ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-08-2021

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 90/2021 ಕಲಂ. ಮನುಷ್ಯಕಾಣೆ : ಇಂದು ದಿನಾಂಕ.19/08/2021 ರಂದು 5-15 ಪಿಎಂಕ್ಕೆ ಪಿರ್ಯಾದಿ ಶ್ರೀ ಕರಿಗುಡ್ಡಪ್ಪ ತಂದೆ ಭಾಗಣ್ಣ ದೊಡ್ಡಮನಿ ವಃ56 ವರ್ಷ, ಜಾಃ ಬೇಡರು ಉಃ ಕೆ.ಎಸ್.ಆರ್.ಟಿ.ಸಿ ಚಾಲಕ ತಾಃ ಹುಣಸಗಿ ಹಾಃವಃ ಮಾತಾಮಾಣಿಕೇಶ್ವರಿ ನಗರ ಯಾದಗಿರಿ ರವರು ಠಾಣೆಗೆ ಬಂದು ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನಗೆ ನಾಲ್ಕು ಜನ ಮಕ್ಕಳಿದ್ದು ಒಬ್ಬ ಗಂಡು ಮಗ, ಮೂರು ಜನ ಹೆಣ್ಣು ಮಕ್ಕಳು ಇರುತ್ತಾರೆ. ಇಬ್ಬರೂ ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟಿದ್ದು ಇನ್ನೂ ಇಬ್ಬರೂ ಮಕ್ಕಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾರೆ. ನನ್ನ ಹಿರಿಯ ಮಗಳಾದ ಕವಿತಾ ಗಂಡ ವಿಜಯಕುಮಾರ ಬೊಮ್ಮನಳ್ಳಿ ವಃ 26 ಜಾಃ ಹಿಂದೂ ಬೇಡರು ಉಃ ಮನೆಕೆಲಸ ಸಾಃ ಶ್ರೀನಿವಾಸಪೂರ ತಾಃ ಹುಣಸಗಿ, ಇವಳಿಗೆ ಇಬ್ಬರೂ ಮಕ್ಕಳಿದ್ದು 1. ಧನರಾಜ 09 ವರ್ಷ, 2. ಉದಯರಾಜ ವಃ 06 ವರ್ಷ, ಮಕ್ಕಳಿದ್ದು ನನ್ನ ಅಳಿಯ ವಿಜಯಕುಮಾರ ಈತನು ಅನಾರೋಗ್ಯದಿಂದ ಬಳಲಿ 2017 ರಲ್ಲಿ ತೀರಿಕೊಂಡಿದ್ದು ಇರುತ್ತದೆ. ಆ ನಂತರ ನನ್ನ ಮಗಳು ಕವಿತಾ ಹಾಗೂ ನನ್ನ ಇಬ್ಬರೂ ಮೊಮ್ಮಕ್ಕಳನ್ನು ನಾನು ನನ್ನ ಮನೆಯಾದ ಯಾದಗಿರಿ ಕರೆದುಕೊಂಡು ಬಂದಿದ್ದು ನಮ್ಮ ಮನೆಯಲ್ಲಿಯೇ ಇದ್ದರು. ಹೀಗಿದ್ದು ನಾನು ದಿನಾಂಕ. 17/08/2021 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಚಾಲಕನಾಗಿದ್ದರಿಂದ ನನಗೆ ಶ್ರೀಶೈಲ್ ಊರಿಗೆ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಕೆಲಸಕ್ಕೆ ಹೋದೇನು ಮನೆಯಲ್ಲಿ ನನ್ನ ತಾಯಿ ಸೊಮವ್ವ ನನ್ನ ಮಗಳು ಕವಿತಾ ಹಾಗೂ ನನ್ನ ಮೊಮ್ಮಗ ಉದಯರಾಜ ರವರು ಇದ್ದರು. ನಂತರ ನಾನು ಶ್ರೀಶೈಲಕ್ಕೆ ಸಾಯಂಕಾಲ 7-00 ಗಂಟೆ ಸುಮಾರಿಗೆ ತಲುಪಿದ್ದು ರಾತ್ರಿ 8-48 ಗಂಟೆ ಸುಮಾರಿಗೆ ನಮ್ಮ ಜೊತೆ ಕರ್ತವ್ಯದ ಮೇಲಿದ್ದ ಕೆ.ಎಸ್.ಆರ್.ಟಿ.ಸಿ. ನಿವರ್ಾಹಕರಾದ ಬಸವರಾಜ ರವರ ಮೋಬೈಲ್ ನಂ. ನೇದ್ದರಿಂದ, ನನ್ನ ಮನೆಯಲ್ಲಿದ್ದ ಮೊಭೈಲ್ ನಂ. ನೇದ್ದಕ್ಕೆ ಕರೆ ಮಾಡಿದಾಗ ನನ್ನ ಮಗಳು ಕವಿತಾ ಇವಳು ಮಾತನಾಡಿದ್ದು ಇರುತ್ತದೆ. ರಾತ್ರಿ ಶ್ರೀಶೈಲ್ದಲ್ಲಿ ವಸತಿ ಮಾಡಿದ್ದು ನಂತರ ದಿನಾಂಕ:18/08/2021 ರಂದು ಬಸ್ ತೆಗೆದುಕೊಂಡು ಶ್ರೀಶೈಲದಿಂದ ಬೆಳಿಗ್ಗೆ 8-00 ಗಂಟೆಗೆ ಅಲ್ಲಿಂದ ಹೋರಟು ನಂತರ ಯಾದಗಿರಿ ಹೊಸ ಬಸ್ ನಿಲ್ದಾಣಕ್ಕೆ ಮದ್ಯಾಹ್ನ 3-45 ಗಂಟೆ ಸುಮಾರಿಗೆ ಬಂದಾಗ ಅಲ್ಲಿ ನಮ್ಮ ತಮ್ಮನಾದ ಭಿಮರಾಯ ತಂ. ಭಾಗಣ್ಣ ದೊಡ್ಡಮನಿ, ಮತ್ತು ನಮ್ಮೂರಿನ ಸಂಭಂದಿಕರಾದ ಅಯ್ಯಣ್ಣ ತಂ. ಹಣಮಂತ್ರಾಯ ಬಿರೇದಾರ, ದ್ಯಾವಪ್ಪ ತಂ. ಹಣಮಂತ್ರಾಯ ಮೇಟಿ, ಬಂಗಾರೆಪ್ಪ ತಂ. ಹಣಮಂತ್ರಾಯ ದೊಡ್ಡಮನಿ ಸಾಃ ಶ್ರೀನಿವಾಸಪೂರ ತಾಃಹುಣಸಗಿ ರವರು ಬಂದಿದ್ದು ನಾನು ಯಾಕೆ ಅಂತಾ ವಿಚಾರಿಸಲು ಮನೆಯಲ್ಲಿ ಒಂದು ಸಮಸ್ಯೆಯಾಗಿದೆ ಬರುವಂತೆ ತಿಳಿಸಿದ್ದರಿಂದ ನಾನು ನಮ್ಮ ಟ್ರಾಫೀಕ ಇನ್ಸಪೆಕ್ಟರ ರವರಿಗೆ ಬೇಟಿಯಾಗಿ ಸಮಸ್ಯೆಯಾದ ಬಗ್ಗೆ ಹೇಳಿ ನಂತರ ಎಲ್ಲರೂ ಕೂಡಿಕೊಂಡು ನಮ್ಮ ಮನೆಗೆ ಬಂದಾಗ ನನ್ನ ಮಗಳು ಇರಲಿಲ್ಲಾ ನಂತರ ನಮ್ಮ ಮನೆಯಲ್ಲಿ ನಮ್ಮ ತಾಯಿ ಸೋಮವ್ವ ಇವಳು ತಿಳಿಸಿದ್ದೆನೆಂದರೆ, ನೀನು ನಿನ್ನೆ ಡ್ಯೂಟಿಗೆ ಹೋಗಿದ್ದು ರಾತ್ರಿ ಅಂದರೆ ದಿನಾಂಕ.18/08/2021 ರಂದು 03-00 ಎಎಂದಿಂದ 04-00 ಎಎಂದ ಮದ್ಯೆದ ಅವಧಿಯಲ್ಲಿ ಉದಯರಾಜ ಈತನು ಎಚ್ಚರವಾಗಿ ಅಳುತ್ತಿದ್ದು ಆಗ ನಾನು ಎದ್ದಾಗ ಕವಿತಾ ಇವಳು ಕಾಣಿಸಲಿಲ್ಲಾ. ನಂತರ ಮನೆಯಲ್ಲಿ ಎಲ್ಲಿಯೂ ಕಾಣಿಸಲಿಲ್ಲಾ ಬೆಳಿಗ್ಗೆ ಆದರೂ ಕೂಡಾ ಮನೆಗೆ ಬಂದಿರುವುದಿಲ್ಲಾ ಅಂತಾ ನಾನು ನನ್ನ ಮಗನಾದ ಭಿಮರಾಯನಿಗೆ ಪೋನ ಮಾಡಿ ತಿಳಿಸಿದ್ದು ಇರುತ್ತದೆ ಅಂತಾ ನಮ್ಮ ತಾಯಿ ತಿಳಿಸಿದಳು. ನಂತರ ನಮ್ಮ ತಮ್ಮ ಹಾಗೂ ನಮ್ಮ ಸಂಭಂದಿಕರು ಯಾದಗಿರಿಗೆ ಬಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು ಮತ್ತು ನಮ್ಮ ಎಲ್ಲಾ ಸಂಭಂಧಿಕರಲ್ಲಿ ವಿಚಾರಿಸಿದ್ದು ನನ್ನ ಮಗಳ ಬಗ್ಗೆ ತಿಳಿದು ಬಂದಿರುವುದಿಲ್ಲಾ. ಇಲ್ಲಿಯವರೆಗೆ ಹುಡುಕಾಡಲಾಗಿ ನನ್ನ ಮಗಳು ಕವಿತಾ ಇವಳು ಸಿಗದೆ ಕಾಣೆಯಾಗಿರುತ್ತಾಳೆ. ಕಾಣೆಯಾದ ನನ್ನ ಮಗಳ ಚಹರೆ ಪಟ್ಟಿ,ಃ- ಸಾದಾ ಕಪ್ಪು ಮೈಬಣ್ಣ, ದುಂಡನೆಯ ಮುಖ, ಎತ್ತರ 4 ಪೀಟ್ 5 ಇಂಚು ಎತ್ತರ, ಸಾದಾರಣ ಮೈಕಟ್ಟು, ಧರಿಸಿದ ಬಟ್ಟೆ ಬಗ್ಗೆ ತಿಳಿದು ಬಂದಿರುವುದಿಲ್ಲಾ. ಕನ್ನಡ ಭಾಷೆ, ಮಾತನಾಡುತ್ತಾಳೆ ಪಿ.ಯು.ಸಿ.ಮೊದಲನೇ ವರ್ಷ ವಿದ್ಯಾಭ್ಯಾಸ ಮಾಡಿರುತ್ತಾಳೆ. ಯಾವ ಕಾರಣದಿಂದ ಮನೆ ಬಿಟ್ಟು ಹೋಗಿ ಕಾಣೆಯಾಗಿರುತ್ತಾಳೆ ಎಂಬುವುದು ಗೊತ್ತಾಗಿರುವುದಿಲ್ಲಾ. ಕಾಣೆಯಾದ ನನ್ನ ಮಗಳು ಕವಿತಾ ಗಂಡ ವಿಜಯಕುಮಾರ ರವರಿಗೆ ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.90/2021 ಕಲಂ.ಮಹಿಳೆ ಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕಾರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 127/2021, ಕಲಂ. 323,324,354, 504.506. ಸಂ.34 ಐ ಪಿ ಸಿ : ದಿನಾಂಕ: 19-08-2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 19-08-2021 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನಾನುನನ್ನ ಹೆಂಡತಿ ಮತ್ತು ನಮ್ಮ ತಮ್ಮ ನಮ್ಮ ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಸೇರಿಕೊಂಡು ಬಂದು ಲೇ ಸೂಳೆ ಮಕ್ಕಳೆ ನಮ್ಮ ಮನೆಯಲ್ಲಿ ಯಾಕೆ ಇದ್ದಿರಿ ಮನೆ ಬಿಟ್ಟು ನಡಿರಲೆ ಯಾಕೆ ನಮ್ಮ ಮನೆಯಲ್ಲಿ ಇದ್ದಿರಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಚಾಕುವಿನಿಂದ ಹೊಡೆ ಬಡೆ ಮಾಡಿ ನನ್ನ ಹೆಂಡತಿಯ ಮೈಮೆಲಿನ ಓಣಿಯನ್ನು ಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 192/2021 ಕಲಂ 306, 149 ಐ.ಪಿ.ಸಿ. : ಇಂದು ದಿನಾಂಕ: 19-08-2021 ರಂದು 3:00 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ರವಿಕುಮಾರ ತಂದೆ ಯಂಕಪ್ಪ ದೇವರ ಮನಿ ವಯಸ್ಸು: 30 ವರ್ಷ ಜಾ: ದಾಸರ (ಎಸ್.ಸಿ.) ಸಾ: ತಡಬಿಡಿ ಗ್ರಾಮ ತಾ: ವಡಗೇರಾ ರವರು ಠಾಣೆಗೆ ಹಾಜರಾಗಿ ದಿನಾಂಕ:03-09-2016 ರಂದು ನಮ್ಮ ಚಿಕ್ಕಮ್ಮ ಮಹಾದೇವಮ್ಮ ಗಂಡ ಯಂಕಪ್ಪ ದಾಸರ ಸಾ: ರಸ್ತಾಪುರ ಇವರ ಮಗನಾದ ಹಣಮಂತ ತಂದೆ ಯಂಕಪ್ಪ ದಾಸರ ಈತನು ಶಹಾಪುರದ ಹಳಿಸಗರ ಏರಿಯಾದ ದಿಗ್ಗಿ ಸಂಗಮೇಶ್ವರ ದೇವಸ್ಥಾನದ ಹತ್ತಿರ ಇರುವ ಮರೆಮ್ಮ ದೇವಸ್ಥಾನದ ಹತ್ತಿರ ವಿಷ ಸೇವನೆ ಮಾಡಿ ಮೃತಪಟ್ಟಿದ್ದನು. ಆ ಬಗ್ಗೆ ನಮ್ಮ ಚಕ್ಕಮ್ಮಳಾದ ಮಹಾದೇವಮ್ಮ ರವರು ಶಹಾಪುರ ಪಲೀಸ ಠಾಣೆಯಲ್ಲಿ ಫಿರ್ಯಾದಿ ನೀಡಿ ತನ್ನ ಮಗನ ಸಾವಿನಲ್ಲಿ ಅನುಮಾನವಿದೆ ಎಂದು ಕೇಸು ದಾಖಲಿಸಿದ್ದಳು ಅದು ಯು.ಡಿ. ಆರ್ ನಂಬರ 24/2016 ಕಲಂ. 174 (ಸಿ.) ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಸಮಯದಲ್ಲಿ ನಾನು ಮತ್ತು ನಮ್ಮೂರ ಶಿವಶಂಕರ ತಂದೆ ಮಲ್ಲಣ್ಣ ಬಡಿಗೇರ ಇಬ್ಬರು ಶವ ಪಂಚನಾಮೆ ಕಾಲಕ್ಕೆ ಪಂಚರಾಗಿ ಪಂಚನಾಮೆ ಮಾಡಿಸಿದ್ದೆವು. ಮೃತ ಹಣಮಂತ ತಂದೆ ಯಂಕಪ್ಪನ ಪ್ಯಾಂಟಿನ ಕಿಶೆಯಲ್ಲಿ ಕೈಬರಹದಿಂದ ಬರೆದ ಒಂದು ಚೀಟಿ ಇದ್ದು ಅದರಲ್ಲಿ ಶ್ರೀ ಗುರು ಪ್ರಸನ್ನ 3-9-2016 ಹಣಮಂತ ತಂದೆ ಯಂಕಪ್ಪ ದಾಸರ ರಸ್ತಾಪುರ ನನ್ನ ಸಾವಿಗೆ ಮುತ್ತುರಾಜ ತಂದೆ ಗುರಪ್ಪ ಮಲ್ಲಾ ಬಿ ನನಗೆ ಚಿತ್ರ ಹಿಂಸೆ ಕೊಟ್ಟಿರುತ್ತಾನೆ ನನ್ನ ಹೆಂಡತಿ ತಲೆ ಕೆಡಿಸಿ ಪ್ರೀತಿ ಮಾಡಿದ್ದಾನೆ. ನನಗೆ 4 ಜನ ಮಕ್ಕಳು ಇವೆ. ಅವನಿಗೆ ಕೈ ಕಾಲು ಬಿದ್ದಿದ್ದೇನೆ. ಅವನಿಗೆ ಕನಿಕರವಿಲ್ಲ ಅವನಿಗೆ ಸಪೋರ್ಟ ಮಾಡಿದವರು 1) ಯಮನಪ್ಪ ತಂದೆ ತಿಮ್ಮಯ್ಯ ದಾಸರ, 2) ನೀಲಮ್ಮ ಗಂಡ ಯಮನಪ್ಪ ದಾಸರ 3) ಶಂಕ್ರಪ್ಪ ತಂದೆ ಯಮನಪ್ಪ ದಾಸರ 4) ಲಕ್ಕೆಮ್ಮ ಗಂಡ ಅಪ್ಪಯ್ಯ ದಾಸರ ಕೆಲ್ಲೂರ 5) ಲಕ್ಷ್ಮೀಬಾಯಿ ಗಂಡ ದೇವೇಂದ್ರಪ್ಪ ದಾಸರ ಮುನಮುಟಗಿ 6) ಮರೆಪ್ಪ ಕಕ್ಕಸಗೇರಿ ಎಸ್.ಸಿ. ಚಲುವಾದಿ ಇಸ್ಟು ಮಂದಿಗೆ ಅವರಿಗೆ ಏನಂತಿ ಅದು ಕೊಡಿಸುತ್ತಾನೆ. ಮನೆಯಲ್ಲಿ ಗಂಡ ಹೆಂಡತಿಯ ಹಾಗೆ ಸಂಸಾರ ಮಾಡುತ್ತಾರೆ. ನನಗೆ ನಾಯಿಗಿಂತ ಕಡೆ ಮಾಡಿದ್ದಾರೆ. ಇಂತಿ ನಿಮ್ಮ ಹಣಂತ ತಂದೆ ಯಂಕಪ್ಪ ದಾಸರ ಸಾ: ರಸ್ತಾಪುರ ಅಂತಾ ಬರೆದಿದ್ದು ಇತ್ತು. ಆಗ ಪೊಲೀಸರು ಸದರಿ ಚೀಟಿಯನ್ನು ಜಪ್ತಿ ಪಡಿಸಿಕೊಂಡು ಕೈ ಬರಹ ತಜ್ಞರಿಗೆ ಕಳುಹಿಸಿದ್ದರು. ಈ ದಿನ ದಿನಾಂಕ: 19-08-2021 ರಂದು ನಾನು ಶಹಾಪುರ ಪೊಲೀಸ ಠಾಣೆಗೆ ಬಂದಿದ್ದು ಇಲ್ಲಿ ನಮ್ಮ ಚಿಕ್ಕಮ್ಮಳ ಮಗ ಹಣಂತನ ಕೇಸಿನ ಕೈಬರಹ ತಜ್ಞರ ವರದಿ ಬಂದಿದ್ದು ಅದನ್ನು ನಾನು ನೋಡಿದೆನು. ಅದರಲ್ಲಿ ಸದರಿ ಕೈಬರಹವು ಮೃತ ಹಣಮಂತನೇ ಬರೆದಿದ್ದು ಎಂಬುದಾಗಿ ವರದಿ ಬಂದಿರುತ್ತದೆ. ಸದರಿ ನಮ್ಮ ಸಹೋದರ ಮೃತ ಹಣಮಂತ ತಂದೆ ಯಂಕಪ್ಪ ದಾಸರ ಈತನ ಸಾವಿಗೆ ಮುತ್ತುರಾಜ ತಂದೆ ಗುರಪ್ಪ ಸಾ: ಮಲ್ಲಾ ಬಿ ಮತ್ತು ಆತನಿಗೆ ಸಪೋರ್ಟ ಮಾಡಿದ 2) ಯಮನಪ್ಪ ತಂದೆ ತಿಮ್ಮಯ್ಯ ದಾಸರ ಸಾ: ಕರಕೆಳ್ಳಿ 3) ನೀಲಮ್ಮ ಗಂಡ ಯಮನಪ್ಪ ದಾಸರ ಸಾ; ಕರಿಕೆಳ್ಳಿ 4) ಶಂಕ್ರಪ್ಪ ತಂದೆ ಯಮನಪ್ಪ ದಾಸರ ಸಾ: ಕರಿಕೆಳ್ಳಿ 5) ಲಂಕೆಮ್ಮ ಗಂಡ ಅಪ್ಪಯ್ಯ ದಾಸರ ಸಾ: ಕೆಲ್ಲೂರ 6) ಲಕ್ಷ್ಮೀಬಾಯಿ ಗಂಡ ದೇವೇಂದ್ರಪ್ಪ ದಾಸರ ಸಾ: ಮುನಮುಟಗಿ 7) ಮರೆಪ್ಪ ಕಕ್ಕಸಗೇರಿ ಎಸ್.ಸಿ. ಚಲುವಾದಿ ಸಾ: ಕಕ್ಕಸಗೇರಿ ರವರುಗಳೇ ಕಾರಣರಾಗಿದ್ದು ಇರುತ್ತದೆ ಆದ್ದರಿಂದ ಮೃತ ಹಣಮಂತ ತಂದೆ ಯಂಕಪ್ಪನ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯನ್ನು ಸ್ವೀಕರಿಸಿಕೊಂಡು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 192/2021 ಕಲಂ 306 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಭೀಗುಡಿ ಪೊಲೀಸ ಠಾಣೆ
61/2021 ಕಲಂ 269, 270, 181 ಐಪಿಸಿ & 5(1) ಕನರ್ಾಟಕಎಪಿಡೆಮಿಕ್ ಡಿಸೀಜ್ ಎಕ್ಟ್-2020 : ದಿನಾಂಕ 18/08/2021 ರಂದು 01.30 ಎ.ಎಮ್.ಕ್ಕೆ ಫಿಯರ್ಾದಿದಾರರು ಶಿರವಾಳ ಗ್ರಾಮದಲ್ಲಿ ಮೊಹರಂ ಮಸೀದಿ ಹತ್ತಿರ ಬಂದೋಬಸ್ತ ಕರ್ತವ್ಯದಲ್ಲಿಇದ್ದಾಗಆರೋಪಿತರು ಸರಕಾರ, ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ, ಮಾನ್ಯ ತಹಸಿಲ್ದಾರರು ಶಹಾಪುರರವರು ಹೊರಡಿಸಿದ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿಕೋವಿಡ್ 19 ಸಂಕ್ರಾಮಿಕರೋಗದ ಬಗ್ಗೆ ಸರಕಾರದ ಮುಂಜಾಗೃತಾ ಕ್ರಮಗಳನ್ನು ಪಾಲಿಸದೇ ಹಾಗೂ ಸಾಮಾಜಿಕಅಂತರ ಕಾಯ್ದುಕೊಳ್ಳದೇ ಮೊಹರಂಕುದುರೆ ಸವಾರರನ್ನು ಮೆರವಣಿಗೆ ಮೂಲಕ ಮಸೀದಿಗೆ ಬಂದು ನಂತರಊರಲ್ಲಿ ಮೆರವಣಿಗೆ ಮಾಡಿಕೊಂಡು ಶಹಾಪುರಕ್ಕೆ ಹೋಗಿ ಮದ್ಯಾಹ್ನ 12.30 ಗಂಟೆಗೆ ಮರಳಿ ಶಿರವಾಳಕ್ಕೆ ಬಂದು ಮತ್ತೆ ಮೆರವಣಿಗೆ ಮಾಡಿಕೋವಿಟ್ 19 ರ ಸಾಂಕ್ರಾಮಿಕರೋಗ ಹರಡುವಿಕೆತಡೆಗಟ್ಟುವಲ್ಲಿಅಸಹಕಾರ ತೋರಿಸಿ ಅತಿವ ನಿರ್ಲಕ್ಷ ವಹಿಸಿರುತ್ತಾರೆ ಅಂತಾ ಫಿಯರ್ಾದಿಯವರ ವರದಿ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ. 134/2021 ಕಲಂ: 323, 324, 504, 506 ಐ.ಪಿ.ಸಿ : ದಿನಾಂಕ: 19.08.2021 ರಂದು ಬೆಳಿಗ್ಗೆ ಆರೋಪಿತನು ತನ್ನ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ಹೊರಗಡೆ ಹೋಗಿದ್ದನು. ಫಿಯರ್ಾದಿ ಹೋಗಿ ಅವನ ಹೆಂಡತಿಗೆ ಈ ದಿವಸ ಮೊಹರಂ ಹಬ್ಬ ಇದೆ ಏಕೆ ಜಗಳ ಆಡುತ್ತೀರಿ ಅಂತಾ ಬುದ್ದಿವಾಗ ಹೇಳಿ ಬಂದಿದ್ದಳು. ನಂತರ ಆರೋಪಿ ಈತನು ಫಿಯರ್ಾದಿ ಮನೆಯ ಹತ್ತಿರ ಬಂದು ಫಿರ್ಯದಿಗೆ ಬೋಸಡಿ ಸೂಳಿ, ನನ್ನ ಹೆಂಡತಿಗೆ ಹೋಗಿ ಚಾಡ ಚುಚ್ಚಿತಿ ರಂಡಿ ಅಂತಾ ಅಂದವನೆ ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ಪೈಪನ್ನು ತೆಗೆದುಕೊಂಡು ಬಂದವನೆ ಫಿಯರ್ಾದಿ ತಲೆಯ ಹೊಡೆದು ರಕ್ತ ಗಾಯ ಪಡಿಸಿ ಹೋಗುವಾಗ ಆರೋಪಿ ರಂಡಿ ಸೂಳಿ ಇವತ್ತ ನನ್ನ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯದಿ ವಗೈರೆ ಇರುತ್ತದೆ.

ಇತ್ತೀಚಿನ ನವೀಕರಣ​ : 20-08-2021 12:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080