ಅಭಿಪ್ರಾಯ / ಸಲಹೆಗಳು

                                                                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-01-2023

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 07/2023 ಕಲಂ 279, 304(ಎ) ಐಪಿಸಿ : ದಿನಾಂಕ: 20.01.2023 ರಂದು ಸಮಯ ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಕಾರ ನಂ: ಟಿ.ಎಸ್.-08 ಎಫ್..ಯು-6332 ನೇದ್ದರ ಚಾಲಕ ಉದಯರೆಡ್ಡಿ ತಂದೆ ಉಪೇಂದ್ರರೆಡ್ಡಿ ರಾಮಸಹಾಯ ಸಾ: ಕೂಕಟಪಲ್ಲಿ ಹೈದ್ರಾಬಾದ ಇತನು ಯಾದಗಿರ-ಹೈದ್ರಾಬಾದ ಮುಖ್ಯ ರಸ್ತೆಯ ಮೇಲೆ ಗುರುಮಠಕಲ್ ಪಟ್ಟಣದ ಯಶೋಧಾ ಪೆಟ್ರೋಲ್ ಪಂಪ ಹತ್ತಿರ ಇಳಿಜಾರು ಮತ್ತು ತಿರುವಿನಲ್ಲಿರುವ ರಸ್ತೆಯ ಮೇಲೆ ತನ್ನ ಕಾರನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲ ನಂ: ಮೋಟಾರ ಸೈಕಲ ನಂ. ಕೆ.ಎ-33-ಜೆ-2295 ನೇದ್ದರಮೇಲೆ ಬರುತ್ತಿರುವ ಮೃತ ದೊಡಡ್ಡ ಭೀಮಶಪ್ಪ ತಂದೆ ಆಶಪ್ಪ ಕೋಳ ಇವನಿಗೆ ಡಿಕ್ಕಿಪಡಿಸಿದ್ದರಿಂದ ಅಪಘಾತದಲ್ಲಿ  ಸದರಿ ದೊಡ್ಡ ಭೀಮಶಪ್ಪ ಬಾರಿ ರಕ್ತಗಾಯಗಳಾಗಿ ಈತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

ಶಹಾಪೂರ ಪೊಲೀಸ ಠಾಣೆ:-
ಗುನ್ನೆ ನಂಬರ:13/2022 ಕಲಂ:341, 323, 504, 506 ಸಂಗಡ 34 ಐಪಿಸಿ ಮತ್ತು ಕಲಂ: 92(ಎ) ಖಿಜ ಖರಣ ಠಜಿ ಕಜಡಿಠಟಿ ತಿಣ ಆಚಿಛಟಜ ಂಛಿಣ-2016 : ದಿನಾಂಕ: 20/01/2022 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿ ಶ್ರೀಮತಿ ರೇಣುಕಾ ಗಂಡ ಕಿರಣ ಚಿನ್ನಾರಾಠೋಡ ವಯಾ: 26 ಉ: ಮನೆಗೆಲಸ ಜಾತಿ: ಲಂಬಾಣಿ ಸಾ:ಡಿಗ್ಗಿ ತಾಂಡಾ ತಾ: ಶಹಾಪೂರ ಹಾಲಿವಸತಿ: ರೈಲ್ವೆ ವಸತಿ ಗೃಹ ಕೇಶ್ವಾಪೂರ ರೋಡ ಹುಬ್ಬಳ್ಳಿ ಮೊ.ನಂ: 9901446925 ರವರು ಠಾಣೆಗೆ ಬಂದು ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ, ನನಗೆ ದೀಪಿಕಾ ವಯಾ: 6 ವರ್ಷದ ಹೆಣ್ಣು ಮಗು, ದೀರಜ್ ವಯಾ: 5 ವರ್ಷ ಗಂಡು ಮಗು ಇರುತ್ತಾರೆ. ನನ್ನ ಗಂಡನ ಸ್ವಂತ ಊರು ಶಹಾಪೂರ ತಾಲೂಕಿನ ದಿಗ್ಗಿ ತಾಂಡಾ ಆಗಿದ್ದು, ಅಲ್ಲಿ ಪ್ರತಿ ಸಂಕ್ರಾಂತಿ ಹಬ್ಬಕ್ಕೊಮ್ಮೆ ನಮ್ಮೂರಿನಲ್ಲಿ ಜಾತ್ರೆ ಆಗುವುದರಿಂದ ನಾನು ಮತ್ತು ಗಂಡ ಇಬ್ಬರೂ ಮಕ್ಕಳೊಂದಿಗೆ ಪ್ರತಿ ವರ್ಷ ಹೋಗುವುದು ಬರುವುದು ಮಾಡುತ್ತೇವೆ. ಅದೇ ರೀತಿ ಈ ವರ್ಷ ಕೂಡಾ ಸಂಕ್ರಾಂತಿ ಜಾತ್ರೆ ಸಲುವಾಗಿ ದಿನಾಂಕ: 14/01/2023 ರಂದು ನಾವೂ ಹುಬ್ಬಳ್ಳಿಯಿಂದ ದಿಗ್ಗಿ ತಾಂಡಾಗೆ ಬಂದಿರುತ್ತೇವೆ. ಆದರೆ ನನ್ನ ಗಂಡನು ಹುಟ್ಟಿನಿಂದಲೂ ಅಂಗವಿಕಲ ಇರುತ್ತಾರೆ.   ಹೀಗಿದ್ದು ನಮ್ಮ ತಾಂಡಾದಲ್ಲಿ ಸೇವಾಲಾಲ ಯುವಕರ ಸಂಘ ಇದ್ದು, ಪ್ರತಿ ವರ್ಷಕ್ಕೊಮ್ಮೆ ಲೆಕ್ಕ ಪತ್ರ ಮಾಡುತ್ತಾರೆ. ದಿನಾಂಕ: 16/01/2023 ರಂದು ಸಾಯಾಂಕಾಲ ಸುಮಾರಿಗೆ ಸಂಘದ ಲೆಕ್ಕ ಪತ್ರ ಮಾಡುವ ಸಮಯದಲ್ಲಿ ನನ್ನ ಗಂಡನಾದ ಕಿರಣ ಇವರ ಹತ್ತಿರ ಸಂಘದ ಹಣ 22,00,000/- ರೂ,ಗಳು ಇದ್ದು, ಈ ಹಣದ ಜವಾಬ್ದಾರಿ ನನ್ನ ಗಂಡನದಾಗಿರುತ್ತದೆ. ಇದೇ ಸಮಯದಲ್ಲಿ ಈ ಹಣದ ವಿಷಯದಲ್ಲಿ ನಮ್ಮ ತಾಂಡಾದ ಹುಡುಗರಾದ ಅರುಣ ತಂದೆ ಶಂಕರ ನಾಯಕ ರಾಠೋಡ ಹಾಗೂ ತಿರುಪತಿ ತಂದೆ ಶಂಕರ ನಾಯಕ ರಾಠೋಡ ಇವರು ಬೇರೆಯವರ ಜೊತೆ ಗಲಾಟೆ ಮಾಡುತ್ತಿದ್ದಾಗ, ಹಣವನ್ನು ಯಾರಾದರೂ ದೋಚಿಕೊಂಡು ಹೋಗುತ್ತಾರೆ ಅಂತಾ ಹಣದ ಹಿತದೃಷ್ಠಿಯಿಂದ ಗಲಾಟೆ ಮಾಡುವದನ್ನು ನನ್ನ ಗಂಡನು ವಿಡಿಯೋ ಮಾಡಿರುತ್ತಾನೆ, ಅವರಿಬ್ಬರೂ ನನ್ನ ಗಂಡನಿಗೆ ಯಾಕೆ ವಿಡಿಯೋ ಮಾಡಿದಿಯಾ ಸೂಳೆ ಮಗನೆ ನಿನ್ನದು ಬಹಾಳ ಆಗಿದೆ ಅಂತಾ ಅವಾಚ್ಯವಾಗಿ ಬೈದಿರುತ್ತಾರೆ, ಅಂತಾ ನನ್ನ ಗಂಡನು ಮನೆಗೆ ಬಂದು ನನಗೆ ತಿಳಿಸಿರುತ್ತಾನೆ.  ನಂತರ ದಿನಾಂಕ:19/01/2023 ರಂದು ಬೆಳಿಗ್ಗೆ ಸುಮಾರಿಗೆ ನಮ್ಮ ತಾಂಡಾದವರು ಇಬ್ರಾಹಿಂಪೂರ ಕೆರೆಯ ಹತ್ತಿರ ದೇವರ ಮಾಡಿದ್ದರಿಂದ ನಾನು ನನ್ನ ಗಂಡನಾದ ಕಿರಣ ಇಬ್ಬರೂ ಕೂಡಿ ಇಬ್ರಾಹಿಂಪೂರಕ್ಕೆ ಹೋಗಿ ದೇವರ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸು ಸಾಯಾಂಕಾಲ 4-00 ಗಂಟೆ ಸುಮಾರಿಗೆ ಶಹಾಪೂರದ ಸಿ.ಬಿ ಕಮಾನ ಹತ್ತಿರ ನಾವಿಬ್ಬರೂ  ಮೋಟಾರ ಸೈಕಲ್ ಮೇಲೆ ಹೋಗುತ್ತಿರುವಾಗ, ನಮ್ಮ ತಾಂಡಾದವರಾದ ಅರುಣ ತಂದೆ ಶಂಕರ ನಾಯಕ ರಾಠೋಡ ಹಾಗೂ ತಿರುಪತಿ ತಂದೆ ಶಂಕರ ನಾಯಕ ರಾಠೋಡ ಇಬ್ಬರೂ ಬಂದವರೇ ನಮಗೆ ಕೈ ಮಾಡಿ ನಿಲ್ಲಿಸು ಅಂತಾ ಸಿಗ್ನಲ್ ಮಾಡಿದರು ಆಗ ನನ್ನ ಗಂಡನು ನಮ್ಮ ಮೋಟಾರ ಸೈಕಲ್ ನಿಲ್ಲಿಸಿ ಸ್ಟ್ಯಾಂಡ ಹಚ್ಚಬೇಕು ಅಂತಾ ಅನ್ನುವಷ್ಟರಲ್ಲಿ ಅರುಣನು ನಮ್ಮ ಮೋಟಾರ ಸೈಕಲಗೆ ಕಾಲಿನಿಂದ ಒದ್ದನು, ಇಬ್ಬರೂ ಮೋಟಾರ ಸೈಕಲ ಸಮೇತ ರಸ್ತೆ ಮೇಲೆ ಬಿದ್ದೇವು, ಆಗ ನನಗೆ ಟೊಂಕಕ್ಕೆ ಒಳಪೆಟ್ಟು ಆಗಿರುತ್ತದೆ ಹಾಗೂ ನನ್ನ ಗಂಡನಿಗೆ ಎಡಕಾಲು ಮೊಳಕಾಲಿಗೆ ಒಳಪೆಟ್ಟು ಆಗಿರುತ್ತದೆ. ನನ್ನ ಗಂಡನು ಅಂಗವಿಕಲ ಇರುವುದರಿಂದ ನಾನು ಎಬ್ಬಿಸಿರುತ್ತೇನೆ. ಅಷ್ಟರಲ್ಲಿ ಅವರಿಬ್ಬರೂ ನನ್ನ ಗಂಡನಿಗೆ, ಎಲೇ ಕಿರಣ ಸೂಳೆ ಮಗನೇ ನೀನು ಅವತ್ತು ನಾವು ಬೇರೆಯವರ ಜೊತೆ ಗಲಾಟೆ ಮಾಡುವಾಗ ನೀನು ವಿಡಿಯೋ ಮಾಡುತ್ತಿಯಾ ಎಷ್ಟು ಸೊಕ್ಕು ಇರಬೇಕು ನಿನಗೆ ಅಂತಾ ಅವಾಚ್ಯವಾಗಿ ಬೈಯುತ್ತಾ, ನಂತರ ತಿರುಪತಿ ತಂದೆ ಶಂಕರ ನಾಯಕ ಈತನು ನನ್ನ ಗಂಡನಿಗೆ ಎದೆಯ ಮೇಲಿನ ಅಂಗಿ ಹಿಡಿದು ಸೂಳೆ ಮಗನೇ ನಿಂದು ಬಹಾಳ ಆಗಿದೆ ಅಂತಾ ಕಪಾಳಕ್ಕೆ ಕೈಯಿಂದ ಹೊಡೆಯುತ್ತಾ, ಕಾಲಿನಿಂದ ಹೊಟ್ಟೆಗೆ ಒದೆಯುತ್ತಿದ್ದಾಗ, ನಾನು ನನ್ನ ಗಂಡನು ಅಂಗವಿಕಲ ಇದ್ದಾನೆ ಅವರಿಗೆ ಯಾಕೆ ಹೊಡೆಯುತ್ತಿರಿ, ಅಂತಾ ಕೇಳಿದ್ದಕ್ಕೆ, ಸೂಳೇ ನಿಂದು ಬಹಾಳ ಆಗಿದೆ ಅಂತಾ ತಿರುಪತಿ ಈತನು ನನ್ನ ಹೊಟ್ಟೆಗೆ ಕೈಯಿಂದ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ಆಗ  ನಾನು ಹಾಗು ನನ್ನ ಗಂಡ ಇಬ್ಬರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ನಮ್ಮ ತಾಂಡಾದ ಸುರೇಶ ತಂದೆ ಪೂರುನಾಯಕ ಚಿನ್ನಾರಾಠೋಡ ಮತ್ತು ಅನಿಲ್ ಪವಾರ ಸಾ:ರಬನಳ್ಳಿ ತಾಂಡಾ ಇಬ್ಬರು ಬಂದು ನಮಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡಿರುತ್ತಾರೆ. ನಂತರ ಅವರಿಬ್ಬರೂ ನನ್ನ ಗಂಡ ಅಂಗವಿಕಲ ಅಂತ ಗೊತ್ತಿದ್ದರೂ ಸಹ ಉದ್ದೇಶಪೂರ್ವಕವಾಗಿ ಗಂಡನ ದುರ್ಭಲತೆಯನ್ನು ಅವಮಾನಿಸಿ ಹಲ್ಲೆ ಮಾಡಿದ್ದಲ್ಲದೇ ನನ್ನ ಗಂಡನಿಗೆ ಲೇ ಕುಂಟ ಸೂಳೆ ಮಗನೇ ನಿಂದು ಬಹಾಳ ಆಗಿದೆ ನೀನು ಇನ್ನೊಮ್ಮೆ ನಮ್ಮ ಕೈಯಲ್ಲಿ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ-ಬೆದರಿಕೆ ಹಾಕಿ ಆವಾಚ್ಯವಾಗಿ ಬೈದಿರುತ್ತಾರೆ. ನಂತರ ನನಗೆ ಮತ್ತು ನನ್ನ ಗಂಡ ಕಿರಣ ಇಬ್ಬರಿಗೂ ಒಳಪೆಟ್ಟು ಆಗಿದ್ದರಿಂದ ಇಬ್ಬರೂ ಶಹಾಪೂರದ ಸರಕಾರಿ ಆಸ್ಪತ್ರೆಗ ಹೋಗಿ ಉಪಚಾರ ಪಡೆದುಕೊಂಡು ತಾಂಡಾಗೆ ಹೋಗಿರುತ್ತೇವೆ. ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿರುತ್ತೇನೆ. ಕಾರಣ ನಮಗೆ ಮೇಲ್ಕಂಡ ಇಬ್ಬರೂ ನಮ್ಮ ಮೋಟಾರ ಸೈಕಲ್ಗೆ ತಡೆದು ನಿಲ್ಲಿಸಿ, ನನಗೆ ಕೈಯಿಂದ ಹೊಟ್ಟೆಗೆ ಹೊಡೆದು  ಗುಪ್ತಗಾಯ ಮತ್ತು ನನ್ನ ಗಂಡನಿಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಹಲ್ಲೇ ಮಾಡಿದ್ದು, ಅಲ್ಲದೇ ನನ್ನ ಗಂಡ ಅಂಗವಿಕಲ ಅಂತ ಗೊತ್ತಿದ್ದರೂ ಸಹ ಉದ್ದೇಶಪೂರ್ವಕವಾಗಿ ಗಂಡನ ದುರ್ಭಲತೆಯನ್ನು ಅವಮಾನಿಸಿ ಹಲ್ಲೆ ಮಾಡಿರುತ್ತಾರೆ ಕಾರಣ ಮೇಲ್ಕಾಣಿಸಿದ ಎರಡು ಜನರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ.  ಅಂತಾ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 341, 323, 504, 506 ಸಂಗಡ 34 ಐಪಿಸಿ ಮತ್ತು ಕಲಂ: 92(ಎ) ಖಿಜ ಖರಣ ಠಜಿ ಕಜಡಿಠಟಿ ತಿಣ ಆಚಿಛಟಜ ಂಛಿಣ-2016 ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

ಇತ್ತೀಚಿನ ನವೀಕರಣ​ : 22-01-2023 10:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080