ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-08-2022
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 93/2022 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನಾನು ಯಾದಗಿರಿ ಎಸ್.ಪಿ ಆಫಿಸ್ ಹತ್ತಿರ ಇರುವ ಶ್ರೀ ಗುರು ಕಾಂಪ್ಲೆಕ್ಸ್ದಲ್ಲಿ ಹಾಲಿನ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಇರುತ್ತೇನೆ. ನನ್ನ ಹೆಸರಿನ ಮೇಲೆ ಹೊಂಡಾ ಸ್ಕೂಟಿ ಮೋಟರ್ ಸೈಕಲ್ ಇದ್ದು, ಅದರ ನಂ- ಏಂ 32 ಇಖಿ 1172, ಇಟಿರಟಿಜ ಓಠ-ಎಈ39ಇಖಿ4049734, ಅಊಂಖಖಖ ಓಔ-ಒಇ4ಎಈ39ಏಉಎಖಿ017340, ಅಂತಾ ಇರುತ್ತದೆ. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 25,000/-ರೂ|| ಗಳು. ಹೀಗಿದ್ದು ನಾನು ದಿನಾಂಕ 17/07/2022 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಪ್ರತಿ ನಿತ್ಯದಂತೆ ನಮ್ಮ ಅಂಗಡಿ ಮುಂದೆ ನನ್ನ ಸ್ಕೂಟಿ ನಿಲ್ಲಿಸಿ, ಅಂಗಡಿಯಲ್ಲಿ ಉಳಿದುಕೊಂಡಿದ್ದು, ದಿನಾಂಕ 18/07/2022 ರಂದು ಬೆಳಿಗ್ಗೆ 02-30 ಗಂಟೆಗೆ ಎದ್ದು ನೋಡಿದಾಗ ನನ್ನ ಸ್ಕೂಟಿ ಇರಲಿಲ್ಲ. ಅಂಗಡಿಯ ಸುತ್ತಾ-ಮುತ್ತಾ ನೋಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ನಂತರ ನಾನು ನನ್ನ ಅಣ್ಣನಾದ ಸಿದ್ದರಾಜ ತಂದೆ ಬಸವರಾಜ ಚಂದಾಪೂರ ಮತ್ತು ನನ್ನ ಗೆಳೆಯನಾದ ಆನಂದ ತಂದೆ ಅಯ್ಯಣ್ಣ ಪಡಶೆಟ್ಟಿ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಅಲ್ಲಿ-ಅಲ್ಲಿ ಹುಡುಕಾಡಿ ನೋಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಯಾರೋ ಕಳ್ಳರು ನನ್ನ ಸ್ಕೂಟಿ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಸ್ಕೂಟಿ ಮೋಟರ್ ಸೈಕಲ್ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 93/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 94/2022 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ.19/08/2022 ರಂದು 5-10 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು)ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 19/08/2022 ರಂದು 3-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಯಾಕುಬ ಬುಕಾರಿ ದಗರ್ಾಕ್ರಾಸದಲ್ಲಿ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಮಡಿವಾಳಪ್ಪ ಪಿಸಿ-105, ರವಿ ಪಿಸಿ-168 ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಸ್ಥಳಕ್ಕೆ ಹೋಗಿ 4-00 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆರೋಪಿತನು ತನ್ನ ಹೆಸರು ಮೋಹನಸಿಂಗ್ @ ಪಿಂಟು ತಂದೆ ಈಶ್ವರಸಿಂಗ್ ರಜಪೂತ ವ; 35 ಉ; ಕೂಲಿಕೆಲಸ ಜಾ; ರಜಪೂತ ಸಾ; ಕಮಲಾನೆಹರು ಪಾರ್ಕ ಯಾದಗಿರಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) ನಗದು ಹಣ 1100/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 19/08/2022 ರಂದು 4-00 ಪಿಎಂ ದಿಂದ 5-00 ಪಿಎಂ ದವರೆಗೆ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 5-10 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾದಿಕಾರಿರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.94/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪ್ರರ ಪೊಲೀಸ್ ಠಾಣೆ:-
ಗುನ್ನೆ ನಂಬರ 143/2022 ಕಲಂ ಮಹಿಳೆ ಕಾಣೆ : ಇಂದು ದಿನಾಂಕ 19/08/2022 ರಂದು 12.30 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ನಮ್ಮ ತಂದೆ ತಾಯಿಗೆ ಒಟ್ಟು 6 ಜನ ಮಕ್ಕಳಿದ್ದು ಎಲ್ಲರೂ ಸುಮಾರು 6 ವರ್ಷಗಳಿಂದ ಬೇರೆ ಬೇರೆಯಾಗಿ ವಾಸವಾಗಿದ್ದು ಇರುತ್ತದೆ. ಹೀಗಿದ್ದು ನಾನು ನನ್ನ ಹೆಂಡತಿ ರಾಧಿಕಾ ಮತ್ತು ನನ್ನ ಮಕ್ಕಳಾದ ಶ್ರೀದೇವಿ- 7 ವರ್ಷ, ಮಹೇಶ- 4 ವರ್ಷದ ಮಕ್ಕಳೊಂದಿಗೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಹೆಂಡತಿ ರಾಧಿಕಾ ಇವಳು ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದು ಇರುತ್ತದೆ ಹೀಗಿದ್ದು ಆಗಾಗ ಅಂಗನವಾಡಿ ಮೀಟಿಂಗ ಇರುವದಾಗಿ ಶಹಾಪೂರಕ್ಕೆ ಮತ್ತು ಯಾದಗಿರಿಗೆ ಹೋಗಿ ಬರುವುದು ಮಾಡುತ್ತಿದ್ದಳು ಹೀಗಿದ್ದು ದಿನಾಂಕ 30/07/2022 ರಂದು 10.00 ಎ ಎಮ್ ಕ್ಕೆ ಶಹಾಪೂರದಲ್ಲಿ ಮೀಟಿಂಗ ಇದೆ ಎಂದು ಮನೆಯಿಂದ ಹೋದಳು ನಂತರ ನಾನು ಮನೆಯಲ್ಲೆ ಇದ್ದೇನು ಹೀಗಿದ್ದು ಆಗಾಗ ನನ್ನ ಹೆಂಡತಿಗೆ ಪೋನ ಮಾಡುತ್ತಾ ಇದ್ದೇ ಆದರೆ ಅವಳು ಇನ್ನು ಮೀಟಿಂಗ ನಡೆದಿದೆ ಸಾಯಂಕಾಲ ಮೀಟಿಂಗ ಮುಗಿಸಿಕೊಂಡು ಬರುತ್ತೇನೆ ಎಂದು ಹೇಳಿದಳು ನಾನು ಮತ್ತೆ ಮತ್ತೆ ಪೋನ ಮಾಡುತ್ತಾ ಇದ್ದಾಗ ನನ್ನ ಹೆಂಡತಿ ಬರುತ್ತೇನೆ ಎಂದು ಹೇಳುತ್ತಿದ್ದಳು ಹೀಗಿದ್ದು ಸಾಯಂಕಾಲ 4.00 ಗಂಟೆ ಸುಮಾರಿಗೆ ನನ್ನ ಹೆಂಡತಿಯ ಮೊಬೈಲ ಸ್ವಿಚ್ ಆಪ್ ಆಯಿತು ನಂತರ ನಾನು ಮೇನ ರೋಡ ಹತ್ತಿರ ಬಂದಿರ ಬಹುದು ಎಂದು ಬೀರ ನೂರ ಕ್ರಾಸಗೆ ಹೋಗಿ ನೋಡಲಾಗಿ ಅಲ್ಲಿಯೂ ಇರಲಿಲ್ಲ ನಂತರ ಹಾಗೆ ನಾನು ಶಹಾಪೂರಕ್ಕೆ ಬಂದು ಸಿ.ಡಿ.ಪಿ.ಒ ಆಪಿಸ್ ಗೆ ಹೋಗಿ ಕೇಳಲಾಗಿ ಇವತ್ತು ಯಾವುದೇ ಮೀಟಿಂಗ ಇರುವದಿಲ್ಲ ಮತ್ತು ಅವಳು ಇಲ್ಲಿಗೆ ಬಂದಿರುದಿಲ್ಲ ಎಂದರು ನಂತರ ನಾನು ನನ್ನ ತಮ್ಮ ನಾದ ಸಂತೋಷ ಕುಮಾರ ಈತನಿಗೆ ವಿಷಯ ತಿಳಿಸಲಾಗಿ ಅವರು ಸಹ ಊರಲ್ಲಿ ಹುಡುಕಾಡಿದರು ನಂತರ ರಾತ್ರಿಯಲ್ಲಿ ಹುಡುಕಾಡಿ ನನ್ನ ಹೆಂಡತಿಯ ತವರು ಮನೆಯಾದ ಸುರಪೂರ ತಾಲ್ಲುಕಿನ ಅಡ್ಡೊಡಗಿ ಗ್ರಾಮದಕ್ಕೆ ಪೋನ ಮಾಡಿ ನನ್ನ ಅತ್ತೆಯಾದ ಮರೆಮ್ಮ ಇವರಿಗೆ ವಿಚಾರಿಸಲಾಗಿ ಬಂದಿರುವದಿಲ್ಲ ಎಂದು ತಿಳಿಸಿದರು ಎಲ್ಲಾ ಕಡೆ ಪೋನ ಮೂಲಕ ವಿಚಾರಿಸಿ ನಂತರ ಬೆಳಿಗಿನ ಜಾವ ನಮ್ಮ ಸಂಬಂದಿಕರು ಇರುವ ಮತ್ತು ನನ್ನ ಹೆಂಡತಿಯ ತವರು ಮನೆಗೆ ಹೋಗಿ ವಿಚಾರಿಸಲಾಗಿ ಎಲ್ಲಿಯೂ ನನ್ನ ಹೆಂಡತಿ ಸಿಗಲಿಲ್ಲ ಕಾರಣ ನನ್ನ ಹೆಂಡತಿಯಾದ ಶ್ರೀಮತಿ ರಾಧಿಕಾ ಗಂ ಮಲ್ಲಿಕಾಜರ್ುನ ಕವಲಿ ವ|| 27 ವರ್ಷ ಜಾ|| ಹಿಂದು ಬೇಡರ ಉ|| ಅಂಗನವಾಡಿ ಶಿಕ್ಷಕಿ ಸಾ|| ಪರಸಾಪೂರ ತಾ|| ಶಹಾಪೂರ ತಾ|| ಯಾದಗಿರ ಇವಳು ಪರಸಾಪೂರದ ನಮ್ಮ ಮನೆಯಿಂದ ಶಹಾಪೂರದ ಮೀಟಿಂಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಇನ್ನು ಮನೆಗೆ ಬರದೆ ಕಾಣೆಯಾಗಿದ್ದು ಅವನು ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿ ನೀಡುತ್ತಿದ್ದು ಕಾಣೆಯಾದ ನನ್ನ ಹೆಂಡತಿ ಮೇಲೆ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ.
ಕಾಣೆಯಾದ ನನ್ನ ಹೆಂಡತಿಯ ಚಹರೆ ಪಟ್ಟಿ ಈ ಕೇಳಗಿನಂತಿರುತ್ತವೆ.
ಹೆಸರು ಃ- ಶ್ರೀಮತಿ ರಾಧಿಕಾ ಗಂ ಮಲ್ಲಿಕಾಜರ್ುನ ಕವಲಿ
ಬಣ್ಣ ಃ- ಕಪ್ಪು ಬಣ್ಣ
ಎತ್ತರ ಃ- 4.9 ಫೀಟ್ ಇದ್ದು.
ಭಾಷೆ ಃ- ಕನ್ನಡ
ಧರಿಸಿದ ಬಟ್ಟೆ ಃ- ನೀಲಿ ಬಣ್ಣದ ಸೀರೆ ಮತ್ತು ಬ್ಲೌಜ ಹಾಕಿದ್ದು ಇರುತ್ತದೆ. .
ಸದರಿ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 143/2022 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 61/2022 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:19.08.2022 ರಂದು 8:30 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಶ್ರೀಶೈಲ್ ಅಂಬಾಟಿ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ಇಂದು ದಿನಾಂಕ:19.08.2022 ರಂದು 6:30 ಪಿ.ಎಮ್.ಕ್ಕೆ ನಾನು ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣೆಯ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಪ್ರಭುಗೌಡ ಹೆಚ್.ಸಿ-120 ರವರು ನನಗೆ ತಿಳಿಸಿದ್ದು ಏನೆಂದರೆ ತೀರ್ಥ ಗ್ರಾಮದ ಅಗಸಿ ಹತ್ತಿರದಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮುಂಬಯಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮುಖಾಂತರ ರವಾನಿಸಿ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 8:25 ಪಿ.ಎಮ್ ಕ್ಕೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:61/2022 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
ಮಲ್ಲಪ್ಪ ತಂದೆ ನಿಂಗಪ್ಪ ಬಡಿಗೇರ ವ:48 ವರ್ಷ, ಉ:ಕೂಲಿಕೆಲಸ, ಜಾ:ಹಿಂದೂ ಹರಿಜನ ಸಾ|| ತೀರ್ಥ ತಾ:ಹುಣಸಗಿ ಜಿ||ಯಾದಗಿರಿ
ಜಪ್ತು ಪಡಿಸಿಕೊಂಡ ಮುದ್ದೆಮಾಲು.
1) ನಗದು ಹಣ=2640/- ರೂ
2) ಒಂದು ಬಾಲ್ ಪೆನ್ ಅ.ಕಿ=00=00 ರೂ
ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ.ಕಿ=00=00 ರೂ
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 132/2022 ಕಲಂ: 279, 338 ಐಪಿಸಿ ಮತ್ತು 187 ಐಎಂವಿ ಯಾಕ್ಟ್ : ಇಂದು ದಿನಾಂಕ 19/08/2022 ರಂದು 1.50 ಪಿಎಮ್ ಕ್ಕೆ ಸರಕಾರಿ ಆಸ್ಪತ್ರೆ ಕೆಂಭಾವಿಯಿಂದ ದೂರವಾಣಿ ಮೂಲಕ ಎಂ ಎಲ್ ಸಿ ವಸೂಲಾದ ಮೇರೆಗೆ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಾದ ಶ್ರೀ ಖಾದರಭಾಷಾ ತಂದೆ ಮುತರ್ುಜಾ ಮನಿಯಾರ ವ|| 25ವರ್ಷ ಜಾ|| ಮುಸ್ಲಿಂ ಉ|| ಕೂಲಿ ಸಾ|| ಗುಂಡಕನಾಳ ತಾ|| ತಾಳಿಕೋಟಿ ಈತನಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 2.15 ಪಿಎಂ ಕ್ಕೆ ಬಂದಿದ್ದು ಸದರಿ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ನಾನು ಖಾದರಭಾಷಾ ತಂದೆ ಮುತರ್ುಜಾ ಮನಿಯಾರ ಸಾ|| ಗುಂಡಕನಾಳ ಇದ್ದು ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಇದ್ದು ಉಪಜೀವನ ಸಾಗಿಸುತ್ತಿದ್ದೇನೆ. ಹೀಗಿದ್ದು ಶಹಾಪೂರ ತಾಲೂಕಿನ ವನದುರ್ಗ ಗ್ರಾಮದಲ್ಲಿ ನಮ್ಮ ಸಂಬಂಧಿಕರಾದ ಮೈಬೂಬ ಮುಲ್ಲಾ ಇವರ ಮೆಡಿಕಲ್ ಅಂಗಡಿ ಪೂಜಾ ಕಾರ್ಯಕ್ರಮ ಇದ್ದುದರಿಂದ ನನ್ನ ಹೆಂಡತಿಯಾದ ಶಮೀನಾಬೇಗಂ ಇವಳು ಮೊನ್ನೆ ದಿನಾಂಕ 17/08/2022 ರಂದು ವನದುರ್ಗ ಗ್ರಾಮಕ್ಕೆ ಹೋಗಿದ್ದಳು. ವನದುರ್ಗ ಗ್ರಾಮದಲ್ಲಿ ನಿನ್ನೆ ಮೆಡಿಕಲ್ ಅಂಗಡಿ ಪೂಜಾ ಕಾರ್ಯಕ್ರಮ ಮುಗಿದಿದ್ದರಿಂದ ನನ್ನ ಹೆಂಡತಿಯಾದ ಶಮೀನಾಬೇಗಂ ಇವಳಿಗೆ ವನದುರ್ಗದಿಂದ ನಮ್ಮ ಊರಾದ ಗುಂಡಕನಾಳ ಗ್ರಾಮಕ್ಕೆ ಕರೆದುಕೊಂಡು ಬರಲು ಇಂದು ದಿನಾಂಕ 19/08/2022 ರಂದು 12.30ಪಿಎಂ ಸುಮಾರಿಗೆ ಗುಂಡಕನಾಳ ಗ್ರಾಮದಿಂದ ನನ್ನ ಸೈಕಲ್ ಮೋಟಾರ ನಂ ಕೆಎ 28 ಇಎಫ್ 5457 ನೇದ್ದರ ಮೇಲೆ ಹೊರಟು 1.30 ಪಿಎಂ ಸುಮಾರಿಗೆ ಪರಸನಳ್ಳಿ ಗ್ರಾಮ ದಾಟಿ ಪರಸನಳ್ಳಿ ಕ್ಯಾಂಪಿನ ಮುಂದೆ ಹೋಗುತ್ತಿದ್ದಾಗ ಎದುರಿನಿಂದ ಒಂದು ಕಾರಿನ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಹೋಗುತ್ತಿದ್ದ ನನ್ನ ಸೈಕಲ್ ಮೋಟಾರಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ಕೆಳಗೆ ಬಿದ್ದಿದ್ದು ನಾನು ಹೆಲ್ಮೆಟ್ ಧರಿಸಿದ್ದರಿಂದ ನನ್ನ ತಲೆಗೆ ಯಾವುದೇ ಗಾಯವಾಗಲಿಲ್ಲ. ಆದರೆ ನನ್ನ ಸೈಕಲ್ ಮೋಟಾರಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ಕೆಳಗೆ ಬಿದ್ದು ನನ್ನ ಬಲಗಾಲಿನ ಪಾದದ ಮೇಲ್ಭಾಗದಲ್ಲಿ ಕಾಲಿಗೆ ಭಾರೀ ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿದ್ದು, ಬಲಗಾಲಿನ ತೊಡೆಗೆ, ಎಡಗಾಲಿನ ಪಾದದ ಮೇಲೆ ತರಚಿದ ರಕ್ತಗಾಯವಾಗಿದ್ದು ಬೆನ್ನಿಗೆ ಸೊಂಟಕ್ಕೆ ಗುಪ್ತಗಾಯವಾಗಿ ಬಿದ್ದು ಒದ್ದಾಡುತ್ತಿದ್ದಾಗ ಅಪಘಾತವಾದ ಸ್ಥಳದ ಹತ್ತಿರ ಇದ್ದ ಪರಸನಳ್ಳಿಯ ಇಬ್ಬರು ವ್ಯಕ್ತಿಗಳು ತಕ್ಷಣ ಬಂದು ನನಗೆ ಎಬ್ಬಿಸಿ ನೀರು ಕುಡಿಸಿದ್ದು ನಾನು ಎದ್ದು ಕುಳಿತು ಅಪಘಾತ ಮಾಡಿದ ಕಾರಿನ ನಂಬರ ನೋಡಲಾಗಿ ಕೆಎ 33 ಎ 6135 ನೇದ್ದು ಇದ್ದು ಅಪಘಾತ ಮಾಡಿದ ಚಾಲಕನು ಕಾರನ್ನು ಬಿಟ್ಟು ಓಡಿ ಹೋಗಿದ್ದು ಅವನ ಹೆಸರು ವಿಳಾಸ ಗೊತ್ತಾಗಿಲ್ಲ. ನನಗೆ ಎಬ್ಬಿಸಿದ ಇಬ್ಬರು ವ್ಯಕ್ತಿಗಳ ಹೆಸರು ಕೇಳಲಾಗಿ ಚಂದಪ್ಪ ತೋಟದ ಸಾ|| ಪರಸನಳ್ಳಿ ಕ್ಯಾಂಪ್ ಮತ್ತು ಶರಣಗೌಡ ಪೊ|| ಪಾ|| ಅಂತಾ ತಿಳಿಸಿದ್ದು ಅವರಿಬ್ಬರೂ ಕೂಡಿ ನನಗೆ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಕೆಂಭಾವಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದರಿಂದ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದು ವೈದ್ಯರ ಸಲಹೆಯ ಮೇರೆಗೆ ಕಲಬುರಗಿಗೆ ನನ್ನ ಸಂಬಂಧಿಕರ ಜೊತೆಗೆ ಹೆಚ್ಚಿನ ಉಪಚಾರ ಕುರಿತು ಹೋಗುತ್ತೇನೆ. ಕಾರಣ ನಾನು ನನ್ನ ಸೈಕಲ್ ಮೋಟಾರ ನಂ ಕೆಎ 28 ಇಎಫ್ 5457 ನೇದ್ದರ ಮೇಲೆ ಕೆಂಭಾವಿ ಸುರಪೂರ ಮುಖ್ಯ ರಸ್ತೆಯ ಮೇಲೆ ಪರಸನಳ್ಳಿ ಕ್ಯಾಂಪಿನ ಮುಂದೆ ಹೋಗುತ್ತಿದ್ದಾಗ ಎದುರಿನಿಂದ ಕಾರು ನಂ ಕೆಎ 33 ಎ 6135 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಸೈಕಲ್ ಮೋಟಾರಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರೀ ಪ್ರಮಾಣದ ಗಾಯವಾಗಲು ಕಾರಣನಾಗಿದ್ದು ಸದರಿ ಕಾರು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 132/2022 ಕಲಂ 279, 338 ಐಪಿಸಿ ಮತ್ತು 187 ಐಎಂವಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 128/2022 ಕಲಂ 32, 34 ಕನರ್ಾಟಕಅಭಕಾರಿಕಾಯ್ದೆ 1965 : ದಿನಾಂಕ: 19/08/2022ರಂದು8-30 ಪಿ.ಎಂ.ಕ್ಕೆ ಸ.ತ ಪಿರ್ಯಾದಿದಾರರಾದ ಶ್ರೀ ಕೃಷ್ಣಾ ಸುಬೇದಾರಪಿ.ಎಸ್.ಐರವರುಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲುನೊಂದಿಗೆಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆಇಂದುದಿನಾಂಕ: 19/08/2022ರಂದು5-45 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸುರಪೂರದಅಂಬಿಗರಚೌಡಯ್ಯಕಟ್ಟೆಯ ಹತ್ತಿರ ಸಾರ್ವಜನಿಕಖುಲ್ಲಾಜಾಗದಲ್ಲಿಆರೋಪಿತನುರಟ್ಟಿನ ಬಾಕ್ಸನಲ್ಲಿ ಮದ್ಯವನ್ನು ಸಂಗ್ರಹಿಸಿ ಮದ್ಯ ಮಾರಾಟ ಮಾಡಲು ಪರವಾನಿಗೆಇಲ್ಲದೆ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಬೆಕೆನ್ನುವಷ್ಟರಲ್ಲಿಆರೋಪಿತನು ನಮ್ಮನ್ನು ನೋಡಿ ಓಡಿ ಹೋಗಿದ್ದುಸ್ಥಳದಲ್ಲಿ ರಟ್ಟಿನಬಾಕ್ಸನಲ್ಲಿ ಹೈವಾಡ್ರ್ಸ ವಿಸ್ಕಿ 90 ಎಮ್ಎಲ್ನ96 ಪೌಚುಗಳು ಇದ್ದು, ಪ್ರತಿಯೊಂದಕ್ಕೆ35=13 ರೂಗಳು, ಹೀಗೆ ಒಟ್ಟು8640 ಎಮ್.ಎಲ್ನ ಮಧ್ಯವಿದ್ದುಅದರ ಅ.ಕಿ 3,372=00 ರೂ. ಕಿಮ್ಮತ್ತುಇರುತ್ತದೆ. ಕಿಮ್ಮತ್ತುಇರುತ್ತದೆ. ಸದರಿ ಮದ್ಯವನ್ನುಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನೀಡಿದ್ದು, ಸದರಿ ವರದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂ.128/2022 ಕಲಂ: 32, 34 ಕೆ.ಇ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣದದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 144/2022.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ : ಇಂದು ದಿನಾಂಕ 19/08/2022 ರಂದು 21-00 ಗಂಟೆಗೆ ಶ್ರೀ ರಾಹುಲ್ ಪವಾಡೆ ಪಿ.ಎಸ್.ಐ (ಕಾ.ಸು). ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ: 19/08/2022 ರಂದು 17-30 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ, ಶಹಾಪೂರ ನಗರದ ಗಂಗಾನಗರದ ಮಡೆರಗಡ್ಡಿಯ ಹತ್ತಿರ ತನ್ನ ಪಾನ ಡೆಬ್ಬಿಯ ಪಕ್ಕದಲ್ಲಿ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ, ಠಾಣೆಯಲ್ಲಿ ಹಾಜರಿದ್ದ ಶರಣಪ್ಪ ಹೆಚ್.ಸಿ.164. ಲಕ್ಕಪ್ಪ ಹೆಚ್.ಸಿ.102. ಭೀಮನಗೌಡ ಪಿ.ಸಿ.402. ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ ಭೀಮನಗೌಡ ಪಿ.ಸಿ.402. ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು 17-40 ಗಂಟೆಗೆ ಹೇಳಿ ಕಳುಹಿಸಿದಂತೆ ಸದರಿಯವರು ನಗದಲ್ಲಿ ಹೋಗಿ ಇಬ್ಬರು ಪಂಚರಾದ 1] ಶ್ರೀ ಮಲ್ಲೇಶಿ ತಂದೆ ರಾಯಪ್ಪ ನಾಯ್ಕೊಡಿ @ ಮಂದಾಪೂರ ವ|| 51 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಮಂದಾಪೂರ ಓಣಿ ಶಹಾಪೂರ 2) ಶ್ರೀ ಲಕ್ಷ್ಮಣ್ಣಸಿಂಗ್ ತಂದೆ ಬಾಲಾಜಿಸಿಂಗ್ ರಜಪೂತ ವ|| 60 ಜಾ|| ರಜಪೂತ ಉ|| ಚಾಲಕ ಸಾ|| ಆದಿಲ್ಪೂರ ಹಳಿಪೇಠ ಶಹಾಪೂರ. ಇವರಿಗೆ ಕರೆದುಕೊಂಡು ಬಂದು 17-50 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ, ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ನಾನು ಮತ್ತು ಪಂಚರು, ಸಿಬ್ಬಂದಿ ಜನರು, ಎಲ್ಲರು ಕೂಡಿ ಖಾಸಗಿ ಜೀಪ ನೇದ್ದರಲ್ಲಿ ಕುಳಿತುಕೊಂಡು 18-00 ಗಂಟೆಗೆ ಠಾಣೆಯಿಂದ ಹೋರಟೆವು. ನೇರವಾಗಿ 18-10 ಗಂಟೆಗೆ ಗಂಗಾನಗರದ ಮಡೆರಗಡ್ಡಿ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಜೀಪನಿಲ್ಲಿಸಿ, ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ಮಡೆರಗಡ್ಡಿ ಹತ್ತಿರ 18-20 ಗಂಟೆಗೆ ಹೋಗಿ ಮನೆಗಳ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿ ತನ್ನ ಪಾನ ಡೆಬ್ಬಿಯ ಪಕ್ಕದಲ್ಲಿ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 18-30 ಗಂಟೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನುಕುಲ ಮಾಡಿಕೊಟ್ಟಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು. ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಬಸವರಾಜ ತಂದೆ ಧರ್ಮಣ್ಣ ಕೋನೆರ ವ|| 55 ಜಾ|| ಕಬ್ಬಲಿಗ ಉ|| ವ್ಯಾಪಾರ ಸಾ|| ಗಂಗಾನಗರ ಶಹಾಪೂರ ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಶಹಾಪೂರ ನಗರದ ಗಂಗಾನಗರದ ಮಡೆರಗಡ್ಡಿಯ ಹತ್ತಿರ ಪಾನ ಡೆಬ್ಬಿಯ ಪಕ್ಕದಲ್ಲಿ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ನಾನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1] 90 ಎಂ.ಎಲ್.ನ ಒಟ್ಟು 11 ಓರಿಜಿನಲ್ ಚಾಯ್ಸ್ ಡಿಲಕ್ಸ ವಿಸ್ಕಿ ಪೌಚ್ಗಳು (ಪಾಕೇಟ್ಗಳು) ಇದ್ದು ಒಂದು ಪಾಕೇಟ್ನ ಕಿಮ್ಮತ್ತು 35.13 ರೂ ಅಂತಾ ಇದ್ದು, ಒಟ್ಟು 11 ಓರಿಜಿನಲ್ ಚಾಯ್ಸ್ ಡಿಲಕ್ಸ ವಿಸ್ಕಿ ಪೌಚ್ಗಳು ಕಿಮ್ಮತ್ತು 386=43 ರೂ ಗಳಾಗುತ್ತಿದ್ದು, 2] 2 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ 3] ಮದ್ಯ ಕುಡಿಯಲು ಉಪಯೋಗಿಸಿದ 90 ಎಂ.ಎಲ್.ನ 2 ಖಾಲಿ ಓರಿಜಿನಲ್ ಚಾಯ್ಸ್ ಡಿಲಕ್ಸ ವಿಸ್ಕಿ ಪೌಚ್ಗಳು ಇದ್ದವು. ಅ:ಕಿ: 00=00 ರೂ, ಒಟ್ಟು 11 ಮದ್ಯದ ಪಾಕೇಟ್ಗಳಲ್ಲಿ 90 ಎಂ.ಎಲ್.ನ 1 ಓರಿಜಿನಲ್ ಚಾಯ್ಸ್ ಡಿಲಕ್ಸ ವಿಸ್ಕಿ ಪೌಚ್ ಪಂಚರ ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 18-30 ಗಂಟೆಯಿಂದ 19-30 ಗಂಟೆಯವರೆಗೆೆ ಆರೋಪಿತನ ಮನೆಯ ಮುಂದಿನ ಟೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 20-00 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲುಗಳನ್ನು ಹಾಜರುಪಡಿಸಿ 21-00 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 144/2022 ಕಲಂ 15(ಎ) 32( 3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 58/2022 ಕಲಂ 15(ಎ) 32(3) ಕೆ.ಇ ಆ್ಯಕ್ಟ್: ಇಂದು ದಿನಾಂಕ: 19/08/2022 ರಂದು 08.45 ಪಿಎಮ್ ಕ್ಕೆ ಆರೋಪಿತಳಾದ ರುಕ್ಕಿಬಾಯಿ ಗಂಡ ಅಂಬು ಪವಾರ, ವ:35ವರ್ಷ, ಜಾ:ಲಂಬಾಣಿ, ಉ:ಮನೆಗೆಲಸ, ಸಾ:ನಾಗನಟಗಿ ಮೇಘಾ ನಾಯಕ ತಾಂಡಾ ಇವಳು ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ನಾಗನಟಗಿ ಮೇಘಾನಾಯಕ ತಾಂಡಾದ ಸೇವಾಲಾಲ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದು, ಆಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ 08.50 ಪಿಎಮ್ ಕ್ಕೆ ದಾಳಿ ಮಾಡಿದಾಗ ಮದ್ಯ ಕುಡಿಯಲು ಬಂದ ಜನರು ಓಡಿ ಹೋದರು. ಆರೋಪಿತಳೂ ಸಹ ತಾಂಡಾದಲ್ಲಿನ ಮನೆಗಳ ಸಂಧಿಯಲ್ಲಿ ಓಡಿಹೋದಳು. ಸ್ಥಳದಲ್ಲಿದ್ದ ಮದ್ಯವನ್ನು ಪರಿಶೀಲಿಸಿ ನೋಡಲಾಗಿ 1) 650 ಎಂ.ಎಲ್. ನ 06 ಕಿಂಗ್ ಫಿಶರ್ ಸ್ಟ್ರಾಂಗ್ ಪ್ರೀಮಿಯಮ್ ಬೀರ್ ಬಾಟಲ್ ಗಳು ಅ.ಕಿ:1080/- 2) 180 ಎಂ.ಎಲ್. ನ 06 ಮೆಕ್ ಡೋಲ್ಸ್ ವಿಸ್ಕಿ ಬಾಟಲ್ ಗಳು ಅ.ಕಿ:1189/-ರೂ 3) 02 ಪ್ಲಾಸ್ಟಿಕ್ ಗ್ಲಾಸ್ಗಳು ಇದ್ದು ಅವುಗಳನ್ನು ಜಪ್ತಿಪಂಚನಾಮೆಯ ಮೂಲಕ ವಶಕ್ಕೆ ಪಡೆದು 10.30 ಪಿಎಮ್ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಒಂದು ವರದಿಯನ್ನು ನೀಡಿದ್ದರ ಆಧಾರದ ಮೇಲಿಂದ ಠಾಣಾ ಗುನ್ನೆ ನಂ: 58/2022 ಕಲಂ 15(ಎ), 32(3) ಕೆಇ ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ.32, 34 ಕನರ್ಾಟಕ ಅಭಕಾರಿ ಕಾಯ್ದೆ : ದಿನಾಂಕ:19/08/2022 ರಂದು ಸಾಯಂಕಾಲ 18.00 ಗಂಟೆಗೆ ಆರೋಪಿತನು ಅಬಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸರಾಯಿ ಸಂಗ್ರಹಣೆ ಮಾಡಿಕೊಂಡು ಅರಕೇರಾ(ಜೆ) ಕ್ರಾಸ್ ಹತ್ತಿರು ಇರುವ ರಾಜ ಡಾಬಾದಲ್ಲಿ ಸಾರ್ವಜನಿಕರಿಗೆ ಅಭಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಮದ್ಯ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶೋರಾಪೂರ & ಮಾನ್ಯ ಸಿಪಿಐ ಸಾಹೇಬರು ಹುಣಸಗಿ ಮಾರ್ಗದರ್ಶನದಲ್ಲಿ ಪಿಯರ್ಾದಿ ಹಾಗೂ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಅರಕೇರಾ(ಜೆ) ಕ್ರಾಸ್ ಹತ್ತಿರ ಇರುವ ರಾಜ ಡಾಬಾಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ, ಆರೋಪಿತನಿಗೆ ಹಿಡಿದಿದ್ದು, ಆರೋಪಿತನು ಮಾರಾಟ ಮಾಡುತ್ತಿದ್ದ 1) ಕಿಂಗ್ ಪಿಷರ್ ಸ್ಟ್ರಾಂಗ್ ಬಿಯರ್ ಬಾಟಲಿ 650 ಎಮ್.ಎಲ್ ಇದ್ದದ್ದು, ಒಂದು ಬಾಟಲಿಗೆ 160/-.ರೂಗಳಂತೆ ಇದ್ದು, ಒಟ್ಟು 13 ಬಾಟಲಿಗಳಿಗೆ ಅ:ಕಿ:2080/- ರೂ.ಗಳು, 2) ಕಿಂಗ್ ಪಿಷರ್ ಸ್ಟ್ರಾಂಗ್ ಬಿಯರ್ ಬಾಟಲಿ 330 ಎಮ್.ಎಲ್ ಇದ್ದದ್ದು, ಒಂದು ಬಾಟಲಿಗೆ 95/-.ರೂಗಳಂತೆ ಇದ್ದು, ಒಟ್ಟು 6 ಬಾಟಲಿಗಳಿಗೆ ಅ:ಕಿ:570/- ರೂ.ಗಳು, 3) ಬ್ಯಾಗಪೇಪರ್ ವಿಸ್ಕಿ 180 ಎಮ್.ಎಲ್ ಟೆಟ್ರಾಪ್ಯಾಕಗಳು ಇದ್ದು, ಒಂದಕ್ಕೆ 106.23/- ರೂ.ಗಳಂತೆ ಒಟ್ಟು 12 ಟೆಟ್ರಾಪ್ಯಾಕಗಳು ಅ:ಕಿ:1274.76/- ರೂ.ಗಳು, 4) ಓರಿಜಿನಲ್ ಚ್ವಾಯಿಸ್ ಟೆಟ್ರಾಪ್ಯಾಕಗಳು 90 ಎಮ್.ಎಲ್ ಇದ್ದು, ಒಂದಕ್ಕೆ 35.13/- ರೂಗಳಂತೆ, ಒಟ್ಟು 51 ಟೆಟ್ರಾಪ್ಯಾಕಗಳು ಅ:ಕಿ:1791.63/- ರೂ.ಗಳು, 5) ಎಮ್.ಸಿ ವ್ಹಿಸ್ಕಿ ಬಾಟಲಿಗಳು 180 ಎಮ್.ಎಲ್ ಇದ್ದು, ಒಂದಕ್ಕೆ 198.23/- ರೂಗಳಂತೆ, ಒಟ್ಟು 3 ಬಾಟಲಿಗಳು ಅ:ಕಿ:594.69/- ರೂ.ಗಳು, 6) ಓಲ್ಡ್ ಟವರನ್ ವಿಸ್ಕಿ ಟೆಟ್ರಾಪ್ಯಾಕಗಳು 180 ಎಮ್.ಎಲ್ ಇದ್ದು, ಒಂದಕ್ಕೆ 86.75/- ರೂಗಳಂತೆ, ಒಟ್ಟು 7ಟೆಟ್ರಾಪ್ಯಾಕಗಳು ಅ:ಕಿ:607.25/- ರೂ.ಗಳು, ಸದರಿ ಒಟ್ಟು ಮದ್ಯದ ಅ.ಕಿ. 6918.33/- ರೂ. ಕಿಮ್ಮತಿನ ಮದ್ಯವನ್ನು ಜಪ್ತಿ ಮಾಡಿಕೊಂಡು ಸ್ಥಳದಲ್ಲಿಯೇ ಪಂಚನಾಮೆ ಬರೆದುಕೊಂಡು ಬಂದಿದ್ದು ಜಪ್ತಿದ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 67/2022 ಕಲಂ.32, 34 ಕನರ್ಾಟಕ ಅಭಕಾರಿ ಕಾಯ್ದೆ : ದಿನಾಂಕ:19/08/2022 ರಂದು 20.45 ಗಂಟೆಗೆ ಆರೋಪಿತರು ಅಬಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸರಾಯಿ ಸಂಗ್ರಹಣೆ ಮಾಡಿಕೊಂಡು ಹುಣಸಗಿ ಸೀಮಾಂತರದ ಮದ್ದಿನಮನಿ ಕ್ಯಾಂಪ್ ಹತ್ತಿರು ಇರುವ ಸಿದ್ದಾರ್ಥ ಡಾಬಾದಲ್ಲಿ ಸಾರ್ವಜನಿಕರಿಗೆ, ಅಭಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಮದ್ಯ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶೋರಾಪೂರ & ಮಾನ್ಯ ಸಿಪಿಐ ಸಾಹೇಬರು ಹುಣಸಗಿ ಮಾರ್ಗದರ್ಶನದಲ್ಲಿ ಪಿಯರ್ಾದಿ ಹಾಗೂ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ, ಆರೋಪಿತರಿಗೆ ಹಿಡಿದಿದ್ದು, ಆರೋಪಿತರು ಮಾರಾಟ ಮಾಡುತ್ತಿದ್ದ 1) ವೀರಯ್ಯ ತಂದೆ ನೀಲಕಂಠಯ್ಯ ಪುರಾಣಿಕಮಠ ವಯಾ-42 ವರ್ಷ, ಜಾ:ಜಂಗಮ ಉ:ಡಾಬಾನಡೆಸಿಕೊಂಡು ಹೋಗುವದು ಸಾ:ಯಡ್ರಾಮಿ ತಾ:ಯಡ್ರಾಮಿ ಜಿ:ಕಲಬುರಗಿ ಅಂತಾ ತಿಳಿಸಿದ್ದು, ಇನ್ನೊಬ್ಬನ ಹೆಸರು ವಿಚಾರಿಸಿದ್ದು, ನಾಗೇಶ ತಂದೆ ನಿಂಗಣ್ಣ ನರಬೋಳಿ ವಯಾ-22 ವರ್ಷ, ಜಾ:ಲಿಂಗಾಯತ ಉ:ಸಿದ್ದಾರ್ಥ ಡಾಬಾದಲ್ಲಿ ವೇಟರ್ ಕೆಲಸ ಸಾ:ನರಬೋಳ ತಾ:ಜೇವರಗಿ ಜಿ:ಕಲಬುರಗಿ ಅಂತಾ ತಿಳಿಸಿದ್ದು, ಸದರಿ ಡಾಬಾದಲ್ಲಿ ಮಾರಾಟ ಮಾಡಲು ಇಟ್ಟಿದ್ದ 1) ಓರಿಜಿನಲ್ ಚ್ವಾಯಿಸ್ ಟೆಟ್ರಾಪ್ಯಾಕಗಳು 90 ಎಮ್.ಎಲ್ ಇದ್ದು, ಒಂದಕ್ಕೆ 35.13/- ರೂಗಳಂತೆ, ಒಟ್ಟು 11 ಟೆಟ್ರಾಪ್ಯಾಕಗಳು ಅ:ಕಿ:386.43/- ರೂ.ಗಳು, 2) ಹೈವಾರ್ಡಸ್ ಟೆಟ್ರಾಪ್ಯಾಕಗಳು 90 ಎಮ್.ಎಲ್ ಇದ್ದು, ಒಂದಕ್ಕೆ 35.13/- ರೂಗಳಂತೆ, ಒಟ್ಟು 6 ಟೆಟ್ರಾಪ್ಯಾಕಗಳು ಅ:ಕಿ:210.78/- ರೂ.ಗಳು, 3) ಬ್ಯಾಗಪೇಪರ್ ವಿಸ್ಕಿ 180 ಎಮ್.ಎಲ್ ಟೆಟ್ರಾಪ್ಯಾಕಗಳು ಇದ್ದು, ಒಂದಕ್ಕೆ 106.23/- ರೂ.ಗಳಂತೆ ಒಟ್ಟು 5 ಟೆಟ್ರಾಪ್ಯಾಕಗಳು ಅ:ಕಿ:531.15/- ರೂ.ಗಳು, 4) ಎಮ್.ಸಿ ವ್ಹಿಸ್ಕಿ ಬಾಟಲಿ 180 ಎಮ್.ಎಲ್ ಇದ್ದು, ಒಂದಕ್ಕೆ 198.23/- ರೂಗಳಂತೆ, ಒಟ್ಟು 3 ಬಾಟಲಿಗಳು ಅ:ಕಿ:594.69/- ರೂ.ಗಳು, 5) ಓಲ್ಡ್ ಟವರನ್ ವಿಸ್ಕಿ ಟೆಟ್ರಾಪ್ಯಾಕಗಳು 180 ಎಮ್.ಎಲ್ ಇದ್ದು, ಒಂದಕ್ಕೆ 86.75/- ರೂಗಳಂತೆ, ಒಟ್ಟು 2 ಟೆಟ್ರಾಪ್ಯಾಕಗಳು ಅ:ಕಿ:173.5/- ರೂ.ಗಳು, 6) ಕಿಂಗ್ ಪಿಷರ್ ಸ್ಟ್ರಾಂಗ್ ಬಿಯರ್ ಬಾಟಲಿ 650 ಎಮ್.ಎಲ್ ಇದ್ದದ್ದು, ಒಂದು ಬಾಟಲಿಗೆ 160/-.ರೂಗಳಂತೆ ಇದ್ದು, ಒಟ್ಟು 8 ಬಾಟಲಿಗಳಿಗೆ ಅ:ಕಿ:1280/- ರೂ.ಗಳು, 7)ಕಿಂಗ್ ಪಿಷರ್ ಸ್ಟ್ರಾಂಗ್ ಬಿಯರ್ ಬಾಟಲಿ 330 ಎಮ್.ಎಲ್ ಇದ್ದದ್ದು, ಒಂದು ಬಾಟಲಿಗೆ 95/-.ರೂಗಳಂತೆ ಇದ್ದು, ಒಟ್ಟು 4 ಬಾಟಲಿಗಳಿಗೆ ಅ:ಕಿ:380/- ರೂ.ಗಳು, 8) ಕಿಂಗ್ ಪಿಷರ್ ಪ್ರಿಮಿಯಮ್ ಬಿಯರ್ ಬಾಟಲಿ 650 ಎಮ್.ಎಲ್ ಇದ್ದದ್ದು, ಒಂದು ಬಾಟಲಿಗೆ 160/-.ರೂಗಳಂತೆ ಇದ್ದು, ಒಟ್ಟು 4 ಬಾಟಲಿಗಳಿಗೆ ಅ:ಕಿ:640/- ರೂ.ಗಳು, 9) ಐ.ಬಿ ವಿಸ್ಕಿ ಬಾಟಲಿ 180 ಎಮ್.ಎಲ್ ಇದ್ದದ್ದು, ಒಂದು ಬಾಟಲಿಗೆ 198.21 ರೂ.ಗಳಂತೆ ಇದ್ದು, ಒಟ್ಟು 5 ಬಾಟಲಿಗಳಿಗೆ ಅ:ಕಿ:991.5 ರೂ.ಗಳು ಇದ್ದು, ಸದರಿ ಒಟ್ಟು ಮದ್ಯದ ಅ.ಕಿ. 5188.5/- ರೂ. ಕಿಮ್ಮತಿನ ಮದ್ಯವನ್ನು ಜಪ್ತಿ ಮಾಡಿಕೊಂಡು ಸ್ಥಳದಲ್ಲಿಯೇ ಪಂಚನಾಮೆ ಬರೆದುಕೊಂಡು ಬಂದಿದ್ದು ಜಪ್ತಿದ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.