ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-04-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:40/2022 ಕಲಂ:323, 324, 326, 504, 506 ಸಂ. 34 ಐಪಿಸಿ : ದಿನಾಂಕ. 19/04/2022 ರಂದು 3-30 ಪಿಎಂಕ್ಕೆ ಶ್ರೀ ಮಹಾದೇವಪ್ಪ ತಂದೆ ದುರಗಪ್ಪ ಬೆನಕನಳ್ಳಿ ವಃ 32 ಜಾಃ ಕಬ್ಬಲಿಗ ಉಃಟೆಂಟ ಹೌಸ ಸಾಃ ಬಂಡಿಗೇರಾ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೆಳಿಕೆಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ, ನಾನು ಮೇಲಿನ ವಿಳಾಸದವನಿದ್ದು ಟೆಂಟಹೌಸ ಇದ್ದು ವ್ಯಾಪಾರ ಮಾಡಿಕೊಂಡು ಇರುತ್ತೇನೆ. ಹೀಗಿದ್ದು ದಿನಾಂಕ. 17/04/2022 ರಂದು ನಮ್ಮ ಸಂಭಂದಿ ಅಳಿಯನಾದ ಸಾಬರೆಡ್ಡಿ ತಂ. ಮಲ್ಲಪ್ಪ ಬಾಡದ ಸಾಃ ಬಂಢಿಗೇರಾ ಯಾದಗಿರಿ ಈತನ ಮದುವೆಯು ಸೂಗುರೇಶ್ವರ ಕಲ್ಯಾಣ ಮಂಟದಲ್ಲಿ ಮದುವೆ ಇದ್ದ ಪ್ರಯುಕ್ತ ನಾವು ಮತ್ತು ನಮ್ಮ ಸಂಭಂದಿಕರು ಹಾಗೂ ಓಣಿಯಲ್ಲಿಯ ಜನರು ಕೂಡಿಕೊಂಡು ಮದುವೆ ಕಾರ್ಯಕ್ರಮವನ್ನು ಕಲ್ಯಾಣ ಮಂಟಪದಲ್ಲಿ ಮುಗಿಸಿಕೊಂಡು ನಂತರ ಸಾಯಂಕಾಲ ಕಲ್ಯಾಣ ಮಂಟಪದಿಂದ ಮೆರವಣಿಗೆ ಮಾಡುತ್ತಾ ಬ್ಯಾಂಡಬಾಜಿ ಹಚ್ಚಿಕೊಂಡು ಹಾಡುಗಳನ್ನು ಹಾಕಿಕೊಂಡು ಡ್ಯಾನ್ಸ ಮಾಡಿಕೊಂಡು ನಮ್ಮ ಓಣಿಯಲ್ಲಿಯ ಬಸಲಿಂಗಪ್ಪ ಬಳಿಚಕ್ರದೊರ ರವರ ಮನೆಯ ಹತ್ತಿರ ಹೋದಾಗ ಮದುವೆ ಮನೆಯು ಹತ್ತಿರ ಬಂದಾಗ ನಾವು ಓಣಿಯಲ್ಲಿ ಡ್ಯಾನ್ಸ ಮಾಡುವುದು ಬೇಡಾ ಅಂತಾ ಬ್ಯಾಂಡಬಾಜಿಗಳನ್ನು ಬಂದ ಮಾಡಿಕೊಂಡು ಮನೆ ಕಡೆಗೆ ಹೋಗುತ್ತಿರುವಾಗ ನಮ್ಮ ಓಣಿಯ 1) ರಾಘು ತಂದೆ ದೇವಿಂದ್ರಪ್ಪ ಕೊಟ್ರಕಿ 2) ಮಲ್ಲು ತಂದೆ ದೇವಿಂದ್ರಪ್ಪ ಕೊಟ್ರಕಿ 3) ಸಂತೋಷ ತಂದೆ ಮಲ್ಲಪ್ಪ ಕಲಾಲ 4) ನಾಗೇಶ ತಂದೆ ಸಾಬಯ್ಯ ಕಲಾಲ ಸಾಃ ಎಲ್ಲರೂ ಬಂಡಿಗೇರಾ ರವರು ಕೂಡಿಕೊಂಡು ಯಾಕೆ ಬ್ಯಾಂಡ ಬಾಜಿ ಬಂದ ಮಾಡಿದ್ದು ನಾವು ಇನ್ನೂ ಕುಣಿಬೇಕು ಬ್ಯಾಂಡಬಾಜಿ ಹಾಕಿ ಸಾಂಗ ಹಾಕಿರಿ ಇನ್ನೂ ಡ್ಯಾನ್ಸ ಮಾಡಬೇಕು ಅಂತಾ ತಕರಾರು ಮಾಡಿ ಪಿರ್ಯಾದಿಗೆ ಮತ್ತು ಪಿರ್ಯಾದಿ ತಮ್ಮನಿಗೆ ಹೊಡೆ ಬಡಿ ಮಾಡಿ ಬಾರಿ ಗಾಯಗೊಳಿಸಿದ್ದು ಸದರಿ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳೀಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.40/2022 ಕಲಂ. 323, 324, 326, 504, 506, ಸಂ. 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 57/2022 ಕಲಂ 78(6) ಕೆ.ಪಿ. ಎಕ್ಟ್ : ಇಂದು ದಿನಾಂಕ: 19/04/2022 ರಂದು 9 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಸುನೀಲ್ ವಿ. ಮೂಲಿಮನಿ ಪಿ.ಐ ಸುರಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಇಬ್ಬರು ಆರೋಪಿ, ಮುದ್ದೆಮಾಲು, ಜಪ್ತಿ ಪಂಚನಾಮೆ ಸಮೇತ ಠಾಣೆಗೆ ಬಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಸುನೀಲ ಮೂಲಿಮನಿ ಪಿಐ ಸುರಪುರ ಪೊಲೀಸ್ ಠಾಣೆ ವರದಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ 19/04/2022 ರಂದು 7.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಠಾಣೆಯ ಹೊನ್ನಪ್ಪ ಪಿಸಿ 427 ರವರು ಮಾಹಿತಿ ನೀಡಿದ್ದೇನೆಂದರೆ, ಸುರಪುರ ಪಟ್ಟಣದ ಗಾಂಧಿ ಚೌಕ ಹತ್ತಿರ ಇರುವ ಕೆನರಾ ಬ್ಯಾಂಕ್ ಎಟಿಎಮ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಎಟಿಎಮ್ ಮುಂದಿನ ಲೈಟಿನ ಬೆಳಕಿನಲ್ಲಿ ಇಂದು ರಾತ್ರಿ 19-30 ಗಂಟೆಗೆ ನಡೆಯಲಿರುವ ಕಐ (ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಗಳಾದ ಐಖಉ (ಲಕನೌ ಸುಪರ್ ಜೇಂಟ್ಸ್) ಗಿ/ಖ ಖಅಃ (ರಾಯಲ್ ಚಾಲೆಂಜರ್ಸ ಬೆಂಗಳೂರು) 20-20 ಪಂದ್ಯದ ಕ್ರಿಕೆಟ್ ಬೆಟ್ಟಿಂಗ ನಡೆಸುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿರುತ್ತದೆ ಅಂತ ತಿಳಿಸಿದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶ್ರೀ ಹೊನ್ನಪ್ಪ ಪಿಸಿ 427, ಶ್ರೀ ಸಿದ್ರಾಮರೆಡ್ಡಿ ಪಿಸಿ 423, ಹುಸೇನಿ ಪಿಸಿ 236 ಹಾಗೂ ಜೀಪ್ ಚಾಲಕ ಮಲಕಾರಿ ಎಹೆಚ್ಸಿ 07 ಇವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗುವ ಸಂಬಂದ ಹೊನ್ನಪ್ಪ ಸಿಪಿಸಿ-427 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರುವಂತೆ ತಿಳಿಸಿದ ಮೇರೆಗೆ ಸದರಿ ಹೊನ್ನಪ್ಪ ಸಿಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ಮಂಜುನಾಥ ತಂದೆ ಬಸನಗೌಡ ಪೊಲೀಸ್ ಪಾಟೀಲ ವ|| 32 ವರ್ಷ ಜಾ|| ಲಿಂಗಾಯತ ಉ|| ಮೊಬೈಲ್ ವ್ಯಾಪಾರ ಸಾ|| ಹೆಮನೂರ ತಾ|| ಸುರಪುರ ಮತ್ತು 2) ಹಣಮಂತ ತಂದೆ ಅಮರಪ್ಪ ಬಂಗಾರಿ ವ|| 26 ವರ್ಷ ಜಾ|| ಬೇಡರ ಉ|| ಅಟೋ ಚಾಲಕ ಸಾ|| ಖಾನಕೇರಿ ಸುರಪುರ ಇವರನ್ನು 7:20 ಪಿ.ಎಮ್. ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಅವರಿಗೂ ಬಾತ್ಮಿ ವಿಷಯ ತಿಳಿಸಿ ಎಲ್ಲರೂ ಕೂಡಿ ಠಾಣೆಯ ಸರಕಾರಿ ಜೀಪ್ ನಂ: ಕೆಎ 33, ಜಿ 0238 ನೇದ್ದರಲ್ಲಿ 7.30 ಪಿ.ಎಮ್.ಕ್ಕೆ ಠಾಣೆಯಿಂದ ಹೊರಟೆವು. ಇಂದು ರಾತ್ರಿ 7.40 ಪಿ.ಎಮ್.ಕ್ಕೆ ಸುರಪುರ ಪಟ್ಟಣದ ಗಾಂಧಿಚೌಕ್ ಹತ್ತಿರ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ಅಲ್ಲಿ ಇರುವ ಅಂಗಡಿಗಳ ಸುತ್ತಮುತ್ತ ಮರೆಯಾಗಿ ನಿಂತು ನೋಡಲಾಗಿ ಕೆನರಾ ಬ್ಯಾಂಕ್ ಎಟಿಎಮ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಇಂದು ರಾತ್ರಿ 7.30 ಗಂಟೆಗೆ ಪ್ರಾರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಾದ (ಐಖಉ ಗಿ/ಖ ಖಅಃ) ಟ್ವೆಂಟಿ- ಟ್ವೆಂಟಿ ಪಂದ್ಯದ ಪೈಕಿ ಅದರಲ್ಲಿ ಲಕನೌ ಗೆದ್ದರೆ ಒಂದು ಸಾವಿರ ರೂಪಾಯಿಗೆ ಎರಡು ಸಾವಿರ ರೂಪಾಯಿ ಕೊಡುತ್ತೇನೆ, ಆರ್ಸಿಬಿ ಗೆದ್ದರೆ ಒಂದು ಸಾವಿರ ರೂಪಾಯಿಗೆ ಐದು ಸಾವಿರ ರೂಪಾಯಿ ಕೊಡುತ್ತೇನೆ ಅಂತಾ ತನ್ನ ಮೊಬೈಲ್ ಮೂಲಕ ಯಾರಿಗೋ ಸಂಪರ್ಕ ಮಾಡುತ್ತಾ ಮೊಬೈಲ್ ಮುಖಾಂತರ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾತನಾಡುತ್ತಿದ್ದನು. ಸದರಿ ವ್ಯಕ್ತಿ ಮೊಬೈಲ್ನಲ್ಲಿ ಮಾತನಾಡಿದ್ದನ್ನು ಇನ್ನೊಬ್ಬ ವ್ಯಕ್ತಿ ತನ್ನ ಹತ್ತಿರ ಇರುವ ಒಂದು ನೋಟ್ ಬುಕ್ನಲ್ಲಿ ಬರೆದುಕೊಳ್ಳುತ್ತಿದ್ದನು ಮತ್ತು ಹೋಗಿ ಬರುವ ಸಾರ್ವಜನಿಕರಿಗೂ ಸಹ ಈ ರೀತಿ ಕರೆದು ಹೇಳುತ್ತಿದ್ದರು. ಸದರಿಯವರು ಇಂದು ನಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಾದ (ಐಖಉ ಗಿ/ಖ ಖಅಃ) ಟ್ವೆಂಟಿ-ಟ್ವೆಂಟಿ ಪಂದ್ಯದ ಮೇಲೆ ಕ್ರಿಕೆಟ್ ಬೆಟ್ಟಿಂಗ ನಡೆಸುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಅವರ ಮೇಲೆ ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಕೂಡಿ 7:50 ಪಿ.ಎಮ್.ಕ್ಕೆ ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ರಂಗರಾಜ ತಂದೆ ದೇವಣ್ಣ ಚಂದನಕೇರಿ ವ|| 34 ವರ್ಷ ಜಾ|| ಬೇಡರ ಉ|| ಮೊಬೈಲ್ ಶಾಪ್ ವ್ಯಾಪಾರ ಸಾ|| ಹೇಮನೂರ ತಾ|| ಸುರಪುರ 2) ರಾಜಕುಮಾರ ತಂದೆ ಮನೋಹರ ಪತ್ತಾರ ವಯಾ|| 25 ಜಾ|| ವಿಶ್ವಕರ್ಮ ಉ|| ಮೊಬೈಲ್ ಅಂಗಡಿಯಲ್ಲಿ ಕೆಲಸ ಸಾ|| ಹೇಮನೂರ ಅಂತಾ ತಿಳಿಸಿದರು. ರಂಗರಾಜ ಈತನ ಅಂಗ ಶೋಧನೆ ಮಾಡಿದಾಗ 1) ನಗದು ಹಣ 2500 ರೂಪಾಯಿ, 2) ಒಂದು ಕಪ್ಪು-ನೀಲಿ ಬಣ್ಣದ ಖಚಿಟಣಟಿರ ಕಂಪನಿಯ ಮೊಬೈಲ್ ಅ.ಕಿ 2000=00, ರಾಜಕುಮಾರ ಈತನ ಅಂಗಶೋಧನೆ ಮಾಡಿದಾಗ 3) ಒಂದು ನೋಟ್ ಬುಕ್ ಅ.ಕಿ. 00=00, 4) ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿರುತ್ತವೆ. ನೋಟ್ ಬುಕ್ ಪರಿಶೀಲಿಸಿ ನೋಡಲಾಗಿ ಅದರಲ್ಲಿ (ಐಖಉ ಗಿ/ಖ ಖಅಃ) ಅಂತ ಬರೆದಿದ್ದು [ಐಖಉ] ಕೆಳಗಡೆ 500, 1000, 1500 [ಖಅಃ] ಕೆಳಗಡೆ 800, 1000, 1200 ಅಂತ ಬರೆದಿತ್ತು. ಸದರಿ ವ್ಯಕ್ತಿಗೆ ಅವನ ಬಳಿ ಸಿಕ್ಕ ಹಣದ ಬಗ್ಗೆ ವಿಚಾರಣೆ ಮಾಡಿದಾಗ ಇಂದು ರಾತ್ರಿ 7.30 ಗಂಟೆಗೆ ಪ್ರಾರಂಭವಾಗಿರುವ [ಐಖಉ] ಗಿ/ಖ [ಖಅಃ] ಐ.ಪಿ.ಎಲ್ ಪಂದ್ಯದ ಬೆಟ್ಟಿಂಗ್ ಹಣವಿದ್ದು, ಸದರಿ ಹಣವನ್ನು ಸಾರ್ವಜನಿಕರಿಂದ ಪಡೆದುಕೊಂಡ ಹಣ ಇರುತ್ತದೆ ಅಂತಾ ತಿಳಿಸಿದನು. ದಾಳಿಯಲ್ಲಿ ಸಿಕ್ಕ ಸದರಿ ವ್ಯಕ್ತಿಗಳಿಂದ ಕ್ರಿಕೆಟ್ ಬೆಟ್ಟಿಂಗಗೆ ಉಪಯೋಗಿಸಿದ ನಗದು ಹಣ 2500=00 ರೂಪಾಯಿ, ಒಂದು ಮೊಬೈಲ್, ಒಂದು ನೋಟ್ ಬುಕ್, ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ರಾತ್ರಿ 7.50 ಪಿ.ಎಮ್.ದಿಂದ 8.50 ಪಿ.ಎಮ್.ವರೆಗೆ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಸದರಿ ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ರಾತ್ರಿ 9 ಪಿ.ಎಮ್.ಕ್ಕೆ ಬಂದು ವರದಿಯೊಂದಿಗೆ ಮೂಲ ಜಪ್ತಿ ಪಂಚನಾಮೆ, ಇಬ್ಬರು ಆರೋಪಿತರು ಮತ್ತು ಮುದ್ದೆಮಾಲು ಹಾಜರುಪಡಿಸಿ ಕಲಂ 78(6) ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ವರದಿ ಸಲ್ಲಿಸಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 57/2022 ಕಲಂ 78(6) ಕೆ.ಪಿ ಯಾಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 57/2022 ಕಲಂ 379 ಐ.ಪಿ.ಸಿ. : ಯಲ್ಹೇರಿ ಗ್ರಾಮದ ಇಂಡಸ್ ಟಾವರ್ ಐ.ಡಿ ನಂ: 1294372 ಸೈಟ್ ಐ.ಡಿ ನಂ: ಙಂಐಊಖ2 ಕ್ಯಾಬಿನ್ನಲ್ಲಿದ್ದ ಇಥಜಜ ಕಂಪನಿಯ 600 ಂ 24 ಬ್ಯಾಟರಿಗಳು ಒಟ್ಟು ಅ||ಕಿ ರೂ 84,000=00 ರೂ ಇವುಗಳನ್ನು ಯಾರೋ ಕಳ್ಳರು ದಿನಾಂಕ: 26.03.2022 ರಂದು 00.15 ಎಎಮ್ ದಿಂದ 02.15 ಎ.ಎಮ್ ಗಂಟೆಯ ಸುಮಾರಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿಯರ್ಾದಿ ವಗೈರೆ ಸಾರಾಂಶ ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 69/2022 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 19.04.2022 ರಂದು 8.15 ಪಿಎಂ ಕ್ಕೆ ಮಾನ್ಯ ಶ್ರೀ ಗಜಾನಂದ ಪಿ ಎಸ್ ಐ ಸಾಹೇಬರು ಕೆಂಭಾವಿ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 19.04.2022 ರಂದು 6.40 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಠಾಣೆಯ ಆನಂದ ಪಿಸಿ 43, ಶಿವರಾಜ ಹೆಚ್.ಸಿ 85 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 6.50 ಪಿಎಂ ಕ್ಕೆ ಹೊರಟು ಕೆಂಭಾವಿ ಪಟ್ಟಣದ ಅಂಬೇಡ್ಕರ ವೃತ್ತದ ಹತ್ತಿರ 6.55 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 7.00 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕುಮಾರ ತಂದೆ ಜೆಟ್ಟೆಪ್ಪ ಬಸರಿಗಿಡ ವ|| 32 ವರ್ಷ ಜಾ|| ಹಿಂದು ಹೊಲೆಯ ಉ|| ಕೂಲಿ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಕೆಂಭಾವಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 980/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 7.00 ಪಿಎಂ ದಿಂದ 8.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 69/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 20-04-2022 11:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080