ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-05-2022

 

ಯಾದಗಿರಿ ಮಹಿಳಾ ಪೊಲೀಸ್ ಠಾಣೆ:-

ಗುನ್ನೆ ನಂ:29/2022 ಕಲಂ: 498 (J), 323, 504, 324, 326 ಐಪಿಸಿ : ಇಂದು ದಿನಾಂಕ:19.05.2022 ರಂದು ಜಿ.ಜಿ.ಹೆಚ್. ಯಾದಗಿರಿಯಿಂದ ಎಂ.ಎಲ್.ಸಿ ವಸೂಲಾಗಿದ್ದು, ಗಾಯಾಳು ಶ್ರೀಮತಿ ಪಲ್ಲವಿ ಗಂಡ ಮಲ್ಲಿಕಾರ್ಜುನ ವಡಗೇರಿ ವಯಾ-30 ವರ್ಷ ಸಾ-ಕೌಲಗಿ ಹಾ.ವಾ ಯಾದಗಿರಿ ಇವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದಿದ್ದು, ಸದರಿಯವಳು ನೀಡಿರುವ ಹೇಳಿಕೆ ಸಾರಂಶವೇನೆಂದರೆ,10 ವರ್ಷಗಳ ಹಿಂದೆ ಜೇವರ್ಗಿ ತಾಲೂಕಿನ ಕೌಲಗಿ ಗ್ರಾಮದ ಮಲ್ಲಿಕಾರ್ಜುನ ತಂದೆ ಬಸವರಾಜ ವಡಗೇರಿ ಎಂಬುವನ ಸಂಗಡ ಮದುವೆಯಾಗಿರುತ್ತದೆ. ನಮ್ಮ ದಾಂಪತ್ಯ ಜೀವನದಲ್ಲಿ ಅಂಕಿತಾ 9- ವರ್ಷ ಮತ್ತು ಅಕೀಲ್ – 5 ವರ್ಷ ಎರಡು ಜನ ಮಕ್ಕಳಿರುತ್ತಾರೆ.ಹೊಟ್ಟೆ ಪಾಡಿಗಾಗಿ 5 ತಿಂಗಳ ಹಿಂದೆ ಯಾದಗಿರಿಗೆ ಬಂದು ಎಸ್.ಡಿ.ಎನ್ ಹೊಟೇಲ್ ಪಕ್ಕದಲ್ಲಿ ಒಂದು ಖಾನಾವಳಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇವು. ನನ್ನ ಗಂಡ ಮಲ್ಲಿಕಾರ್ಜುನ ಈತನು ನನಗೆ ಮದುವೆಯಾದಗಿನಿಂದ ಒಂದಲ್ಲಾ ಒಂದು ರೀತಿ ನನಗೆ, ನೀನು ಅವರಿಗೆ ನೋಡುತ್ತಿ, ಇವರಿಗೆ ನೋಡುತ್ತಿ ಅಂತ ಅನುಮಾನ ಮಾಡಿ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡಲು ಹತ್ತಿದನು ನಾನು ಸಹಿಸಿಕೊಂಡು ಬಂದಿರುತ್ತೇನೆ.ಇದೇ ರೀತಿ ನನ್ನಗಂಡ ನನಗೆ ಮಾನಸಿಕ ತೊಂದರೆ ಕೊಡುತ್ತಿದ್ದರಿಂದ ನನ್ನ ಗಂಡನ ಅಕ್ಕಂದಿರಾದ ಶೇಖಮ್ಮ ಗಂಡ ದೇವಿಂದ್ರಪ್ಪ. ಮಹಾಲಕ್ಷ್ಮಿ ಗಂಡ ಶರಣಬಸಪ್ಪ , ನಮ್ಮ ತಂದೆ ಬಸವರಾಜ ಭಂಗಿ ಹಾಗೂ ಸಂಬಂಧಿಕರಾದ ರಾಜು ತಂದೆ ಈರಣ್ಣ ಕಲ್ಲಶೆಟ್ಟಿ, ಕವಿತಾ ಗಂಡ ರಾಜು ಇವರೇಲ್ಲರೂ ಕೂಡಿ ಯಾದಗಿರಿಯಲ್ಲಿರುವ ನಮ್ಮ ಖಾನಾವಳಿಗೆ ಬಂದು ನನ್ನ ಗಂಡನಿಗೆ ಈ ರೀತಿ ಅನುಮಾನ ಮಾಡುವುದು ಸರಿ ಅಲ್ಲ ಚೆನ್ನಾಗಿ ಸಂಸಾರ ಮಾಡಿಕೊಂಡು ಹೋಗ್ರಿ ಅಂತ ನ್ಯಾಯಾ ಪಂಚಾಯತಿ ಮಾಡಿ ನನಗೆ ಮತ್ತು ನನ್ನ ಗಂಡನಿಗೆ ಬುದ್ದಿಮಾತು ಹೇಳಿ ಹೋಗಿದ್ದರು. ಆದರೂ ನನ್ನ ಗಂಡ ಅವರ ಮಾತಿಗೆ ಬೆಲೆ ಕೊಡದೇ ಅದೇ ರೀತಿ ಕಿರುಕುಳವನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ.
ದಿನಾಂಕ:18.05.2022 ರಂದು ರಾತ್ರಿ 2.00 ಗಂಟೆಗೆ ಯಾದಗಿರಿಯಲ್ಲಿರುವ ನಮ್ಮ ಖಾನಾವಳಿಗೆ ನನ್ನ ಗಂಡ ಮಧ್ಯ ಸೇವನೆ ಮಾಡಿ ಮನೆಗೆ ಬಂದು ನನಗೆ ಏ ರಂಡಿ, ಚಿನಾಲಿ ಸೂಳೆ ನೀನು ಹೊರಗಡೆ ನಿಂತಿಕೊಂಡು ಯಾರಿಗೆ ಮಾತನಾಡುತ್ತಿ, ಖಾನಾವಳಿಗೆ ಊಟಕ್ಕೆ ಬಂದವರಿಗೆ ನೋಡಿ ನಗುತ್ತಾ ಮಾತನಾಡುತ್ತಿ, ಬೊಸಡಿ ಅಂತ ಜಗಳ ತೆಗೆದನು. ಇದೇಲ್ಲಾ ಸರಿ ಅಲ್ಲ ನನಗೆ ಮಕ್ಕಳಿದ್ಧಾರೆ ನಾನೇನು ಮಾಡಿದ್ದೀನಿ ಅಂತ ಅಂದಿದ್ದಕ್ಕೆ ನೀನು ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಿ ಸೂಳಿ, ಇವತ್ತು ನಿನಗೆ ಬಿಡುವುದಿಲ್ಲವೆಂದು ನನಗೆ ಕೈಯಿಂದ ಅಲ್ಲಲ್ಲಿ ಹೊಡೆಯಲು ಹತ್ತಿದನು. ಆಗ ನನಗೆ ಮತ್ತು ನನ್ನ ಗಂಡನ ಮಧ್ಯ ಜಗಳವು ವಿಕೋಪಕ್ಕೆ ಹೋದಾಗ ನನ್ನ ಗಂಡ ಮಲ್ಲಿಕಾರ್ಜುನನು ತರಕಾರಿ ಹೆಚ್ಚವು ಚಾಕುವನ್ನು ತೆಗೆದುಕೊಂಡು ನನ್ನ ಬೆನ್ನಿನ ಹಿಂದೆ ತಿವಿದನು. ಆಗ ನನಗೆ ರಕ್ತ ಬರಲು ಹತ್ತಿತು. ಮತ್ತು ಅದೇ ಚಾಕುವಿನಿಂದ ಹೊಡೆಯಲು ಬಂದಾಗ ನನ್ನ ಎಡಗೈ ಮಧ್ಯ ತಂದಾಗ ಎಡಗೈ ಬೆರಳುಗಳಿಗೆ ಗಾಯವಾಗಿರುತ್ತದೆ. ನಾನು ಕೆಳಗಡೆ ಬಿದ್ದಾಗ ಕಾಲಿನಿಂದ ಒದ್ದಿರುತ್ತಾನೆ. ಖಾನಾವಳಿಯಲ್ಲಿಯೇ ಇದ್ದ, ನಮ್ಮಲ್ಲಿ ಕೆಲಸ ಮಾಡುವ ಹುಡುಗ ದೇವರಾಜ (ಗುಂಡು) ತಂದೆ ಮಲ್ಲಿಕಾರ್ಜುನ ಮತ್ತು ನನ್ನ ಮಗಳಾದ ಅಂಕಿತಾ ಇವರು ಬಿಡಿಸಿಕೊಂಡರು. ನನ್ನ ಗಂಡ ಮಲ್ಲಿಕಾರ್ಜುನ ಈತನು ಚಾಕು ಅಲ್ಲಿಯೇ ಬಿಸಾಕಿ ಖಾನಾವಳಿಯಿಂದ ಹೋಗಿರುತ್ತಾನೆ.
ನಂತರ ಪೊಲೀಸರು ಸ್ಥಳಕ್ಕೆ ಬಂದು 108 ಅಂಬುಲೇನ್ಸಗೆ ಕರೆ ಮಾಡಿ, ಗಾಯ ಹೊಂದಿರುವ ನನಗೆ ಅಂಬುಲೇನ್ಸ್ ನಲ್ಲಿ ಹಾಕಿಕೊಂಡು ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ರೆದುಕೊಂಡು ಹೋಗಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತಾರೆ. ನನ್ನ ಗಂಡ ಈ ರೀತಿ ಮಾಡಿದ್ದರಿಂದ ನನ್ನ ಗಂಡನ ಮೇಲೆ ಕೇಸು ಕೊಡುವ ವಿಚಾರವಾಗಿ ನಮ್ಮ ತಂದೆ ತಾಯಿಯವರನ್ನು ವಿಚಾರಿಸಿ ಈ ದಿನ ತಡವಾಗಿ ದೂರು ನೀಡಿರುತ್ತೇನೆ. ಜಗಳವು ಮಧ್ಯ ರಾತ್ರಿ 2.30 ಗಂಟೆಗೆ ನಮ್ಮ ಖಾನಾವಳಿಯಲ್ಲಿ ಆಗಿರುತ್ತದೆ. ಮದುವೆಯಾದಗಿನಿಂದ ನನ್ನ ಗಂಡ ಮಲ್ಲಿಕಾರ್ಜುನ ತಂದೆ ಬಸವರಾಜ ವಡಗೇರಿ ಈತನು ನನ್ನ ಮೇಲೆ ಒಂದಲ್ಲಾ ಒಂದು ರೀತಿ ಅನುಮಾನ ಮಾಡಿ ನೀನು ಅವನಿಗೆ ನೋಡುತ್ತಿ, ಇವನಿಗೆ ನೋಡುತ್ತಿ ಅಂತ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದು, ಅಲ್ಲದೇ ಅವ್ಯಾಚವಾಗಿ ಬೈದು ,ಚಾಕುವಿನಿಂದ ಬೆನ್ನಿನ ಹಿಂದೆ ತಿವಿದು ಗಾಯ ಗೊಳಿಸಿ ಪರಾರಿಯಾಗಿರುವ ನನ್ನ ಗಂಡ ಮಲ್ಲಿಕಾರ್ಜುನ ತಂದೆ ಬಸವರಾಜ ಈತನ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಲು ಹೇಳಿ ಗಣಿಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಅಂತ ಕೊಟ್ಟ ದೂರಿನ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ: 29/2022 ಕಲಂ:498(ಎ),504, 323, 324,326, ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೇ ಕೈಗೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: ಯುಡಿಆರ್ ನಂ. 05/2022 ಕಲಂ 174 ಸಿಆರ್ಪಿಸಿ: ಇಂದು ದಿನಾಂಕ 19/05/2022 ರಂದು ಭೀಮಣ್ಣ ತಂದೆ ಯಮನಪ್ಪ ಕೊಡ್ಲಿ ವ:31 ವರ್ಷ ಉ:ಒಕ್ಕಲುತನ ಜಾ:ಹಿದು ಕುರಬರ ಸಾ:ಹೊರಟ್ಟಿ ತಾ: ಹುಣಸಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯಯನ್ನು ತಂದು ಹಾಜರುಪಡಿಸಿದ್ದು ಅದರ ಸಂಕ್ಷಿಪ್ತ ಸಾಂರಾಶವೆನೆಂದರೆ ನಮ್ಮ ತಂದೆ ತಾಯಿಗೆ ನಾವು ಮೂರು ಜನ ಗಂಡು ಮಕ್ಕಳು ಇರುತ್ತೇವೆ ನಾನು ಹಾಗೂ ನಮ್ಮ ತಮ್ಮ ಕರೆಪ್ಪ ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ನಮ್ಮ ಇನ್ನೊಬ್ಬ ತಮ್ಮ ಮಲ್ಲಪ್ಪ ಈತನು ಆಟೊ ಚಾಲಕ ಕೆಲಸ ಮಾಡಿಕೊಂಡಿದ್ದು ಎಲ್ಲರೂ ಕೂಡಿಯೇ ಇರುತ್ತೇವೆ. ನಮ್ಮದು ಹಗರಟಗಿ ಸೀಮಾಂತರದ ಹೊಲ ಸವರ್ೆ ನಂ 238 ರಲ್ಲಿ 4 ಎಕರೆ ಜಮೀನು ಇದ್ದು ಈ ಹೊಲದಲ್ಲಿ ನಮ್ಮದು ಒಂದು ಗುಡಿಸಲು ಇದ್ದು ಆ ಗುಡಿಸಲಿನಲ್ಲಿ ದನಗಳನ್ನು ಕಟ್ಟಿಕೊಂಡು ನಮ್ಮ ತಂದೆ ಹೊಲದಲ್ಲಿಯೇ ಮಲಗಿಕೊಳ್ಳುತ್ತಿದ್ದನು ನಾವು ಕೆಲಸ ಮಾಡಿಕೊಂಡು ಸಾಯಂಕಾಲ ವಾಗುತ್ತಿದ್ದಂತೆ ಮನೆಗೆ ಹೋಗುತ್ತಿದೇವು ಎಂದಿನಂತೆ ನಿನ್ನೆ ದಿನಾಂಕ 18/05/2022 ರಂದು ಸಾಯಂಕಾಲ 6:00 ಗಂಟೆಗೆ ನಮ್ಮ ಹೊಲದಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ನಾವು ನಮ್ಮ ಮನೆಗೆ ಹೋಗಿದ್ದು ನಮ್ಮ ತಂದೆ ಯಮನಪ್ಪ ತಂದೆ ಬೀಮಪ್ಪ ಕೊಡ್ಲಿ ರವರು ನಮ್ಮ ಹೊಲದಲ್ಲಿ ಇರುವ ಗುಡಿಸಲಿನಲ್ಲಿಯೆ ಇದ್ದರು.
ಇಂದು ದಿನಾಂಕ 19/05/2022 ರಂದು ಮುಂಜಾನೆ 7:00 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮ ತಾಯಿ ಗದ್ದೆಮ್ಮ ಹಾಗೂ ನಮ್ಮ ತಮ್ಮಂದಿರಾದ ಮಲ್ಲಪ್ಪ ಮತ್ತು ಕರೆಪ್ಪ ರವರು ಮನೆಯಲ್ಲಿ ಇದ್ದಾಗ ನಮ್ಮ ಹೊಲದ ಪಕ್ಕದಲ್ಲಿ ಇರುವ ನಮ್ಮ ಚಿಕ್ಕಪ್ಪ ಸಣ್ಣಪ್ಪ ತಂದೆ ಯಮನಪ್ಪ ಕೊಡ್ಲಿ ರವರು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ ನಾನು ಎಂದಿನಂತೆ ಇಂದು ಮುಂಜಾನೆ 6:00 ಗಂಟೆಯ ಸುಮಾರಿಗೆ ನಮ್ಮ ಹೊಲಕ್ಕೆ ಹೋಗಿದ್ದು ನಮ್ಮ ಹೊಲದಲ್ಲಿ ನಿಂತು ನಿಮ್ಮ ಹೊಲದ ಕಡೆ ನೋಡಲಾಗಿ ನಿಮ್ಮ ಗುಡಿಸಲಿನ ಹಿಂದೆ ಇರುವ ಟೆಂಗಿನ ಗಿಡ ಸುಟ್ಟಂತೆ ಕಂಡು ಬಂದಿತು ನಂತರ ನಾನು ನಿನ್ನೆ ರಾತ್ರಿ ಭಾರಿ ಗುಡಗು ಸಿಡಿಲು ಸಮೇತ ಮಳೆ ಬಂದಿದ್ದರಿಂದ ಸಿಡಲು ಬಿದ್ದರಬೇಕು ಅಂತಾ ನಿಮ್ಮ ಟೆಂಗಿನ ಗಿಡದ ಹತ್ತಿರ ಹೊಗಿ ನೋಡಿ ನಂತರ ಟೆಂಗಿನ ಗಿಡದ ಮುಂದೆ ಇರುವ ನಿಮ್ಮ ಗುಡಿಸಲಿನಲ್ಲಿ ನೋಡಿದಾಗ ನಿಮ್ಮ ತಂದೆ ಗುಡಿಸಲಿನಲ್ಲಿ ಇರುವ ಚೀಲದ ಮೇಲೆ ಅಂಗಾತವಾಗಿ ಬಿದಿದ್ದನು. ಅದನ್ನು ನೋಡಿ ನನಗೆ ದೈರ್ಯ ಸಾಲದಂಗ ಆಗಿ ನಮ್ಮ ಹೊಲದ ಪಕ್ಕದಲ್ಲಿ ಇರುವ ದಾರಿಯ ಮೇಲಿಂದ ಹೋಗುತ್ತಿದ್ದ ನಮ್ಮೂರ ಶಿವಪುತ್ರ, ರಾಮಣ್ಣ ಹಾಗೂ ರಾಯಪ್ಪನಿಗೆ ಕರೆದು ನಂತರ ಎಲ್ಲರೂ ಕೂಡಿ ಹೋಗಿ ನೋಡಿದ್ದು ನಿಮ್ಮ ತಂದೆ ಸತ್ತಿದ್ದನು. ನಿಮ್ಮ ತಂದೆಗೆ ನೋಡಲಾಗಿ ಬಲಗಡೆ ತೊಡೆಯ ಮೇಲೆ ಹಾಗೂ ಬೆನ್ನಿನ ಮೇಲೆ ಸಿಡಿಲು ಬಡಿದ ಶಾಖದ ಸುಟ್ಟ ಗಾಯಗಳಾಗಿ ಬೆನ್ನ ಮೇಲಿನ ಅಂಗಿ ಹಾಗೂ ತೊಡೆಯ ಮೇಲಿನ ದೊತರ ಸುಟ್ಟು ಸಿಡಿಲು ಬಡಿದು ಸತ್ತಿರುತ್ತಾನೆ ಅಂತಾ ತಿಳಿಸಿದನು. ನಾವೇಲ್ಲರೂ ಕೂಡಿ ನಮ್ಮ ಹೋಲಕ್ಕೆ ಓಡಿಬಂದು ನೋಡಲಾಗಿ ನಮ್ಮ ತಂದೆ ಗುಡಿಸಲಿನಲ್ಲಿ ಸತ್ತುಬಿದ್ದದ್ದನು ನೋಡಲಾಗಿ ನಮ್ಮ ಚಿಕ್ಕಪ್ಪನು ತಿಳಿಸಿದಂತೆ ನಮ್ಮ ತಂದೆ ಮೈಮೇಲೆ ಸಿಡಿಲು ಬಡಿದ ಶಾಖದಿಂದ ಆದ ಸುಟ್ಟ ಗಾಯಗಳು ಆಗಿದ್ದವು. ನಿನ್ನೆ ರಾತ್ರಿ ಗುಡುಗು ಸಿಡಿಲು ಸಹಿತ ಬಾರಿ ಮಳೆಯಲ್ಲಿ ಹೊಲದಲ್ಲಿ ಇರುವ ಗುಡಿಸಲಿನಲ್ಲಿ ಮಲಗಿಕೊಂಡಿದ್ದ ನಮ್ಮ ತಂದೆ ಯಮನಪ್ಪ ತಂದೆ ಬೀಮಪ್ಪ ಕೊಡ್ಲಿ ವ:62 ವರ್ಷ ಉ:ಒಕ್ಕಲುತನ ಜಾ: ಕುರಬರ ರವರಿಗೆ ಮಳೆಯಲ್ಲಿ ಸಿಡಿಲು ಬಡಿದು ಸಿಡಿಲಿನ ಶಾಖದಿಂದ ಮೃತಪಟ್ಟಿದ್ದು ಅವರ ಮರಣದಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲ ನಮ್ಮ ತಂದೆಯ ಶವವು ನಮ್ಮ ಹೊಲದಲ್ಲಿ ಇದ್ದು ತಾವು ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್ ನಂ 05/2022 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 79/2022 ಕಲಂ 323, 324, 504, 506 ಸಂ 34 ಐ.ಪಿ.ಸಿ: ದಿನಾಂಕ:14.05.2022 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಆರೋಪಿತರು ಪಿರ್ಯಾಧಿಯ ತೋಟಕ್ಕೆ ಹಾಕಿದ ಮುಳ್ಳಿನ ಬೇಲಿಯನ್ನು ತೆಗೆದು ಸುಟ್ಟಿದ್ದು ಇದ್ದನ್ನು ಕೇಳಿದಕ್ಕೆ ಆರೋಪಿತರು ಕೂಡಿ ಪಿರ್ಯಾಧಿಗೆ ಮತ್ತು ಪಿರ್ಯಾಧಿಯ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋಗಿದ್ದ ಈ ಘಟನೆಯ ಬಗ್ಗೆ ಪಿರ್ಯಾಧಿಯು ತನ್ನ ತಂದೆ-ತಾಯಿಯೊಂದಿಗೆ ವಿಚಾರ ಮಾಡಿಕೊಂಡು ತಡವಾಗಿ ಬಂದಿದ್ದು ಇರುತ್ತದೆ ಅಂತಾ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 68/2022 ಕಲಂ: 504, 341, 323, 506 ಸಂ 34 ಐಪಿಸಿ: ಇಂದು ದಿನಾಂಕ:19/05/2022 ರಂದು 8-15 ಪಿಎಮ್ ಕ್ಕೆ ಶ್ರೀ ಶರಣಪ್ಪ ತಂದೆ ಶಿವರಾಯ ದಾಳಿ, ವ:45, ಜಾ:ಕುರುಬರ, ಉ:ಒಕ್ಕಲುತನ ಸಾ:ಗೊಂದೆನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಈಗ ಸುಮಾರು 6-7 ತಿಂಗಳ ಹಿಂದೆ ನಮ್ಮ ಗೊಂದೆನೂರು ಕ್ರಾಸನಲ್ಲಿ ರಸ್ತೆ ಪಕ್ಕದಲ್ಲಿ ನಮ್ಮ ಹಾಲುಮತ ಸಮಾಜದ ವತಿಯಿಂದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಭಾವಚಿತ್ರವುಳ್ಳ ಕಬ್ಬಿಣದ ಬೋರ್ಡನ್ನು ಸ್ಥಾಪನೆ ಮಾಡಿರುತ್ತೇವೆ. ಸದರಿ ಸಂಗೋಳ್ಳಿ ರಾಯಣ್ಣ ಭಾವಚಿತ್ರವುಳ್ಳ ಬೋರ್ಡ ಹತ್ತಿರ ನಮ್ಮೂರ ತಿಪ್ಪಣ್ಣ ತಂದೆ ಅಮಾತೆಪ್ಪ ಕಮದಾಳ ಮತ್ತು ಅವನ ತಮ್ಮ ಮರಗೆಪ್ಪ ತಂದೆ ಅಮಾತಪ್ಪ ಕಮದಾಳ ಇಬ್ಬರೂ ಜಾ:ಮಾದಿಗ ಇವರಿಬ್ಬರೂ ಕಬ್ಬಿನ ಹಾಲು ಮಾರಾಟ ಮಾಡಲು ಈಗ ಬೇಸಿಗೆಯಲ್ಲಿ ಕಬ್ಬಿನ ರಸ ತೆಗೆಯುವ ಮಷಿನ ಹಚ್ಚಿಕೊಂಡು ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದರು. ಹೀಗಿದ್ದು ಈಗ ಸುಮಾರು 5-6 ದಿನಗಳ ಹಿಂದೆ ನಾನು ಹೊಲಕ್ಕೆ ಹೋಗಿ ಮರಳಿ ಬರುತ್ತಿದ್ದಾಗ ಸದರಿ ತಿಪ್ಪಣ್ಣ ಮತ್ತು ಮರಗೆಪ್ಪ ಇಬ್ಬರೂ ಸದರಿ ಕಬ್ಬಿನ ಹಾಲು ಕುಡಿಯಲು ಬರುವ ಗ್ರಾಹಕರಿಗೆ ಅಂತಾ ಟೆಂಟನ್ನು ಕಟ್ಟಿದ್ದರು. ಸದರಿ ಟೆಂಟಿನಿಂದ ಸಂಗೋಳ್ಳಿ ರಾಯಣ್ಣನ ಭಾವಚಿತ್ರ ಪೂತರ್ಿ ಕಾಣದಂತೆ ಮುಚ್ಚಿಹೋಗಿತ್ತು. ಅವರಿಗೆ ಕೇಳಬೇಕೆಂದರೆ ಟೆಂಟಿನ ಹತ್ತಿರ ಅವರು ಯಾರು ಇರಲಿಲ್ಲ ಆದ್ದರಿಂದ ನಾನು ಮನೆಗೆ ಬಂದೆನು. ದಿನಾಂಕ:16/05/2022 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಗೊಂದೆನೂರು ಕ್ರಾಸನಲ್ಲಿ ತಿಪಣ್ಣ ಮತ್ತು ಮರಗೆಪ್ಪ ಇಬ್ಬರೂ ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದರು. ಆಗ ನಾನು ಅವರ ಬಳಿ ಹೋಗಿ ಟೆಂಟಿನಿಂದ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಪೂತರ್ಿ ಮುಚ್ಚಿ ಹೋಗಿದೆ. ಅದು ಸರಿಯಲ್ಲ ಸ್ವಲ್ಪ ಭಾವಚಿತ್ರ ಕಾಣವಂಗೆ ಟೆಂಟ್ ಬಿಚ್ಚಿ ತೆಗೆಯಿರಿ ಎಂದು ಹೇಳಿ ಮನೆ ಕಡೆ ಹೋಗುತ್ತಿದ್ದವನಿಗೆ ಅವರಿಬ್ಬರೂ ಸೇರಿ ಬಂದು ನನಗೆ ಅಡ್ಡಗಟ್ಟಿ ಮಗನೆ ನೀವು ನಮ್ಮ ಜಾಗದಲ್ಲಿ ಬೋರ್ಡ ಹಾಕಿ ನಮಗೆ ಟೆಂಟು ಬಿಚ್ಚರಿ ಎನ್ನುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಅವಾಚ್ಯ ಬೈದು ಜಗಳ ತೆಗೆದು ತಿಪ್ಪಣ್ಣನು ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ಅಲ್ಲಿಯೇ ಕ್ರಾಸನಲ್ಲಿ ಪಕ್ಕದ ಹೊಟೇಲ್ ಹತ್ತಿರ ಚಹಾ ಕುಡಿಯುತ್ತಿದ್ದ ದೇವಪ್ಪ ತಂದೆ ನಿಂಗಪ್ಪ ದಾಳಿ, ವೆಂಕಟರಾಯ ತಂದೆ ದೊಡ್ಡ ಬಸಣ್ಣ ವರಕೇರಿ ಮತ್ತು ಭೀಮಾಶಂಕರ ತಂದೆ ಹಣಮಂತ್ರಾಯ ವರಕೇರಿ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಹೊಡೆಯುವುದು ಬಿಟ್ಟ ಅವರಿಬ್ಬರೂ ಇನ್ನೊಂದು ಸಲ ಟೆಂಟಿನ ವಿಷಯಕ್ಕೆ ಬಂದರೆ ಭೊಸುಡಿ ಮಗನೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ನಾನು ನಮ್ಮ ಹಿರಿಯರಿಗೆ ಈ ವಿಷಯವನ್ನು ತಿಳಿಸಿ ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಮುಚ್ಚಿ ಹಾಕಿರುವ ಟೆಂಟ್ ಸ್ವಲ್ಪ ಬಿಚ್ಚಿ ಭಾವಚಿತ್ರ ಕಾಣುವಂತೆ ಹಾಕಿರಿ ಎಂದು ಹೇಳಿದ್ದಕ್ಕೆ ನನಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿಂನತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 68/2022 ಕಲಂ:504, 341, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 57/2022 ಕಲಂ:143 ,147, 148, 323, 324, 326, 504, 506 ಸಂ.149 ಐಪಿಸಿ: ಇಂದು ದಿನಾಂಕ.19/05/2022 ರಂದು 5-30 ಪಿಎಂಕ್ಕೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ, ನಮಗೂ ಮತ್ತು ಮುದ್ನಾಳ ದೊಡ್ಡ ತಾಂಡಾದ ನಮ್ಮ ತಾಯಿ ಲಕ್ಷ್ಮೀಬಾಯಿ ಇವಳ ಚಿಕ್ಕಪ್ಪನ ಮಗನಾದ ಕಿಷನ ತಂದೆ ಸೋಮ್ಲಾನಾಯಕ ರಾಠೋಡ ಇವರಿಗೂ 10-12 ವರ್ಷಗಳಿಂದ ಮುದ್ನಾಳ ದೊಡ್ಡ ತಾಂಡಾದ ಹತ್ತಿರ ಇರುವ ರಾಚೋಟಿ ವೀರಣ್ಣ ಗುಡ್ಡದ ಹತ್ತಿರ ಬರುವ ಹೊಲ ಸವರ್ೆ ನಂ. 688/1 ವಿಸ್ತೀರ್ಣ 12 ಎಕರೆ, 39 ಗುಂಟೆ ಜಮೀನಿನ ಪಾಲಿನ ವಿಷಯದಲ್ಲಿ ತಕರಾರು ಇದ್ದು ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಓ.ಎಸ್. ನಂ. 11/2012 ಪ್ರಕಾರ ದಾವೆ ನಡೆದಿದ್ದು ಇರುತ್ತದೆ. ಸದರಿ ಹೊಲ ಸವರ್ೆ ನಂ.688/1 ನೇದ್ದಕ್ಕೆ ಸಂಂದಿಸಿದಂತೆ ಹೊಲದ ವಿಷಯದಲ್ಲಿ ಮೊದಲಿಂದಲೂ ನಮಗೂ ಮತ್ತು ಅವರಿಗೂ ತಕರಾರು ಜಗಳಗಳು ಆಗುತ್ತಾ ಬಂದಿರುತ್ತವೆ. ನಿನ್ನೆ ದಿನಾಂಕ. 18/05/2022 ರಂದು 11-00 ಎಎಮ್ ಸುಮಾರಿಗೆ ಸದರಿ ಮೇಲ್ಕಂಡ ಸವರ್ೆ ನಂ.688/1 ನೇದ್ದರಲ್ಲಿ ಆರೋಪಿತರು ಜೆ.ಸಿ.ಬಿ ಯಿಂದ ಹೊಲ ಬಿತ್ತನೆ ಮಾಡುವ ಕುರಿತು ಮುಳ್ಳು ಕಂಟಿಗಳು ಸ್ವಚ್ಛ ಮಾಡುತ್ತಿರುವುದಾಗಿ ಗೊತ್ತಾಗಿ ನಾನು ಮತ್ತು ನನ್ನ ತಂಗಿ ಮೇನಕಾ ಗಂಡ ವಿನೋದ ರಾಠೋಡ ಮತ್ತು ಇತರರು ಕೂಡಿಕೊಂಡು 11-30 ಎಎಮ್ ಸುಮಾರಿಗೆ ಸದರಿ ಸವರ್ೆ ನಂಬರ.688/1 ನೇದ್ದಕ್ಕೆ ಹೋಗಿ ಆರೋಪಿತರಿಗೆ ಈ ಹೊಲದ ಬಗ್ಗೆ ಇನ್ನು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಇರುತ್ತದೆ ಮಾನ್ಯ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಹೊಲದಲ್ಲಿ ನೀವು ಯಾವುದೇ ಬಿತ್ತನೆ ಕೆಲಸ ಅಥವಾ ಯಾವುದೇ ಚಟುವಟಿಕೆ ಮಾಡಬೇಡಿ ನಮಗೂ ಕೂಡಾ ಪಾಲು ಬರುತ್ತದೆ ಅಂತಾ ಅಂದಾಗ ಅವರೆಲ್ಲರೂ ಮತ್ತೆ ಕೋರ್ಟ ಕಛೇರಿ ಅಂತೀರಾ ಸೂಳೆ ಮಕ್ಕಳೇ ಅಂತಾ ಬೈದು, ಹೊಡೆಬಡೆ ಮಾಡಿ ಭಾರಿ ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 57/2022 ಕಲಂ. 143, 147, 148, 323, 324, 326, 504, 506, ಸಂ. 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 28/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್: ಇಂದು ದಿನಾಂಕ 19/05/2022 ರಂದು ಸಮಯ 6-15 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ಮಾಹಿತಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ವಿಚಾರಿಸಿದ್ದು, ಗಾಯಾಳು ಗಾಯದ ಭಾದೆಯಲ್ಲಿದ್ದು, ಆಸ್ಪತ್ರೆಯಲ್ಲಿ ಹಾಜರಿದ್ದ ಗಾಯಾಳುವಿನ ತಾಯಿಯವರಾದ ಪಿಯರ್ಾದಿ ಶ್ರೀಮತಿ ಭೀಮವ್ವ ಗಂಡ ಮಾರ್ತಂಡ ನಾಟೇಕಾರ್ ವಯ;50 ವರ್ಷ, ಜಾ;ಕಬ್ಬಲಿಗ, ಉ;ಕೂಲಿ ಕೆಲಸ, ಸಾ;ಹೊನಗೇರಾ, ತಾ;ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ಇಂದು ಬೆಳಿಗ್ಗೆ ನನ್ನ ಮಗನಾದ ಹೊನ್ನಪ್ಪ ವಯ;30 ವರ್ಷ ಈತನು ನಮ್ಮ ಮೋಟಾರು ಸೈಕಲ್ ನಂ.ಕೆಎ-33, ಎಕ್ಸ್-9149 ನೇದ್ದನ್ನು ನಡೆಸಿಕೊಂಡು ತನ್ನ ಕೆಲಸದ ಮೇಲೆ ಯಾದಗಿರಿಗೆ ಹೋಗಿ ಬರುವುದಾಗಿ ನನಗೆ ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 19/05/2022 ರಂದು ಸಾಯಂಕಾಲ 6 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಗ್ರಾಮದ ಶ್ರೀ ರವೀಂದ್ರ ತಂದೆ ಗೋಪಾಲ ಬಂದಳ್ಳಿ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ನನ್ನ ಕೆಲಸದ ಮೇಲೆ ಯಾದಗಿರಿಗೆ ಬಂದು ಮರಳಿ ಹೊನಗೇರಾಕ್ಕೆ ಬರುವಾಗ ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಚಾಮನಳ್ಳಿ ಕ್ರಾಸ್ ಹತ್ತಿರ ಬರುವ ಎಸ್ಸಾರ್ ಪೆಟ್ರೋಲ್ ಬಂಕ್ನಲ್ಲಿ ನನ್ನ ಮೋಟಾರು ಸೈಕಲ್ ನೇದ್ದಕ್ಕೆ ಪೆಟ್ರೋಲ್ ಹಾಕಿಕೊಂಡು ಬಂಕ್ ಹೊರಗಡೆ ಬರುತ್ತಿದ್ದಾಗ ಅದೇ ಸಮಯಕ್ಕೆ ನಾನು ನೋಡು ನೋಡುತ್ತಿದ್ದಂತೆ ನಿಮ್ಮ ಮಗನಾದ ಹೊನ್ನಪ್ಪ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಎಕ್ಸ್-9149 ನೆದ್ದರ ಮೇಲೆ ಯಾದಗಿರಿ ರಸ್ತೆ ಕಡೆಯಿಂದ ಬಂದಳ್ಳಿ ಕಡೆಗೆ ಹೊರಟಿದ್ದಾಗ ಅದೇ ಸಮಯಕ್ಕೆ ಒಬ್ಬ ಕಾರ್ ನಂಬರ ಕೆಎ-33, ಬಿ-1967 ನೇದ್ದರ ಚಾಲಕನು ತನ್ನ ಕಾರನ್ನು ಬಂದಳ್ಳಿ ರಸ್ತೆ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿಮ್ಮ ಮಗ ಹೊನ್ನಪ್ಪನ ಮೋಟಾರು ಸೈಕಲ್ ನೇದ್ದಕ್ಕೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ಸದರಿ ಅಪಘಾತದಲ್ಲಿ ಹೊನ್ನಪ್ಪನು ಮೋಟಾರು ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದಾಗ ನಾನು ಹತ್ತಿರ ಹೋಗಿ ನೋಡಲಾಗಿ ಆತನಿಗೆ ಹಣೆಗೆ ಭಾರೀ ಒಳಪೆಟ್ಟಾಗಿದ್ದು, ಮೂಗಿಗೆ, ಮುಖಕ್ಕೆ ಅಲ್ಲಲ್ಲಿ ರಕ್ತಗಾಯಗಳು ಮತ್ತು ಎಡಗೈ ಬೆರಳಿಗೆ ರಕ್ತಗಾಯವಾಗಿರುತ್ತವೆ. ಈ ಘಟನೆಯು ಇಂದು ಸಾಯಂಕಾಲ 5-30 ಪಿ.ಎಂ.ಕ್ಕೆ ಜರುಗಿರುತ್ತದೆ, ಅಪಘಾತಪಡಿಸಿದ ಕಾರ್ ನಂಬರ ಕೆಎ-33, ಬಿ-1967 ನೇದ್ದರ ಚಾಲಕನು ಘಟನಾ ಸ್ಥಳದಲ್ಲಿ ನಿಲ್ಲದೇ ನೀವು ಏನ್ ಬೇಕಾದರೂ ಮಾಡಿಕೊಳ್ಳಿ ಅಂತಾ ಹೇಳುತ್ತಾ ಕಾರ್ ಸಮೇತ ಓಡಿ ಹೋಗಿರುತ್ತಾನೆ. ನಾವುಗಳು ಕಾರ್ ಮತ್ತು ಕಾರ್ ಚಾಲಕನಿಗೆ ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ನಾನು ನಿಮ್ಮ ಮಗನಿಗೆ ಉಪಚಾರ ಕುರಿತು ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು, ನೀವು ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರ್ರೀ ಅಂದಾಗ ನಾನು ಈ ಸುದ್ದಿಯನ್ನು ನಮ್ಮ ಸಂಬಂಧೀ ಹೊನ್ನಾರೆಡ್ಡಿ ತಂದೆ ಯಂಕಣ್ಣ ಬಂದಳ್ಳಿ ಸಾ;ಹೊನಗೇರಾ ಇವರಿಗೆ ತಿಳಿಸಿ ನಡೀರಿ ಯಾದಗಿರಿಗೆ ಹೋಗೋಣ ಅಂದಾಗ ಅವರನ್ನು ಸಂಗಡ ಕರೆದುಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಮಗ ಹೊನ್ನಪ್ಪ ಈತನು ಉಪಚಾರ ಹೊಂದುತ್ತಿದ್ದು, ನಮಗೆ ಈ ಮೇಲೆ ರವೀಂದ್ರ ಇವರು ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಹೀಗಿದ್ದು ಇಂದು ದಿನಾಂಕ 19/05/2022 ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಚಾಮನಳ್ಳಿ ಕ್ರಾಸ್ ಹತ್ತಿರದ ಎಸ್ಸಾರ್ ಪೆಟ್ರೋಲ್ ಬಂಕ್ ಮುಂದಿನ ಮುಖ್ಯ ರಸ್ತೆ ಮೇಲೆ ನನ್ನ ಮಗ ಹೊನ್ನಪ್ಪನ ಮೊಟಾರು ಸೈಕಲ್ ನಂಬರ ಕೆಎ-33, ಎಕ್ಸ್-9149 ನೇದ್ದಕ್ಕೆ, ಕಾರ್ ನಂಬರ ಕೆಎ-33, ಬಿ-1967 ನೇದ್ದರ ಚಾಲಕನು ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಮತ್ತು ಕಾರ್ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 8-15 ಪಿ.ಎಂ.ಕ್ಕೆ ಬಂದು ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 28/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 68/2022, ಕಲಂ, 143, 147, 148, 341, 323,326, 504.506. ಸಂ.149 ಐ ಪಿ ಸಿ: 19-05-2022 ರಂದು ರಾತ್ರಿ 07-30 ಗಂಟೆಗೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ಪಿರ್ಯಾಧಿ ನಿಡಿದ ಸಾರಂಶವೆನೆಂದರೆ ದಿನಾಂಕ: 19-05-2022 ರಂದು ಮಧ್ಯಾಹ್ನ 03-30 ಗಂಟೆ ಸುಮಾರಿಗೆ ಸ್ಕೂಟಿ ಮೇಲೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಮುದ್ನಾಳ ಕ್ರಾಸ ಹತ್ತಿರ ಹೋಗುತ್ತಿರುವಾಗ ಆರೋಪಿತರೆಲ್ಲರು ಸೇರಿಕೊಂಡು ಮೋಟರ ಸೈಕಲ ಮೇಲೆ ಬಂದು ಅಡ್ಡ ಗಟ್ಟಿ ನಿಲ್ಲಿಸಿ ಲೇ ಸುಳೆ ಮಗನೆ ತಾಂಡದಲ್ಲಿ ನಿನ್ನ ಸೊಕ್ಕು ಬಹಳ ಆಗಿದೆ ಅಂದು ಚಾಕು ಮತ್ತು ಬ್ಲೆಡನಿಂದ ಹೊಡೆದು ಭಾರಿ ರಕ್ತಗಾಯ ಮಾಡಿ ಲೇ ಸೂಳೆ ಮಗನೆ ನೀನು ನಮ್ಮ ಹೊಲದ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಮಗನೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯಾಧಿ ಸಾರಂಶ ಇರುತ್ತದೆ

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 40/2022 ಕಲಂ. 420, 323, 504, 506 ಸಂ. 34 ಐಪಿಸಿ: ಹುಣಸಗಿ ಸಬ್ ರಜಿಸ್ಟರ್ ಆಪೀಸದಲ್ಲಿ ಮೋಸದಿಂದ ಫಿರ್ಯಾದಿಯ ತಂದೆಯ ಹೆಸರಿನಲ್ಲಿರುವ ಹೊಲವನ್ನು ಆರೋಪಿ ನಂ;3 ನೇದ್ದವನಿಗೆ ರಜಿಸ್ಟರ್ ಮಾಡಿದ್ದು, ಫಿರ್ಯಾದಿಯು ಈ ಬಗ್ಗೆ ಹುಣಸಗಿ ಸಬ್ ರಜಿಸ್ಟರ್ಗೆ ಹೋಗಿ ಆರೋಪಿ ನಂ; 1&2 ನೇದ್ದವರಿಗೆ ಕೇಳಿದಾಗ, ಫಿರ್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ

ಯಾದಗಿರಿ ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ:30/2022 ಕಲಂ: 143, 147, 323,354, 504,506, ಸಂ.149 ಐ ಪಿ ಸಿ: ಇಂದು ದಿನಾಂಕ 19.05.2022 ರಂದು ಸಾಯಂಕಾಲ 7-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನೆಂದರೆ , ನಾನು ಪ್ರಮೀಳಾ ತಂದೆ ಕಿಷನ್ ರಾಠೋಡ್ ವಯಾ-20 ಜಾ-ಲಂಬಾಣಿ ಉ-ವಿದ್ಯಾರ್ಥಿ ಸಾ- ಮುದ್ನಾಳ ದೊಡ್ಡ ತಾಂಡಾ ಆಗಿದ್ದು, ಯಾದಗಿರಿ (ಬಿ) ಸೀಮೆಯಲ್ಲಿ ಬರುವ ಹೊಲ ಸರ್ವೆ ನಂಬರ್ 688/1 ನೇದ್ದರ ಆಕಾರ 12ಎಕರೆ 39 ಗುಂಟೆ ಹೊಲವು ನಮ್ಮ ತಂದೆಯ ಹೆಸರಿಗೆ ಇರುತ್ತದೆ. ಈ ಹೊಲವು ಸುಮಾರು 12 ವರ್ಷಗಳವರೆಗೆ ನಮ್ಮ ತಂದೆ ಕಿಷನ್ ರಾಠೋಡ್ ಮತ್ತು ನನ್ನ ಅಕ್ಕನ ಮಗನಾದ ಮೋಹನ ತಂದೆ ಶಂಕರ್ ಪವ್ಹಾರ್ ಇವರಿಗೂ ಈ ಹಿಂದಿನಿಂದಲೂ ಹೊಲದ ವಿಷಯದಲ್ಲಿ ತಕಾರರು ಆಗಿ ವೈಮನಸು ಬೆಳೆದಿದ್ದು ಇರುತ್ತದೆ. ಈ ವಿಷಯ ಸಂಬಂಧ ನಿನ್ನೆ ದಿನಾಂಕ 18.05.2022 ರಂದು ನಮ್ಮ ಮನೆಯವರಿಗೂ ಮತ್ತು ಮೋಹನ ತಂದೆ ಶಂಕರ್ ಪವ್ಹಾರ್ ಇವರಿಗೂ ಜಗಳ ಆಗಿದ್ದರಿಂದ ನನ್ನ ತಂದೆ ಮತ್ತು ನಮ್ಮ ಮನೆಯವರು ಎಲ್ಲರೂ ಕೂಡಿ ನನ್ನ ಅಣ್ಣನಾದ ವಿನೋಧ್ ಇತನಿಗೆ ಹೊಡೆದಿದ್ದರಿಂದ ನಾವು ಯಾದಗಿರಿ ನಗರ ಪೊಲೀಸ್ ಠಾಣೆಗೆ ಹೋಗಿ ಕೇಸು ಕೊಟ್ಟಿದ್ದು ಈ ಬಗ್ಗೆ ಠಾಣೆ ಗುನ್ನೆ ನಂ 56/2022 ಕಲಂ: 143, 147, 148, 323, 324, 326, 427, 504, 506, ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ ನಂತರ ನನ್ನ ಅಣ್ಣನಿಗೆ ಗಾಯವಾಗಿದ್ದರಿಂದ ಕಲಬುರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು.
ಹೀಗಿರುವಾಗ ಇಂದು ದಿನಾಂಕ : 19.05.2022 ರಂದು ಮಧ್ಯಾಹ್ನ 2-30 ಗಂಟೆಗೆ ನಾನು ಒಬ್ಬಳೇ ನಮ್ಮ ಮನೆಯ ಮುಂದೆ ಕುಳಿದ್ದೇನು, ಆಗ ನಮ್ಮ ತಾಂಡಾದ 1) ವಿನೋಧ ತಂದೆ ಭೀಮ್ಲಾ ರಾಠೋಡ್ , 2) ಮೋಹನ ತಂದೆ ಭೀಮ್ಲಾನಾಯಕ್, 3) ಶ್ರೀನಿವಾಸ ತಂದೆ ಮೊಹನ ರಾಠೋಡ್ 4) ಮೇನಕಾ ಗಂಡ ವಿನೋಧ್ ರಾಠೋಡ್ , 5) ವಿಜ್ಜುಬಾಯಿ ಗಂಡ ಸಂತೋಷ ರಾಠೋಡ್, 6) ಸಕ್ಕಿಬಾಯಿ ಗಂಡ ಲಕ್ಷ್ಮಣ ರಾಠೋಡ್,7) ಸನ್ಯಾಬಾಯಿ ಗಂಡ ಮೋಹನ ರಾಠೋಡ್ ಇವರೇಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ನಮ್ಮ ಮನೆಯ ಮುಂದೆ ಬಂದು ನಮ್ಮ ತಂದೆಗೆ ಹೊಲಸು ಶಬ್ದಗಳಿಂದ ಬೈಯುತ್ತಿದ್ದರು ಅವರನ್ನು ನಾನು ಏಕೆ ಬೈಯುತ್ತಿದ್ದಿರಾ ಅಂತಾ ಪ್ರಶ್ನಿಸಿದಾಗ 1) ವಿನೋಧ ತಂದೆ ಭೀಮ್ಲಾ ರಾಠೋಡ್, 2) ಮೋಹನ ತಂದೆ ಭೀಮ್ಲಾನಾಯಕ್, 3) ಶ್ರೀನಿವಾಸ ತಂದೆ ಮೊಹನ ರಾಠೋಡ್ ಇವರೇಲ್ಲರೂ ಏ ಬೊಸಡಿ ನಿಮ್ಮ ತಂದೆ ಹೊಲದಲ್ಲಿ ನಮಗೆ ಪಾಲು ಕೊಡುತ್ತಿಲ್ಲ ನಮ್ಮ ಜೋತೆ ತಕರಾರು ಮಾಡುತ್ತಿದ್ದಾನೆ ನಿನಗೆ ಇವತ್ತು ಬಿಡುವುದಿಲ್ಲ ಅಂದು ನನ್ನ ಮೈ ಮೇಲಿಂದ ಓಣಿ ಮತ್ತು ಜಂಬರ್ ಹಿಡಿದು ಮಾನಭಂಗ ಮಾಡಲು ಪ್ರಯತ್ನಿಸಿದರು. ಆಗ ನಾನು ಚಿರಾಡುತ್ತಿದ್ದೆನು 4) ಮೇನಕಾ ಗಂಡ ವಿನೋಧ್ ರಾಠೋಡ್ , 5) ವಿಜ್ಜುಬಾಯಿ ಗಂಡ ಸಂತೋಷ ರಾಠೋಡ್, 6) ಸಕ್ಕಿಬಾಯಿ ಗಂಡ ಲಕ್ಷ್ಮಣ ರಾಠೋಡ್,7) ಸನ್ಯಾಬಾಯಿ ಗಂಡ ಮೋಹನ ರಾಠೋಡ್ ಇವರೇಲ್ಲರೂ ಗುಂಪು ಕಟ್ಟಿಕೊಂಡು ರಂಡಿ, ಸೂಳೇ ಅಂತಾ ಅವ್ಯಾಚವಾಗಿ ಬೈಯ್ದು ಹೊಟ್ಟೆಗೆ ಕೈಗೆ ತಲೆಗೆ ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ನನ್ನ ಕೈ ಹಿಡಿದು ಎಳೆದಾಡಿ ನನ್ನ ಬಟ್ಟೆಗಳನ್ನು ಹಿಡಿದು ಎಳೆದಾಡುತ್ತಿದ್ದರು ಅಷ್ಟರಲ್ಲಿಯೇ ಮುದ್ನಾಳ ಸಣ್ಣ ತಾಂಡಾದ ನಮ್ಮ ದೊಡ್ಡಮ್ಮ ಗೇಣಿಬಾಯಿ ಗಂಡ ತೇಜ ರಾಠೋಡ್ , ಲಕ್ಷ್ಮೀಬಾಯಿ ಗಂಡ ನೇರು ರವರು ಜಗಳವನ್ನು ಬಿಡಿಸಿರುತ್ತಾರೆ. ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿದಿ ಸೂಳೇ, ಇನ್ನೊಂದು ಸಲ ನಿನಗೆ ಜಿವ ಸಹಿತ ಬಿಡುವುದಿಲ್ಲ ಅಂತಾ ಜೀವದ ಭಯ ಹಾಕಿರುತ್ತಾರೆ..ಅಂತಾ ಕೊಟ್ಟ ದೂರಿನ ಸಾರಾಂಶದ ಆಧಾರದ ಮೇಲಿಂದ ಠಾಣೆ ಗುನ್ನೆ ನಂ: 30/2022 ಕಲಂ : 143, 147, 323, 354, 504, 506, ಸಂಗಡ 149 ಐ.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.


ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 69/2022, ಕಲಂ, 143,147,323,324,341 504.506. ಸಂ.149 ಐ ಪಿ ಸಿ: ಇಂದು ದಿನಾಂಕ: 19-05-2022 ರಂದು ರಾತ್ರಿ 09-30 ಗಂಟೆಗೆ ಠಾಣೆಗೆ ಹಾಜರಾಗಿ ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 13-05-2022 ರಂದು ಸಾಯಂಕಾಲ 06-30 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದಿನ ಜಾಗದಲ್ಲಿ ಆರೋಪಿತರಲ್ಲರು ಸೇರಿ ನಮ್ಮ ಜಾಗದಲ್ಲಿ ಜೆಸಿಬಿಯಿಂದ ನೆಲ ಅನಧಿಕೃತವಾಗಿ ತೋಡುತಿದ್ದಾಗ ಅವರಿಗೆ ಯಾಕೆ ತೋಡುತಿದ್ದರಿ ಅಂತಾ ಕೆಳಲು ಹೊದಾಗ ಆರೋಪಿತರಲ್ಲರು ಕೂಡಿಕೊಂಡು ಬಂದು ಕುತ್ತಿಗೆ ಹಿಡಿದು ದಬ್ಬಿರುತ್ತಾರೆ ಕೊಡಲಿಯಿಂದ ಹೊಡೆದಿರುತ್ತಾರೆ, ಬಡಿಗೆಯಿಂದ ಹೊಡೆದಿರುತ್ತಾರೆ, ಮತ್ತು ಗಟ್ಟಿಯಾಗಿ ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ, ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.

ಇತ್ತೀಚಿನ ನವೀಕರಣ​ : 20-05-2022 05:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080