ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20-07-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 159/2021 ಕಲಂ 306, ಸಂಗಡ 34 ಐ.ಪಿ.ಸಿ. : ದಿನಾಂಕ: 19-07-2021 ರಂದು ಮುಂಜಾನೆ ಆರೋಪಿತನು ಮೃತಳಿಗೆ ನೀನು ನನಗೆ ಮದುವೆಯಾಗು ಇಲ್ಲದಿದ್ದರೆ ಇರಬೇಡಾ ಸಾಯಲೇಬೇಕು ಎಂದು ಕಿರುಕು ನೀಡಿ ಸಾಯಲು ಪ್ರಚೋದನೆ ಮಾಡಿದ್ದು ಆದ್ದರಿಂದ ಮೃತಳು ಮುಂಜಾನೆ ನಾಟ ಹಚ್ಚಲು ಹೋಗಿದ್ದಾಗ. 10:30 ಗಂಟೆ ಸುಮಾರಿಗೆ ಹೊಲದಲ್ಲಿ ಕ್ರಿಮಿನಾಷಕ ಔಷಧ ಸೇವಿಸಿ ಉಪಚಾರ ಕುರಿತು ಶಹಾಪುರದ ಸರಕಾರಿ ಆಸ್ಪತ್ರಗೆ ಸೇರಿಕೆಯಾಗಿ ಹೆಚಿನ ಉಪಚಾರಕ್ಕಾಗಿ ಕಲಬುರಗಿಗೆ ಹೋಗುವಾಗ ಮಾರ್ಗಮದ್ಯದಲ್ಲಿ ಜೇವಗರ್ಿಯಲ್ಲಿ 1:00 ಪಿ.ಎಮ್.ಕ್ಕೆ ಮೃತಪಟ್ಟುದ್ದು ಇರುತ್ತದೆ ಫಿರ್ಯಾದಿಯ ಮಗಳು ನಿರ್ಮಲಾ ಇವಳು ನೀಲಪ್ಪ ತಂದೆ ಶಿವಪ್ಪ ಕುರುಕುಂದಿ ಮತ್ತು ಆತನ ತಾಯಿ ಬಸಮ್ಮ ಇವರಿಬ್ಬರು ಮದುವೆಯಾಗು ಅಂತಾ ಒತ್ತಾಯ ಮಾಡಿದ್ದು ಇಲ್ಲದಿದ್ದರೆ ಸಾಯಿ ಎಂದು ಪ್ರಚೋದನೆ ಮಾಡಿದ್ದರಿಂದ ಹೊಲದಲ್ಲಿ ಹತ್ತಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಷಕ ಔಷದಸೇವಿಸಿ ಮೃತಪಟ್ಟಿದ್ದು ಅವಳ ಸಾವಿಗೆ ಪ್ರಚೋದನೆ ಮಾಡಿದವರ ಮೇಲೆ ನಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 158/2021 ಕಲಂ. 306 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಡೆನು.

 

ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ. 43/2021 ಕಲಂ: 341, 323, 324, 504, 506, 307 ಐಪಿಸಿ : ಇಂದು ದಿನಾಂಕ:19/07/2021 ರಂದು ಗಾಯಾಳು ಮಂಜುನಾಥ ತಂದೆ ಕನಕಪ್ಪ ರೋಟ್ಲರ್ ವ|| 35 ವರ್ಷ ಜಾ|| ಹಿಂದೂ ಬೇಡರ ಉ|| ಒಕ್ಕಲುತನ, ಸಾ|| ರೋಟ್ಲರ್ ದೊಡ್ಡಿ ಹಿರೇಹಳ್ಳ ಹಾ||ವ|| ಕಕ್ಕೇರಾ ತಾ|| ಸುರಪೂರ ಜಿ|| ಯಾದಗಿರ ಇವರು ಜಗಳದಲ್ಲಿ ಗಾಯಹೊಂದಿ ಉಪಚಾರಕ್ಕಾಗಿ ಹುಣಸಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಕೆಯಾಗಿರುತ್ತಾರೆ ಅಂತಾ ಎಮ್ಎಲ್ಸಿಯು ಸಮುದಾಯ ಆರೋಗ್ಯ ಕೇಂದ್ರ ಹುಣಸಗಿ ರವರಿಂದ ವಸೂಲಾಗಿದ್ದುದರಿಂದ ಸದರ ಆಸ್ಪತ್ರೆಗೆ ಬೇಟಿಕೊಟ್ಟು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪಿಯರ್ಾದಿಯಾದ ಮಂಜುನಾಥ ತಂದೆ ಕನಕಪ್ಪ ರೋಟ್ಲರ್ ವ|| 35 ವರ್ಷ ಜಾ|| ಹಿಂದೂ ಬೇಡರ ಉ|| ಒಕ್ಕಲುತನ, ಸಾ|| ರೋಟ್ಲರ್ ದೊಡ್ಡಿ ಹಿರೇಹಳ್ಳ ಹಾ||ವ|| ಕಕ್ಕೇರಾ ತಾ|| ಸುರಪೂರ ಜಿ|| ಯಾದಗಿರ ಇವರಿಗೆ ಘಟನೆಯ ಬಗ್ಗೆ ವಿಚಾರಿಸಿ 09:00 ಎ.ಎಮ್ ದಿಂದ 10 ಎ.ಎಮ್ ರವರೆಗೆ ಸದರಿಯವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು, ಸದರ ಪಿಯರ್ಾದಿ ಹೇಳಿಕೆಯ ಸಾರಾಂಶವೆನೇಂದರೆ ತನ್ನ ಅಕ್ಕಳಾದ ಶಾಂತಮ್ಮ @ ಜಯಶ್ರೀ ಇವರಿಗೆ ಕಕ್ಕೇರಾ ಪಟ್ಟಣದ ಭೀಮನಗೌಡ ತಂದೆ ದೇವೆಂದ್ರಪ್ಪಗೌಡ ಹಳ್ಳಿ ರವರಿಗೆ ಕೊಟ್ಟು ಮದುವೆ ಮಾಡಿದ್ದು, ನಮ್ಮ ಮಾವ ಭೀಮನಗೌಡ ರವರ ಮನೆಯ ಸಮೀಪದಲ್ಲಿ ಸೋಮಣ್ಣ ತಂದೆ ಸಣ್ಣ ಸೋಮಣ್ಣ ಡೊಳ್ಳಿನ್ ರವರ ಮನೆಯಿದ್ದು ಈಗ ಸುಮಾರು ಒಂದು ವರ್ಷದ ಹಿಂದೆ ಸೋಮಣ್ಣ ರವರ ಕೋಳಿಯು ನನ್ನ ಅಕ್ಕ ಶಾಂತಮ್ಮ @ ಜಯಶ್ರೀ ರವರ ಮನೆಯ ಒಳಗೆ ಹೋದ ವಿಷಯದಲ್ಲಿ ಸೋಮಣ್ಣ ಡೊಳ್ಳಿನ್ ಹಾಗೂ ಅವರ ಮನೆಯವರು ಮತ್ತು ನಮ್ಮ ಮಾವ ಭೀಮನಗೌಡ ಹಳ್ಳಿ ರವರ ಮಧ್ಯ ಜಗಳವಾಗಿ ನಮ್ಮ ಮಾವ ಭೀಮನಗೌಡನು ಸೋಮಣ್ಣ ಹಾಗೂ ಅವರ ಮನೆಯವರ ಮೇಲೆ ಮತ್ತು ಸೋಮಣ್ಣನು ನಮ್ಮ ಮಾವ ಭೀಮನಗೌಡ ಹಾಗೂ ನನ್ನ ಅಕ್ಕ ಶಾಂತಮ್ಮ @ ಜಯಶ್ರೀ ಮತ್ತು ನನ್ನ ಮೇಲೆ ಕೇಸ್ ಮಾಡಿದ್ದು, ಈ ಎರಡು ಕೇಸ್ಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಈ ಕೇಸ್ಗಳು ದಾಖಲಾದ ನಂತರ ಸೋಮಣ್ಣ ತಂದೆ ಸಣ್ಣ ಸೋಮಣ್ಣ ಡೊಳ್ಳಿನ್ ಈತನು ನನ್ನ ಮೇಲೆ ದ್ವೇಷತಾಳಿದ್ದು, ನಾನು ಒಬ್ಬನೇ ಎಲ್ಲಿಯಾದರು ಅವನಿಗೆ ಸಿಕ್ಕರೆ ನನಗೆ ಮಂಜ್ಯಾ ಸೂಳೆ ಮಗನೇ ನಿನ್ನದು ಊರಲ್ಲಿ ತಿಂಡಿ ಬಹಳ ಆಗಿದೆ ನಿನ್ನ ಜೀವ ನನ್ನ ಕೈಯಲ್ಲಿದೆ ಸಮಯ ಸಿಕ್ಕಾಗ ನಿನ್ನನ್ನು ನಾನು ಕೊಲೆ ಮಾಡಿಯೇ ತಿರುತ್ತೇನೆ ಅಂತಾ ಅನ್ನುತ್ತಿದ್ದನು. ನಾನು ಈ ವಿಷಯವನ್ನು ನನ್ನ ಮಾವ ಭೀಮನಗೌಡ ರವರಿಗೆ ತಿಳಿಸಿದಾಗ ಆಯಿತು ನಿನ್ನಷ್ಟಕ್ಕೆ ನೀನು ಇರು ಅಂತಾ ಅಂದಿದ್ದರಿಂದ ನಾನು ನನ್ನಷ್ಟಕ್ಕೆ ನಾನು ಇದ್ದುದ್ದು ಇರುತ್ತದೆ. ಹೀಗಿದ್ದು ನಿನ್ನೆ ರವಿವಾರ ದಿನಾಂಕ:18/07/2021 ರಂದು ಸಾಯಂಕಾಲ 6:00 ಗಂಟೆಗೆ ಸುಮಾರಿಗೆ ನಾನು ಎಂದಿನಂತೆ ನಮ್ಮ ಮಾವ ಭೀಮನಗೌಡ ಹಳ್ಳಿರವರ ಹಿರೋ ಶೋರೂಮ್ಗೆ ಹೋಗುತ್ತಿರುವಾಗ ಬನದೊಡ್ಡಿ ಕ್ರಾಸ್ ಕಡೆಯಿಂದ ಸೋಮಣ್ಣ ತಂದೆ ಸಣ್ಣ ಸೋಮಣ್ಣ ಡೊಳ್ಳಿನ್ ಈತನು ಮೋಟರ್ ಸೈಕಲ್ ನಂ:ಕೆಎ 33 ಇ 0349 ನೇದ್ದರ ಮೇಲೆ ಬಂದು ರಸ್ತೆ ಮೇಲೆ ಗಾಡಿ ನಿಲ್ಲಿಸಿ ನನ್ನನ್ನು ದುಗರ್ುಟ್ಟಿ ನೋಡಿ ಲೇ ಸೂಳೆ ಮಗನೆ ಮಂಜ್ಯಾ ನಿನ್ನ ತಿಂಡಿ ಏನು ಹೇಳು ಅಂತಾ ಅಂದಾಗ ನಾನು ಅವನಿಗೆ ನಿನ್ನ ತಿಂಡಿ ಏನು ಅಂತಾ ಕೇಳಿದೆನು. ಆಗ ಮೋಟರ ಸೈಕಲ್ದಿಂದ ಇಳಿದು ತನ್ನ ಬೈಕ್ ಮೇಲೆ ತಂದಿದ್ದ ಕಬ್ಬಿಣದ ಪಟ್ಟಿಯನ್ನು ತೆಗೆದುಕೊಂಡು ಸೋಮಣ್ಣ ಡೊಳ್ಳಿನ್ ಇತನು ಬಂದವನೆ ನನ್ನನ್ನು ತಡೆದು ನಿಲ್ಲಿಸಿ ನಿಂದೆನು ತಿಂಡಿ ಹೇಳು ಅಂತಾ ಕೇಳಿದಾಗ ನಾನು ಏನು ಹೊಡಿತಿ ಏನು ಹೋಡಿ ನೋಡೋಣ ಅಂದಾಗ ಸೋಮಣ್ಣ ಇತನು ಹೊಡಿಲೇನು ಅಂತಾ ಒಮ್ಮೇಲೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ಪಟ್ಟಿಯನ್ನು ನನ್ನ ತಲೆಗೆ ಗುರಿ ಮಾಡಿ ಬಿಸಿದನು. ನಾನು ಆತ ಹೊಡೆಯುವದನ್ನು ತಪ್ಪಿಸಿಕೊಳ್ಳುತ್ತಿರುವಾಗ ಕಬ್ಬಿಣದ ಪಟ್ಟಿಯು ನನ್ನ ಎಡಗೈ ಮೊಳಕೈಗೆ ತಗಲಿ ತರಚಿದ ಕಂದುಗಟ್ಟಿದ ಗಾಯವಾಗಿದ್ದು, ನಂತರ ನಾನು ನೇಲಕ್ಕೆ ಬಾರಲಾಗಿ ಬಿದ್ದಾಗ ಸೋಮಣ್ಣನು ತನ್ನ ಕಾಲಿನಿಂದ ನನ್ನ ಕುತ್ತಿಗೆಯ ಹಿಂಬಾಜುವಿಗೆ ಮತ್ತು ಎಡಗಡೆ ಪಕ್ಕಡಿಯ ಮೇಲೆ ಒದ್ದು ತುಳಿದು ಗುಪ್ತ ಪೆಟ್ಟು ಮಾಡಿ ಸೂಳೆೇ ಮಗನೆ ಮಂಜ್ಯಾ ನಿಮ್ಮ ಮಾವ ಪುರಸಭೆ ಮೇಂಬರ್ ಇದ್ದಾನೆ ಅಂತಾ ಅವನ ಬಲದಿಂದ ಊರಲ್ಲಿ ಧೀಮಾಕಿನಿಂದ ತಿರುಗುತ್ತಿ ಅಲ್ಲದೇ ನಿಮ್ಮ ಮಾವನಿಗೆ ಹೇಳಿ ಒಂದು ವರ್ಷದ ಹಿಂದೆ ನಮ್ಮ ಮೇಲೆ ಕೇಸ್ ಮಾಡಿಸಿದಿ ಸೂಳೇ ಮಗನೇ ಇವತ್ತು ನಿನು ಒಬ್ಬನೆ ಸಿಕ್ಕಿದ್ದಿ ನಿನಗೆ ಕೊಲೆ ಮಾಡಬೇಕಂತಲೆ ಮೋಟರ್ ಸೈಕಲ್ದಲ್ಲಿ ಕಬ್ಬಿಣದ ಪಟ್ಟಿಯನ್ನು ತೆಗೆದುಕೊಂಡು ಬಂದಿದ್ದೇನೆ. ಇವತ್ತು ನಿನಗೆ ಕೊಲೆ ಮಾಡಿಯೇ ತೀರುತ್ತೇನೆ ಅಂತಾ ಅಂದವನೆ ತನ್ನ ಕೈಯಲ್ಲಿರುವ ಕಬ್ಬಿಣದ ಪಟ್ಟಿಯನ್ನು ನನ್ನ ಕಡೆ ಮತ್ತೋಮ್ಮೆ ಬೀಸುತ್ತಿರುವಾಗ ತಪ್ಪಿಸಿಕೊಂಡು ನಾನು ನನ್ನನ್ನು ಉಳಿಸಿರಪ್ಪೋ ಅಂತಾ ಚಿರಾಡಿದಾಗ ಅಲ್ಲಿಯೇ ಇದ್ದ ಹುಲಗಪ್ಪ ತಂದೆ ಮಾಮಣೆಪ್ಪ ಗೋವಿಂದರ, ರಾಜು ತಾಯಿ ಮಲ್ಲಮ್ಮ ಜುಟ್ಲಮಡ್ಡಿ, ವೆಂಕಟೇಶ ತಂದೆ ಮಹಾದೇವಪ್ಪ ಕರಡಿ, ಗೂಗಲಗಟ್ಟಿಯ ಹಣಮಂತ್ರಾಯ ತಂದೆ ದುರ್ಗಪ್ಪ ಹುಡೇದ, ಬನದೊಡ್ಡಿಯ ಬಸಪ್ಪ ತಂದೆ ಹಣಮಂತ ಗಡ್ಡೇರ ಇವರೆಲ್ಲರು ಓಡಿ ಬಂದು ಸೋಮಣ್ಣನು ನನಗೆ ಹೊಡೆಯುವದನ್ನು ಬಿಡಿಸಿದ್ದು, ಇವರು ಬಂದು ಬಿಡಿಸದೇ ಇದ್ದರೆ ಸೋಮಣ್ಣನು ತನ್ನ ಕೈಯಲ್ಲಿಯ ಕಬ್ಬಿಣದ ಪಟ್ಟಿಯಿಂದ ನನಗೆ ಹೊಡೆದು ಕೊಲೆ ಮಾಡುತ್ತಿದ್ದನು. ನಂತರ ಸೋಮಣ್ಣನು ನನಗೆ ಸೂಳೆ ಮಗನೆ ಇವತ್ತು ನನ್ನ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕಾಗ ನಿನ್ನನ್ನು ಜೀವಂತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕುತ್ತಾ ತಾನು ತಂದ ಸೈಕಲ್ ಮೋಟರ್ ಮೇಲೆ ಹೋಗಿದ್ದು, ನಾನು ಉಪಚಾರಕ್ಕಾಗಿ ನಿನ್ನೆ ದಿನಾಂಕ:18.07.2021 ರಂದು ರಾತ್ರಿ ಇಲ್ಲಿಗೆ ಬಂದು ಸೇರಿಕೆಯಾಗಿದ್ದು, ನಾನು ಇನ್ನು ಆಸ್ಪತ್ರೆಯಲ್ಲಿಯೇ ಉಪಚಾರ ಹೊಂದುತ್ತಿರುವೇನು. ಹಳೇ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಸೋಮಣ್ಣ ತಂದೆ ಸಣ್ಣ ಸೋಮಣ್ಣ ಡೊಳ್ಳಿನ್ ಸಾ||ಕಕ್ಕೇರಾ ಇತನ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಪಿಯರ್ಾದಿ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 11:00 ಎ.ಎಮ್ ಕ್ಕೆ ಬಂದು ಸದರ ಪಿಯರ್ಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.43/2021 ಕಲಂ: 341, 323, 324, 504, 506, 307 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ.ನಂ:104/2021 ಕಲಂ ಕಲಂ ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯಿದೆ 1964 ಕಲಂ: 11, 8, 9, 4, & ಕಲಂ 192 (ಎ) ಸಂ 177 ಐಎಮ್ವಿ ಆ್ಯಕ್ಟ್ : ಇಂದು ದಿನಾಂಕ 19-07-2021 ರಂದು 7-15 ಪಿ.ಎಮ್ ಕ್ಕೆ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಠಾಣೆ ರವರು ಠಾಣೆಗೆ ಬಂದು ಮುದ್ದೆಮಾಲು. ಇಬ್ಬರೂ ಆರೋಪಿತರು ಜಪ್ತಿಪಂಚನಾಮೆ ಸಮೇತ ತಮ್ಮ ವರದಿಯನ್ನು ಠಾಣೆಗೆ ತಂದು ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ: 19-07-2021 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ವಿಶ್ವ ಹಿಂದು ಪರಿಷತ್ ಸಂಘಟನೆಯ ಕಾರ್ಯದಶರ್ಿಗಳಾದ ಶ್ರೀ ಉಮೇಶ ತಂದೆ ಸೂಗಣ್ಣಾ ಗುಳಿಗಿ ಸಾ; ಯಾದಗಿರಿ ಇವರು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ ತಮಗೆ ಕೂಲೂರ ಕಡೆಯಿಂದ ಯಾದಗಿರಿ ಕಡೆಗೆ ಒಂದು ವಾಹನದಲ್ಲಿ ಅನಧಿಕೃತವಾಗಿ ದನಗಳನ್ನು ಹಿಂಸಾತ್ಮಕವಾಗಿ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಾಗ ತಾನು ಹಾಗೂ ತಮ್ಮ ಸಂಘಟನೆಯ ಶ್ರಿ ಅಮರೇಶ ತಂದೆ ರಾಚಪ್ಪಾ ಕುರುಕುಂಧಿ ಸಾ: ಯಾದಗಿರಿ ಇಬ್ಬರೂ ಎಮ್ ಹೊಸಳ್ಳಿ ಮತ್ತು ಯಾದಗಿರಿ ರೋಡಿನ ಮೇಲೆ ರೇಲ್ವೇ ಸ್ಟೇಷನ್ ಬೈಪಾಸ ರೋಡಿನ ಹತ್ತಿರ ಬಂದಾಗ ಎಮ್ ಹೊಸಳ್ಳಿ ಕಡೆಯಿಂದ ಒಂದು ಟಾಟಾ ಏಸ್ ಬಂದಿದ್ದು ಅದರಲ್ಲಿ ಒಂದು ಹೋರಿ ಇದ್ದು ನಾವು ಸದರಿ ವಾಹನವನ್ನು ಇಲ್ಲಿಯೇ ನಿಲ್ಲಿಸಿದ್ದೆವೆ ಅಂತಾ ತಿಳಿಸಿದಾಗ ಕೂಡಲೇ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಜನರಾದ ಶ್ರೀ ಭೀಮಪ್ಪಾ ಪಿಸಿ-33 ಶ್ರೀ ಮೋನಪ್ಪಾ ಪಿಸಿ-263, ಶ್ರೀ ಪ್ರಭುಗೌಡ ಪಿಸಿ-361 ರವರನ್ನು ಕರೆದುಕೊಂಡು ನಮ್ಮ ಠಾಣೆಯ ಸಕರ್ಾರಿ ಜೀಪಿನಲ್ಲಿ ಠಾಣೆಯಿಂದ 5-10 ಪಿ.ಎಮ್ ಕ್ಕೆ ಹೊರಟು 5-30 ಪಿ.ಎಮ್ ಕ್ಕೆ ಎಮ್ ಹೊಸಳ್ಳಿ ಗ್ರಾಮದ ಹತ್ತಿರ ರೇಲ್ವೇ ಸ್ಟೇಷನ್ ರೋಡಿನ ಬೈಪಾಸ ಹತ್ತಿರ ಬಂದಾಗ ಅಲ್ಲಿ ಒಂದು ಟಾಟಾ ಏಸ್ ವಾಹನ ಕೆಎ-28/ಸಿ-6546 ಅಂತಾ ಇದ್ದು ಅದರಲ್ಲಿ ಒಂದು ಹೋರಿ ಇದ್ದು ಹಗ್ಗದಿಂದ ಬಿಗಿಯಾಗಿ ಹಿಂಸೆಯಾಗುವ ರೂಪದಲ್ಲಿ ಕಟ್ಟಿದ್ದರು. ಇದರ ಅಂದಾಜು ಕಿಮ್ಮತ್ತು ತಲಾ 10 ಸಾವಿರ ರೂಪಾಯಿ ಆಗಬಹುದು. ಸ್ಥಳದಲ್ಲಿದ್ದ ವಾಹನದ ಚಾಲಕನು ಇದ್ದು ಆತನ ಹೆಸರು ಖಾಜಾ ಹುಸೇನ ತಂದೆ ಬಾಶುಮಿಯಾ ಶೇಖ್ ಸಾ: ಅಜೀಜ್ ಕಾಲೋನಿ ಯಾದಗಿರಿ ಮತ್ತು ಹೋರಿಯ ಮಾಲೀಕನ ಹೆಸರು ಮರೆಪ್ಪಾ ತಂದೆ ಹಣಮಂತ ಬಂದಳ್ಳಿ ಸಾ; ಕೂಲೂರ ಅಂತಾ ಗೊತ್ತಾಯಿತು. ಅವರಿಬ್ಬರಿಗೆ ಈ ಹೋರಿ ಎಲ್ಲಿಂದ ತಂದಿದ್ದಿರಿ ಮತ್ತು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರಿ ಮತ್ತು ಈ ಹೋರಿ ವಾಹನದಲ್ಲಿ ಸಾಗಾಣೀಕೆ ಮಾಡುವ ಸಲುವಾಗಿ ದಾಖಲಾತಿಗಳು ಇದ್ದರೇ ತೋರಿಸು ಅಂತಾ ಹೇಳಿದಾಗ ಅವರು ದನಗಳಿಗೆ ಸಂಬಂಧಪಟ್ಟ ಮತ್ತು ವಾಹನ ಸಾಗಾಣಿಕೆ ಮಾಡಲು ತಮ್ಮ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಬಕ್ರಿದ ಹಬ್ಬದ ಸಲುವಾಗಿ ಕಸಾಯಿ ಖಾನೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದೇವೆ ಅಂತಾ ತಿಳಿಸಿದರು. ಸ್ಥಳದಲ್ಲಿಯೇ ಯಾದಗಿರಿ ನಗರದ ವಿಶ್ವ ಹಿಂದು ಪರಿಷತ್ ಸಂಘಟನೆಯ ಕಾರ್ಯದಶರ್ಿಗಳಾದ ಶ್ರೀ ಉಮೇಶ ತಂದೆ ಸೂಗಣ್ಣಾ ಗುಳಿಗಿ ಸಾ; ಯಾದಗಿರಿ ಮತ್ತು ಶ್ರಿ ಅಮರೇಶ ತಂದೆ ರಾಚಪ್ಪಾ ಕುರುಕುಂಧಿ ಸಾ: ಯಾದಗಿರಿ ಇವರಿಬ್ಬರೂ ಇದ್ದು ಇವರಿಗೆ ವಿಚಾರಿಸಲಾಗಿ ಈ ವಾಹನದಲ್ಲಿ ಚಾಲಕನು ಹೋರಿಯನ್ನು ಹಿಂಸಾತ್ಮಕವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಮಾಡುತ್ತಿದ್ದ ಬಗ್ಗೆ ಹೇಳಿದರು. ಸದರಿ ಹೋರಿಯನ್ನು ವಾಹನದೊಂದಿಗೆ ಮತ್ತು ಇಬ್ಬರೂ ಆರೋಪಿತರೊಂದಿಗೆ ನನ್ನ ವರದಿಯನ್ನು ತಮ್ಮ ಮುಂದೆ ಹಾಜರುಪಡಿಸಿದ್ದು ಅಂತಾ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿರುತ್ತದೆ.

 

ಸಂಚಾರಿ ಪೊಲೀಸ ಠಾಣೆ ಯಾದಗಿರ
39/2021 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 19/07/2021 ರಂದು ಸಮಯ 8 ಪಿ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಕೆ,ಎಸ್,ಆರ್,ಟಿ,ಸಿ ವರ್ಕಶಾಪ್ ಹತ್ತಿರ, ಈ ಕೇಸಿನ ಪಿಯರ್ಾದಿ ಗಾಯಾಳು ಜೇಮ್ಲ್ಯಾನಾಯಕ ಮತ್ತು ಶಿವಕುಮಾರ ಇಬ್ಬರು ಮೋಟಾರು ಸೈಕಲ್ ನಂಬರ ಕೆಎ-32, ಇಜೆ-4697 ನೇದ್ದರ ಮೇಲೆ ಯಾದಗಿರಿಯಿಂದ ಯಂಪಾಡಕ್ಕೆ ಹೊರಟಿದ್ದಾಗ ಮೊಟಾರು ಸೈಕಲನ್ನು ಶಿವಕುಮಾರ ಈತನು ನಡೆಸಿಕೊಂಡು ಹೋಗುತ್ತಿದ್ದಾಗ ಈ ಕೇಸಿನ ಆರೋಪಿತ ಟಿಪ್ಪರ್ (ಲಾರಿ) ನಂಬರ ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ, ಟಿಪ್ಪರ್ ನೇದ್ದರ ಚಾಲಕನು ವಾಹನವನ್ನು ಯಾದಗಿರಿಯಿಂದ ಮುಂಡರಗಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೇದ್ದಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಅಪಘಾತ ಜರುಗಿದ್ದು, ಈ ಅಪಘಾತದಲ್ಲಿ ಇಬ್ಬರಿಗೂ ಭಾರೀ ಗುಪ್ತಗಾಯ ಮತ್ತು ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ. ಈ ಅಪಘಾತದ ನಂತರ ಟಿಪ್ಪರ್ (ಲಾರಿ) ಚಾಲಕನು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಆತನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 39/2021 ಕಲಂ 279, 337, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗೋಗಿ ಪೊಲೀಸ ಠಾಣೆ
ಗುನ್ನೆ ನಂ : 74/2021 ಲಂ: ಮಹಿಳೆ ಕಾಣೆಯಾದ ಬಗ್ಗೆ. : ಇಂದು ದಿನಾಂಕ: 19/07/2021 ರಂದು 11.30 ಎಎಮ್ ಕ್ಕೆ ಶ್ರೀ. ಶಂಕರಲಿಂಗಯ್ಯ ತಂದೆ ಚನ್ನಬಸ್ಸಯ್ಯ ಹಿರೇಮಠ ವಯಾ:42 ವರ್ಷ ಉ: ಒಕ್ಕಲುತನ ಜಾ: ಜಂಗಮ ಸಾ: ಚನ್ನೂರ (ಕೆ) ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸಾರಾಂಶವೆನೆಂದರೆ, ದಿನಾಂಕ: 18/07/2021 ರಂದು ನಾನು ಮತ್ತು ನನ್ನ ಹೆಂಡತಿಯಾದ ಬಸ್ಸಮ್ಮ ಗಂಡ ಶಂಕರಲಿಂಗಯ್ಯ ಹಿರೇಮಠ, ನನ್ನ ಮಗನಾದ ಮಲ್ಲಯ್ಯ ತಂದೆ ಶಂಕರಲಿಂಗಯ್ಯ ಹಿರೇಮಠ ವಯಾ:16 ವರ್ಷ, ಇನ್ನೊಬ್ಬ ಮಗಳಾದ ಸಿಂದೂ ತಂದೆ ಶಂಕರಲಿಂಯ್ಯ ವಯಾ: 14 ವರ್ಷ ಕೂಡಿ ಎಲ್ಲರೂ ಬೆಳಿಗ್ಗೆ 09.00 ಎಎಂ ಸುಮಾರಿಗೆ ನಮ್ಮ ಹೊಲಕ್ಕೆ ಹೊಗಿದ್ದೇವು, ನನ್ನ ದೊಡ್ಡ ಮಗಳಾದ ಕು. ಶಿವಲೀಲಾ ವಯಾ:19 ವರ್ಷ ಮತ್ತು ಸಣ್ಣ ಮಗನಾದ ಶರಣಯ್ಯ ವಯಾ: 11 ವರ್ಷ ಇವರು ಇಬ್ಬರು ಮನೆಯಲ್ಲಿಯೇ ಇದ್ದರು, ನಾನು ಮತ್ತು ನನ್ನ ಹೆಂಡತಿ ಮತ್ತು ನನ್ನ ಮಕ್ಕಳು ಸಾಯಂಕಾಲ 06.30 ಪಿಎಂ ಸುಮಾರಿಗೆ ಮನೆಗೆ ಬಂದಾಗ ನನ್ನ ಸಣ್ಣ ಮಗನಾದ ಶರಣಯ್ಯ ಈತನು ಅಕ್ಕ ಶಿವಲೀಲಾ ಇವಳು ತಾನು ನಮ್ಮ ಆಕಳಿಗೆ ನೀರು ಕುಡಿಸಲು ಹೋಗಿ ಮರಳಿ ಮನೆಗೆ ಬರುವಷ್ಟರಲ್ಲಿ ಅಂದಾಜು 02.30 ಪಿಎಂ ದಿಂದ 03.00 ಪಿಎಂ ಮಧ್ಯದ ಅವಧಿಯಲ್ಲಿ, ಮನೆಯಯಲ್ಲಿ ಯಾರು ಇಲ್ಲದಾಗ ಮನೆಯಿಂದ ಎಲ್ಲಗೋ ಹೋಗಿರುತ್ತಾಳೆ, ಇನ್ನು ಮನೆಗೆ ಬಂದಿರುವದಿಲ್ಲ ಅಂತಾ ತಿಳಿಸಿದ ಆಗ ನಾವು ನಮ್ಮ ಊರಿನ ಸುತ್ತಲು ಎಲ್ಲಿಯಾದರೂ ಆಕಳಿಗೆ ಮೇವು ತರಲು ಅಥವಾ ಸಂಡಾಸಕ್ಕೆ ಹೊಗಿರ ಬಹುದು ಅಂತಾ ಊರಿನ ಸುತ್ತಲು ಹುಡುಕಾಡಿದೆವು, ನಮ್ಮ ಮಗಳ ಗೆಳತಿಯಾದ ಪ್ರೇಮಾ ತಂದೆ ಹಣಮಂತ್ರಾಯ ದಾಸರ ವಯಾ:19 ವರ್ಷ ಇವಳಿಗೂ ವಿಚಾರಿಸಿದೆವು ಅವಳು ತನಗೆ ಗೊತ್ತಿಲ್ಲ ಅಂತಾ ತಿಳಿಸಿದಳು, ಆಗ ನಾನು ನಮ್ಮ ಊರಿನ ಶ್ರೀ ಮಹಾದೇವಪ್ಪಗೌಡ ತಂದೆ ಬಸರೆಡ್ಡೆಪ್ಪಗೌಡ ಪೊಲೀಸ್ ಪಾಟೀಲ್ ಮತ್ತು ದೇವರೆಡ್ಡಿ ತಂದೆ ಭೀಮರಾಯ ಕರಡಕಲ್ ಇವರುಗಳಿಗೆ ನಮ್ಮ ಮಗಳು ಕಾಣೆಯಾಗಿರುವ ವಿಷಯ ತಿಳಿಸಿದೆನು, ನಮ್ಮ ಅಣ್ಣನಾದ ಶಿವಲಿಂಗಯ್ಯ ತಂದೆ ಚನ್ನಬಸ್ಸಯ್ಯ ಹಿರೇಮಠ ಸಾ: ಕಕ್ಕಸಗೇರಿ ಇವರಿಗೂ ಪೋನ ಮಾಡಿ ವಿಷಯ ತಿಳಿಸಿದೆನು ಅವರೂ ಕೂಡ ಬಂದರು ನಾವೆಲ್ಲರೂ ಕೂಡಿ ನಮ್ಮ ಮಗಳಿಗೆ ಹುಡುಕಾಡಿದೆವು, ನಮ್ಮ ಸಂಬಂದಿಕರುಗಳಿಗೆ ಪೋನ್ ಮಾಡಿ ವಿಷಯ ತಿಳಿಸಿ ವಿಚಾರಿಸಿದಾಗ ಎಲ್ಲಯು ಬಂದಿರುವದಿಲ್ಲ ಅಂತಾ ತಿಳಿಸಿದರು. ನಾವು ಇಲ್ಲಿಯ ವರೆಗೆ ಹುಡುಕಾಡಲಾಗಿ ನಮ್ಮ ಮಗಳು ಎಲ್ಲಯೂ ಸಿಕ್ಕಿರುವದಿಲ್ಲ, ಯಾವುದೆ ಮಾಹಿತಿ ಗೋತ್ತಾಗಲಿಲ್ಲ. ಅದಕ್ಕೆ ತಡವಾಗಿ ಇಂದು ದಿನಾಂಕ:19/07/2021 ರಂದು 11.30 ಎಎಂ ಕ್ಕೆ ಠಾಣೆಗೆ ಬಂದು ಅಜರ್ಿ ನೀಡಿರುತ್ತೇವೆ. ನಮ್ಮ ಮಗಳು ಅಂದಾಜು 04.5 ಅಡಿ ಎತ್ತರ ಇದ್ದು, ಬಿಳಿ ಬಣ್ಣ, ದುಂಡು ಮುಖದವಳು ಇರುತ್ತಾಳೆ. ಕನ್ನಡ ಮಾತ್ರ ಮಾತಾಡುತ್ತಾಳೆ, ಮನೆಯಿಂದ ಹೊಗುವಾಗ ಒಂದು ಗುಲಾಬಿ ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪೈಜಾಮ ಪ್ಯಾಂಟ ಹಾಕಿಕೊಂಡಿದ್ದು ಇರುತ್ತದೆ. ದಿನಾಂಕ: 18/07/2021 ರಂದು 02.30 ಪಿಎಂ ದಿಂದ 03.00 ಪಿಎಂ ಮದ್ಯದ ಅವಧಿಯಲ್ಲಿ ನಮ್ಮ ಮನೆಯಿಂದ ಹೊದವಳು ಮರಳಿ ಮನೆಗೆ ಬರದೆ ಕಾಣೆೆಯಾಗಿದ್ದು ನನ್ನ ಮಗಳನ್ನು ಹುಡಿಕಿಕೊಡಲು ವಿನಂತಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 74/2021 ಕಲಂ: ಮಹಿಳೆ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ: 51/2021 ಕಲಂ. 279, 337 338 ಐಪಿಸಿ : ದಿ:19.07.2021 ರಂದು ಸಾಯಂಕಾಲ 19.30 ಗಂಟೆಯ ಸುಮಾರಿಗೆ ಫಿರ್ಯಾದಿಯು ಕಾಮನಟಗಿ ಸೀಮಾಂತರದ ಬಸವಣ್ಣಕಟ್ಟೆಯ ಸ್ವಲ್ಪ ದೂರದಲ್ಲಿ ಹೊಲದಲ್ಲಿಯ ಮನೆಗೆ ನಡೆದುಕೊಂಡು ರಸ್ತೆಯ ಮೇಲೆ ಹೋಗುತ್ತಿರುವಾಗ ಕಕ್ಕೇರಾ ಕಡೆಯಿಂದ ಆರೋಪಿತನು ತನ್ನ ಮೋಟರ್ ಸೈಕಲ ನಂ:ಕೆಎ-33 ಕ್ಯೂ-8158 ಹಿರೋ ಹೆಚ್ಎಫ್ ಡಿಲಕ್ಸ್ ನೇದ್ದನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಗೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದು, ಬಲಗಾಲ ಮೊಣಕಾಲ ಕೆಳಗೆ ಕಾಲು ಮುರಿದು ಭಾರೀ ಒಳಪೆಟ್ಟಾದ ಬಗ್ಗೆ ಅಪರಾಧ.

ಇತ್ತೀಚಿನ ನವೀಕರಣ​ : 20-07-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080