ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20-06-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 139/2021 ಕಲಂ 323, 447, 504, 506, 498 (ಎ) ಐ.ಪಿ.ಸಿ. : ಇಂದು ದಿನಾಂಕ:19-06-2021 ರಂದು 3:30 ಪಿ.ಎಮ್.ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಶ್ರೀ ರಾಮಣ್ಣ ಪಿ.ಸಿ. 424 ರವರು ಠಾಣೆಗೆ ಬಂದು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಧಾವೆ ನಂ. 55/2021 ನೇದ್ದನ್ನು ತಂದೆ ಹಾಜರು ಪಡಿಸಿದ್ದು ಸದರಿ ಖಾಸಗಿ ಧಾವೆಯ ಸಾರಾಂಶವೇನಂದರೆ ಫಿರ್ಯಾದಿ ಶ್ರೀಮತಿ ಶಹನಾಜ ಬೇಗಂ ಇವಳಿಗೆ ಸುರಪುರ ತಾಲೂಕಿನ ತಿಮ್ಮಾಪುರ ಗ್ರಾಮದ ಖರೀಮುದ್ದೀನ ತಂದೆ ಅಮೀರುದ್ದೀನ ಶಖರ್ೀ ಎಂಬುವವರೊಡನೆ ದಿನಾಂಕ:19-04-2021 ರಂದು ಆರೋಪಿತನೊಂದಿಗೆ ಮದುವೆಯಾಗಿದ್ದು ಮದುವೆಯಾದ ನಂತರ ಅವಳ ಗಂಡ ಮತ್ತು ಮನೆಯವರು ಕೂಡಿ ಆಕೆಗೆ ಕೌಟುಂಬಿಕ ಕಿರುಕುಳ ನೀಡಿದ್ದು ಅಲ್ಲದೇ ತವರು ಮನೆಯಿಂದ 2 ಲಕ್ಷ ರೂ. ತೆಗದುಕೊಂಡು ಬಾ ಅಂತಾ ಹೇಳಿ ದಿನಾಂಕ:20-02-2021 ರಂದು ಹೊರಗೆ ಹಾಕಿದ್ದು ಆದ್ದರಿಂದ ಫಿರ್ಯಾದಿ ತವರು ಮನೆಯಾದ ಸಗರ ಗ್ರಾಮಕ್ಕೆ ಬಂದು ತವರು ಮನೆಗೆ ಬಂದು ವಕೀಲರ ಮುಖಾಂತರ ಲೀಗಲ್ ನೊಟೀಸ ಕಳುಹಿದ್ದು ಇದೆ. ಅದಕ್ಕೆ ಆರೋಪಿತರೆಲ್ಲರೂ ಕೂಡಿ ದಿನಾಂಕ: 29-04-2021 ರಂದು ಸಗರ ಗ್ರಾಮದ ಫಿರ್ಯಾದಿಯ ತವರು ಮನೆಗೆ ಬಂದು ಅವಾಚ್ಯ ಆಬ್ದಗಳಿಂದ ಬೈದು ನೀನು ಲೀಗಲ್ ನೊಟೀಸ ಕಳಿಸಿದ್ದೀಯಾ ರಂಡಿ ಎಂದು ಬೈದು ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 139/2021 ಕಲಂ 323, 447, 504, 506, 498 (ಎ) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 141/2021 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 19/06/2021 ರಂದು 16-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್.ಹಿರೇಮಠ ಪಿ.ಐ. ಸಾಹೇಬರು ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 19/06/2021 ರಂದು ಮದ್ಯಾಹ್ನ 15-00 ಗಂಟೆಯ ಸುಮಾರಿಗೆ ನಾನು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂರ ನಗರದ ಗಾಂಧಿ ಚೌಕ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣೆಯ ಎನ್ ಸಿ ನಂ 35/20214 ನೇದ್ದು ದಾಖಲಿಸಿಕೊಂಡು. ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 141/2021 ಕಲಂ 78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ನಂತರ ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 2220=00 ರೂಪಾಯಿ ಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ, 86/2021 ಕಲಂ: 326, 504, 506, ಐಪಿಸಿ : ನಿನ್ನೆ ದಿನಾಂಕ 18.06.2021 ರಂದು ಬಸವೇಶ್ವರ ಆಸ್ಪತ್ರೆ ಕಲಬುಗರ್ಿಯಿಂದ ಎಮ್ ಎಲ್ ಸಿ ವಸೂಲಾದ ಮೇರೆಗೆ ಠಾಣೆಯ ನೀಲಪ್ಪ ಹೆಚ್ ಸಿ 147 ರವರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಹುಸೇನಭಿ ಗಂಡ ಬಡೆಸಾಬ ಸಿಪಾಯಿ ವಯಾ|| 45 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ಯಾಳಗಿ ತಾ|| ಸುರಪುರ ಇವರ ಹೇಳಿಕೆಯನ್ನು ಪಡೆದುಕೊಂಡು ಇಂದು ದಿನಾಂಕ 19.06.2021 ರಂದು 7.30 ಪಿ ಎಮ್ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಒಪ್ಪಿಸಿದ್ದು ಸದರಿ ಹೇಳಿಕೆ ಸಾರಾಂಶವೇನಂದರೆ ನಮ್ಮೂರ ನಮ್ಮ ಸಂಬಂದಿಯಾದ ಕಲೀಲ ತಂದೆ ಮಹ್ಮದಸಾಬ ಸಿಪಾಯಿ ಈತನು ಆಗಾಗ ತನ್ನ ಹೆಂಡತಿಯೊಂದಿಗೆ ಜಗಳಾ ಮಾಡುತ್ತಿದ್ದು ನಾನು ಇಬ್ಬರಿಗೂ ತಿಳಿ ಹೇಳಿದ್ದೆನು. ಆದರಿ ಸಹ ಕಲೀಲ ಈತನು ಸುಮಾರು ಎರಡು ತಿಂಗಳ ಹಿಂದೆ ತನ್ನ ಹೆಂಡತಿಯಾದ ರೇಶ್ಮಾ ಇವಳೊಂದಿಗೆ ಜಗಳಾ ಮಾಡಿದ್ದರಿಂದ ಅವಳು ತನ್ನ ತವರು ಮನೆಯಾದ ಚಿಗರಿಹಾಳ ಗ್ರಾಮಕ್ಕೆ ಹೋಗಿದ್ದಳು. ಸದರಿಯವಳು ತವರು ಮನೆಗೆ ಹೋದಾಗಿನಿಂದ ಅವಳಿಗೆ ನಾನೇ ಕಳುಹಿಸಿರುತ್ತೇನೆ ಅಂತ ಕಲೀಲ ಈತನು ನನ್ನ ಮೇಲೆ ಹಗೆತನ ಸಾದಿಸುತ್ತಿದ್ದನು.ಹೀಗಿದ್ದು ದಿನಾಂಕ: 17.06.2021 ರಂದು ಬೆಳಿಗ್ಗೆ 9 ಗಂಟೆಗೆ ನಾನು ನಮ್ಮೂರ ಉದರ್ು ಶಾಲೆಗೆ ಕಸ ಗೂಡಿಸಲು ಹೋಗಿದ್ದು ಅದೇ ಸಮಯಕ್ಕೆ ನಮ್ಮೂರ ನಮ್ಮ ಜನಾಂಗದ ಕಲೀಲ ತಂದೆ ಮಹ್ಮದಸಾಬ ಸಿಪಾಯಿ ಈತನು ಕೈಯಲ್ಲಿ ಕುಡುಗೋಲು ಹಿಡಿದುಕೊಂಡು ನನ್ನಲ್ಲಿಗೆ ಬಂದವನೇ ಏನಲೇ ರಂಡಿ ಹುಸೇನಿ ನನ್ನ ಹೆಂಡತಿಗೆ ಅವಳ ತವರು ಮನೆಗೆ ನೀನೇ ಕಳುಹಿಸಿದ್ದಿ ಅಂತ ಅಂದಾಗ ನಾನು ಯಾಕೇ ನಿನ್ನ ಹೆಂಡತಿಗೆ ಕಳುಹಿಸಲಿ ಅವಳು ನಿನ್ನ ಕಾಟ ತಾಳಲಾರದೇ ಹೋಗಿದ್ದಾಳೆ ಅಂತ ಅಂದಾಗ ಸದರಿಯವನು ಈ ಸೂಳೇಯದು ಬಹಾಳ ಆಗಿದೆ ಅಂತ ಅನ್ನುತ್ತಾ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ನನ್ನ ಕುತ್ತಿಗೆಯ ಬಲಭಾಗಕ್ಕೆ ಭಲವಾಗಿ ಹೊಡೆದು ಭಾರೀ ರಕ್ತಗಾಯ ಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಯೂನೀಶ್ ತಂದೆ ಸೋಫಿಸಾಬ ಸಿಪಾಯಿ ಹಾಗು ಮಹ್ಮದ್ಸಾಬ ತಂದೆ ರಾಜಾಸಾಬ ಸಿಪಾಯಿ ಇವರು ಓಡಿ ಬಂದು ಸದರಿಯವನು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಕಲೀಲ ಈತನು ಹೊಡೆಯುವದನ್ನು ಬಿಟ್ಟು ಸೂಳೇ ಸದ್ಯ ಇಷ್ಟಕ್ಕೆ ಬಿಟ್ಟಿದ್ದೇನೆ ಇನ್ನು ಮುಂದೆ ನನ್ನ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದನು. ನನಗೆ ಬಹಾಳಷ್ಟು ರಕ್ತಸ್ರಾವವಾಗುತ್ತಿದ್ದರಿಂದ ಅಲ್ಲಿಯೇ ಇದ್ದ ಮಹ್ಮದಸಾಬ ಸಿಪಾಯಿ ಇವರು ನನಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಅಂಬ್ಯೂಲೆನ್ಸದಲ್ಲಿ ಕಲಬುಗರ್ಿಯ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ವಿನಾಕಾರಣವಾಗಿ ನನ್ನೊಂದಿಗೆ ಜಗಳಾ ತೆಗೆದು ಕುಡುಗೋಲಿನಿಂದ ಕುತ್ತಿಗೆಯ ಬಲಬಾಗಕ್ಕೆ ಹೊಡೆದು ಭಾರೀ ರಕ್ತಗಾಯ ಪಡಿಸಿ ಜೀವದ ಭಯ ಹಾಕಿದ ಕಲೀಲ ತಂದೆ ಮಹ್ಮದಸಾಬ ಸಿಪಾಯಿ ಸಾ|| ಯಾಳಗಿ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 86/2021 ಕಲಂ 326,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

 

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 90/2021 ಕಲಂ 78 (3) ಕೆ.ಪಿ ಎಕ್ಟ : ಇಂದು ದಿನಾಂಕ 19-06-2021 ರಂದು 4-45 ಪಿ.ಎಮ್ ಕ್ಕೆ ಆರೋಪಿ ಶರಣಪ್ಪಾ ತಂದೆ ಸಾಬಣ್ಣಾ ಹತ್ತಿಕುಣಿ ವಯಾ:32 ಉ:ಚಾಲಕ ಜಾ:ಕುರುಬರ ಸಾ: ಶೇಟ್ಟಿಗೇರಾ ಇವರು ಶೇಟ್ಟಿಗೇರಾ ಗ್ರಾಮದಲ್ಲಿ ಶ್ರೀ ಮರೆಮ್ಮಾ ಗುಡಿಯ ಹತ್ತಿರ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತನಿಂದ 520/-ರೂ ನಗದು ಹಣ ಮತ್ತು ಮಟಕಾ ಎರಡು ಚೀಟಿಗಳನ್ನು ಹಾಗೂ ಒಂದು ಬಾಲಪೆನ್ನು ಜಪ್ತಿಪಡಿಸಿಕೊಂಡಿದ್ದು ಮತ್ತು ಸದರಿ ಆರೋಪಿತನು ತಾನು ಮಟಕಾ ಸಂಗ್ರಹಿಸಿದ ಹಣ ಮತ್ತು ಮಟಕಾ ನಂಬರಗಳು ಅರಕೇರಾ ಕೆ ಗ್ರಾಮದ ಇನ್ನೊಬ್ಬ ಆರೋಪಿ ಸಿದ್ರಾಮ ಬೀರೆ ಪೂಜಾರಿ ಇವನಿಗೆ ಕೊಡುವುದು ತಿಳಿಸಿದ್ದು ಇರುತ್ತದೆ.

 

 

ಗುರಮಿಠಕಲ್ ಪೊಲೀಸ್ ಠಾಣೆ
94/2021 ಕಲಂ. 279, 337, 338, ಐಪಿಸಿ : ದಿನಾಂಕ. 15.06.2021 ರಂದು ಬೆಳಿಗ್ಗೆ ಫಿಯರ್ಾದಿ ಮತ್ತು ಆತನ ಗೆಳೆಯ ರವಿರಾಜ ತಂದೆ ಆಂಜನೇಯ ಯಾದವ ಇಬ್ಬರೂ ಪಲ್ಸರ ಮೋಟಾರ ಸೈಕಲ ನಂ. ಕೆಎ-36, ಇ.ಕ್ಯೂ-0401 ನೇದ್ದರ ಮೇಲೆ ಸೈದಾಪೂರಕ್ಕೆ ಬಂದು ಮರಳಿ ರಾಯಚೂರಗೆ ಹೊರಟಾಗ ಬೆಳಿಗ್ಗೆ 10.45 ಗಂಟೆಗೆ ಕಡೇಚೂರ ಇಂಡಸ್ಟ್ರೀಯಲ್ ಏರಿಯಾ ಕ್ರಾಸ ಮತ್ತು ರೈಲ್ವೇ ಭೋಗಿ ಕ್ರಾಸ ಮಧ್ಯದ ಎನ್.ಹೆಚ್.-150 ಹೈವೇ ರೋಡಿನ ಮೇಲೆ ಹೊರಟಿದ್ದಾಗ ಮೋಟಾರ ಸೈಕಲ ಮುಂದೆ ಹೊರಟಿದ್ದ ಒಬ್ಬ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಫಿಯರ್ಾದಿ ಹಾರ್ನ ಮಾಡುತ್ತಾ ಸೈಡಗೆ ಹೊರಟಿದ್ದರು, ಯಾವುದೇ ಸೂಚನೆ ಕೊಡದೆ ಒಮ್ಮೆಲೆ ಬಲಕ್ಕೆ ಕಟ್ ಹೊಡೆದಿದ್ದರಿಂದ ಬೈಕಗೆ ಡಿಕ್ಕಿಯಾಗಿ ಬೈಕನಿಂದ ಕೆಳಗೆ ಬಿದ್ದ ಫಿಯರ್ಾದಿ ಎಡಕಾಲಿನ ಮೊಳಕಾಲಿಗೆ, ಮತ್ತು ಬಲಗಾಲಿಗೆ ಮತ್ತು ಬೆನ್ನಿನ ಹಿಂದೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ. ಮೋಟಾರ ಸೈಕಲ ಹಿಂದೆ ಕುಳಿತಿದ್ದ ರವಿರಾಜ ತಂದೆ ಆಂಜನೇಯ ಯಾದವ ಈತನಿಗೆ ಎಡಗಾಲು ಮತ್ತು ಬಲಗಾಲ ಮೊಳಕಾಲು ಕೆಳಗೆ ಭಾರಿ ರಕ್ತಗಾಯವಾಗಿದ್ದು, ಎಡ ಹಣೆಯ ಮೇಲೆ, ಎಡಕಣ್ಣಿನ ಕೆಳಗಡೆ ಮತ್ತು ಮೂಗಿನ ಮೇಲೆ ತರಚಿದ ಗಾಯವಾಗಿರುತ್ತದೆ. ನಮಗೆ ಡಿಕ್ಕಿಪಡಿಸಿದ ಟ್ಯಾಕ್ಟರ ನಂಬರ ನೋಡಲಾಗಿ ಕೆ.ಎ-33 ಟಿ.ಬಿ-3934 ಇದ್ದು ಅದರ ಚಾಲಕನ ಹೆಸರು ಅಮರೇಶ ತಂದೆ ಮಹಾದೇವಪ್ಪ ಹಾಲಶೆಟ್ಟಿ ವಯ|| 24 ವರ್ಷ, ಜಾ|| ಲಿಂಗಾಯತ ಉ|| ಟ್ಯಾಕ್ಟರ ಚಾಲಕ ಸಾ|| ಶೆಟ್ಟಿಹಳ್ಳಿ ಅಂತ ಗೊತ್ತಾಗಿರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿಯರ್ಾದಿ ಸಾರಾಂಶ ಇರುತ್ತದೆ.

ಇತ್ತೀಚಿನ ನವೀಕರಣ​ : 20-06-2021 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080