಕೆ ಇಟ್ಟ ನಗದು ಹಣ 4450/- ರೂ ಮತ್ತು 21 ಇಸ್ಪೀಟ್ ಎಲೆಗಳು ಇದ್ದದ್ದನ್ನು ಹಾಜರಪಡಿಸಿದನು. ಇನ್ನೊಬ್ಬನು ತನ್ನ ಹೆಸರು 2) ಮಾಳಪ್ಪ ತಂದೆ ಬೀರಪ್ಪ ಬಿರಗೊಂಡ, ವ:40, ಜಾ:ಕುರುಬರ, ಉ:ಒಕ್ಕಲುತನ ಸಾ:ಗುಂಡಳ್ಳಿ ತಾ:ಶಹಾಪೂರ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 5270/- ರೂ, ಹಾಜರಪಡಿಸಿದನು. ಜೂಜಾಟದ ಸ್ಥಳದಲ್ಲಿ ಎಲ್ಲರ ಮಧ್ಯೆ 31 ಇಸ್ಪಿಟ್ ಎಲೆಗಳು ಮತ್ತು 46,280/- ರೂ. ಹೀಗೆ ಒಟ್ಟು 56,000/- ರೂ. ನಗದು ಹಣ ಮತ್ತು 56 ಇಸ್ಪೀಟ್ ಎಲೆಗಳು ದೊರೆತ್ತಿದ್ದು, ಮೋಟರ್ ಸೈಕಲಗಳನ್ನು ಪರಿಶೀಲಿಸಿ ನೋಡಲಾಗಿ ಒಟ್ಟು 10 ಮೊಟರ್ ಸೈಕಲಗಳು ಇದ್ದು, ಅವುಗಳನ್ನು ಒಂದೊಂದಾಗಿ ನೋಡಲಾಗಿ 1) ಹಿರೋ ಪ್ಯಾಶನ ಪ್ರೋ ನಂ. ಕೆಎ 33 ಎಸ್ 2683 ಅ:ಕಿ:10,000/-, 2) ಹೊಂಡಾ ಸಿಬಿಝಡ ನಂ. ಕೆಎ 51 ಎಲ್ 5431 ಅ:ಕಿ:10,000/-, 3) ಹಿರೋ ಸ್ಪ್ಲೇಂಡರ ಪ್ರೋ ನಂ. ಕೆಎ 33 ಆರ್ 2190 ಅ:ಕಿ:8,000/-, 4) ಹಿರೋ ಸ್ಪ್ಲೇಂಡರ ಪ್ರೋ ನಂ. ಕೆಎ 33 ಎಲ್ 1470 ಅ:ಕಿ:8,000/-, 5) ಹಿರೋ ಪ್ಯಾಶನ ಪ್ರೋ ನಂ. ಕೆಎ 33 ಕ್ಯೂ 5092 ಅ:ಕಿ:10,000/-, 6) ಹಿರೋ ಪ್ಯಾಶನ ಪ್ರೋ ನಂ. ಕೆಎ 33 ಆರ್ 6158 ಅ:ಕಿ:10,000/-, 7) ಬಜಾಜ್ ಪಲ್ಸರ್ ನಂ. ಕೆಎ 53 ಇಎಸ್ 2882 ಅ:ಕಿ:10,000/-, 8) ಬಜಾಜ್ ಪಲ್ಸರ್ ನಂ. ಕೆಎ 33 ಎಕ್ಸ 2551 ಅ:ಕಿ:10,000/-, 9) ಪ್ಯಾಶನ ಪ್ರೋ ನಂ. ಕೆಎ 33 ವ್ಹಿ 0928 ಅ:ಕಿ:10,000/- ಮತ್ತು 10) ಹೊಂಡಾ ಯೂನಿಕಾರ್ನ ನಂ. ಕೆಎ 50 ವ್ಹಿ 0551 ಅ:ಕಿ:10,000/- ಹೀಗೆ ಒಟ್ಟು 10 ಮೋಟರ್ ಸೈಕಲ್ಗಳು ಇದ್ದವು. ಸದರಿ ನಗದು ಹಣ, ಇಸ್ಪೀಟ ಎಲೆಗಳು ಮತ್ತು ಮೋಟರ್ ಸೈಕಲ್ಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಜಪ್ತಿ ಪಂಚನಾಮೆ ಕೈಕೊಳ್ಳಲಾಯಿತು. ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ಸಲ್ಲಿಸುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 27/2022 ಕಲಂ:87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.