ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-06-2022
ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 101/2022 ಕಲಂ 323, 354, 504, 506 ಸಂಗಡ 34 ಐಪಿಸಿ ಮತ್ತು 3(1)(ಆರ್)(ಎಸ್)(ಡಬ್ಲೂ), 3(2)(ಗಿಚಿ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್-1989: ಫಿರ್ಯಾದಿಗೆ ತಮ್ಮ ಪುರ್ವಜರಿಂದ ಬಂದಂತಹ ಶಿವಪೂರ ಗ್ರಾಮ ಸಿಮಾಂತರದಲ್ಲಿ ಜಮೀನು ಸವರ್ೇ ನಂಬರ 45 ನೇದ್ದರಲ್ಲಿ ಫಿರ್ಯಾದಿಯವರು ಸುಮಾರು ವರ್ಷಗಳಿಂದ ಬಿತ್ತಿ-ಬೆಳೆಯುತ್ತ ಬಂದಿರುತ್ತಾರೆ. ಹೀಗಿರುವಾಗ ದಿನಾಂಕ 18.06.2022 ರಂದು ಬೆಳಿಗ್ಗೆ 8:30 ಗಂಟೆಯ ಸುಮಾರಿಗೆ ಫೀರ್ಯಾದಿ ಮತ್ತು ಆಕೆಯ ಗಂಡ ಮತ್ತು ಅವರ ಮಗನಾದ ಗಾಯಾಳು ಅನೀಲಕುಮಾರ ಇವರು ಮೂರು ಜನರು ಕೂಡಿಕೊಂಡು ತಮ್ಮ ದುಬಾಲಗಡ್ಡಿ ಎಂಬ ಹೊಲಕ್ಕೆ ಹೋಗಿ ನೋಡಿದಾಗ ಅಲ್ಲಿ ಆರೋಪಿತರು ಬಾಡಿಗೆಗೆ ಟ್ರ್ಯಾಕ್ಟರ ತಂದು ಟಿಲ್ಲರ ಹೊಡಿಯುತ್ತಿರುವುದನ್ನು ಕಂಡು ಫಿರ್ಯಾದಿಯು ಟ್ರ್ಯಾಕ್ಟರ ಹೊಡೆಯದಂತೆ ಸೂಚಿಸಿದ್ದಕ್ಕೆ ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರ ತಗೊಂಡು ಅಲ್ಲಿಂದ ಹೋಗಿ ಬೇರೆಯವರ ಹೊಲದಲ್ಲಿ ನಿಂತಿರುತ್ತಾನೆ. ನಂತರ ಆರೋಪಿ ಮತ್ತು ಪೀರ್ಯಾದಿಗೆ ಬಾಯಿ ಮಾತಿನ ಜಗಳವಾಗಿದ್ದು ಅದರಲ್ಲಿ ಆರೋಪಿ ಭೀಮಾಶಂಕರ ಈತನು ಗಾಯಾಳು ಅನೀಲಕುಮಾರನೊಂದಿಗೆ ಕುಸ್ತಿಗೆ ಬಿದ್ದಾಗ ಗಾಯಾಳುವಿನ ತಲೆಗೆ ರಕ್ತಗಾಯವಾಗಿದ್ದು ಆ ಜಗಳವನ್ನು ಬಿಡಿಸಲು ಹೋದ ಫಿರ್ಯಾದಿಗೆ ಆರೋಪಿ ಭೀಮಪ್ಪ ಈತನು ಕೈ ಹಿಡಿದು ಎಳೆದಾಡಿ ದೊಬ್ಬಿ ಜಾತಿ ನಿಂದನೆ ಮಾಡಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತಡವಾಗಿ ಊರಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿದ ನಂತರ ಇಂದು ದಿನಾಂಕ 19.06.2022 ರಂದು ಖುದ್ದಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 101/2022 ಕಲಂ 323, 354, 504, 506 ಸಂಗಡ 34 ಐಪಿಸಿ ಮತ್ತು 3(1)(ಆರ್)(ಎಸ್)(ಡಬ್ಲೂ), 3(2)(ಗಿಚಿ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್-1989 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 100/2022 ಕಲಂ 279, 337, 338 ಐಪಿಸಿ: ಪಿರ್ಯಾಧಿಯು ಮತ್ತು ಇತರ ಗಾಯಾಳುಗಳು ಬೂಲೋರ ನಂ ಕೆಎ-32 ಎನ್ 6305 ನೇದ್ದರಲ್ಲಿ ಹೈದ್ರಾಬಾದಿನಿಂದ ಮರಳಿ ಕಲಬುರಗಿಗೆ ಗರುಮಠಕಲ್ ಮಾರ್ಗವಾಗಿ ಹೋಗುತ್ತಿರುವಾಗ ಸಿಂದಗಿ- ಕೋಡಂಗಲ್ ರಾಜ್ಯ ಹೆದ್ದಾರಿ ಎಸ್ ಹೆಚ್ -16 ಮೇಲೆ ಗುರುಮಠಕಲ್ ಪಟ್ಟಣದ ಯಶೋದ ಪೆಟ್ರೋಲ್ ಬಂಕ್ ಹತ್ತಿರ ಸದರಿ ಬೂಲೋರ ನಂ ಕೆಎ-32 ಎನ್ 6305 ನೇದ್ದರಲ್ಲಿ, ಅತಿವೇಗ, ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗಿ ಒಮ್ಮಿಗೆ ಬ್ರೇಕ್ ಮಾಡಿದ್ದರಿಂದ ಬೂಲೋರ ಪಲ್ಟಿಯಾಗಿ ಬಿದ್ದಿದ್ದರಿಂದ್ದ ಬೂಲೋರ ನಂ ಕೆಎ-32 ಎನ್ 6305 ನೇದ್ದರಲ್ಲಿ ಪಿರ್ಯಾಧಿಗೆ ಮತ್ತು ಇತರರಿಗೆ ಸಾದ ಮತ್ತು ಭಾರಿ ಮತ್ತು ಸಾದಸ್ವರೂಪದ ಗಾಯಗಳಾಗಿದ್ದು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ ಅಂತಾ ಪಿರ್ಯಾಧಿ ವಗೈರೆ ಇರುತ್ತದೆ.
ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 102/2022 ಕಲಂ: 447, 323, 354, 504, 506 ಸಂಗಡ 34 ಐಪಿಸಿ:ಸುಮಾರು 18-20 ವರ್ಷಗಳ ಹಿಂದೆ ಫಿರ್ಯಾದಿಯ ಗಂಡನಾದ ಭೀಮಪ್ಪ ಈತನು ಆರೋಪಿತನಾದ ನರಸಪ್ಪ ಈತನಿಗೆ ಸೇರಿದ ಶಿವಪೂರ ಗ್ರಾಮ ಸಿಮಾಂತರದ ಜಮೀನು ಸವರ್ೇ ನಂಬರ 45 ನೇದ್ದರಲ್ಲಿಯ 1 ಎಕ್ಕರೆ 5 ಗುಂಟೆ ಜಮೀನನ್ನು ಖರೀದಿ ಮಡಿದ್ದು ಇರುತ್ತದೆ. ನಂತರ ದಿನಾಂಕ 18.06.2022 ರಂದು ಎಂದಿನಂತೆ ತಮ್ಮ ಹೊಲಕ್ಕೆ ಹೋಗಿ ಟ್ರ್ಯಾಕ್ಟರದಿಂದ ಗಳ್ಯಾ ಹಡೆಸುತ್ತಿದ್ದಾಗ ಆರೋಪಿತರೆಲ್ಲಾರು ಕೂಡಿ ಫಿರ್ಯಾದಿಗೆ ಸೇರಿದ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿಗೆ ತಮ್ಮ ಹೊಲದಲ್ಲಿ ಟ್ರ್ಯಾಕ್ಟರನಿಂದ ಗಳ್ಯಾ ಹೊಡೆಯದಂತೆ ತಡೆದು ನಿಲ್ಲಿಸಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿಯ ಮಗನಾದ ಭೀಮಾಶಂಕರನೊಂದಿಗೆ ಆರೋಪಿತನಾದ ಅನೀಲಕುಮಾರ ಈತನು ಕುಸ್ತಿಗೆ ಬಿದ್ದಿದ್ದು ಹಾಗೂ ಆರೋಪಿ ನರಸಪ್ಪ ಈತನು ಈತನು ಪೀರ್ಯಾದಿಯ ರಟ್ಟೆ ಹಿಡಿದು ಎಳೆದು ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫೀರ್ಯಾದಿಯು ಇಂದು ದಿನಾಂಕ 19.06.2022 ರಂದು ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 102/2022 ಕಲಂ: 447, 323, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 92/2022, ಕಲಂ, 341, 323, 324, 504.506. ಸಂ. 34 ಐ ಪಿ ಸಿ : ಇಂದು ದಿನಾಂಕ: 19-06-2022 ರಂದು ಬೆಳಿಗ್ಗೆ 10-40 ಗಂಟೆಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರೆಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆ ಭೆಟಿ ನೀಡಿ ಅಲ್ಲಿ ಗಾಯಾಳುಗಳಿಗೆ ಘಟನೆ ಬಗ್ಗೆ ವಿಚಾರಿಸಿದ್ದು ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 19-06-2022 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನಾನು ನನ್ನ ಮಗ ನಮ್ಮ ಹೊಲದಲ್ಲಿ ಬಿತ್ತನೆ ಮಾಡುತ್ತಿರುವಾಗ ಆರೋಪಿತರೆಲ್ಲರು ಸೇರಿಕೊಂಡು ಟ್ರ್ಯಾಕ್ಟ್ರದಲ್ಲಿ ನಮ್ಮ ಹೊಲದಲ್ಲಿ ಹೋಗುತ್ತಿರುವಾಗ ಆಗ ನಾನು ಈಗ ಹೊಲ ಬಿತ್ತುತಿದ್ದೆವೆ ಇಲ್ಲಿ ನಮ್ಮ ಹೊಲದಲ್ಲಿ ಹೋಗಬೇಡಿರಿ ಅಂತಾ ಹೇಳಿದ್ದಕ್ಕೆ ಆರೋಪಿತರೆಲ್ಲರು ಸೇರಿಕೊಂಡು ಲೇ ಸುಳೆ ಮಕ್ಕಳೆ ನಿಮ್ಮದು ಊರಲ್ಲಿ ಬಹಳ ಸೊಕ್ಕು ಆಗಿದೆ ಅಂದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಜೀವದ ಬದರಿಕೆ ಹಾಕಿ ಇನ್ನೊಂದು ಸಲ ನಮ್ಮ ತಂಟೆಗೆ ಬಮದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಬೇದರಿಕೆ ಹಾಕಿದ್ದ ಬಗ್ಗೆ ಪಿಯರ್ಾಧಿ.ಸಾರಂಶ ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 88/2022 ಕಲಂ: 379 ಐಪಿಸಿ: ಇಂದು ದಿನಾಂಕ: 19/06/2022 ರಂದು 3-30 ಪಿಎಮ್ಕ್ಕೆ ಪಿಯರ್ಾದಿದಾರಾದ ಶ್ರೀ ರವಿಚಂದ್ರ ತಂದೆ ಲಿಂಗಪ್ಪ ಕಿಲ್ಲನಕೇರಾ ವ:33, ಜಾತಿ:ಕುರುಬರು, ಉ:ಸಿವ್ಹಿಲ್ ಕಾಂಟ್ರ್ಯಾಕ್ಟರ ಕೆಲಸ, ಸಾ:ಬಂದಳ್ಳಿ ತಾ:ಜಿ:ಯಾದಗಿರಿ ಇದ್ದು ಪೋಲಿಸ ಠಾಣೆಗೆ ಹಾಜರಾಗಿ ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೆನೆಂದರೆ ನಾನು ಖಾನಾಪೂರು ಸೀಮಾಂತರದ ಯಾದಗಿರಿ-ಶಹಾಪೂರು ಮೇನ್ ರೋಡ ಖಾನಪೂರು ಗ್ರಾಮ ಸಮೀಪ ಹೊಲ ಸವರ್ೆ ನಂಬರ:221 ನೇದ್ದರಲ್ಲಿ ಹೊಸದಾಗಿ ಆರ್.ಎಲ್.ಕಿಲ್ಲನಕೇರಾ ಪೆಟ್ರೋಲ್ ಬಂಕ ಕಟ್ಟಡ ನಿಮರ್ಾಣ ಮಾಡುತ್ತಿರುತ್ತೇನೆ. ನನ್ನ ಹೊಸದಾದ ಆರ್.ಎಲ್.ಕಿಲ್ಲನಕೇರಾ ಪೆಟ್ರೋಲಿಯಮ್ ಬಂಕ್ಗೆ ಡೀಸಲ್ ಬೇಕಾಗಿದ್ದರಿಂದ ನಾನು ದಿನಾಂಕ:09/03/2022 ರಂದು ಎಸ್.ಬಿ.ಐ ಬ್ಯಾಂಕ ಖಾನಪೂರ ಬ್ಯಾಂಕಿನಲ್ಲಿ ಭಾರತ ಪೆಟ್ರೋಲಿಯಮ್ ಕಾಪರ್ೊರೇಷನ್ ಲಿಮಿಟೆಡ್ ರಾಯಚೂರು ಇವರ ಹೆಸರಿನಲ್ಲಿ 3,60.000-/ ರೂಪಾಯಿ ಡಿಡಿ ಕಟ್ಟಿರುತ್ತೇನೆ. ಅದರಂತೆ ದಿನಾಂಕ:11/03/2022 ರಂದು 3-30 ಪಿಎಮ್ ಸುಮಾರಿಗೆ ಭಾರತ ಪೆಟ್ರೋಲಿಯಮ್ ಕಾಪರ್ೊರೇಷನ್ ಲಿಮಿಟೆಡ್ ರಾಯಚೂರು ಇವರು 4 ಕೆ.ಎಲ್ ಅಂದಾಜು 4,000 ಲೀಟರ್ ಡೀಸೆಲ್ ತಂದು ನಮ್ಮ ಪೆಟ್ರೋಲ್ ಬಂಕಗೆ ಡೀಸಲ್ ಹಾಕಿ ಹೋದರು. ನಂತರ ನಾನು ಮತ್ತು ಆಸೀಫ್ ಹಾಗೂ ಇತರರು ಸೇರಿ ನಮ್ಮ ಡೀಸೆಲ್ ಟ್ಯಾಂಕ್ನ್ನು ಲಾಕ್ ಮಾಡಿ ಇಟ್ಟಿರುತ್ತವೆ. ನಮ್ಮ ಬಂಕಗೆ ಸಂಬಂದಿಸಿದ ಪೈಪ್ ಲೈನ್ ಕೆಲಸ ಪೂತರ್ಿ ಮುಗಿದ ನಂತರ ಸ್ವಲ್ಪ ದಿನದ ಬಿಟ್ಟು ನಮ್ಮ ಪೆಟ್ರೋಲ್ ಬಂಕನಲ್ಲಿ ಡೀಸೆಲ್ ಸ್ಯಾಂಪೆಲ್ ಚೆಕ್ ಮಾಡೋಣ ಅಂತಾ ದಿನಾಂಕ:31/05/2022 ರಂದು ರಾತ್ರಿ 9-20 ಗಂಟೆ ಸುಮಾರಿಗೆ ನಾನು ಮತ್ತು ಚಿದಾನಂದ ತಂದೆ ಫೀರೋಜ ಕಾಂಟ್ರ್ಯಾಕ್ಟರ್, ಪರಶುರಾಮ ತಂದೆ ಬಸವರಾಜ, ಸುಭಾಸ ತಂದೆ ಭೀಮಣ್ಣ ಬಂದಳ್ಳಿ, ಸಚಿನ ತಂದೆ ಅಣ್ಣರಾಯ ಕಣ್ಣಿ ಹಾಗೂ ವಾಚಮೆನ್ ಶರಣಪ್ಪ ತಂದೆ ಬಂಡೆಪ್ಪ ಇತರರು ಕೂಡಿ ಡೀಸೆಲ್ ಸ್ಯಾಂಪೆಲ್ ಚೆಕ್ ಮಾಡಿದಾಗ ನಮ್ಮ ಪೆಟ್ರೋಲ್ ಬಂಕನಲ್ಲಿ ಡಿಸೇಲ್ ಬರಲಿಲ್ಲ ನಂತರ ನಾನು ಗಾಭರಿಯಾಗಿ ಡಿಫ್ಟ್ ರಾಡಿನಿಂದ ಡೀಸೆಲ್ ಚೆಕ್ ಮಾಡಿದಾಗ ಟ್ಯಾಂಕರ ತಳಕ್ಕೆ ಸ್ವಲ್ಪ ಡೀಸಲ್ ಹತ್ತಿದ್ದು ನೋಡಿ ನಾನು ಮತ್ತು ಇತರರು ಕೂಡಿ ಟ್ಯಾಂಕರ ಕೀಲಿಯನ್ನು ಪೂತರ್ಿ ತೆಗೆದು ನೋಡಿದಾಗ ಟ್ಯಾಂಕರನಲ್ಲಿ ಡೀಸೆಲ್ ಇರಲಿಲ್ಲ. ನಮ್ಮ ಪೆಟ್ರೋಲ್ ಬಂಕಿನಲ್ಲಿನ ಯಾರೋ ಕಳ್ಳರು ದಿನಾಂಕ: 11/03/2022 ರಂದು 8-30 ಪಿಎಮ್ ನಿಂದ ದಿನಾಂಕ: 31/05/2022 ರಂದು 9-20 ಪಿಎಮ್ ಮಧ್ಯದ ಅವಧಿಯಲ್ಲಿ 4,000 ಲೀಟರ್ ಅ:ಕಿ:3,32,583/-ರೂಪಾಯಿ ಕಿಮ್ಮತಿನ ಡೀಸೆಲ್ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ಡಿಸೇಲ್ ಬಗ್ಗೆ ಅಲ್ಲಿಲ್ಲಿ ಹುಡುಕಾಡಿ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರನ್ನು ಸ್ವೀಕೃತ ಮಾಡಿಕೊಂಡು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ: 88/2022 ಕಲಂ:379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 99/2022 ಕಲಂ: 323, 324, 354, 504, 506 ಸಂ. 34 ಐಪಿಸಿ: ಇಂದು ದಿನಾಂಕಃ 19/06/2022 ರಂದು 12:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀಮತಿ ಶ್ವೇತಾ ಗಂಡ ಮಂಜುನಾಥ ದೋರನಳ್ಳಿ ವ|| 24 ವರ್ಷ ಜಾ|| ಉಪ್ಪಾರ ಉ|| ಅತಿಥಿ ಶಿಕ್ಷಕಿ ಸಾ|| ರುಕ್ಮಾಪುರ ತಾ|| ಸುರಪುರ ಇವರು ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನನಗೆ ಸುಮಾರು 3 ವರ್ಷಗಳ ಹಿಂದೆ ರುಕ್ಮಾಪುರ ಗ್ರಾಮದ ಮಂಜುನಾಥ ತಂದೆ ಬಸವರಾಜ ದೋರನಳ್ಳಿ ಈತನೊಂದಿಗೆ ಮದುವೆಯಾಗಿದ್ದು ಇರುತ್ತದೆ. ನಮ್ಮ ಸಂಸಾರಿಕ ಜೀವನದಲ್ಲಿ ಇನ್ನೂ ಮಕ್ಕಳಾಗಿರುವದಿಲ್ಲ. ನನ್ನ ಗಂಡ ಮತ್ತು ಗಂಡನ ಮನೆಯವರು ನನಗೆ ದೈಹಿಕ ಮಾನಸಿಕ ಕಿರುಕುಳ ನೀಡಿದ್ದಲ್ಲದೆ ವರದಕ್ಷಿಣೆ ಕಿರುಕುಳ ಕೊಟ್ಟಿದ್ದರಿಂದ ನಾನು ಅವರ ಮೇಲೆ ಹುಣಸಗಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕೇಸ್ ಮಾಡಿಸಿರುತ್ತೇನೆ. ದಿನಾಂಕ: 31/05/2022 ರಂದು ನಾನು ರುಕ್ಮಾಪುರದ ನನ್ನ ಗಂಡನ ಮನೆಗೆ ಬಂದು ಒಂದು ರೂಮಿನಲ್ಲಿ ಪ್ರತ್ಯೇಕವಾಗಿ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 15/06/2022 ರಂದು ಮುಂಜಾನೆ 7:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆಯಾದ ಭೀಮಾಶಂಕರ ಕಟ್ಟಿಮನಿ, ತಾಯಿ ನೀಲಮ್ಮ ಕಟ್ಟಿಮನಿ ಎಲ್ಲರು ಮನೆಯಲ್ಲಿದ್ದಾಗ ನನ್ನ ಗಂಡನಾದ 1) ಮಂಜುನಾಥ ತಂದೆ ಬಸವರಾಜ ದೋರನಳ್ಳಿ, ಮಾವನಾದ 2) ಬಸವರಾಜ ತಂದೆ ಯಂಕಪ್ಪ ದೋರನಳ್ಳಿ ಮತ್ತು ಅತ್ತೆಯಾದ 3) ಲಕ್ಷ್ಮೀಬಾಯಿ ಗಂಡ ಬಸವರಾಜ ದೋರನಳ್ಳಿ ಮೂವರು ಕೂಡಿ ನನ್ನ ಹತ್ತಿರ ಬಂದು ಏನಲೆ ಸೂಳಿ ನಮ್ಮ ಮೇಲೆ ವರದಕ್ಷಿಣೆ ಕೇಸು ಮಾಡಿಸಿ, ನಮ್ಮ ಮನೆಗೆ ಬಂದಿದಿಯಲ್ಲಾ ನಿನಗೆ ನಾಚಿಕೆ ಆಗಲ್ಲೇನು ಸೂಳೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ ಬೈಯುತ್ತೀರಿ ನೀವು ನನಗೆ ಸರಿಯಾಗಿ ನೋಡಿಕೊಂಡರೆ ನಾನೇಕೆ ನಿಮ್ಮ ಮೇಲೆ ಕೇಸ್ ಮಾಡಿಸುತ್ತಿದ್ದೆ ಅಂತ ಅನ್ನುತ್ತಿದ್ದಾಗ ನನ್ನ ಗಂಡನು ಕೈಯಿಂದ ನನಗೆ ಬೆನ್ನಿಗೆ, ಎಡಗಡೆ ಕುತ್ತಿಗೆಗೆ ಮತ್ತು ತಲೆಯ ಹಿಂದೆ ಹೊಡೆದು ಗುಪ್ತಪೆಟ್ಟು ಮಾಡಿ, ನನ್ನ ಎದೆಯ ಮೇಲಿನ ವೇಲ್ ಹಿಡಿದು ಜಗ್ಗಾಡಿ ಅವಮಾನ ಮಾಡಿದನು. ನಮ್ಮ ಮಾವನಾದ ಬಸವರಾಜ ಈತನು ಕೈಯಿಂದ ನನ್ನ ಎರಡೂ ಕೈಗಳಿಗೆ ಚೂರಿದ ಗಾಯಗೊಳಿಸಿದನು. ನಮ್ಮ ಅತ್ತೆಯಾದ ಲಕ್ಷ್ಮೀಬಾಯಿ ಇವಳು ಎರಡೂ ತೊಡೆಗಳಿಗೆ ಕೈಯಿಂದ ಚೂರಿದ ಗಾಯಮಾಡಿದಳು. ಆಗ ಅಲ್ಲಿಯೇ ಇದ್ದ ನಮ್ಮ ತಂದೆಯಾದ ಭೀಮಾಶಂಕರ, ತಾಯಿ ನೀಲಮ್ಮ ಇಬ್ಬರು ಕೂಡಿ ನನಗೆ ಹೊಡೆಯುವನ್ನು ನೋಡಿ ಬಿಡಿಸಿಕೊಂಡರು. ಮೂವರು ನನಗೆ ಹೊಡೆಯುವದನ್ನು ಬಿಟ್ಟು, ಇವತ್ತು ನಮ್ಮ ಕೈಯಲ್ಲಿ ಉಳಿದೀ ಸೂಳೆ ಇನ್ನೊಮ್ಮೆ ನಮ್ಮ ಕೈಯಾಗ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದರು. ನಂತರ ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ಚಿಕಿತ್ಸೆ ಪಡೆದುಕೊಂಡು, ಮನೆಯಲ್ಲಿ ನಮ್ಮ ತಂದೆ ತಾಯಿಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ಹೊಡೆ ಬಡೆ ಮಾಡಿ, ಮಾನಭಂಗ ಮಾಡಲು ಪ್ರಯತ್ನಿಸಿ, ಜೀವದ ಬೇದರಿಕೆ ಹಾಕಿದ ಮೇಲ್ಕಾಣಿಸಿದ ಮೂರು ಜನರ ಮೇಲೆ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 99/2022 ಕಲಂ: 323, 324, 354, 504, 506 ಸಂ. 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 100/2022 ಕಲಂ 87 ಕೆ.ಪಿ.ಕಾಯ್ದೆ : ಇಂದು ದಿನಾಂಕ: 19/06/2022 ರಂದು 6-10 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಸರಕಾರಿ ತಪರ್ೆ ಪಿಯರ್ಾದಿದಾರರಾದ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ. ಶೊರಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ವರದಿ ಸಾರಾಂಶವೇನೆಂದರೆ, ಇಂದು ದಿನಾಂಕ:19/06/2022 ರಂದು 3:00 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಗುರ ಗ್ರಾಮದ ಹನುಮಾನ ದೇವರ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿಯಲ್ಲಿದ್ದ ಸಿಬ್ಬಂದಿಯವರಾದ 1) ಹೊನ್ನಪ್ಪ ಪಿಸಿ 427 2) ಸಿದ್ರಾಮರೆಡ್ಡಿ ಪಿಸಿ-423 3) ಲಕ್ಕಪ್ಪ ಪಿಸಿ-198 ಇವರೆಲ್ಲರಿಗೂ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದರಿಂದ ಹೊನ್ನಪ್ಪ ಸಿಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ಭೀಮಣ್ಣ ತಂದೆ ರಾಮಣ್ಣ ಹೆಳವರ ವ|| 25 ವರ್ಷ ಜಾ|| ಹೆಳವರ ಉ|| ಕೂಲಿ ಸಾ|| ಸತ್ಯಂಪೇಠ, ಸುರಪುರ ತಾ|| ಸುರಪುರ, 2) ಮಲ್ಲಪ್ಪ ತಂದೆ ಪಿಡ್ಡಪ್ಪ ಹಳಿಸಗರ ವ|| 45 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಮಾಚಗುಂಡಾಳ ಇವರನ್ನು 3:30 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದು, ಸದರಿಯವರಿಗೂ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3:45 ಪಿ.ಎಂಕ್ಕೆ ಸರಕಾರಿ ಜೀಪ್ ನಂ. ಕೆಎ-33 ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು 4:25 ಪಿ.ಎಂ ಕ್ಕೆ ಸೂಗುರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 4:30 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 05 ಜನರು ಸಿಕ್ಕಿದ್ದು, ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಬಸವರಾಜ ತಂದೆ ಭೀಮಣ್ಣ ಯಡ್ರಾಮಿ ವ|| 37 ವರ್ಷ ಜಾ|| ಬೇಡರ ಉ|| ಚಾಲಕ ಸಾ|| ಸೂಗುರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂ.ಗಳು ವಶಪಡಿಸಿಕೊಳ್ಳಲಾಯಿತು. 2) ಈರಣ್ಣ ತಂದೆ ದೇವಪ್ಪ ಬ್ಯಾಳಿ ವ|| 45 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಸೂಗುರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 400/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಈರಣ್ಣ ತಂದೆ ವಿರಪಣ್ಣ ಕಮತಗಿ ವ|| 44 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಸೂಗುರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಶಂಕ್ರೆಪ್ಪ ತಂದೆ ಶಿವಣ್ಣ ಊಟಿ ವ|| 36 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಸೂಗುರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಬಸವರಾಜ ತಂದೆ ವೀರಣ್ಣ ಮುಷ್ಟಳ್ಳಿ ವ|| 50 ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಸೂಗುರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 1350/-ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 3200/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 4:30 ಪಿ.ಎಮ್ ದಿಂದ 05:30 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 05 ಜನ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ 06:10 ಪಿ.ಎಂ ಕ್ಕೆ ಬಂದಿದ್ದು, ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿ ಸಾರಾಂಶ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.