ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-03-2022


ಗೋಗಿ ಪೊಲೀಸ್ ಠಾಣೆ:-
23/2022 ಕಲಂ: 279, 338, 304 (ಎ) ಐಪಿಸಿ : ಇಂದು ದಿನಾಂಕ: 19/03/2022 ರಂದು 09.30 ಎಎಮ್ ಕ್ಕೆ ಅಜರ್ಿದಾರರಾದ ಶ್ರೀಮತಿ ಶ್ರೀ. ಎನ್. ಕೃಷ್ಣಾ ತಂದೆ ಎನ್. ನಾಗೇಶರಾವ ನಾಗರೆಡ್ಡಿ ವಯಾ:46 ವರ್ಷ ಉ: ಒಕ್ಕಲುತನ ಜಾ: ಕಾಪೂ ಸಾ: ಜೈನಾಪೂರ ಕ್ಯಾಂಪ ತಾ: ಸುರಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:18/03/2022 ರಂದು ಮದ್ಯಾಹ್ನ 01.00 ಪಿಎಂ ಸುಮಾರಿಗೆ ನನ್ನ ಮಗನಾದ ಎನ್. ಗಣೇಶ ತಂದೆ ಎನ್. ಕೃಷ್ಣಾ ನಾಗರೆಡ್ಡಿ ವಯಾ:21 ವರ್ಷ ಈತನು ತನ್ನ ಗೆಳೆಯನಾದ ನಾಗರಾಜ ತಂದೆ ಭೀಮಣ್ಣ ದೇವಕುಂಟಿ ವಯಾ:20 ವರ್ಷ ಉ: ವಿದ್ಯಾಥರ್ಿ ಜಾ: ಬೇಡರ ಸಾ: ಮಾಲಗತ್ತಿ ಹಾ:ವ: ಜೈನಾಪೂರ ಕ್ಯಾಂಪ ತಾ: ಸುರಪೂರ ಈತನ ಜೋತೆ ಮೋಟಾರ್ ಸೈಕಲ್ ನಂ: ಕೆಎ-33-ವಿ-9469 ನೇದ್ದನ್ನು ತೆಗದುಕೊಂಡು ಶಹಾಪೂರಕ್ಕೆ ಹೋಗಿದ್ದರು. ಅವರ ಜೋತೆಯಲ್ಲಿ ಇನ್ನೊಂದು ವಾಹನದಲ್ಲಿ ಇ. ಕಿಶೋರ ತಂದೆ ಇ. ಸತ್ಯನಾರಾಯಣ ಇಡುಬುಗಂಡಿ ವಯಾ:20 ವರ್ಷ ಮತ್ತು ಮಣಿಕಂಠ ತಂದೆ ರಾಜು ಸಾಗಿ ವಯಾ:25 ಇಬ್ಬರು ಸಾ: ಜೈನಾಪೂರ ಕ್ಯಾಂಪ ಇವರು ಕೂಡ ಹೋಗಿದ್ದರು. ಶಹಾಪೂರ ದಿಂದ ಮರಳಿ ನಮ್ಮ ಜೈನಾಪೂರ ಕ್ಯಾಂಪ ಕಡೆಗೆ ಬರುವಾಗ 08.40 ಪಿಎಂ ಸುಮಾರಿಗೆ ಇ. ಕಿಶೋರ ಮತ್ತು ಎ. ಶ್ರೀನಿವಾಸ ಇಬ್ಬರು ಹೋಸ್ಕೇರಾದಲ್ಲಿ ಮೇಡಿಕಲ್ ದಲ್ಲಿ ಗುಳಗಿ ತಗೆದುಕೊಳ್ಳಲು ನಿಂತಾಗ ನಾಗರಾಜ ಈತನು ನನ್ನ ಮಗನಾದ ಎನ್. ಗಣೇಶ ಈತನಿಗೆ ಹಿಂದೆ ಕೂಡಿಸಿಕೊಂಡು ಮುಂದೆ ಬಂದಿದ್ದು, ಅಂದಾಜು ರಾತ್ರಿ 08.50 ಪಿಎಂ ಸುಮಾರಿಗೆ ಹೋಸ್ಕೆರಾ-ವನದುಗರ್ಾ ಮಧ್ಯದ ರೋಡಿನ ರಾಮು ಕಾಶಿರಾಜ ಸಾ: ವನದುಗರ್ಾ ಇವರ ಹೊಲದ ಪಕ್ಕದಲ್ಲಿ ರೋಡಿನಲ್ಲಿ ನಮ್ಮ ಮಗನು ಹಿಂದೆ ಕುಳಿತು ಬರುತ್ತಿದ್ದ ಮೋಟಾರ್ ಸೈಕಲ್ ನಂಬರ ಕೆಎ-33-ವಿ-9469 ರೋಡಿನಲ್ಲಿ ಬಿದ್ದಿದ್ದು, ನನ್ನ ಮಗ ಎನ್.ಗಣೇಶ ಈತನು ರೋಡಿನ ಪಕ್ಕದಲ್ಲಿ ಬಿದ್ದಿದ್ದು, ಮೋಟಾರ್ ಸೈಕಲ್ ನಡೆಸಿದ ನಾಗರಾಜ ಈತನು ಮೋಟಾರ್ ಸೈಕಲ ಪಕ್ಕದಲ್ಲಿ ಬಿದ್ದಿದ್ದು, ಹಿಂದಿನಿಂದ ಬಂದ ಇ. ಕಿಶೋರ ಮತ್ತು ಎ. ಶ್ರೀನಿವಾಸ ಇವರುಗಳು ಮೋಟಾರ ಸೈಕಲ್ ರೋಡಿನಲ್ಲಿ ಬಿದ್ದು ನೋಡಿ ನನಗೆ ಪೋನ್ ಮಾಡಿ ವಿಷಯ ತಿಳಿಸಿದರು. ಆಗ ನಾನು ಮತ್ತು ಬಿ. ತ್ರಿಮೂತರ್ಿ ತಂದೆ ಬಾಲಸುಭ್ರಮಣ್ಯಂ, ಎ. ಶ್ರೀನಿವಾಸ ತಂದೆ ಎ. ನರಸಿಂಹಮೂತರ್ಿ ಹಾಗೂ ಭೀಮಣ್ಣ ದೇವಕುಂಟಿ ಎಲ್ಲರೂ ಕೂಡಿ ವನದುಗರ್ಾ-ಹೋಸ್ಕೇರಾ ರೋಡಿನಲ್ಲಿ ಅಪಘಾತ ಸ್ಥಳಕ್ಕೆ ಬಂದು ನೋಡಲಾಗಿ. ನನ್ನ ಮಗನು ರೋಡಿನ ಮಧ್ಯದಲ್ಲಿ ಬಿದ್ದಿದ್ದು ತೆಲೆಗೆ ಭಾರಿ ಗುಪ್ತಪೆಟ್ಟಾಗಿದ್ದು, ಬಲಗಡೆ ಮೇಲಕಿಗೆ ಭಾರಿ ಪೆಟ್ಟಾಗಿ ರಕ್ತ ಕಂದುಗಟ್ಟಿದ ಗಾಯವಾಗಿದ್ದು, ಬಲ ಕಪಾಳಕ್ಕೆ ಭಾರಿ ರಕ್ತಗಾಯವಾಗಿದೆ ಎರಡು ಕೈಗಳಿಗೆ ಮತ್ತು ಎಡಗಡೆ ಪಕ್ಕೆಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ಕಿವಿಯಿಂದ ಮೂಗಿನಿಂದ ರಕ್ತಸ್ರಾವ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು.ಮೋಟಾರ್ ಸೈಕಲ್ ನಡೆಸಿದ ನಾಗರಾಜ ತಂದೆ ಭೀಮಣ್ಣ ದೇವಕುಂಟಿ ಈತನಿಗೆ ತೆಲೆಗೆ ಗುಪ್ತ ಪೆಟ್ಟಾಗಿದ್ದು, ಬಲಗೈಗೆ ಭಾರಿ ಗುಪ್ತಗಾಯವಾಗಿ ಕೈ ಮುರಿದಂತೆ ಆಗಿ ಬೇಹೋಸ್ ಆಗಿದ್ದನು. ಆಗ ನಾಗರಾಜ ಈತನಿಗೆ ಭೀಮಣ್ಣ ದೇವಕುಂಟಿ ಈತನು ಶಹಾಪೂರ ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಉಪಚಾರಕ್ಕೆ ಕಲಬುರಗಿ ಚಿರಾಯು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ನಾವು ರಾತ್ರಿ ನಮಗಾದ ದುಖಃದಲ್ಲಿ ನಮಗೆ ಏನು ತೋಚದಂತಾಗಿ ಕಾನೂನು ತಿಳುವಳಿಕೆ ಇಲ್ಲದ್ದರಿಂದ ನಮ್ಮ ಮಗನ ಶವವನ್ನು ನಮ್ಮ ಮನೆಗೆ ತಗೆದುಕೊಂಡು ಹೋಗಿ ಇಂದು ದಿನಾಂಕ: 19/03/2022 ರಂದು ಬೆಳಿಗ್ಗೆ ಶವವನ್ನು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಶವಗಾರ ಕೋಣೆಯಲ್ಲಿ ಇರಿಸಿ ಗೋಗಿ ಪೊಲೀಸ್ ಠಾಣೆ ಬಂದು ಬಂದು ಈ ಅಜರ್ಿ ನೀಡಿದ್ದು. ಇರುತ್ತದೆ. ಕಾರಣ ಮೋಟಾರ್ ಸೈಕಲ್ ಅಪಘಾತ ಮಾಡಿದ ಮೋಟಾರ ಸೈಕಲ್ ನಂ: ನಂಬರ ಕೆಎ-33-ವಿ-9469 ನೇದ್ದರ ಚಾಲಕನಾದ ನಾಗರಾಜ ತಂದೆ ಭೀಮಣ್ಣ ದೇವಕುಂಟಿ ಸಾ; ಮಾಲಗತ್ತಿ ಹಾ: ವ: ಜೈನಾಪೂರ ಕ್ಯಾಂಪ ತಾ: ಸುರಪೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.ಅಜರ್ಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 23/2022 ಕಲಂ: 279, 338, 304 (ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 20-03-2022 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080