ಅಭಿಪ್ರಾಯ / ಸಲಹೆಗಳು

                                                                                                                ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-12-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 176/2022 ಕಲಂ 498(ಎ), 323, 354, 504, 506 ಸಂಗಡ 34 ಐಪಿಸಿ ಮತ್ತು ಕಲಂ: 3 & 4 ಡಿ.ಪಿ. ಆಕ್ಟ್ -1961: ಫಿರ್ಯಾದಿದಾರಳೀಗೆ ದಿನಾಂಕ 26.01.2019 ರಂದು ಫಿರ್ಯಾದಿಯ ಅತ್ತೆಯ ಮನೆಯಲ್ಲಿ ಫೀರ್ಯಾದಿಯ ಗಂಡನಾದ ಆರೋಪಿ ಸೈಯದ್ ಅಲ್ತಾಫ್ ಹುಸೇನ್ ಇತನಿಗೆ 50 ಗ್ರಾಂ ಬಂಗಾರದ ಆಭರಗಳು ಮತ್ತು 100 ಗ್ರಾಂ ಬೆಳ್ಳಿಯ ಆಭರಗಳು ಮತ್ತು 2 ಲಕ್ಷ ರೂಪಾಯಿಗಳನ್ನು ಉಡುಗರೆ ರೂಪದಲ್ಲಿ ಕೊಟ್ಟು ಸಂಪ್ರದಾಯದಂತೆ ಹಿರಿಯ ಸಮಕ್ಷಮದಲ್ಲಿ ಮದುವೆ ಮಾಡಿ ಕೊಟ್ಟಿರುತ್ತಾರೆ. ಮದುವೆ ಆದಾಗಿನಿಂದ ಸುಮಾರು 5-6 ತಿಂಗಳ ವರೆಗೆ ಫಿರ್ಯಾದಿಯೊಂದಿಗೆ  ಅನೂನ್ಯವಾಗಿದ್ದರು. ನಂತರ ದಿನಗಳಲ್ಲಿ ಆರೋಪಿತರು ಪೀರ್ಯಾದಿಗೆ ತನ್ನ ಹೊಟೇಲ್ ವ್ಯಾಪಾರವನ್ನು ಅಭಿವೃದ್ಧಿ ಮಾಡಲು 1 ಲಕ್ಷ ರೂಪಾಯಿಗಳನ್ನು ವರದಕ್ಷಣೆ ರೂಪದಲ್ಲಿ ತನ್ನ ತವರು ಮನೆಯಿಂದ ತರುವಂತೆ ಫಿರ್ಯಾದಿಗೆ ಕುಡಿದ ಅಮಲಿನಲ್ಲಿ ಹೊಡೆ-ಬಡೆ ಮಾಡುತ್ತ ಮಾನಸೀಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತ ಬಂದಿದ್ದು ಅಲ್ಲದೇ ಫಿರ್ಯಾದಿಯು  ಗಂಡನ ಕಿರುಕುಳ ತಾಳದೇ ತನ್ನ ತಂದೆಯವರೊಂದಿಗೆ ತವರು ಮನೆಗೆ ಬಂದಾಗ ಆರೋಪಿತರೆಲ್ಲಾರು ಕೂಡಿಕೊಂಡು ಆಕೆಯ ತವರು ಮನೆಗೆ ಹೋಗಿ ಅಕೆಯೊಂದಿಗೆ ಪುನಃ ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿಯು ವಿಚಾರ ಮಾಡಿಕೊಂಡು ತಡವಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಗುನ್ನೆ ನಂ. 176/2020 ಕಲಂ 498(ಎ), 323, 354, 504, 506 ಸಂಗಡ 34 ಐಪಿಸಿ ಮತ್ತು ಕಲಂ: 3 & 4 ಡಿ.ಪಿ. ಆಕ್ಟ್ -1961 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 133/2022 ಕಲಂ 380 ಐಪಿಸಿ:ಫಿಯರ್ಾದಿ ಸಾರಾಂಶವೇನೆಂದರೆ, ನಾನು 2 ವರ್ಷಗಳಿಂದ ಗುತ್ತಿಗೆಆಧಾರದ ಮೇಲೆ 108 ಅಂಬುಲೆನ್ಸ್ ಸೇವೆಯ ಜಿಲ್ಲಾ ವ್ಯವಸ್ಥಾಪಕನಾಗಿ  ಕೆಲಸ ನಿರ್ವಹಿಸುತ್ತೇನೆ. ಶ್ರೀ ಸಂತೋಶ್ ಬೋಡ, ತಂದೆ ಪಂಡ್ರಿನಾಥ್ ಬೋಡ ಸಾ|| ಕುಂಬಾರ ವಾಡ ಹನುಮಾನ್ ನಗರ ಬೀದರ್ ಇವರು 108 ಅಂಬುಲೆನ್ಸ್ನ ಪ್ರೊಗ್ರಾಮ್ ಮ್ಯಾನೇಜರ್ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಸದ್ಯ ಯಾದಗಿರಿಯಲ್ಲಿ ಒಟ್ಟು 12, 108 ಅಂಬುಲೆನ್ಸ್ ವಾಹನಗಳು ಕಾರ್ಯ ನಿರ್ವಹಿಸುತ್ತವೆ, ಸದ್ರಿ ವಾಹನಗಳಿಗೆ ಸಕರ್ಾದಿಂದ ಮಂಜೂರಾದ 01 ವೇಂಟಿಲೇಟರ್ ಮತ್ತು 01 ಡಿಫೀಬ್ರಿಲೇಟರ್ಗಳನ್ನು 2018 ರಲ್ಲಿ ಅಳವಡಿಸಲಾಗಿದೆ. ಹೀಗಿದ್ದು ಇದೇ ವರ್ಷ ಜನವರಿಯಲ್ಲಿ 108 ಅಂಬುಲೆನ್ಸ್ ವಾಹನ ನಂ ಕೆಎ 51 ಜಿ 5442 ನೇದಕ್ಕೆ ಕರ್ತವ್ಯದಲ್ಲಿದ್ದಾಗ ಗುಲ್ಬರ್ಗ ಹತ್ತಿರ ರಸ್ತೆ ಅಪಘಾತವಾಗಿ ವಾಹನವು ಜಖಂ ಗೊಂಡಿರುತ್ತದೆ. ಸದ್ಯ ವಾಹನವು ಗುಲ್ಬರ್ಗದ ಕಾರ್ ಗ್ಯಾರೇಜ್ನಲ್ಲಿದ್ದು ಇಲ್ಲಿವರೆಗು ಇನ್ನು ದುರಸ್ತಿ ಆಗಿರುವುದಿಲ್ಲ, ಅದರಲ್ಲಿದ್ದ 01 ವೇಂಟಿಲೇಟರ್ ಮತ್ತು 01 ಡಿಫೀಬ್ರಿಲೇಟರ್ ನೇದನ್ನು ದಿನಾಂಕ 05-09-2022 ರಂದು ನಾನು ತೆಗೆದುಕೊಂಡು ಬಂದು ಯಾದಗಿರಿ ಜಿಲ್ಲಾ ಆಸ್ಪತ್ರೆಯ ಹಿಂದಿರುವ 108 ಅಂಬುಲೆನ್ಸ್ ಸಿಬ್ಬಂದಿ ವಿಶ್ರಾಂತಿ ಕೋಣೆಯಲ್ಲಿ ಇಟ್ಟಿರುತ್ತೇನೆ, ನಂತರ ದಿನಾಂಕ 14-09-2022 ರಂದು ನಾನು ಸದರಿ ರೋಮಿಗೆ ಹೋಗಿ ನೋಡಲಾಗಿ ನಾನು ಇರಿಸಿದ್ದ 01 ವೇಂಟಿಲೇಟರ್, ಅ,ಕಿ 1,30,000 /-ರೂ ಮತ್ತು 01 ಡಿಫೀಬ್ರಿಲೇಟರ್, ಅ,ಕಿ 1,68,000 /- ರೂ ನೇದವುಗಳು ಇರಲಿಲ್ಲ. ಕೂಡಲೇ ನಾನು ನಮ್ಮ ಪ್ರೊಗ್ರಾಮ್ ಮೇನೇಜರ್ ಆದ ಸಂತೋಷ್ ಬೋಡ ರವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಲಾಗಿ ಪರಿಶೀಲಿಸಿದರು, ಆಗ ನಾವು ಇಬ್ಬರು ಕೂಡಿ ಆ ಕೋಣೆಯಲ್ಲಿ ಕರ್ತವ್ಯದ ಮೇಲೆ ಸದ್ರಿ ಕೋಣೆಯಲ್ಲಿ ವಾಸವಿದ್ದ ಗಜಾನಂದ ತಂದೆ ಬೀಮಣ್ಣ, ಮಲ್ಲಿಕಾಜರ್ುನ ತಂದೆ ನಾಗರೆಡ್ಡಿ, ಶಾಂತರಾಜ್ ತಂದೆ ಮುತ್ತಾಯಪ್ಪ ಹಾಗೂ ಡೇವಿಡ್ ತಂದೆ ಸಿಮೆಂಟ್ ಇವರಿಗೆ ಕೂಡ ಈ ವಿಷಯ ತಿಳಿಸಿ ವಿಚಾರಿಸಿದರೂ ಸದರಿ ವಸ್ತುಗಳು ಪತ್ತೆಯಾಗಿರುವುದಿಲ್ಲ. ಯಾರೊ ಕಳ್ಳರು ರೋಮಿನಲ್ಲಿ ಯಾರೂ ಇರಲಾರದ ಸಮಯ ನೋಡಿ ಒಟ್ಟು 2,98,000 ರೂ ಕಿಮ್ಮತ್ತಿನ 01 ವೇಂಟಿಲೇಟರ್ ಮತ್ತು 01 ಡಿಫೀಬ್ರಿಲೇಟರ್ ನೇದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ವಿಷಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಕೆಲವು ಸಿಬ್ಬಂದಿಗಳಿಗೆ ವಿಚಾರಣೆ ಮಾಡಿದರೂ ಸದರಿ ವಸ್ತುಗಳು ಸಿಗದೇ ಇದ್ದ ಕಾರಣ ತಡವಾಗಿ ಇಂದು ದಿನಾಂಕ 19-12-2022 ರಂದು ಠಾಣೆಗೆ ಬಂದು ದೂರು ನೀಡುತ್ತಿದ್ದು ಕಳ್ಳರನ್ನು ಪತ್ತೆಮಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 133/2022 ಕಲಂ 380 ಐಪಿದಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 136/2022 ಕಲಂ 379 ಐಪಿಸಿ: ಇಂದು ದಿನಾಂಕ 19.12.2022 ರಂದು ಸಾಯಂಕಾಲ 6 ಗಂಟೆಗೆ ಶಂಕ್ರಪ್ಪ ತಂದೆ ಗುರುಲಿಂಗಪ್ಪ ಅವಂಟಿ, ವ|| 45 ವರ್ಷ, ಜಾ|| ಲಿಂಗಾಯತ, ಉ|| ಕೆ.ಐ.ಎ.ಡಿ.ಬಿ ಕೈಗಾರಿಕ ಪ್ರದೇಶ ಸೈಟ್ ಸುಪರವೈಜರ್, ಸಾ|| ಮಲ್ಹಾರ ಗ್ರಾಮ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿರುತ್ತಾರೆ. ದೂರಿನ ಸಾರಾಂಶವೇನೆಂದರೆ, ನಾನು ಕಳೆದ ಸುಮಾರು 7 ವರ್ಷಗಳಿಂದ ಬಾಡಿಯಾಳ-ಕಡೇಚೂರು ಗ್ರಾಮಗಳ ಸೀಮಾಂತರದಲ್ಲಿದ್ದ ಕನರ್ಾಟಕ ಕೈಗಾರಿಕ ಪ್ರದೇಶ ಅಭಿವೃದ್ದಿ ಮಂಡಳಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೈಟ್ ಸುಪರವೈಜರ್ ಅಂತಾ ಕೆಲಸ ಮಾಡುತ್ತೇನೆ. ಹೀಗಿದ್ದು ಇಂದು ದಿನಾಂಕ 19.12.2022 ರಂದು ಎಂದಿನಂತೆ ನಾನು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಮ್ಮ ಕೈಗಾರಿಕ ಪ್ರದೇಶದಲ್ಲಿದ್ದ ನಮ್ಮ ಆಫೀಸ್ಗೆ ಹೋಗಿದ್ದೆ. ನಂತರ ಕೈಗಾರಿಕ ಪ್ರದೇಶದಲ್ಲಿ ತಿರುಗಾಡಿ ಮಧ್ಯಾಹ್ನದ ವೇಳೆ ನಮ್ಮ ಆಫೀಸ್ ಹತ್ತಿರ ಹೋದಾಗ ಆಫೀಸ್ ಪಕ್ಕದ ಖುಲ್ಲಾ ಸ್ಥಳದಲ್ಲಿ ಹಾಕಿದ್ದ ಕಬ್ಬಿಣದ ನೀರಿನ ವಾಲ್ಗಳ ಕಡೆಗೆ ನೋಡಿದ್ದೆ. ವಾಲ್ಗಳು ಕಡಿಮೆ ಕಂಡಿದ್ದರಿಂದ ನಾನು ನೀರಿನ ವಾಲ್ಗಳನ್ನು ಎಣಿಸಿದೆ. ಅದರಲ್ಲಿ ಮೂರು ನೀರಿನ ವಾಲ್ಗಳು ಕಡಿಮೆ ಇದ್ದವು. ಈ ಬಗ್ಗೆ ನಾನು ನಮ್ಮ ಇಲಾಖೆಯ ಸುಭಾಷ ಉಪ-ಅಭಿವೃದ್ದಿ ಅಧಿಕಾರಿಗಳು ಇವರಿಗೆ ಫೋನ್ಮಾಡಿ ತಿಳಿಸಿದ್ದೆ. ಸುಭಾಷ ಸರ್ ರವರು ಕೆಲಸದ ನಿಮಿತ್ಯ ಕೇಂದ್ರ ಸ್ಥಾನದಲ್ಲಿಲ್ಲದ ಕಾರಣ ನನಗೆ ಠಾಣೆಗೆ ಹೋಗಿ ದೂರು ನೀಡುವಂತೆ ತಿಳಿಸಿದ್ದಾರೆ. ಯಾರೋ ಕಳ್ಳರು ನಮ್ಮ ಕನರ್ಾಟಕ ಕೈಗಾರಿಕ ಪ್ರದೇಶ ಅಭಿವೃದ್ದಿ ಮಂಡಳಿಯ ಇಲಾಖೆಯ ಕಾಯರ್ಾಲಯ ಪಕ್ಕದಲ್ಲಿಟ್ಟಿದ್ದ ಕಬ್ಬಿಣದ ನೀರಿನ ವಾಲ್ಗಳ ಪೈಕಿ ಸುಮಾರು 24,500 ರೂಪಾಯಿಗಳ ಕಿಮ್ಮತ್ತು ಬೆಲೆ ಬಾಳುವ 3 ಕಬ್ಬಿಣದ ನೀರಿನ ವಾಲ್ಗಳನ್ನು ಇಂದು ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ಮಧ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನೀರಿನ ವಾಲ್ಗಳನ್ನು ಕಳುವು ಮಾಡಿದ ಕಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ. ನೀರಿನ ವಾಲ್ಗಳು ಕಳುವಾಗಿದ್ದ ಸ್ಥಳ ಕಡೇಚೂರು ಗ್ರಾಮ ಸೀಮಾಂತರದ ವ್ಯಾಪ್ತಿಗೊಳಪಟ್ಟಿದೆ ಅಂತಾ ಆಪಾದನೆ.  

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 140/2022 ಕಲಂ: 279, 338 ಐಪಿಸಿ: ಇಂದು ದಿನಾಂಕ:19/12/2022 ರಂದು 6-45 ಪಿಎಮ್ ಕ್ಕೆ ಶ್ರೀ ಭೀಮರಾಯ ತಂದೆ ಸೋಮಣ್ಣ ಯಲ್ಹೇರಿ, ವ:30, ಜಾ:ಉಪ್ಪಾರ, ಉ:ಕೂಲಿ ಸಾ:ಖಾನಾಪೂರ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ತಂದೆ-ತಾಯಿಗೆ ನಾವು 3 ಜನ ಗಂಡು ಮಕ್ಕಳು ಇರುತ್ತೇವೆ. ನಮ್ಮ ತಂದೆಯಾದ ಸೋಮಣ್ಣ ತಂದೆ ಮರೆಪ್ಪ ಯಲ್ಹೇರಿ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ:18/12/2022 ರಂದು ಸಾಯಂಕಾ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ನಮ್ಮ ತಂದೆಯಾದ ಸೋಮಣ್ಣ ಈತನು ನಮ್ಮ ಮೋಟರ್ ಸೈಕಲ್ ನಂ. ಕೆಎ 33 ಎಲ್ 6649 ನೇದಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಲ್ಲಿ ತನ್ನ ಮೋಟರ್ ಸೈಕಲ್ ಮೇಲೆ ನಮ್ಮೂರ ಸಮೀಪ ಇರುವ ಪೆಟ್ರೋಲ್ ಪಂಪಿಗೆ ಹೋದನು. ನಾನು ಮನೆಯಲ್ಲಿದ್ದೇನು. ಸಾಯಂಕಾಲ 4 ಗಂಟೆ ಸುಮಾರಿಗೆ ನಮ್ಮೂರ ಶರಣಪ್ಪ ತಂದೆ ಯಂಕಪ್ಪ ತಿಪ್ಪನಟಗಿ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಿಮ್ಮ ತಂದೆ ಮೋಟರ್ ಸೈಕಲ್ ಮೇಲೆ ಪೆಟ್ರೋಲ್ ಪಂಪಿಗೆ ಪೆಟ್ರೋಲ್ ಹಾಕಿಸಲು ಬರುತ್ತಿದ್ದವನಿಗೆ ಪೆಟ್ರೋಲ್ ಬಂಕ ಹತ್ತಿರ ಕಾರ ಅಪಘಾತವಾಗಿದೆ ನೀವು ಬೇಗ ಬನ್ನಿ ಎಂದು ಹೇಳಿದಾಗ ನಾನು ಮತ್ತು ಹಣಮಂತ ತಂದೆ ಮರೆಪ್ಪ ರಾಯನೋರ ಇಬ್ಬರೂ ಸೇರಿ ನಮ್ಮೂರ ಸಮೀಪ ಇರುವ ಕಿಲ್ಲನಕೇರಾ ಪೆಟ್ರೋಲ್ ಪಂಪಿಗೆ ಹೋಗಿ ನಮ್ಮ ತಂದೆಗೆ ನೋಡಿದೇವು. ಅಪಘಾತದಲ್ಲಿ ನಮ್ಮ ತಂದೆಗೆ ತಲೆಗೆ ಭಾರಿ ಒಳಪೆಟ್ಟಾಗಿ ಕಿವಿ ಮತ್ತು ಬಾಯಿಯಿಂದ ರಕ್ತಸ್ರಾವವಾಗಿತ್ತು. ಎಡಮೊಳಕಾಲಿಗೆ ರಕ್ತಗಾಯ ಮತ್ತು ಎಡ ಮೊಳಕೈಗೆ ತರಚಿದ ಗಾಯಗಳಾಗಿದ್ದವು. ಸದರಿ ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ನಮ್ಮೂರ ಶರಣಪ್ಪನಿಗೆ ಕೇಳಿದಾಗ ಅವನು ಹೇಳಿದ್ದೇನಂದರೆ ನಾನು ಮತ್ತು ಗೋವಿಂದಪ್ಪ ಕೊಂಚೆಟ್ಟಿ ಇಬ್ಬರೂ ಯಾದಗಿರಿ-ಶಹಾಪೂರ ಮೇನ ರೋಡ ಮೇಲೆ ನಮ್ಮೂರ ಸಮೀಪ ಇರುವ ಕಿಲ್ಲನಕೇರಾ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೊರಗಡೆ ಬರುತ್ತಿದ್ದಾಗ ನಿಮ್ಮ ತಂದೆಯು ಖಾನಾಪೂರದಿಂದ ಪೆಟ್ರೋಲ್ ಬಂಕ ಸಮೀಪ ಬರುತ್ತಿದ್ದವನಿಗೆ ಯಾದಗಿರಿ-ಶಹಾಪೂರ ಮೇನ ರೋಡ ಸದರಿ ಪೆಟ್ರೋಲ್ ಬಂಕ ಸಮೀಪ ಯಾದಗಿರಿ ಕಡೆಯಿಂದ ಹೊರಟಿದ್ದ ಕಾರ ನಂ. ಕೆಎ 33 ಬಿ 2771 ನೇದನ್ನು ಅದರ ಚಾಲಕನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ತಂದೆಗೆ ಡಿಕ್ಕಿಪಡಿಸಿದ್ದರಿಂದ ನಿಮ್ಮ ತಂದೆ ಮೋಟರ್ ಸೈಕಲ್ ಸಮೇತ ಕೆಳಗಡೆ ಬಿದ್ದು ಭಾರಿ ಗಾಯಗೊಂಡಿರುತ್ತಾರೆ ಎಂದು ಹೇಳಿದನು. ನಾವು ಅಲ್ಲಿಯೇ ನಿಂತಿದ್ದ ಕಾರನ್ನು ನೋಡಿದಾಗ ಅದರ ನಂ. ಕೆಎ 33 ಬಿ 2771 ಇದ್ದು, ಕಾರಿನ ಬಳಿ ನಿಂತಿದ್ದ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಬಸನಗೌಡ ತಂದೆ ವಿರುಪಾಕ್ಷೀ ಬಿರಾದಾರ ಸಾ:ರಾಜನಕೋಳ್ಳೂರು ಎಂದು ಹೇಳಿದನು. ಅಪಘಾತದಲ್ಲಿ ನಮ್ಮ ತಂದೆಗೆ ಭಾರಿ ಗಾಯಗಳಾಗಿದ್ದರಿಂದ ತಕ್ಷಣ ಉಪಚಾರ ಕುರಿತು 108 ಅಂಬ್ಯುಲೇನ್ಸ ಅನ್ನು ಕರೆಸಿ, ಅದರಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಉಪಚಾರ ಮಾಡಿಸಿ, ಅಲ್ಲಿಂದ ಕಲಬುರಗಿ ಯುನೈಟೆಡ್ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಸದರಿ ಅಪಘಾತವು ಯಾದಗಿರಿ-ಶಹಾಪೂರ ಮೇನ ರೋಡ ಕಿಲ್ಲನಕೇರಾ ಪೆಟ್ರೋಲ್ ಬಂಕ ಸಮೀಪ ರೋಡಿನ ಮೇಲೆ ಸಾಯಂಕಾಲ 4 ಗಂಟೆ ಸುಮಾರಿಗೆ ಸಂಭವಿಸಿರುತ್ತದೆ. ನಮ್ಮ ತಂದೆಗೆ ಉಪಚಾರ ಮಾಡಿಸುವವರು ಯಾರೂ ಇಲ್ಲದ್ದರಿಂದ ನಾನು ಅವರಿಗೆ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಕಾರ ನಂ. ಕೆಎ 33 ಬಿ 2771 ನೇದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 140/2022 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 172/2022 ಕಲಂ: 87 ಕೆಪಿ ಯಾಕ್ಟ: ಇಂದು ದಿನಾಂಕ 19/12/2022 ರಂದು 05.00 ಪಿ ಎಮ್ ಕ್ಕೆ ಮಾನ್ಯ ಹಣಮಂತ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು, 5 ಜನ ಆರೋಪಿತರು ಮತ್ತು ಒಂದು ವರದಿ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 19/12/2022 ರಂದು 3.00 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಯಡಿಯಾಪೂರ ಗ್ರಾಮದ ಯಡಿಯಾಪೂರ-ನಡಕೂರ ರಸ್ತೆಯ ಕ್ಯಾನಲ್ ಬ್ರೀಜ್ ಹತ್ತಿರ ಸಾರ್ವಜನಿಕ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು, ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎನ್ನುವ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಠಾಣೆಯ ಶಿವರಾಜ ಹೆಚ್.ಸಿ 85, ಪ್ರಭುಗೌಡ ಪಿಸಿ 361, ಮಾಳಪ್ಪ ಪಿಸಿ 29, ಶಿವಪ್ಪ ಪಿಸಿ 326, ವಿಜಯಾನಂದ ಪಿಸಿ 103, ರವಿಕುಮಾರ ಎಹೆಚ್.ಸಿ 38 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಮತ್ತು ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 3.05 ಪಿಎಂ ಕ್ಕೆ ಹೊರಟು 3.25 ಪಿಎಂ ಕ್ಕೆ ಯಡಿಯಾಪೂರ ಗ್ರಾಮದ ಯಡಿಯಾಪೂರ-ನಡಕೂರ ರಸ್ತೆಯ ಕ್ಯಾನಲ್ ಬ್ರಿಜ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಬಯಲು ಜಾಗೆಯಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಎನ್ನುವ ಇಸ್ಪೀಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 3.30 ಪಿಎಂ ಕ್ಕೆ ನಾನು, ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 5 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ರ್ಯಾವಪ್ಪ ತಂಧೆ ಹಣಮಂತ್ರಾಯ ಅಗಸರ ವ|| 40 ಜಾ|| ಅಗಸರ ಉ|| ದೋಬಿ ಸಾ|| ಯಡಿಯಾಪೂರ ತಾ|| ಹುಣಸಗಿ 2) ಸಂಗಪ್ಪ ತಂದೆ ಸಿದ್ದಪ್ಪ ನಾಯ್ಕೋಡಿ ವ|| 35 ಜಾ|| ಕುರುಬರು ಉ|| ಒಕ್ಕಲುತನ ಸಾ|| ಯಡಿಯಾಪೂರ ತಾ|| ಹುಣಸಗಿ 3) ದೇವಪ್ಪ ತಂದೆ ಹಣಮಂತ್ರಾಯ ಆಲಾಳ ವ|| 30 ಜಾ|| ಕುರುಬರು ಉ|| ಒಕ್ಕಲುತನ ಸಾ|| ಯಡಿಯಾಪೂರ ತಾ|| ಹುಣಸಗಿ 4) ಶಿವನಗೌಡ ತಂದೆ ಬಸವಂತ್ರಾಯ ಪೊಲೀಸ್ ಪಾಟೀಲ್ ವ|| 43 ಜಾ|| ಹಿಂದೂ ರೆಡ್ಡಿ ಉ|| ಒಕ್ಕಲುತನ ಸಾ|| ಯಡಿಯಾಪೂರ ತಾ|| ಹುಣಸಗಿ 5) ರೇವಣಸಿದ್ದಯ್ಯ ತಂದೆ ಸಿದ್ದಯ್ಯ ಹಿರೇಮಠ ವ|| 50 ಜಾ|| ಹಿಂದೂ ಲಿಂಗಾಯತ ಉ|| ಒಕ್ಕಲುತನ ಸಾ|| ಯಡಿಯಾಪೂರ ತಾ|| ಹುಣಸಗಿ ಇದ್ದು ಎಲ್ಲರ ಮಧ್ಯ ಕಣದಲ್ಲಿ 6320/- ರೂಪಾಯಿ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 3.30 ಪಿಎಂ ದಿಂದ 4.30 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿತರು ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಮರಳಿ ಠಾಣೆಗೆ 5.00 ಪಿಎಮ್ ಕ್ಕೆ ಬಂದು ಈ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ವರದಿಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 172/2022 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                                                                                                                                                                                             


ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 97/2022 ಕಲಂ 78(3) ಕೆ.ಪಿ. ಎಕ್ಟ್: ಇಂದು ದಿನಾಂಕ:19/12/2022 ರಂದು 05.30 ಪಿ.ಎಮ್. ಕ್ಕೆ  ಮುಡಬೂಳ ಗ್ರಾಮದ ವಾಲ್ಮೀಕಿ ಚೌಕ್ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ 1) ನಗದು ಹಣ ರೂಪಾಯಿ 1575=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳು 06.45 ಪಿ.ಎಮ್ ದಿಂದ 07.45 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು 08.15 ಪಿ.ಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
 

ಇತ್ತೀಚಿನ ನವೀಕರಣ​ : 20-12-2022 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080