ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-07-2022


ಯಾದಗಿರಿ ಮಹಿಳಾ ಪೊಲೀಸ್ ಠಾಣೆ :-
ಗುನ್ನೆ ನಂ:41/2022 ಕಲಂ 498(ಎ) ಐಪಿಸಿ:ಇಂದು ದಿನಾಂಕ 19/07/2022 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾಧದಾರರಾದ ಶ್ರೀಮತಿ ಜರೀನಾ ಬೇಗಂ ಗಂಡ ಎಮ್ ಡಿ ಇಮ್ರಾನ್ ಸಾಃ ಸಹರಾ ಕಾಲೋನಿ ಯಾದಗಿರಿ ಇವರು ಠಾಣೆಗೆ ಬಂದು ಒಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಅರ್ಜಿ ಸಲ್ಲಿಸಿದ್ದ ಸಾರಾಂಶವೆನೆಂದರೆ ನಾನು ಶ್ರೀಮತಿ ಜರೀನಾ ಬೇಗಂ ಗಂಡ ಎಮ್ ಡಿ ಇಮ್ರಾನ್ ವಯಾ- 35 ಜಾತಿ- ಮುಸ್ಲಿಂ ಸಾ- ಯಾದಗಿರಿಯಾದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ದಿನಾಂಕ: 29/07/2018 ರಂದು ಎಮ್.ಡಿ ಇಮ್ರಾನ್ ಇತನೊಂದಿಗೆ ಮುಸ್ಲಿಂ ಸಂಪ್ರದಾಯದ ಪ್ರಕಾರ ನಮ್ಮ ತಾಯಿಯ ಮನೆಯಲ್ಲಿ ಮದುವೆಯಾಗಿದ್ದು ಮದುವೆಯಾದ ಕೆಲವು ದಿನಗಳವರೆಗೆ ಮಾತ್ರ ನನ್ನ ಗಂಡನು ನನ್ನ ಜೊತೆಗೆ ಚೆನ್ನಾಗಿ ಇದ್ದರು, ನಂತರ ಕುಡಿದು ಬಂದು ನನಗೆ ಹೊಡೆಬಡೆ ಮಾಡಲು ಶುರುಮಾಡುತ್ತಿದ್ದನು. ನನ್ನ ಗಂಡನ ಮನೆಯವರು ಅವನಿಗೆ ಹೇಳಿ ಕಳಿಸಿಕೊಡತ್ತಿದ್ದರು. ನನ್ನ ಗಂಡನಿಗೆ ನನ್ನ ಮೇಲೆ ಯಾವುದೇ ವಿಶ್ವಾಸ ಇರಲಿಲ್ಲಾ., ನಾನು ಯಾರ ಮನೆಗೆ ಹೋಗುವಂತಿಲ್ಲಾ, ಅಮ್ಮನ ಮನೆಗೆ ಹೋಗುವುದ್ದಕ್ಕೆ ಬಿಡುತ್ತಿರಲಿಲ್ಲಾ. ಅಮ್ಮನಿಗೆ ಮತ್ತು ಅಣ್ಣನಿಗೆ ಪೋನ್ ನಲ್ಲಿ ಮಾತನಾಡಿದರೇ, ಅನುಮಾನ ಮಾಡಿ ಹೊಡೆಯುತ್ತಿದ್ದ, ಕಾಲ್ ರಿಕಾರ್ಡಿಂಗ್ ಮಾಡುತ್ತಿದ್ದ ನನ್ನ ಗಂಡನಿಗೆ ಅವರ ತಾಯಿ ದಿನಾ ದಿನಾ ಪೋನ್ ಮಾಡಿ ಅವಳಿಗೆ ಬಿಟ್ಟು ಬಾ ನಿನಗೆ ಬೇರೆ ಹುಡುಗಿಯನ್ನು ನೋಡಿ ಇನ್ನೊಂದು ಮದುವೆ ಮಾಡುತ್ತೇವೆ. ನಾವು ಮಾತಾಡಿದ್ದಿವಿ, ಅವರು ನಮಗೆ ಒಂದು ಬೈಕು, ಬಂಗಾರ, ದುಡ್ಡು ಕೊಡುತ್ತಾರೆ ಅಂತಾ ಹೇಳಿದ್ದಾರೆ, ನಿನ್ನು ಅವಳನ್ನು ಬಿಟ್ಟು ನಮ್ಮ ಮನೆಗೆ ವಾಪಾಸ ಬಾ ಅಂತಾ ಹೇಳುತ್ತಿದ್ದರು, ಕೊನೆಗೆ ನನ್ನ ಬಿಟ್ಟು ಅವರ ಅಮ್ಮನ ಮನೆಗೆ ಹೋಗಿಬಿಟ್ಟನು. ನನಗೆ ಯಾವ ತರಹ ಬಿಡಬೇಕಂತ ಕ್ರೀಮಿನಲ್ ಮೈಂಡ್ ಯೋಚಿಸಿ ದಿನಾಂಕ: 05/10/2018 ರಂದು ಬೆಳಿಗ್ಗೆ 9:30 ಕ್ಕೆ ಜಗಳ ಮಾಡಿ ನನ್ನ ಮೇಲೆ ಡೀಜಲ್ ಸುರಿದು ಬೆಂಕಿ ಹಚ್ಚಿ ನನ್ನನ್ನು ಕೊಲ್ಲಲು ಪ್ರಯತ್ನಿಸಿದನು. ಅದರಿಂದ ನನಗೆ ಸುಟ್ಟ ಗಾಯಗಳು ಆಗಿದ್ದರಿಂದ ನಾನು ಮಹಿಳಾ ಪೊಲೀಸ್ ಠಾಣೆ ಯಾದಗಿರಿಯಲ್ಲಿ ದೂರು ಸಲ್ಲಿಸಿದ್ದೆನು. ಆ ಗಾಯದಿಂದ ನಾನು ಸುಟ್ಟ ಗಾಯದಿಂದ 40 % ಅಂಗವಿಕಲವಾಗಿದ್ದೇನೆ. ದೂರು ಸಲ್ಲಿಸಿದಾಗ ಪೊಲೀಸರು ಆತನಿಗೆ ಜೈಲಿಗೆ ಕಳಿಸಿದರು. ನಂತರ 2 ತಿಂಗಳಲ್ಲಿ ವಾಪಾಸು ಜೈಲಿನಿಂದ ಬಂದನು. 2 ತಿಂಗಳ ನಂತರ ನನ್ನ ಗಂಡ ಜೈಲಿನಿಂದ ಬಂದು ನಾನು ಗುಜರಾತಿನ ನಮ್ಮಅಣ್ಣನ ಮನೆಗೆ ಬಂದು ನಾನು ನಿನಗೆ ಚಿಕಿತ್ಸೆ ಕೊಡಿಸುತ್ತೇನೆ ಅಂತಾ ನನ್ನನ್ನು ವಾಪಾಸ ಕರೆದುಕೊಂಡು ಬಂದನು. ನನಗೆ ಅವನ ಜೊತೆಗೆ ಇರುವುದಕ್ಕೆ ಭಯವಾಗಿ ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಯಾದಗಿರಿಗೆ ಹೋಗಿದ್ದಾಗ ನನಗೆ ಸ್ವಾಧಾರ ಅಂತಾ ಮಹಿಳಾ ಕೇಂದ್ರಕ್ಕೆ ಕಳಿಸಿದ್ದಾರೆ. ಅಲ್ಲೆ ಇದ್ದೇನೆ. ನಂತರ ನನ್ನ ಗಂಡನಿಗೆ ಗೊತ್ತಾಗಿ ಸ್ವಾಧಾರ ಕೇಂದ್ರಕ್ಕೆ ಬಂದು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಅಂತಾ ಸ್ವಾಧಾರ ಕೇಂದ್ರದ ಅಧ್ಯಕ್ಷರು ಮತ್ತು ಮಹಿಳಾ ವಕೀಲರ ಸಮಕ್ಷಮ ಲಿಖಿತವಾಗಿ ಬರೆದು ಕೊಟ್ಟು ಬಂದಾಗ ನಾನು ಪುನಃ ಸಂಸಾರ ಮಾಡುವುದಕ್ಕೆ ಒಪ್ಪಿಕೊಂಡು ಹೋಗಿದ್ದೆ, ನನ್ನ ತಾಯಿಯ ಮನೆಯಲ್ಲಿ ಇರಬೇಕು ಅಂತಾ ಹೇಳಿದಾಗ 2020 ರಲ್ಲಿ ಲಾಕ್ ಡೌನ ಅವಧಿಯಲ್ಲಿ ಆತನ ಅಂಗಡಿ ಬಂದ್ ಇದ್ದ ಸಮಯದಲ್ಲಿ ನನ್ನ ತಾಯಿಯ ಮನೆಯಲ್ಲಿ ನನ್ನ ಗಂಡನು ಸಹ ಇದ್ದನು, ಎರಡು ಮೂರು ತಿಂಗಳು ನನ್ನ ಜೊತೆ ಚೆನ್ನಾಗಿ ಇದ್ದು. ನಂತರ ದಿನಗಳಲ್ಲಿ ದೂರು ಹಿಂಪಡೆಯುವಂತೆ ಕಿರುಕುಳ ಕೊಡಲು ಶುರು ಮಾಡಿದ್ದನು, ನಂತರ ಪುನಃ ಕುಡಿದು ಬಂದು ಮನೆಯಲ್ಲಿ ಜಗಳ ಮಾಡಿ ಹೊಡೆಬಡೆ ಮಾಡುತ್ತಿದ್ದನು. ಒತ್ತಾಯಪೂರಕವಾಗಿ ಹಗಲು ರಾತ್ರಿ ಏನ್ನದೇ. ನನ್ನ ಜೊತೆಗೆ ಸಂಭೋಗ ಮಾಡುತ್ತಿದ್ದನು. ನಾನು ಆವಾಗ ಗರ್ಭೀಣಿಯಾದ ಬಗ್ಗೆ ತಿಳಿಸಿದಾಗ ಇನ್ನು ನಮಗೆ ಮಕ್ಕಳು ಬೇಡಾ ಎಂದು ಹೇಳಿ ಅವರ ಅಮ್ಮನ ಮನೆಯಾದ ಯಾದಗಿರಿಗೆ ಹೋದನು. ಅವಾಗ ನಾನು ಮಹಿಳಾ ಪೊಲೀಸ್ ಠಾಣೆ ಯಾದಗಿರಿಗೆ ಹೋಗಿದ್ದೆ ಅವಾಗ ಪೊಲೀಸರು ನನಗೆ ಒಂದು ಸ್ವೀಕೃತಿ ಬರೆದು ಕೊಟ್ಟು ನಂತರ ಅವನಿಗೆ ಕರೆದು ಕೇಳಿದಾಗ ಅವನು ನನಗೆ ಹೆಂಡತಿ ಬೇಡಾ ಅಂತಾ ಹೇಳಿ ನನಗೆ ಅವಾಚ್ಯ ಶಬ್ದಗಳಿಂದ ಬೈದನು. ಅವಾಗ ನಾನು ಗರ್ಭಿಣಿಇದ್ದೆ, ನನ್ನ ಗಂಡ ನನಗೆ ಈ ಮಗು ನನ್ನದು ಅಲ್ಲ ಅಂತಾ ಹೇಳಿದನು.ತರ ನಾನು ನನ್ನ ಮೆಡಿಕಲ್ ಚಿಕಿತ್ಸೆ ಮತ್ತು ಗರ್ಭಿಣಿಯಾದ ಬಗ್ಗೆ ಚಿಕಿತ್ಸೆ ಪಡೆಯಲು ವ್ಯಸ್ತವಾಗಿದ್ದೆ. ಇವಾಗ ನನಗೆ ಒಂದು ಗಂಡು ಮಗು ಹುಟ್ಟಿದ್ದೆ, ಇವಾಗಲೂ ನನ್ನ ಗಂಡನು ಈ ಮಗು ನನಗೆ ಹುಟ್ಟಿಲ್ಲಾ ಅಂತಾ ಹೇಳುತ್ತಿದ್ದಾನೆ. ನನ್ನ ಮಗನ ಮುಂದಿನ ಭವಿಷ್ಯಕ್ಕಾಗಿ ಮೆಡಿಕಲ್ DNA ಮಾಡುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನಾನು ಯಾದಗಿರಿ ಸಹರಾ ಕಾಲೋನಿಯಲ್ಲಿ ವಾಸವಾಗಿರುತ್ತೇನೆ. ಸುಮಾರು ಎರಡು ತಿಂಗಳ ಹಿಂದೆ ನನ್ನ ಗಂಡನ ತಾಯಿಯಾದ ಕನಿಸ್ ಫಾತೀಮಾ ಮತ್ತು ಅಣ್ಣನ ಹೆಂಡತಿಯಾದ ವಸಿಂ ಬೇಗಂ ಇವರು ಯಾದಗಿರಿಯ ಸಹರಾ ಕಾಲೋನಿಯಲ್ಲಿ ಇರುವ ನನ್ನ ಮನೆಗೆ ಬಂದು ನನಗೆ ದೂರು ಹಿಂಪಡೆಯಲು ನನ್ನನ್ನು ಹೆದರಿಸಿದರು. ನನ್ನ ಇಬ್ಬರೂ ಮಕ್ಕಳು ನಿನಗೆ ಎಲ್ಲಿ ಮುಟ್ಟಿಸಬೇಕು ಅಂತಾ ನಿರ್ಧಾರ ಮಾಡಿದ್ದಾರೆ. ನಾನು ನನ್ನ ಮಕ್ಕಳಿಗೆ ತಾಳ್ಮೆ ಹೇಳಿದ್ದಿನಿ, ಇವಾಗಲೂ ನಿನಗೆ ಸಮಯವಿದೆ ಏನು ಬೇಕು ಕೇಳು ಕೇಳಿ ತೊಗೊಂಡು ನಿನ್ನ ಮಕ್ಕಳನ್ನು ಕರೆದುಕೊಂಡು ಯಾದಗಿರಿ ಬಿಟ್ಟು ಹೋಗು ಇಲ್ಲಂದ್ರೆ, ಮುಂದೆ ನಿನಗೆ ಸುಮ್ಮನೆ ಬಿಡುವುದಿಲ್ಲಾ ಅಂತಾ ಹೇಳಿದರು.ನನ್ನ ಗಂಡನ ಅಣ್ಣನಾದ ಎಮ್ ಡಿ ಅಜ್ಹರ್ ನನಗೆ ಸಿಕ್ಕಿದಾಗ ನಿನ್ನ ಗಂಡನು ನಿನಗೆ ಸ್ವಲ್ಪ ಸುಟ್ಟಿದ್ದಾನೆ, ನಾನಾದರೆ, ನಿನಗೆ ಪುರ್ತಿನೇ ಸುಡುತ್ತಿದ್ದೆನು. ಅಂತಾ ಹೇಳಿದನು. ನಾನು ಅವರ ಎಲ್ಲಾ ಮಾತಿಗೆ ನಾನು ತಲೆಗೆ ಹಾಕಲಾರದೆ ಇದ್ದೇನು. ದಿನಾಂಕ: 22/06/2022 ರಂದು ಸುಮಾರ ಸಾಯಂಕಾಲ 7: 30 ಕ್ಕೆ ನಾನು ಮನೆಗೆ ಹೋಗುವ 1)ಮಹ್ಮದ ಇಮ್ರಾನ ತಂದೆ ಮಹ್ಮದ ಅಕ್ಬರ ಶಹಾಪೂರಿ 2)ಖನೀಸ್ ಫಾತೀಮಾ ಗಂಡ ಮಹ್ಮದ ಅಕ್ಬರ ಶಹಾಪೂರಿ 3)ವಸೀಮ ಬೇಗಂ ಗಂಡ ಮಹ್ಮದಅಜ್ಹರ ಶಹಾಪೂರಿ ಮತ್ತು 4) ಮಹ್ಮದಅಜ್ಹರ ತಂದೆ ಮಹ್ಮದ ಅಕ್ಬರ ಶಹಾಪೂರಿ ಇವರೆಲ್ಲರೂ ಕೂಡಿಕೊಂಡು ಬಂದು ದಾರಿಗೆ ಬೈಕ್ ಅಡ್ಡ ಹಾಕಿ ನನಗೆ ಹೊಡೆದು ನನ್ನ ಬುರ್ಖಾ ಹರಿದು ದೂರು ಹಿಂಪಡೆಯಬೇಕು ಅಂದರೆ ನಿನಗೆ ಒಳ್ಳೆಯದು ಇಲ್ಲದ್ದಿದ್ದರೆ ನಿನ್ನ ಮತ್ತು ನಿನ್ನ ಮಕ್ಕಳನ್ನು ನಾಪತ್ತೆ ಮಾಡುತ್ತೇನೆಂದು ಹೇಳಿದ್ದಾರೆ, ಅದಕ್ಕೆ ನನಗೆ ಮತ್ತು ನನ್ನ ಮಕ್ಕಳಿಗೆ ಏನಾದರೂ ಆದರೆ ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರೇ ಕಾರಣರಾಗುತ್ತಾರೆ. ಆದ್ದರಿಂದ ದಯಾಳುಗಳಾದ ತಾವುಗಳು ನನ್ನ ಮತ್ತು ನನ್ನ ಮಕ್ಕಳನ್ನು ರಕ್ಷಣೆಗಾಗಿ ನನ್ನ ಗಂಡ ಅತ್ತೆ ನನ್ನ ಗಂಡನ ಅಣ್ಣನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಸದರಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 41/2022 ಕಲಂ 498(ಎ) ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡುತನಿಖೆಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 94/2022 ಕಲಂ: 78(3) ಕೆ.ಪಿ ಎಕ್ಟ 1963: ದಿನಾಂಕ:19/07/2022 ರಂದು 10-45 ಎಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ(ಕಾಸು) ರವರು ಠಾಣೆಯಲ್ಲಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಇಂದು ದಿನಾಂಕ:19/07/2022 ರಂದು 10-30 ಎಎಮ್ ಕ್ಕೆ ನಾನು ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ನಾಯ್ಕಲ್ ಗ್ರಾಮದ ಬೀಟ್ ಸಿಬ್ಬಂದಿ ಶ್ರೀ ವೆಂಕಟೇಶ ಹೆಚ್.ಸಿ 78 ರವರು ನನಗೆ ಮಾಹಿತಿ ನಿಡಿದ್ದೇನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಸಂ. 05 ರಲ್ಲಿ ಬರುವ ನಾಯ್ಕಲ್ ಗ್ರಾಮದ ಸಾರ್ವಜನಿಕ ಚನ್ನಬಾವಿ ಹತ್ತಿರ ಬಾವಿ ಕಟ್ಟೆ ಮೇಲೆ ಒಬ್ಬನು ಕುಳಿತುಕೊಂಡು ಅಲ್ಲಿಂದ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿರುತ್ತದೆ. ಆದ್ದರಿಂದ ಸದರಿಯವನ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಕಾರಣ ಈ ಬಗ್ಗೆ ದಾಳಿ ಮಾಡಿ ಮಟಕಾ ಜಪ್ತಿ ಪಂಚನಾಮೆ ಜರುಗಿಸಬೇಕಾಗಿರುವುದರಿಂದ ಸರಕಾರಿ ತಫರ್ೆಯಿಂದ ಪ್ರಕರಣ ದಾಖಲಿಸಲು ದೂರು ನಿಮಗೆ ಸಲ್ಲಿಸುತ್ತಿದ್ದು, ನೀವು ಈ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರ. ವ. ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 94/2022 ಕಲಂ: 78(3) ಕೆ.ಪಿ ಎಕ್ಟ 1963 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 95/2022 ಕಲಂ: 87 ಕೆ.ಪಿ ಎಕ್ಟ್: ಇಂದು ದಿನಾಂಕ:19/07/2022 ರಂದು 3-15 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ(ಕಾಸು) ರವರು ಠಾಣೆಯಲ್ಲಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಇಂದು ದಿನಾಂಕ:19/07/2022 ರಂದು 3 ಪಿಎಮ್ ಕ್ಕೆ ನಾನು ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ನಾಯ್ಕಲ್ ಗ್ರಾಮದ ಬೀಟ್ ಸಿಬ್ಬಂದಿ ಶ್ರೀ ವೆಂಕಟೇಶ ಹೆಚ್.ಸಿ 78 ರವರು ನನಗೆ ಮಾಹಿತಿ ನಿಡಿದ್ದೇನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಸಂ. 05 ರಲ್ಲಿ ಬರುವ ನಾಯ್ಕಲ್ ಸೀಮಾಂತರದ ಕ್ಯಾತನಾಳ ರೋಡಿನ ಪಕ್ಕದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಜೂಜುಕೋರರ ಮೇಲೆ ದಾಳಿ ಮಾಡಿ ಜಪ್ತಿ ಪಂಚನಾಮೆ ಜರುಗಿಸಬೇಕಾಗಿರುವುದರಿಂದ ಸರಕಾರಿ ತಫರ್ೆಯಿಂದ ಪ್ರಕರಣ ದಾಖಲಿಸಲು ದೂರು ನಿಮಗೆ ಸಲ್ಲಿಸುತ್ತಿದ್ದು, ನೀವು ಈ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರ. ವ. ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 95/2022 ಕಲಂ: 87 ಕೆ.ಪಿ ಎಕ್ಟ 1963 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 36/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್: ಇಂದು ದಿನಾಂಕ 19/07/2022 ರಂದು ಮದ್ಯಾಹ್ನ 01-30 ಪಿ.ಎಂ.ಕ್ಕೆ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಪೋನ್ ಮೂಲಕ ಎಮ್.ಎಲ್.ಸಿ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆಗೆ ಶ್ರೀ ಸಿದ್ದಪ್ಪ ಎಚ್.ಸಿ-75 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ವಿಚಾರಣೆ ನಂತರ ಗಾಯಾಳು ಪಿಯರ್ಾದಿ ಶ್ರೀ ಶಮಸುದ್ದೀನ್ ತಂದೆ ಖತಲಸಾಬ ಲದಾಫ್ ವಯ;45 ವರ್ಷ, ಜಾ;ಮುಸ್ಲಿಂ, ಉ;ಲಾರಿ ಚಾಲಕ & ಮಾಲೀಕ, ಸಾ;ಪಿಲಕಮ್ಮ ಏರಿಯಾ, ವಾಡಿ, ತಾ;ಚಿತ್ತಾಪುರ, ಜಿ;ಕಲಬುರಗಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 7-30 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆಯ ಅಸಲು ಪ್ರತಿಯನ್ನು ಹಾಜರುಪಡಿಸಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ಮತ್ತು ವಿಳಾಸದ ನಿವಾಸಿತನಿದ್ದು ನನ್ನ ಹೆಸರಿನಲ್ಲಿ ಲಾರಿ ನಂಬರ ಕೆಎ-32, ಡಿ-8564 ನೇದ್ದು ಇರುತ್ತದೆ ಅದನ್ನೇ ನಡೆಸಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಿನ್ನ ದಿನಾಂಕ 18/07/2022 ರಂದು ಸಾಯಂಕಾಲ ನನ್ನ ಮತ್ತು ನನ್ನ ಸ್ನೇಹಿತನ ಲಾರಿಯಲ್ಲಿ ಎ.ಸಿ.ಸಿ ಸಿಮೆಂಟ್ ಫ್ಯಾಕ್ಟರಿ ವಾಡಿಯಿಂದ ಗದ್ವಾಲಕ್ಕೆ ಸಿಮೆಂಟ್ನ್ನು ಲೋಡ್ ಮಾಡಿರುತ್ತೇವೆ. ಇಂದು ದಿನಾಂಕ 19/07/2022 ರಂದು ನಸುಕಿನಲ್ಲಿ ನಮ್ಮ ಎರಡು ಲಾರಿಗಳನ್ನು ವಾಡಿಯಿಂದ ಗದ್ವಾಲಕ್ಕೆ ಸಿಮೆಂಠ್ ಅನಲೋಡ್ ಮಾಡಿ ಬರುವುದಕ್ಕಾಗಿ ನಮ್ಮ ನಮ್ಮ ಲಾರಿಗಳನ್ನು ನಡೆಸಿಕೊಂಡು ಹೊರಟೆವು. ಮಾರ್ಗ ಮದ್ಯೆ ಸಮಯ ಅಂದಾಜು 4 ಎ.ಎಂ.ದ ಸುಮಾರಿಗೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಆರ್ಯಭಟ್ಟ ಶಾಲೆಯ ಮುಂದಿನ ಮುಖ್ಯ ರಸ್ತೆಯ ಬದಿಯಲ್ಲಿ ಶಾಲೆಯ ಮುಂದಿನ ಲೈಟಿನ ಕಂಬದ ಬೆಳಕಿನಲ್ಲಿ ನಮ್ಮ ಎರಡು ಲಾರಿಗಳನ್ನು ನಿಲ್ಲಿಸಿ ನಮ್ಮ ನಮ್ಮ ಲಾರಿಯ ಟಯರುಗಳನ್ನು ಚೆಕ್ ಮಾಡುತ್ತಿದ್ದಾಗ ಅದೇ ಸಮಯಕ್ಕೆ ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಹೊರಟಿದ್ದ ಒಬ್ಬ ಕಾರ್ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನನಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದನು ಸದರಿ ಅಪಘಾತದಲ್ಲಿ ನನಗೆ ಎಡಗಾಲಿನ ತೊಡೆಗೆ, ಮೊಣಕಾಲಿನ ಕೆಳಗೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು, ಸೊಂಟಕ್ಕೆ ಗುಪ್ತಗಾಯ, ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿರುತ್ತದೆ. ಈ ಅಪಘಾತವನ್ನು ಕಂಡು ನನ್ನ ಸ್ನೇಹಿತನಾದ ಅಲ್ತಾಫ್ ಹಾಗೂ ಅವರ ಲಾರಿ ಕ್ಲೀನರ್ ಶಪೀ ಹಾಗೂ ನನ್ನ ಲಾರಿ ಇನ್ನೊಬ್ಬ ಡ್ರೈವರ್ ಇಬ್ರಾಹಿಂ ಇವರುಗಳು ಓಡೋಡಿ ಬಂದು ವಿಚಾರಿಸಿರುತ್ತಾರೆ. ನನಗೆ ಅಪಘಾತ ಪಡಿಸಿದ ಕಾರ್ ನೇದ್ದರ ಚಾಲಕ ಘಟನಾ ಸ್ಥಳದಿಂದ ಸ್ವಲ್ಪ ದೂರ ಹೋಗಿ ನಿಲ್ಲಿಸಿ, ನಮಗೆ ನೋಡಿ ಅಲ್ಲಿಂದ ಕಾರ್ ಸಮೇತ ಓಡಿ ಹೋಗಿರುತ್ತಾನೆ. ನನಗೆ ಅಪಘಾತ ಪಡಿಸಿದ ಕಾರ್ ಚಾಲಕನಿಗೆ ಹಾಗೂ ಕಾರನ್ನು ನಾವುಗಳು ಮತ್ತೆ ನೋಡಿದಲ್ಲಿ ಗುತರ್ಿಸಿರುತ್ತೇವೆ. ನಂತರ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ವಾಹನ ಬಂದಾಗ ಅವರೆಲ್ಲರೂ ನನಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ನನಗೆ ಸೇರಿಕೆ ಮಾಡಿರುತ್ತಾರೆ. ಯಾದಗಿರಿ ಸಕಾರಿ ಆಸ್ಪತ್ರೆಯಲ್ಲಿನ ವೈದ್ಯರು ನನಗೆ ಚಿಕಿತ್ಸೆ ನೀಡಿ ನಂತರ ಕೂಡಲೇ ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ಹೋಗಲು ತಿಳಿಸಿದ ಮೇರೆಗೆ ಇಲ್ಲಿಗೆ ಬಂದು ಸೇರಿಕೆ ಆಗಿರುತ್ತೇನೆ. ಬರುವಾಗ ಈ ಘಟನೆಯ ಬಗ್ಗೆ ನನ್ನ ಸ್ನೇಹಿತನಾದ ಅಲ್ತಾಫ್ ಈತನು ನಮ್ಮ ಮನೆಗೆ ಪೋನ್ ಮಾಡಿ ತಿಳಿಸಿ ನಾವು ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಬರುತ್ತಿದ್ದೇವೆ ನೀವು ಅಲ್ಲಿಗೆ ಬರ್ರೀ ಅಂತಾ ತಿಳಿಸಿರುತ್ತಾನೆ. ನಾನು ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಬಂದಾಗ ಅಲ್ಲಿ ನನ್ನ ಹೆಂಡತಿ ಸುಫಿಯಾ ಬೇಗಂ, ಮಗ ಸೋಹೆಲ್, ಅಳಿಯ ಮಹಮದ್ ಶಫೀ ಇವರುಗಳು ಬಂದು ನನಗೆ ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ. ಹೀಗಿದ್ದು ಇಂದು ದಿನಾಂಕ 19/07/2022 ರಂದು ಬೆಳಿಗಿನ ಜಾವ 4 ಎ.ಎಂ.ಕ್ಕೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಬರುವ ಆರ್ಯಭಟ್ಟ ಶಾಲೆಯ ಹತ್ತಿರ ರಸ್ತೆ ಬದಿಯಲ್ಲಿ ನಾನು ಲಾರಿಯ ಟಯರು ಚೆಕ್ ಮಾಡಲು ನಿಂತಿದ್ದಾಗ ಯಾವುದೋ ಒಂದು ಕಾರ್ ನೇದ್ದರ ಚಾಲಕನು ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಕಾರ್ ಮತ್ತು ಕಾರ್ ಚಾಲಕನ್ನು ಪತ್ತೆಮಾಡಲು ಹಾಗೂ ಈ ಕೂಡಲೇ ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 36/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 109/2022 ಕಲಂ 78 (3) ಕೆ.ಪಿ ಕಾಯ್ದೆ: ದಿನಾಂಕ: 19-07-2022 ರಂದು ಸಾಯಂಕಾಲ 06-30 ಗಂಟೆಗೆ ಶ್ರೀ ರಾಜಕುಮಾರ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಮುಷ್ಟೂರ ಗ್ರಾಮದ ರೈಲ್ವೇ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 420=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.109/2022 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 120/2022 ಕಲಂ: 143, 147, 324, 323, 324, 504, 506 ಸಂ 149 ಐಪಿಸಿ: ಇಂದು ದಿನಾಂಕ 19/07/2022 ರಂದು 1.30 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀಮತಿ ಹುಸೇನಬೀ ಗಂಡ ಮೈನುದ್ದೀನಸಾಬ ಕಡಕಲ್ ವ|| 38 ಜಾ|| ಮುಸ್ಲಿಂ ಉ|| ಕೂಲಿ ಸಾ|| ಮಂಗಳೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮ ಮನೆ ಹಾಗೂ ನಮ್ಮೂರ ನಮ್ಮ ಜನಾಂಗದ ಮುಮತಾಜಬೀ ಗಂಡ ಟಿಪ್ಪುಸುಲ್ತಾನ್ ಹಸನಾಪೂರ ಇವರ ಮನೆಯು ಅಕ್ಕ ಪಕ್ಕದಲ್ಲಿದ್ದು ನಮ್ಮ ಮತ್ತು ಅವರ ಮಧ್ಯ ಬಹಳ ದಿನಗಳಿಂದ ಸಣ್ಣ ಪುಟ್ಟ ವಿಷಯದಲ್ಲಿ ಜಗಳ ಮಾಡುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ದಿನಾಂಕ 17/07/2022 ರಂದು ಸಂಜೆ 7.00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ನಿಂತಿದ್ದಾಗ ನಮ್ಮ ಪಕ್ಕದ ಮನೆಯ 1) ಮುಮತಾಜಬೀ ಗಂಡ ಟಿಪ್ಪುಸುಲ್ತಾನ್ ಹಸನಾಪೂರ ಇವಳು ಮತ್ತು 2) ಲಾಲಸಾಬ ತಂದೆ ಟಿಪ್ಪುಸುಲ್ತಾನ್ ಹಸನಾಪೂರ, 3) ಗಂವಾರಬೀ ಗಂಡ ಪೀರಸಾಬ ಹಸನಾಪೂರ, 4) ಮಲಿಕಸಾಬ ತಂದೆ ಬಂದಗಿಸಾಬ ಹಸನಾಪೂರ 5) ಹುಸೇನಸಾಬ ತಂದೆ ರಾಜಾಸಾಬ ಹಸನಾಪೂರ ಇವರು ಎಲ್ಲರೂ ಕೂಡಿ ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಗುಂಪು ಕಟ್ಟಿಕೊಂಡು ಬಂದವರೆ ಏನಲೇ ಹುಸನವ್ವ ನೀನು ನಮ್ಮ ಮನೆಯ ಮುಂದೆ ನೀರು ಬಿಡಬೇಡ ಅಂದರೂ ಏಕೆ ಬಿಡುತ್ತಿಯಾ ಅಂತಾ ನನ್ನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈಯುತ್ತಿದ್ದಾಗ ಸುಮ್ಮನೆ ನನಗೆ ಏಕೆ ಬೈಯುತ್ತಿದ್ದೀರಿ ಅಂತಾ ನಾನು ಕೇಳಿದ್ದಕ್ಕೆ ಅವರಲ್ಲಿನ ಮುಮತಾಜಬೀ ಇವಳು ನನ್ನ ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿದಳು. ಗಂವಾರಬೀ ಇವಳು ನನಗೆ ಕೈಯಿಂದ ಕಪಾಳಕ್ಕೆ ಹೊಡೆದಳು. ಉಳಿದವರು ಕೈಯಿಂದ, ಬಡಿಗೆಯಿಂದ ಬೆನ್ನಿಗೆ ಹೊಡೆಯುತ್ತಿದ್ದಾಗ ನಮ್ಮ ತಮ್ಮಂದಿರರಾದ ಲಾಲಸಾಬ ತಂದೆ ಸೋಫಿಸಾಬ ಕಡಕಲ್ ಮತ್ತು ಭಾಷಾಸಾಬ ತಂದೆ ಸೋಫಿಸಾಬ ಕಡಕಲ್ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಅವರೆಲ್ಲರೂ ನನಗೆ ಹೊಡೆಯುವುದನ್ನು ಬಿಟ್ಟು ಎಲೇ ಸೂಳಿ ನೀನು ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನನಗೆ ಗಾಯಗಳಾಗಿದ್ದರಿಂದ ನಿನ್ನೆ ದಿನಾಂಕ 18/07/2022 ರಂದು ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಮರಳಿ ಮನೆಗೆ ಹೋಗಿ ಮನೆಯಲ್ಲಿ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನಮ್ಮ ಮನೆಯ ಮುಂದಿನ ನೀರಿನ ವಿಷಯದಲ್ಲಿ ವಿನಾಕಾರಣ ಗುಂಪು ಕಟ್ಟಿಕೊಂಡು ಬಂದು ನನ್ನೊಂದಿಗೆ ಜಗಳ ತೆಗೆದು ಕೈಯಿಂದ, ಬಡಿಗೆಯಿಂದ ನನಗೆ ಹೊಡೆದು ಗುಪ್ತಗಾಯ ಮಾಡಿ, ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 5 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 120/2022 ಕಲಂ 143,147,148,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 121/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 15.07.2022 ರಂದು 4.00 ಪಿಎಂ ಕ್ಕೆ ಶ್ರೀ ವಿಶ್ವನಾಥ ಮುದರೆಡ್ಡಿ ಪಿ.ಎಸ್.ಐ ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ವಿಶ್ವನಾಥ ಮುದರೆಡ್ಡಿ ಪಿ.ಎಸ್.ಐ ಕೆಂಭಾವಿ ಠಾಣೆ ಇದ್ದು ನಾನು ಇಂದು ದಿನಾಂಕ 19.07.2022 ರಂದು 5.15 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಶಖಾಪೂರ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ನಾನು, ನಮ್ಮ ಠಾಣೆಯ ಶಿವರಾಜ ಹೆಚ್.ಸಿ 85, ಜಗದೀಶ ಹೆಚ್.ಸಿ 40, ಆನಂದ ಪಿಸಿ 43 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 5.25 ಪಿಎಂ ಕ್ಕೆ ಹೊರಟು ಶಖಾಪೂರ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಹತ್ತಿರ 5.40 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 5.45 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಿರೂಪಾಕ್ಷಿ ತಂದೆ ಸಾಹೇಬಗೌಡ ಬಿರಾದಾರ ವ|| 36 ಜಾ|| ಬೇಡರ ಉ|| ಒಕ್ಕಲುತನ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಶಖಾಪೂರ ಸಾ|| ಯಾಳಗಿ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 1040/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 5.45 ಪಿಎಂ ದಿಂದ 6.45 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 121/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 126/2022.ಕಲಂ 504,506, 306 ಸಂ 34 ಐ.ಪಿ.ಸಿ.: ಇಂದು ದಿನಾಂಕ 19.07.2022 ರಂದು 10.45 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ದೇವಿಂದ್ರಮ್ಮ ಗಂಡ ದೇವಿಂದ್ರಪ್ಪ ಪಡದಳ್ಳಿ ವ|| 45 ಜಾ|| ಹಿಂದು ಹೊಲೆಯ ಉ|| ಕೂಲಿಕೆಲಸ ಸಾ|| ಸಾದ್ಯಾಪೂರ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಸವೆನಂದರೆ ನನ್ನ ಗಂಡನು ಸುಮಾರು 12 ವರ್ಷಗಳ ಹಿಂದೆ ಮೃತಪಟ್ಟಿದ್ದು ನನಗೆ ಒಂದು ಗಂಡು ಹಾಗು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಗಂಡು ಮಗನಾದ ಮಹೇಂದ್ರಕುಮಾರು ತಂದೆ ದೇವಿಂದ್ರಪ್ಪ ಪಡದಳ್ಳಿ ವ|| 21 ವರ್ಷ ಈತನು ಸದ್ಯ ಪ್ರಾರ್ಥನಾ ಪದವಿ ಮಹಾವಿದ್ಯಾಲಯ ಶಹಾಪೂರದಲ್ಲಿ ಬಿ ಎ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮನೆಗೆ ದಿನಾಲು ಹೋಗಿ ಬರುವದು ಮಾಡುವದರಿಂದ ಅಭ್ಯಾಸ ಆಗುವದಿಲ್ಲ ಅಂತ ತಿಳಿದು ಶಹಾಪೂರದ ಚಾಮುಂಡೇಶ್ವರಿ ನಗರದಲ್ಲಿ ಚಂದಮ್ಮ ಗಂಡ ರಾಮಯ್ಯ ಯಾದಗಿರಿ ಇವರ ಮನೆಯಲ್ಲಿ ಬಾಡಿಗೆ ರೂಮ ಮಾಡಿಕೊಂಡು ಒಬ್ಬನೇ ಇರುತ್ತಿದ್ದನು. ಮಗಳಾದ ಭಾಗ್ಯಶ್ರೀ ಇವಳು ಸಹ ಪ್ರಾರ್ಥನಾ ಪದವಿ ಪೂರ್ವ ಶಾಲೆ ಶಹಾಪೂರದಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಆದರೆ ಮಗಳು ದಿನಾಲು ನಮ್ಮೂರಿನಿಂದ ಹೋಗಿ ಬರುವದು ಮಾಡುತ್ತಿದ್ದಳು. ಮಗನಾದ ಮಹೇಂದ್ರಕುಮಾರ ಈತನು ಕಾಲೇಜು ರಜೆ ಇದ್ದಾಗ ಊರಿಗೆ ಬಂದು ಹೋಗುವದು ಮಾಡುತ್ತಿದ್ದನು. ಊರಿಗೆ ಬಂದಾಗ ಅವನು ಬಿದರಾಣಿಯ ನಮ್ಮ ಜನಾಂಗದ ಪರಶುರಾಮ ತಂದೆ ಚಂದ್ರಶೇಖರ ದೊಡ್ಡಮನಿ ಈತನ ಹತ್ತಿರ 40,000/- ರೂಪಾಯಿ ಸಾಲ ಮಾಡಿದ್ದು ಸದರಿಯವನು ತನ್ನ ಜೊತೆ ಎರಡು ಮೂರು ಜನರನ್ನು ಕರೆದುಕೊಂಡು ನಮ್ಮ ಶಾಲೆಗೆ ಬಂದು ನನಗೆ ಬಹಾಳ ಕಿರುಕುಳ ನೀಡುತ್ತಿದ್ದಾನೆ ಆತನ ಕಿರುಕುಳದಿಂದ ನನಗೆ ಸಾಯಬೇಕೆನ್ನುತ್ತಿದೆ ಅಂತ ಅಂದಾಗ ನಾನು ಯಾವೂದಾದರೂ ದುಡ್ಡು ಬಂದರೆ ಕೊಡೋಣ ನಾನೇ ಒಂದು ದಿನ ಶಹಾಪೂರಕ್ಕೆ ಬಂದು ಅವರಿಗೆ ಹೇಳುತ್ತೇನೆ ನೀನು ಅವರಿಗೆ ಅಂಜಬೇಡ ಅಂತ ಧೈರ್ಯ ಹೇಳಿದ್ದೆನು. ಹೀಗಿದ್ದು ಇಂದು ದಿನಾಂಕ 19.07.2022 ರಂದು ನಾನು ಶಹಾಪೂರದ ನನ್ನ ಮಗ ಮಹೇಂದ್ರಕುಮಾರ ಈತನ ರೂಮಿಗೆ ಬಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ಮಗನ ರೂಮಿನಲ್ಲಿದ್ದಾಗ ಅದೇ ಸಮಯಕ್ಕೆ ನನ್ನ ಮಗನಿಗೆ ಸಾಲದ ಹಣ ಕೊಟ್ಟ ಪರಶುರಾಮ ತಂದೆ ಚಂದ್ರಶೇಖರ ದೊಡ್ಡಮನಿ ಸಾ|| ಬಿದರಾಣಿ ಈತನು ತನ್ನ ಜೊತೆಯಲ್ಲಿ ಎರಡು-ಮೂರು ಜನರನ್ನು ಕರೆದುಕೊಂಡು ಬಂದು ಎಲ್ಲರೂ ಕೂಡಿ ನನ್ನ ಮಗನಾದ ಮಹೇಂದ್ರಕುಮಾರ ಈತನಿಗೆ ಮಗನೇ ನಮ್ಮ ಹಣ ಯಾವಾಗ ಕೊಡುತ್ತೀಯಾ ಸೂಳೇ ಮಗನೇ ಇವತ್ತು ಹಣ ಕೊಡದಿದ್ದರೆ ನಿನಗೆ ಬಿಡುವದಿಲ್ಲ ಅಂತ ಬೈಯುತ್ತಾ ಅಂಜಿಕೆ ಹಾಕುತ್ತಿದ್ದಾಗ ನಾನು ಅವರಿಗೆ ನಮ್ಮ ಯಾವೂದಾದರು ಹಣ ಬಂದರೆ ಕೂಡಲೇ ನಿಮಗೆ ಕೊಡುತ್ತೇನೆ ಅಂತ ತಿಳಿಸಿ ಹೇಳಿದರೂ ಅವರು ನನ್ನ ಮಾತು ಕೇಳದೇ ನೀನು ಸಾಯಂಕಾಲದವರೆಗೆ ನಮ್ಮ ಹಣ ಕೊಡದಿದ್ದರೆ ನಿನಗೆ ಬಿಡುವದಿಲ್ಲ ಅಂತ ಭಯ ಹಾಕಿ ಹೋದರು. ನಂತರ ನಾನು ನನ್ನ ಮಗನಿಗೆ ಆಯಿತು ನಮ್ಮವು ಯಾವೂದಾದರೂ ಹಣ ಬಂದರೆ ಕೊಡೋಣ ನೀನು ಅಂಜಬೇಡ ಅಂತ ನನ್ನ ಮಗನಿಗೆ ಧೈರ್ಯ ಹೇಳಿ ನಾನು ಮನೆಗೆ ಹೋದೆನು. ನಂತರ ನಾನು ನಮ್ಮ ಊರಿಗೆ ಹೋಗಿ ಸಾಯಂಕಾಲ 04.30 ಗಂಟೆಗೆ ನಮ್ಮ ಮನೆಯಲ್ಲಿದ್ದಾಗ ನನ್ನ ಮಗನ ಗೆಳೆಯ ಹಾಗು ಅಳಿಯನಾದ ರಾಮಲಿಂಗ ತಂದೆ ಮಲ್ಲಿಕಾಜರ್ುನ ಹುರಸಗುಂಡಗಿ ಈತನು ನನಗೆ ಪೋನ ಮಾಡಿ ನನ್ನ ಮಗನಾದ ಮಹೇಂದ್ರಕುಮಾರ ಈತನು ಸಾಲದ ಹಣಕ್ಕಾಗಿ ಅವರಿಗೆ ಅಂಜಿ ತನ್ನ ಬಾಡಿಗೆ ರೂಮಿನಲ್ಲಿ ವéಿಷಸೇವನೆ ಮಾಡಿದ್ದು ಆತನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ಕೂಡಲೇ ಬರಬೇಕು ಅಂತ ತಿಳಿಸಿದಾಗ ನಾನು ಕೂಡಲೇ ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದಿದ್ದು ಮಗನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಮಾತನಾಡುತ್ತಿರಲಿಲ್ಲ, ನಂತರ ಉಪಚಾರದಲ್ಲಿದ್ದ ನನ್ನ ಮಗ ಮಹೇಂದ್ರಕುಮಾರ ಈತನು ಉಪಚಾರ ಫಲಕಾರಿಯಾಗದೇ ಸಾಯಂಕಾಲ 05.30 ಗಂಟೆಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟನು. ನನ್ನ ಮಗನಿಗೆ ಬಿದರಾಣಿಯ ಪರಶುರಾಮ ತಂದೆ ಚಂದ್ರಶೇಖರ ದೊಡ್ಡಮನಿ ಈತನು 40,000/- ರೂ ಸಾಲ ಕೊಟ್ಟಿದ್ದು ಆ ಹಣ ಸ್ವಲ್ಪ ದಿನಗಳ ನಂತರ ಕೊಡುತ್ತೇನೆ ಅಂತ ಹೇಳಿದರೂ ದಿನಾಲೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದವರು, ಇಂದು ಮದ್ಯಾಹ್ನ 3 ಗಂಟೆಗೆ ಆತನ ರೂಮಿಗೆ ಹಣ ಕೊಟ್ಟ ಪರಶುರಾಮ ತಂದೆ ಚಂದ್ರಶೇಖರ ದೊಡ್ಡಮನಿ ಸಾ|| ಬಿದರಾಣಿ ಹಾಗು ಇತರ ಎರಡು ಮೂರು ಜನರು ಬಂದು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದ್ದರಿಂದ ಅವರಿಗೆ ಅಂಜಿ ಅವರ ಕಿರುಕುಳದಿಂದ ತನ್ನ ರೂಮಿನಲ್ಲಿಯೇ ವಿಷ ಸೇವನೆ ಮಾಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಸೇರಿಕೆಯಾಗಿ ಉಪಚಾರ ಫಲಿಸದೇ ಸಾಯಂಕಾಲ 5.30 ಗಂಟೆಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು ಈ ವಿಷಯದಲ್ಲಿ ನಮ್ಮ ಸಂಬಂದಿಕರಲ್ಲಿ ವಿಚಾರಿಸಿ ತಡವಾಗಿ ಬಂದು ಈ ಅಜರ್ಿ ನೀಡಿದ್ದು ಕಾರಣ ನನ್ನ ಮಗನ ಸಾವಿಗೆ ಕಾರಣರಾದ ಪರಶುರಾಮ ತಂದೆ ಚಂದ್ರಶೇಖರ ದೊಡ್ಡಮನಿ ಹಾಗು ಇತರೆ ಎರಡು ಮೂರು ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 126/2022 ಕಲಂ 306,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 22-07-2022 12:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080