ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-11-2022

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 152/2022 ಕಲಂ 279,338, 304(ಎ) ಐಪಿಸಿ : ಇಂದು ದಿನಾಂಕಃ 19-11-2022 ರಂದು 8-30 ಎ.ಎಮ್ ಕ್ಕೆ ಶ್ರೀಮತಿ ದವಲಮಾಗಂಡ ಸೈಯ್ಯದಸಾಬ ಹವಾಲ್ದಾರ ಸಾಃ ರಾಜನಕೊಳ್ಳೂರ ತಾಃ ಹುಣಸಗಿಇವರುಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿಃ 18/11/2022 ರಂದು 5-30 ಪಿ.ಎಮ್ ಸುಮಾರಿಗೆ ನನ್ನಗಂಡನಾದ ಸೈಯ್ಯದಸಾಬ ಹಾಗು ಆತನ ಸ್ನೇಹಿತಇಸ್ಮಾಯಿಲ್ತಂದೆ ಶರಮೋದ್ದಿನ್ದೊಡ್ಡಮನಿ ಇಬ್ಬರೂ ಕೆಲಸದ ನಿಮಿತ್ಯ ಸುರಪೂರದಲ್ಲಿರುವ ನಮ್ಮ ಸಂಬಂಧಿಕನಾದಜಹೀರಅಹ್ಮದ್ಇವರ ಮನೆಗೆ ಹೋಗಿ ಬರುತ್ತೇವೆಂದು ಮನೆಯಲ್ಲಿ ನಮಗೆ ಹೇಳಿ ನಮ್ಮ ಹೊಸ ಹಿರೋ ಹೆಚ್.ಎಫ್. 100 ಮೋಟಾರ ಸೈಕಲ್ ಚೆಸ್ಸಿ ನಂ. ಒಃಐಊಂಅ047ಓ9ಅ51219 ನೇದ್ದರ ಹೋದರು. ನಂತರರಾತ್ರಿ 7-40 ಗಂಟೆಯ ಸುಮಾರಿಗೆಇಸ್ಮಾಯಿಲ್ದೊಡ್ಡಮನಿ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ನಿನ್ನಗಂಡ ಸೈಯ್ಯದಸಾಬ ಇಬ್ಬರೂ ರಾಜನಕೊಳೂರದಿಂದ ದೇವಾಪೂರ ಮಾರ್ಗವಾಗಿ ಸುರಪೂರಕಡೆಗೆ ಹೋಗುತ್ತಿರುವಾಗ ಸೈಯ್ಯದಸಾಬನು ಮೋಟಾರ ಸೈಕಲ್ಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದರಿಂದ ನಾನು ಆತನಿಗೆ ನಿಧಾನವಾಗಿ ನಡೆಸುಅಂತ ಹೇಳಿದರೂ ಕೇಳದೇ ಅದೇ ವೇಗದಲ್ಲಿ ನಡೆಸಿಕೊಂಡು ಹೊರಟಿದ್ದಾಗ 7-30 ಪಿ.ಎಮ್ ಸುಮಾರಿಗೆ ದೇವಾಪೂರ ಹಳ್ಳದ ಸೇತುವೆ ಸಮೀಪ ವೇಗದಲ್ಲಿ ಮೋಟಾರ ಸೈಕಲ್ ಸ್ಕೀಡ್ ಆಗಿದ್ದರಿಂದ ನಾವಿಬ್ಬರೂ ಮೋ.ಸೈಕಲ್ ಸಮೇತಡಾಂಬಉ್ಪ ರಸ್ತೆಯ ಮೇಲೆ ಬಿದ್ದ ಪರಿಣಾಮ ನನ್ನಎದೆಗೆ ಒಳಪೆಟ್ಟಾಗಿರುತ್ತದೆ. ನಿನ್ನಗಂಡನತಲೆಗೆ ಭಾರಿರಕ್ತಗಾಯವಾಗಿಅರೆಪ್ರಜ್ಞಾವಸ್ಥೆಯಲ್ಲಿಇರುತ್ತಾನೆ. ಈ ಬಗ್ಗೆ ಸುರಪೂರದಲ್ಲಿರುವಜಹೀರ್ಅಹ್ಮದನಿಗೆ ಫೋನ್ ಮಾಡಿ ತಿಳಿಸಿದ್ದು, ಅಪಘಾತ ಸ್ಥಳಕ್ಕೆ ಬರುವದಾಗಿ ಹೇಳಿರುತ್ತಾನೆ ಅಂತ ತಿಳಿಸಿದನು. ನಂತರ ನಮ್ಮ ಸಂಬಂಧಿಕರಾದಜಹೀರ್ಅಹ್ಮದ್ ಹಾಗು ನಜೀರಅಹ್ಮದ್ಇಬ್ಬರೂ ಸುರಪೂರದಿಂದಒಂದು ಖಾಸಗಿ ಅಂಬ್ಯೂಲೇನ್ಸ್ತಗೆದುಕೊಂಡುಅಪಘಾತ ಸ್ಥಳಕ್ಕೆ ಹೋಗಿ ಇಬ್ಬರೂ ಗಾಯಾಳುಗಳಿಗೆ ಚಿಕಿತ್ಸೆಗಾಗಿ ಸುರಪೂರ ಸಕರ್ಾರಿಆಸ್ಪತ್ರೆಗೆಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದುಇರುತ್ತದೆ. ಸುರಪೂರಆಸ್ಪತ್ರೆಯಲ್ಲಿ ವೈದ್ಯರುಇಬ್ಬರಿಗೂ ಪ್ರಥಮೋಪಚಾರ ಮಾಡಿ ಹೆಚ್ಚಿನಚಿಕಿತ್ಸೆಗಾಗಿಕರೆದುಕೊಂಡು ಹೋಗುವಂತೆ ಸಲಹೆ ನೀಡಿದರಿಂದಅಂಬ್ಯೂಲೇನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆಕರೆದುಕೊಂಡು ಹೋಗುವಾಗ ಶಹಾಪೂರ ಹೊಸ ಬಸ್ ನಿಲ್ದಾಣದ ಹತ್ತಿರ ನನ್ನಗಂಡನು ನಿನ್ನೆರಾತ್ರಿ 10-50 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದರಿಂದ ಗಾಯಾಳು ಇಸ್ಮಾಯಿಲ್ಇತನಿಗೆ ಬೇರೆ ಖಾಸಗಿ ವಾಹನದಲ್ಲಿ ಕಲಬುರಗಿಜೀಮ್ಸ್ಆಸ್ಪತ್ರೆಗೆ ಕಳುಹಿಸಿ ಜಹೀರ್ಇತನುಅಲ್ಲಿಂದ ನನ್ನಗಂಡನ ಶವವನ್ನು ಮರಳಿ ತಗೆದುಕೊಂಡು ಬಂದು ಸುರಪೂರ ಸಕರ್ಾರಿಆಸ್ಪತ್ರೆಯ ಶವಾಗಾರಕೋಣೆಯಲ್ಲಿ ಹಾಕಿರುತ್ತಾನೆ. ನಂತರ ನಾನು ಮತ್ತು ನನ್ನಅತ್ತೆ ಹುಸೇನಬೀ, ನಮ್ಮೂರಿನಅಬ್ದುಲ್ ಘನಿ ತಂದೆ ಪೀರಸಾಬ ದೊಡ್ಡಮನಿ ಎಲ್ಲರೂ ರಾಜನಕೊಳುರದಿಂದ ಸುರಪೂರ ಸಕರ್ಾರಿಆಸ್ಪತ್ರೆಗೆ ಬಂದು ನನ್ನಗಂಡನ ಮೃತದೇಹ ನೋಡಿರುತ್ತೇವೆ. ಕಾರಣ ನನ್ನಗಂಡನುಅತಿವೇಗ ಮತ್ತುಅಲಕ್ಷತನದಿಂದ ಮೋ.ಸೈಕಲ್ ನಡೆಸುವಾಗ ವೇಗದಲ್ಲಿ ಮೋ.ಸೈಕಲ್ ಸ್ಕೀಡ್ ಆಗಿ ಬಿದ್ದ ಪರಿಣಾಮ ನನ್ನಗಂಡನತಲೆಗೆ ಭಾರಿರಕ್ತಗಾಯವಾಗಿ ಮೃತಪಟ್ಟಿದ್ದು, ಹಾಗು ಇಸ್ಮಾಯಿಲ್ಇತನಿಗೆ ಭಾರಿಗುಪ್ತಗಾಯವಾಗಿರುವದರಿಂದ ಮೋ.ಸೈಕಲ್ ನಡೆಸಿ ಮೃತಪಟ್ಟಿರುವ ನನ್ನಗಂಡನ ವಿರುದ್ದ ಕಾನೂನು ಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 152/2022 ಕಲಂ: 279, 338, 304(ಎ) ಐ.ಪಿ.ಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 168/2022 ಕಲಂ: 00 ಒಕ ಕಅ : ಕಳೆದ 06 ತಿಂಗಳುಗಳ ಹಿಂದೆ ಈರಮ್ಮಳಿಗೆ ಶ್ರೀನಿವಾಸ ಎಂಬಾತನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ನಂತರ ಕಳೆದ 20 ದಿನಗಳ ಹಿಂದೆ ಫಿರ್ಯಾದಿಯ ಹೆಂಡತಿ ಯಾದ ಆನಂದಮ್ಮ ಎಂಬಾಕೆ ತನ್ನ ಮಗಳಿಗೆ ತವರು ಮನೆಗೆ ಕರೆದುಕೊಂಡು ಬಂದಿರುತ್ತಾಳೆ. ಹೀಗಿದ್ದು ದಿನಾಂಕ 11.11.2022 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯ ಹೆಂಡತಿ ಆನಂದಮ್ಮ ತಮ್ಮ ಮನೆಯಲ್ಲಿದ್ದಾಗ ಅವರ ಮಗಳು ಈರಮ್ಮಳು ಮನೆಯ ಮುಂದೆ ಇದ್ದಳು. ನಂತರ ಸ್ವಲ್ಪ ಹೊತ್ತಿನ ನಂತರ ನೋಡಿದಾಗ ಆಕೆ ಕಾಣಿಸಲಿಲ್ಲ. ಆ ನಂತರ ಫಿರ್ಯಾದಿ ಮತ್ತು ಆತನ ಹೆಂಡತಿ ಇಬ್ಬರು ಹುಡುಕಾಡಿದರೂ ಸಹ ತಮ್ಮ ಮಗಳು ಪತ್ತೆಯಾಗದೇ ಇದ್ದಾಗ ತಮ್ಮ ಮಗಳನ್ನು ಪತ್ತೆ ಮಾಡಿಕೊಡುವಂತೆ ಇಂದು ತಡವಾಗಿ ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಸಲ್ಲಿಸಿದ್ದು ಅದರ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ. 168/2022 ಕಲಂ: 00 ಒಕ ಕಅ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: ಪಿ.ಎ.ಆರ್ ನಂಬರ 77/2022 : ಇಂದು ದಿನಾಂಕ 19/11/2022 ರಂದು ಮುಂಜಾನೆ 10.30 ಎ.ಎಂ ಕ್ಕೆೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವಿಠೋಬಾ ಎ,ಎಸ್,ಐ ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ವ್ಯಕ್ತಿಯನ್ನು ಹಾಜರ ಪಡಿಸಿ ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ ಸಾರಾಂಶವೆನೆಂದರೆ. ನಾನು ಮಾನ್ಯ ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರ ಆದೇಶದಂತೆ ನಿನ್ನೆ ದಿನಾಂಕ 18/11/2022 ರಂದು ರಾತ್ರಿ ಶಹಾಪೂರ ನಗರದಲ್ಲಿ ವಿಷೇಶ ರಾತ್ರಿ ಗಸ್ತು ಕರ್ತವ್ಯ ಕುರಿತು ನಾನು ಮತ್ತು ಸಂಗಡ ಶ್ರಿ ಬಾಬು ಹೆಚ್ ಸಿ-162 ರವರೊಂದಿಗೆ ರಾತ್ರಿ 11.00 ಪಿ,ಎಂ ಕ್ಕೆ ಶಹಾಪೂರ ನಗರದಲ್ಲಿ ಹೊರಟು ಶಹಾಪೂರ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಾ ದಿನಾಂಕ: 19/11/2022 ರಂದು ಬೆಳಗಿನ ಜಾವ 04-45 ಎ.ಎಂ. ಸುಮಾರಿಗೆ ನಗರದ ಬಸವೇಶ್ವರ ವ್ರತ್ತದ ಹತ್ತಿರ ಬಂದಾಗ ಅಲ್ಲಿ ಒಬ್ಬ ವ್ಯಕ್ತಿ ಒಂದು ಕಿಲಿ ಹಾಕಿದ ಶಟರ ಅಂಗಡಿ ಕಳ್ಳತನ ಮಾಡುವ ಉದ್ದೇಶದಿಂದ ಇಣುಕಿ-ಇಣುಕಿ ನೋಡುತಿದ್ದನು. ಸದರಿಯವನ ಮೇಲೆ ಸಂಶಯ ಬಂದು ಅವನ ಹತ್ತಿರ ಹೋಗುತಿದ್ದಾಗ ನಾವು ಸಮವಸ್ತ್ರದಲ್ಲಿರವುದನ್ನು ಕಂಡು ಸದರಿಯವನು ಅಲ್ಲಿಂದ ಓಡಿ ಹೋಗಲು ಪ್ರಾರಂಬಿಸಿದನು. ತಕ್ಷಣ ನಾವು ಅವನ ಬೆನ್ನು ಹತ್ತಿ ಅವನಿಗೆ ಹಿಂಬಾಲಿಸಿ ಎಸ್.ಬಿ.ಐ ಬ್ಯಾಂಕ ಮುಂದೆ ಬೆಳಗಿನ ಜಾವ 5-10 ಎ.ಎಂ ಕ್ಕೆ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ತೊದಲ ನುಡಿಯುತ್ತಾ ಅಪ್ರಾ-ತಪ್ರಾ ಹೇಳಲಾರಂಬಿಸಿದನು, ಆತನಿಗೆ ಪುನಃ ಪುನ: ವಿಚಾರಣೆ ಮಾಡಲಾಗಿ ಅವನು ತನ್ನ ಹೆಸರು 1) ಎರುಕಲ ಕವಡಿ ಖಾಧರ ತಂದೆ ಎರುಕಲ ಕವಡಿ ಲಕ್ಷ್ಮೀನಾರಾಯಣ ವಯ: 29 ವರ್ಷ ಜಾ: ಪ.ಜಾತಿ ಸಾ: ಮನೆ ನಂ: 26-33-3 ಚಿಗುರಮನ ಪೇಟ ದೋನ ಕರನೂಲ (ಆಂದ್ರ ಪ್ರದೇಶ) ಅಂತ ತಿಳಿಸಿದನು. ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ಮುಂಜಾಗ್ರತ ಕ್ರಮವಾಗಿ ತಾಬೆಗೆ ತೆಗೆದುಕೊಂಡು ಸದರಿ ವ್ಯಕ್ತಿಯೊಂದಿಗೆ ಮರಳಿ ಠಾಣೆಗೆ ಮುಂಜಾನೆ 05-45 ಎ.ಎಂ ಕ್ಕೆ ಬಂದು. ಸದರಿ ವ್ಯಕ್ತಿ ಈ ಮುಂಚೆ ಎಲ್ಲಿಯಾದರೂ ಸ್ವತ್ತಿನ ಅಪರಾಧ ಮಾಡಿದ್ದಾನೆೆಂದು ಕುಲಂಕéುಶವಾಗಿ ವಿಚಾರಣೆ ಮಾಡಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ ಮುಂಜಾನೆ 10.30 ಎಎಂ.ಕ್ಕೆ ಮುಂದಿನ ಕ್ರಮಕ್ಕಾಗಿ ಸದರಿ ಆರೋಪಿತನನ್ನು ಹಾಜರ ಪಡಿಸಿ ಸರಕಾರದ ಪರವಾಗಿ ವರದಿಯ ಮೂಲಕ ವಿನಂತಿಸಿಕೊಂಡಿದ್ದು ಸದರಿ ವರದಿಯ ಆಧಾರದ ಮೇಲಿಂದ ಠಾಣೆಯ ಠಾಣೆಯ ಪಿ,ಎ,ಆರ್, ನಂ: 77/2022 ಕಲಂ 109 ಸಿ,ಆರ್,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 20-11-2022 11:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080