ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/03/2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 06/2021 ಕಲಂ 107 ಸಿ.ಆರ್.ಪಿ.ಸಿ : ಇಂದು ದಿನಾಂಕ 19/03/2021 ರಂದು ಸಾಯಂಕಾಲ 4-00 ಪಿ.ಎಂ.ದ ಸುಮಾರಿಗೆ ಠಾಣೆಯಿಂದ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಪ್ರಭುಗೌಡ ಸಿ.ಪಿ.ಸಿ-361, ಶ್ರೀ ಮೋನಪ್ಪ ಸಿ.ಪಿ.ಸಿ-263 ಮತ್ತು ಜೀಪ ಚಾಲಕನಾದ ಶ್ರೀ ಭೀಮರಾಯ ಸಿ.ಪಿ.ಸಿ-33 ರವರೊಂದಿಗೆ ಕ್ಯಾಸಪ್ಪನಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಅಲ್ಲಿಂದ ಬಸವಂತಪೂರ ಗ್ರಾಮಕ್ಕೆ ಸಾಯಂಕಾಲ 5-30 ಪಿ.ಎಂ.ಕ್ಕೆ ಬೇಟಿ ನೀಡಿ ಗ್ರಾಮದ ಆಗು ಹೋಗುಗಳ ಬಗ್ಗೆ ವಿಚಾರಿಸಲಾಗಿ ಭಾತ್ಮೀದಾರರಿಂದ ತಿಳಿದು ಬಂದಿದ್ದೆನೆಂದರೆ ಸದರಿ ಗ್ರಾಮದ ಒಂದನೇ ಪಾಟರ್ಿಯವನಾದ 1)ವೆಂಕಟೇಶ ತಂದೆ ಸಾಬಣ್ಣ ಚಾಮನೊರ ಜಾಃ ಬೇಡರ 2)ಲಕ್ಷ್ಮಣಕುಮಾರ ತಂದೆ ಶಿವಪ್ಪ ಚಾಮನೋರ ಬಸವಂತಪೂರ 3)ದ್ಯಾವಪ್ಪ ತಂದೆ ಸಾಬಣ್ಣ ತೆಳಗೇರಿ ಬಸವಂತಪೂರ 4)ರಾಮಕುಮಾರ ತಂದೆ ಶಿವಪ್ಪ ಚಾಮನೊರ ಬಸವಂತಪೂರ 5)ಶಿವಪ್ಪ ತಂದೆ ಸಾಬಣ್ಣ ಚಾಮನೊರ ಬಸವಂತಪೂರ 6)ಚಂದ್ರಾಮ ತಂದೆ ಸಾಬಣ್ಣ ಚಾಮನೊರ ಬಸವಂತಪೂರ 7)ಭಾಗಣ್ಣ ತಂದೆ ಭೀಂರಾಯ ಗೋಪಾಳೆ ಬಸವಂತಪೂರ 8)ಹಣಮಂತ ತಂದೆ ಭಾಗಣ್ಣ ಗೋಪಾಳೆ ಬಸವಂತಪೂರ 9)ಹಣಮಂತ ತಂದೆ ದೇವಿಂದ್ರ ಗೋಪಾಳೆ ಬಸವಂತಪೂರ 10)ಸಾಬಣ್ಣ ತಂದೆ ಭಾಗಣ್ಣ ಠಾಣಾಗುಂಧಿ ಸಾಃ ಎಲ್ಲರೂ ಬಸವಂತಪೂರ ಮತ್ತು ಎರಡನೇ ಪಾಟರ್ಿಯ ಜನರಾದ 1)ಭೀಮರಾಯ ತಂದೆ ಬಸವರಾಜ 2)ಸಾಬಣ್ಣ ತಂದೆ ಸಾಬಣ್ಣ ಚಾಕ್ರಿ 3)ಹಾಜಿಸಾಬ ತಂದೆ ಭೀಮರಾಯ ತೆಲಗುರ 4)ಶಿವರಾಜ ತಂದೆ ಭೀಮರಾಯ ತೆಲಗುರ 5)ದೇವಿಂದ್ರಕುಮಾರ ತಂದೆ ಬಸವರಾಜ ತೆಲಗುರ 6)ರಾಮಕುಮಾರ ತಂದೆ ಬಸವರಾಜ ಠಾಣಾಗುಂಧಿ 7)ಭೀಮರಾಯ ತಂದೆ ಶರಣಪ್ಪ ತೆಲಗುರ 8)ಗೋವಿಂದಪ್ಪ ತಂದೆ ಮುಕಣ್ಣ ಠಾಣಾಗುಂಧಿ 9)ಸಾಬರೆಡ್ಡಿ ತಂದೆ ಮೂಕಣ್ಣ ಠಾಣಾಗುಂಧಿ 10)ದೇವಪ್ಪ ತಂದೆ ಸಾಬಣ್ಣ ಚಾಕ್ರಿ ಈ ಎರಡು ಪಾಟರ್ಿ ಜನರ ಮಧ್ಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡನೇಯ ಪಾಟರ್ಿಯ ಮನೆಯವರು ಗೆದ್ದು ಬಂದಿದ್ದು, ಮೊದಲನೇಯ ಪಾಟರ್ಿಯ ಮನೆಯವರು ಸೋತಿರುತ್ತಾರೆ, ಅಲ್ಲದೇ ಗ್ರಾಮ ಪಂಚಾಯತಿಯ ಉದ್ಯೋಗ ಖಾತ್ರಿ(ನರೇಗಾ) ಕೆಲಸ ಮಾಡಿಸುವ ವಿಷಯದಲ್ಲಿ ಎರಡು ಪಾಟರ್ಿಯ ಜನರ ಮಧ್ಯ ತಕರಾರು ಮಾಡಿಕೊಂಡು ವೈಮನಸ್ಸು ಬೆಳೆಸಿಕೊಂಡು ದಿನಾಂಕ 16/03/2021 ರಂದು ಎರಡನೇಯ ಪಾಟರ್ಿಯ ಗೋವಿಂದಪ್ಪ ಮುಕ್ಕಣ್ಣ ಠಾಣಾಗುಂದಿ ಇವನ ಜೋತೆಗೆ ಮೊದಲನೇಯ ಪಾಟರ್ಿಯ ಜನರು ಜಗಳ ಮಾಡಿದ್ದರಿಂದ ಅವರ ಮೇಲೆ ಠಾಣಾ ಗುನ್ನೆ ನಂ 42/2021 ಕಲಂ 143, 147, 148, 324, 504, 506, 109 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ, ಆ ವಿಷಯದ ಸಂಬಂದ ವೈಮನಸ್ಸಿನಿಂದ ಎರಡು ಪಾಟರ್ಿಯ ಜನರು ಗ್ರಾಮದಲ್ಲಿ ತಿರುಗಾಡುತ್ತಾ ಸಾರ್ವಜನಿಕರ ಶಾಂತಿಯನ್ನು ಕದಡುತ್ತಾ ಗ್ರಾಮದಲ್ಲಿ ತಿರುಗಾಡುತ್ತಿದ್ದಾರೆ, ಮತ್ತು ಎರಡು ಪಾಟರ್ೀಯ ಜನರು ಯಾವುದೇ ಸಮಯದಲ್ಲಿ ಆಸ್ತಿ ಹಾನಿ ಮತ್ತು ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವವಿರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿದ್ದರಿಂದ ನಂತರ ಮರಳಿ ಠಾಣೆಗೆ ಸಾಯಂಕಾಲ 6-00 ಪಿ.ಎಮ್ ಕ್ಕೆ ಬಂದು ಸದರಿ ಒಂದನೇ ಪಾಟರ್ಿಯವನಾದ 1)ವೆಂಕಟೇಶ ತಂದೆ ಸಾಬಣ್ಣ ಚಾಮನೊರ ಜಾಃ ಬೇಡರ 2)ಲಕ್ಷ್ಮಣಕುಮಾರ ತಂದೆ ಶಿವಪ್ಪ ಚಾಮನೋರ ಬಸವಂತಪೂರ 3)ದ್ಯಾವಪ್ಪ ತಂದೆ ಸಾಬಣ್ಣ ತೆಳಗೇರಿ ಬಸವಂತಪೂರ 4)ರಾಮಕುಮಾರ ತಂದೆ ಶಿವಪ್ಪ ಚಾಮನೊರ ಬಸವಂತಪೂರ 5)ಶಿವಪ್ಪ ತಂದೆ ಸಾಬಣ್ಣ ಚಾಮನೊರ ಬಸವಂತಪೂರ 6)ಚಂದ್ರಾಮ ತಂದೆ ಸಾಬಣ್ಣ ಚಾಮನೊರ ಬಸವಂತಪೂರ 7)ಭಾಗಣ್ಣ ತಂದೆ ಭೀಂರಾಯ ಗೋಪಾಳೆ ಬಸವಂತಪೂರ 8)ಹಣಮಂತ ತಂದೆ ಭಾಗಣ್ಣ ಗೋಪಾಳೆ ಬಸವಂತಪೂರ 9)ಹಣಮಂತ ತಂದೆ ದೇವಿಂದ್ರ ಗೋಪಾಳೆ ಬಸವಂತಪೂರ 10)ಸಾಬಣ್ಣ ತಂದೆ ಭಾಗಣ್ಣ ಠಾಣಾಗುಂಧಿ ಸಾಃ ಎಲ್ಲರೂ ಬಸವಂತಪೂರ ಇವರ ವಿರುದ್ದ ಮುಂಜಾಗೃತಾ ಕ್ರಮವಾಗಿ ಠಾಣೆ ಪಿ.ಎ.ಆರ್. ನಂ 06/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಮೊದಲನೇ ಪಾಟರ್ಿ ಜನರನ್ನು ತಮ್ಮ ಕಛೇರಿಗೆ ಕರೆಯಿಸಿ 116(3) ಸಿ.ಆರ್.ಪಿ.ಸಿ. ಪ್ರಕಾರ ಇಂಟೆರಿಯಮ್ ಬಾಂಡ ಬರೆದುಕೊಳ್ಳಲು ಮಾನ್ಯವರಲ್ಲಿ ವಿನಂತಿ ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ:- 38/2021 ಕಲಂ : 363 ಐಪಿಸಿ : ನಿನ್ನೆ ದಿನಾಂಕ 18.03.2021 ರಂದು ಸಂಜೆ 7:00 ಗಂಟೆಯ ಸುಮಾರಿಗೆ ಫಿರ್ಯಾದಿಯ 2ನೇ ಮಗಳಾದ ಅನುರಾದ ಎಂಬುವಳು ಬಹರ್ಿದೆಸೆಗೆ ಹೋಗಿ ಬರುತ್ತೇನೆಂದು ಹೋದವಳು ಸಂಜೆ 7:30 ಗಂಟೆಯಾದರು ಮನೆಗೆ ಬಾರದೇ ಇರುವುದರಿಂದ ಊರಲ್ಲಿ ನೋಡಲು ಹೋಗಿದ್ದಾಗ ಫಿರ್ಯಾದಿಯ ತಂಗಿಯ ಮಗಳಾದ ಮಂಜೂಳಾ ಎಂಬಾಕೆಯು ಅನುರಾಧಳು ಒಬ್ಬಳೆ ಹೋಗುತ್ತಿರುವುದನ್ನು ನೋಡಿ ಅಕ್ಕ ಎಲ್ಲಿಗೆ ಹೋಗುತ್ತಿದ್ದಿ ಅಂತಾ ವಿಚಾರಿಸಿದಾಗ ಆಕೆ ಎಲ್ಲಿಗೆ ಇಲ್ಲ ನೀನು ಮನೆಗೆ ನಡಿ ನಾನು ಬರುತ್ತೇನೆ ಎಂದು ಹೇಳಿದ ಬಗ್ಗೆ ಮಂಜೂಳಾಳು ಫೀರ್ಯಾದಿಗೆ ತಿಳಿಸಿದ ನಂತರ ಫಿರ್ಯಾದಿ ಮತ್ತು ಆಕೆಯ ತಾಯಿ ಅನಂತಮ್ಮ ಇಬ್ಬರು ಊರಲ್ಲಿ ಹುಡುಕಾಡಿದರೂ ಸಹ ಪತ್ತೆಯಾದೇ ಇದ್ದುದ್ದರಿಂದ ಇಂದು ದಿನಾಂಕ 19.03.2021 ರಂದು ಸಂಜೆ 4:00 ಗಂಟೆಗೆ ಠಾಣೆಗೆ ಬಂದು ತನ್ನ ಮಗಳನ್ನು ಯಾರೋ, ಯಾವುದೋ ಉದ್ದೇಶಕ್ಕೆ ಅಪಹರಣ ಮಾಡಿಕೊಂಡು ಹೋಗಿದ್ಧಾರೆ ಅಂತಾ ಬಾಯಿ ಮಾತಿನ ಹೇಳಿಕೆ ನೀಡಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 38/2021 ಕಲಂ: 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ:- 37/2021 ಕಲಂ: 279,3337,338 ಐ.ಪಿ.ಸಿ : ಇಂದು ದಿನಾಂಕ 18.03.2021 ರಂದು ಚಿರಾಯು ಆಸ್ಪತ್ರೆ ಕಲಬುಗರ್ಿಯಲ್ಲಿ ಗಾಯಾಳುವಿನ ತಂದೆ ಕನಕಪ್ಪ ತಂದೆ ಹಣಮಂತ್ರಾಯ ವಂದಗನೂರ ವಯಾ: 68 ವರ್ಷ ಜಾತಿ:ಕಬ್ಬಲಿಗಾ ಉ:ಒಕ್ಕಲುತನ ಸಾ: ಕೆಂಭಾವಿ ತಾ: ಸುರಪೂರ ಜಿಲ್ಲಾ: ಯಾದಗಿರಿ ಇವರ ಹೇಳಿಕೆಯನ್ನು ಪಡೆದುಕೊಂಡು ಇಂದು ದಿನಾಂಕ 19.03.2021 ರಂದು ರಾತ್ರಿ 02.30 ಎಎಮ್ ಕ್ಕೆ ಠಾಣೆಗೆ ಬಂದಿದ್ದು ಸದರ ಹೇಳಿಕೆ ಸಾರಾಂಶವೇನಂದರೆ ನನಗೆ ಎರಡು ಜನ ಮಕ್ಕಳಿದ್ದು ಅವರಲ್ಲಿ ಹಿರಿಯ ಮಗನಾದ ವಿಜಯಕುಮಾರ ಈತನು ಸುಮಾರು ಒಂದು ವಾರದ ಹಿಂದೆ ತೀರಿಹೋಗಿದ್ದು ಮನೆಯ ಜವಬ್ದಾರಿಯನ್ನು ನನ್ನ ಕಿರಿಯ ಮಗನಾದ ಭೀಮಣ್ಣ ತಂದೆ ಕನಕಪ್ಪ ವಂದಗನೂರ ವ|| 35 ಈತನೇ ನೋಡಿಕೊಂಡು ಹೋಗುತ್ತಿದ್ದನು.ಹೀಗಿದ್ದು ದಿನಾಂಕ 17.03.2021 ರಂದು ಬೆಳಿಗ್ಗೆ ನನ್ನ ಮಗನಾದ ಭೀಮಣ್ಣ ತಂದೆ ಕನಕಪ್ಪ ವಂದಗನೂರ ಈತನು ಸುರಪೂರದಲ್ಲಿ ಕೆಲಸವಿದೆ ಅಂತ ಹೇಳಿ ಮೋಟರ ಸೈಕಲ ನಂಬರ ಕೆಎ-33 ಡಬ್ಲ್ಯೂ-7055 ನೇದ್ದನ್ನು ತೆಗೆದುಕೊಂಡು ಹೋದನು. ಅಂದೇ ದಿನಾಂಕ 17.03.2021 ರಂದು ರಾತ್ರಿ 7 ಗಂಟೆಯ ಸುಮಾರಿಗೆ ನಾನು ಕೆಂಭಾವಿಯ ನಮ್ಮ ಮನೆಯಲ್ಲಿದ್ದಾಗ ಕೂಡಲಗಿ ಗ್ರಾಮದ ದೇವೀಂದ್ರಪ್ಪ ತಂದೆ ನಿಂಗಪ್ಪ ಹುಜರತಿ ಇವರು ನನಗೆ ಪೋನ ಮಾಡಿ ಮಗನಾದ ಭೀಮಣ್ಣ ತಂದೆ ಕನಕಪ್ಪ ವಂದಗನೂರ ಈತನು ಸುರಪೂರದಿಂದ ಮರಳಿ ಕೆಂಭಾವಿಗೆ ಬರುತ್ತಿರುವಾಗ ಕೆಂಭಾವಿ ಸುರಪೂರ ಮುಖ್ಯ ರಸ್ತೆಯ ನಿಂಗನಗೌಡ ಕೆಂಭಾವಿ ಇವರ ಹೊಲದ ಪಕ್ಕದಲ್ಲಿ ಅಪಘಾತವಾಗಿ ಬಿದ್ದಿರುತ್ತಾನೆ ಅಂತ ತಿಳಿಸಿದಾಗ ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನು ರೋಡಿನ ಎಡಮಗ್ಗಲಿಗೆ ಬಿದ್ದಿದ್ದು ಸದರಿಯವನಿಗೆ ನೋಡಲು ತಲೆಯ ಹಿಂಬಾಗದಲ್ಲಿ ಭಾರೀ ರಕ್ತಗಾಯವಾಗಿ, ಕಿವಿಯಿಂದ ರಕ್ತಸ್ರಾವವಾಗಿ, ಬಲಗಾಲ ಹೆಬ್ಬರಳಿಗೆ ಹಾಗು ಹಣೆಗೆ ತರಚಿದ ರಕ್ತಗಾಯಗಳಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ಅಲ್ಲಿಯೇ ಇದ್ದ ಕೂಡಲಗಿ ಗ್ರಾಮದ ದೇವೀಂದ್ರಪ್ಪ ಈತನಿಗೆ ವಿಚಾರಿಸಲಾಗಿ ಮಗನಾದ ಭೀಮಣ್ಣ ಈತನು ಸುರಪೂರ ಕಡೆಯಿಂದ ತನ್ನ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದಾಗ ಮುಂದೆ ಒಂದು ವಾಹನ ಬಂದಿದ್ದು ಅದರ ಬೆಳಕಿಗೆ ಮೋಟರ ಸೈಕಲ ಆಯ ತಪ್ಪಿ ರೋಡಿನ ಎಡಮಗ್ಗಲಿಗೆ ಹಾಕಿದ ಕಲ್ಲುಗಳ ಮೇಲೆ ಭಲವಾಗಿ ಬಿದ್ದು ಗಾಯ ಹೋದಿರುತ್ತಾನೆ ಅಂತ ತಿಳಿಸಿದನು. ಮಗನಾದ ಭೀಮಣ್ಣ ಈತನ ತಲೆಯಿಂದ ಹಾಗು ಕಿವಿಯಿಂದ ರಕ್ತಸ್ರಾವವಾಗುತಿದ್ದರಿಂದ ಸದರಿಯವನ್ನು ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಯ ಚಿರಾಯು ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ನನ್ನ ಮಗನು ಇನ್ನೂ ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲ. ಸದರಿ ಅಪಘಾತಕ್ಕೆ ಮಗನಾದ ಭೀಮಣ್ಣ ತಂದೆ ಕನಕಪ್ಪ ವಂದಗನೂರ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 37/2021 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ್ ಠಾಣೆ:- 38/2021 ಕಲಂ: 457 380 ಐ.ಪಿ.ಸಿ : ಇಂದು ದಿನಾಂಕ 19.03.2021 ರಂದು 21.15 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಪರಮಣ್ಣ ತಂದೆ ದ್ಯಾವಣ್ಣ ಕುರಿ ವಯಾ|| 25 ವರ್ಷ ಜಾ|| ಕುರಬರ ಉ|| ಎಡಿಓ.ಎಮ್ಎಸ್ ಐಎಲ್ ಮದ್ಯ ಮಾರಾಟ ಮಳಿಗೆ ಗೋಡ್ರಿಹಾಳದ ಉಸ್ತುವಾರಿ ಸಾ|| ಮಹಲರೋಜಾ ತಾ|| ಶಹಾಪೂರ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನಾನು ಸುಮಾರು ಒಂದೂವರೆ ತಿಳಗಳಿನಿಂದ ಎಡಿಓ.ಎಮ್ಎಸ್ ಐಎಲ್ ಮದ್ಯ ಮಾರಾಟ ಮಳಿಗೆ ಗೋಡ್ರಿಹಾಳದ ಉಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಇರುತ್ತೇನೆ. ನನ್ನ ಜೊತೆ ಶಾರೂಖ್ ಪಟೇಲ ತಂದೆ ಲಾಳೆಪಟೇಲ ಸಾ|| ಹೆಗ್ಗಣದೊಡ್ಡಿ ಇವರು ಸಹ ಮಳಿಗೆಯ ಸಹಾಯಕ ಎಡಿಓ ಆಗಿ ಕರ್ತವ್ಯ ನಿರ್ವಹಿಸಿಕೊಂಡು ಇರುತ್ತಾರೆ. ನಮ್ಮ ಮಳಿಗೆಯನ್ನು ದಿನಾಲು ಬೆಳಿಗ್ಗೆ 11 ಗಂಟೆಗೆ ಪ್ರಾರಂಭಿಸಿ ರಾತ್ರಿ 10 ಗಂಟೆಗೆ ಬಂದ ಮಾಡುತ್ತೇವೆ. ಆ ದಿನದ ಜಮಾ ಆದ ವ್ಯಾಪಾರದ ಹಣ ಮಳಿಗೆಯ ಕ್ಯಾಶ್ ಬಾಕ್ಸ್ದಲ್ಲಿ ಇಟ್ಟು ಮರುದಿನ ಬ್ಯಾಂಕಿಗೆ ಜಮಾ ಮಡುತ್ತೇವೆ. ಹೀಗಿದ್ದು ಎಂದಿನಂತೆ ನಿನ್ನೆ ದಿನಾಂಕ 18/03/2021 ರಂದು ರಾತ್ರಿ 10 ಗಂಟೆಗೆ ಆ ದಿನದ ಜಮಾ ಆದ ಹಣ 32.220/- ರೂಪಾಯಿಗಳನ್ನು ನಮ್ಮ ಮಳಿಗೆಯ ಗೋದ್ರೇಜ ಲಾಕರದಲ್ಲಿಟ್ಟು ನಮ್ಮ ಮಳಿಗೆಯನ್ನು ನಾವಿಬ್ಬರೂ ಕೂಡಿ ಬಂದ ಮಾಡಿ ಹೋಗಿದ್ದು ಇರುತ್ತದೆ. ಹೀಗಿದ್ದು ಎಂದಿನಂತೆ ಇಂದು ದಿನಾಂಕ 19/03/2021 ರಂದು ಬೆಳಿಗ್ಗೆ 09.45 ಗಂಟೆಗೆ ನಾನು ಹಾಗು ಶಾರೂಖ್ ಇಬ್ಬರು ಕೂಡಿಕೊಂಡು ನಮ್ಮ ಮಳಿಗೆಗೆ ಹೋಗಿ ನೋಡಲು ಮಳಿಗೆಯ ಶೆಟ್ರ್ಸ್ಗೆ ಹಾಕಿದ ಎರಡು ಕಡೆಯ ಗೋದ್ರೆಜ್ ಕೀಲಿ ಕಪ್ಪಿಗಳು ಮುರಿದು ಅಲ್ಲಿಯೇ ಬಿದ್ದಿದ್ದು ಅಲ್ಲದೇ ಒಳಗಡೆ ಇರುವ ಲಾಕರ ಚಾವಿ ಕೂಡಾ ಅಲ್ಲಿಯೇ ಪಕ್ಕದಲ್ಲಿ 100 ಫೀಟ್ ಅಂತರದಲ್ಲಿನ ಪಾನಶಾಪ ಅಂಗಡಿಯ ಶೆಟರಸ್ಗೆ ನೇತು ಹಾಕಿ ಹೋಗಿದ್ದು ಇರುತ್ತದೆ. ನಂತರ ನಾನು ಸದರ ವಿಷಯವನ್ನು ನಮ್ಮ ಮಳಿಗೆಯ ಮೇಲ್ವಿಚಾರಕರಾದ ಶ್ರೀ ಮಾಳಿಂಗರಾಯ ತಂದೆ ನಿಂಗಪ್ಪ ಹಳಿಮನಿ ಸಾ|| ಖಾನಾಪೂರ ಇವರಿಗೆ ತಿಳಿಸಿದ್ದು ನಂತರ ಅವರು ಹಾಗು ಜಿಲ್ಲಾ ಸಂಪಕರ್ಾಧಿಕಾರಿಯವರಾದ ವಿಜಯಕುಮಾರ ಸರ್ ಯಾದಗಿರಿ ಇಬ್ಬರೂ ಕೂಡಿಕೊಂಡು ನಮ್ಮ ಮಳಿಗೆಗೆ ಅಂದಾಜು 12 ಗಂಟೆಯ ಸುಮಾರಿಗೆ ಬಂದು ನಮ್ಮ ಮಳಿಗೆಯನ್ನು ಪೊಲೀಸ್ ಸಿಬ್ಬಂದಿಯವರ ಸಮಕ್ಷಮದಲ್ಲಿ ಪರಿಶೀಲಿಸಿ ಒಳಗೆ ಹೋಗಿ ನೋಡಲು ನಮ್ಮ ಮಳಿಗೆಯಲ್ಲಿ ಇದ್ದ ಮದ್ಯದ ದಾಸ್ತಾನು ತಾಳೆ ಮಾಡಿ ನೋಡಿದಾಗ ಸರಿ ಇದ್ದು, ನಂತರ ಹೊರಗಡೆ ಸಿಕ್ಕ ಚಾವಿಯಿಂದ ನಮ್ಮ ಮಳಿಗೆಯಲ್ಲಿದ್ದ ಗೋದ್ರೇಜ್ ಕ್ಯಾಶ ಬಾಕ್ಸ್ ಲಾಕರದಲ್ಲಿಟ್ಟ 32,220/- ರೂಪಾಯಿ ಹಣವನ್ನು ನೋಡಲಾಗಿ ಇರಲಿಲ್ಲ. ಸದರ ಹಣವನ್ನು ದಿನಾಂಕ 18.03.2021 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 19.03.2021 ರ ಬೆಳಗಿನ 09.45 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮಳಿಗೆಯ ಕೀಲಿ ಮುರಿದು ಮಳಿಗೆಯ ಲಾಕರದಲ್ಲಿಟ್ಟ 32,220/- ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದೂರು ನೀಡಲು ತಿಳಿಸಿದ ಮೇರೆಗೆ ನಾನು ನಮ್ಮ ಮೇಲಾಧಿಕಾರಿಯವರಲ್ಲಿ ವಿಚಾರಿಸಿ ಬಂದು ಅಜರ್ಿ ನೀಡಿದ್ದು ಕಾರಣ ಸದರಿ ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 38/2021 ಕಲಂ 457,380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಶೋರಾಪೂರ ಪೊಲೀಸ್ ಠಾಣೆ:- 53/2021 ಕಲಂ. 118 ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತುಅಭಿವೃದ್ಧಿಕಾಯ್ದೆಯ ಮತ್ತು ಕಲಂ. 166, 418 ಸಂಗಡ 34 ಐಪಿಸಿ : ಇಂದು ದಿನಾಂಕ: 19/03/2021 ರಂದು 3-30 ಪಿ.ಎಂ.ಕ್ಕೆ ಶ್ರೀ ಮಾಹದೇವಪ್ಪ ಸಿಪಿಸಿ-126 ಸುರಪೂರಠಾಣೆರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರರವರ ಖಾಸಗಿ ಪಿಯರ್ಾದಿ ಸಂಖ್ಯೆ 49/2016 ನೇದ್ದನ್ನುಠಾಣೆಗೆತಂದು ಹಾಜರ ಪಡಿಸಿದ್ದು ಸದರಿ ಪಿಯರ್ಾದಿ ಹಾಗೂ ಮಾನ್ಯ ನ್ಯಾಯಾಲಯ ನಿದರ್ೇಶನದ ಪ್ರಕಾರ ನಾನು ನಿಂಗಪ್ಪ ಹೆಚ್.ಸಿ-118ಸುರಪೂರಠಾಣೆಗುನ್ನೆ ನಂ.53/2021 ಕಲಂ. 118 ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತುಅಭಿವೃದ್ಧಿಕಾಯ್ದೆಯ ಮತ್ತು ಕಲಂ. 166, 418 ಸಂಗಡ 34 ಐಪಿಸಿ ನೇದ್ದರ ಪ್ರಕಾರಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 54/2020 ಕಲಂ 279, 338 ಐಪಿಸಿ ಮತ್ತು 187 ಐಎಂವಿ ಯ್ಯಕ್ಟ : ಇಂದು ದಿನಾಂಕ: 19/03/2021 ರಂದು 5:30 ಪಿ.ಎಂ ಕ್ಕೆ ಠಾಣೆಯಲ್ಲಿದಾಗ ಪಿಯರ್ಾದಿ ಶ್ರೀ ಆಶಪ್ಪ ತಂದೆ ಶಿವಣ್ಣ ಕಟಿಗೆಲ್ಲರ ವ|| 45 ವರ್ಷ ಜಾ|| ಯಾದವ ಉ|| ಒಕ್ಕಲುತನ ಸಾ|| ದೇವಿಕೇರಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಸಾರಾಂಶವೆನಂದರೆ, ನಾನು ಮತ್ತು ನನ್ನ ಹೆಂಡತಿ ಭೀಮವ್ವ, ಹಿರಿಯ ಮಗ ದೇವಪ್ಪ ಮೂವರು ಮನೆಯಲ್ಲಿದ್ದಾಗ, ನನ್ನ ಎರಡನೇ ಮಗನಾದ ಅಯ್ಯಪ್ಪ ವ|| 18 ವರ್ಷ ಇತನು ದಿನಾಂಕ:17/03/2021 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ಬಿಜಾಸಪುರ ಕ್ಯಾಂಪನಲ್ಲಿ ಗೌಂಡಿ ಕೆಲಸಕೆಂದು ಹೊಗುತ್ತೆನೆ ಅಂತಾ ಹೇಳಿ ಹೊದನು. ಸಾಯಂಕಾಲ 5:50 ಗಂಟೆ ಸುಮಾರಿಗೆ ನಮ್ಮ ಕಾಕನ ಮಗನಾದ ತಿಮ್ಮಣ್ಣ ತಂದೆ ಗೋವಿಂದಪ್ಪ ಕಟಿಗೆಲ್ಲರ ಇತನು ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ನನ್ನ ಕೆಸಲ ಮುಗಿಸಿಕೊಂಡು ಊರಿಗೆ ಬರುತ್ತಿರುವಾಗ ಅಂದಾಜು 5:30 ಗಂಟೆಗೆ ಸುರಪುರ-ಶಹಾಪುರ ಮುಖ್ಯ ರಸ್ತೆಯ ದೇವಿಕೇರಿ ಕ್ರಾಸ ಹತ್ತಿರ ನಿನ್ನ ಮಗ ಅಯ್ಯಪ್ಪ ಇತನು ದೇವಿಕೇರಿ ಕ್ರಾಸ ಹತ್ತಿರ ರೋಡಿನ ಮೇಲೆ ನಡೆದುಕೊಂಡು ಊರ ಕಡೆಗೆ ಬರುತ್ತಿರುವಾಗ ಸುರಪುರ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಯ್ಯಪ್ಪನಿಗೆ ಡಿಕ್ಕಿ ಪಡಿಸಿದ್ದರಿಂದ ಅಯ್ಯಪ್ಪನು ರೋಡಿನ ಮೇಲೆ ಬಿದ್ದನು. ನಾನು ಹೊಗಿ ನೊಡಲಾಗಿ ಅಯ್ಯಪ್ಪನಿಗೆ ತಲೆಯ ಹಿಂಬಾಗಕ್ಕೆ ಭಾರಿ ರಕ್ತಗಾಯ, ಹಣೆಗೆ ರಕ್ತಗಾಯ ಕೈ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಕಾರ ಸ್ವಲ್ಪ ಮುಂದೆ ಹೊಗಿ ನಿಲ್ಲಿಸಿದನು. ಮಾರುತಿ ಸ್ವಿಪ್ಟ ಕಾರ ನಂ. ಕೆಎ-36 ಎಂ-7942 ಇದ್ದು ಅದರ ಚಾಲಕನು ಕಾರಿನಲ್ಲಿ ಕುಳಿತು ನನ್ನನ್ನು ನೋಡುತ್ತಾ ಕಾರ ಅಲ್ಲಿಂದ ತಗೆದುಕೊಂಡು ಹೊದನು ಕಾರ ಮತ್ತು ಚಾಲಕನನ್ನು ನೋಡಿದರೆ ಗುರುತ್ತಿಸುತ್ತೇನೆ ನಾನು ಅಯ್ಯಪ್ಪನನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಕರೆದುಕೊಂಡು ಹೊಗುತ್ತೆನೆ ನೀವು ಬನ್ನಿರಿ ಅಂತಾ ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ಭೀಮವ್ವ, ನನ್ನ ಹಿರಿಯ ಮಗ ದೇವಪ್ಪ ಮೂರು ಜನರು ಕೂಡಿ ಸುರಪುರ ಸರಕಾರಿ ಆಸ್ಪತ್ರೆಗೆ ಹೊಗಿ ನನ್ನ ಮಗನಿಗೆ ನೊಡಲಾಗಿ ನನ್ನ ಮಗನಿಗೆ ಮೇಲೆ ಹೇಳಿದಂತೆ ಗಾಯಗಳಾಗಿದ್ದು, ಪ್ರಥಮೋಪಚಾರ ಮಾಡಿದ ವೈದ್ಯಾದಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೊಗಲು ತಿಳಿಸಿದ್ದರಿಂದ ನಾವು ಒಂದು ಖಾಸಗಿ ವಾಹನದಲ್ಲಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತನೆ. ಕಾರಣ ನನ್ನ ಮಗನಿಗೆ ಅಪಘಾತ ಪಡಿಸಿದ ಮಾರುತಿ ಸ್ವಿಪ್ಟ ಕಾರ ನಂ. ಕೆಎ-36 ಎಂ-7942 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 54/2021 ಕಲಂ 279, 338 ಐಪಿಸಿ ಮತ್ತು ಕಲಂ: 187 ಐಎಂವಿ ಯ್ಯಾಕ್ಟ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 55/2020 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 19/03/2021 ರಂದು 8:15 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ. ಪಾಟೀಲ್ ಪಿಐ ಸಾಹೇಬರು ಇಬ್ಬರು ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೆಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 19/03/2021 ರಂದು 5:45 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಪುರ ಪಟ್ಟಣದ ಜೈನ್ ಮಂದಿರ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕೂಡಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ, ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176, 2) ಶ್ರೀ ಮಂಜುನಾಥ ಪಿಸಿ-271, 3) ಶ್ರೀ ಸೋಮಯ್ಯ ಸಿಪಿಸಿ-235, 4) ದೇವೀಂದ್ರಪ್ಪ ಸಿಪಿಸಿ-184 ಇವರಿಗೆ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಶಿವಪುತ್ರ ತಂದೆ ಯಂಕಪ್ಪ ದಾಸರ ವಯಾ:32 ಷರ್ವ ಜಾ:ದಾಸರ ಉ:ಕೂಲಿ ಸಾ:ಭೋವಿಗಲ್ಲಿ ಸುರಪೂರ ತಾ:ಸುರಪೂರ 2) ಶ್ರೀ ಹಣಮಂತ ತಂದೆ ಯಂಕಣ್ಣ ಕಟ್ಟಿಮನಿ ವಯಾ:52 ವರ್ಷ ಜಾ:ಕಬ್ಬಲಿಗ ಸಾ:ಭೋವಿಗಲ್ಲಿ ಸುರಪೂರ ತಾ:ಸುರಪೂರ ತಾ:ಸುರಪೂರ ಇವರನ್ನು 6:15 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 6:30 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 6:45 ಪಿ.ಎಮ್ ಕ್ಕೆ ಸುರಪುರ ಪಟ್ಟಣದ ಜೈನ್ ಮಂದಿರ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಜೈನ್ ಮಂದಿರ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬನು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಿದ್ದು, ಇನ್ನೋಬ್ಬನು ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6:50 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದಿದ್ದು, ಇಬ್ಬರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ ಅವರ ಹೆಸರು 1) ತಿಮ್ಮಯ್ಯ ತಂದೆ ಪಕೀರಪ್ಪ ಕರಿಕಲ್ ವ|| 40 ವರ್ಷ ಜಾ|| ಮೇದಾರ ಉ|| ಕೂಲಿ ಕೆಲಸ ಸಾ|| ಮೇದಾರಗಲ್ಲಿ ಸುರಪುರ ಅಂತಾ ತಿಳಿಸಿದ್ದು, 2) ಗೋಪಾಲ ತಂದೆ ಭೀಮಣ್ಣ ಮುಂಡರಗಿ ವ|| 55 ವರ್ಷ ಜಾ|| ಬೇಡರು ಉ|| ಗೌಂಡಿಕೆಲಸ ಸಾ|| ಕಬಾಡಗೇರ ಸುರಪೂರ ಅಂತಾ ತಿಳಿಸಿದ್ದು, ಸದರಿಯವರ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 4800=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 6:50 ಪಿ.ಎಮ್ ದಿಂದ 7:50 ಪಿ.ಎಮ್ದ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಇಬ್ಬರು ಆರೋಪಿತರೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.

 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 55/2021 ಕಲಂ 409,465,468,420 ಐಪಿಸಿ : ಇಂದು ದಿನಾಂಕ 19/03/2021 ರಂದು 10.30 ಎಎಮ್ ಕ್ಕೆ ಫಿಯರ್ಾದಿದಾರರಾದ ಶಿವಶರಣಪ್ಪ ತಂದೆ ಲಿಂಗಣ್ಣ ಸಾಹುಕಾರ ವ|| 62ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹಯ್ಯಾಳ(ಬಿ) ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕೈಬರಹದಿಂದ ಬರೆದ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಅಜರ್ಿಯ ಸಾರಾಂಶವೇನೆಂದರೆ, ನಾನು ಶಹಾಪೂರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಕಾರ್ಡ) ಬ್ಯಾಂಕಿನ ಖಾಯಂ ಸದಸ್ಯನಾಗಿದ್ದು ನನ್ನ ಸದಸ್ಯತ್ವದ ಸಂಖ್ಯೆ 174/19 ಇರುತ್ತದೆ. ಸದ್ಯ ಶಹಾಪೂರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಕಾರ್ಡ) ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯು ದಿನಾಂಕ 25/03/2021 ರಂದು ನಿಗದಿಯಾಗಿದ್ದು, ಸದರಿ ಚುನಾವಣೆ ನಡೆಸಬೇಕಾದರೆ ಮುಂಚಿತವಾಗಿ ಸದಸ್ಯರಿಗೆ ನೋಟೀಸ್ ನೀಡಿ ಸಭೆ ಕರೆಯುವುದು ಬ್ಯಾಂಕಿನ ವ್ಯವಸ್ಥಾಪಕರ ಕಡ್ಡಾಯ ಕಾರ್ಯವಾಗಿದ್ದು, ಬ್ಯಾಂಕಿನ ವ್ಯವಸ್ಥಾಪಕರಾದ ಪರಮಾನಂದ ಹಣಮಶೆಟ್ಟಿ ಇವರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಭೆ ಕರೆಯದೇ ಖಾಯಂ ಸದಸ್ಯರಾದ ನನ್ನನ್ನು ಮತ್ತು ಅನೇಕ ಸದಸ್ಯರ ಹೆಸರುಗಳನ್ನು ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಿರುತ್ತಾನೆ. ನಮಗೆ ಹೇಳದೇ ಕೇಳದೇ ಖಾಯಂ ಸದಸ್ಯರಾದ ನಮ್ಮ ಹೆಸರನ್ನು ಹೇಗೆ ತೆಗೆದು ಹಾಕಿದ್ದೀರಿ ಅಂತಾ ಕೇಳಿದಾಗ ಅದನ್ನು ನೀವೇನು ಕೇಳುತ್ತೀರಿ ನಾವು ತೆಗೆದು ಹಾಕಬೇಕಾಗಿತ್ತು ತೆಗೆದಿದ್ದೇವೆ ಅಂತಾ ಹಾರಿಕೆ ಉತ್ತರ ಕೊಟ್ಟು ನನ್ನ ಹೆಸರನ್ನು ಹಾಗೂ ನನ್ನಂತೆ ಇನ್ನೂ ಅನೇಕ ಸದಸ್ಯರ ಹೆಸರನ್ನು ಉದ್ದೇಶಪೂರ್ವಕವಾಗಿ ವಂಚನೆ ಮಾಡಿ ಬ್ಯಾಂಕಿನ ಸದಸ್ಯತ್ವದಿಂದ ತೆಗೆದು ಹಾಕಿ ಮೋಸ ಮಾಡಿದ್ದು ಇರುತ್ತದೆ. ಬ್ಯಾಂಕಿನ ಸಭೆ ಕೈಗೊಂಡ ದೃಢೀಕೃತ ನಡಾವಳಿ ಯಾದಿ ನೀಡಿರಿ ಅಂತಾ ನಾನು ಕೇಳಿದಾಗ ವ್ಯವಸ್ಥಾಪಕರಾದ ಪರಮಾನಂದ ರವರು ಈ 5 ವರ್ಷದ ಅವಧಿಯಲ್ಲಿ ಕೈಗೊಂಡ ವಾಷರ್ಿಕ ಸಭೆಗಳ ನಡಾವಳಿ ಯಾದಿಯ ಝರಾಕ್ಸ್ ಪ್ರತಿ ನೀಡಿದ್ದು ದಿನಾಂಕ 24/9/2016 ರಂದು ಕೈಗೊಂಡ ಸಭೆಗೆ ನಾವು ಹಾಜರಾಗಿ ಸಹಿ ಮಾಡಿರುವುದು ನಿಜವಿದ್ದು, ಆದರೆ ದಿನಾಂಕ 16/09/2017, 15/09/2018, 21/09/2019 ಮತ್ತು ದಿನಾಂಕ 29/10/2020 ರಂದು ನಡೆಸಿದ ಸಭೆಯ ನಡಾವಳಿಯನ್ನು ನೋಡಿದರೆ ನಮಗೆ ಈ ಸಭೆಗಳ ಮಾಹಿತಿ ನೀಡಿಲ್ಲ, ನೋಟೀಸ್ ನೀಡಿಲ್ಲ ಈ ನಡಾವಳಿ ಯಾದಿಗಳನ್ನು ನೋಡಲಾಗಿ ಮೃತಪಟ್ಟ ವ್ಯಕ್ತಿಗಳಾದ ರವೀಂದ್ರನಾಥ ತಂದೆ ಶೀಲಪ್ಪ ಗೋಗಿ ಸಾ|| ಶಹಾಪೂರ, ಶಿವಶಂಕ್ರಯ್ಯ ತಂದೆ ಬಸಯ್ಯ ಸಾ|| ಹಯ್ಯಾಳ(ಬಿ) ಮತ್ತು ಬಸವರಾಜಪ್ಪ ತಂದೆ ಮಲ್ಲನಗೌಡ ಸಾ|| ಹಳಿಸಗರ ಇವರು ಸಭೆಗಳಲ್ಲಿ ಹಾಜರಿದ್ದಂತೆ ಅವರ ನಕಲಿ ಸಹಿ ಮಾಡಿ ಸದಸ್ಯರಿಗೆ ವಂಚಿಸುವ ಉದ್ದೇಶದಿಂದ ನಕಲಿ ಯಾದಿ ತಯಾರಿಸಿದ್ದು ಕಂಡು ಬಂದಿದ್ದು ಇರುತ್ತದೆ. ಇದೇ ರೀತಿ ಇನ್ನೂ ಅನೇಕ ಜನ ಮೃತಪಟ್ಟ ಸದಸ್ಯರುಗಳು ಸಾಮಾನ್ಯ ಸಭೆಗಳಿಗೆ ಹಾಜರಾಗಿದ್ದಾರೆಂದು ಸುಳ್ಳು ಮಾಹಿತಿ ಸೃಷ್ಟಿಸಿ ಹೆಸರು ಮತ್ತು ಸಹಿ ನಮೂದಿಸಿರುವ ಸಾಧ್ಯತೆ ಇರುತ್ತದೆ. ಆದಕಾರಣ ಮೃತಪಟ್ಟವರ ಹೆಸರಿನಲ್ಲಿ ಸಹಿ ಮಾಡಿ ಸಭೆ ಕರೆದಂತೆ ಸುಳ್ಳು ನಡಾವಳಿ ಯಾದಿ ಸೃಷ್ಟಿಸಿದ್ದು ಅಲ್ಲದೇ ಯಾವುದೇ ಮುನ್ಸೂಚನೆ ನೀಡದೇ ನೋಟೀಸ್ ಜಾರಿ ಮಾಡದೇ ನನ್ನದು ಅಲ್ಲದೇ ಇನ್ನೂ ಅನೇಕ ಸದಸ್ಯರ ಸದಸ್ಯತ್ವ ತೆಗೆದು ಹಾಕಿ ಮೋಸ ಮಾಡಿದ ಶಹಾಪೂರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಕಾರ್ಡ) ಬ್ಯಾಂಕಿನ ವ್ಯವಸ್ಥಾಪಕರಾದ ಪರಮಾನಂದ ಹಣಮಶೆಟ್ಟಿ ಇವರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಅಂತಾ ಈ ಅಜರ್ಿಯ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 55/2021 ಕಲಂ 409, 465, 468, 420 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಠಾಣೆ ಗುನ್ನೆ ನಂ :- 56/2021ಕಲಂ 318 ಐ.ಪಿ.ಸಿ. : ದಿನಾಂಕ 19/03/2021 ರಂದು ಬೆಳಿಗ್ಗೆ 10-45 ಗಂಟೆಗೆ ಪಿಯರ್ಾದಿ ಶ್ರೀ ಡಾ|| ಬಸವರಾಜ ತಂದೆ ಶಿವಣ್ಣ ಇಜೇರಿ ವ|| 44 ಜಾ|| ಕುಂಬಾರ ಉ|| ಸ್ಪಂದನ ಆಸ್ಪತ್ರೆಯ ಆಡಳಿತ ಅಧಿಕಾರಿ ಸಾ|| ಕುಂಬಾರ ಓಣಿ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಈ ದಿನ ದಿನಾಂಕ 19/03/2021 ರಂದು ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ನಮ್ಮ ಆಸ್ಪತ್ರ್ರೆಯ ಒಳಗಡೆ ಇರುವ ಶೌಚಾಲಯವನ್ನು ಸ್ವಚ್ಚಗೊಳಿಸಲು ಇಬ್ರಾಹಿಂಶೆಖ್ ಎನ್ನುವ ಸಿಬ್ಬಂದಿ ಹೋದಾಗ ಒಂದು ಅನಾಮದೆಯ ಬ್ರೂಣವು ಶೌಚಾಲಯದ ಗುಂಡಿಯಲ್ಲಿ ದೋರೆತ್ತಿರುತ್ತದೆ.
ನಮ್ಮ ಆಸ್ಪತ್ರೆಯಲ್ಲಿ ಹೆರಿಗೆ ಸಂಬಂದಿಸಿದಂತೆ ಯಾವುದೆ ರೀತಿಯ ಚಿಕಿತ್ಸೆಗಳನ್ನು ಸುಮಾರ 7 ತಿಂಗಳಿಂದ ಈಚೆಯ ವರೆಗೂ ಮಾಡುತ್ತಿರುವುದಿಲ್ಲ. ಕೇವಲ ಸಾಮಾನ್ಯ ರೋಗ ಮತ್ತು ಅಪಘಾತದಂತಹ ಇತರೆ ರೋಗಗಳ ಚಿಕಿತ್ಸೆ ಮಾಡುತ್ತಿದ್ದೆವೆ. ನಮ್ಮಲ್ಲಿ ಗಭರ್ಿಣಿ ಮಹಿಳೆಯರು ನಿನ್ನೆ ಅಥವಾ ಮೊನ್ನೆ ಯಾವುದೆ ಚಿಕಿತ್ಸೆಗಾಗಿ ಬಂದಿರುವಯದಿಲ್ಲ ಅನಾಮದೆಯ ಬ್ರೂಣದ ವಿಚಾರವನ್ನು ನಾನು ತಿಳಿದುಕೊಂಡು ಬಂದು ನೋಡಲಾಗಿ ಬ್ರೂಣ ಸುಮಾರು 5-6 ತಿಂಗಳ ಅವದಿಯ ಹೆಣ್ಣು ಬ್ರೂಣ ವಾಗಿರುತ್ತದೆ. ಯಾವದೆ ಅನಾಮದೆಯ ಮಹಿಳೆಯು ಈ ಮಗುವಿನ ಜನನ ಸಂದರ್ಭದಲ್ಲಿ ಬ್ರೂಣವು ಮೃತಪಟ್ಟಿರಬವುದುದಾಗಿದ್ದು ಈ ಮೃತಬ್ರೂಣದ ಜನನದ ವಿಚಾರವನ್ನು ಬಚ್ಚಿಡಲು ಪ್ರಯತ್ನಿಸುದಕ್ಕಾಗಿ ನಮ್ಮ ಆಸ್ಪತ್ರೆಯ ಶೌಚಾಲಯದಲ್ಲಿ ಕೃತ್ಯವೆಸಗಿದ್ದು ಈ ಬಗ್ಗೆ ತನಿಖೆ ಕೈಕೊಂಡು ಮುಂದಿನ ಕ್ರಮ ಕೈಕೊಳ್ಳಲು ಕೋರಲಾಗಿದೆ.ಈ ಘಟನೆಯು ನಿನ್ನೆ ದಿನಾಂಕ 18/3/2021 ರ ರಾತ್ರಿಯಿಂದ ಬೆಳಗಿನ ಜಾವದ ವರೆಗಿನ ಅವದಿಯಲ್ಲಿ ನಡೆದಿರಬಹುದು. ಅಂತ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದು. ಸದರಿ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 56/2021 ಕಲಂ 318 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.


ಶಹಾಪೂರ ಠಾಣೆ ಗುನ್ನೆ ನಂ :- 57/2021 ಕಲಂ 323, 324, 504, 506 ಸಂ 149 ಐ.ಪಿ.ಸಿ : ಇಂದು ದಿನಾಂಕ 19/03/2021 ರಂದು, ಸಾಯಂಕಾಲ 18-00 ಗಂಟೆಗೆ ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರದ ಕೋರ್ಟ ಕರ್ತವ್ಯ ನಿರ್ವಹಿಸುವ, ಶಹಾಪೂರ ಪೊಲೀಸ್ ಠಾಣೆ ಸಿಬ್ಬಂದಿ ಶ್ರೀ ರಾಮಣ್ಣ ಪಿ.ಸಿ 424 ರವರು ಠಾಣೆಗೆ ಬಂದು, ಫಿಯರ್ಾದಿ ಶ್ರೀ ಸಣ್ಣ ಮಾನಪ್ಪ ತಂದೆ ಭೀಮಪ್ಪ ಸಾಃ ಹತ್ತಿಗೂಡುರ ತಾಃ ಶಹಾಪೂರ ಜಿಃ ಯಾದಗಿರಿ ಇವರು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯದಲ್ಲಿ ಕನ್ನಡದಲ್ಲಿ ಗಣಕೀಕರಿಸಿ ಸಲ್ಲಿಸಿದ ಖಾಸಗಿ ದೂರು ಸಂಖ್ಯೆ 36/2021 ನೇದ್ದನ್ನು ಹಾಜರ ಪಡಿಸಿದ್ದು, ಸದರಿ ಫಿಯರ್ಾದಿಯವರ ಸಾರಾಂಶವೆನೆಂದರೆ, ದಿನಾಂಕ 07/03/2021 ರಂದು ಸಂಜೆ 17-45 ಗಂಟೆಯ ಸುಮಾರಿಗೆ ಫಿಯರ್ಾದಿಯವರು ತನ್ನ ಕೆಲಸದ ನಿಮಿತ್ಯ ದೇವದುರ್ಗ ಕ್ರಾಸ್ ಹತ್ತಿರದ ದಾಬಾದ ಬಳಿ ನಿಂತಿದ್ದಾಗ, ಅಲ್ಲಿಗೆ ಆರೋಪಿಗಳಾದ 1 ರಿಂದ 5 ರವರು ಬಂದು, ಏಕಾ-ಏಕಿ ಡಿಕ್ಕಿ ಹೊಡೆದು ವಿನಾಕಾರಣ ಜಗಳ ತೆಗೆದಿದ್ದು, ಆರೋಪಿತರೆಲ್ಲರೂ ಫಿಯರ್ಾದಿಗೆ ಏನಲೇ ಸೂಳೇ ಮಗನೇ ನಾವು ಸರಾಯಿ ಕುಡಿದಿದ್ದೇವೆ ನಶೆಯಾಗಿದೆ ನಿನಗೆ ಡಿಕ್ಕಿ ಹೊಡೆದರೆ ಕುಂಡಿ ಬ್ಯಾನಿ ಆಯಿತು ಏನು ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕಪಾಳಕ್ಕೆ ಬೆನ್ನಿಗೆ, ಹೊಡೆ ಬಡೆ ಮಾಡಿ ಕಾಲಿನಿಂದ ಹೊಡೆದಿರುತ್ತಾರೆ. ಸದರಿ ಜಗಳವನ್ನು ಪ್ರತ್ಯಕ್ಷ ಸಾಕ್ಷಿದಾರ ಚನ್ನಪ್ಪ ತಂದೆ ಬಸವರಾಜ ಹಾಗೂ ನಿಂತಪ್ಪ ತಂದೆ ಮಲ್ಲಪ್ಪ ಇವರು ಬಂದು ಜಗಳ ಬಿಡಸಿಕೊಂಡಿರುತ್ತಾರೆ. ನಂತರ ಆರೋಪಿತರೆಲ್ಲರೂ ಫಿಯರ್ಾದಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಸದರಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 57/2021 ಕಲಂ 323, 324, 504, 506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಇತ್ತೀಚಿನ ನವೀಕರಣ​ : 20-03-2021 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080